For Quick Alerts
ALLOW NOTIFICATIONS  
For Daily Alerts

ದ್ರೌಪದಿ ಪಂಚ ಪಾಂಡವರನ್ನು ಪತಿಯಾಗಿ ಏಕೆ ಪಡೆದಳು?

|

ನಮಗೆಲ್ಲ ತಿಳಿದಿರುವಂತೆ ಮಹಾಭಾರತದಲ್ಲಿ ದ್ರೌಪದಿಗೆ ಐದು ಜನ ಗಂಡಂದಿರು ಇರುತ್ತಾರೆ. ಆದರೆ ಆಕೆ ಏಕೆ ಐದು ಜನ ಗಂಡಂದಿರನ್ನು ಪಡೆದಳು ಎಂದು ನಿಮಗೆ ಗೊತ್ತೇ? ತಿಳಿಯಲು ಮುಂದೆ ಓದಿ. ಮಹಾಭಾರತದ ಕಥೆಯು ಕೌರವ ಮತ್ತು ಪಾಂಡವರು ಎಂಬ ಮುಖ್ಯ ಪಾತ್ರಗಳ ಸುತ್ತ ಸುತ್ತುತ್ತದೆ. ಈ ಮಹಾಕಾವ್ಯವು ಮಹಾಭಾರತ ಯುದ್ಧದ ಸುತ್ತ ಹರಡಿಕೊಳ್ಳುವ ಹಲವಾರು ಘಟನೆಗಳನ್ನು ವಿವರಿಸುತ್ತ ಸಾಗುತ್ತದೆ.

ಈ ಮಹಾಯುದ್ಧದಲ್ಲಿ ಹೋರಾಡಿದ ಪುರುಷ ಪಾತ್ರಗಳು ಮತ್ತು ಅವರ ಶೌರ್ಯ, ಸಾಹಸಗಳನ್ನು ಇದು ವಿವರಿಸುತ್ತ ಸಾಗುತ್ತದೆ. ಅವರು ಉಳಿದರೆ ಅಥವಾ ಸತ್ತರೆ ಎಂಬುದು ಇದರ ಕೊನೆಯ ಘಟ್ಟವಾಗಿದೆ. ಆದರೆ ಅದೇ ಸಮಯದಲ್ಲಿ ಈ ಮಹಾಕಾವ್ಯವು ಈ ವಿನಾಶಕಾರಿ ಮಹಾಯುದ್ಧಕ್ಕೆ ಕಾರಣವಾದ ಮಹಿಳೆಯ ಬಗ್ಗೆ ಸಹ ಮಾತನಾಡುತ್ತದೆ. ಹೌದು, ನಾವು ಮಾತನಾಡುತ್ತಿರುವುದು ಸಹ ಅದೇ ಮಹಿಳೆಯ ಬಗ್ಗೆ, ಆಕೆಯೇ ದ್ರೌಪದಿ. ಊರ್ವಶಿ ಪುರೂರವರ ಪ್ರೇಮ ಕಥೆ ದುರಂತ ಅಂತ್ಯವಾಗಿದ್ದು ಹೇಗೆ?

ದ್ರೌಪದಿ ಈ ಮಹಾಕಾವ್ಯದಲ್ಲಿ ಬರುವ ಅತ್ಯಂತ ಪ್ರಧಾನ ಮತ್ತು ಅಷ್ಟೇ ಶಕ್ತಿಶಾಲಿಯಾದ ಪಾತ್ರವಾಗಿದೆ. ಈಕೆಯು ಪಾಂಚಾಲ ದೇಶದ ರಾಜಕುಮಾರಿ. ಪಂಚ ಪಾಂಡವರ ಪತ್ನಿ ಮತ್ತು ಅಪರಿಮಿತ ಬುದ್ಧಿಶಕ್ತಿ ಮತ್ತು ತನ್ನ ಐದು ಜನ ಪತಿಯರ ಕುರಿತು ಅದ್ಭುತವಾದ ಪತಿವ್ರತಾ ಧರ್ಮವನ್ನು ಪಾಲಿಸುತ್ತಿದ್ದವಳು.

ದ್ರೌಪದಿದಿಯ ಕುರಿತಾದ ಪ್ರತಿಯೊಂದು ಅಂಶವು ಕುತೂಹಲಕಾರಿಯಾಗಿರುತ್ತದೆ. ಆಕೆಯ ಅದ್ಭುತವಾದ ಸೌಂದರ್ಯ, ಹಿರಿಮೆ, ಪ್ರೀತಿಯೆಡೆಗೆ ಆಕೆಯ ಅರ್ಪಣಾ ಮನೋಭಾವ, ಆಕೆಯು ಅನುಭವಿಸಿದ ಅವಮಾನಗಳು ಮತ್ತು ಶ್ರೇಷ್ಠ ಪ್ರತಿಜ್ಞೆ ಹೀಗೆ ಎಲ್ಲವು ನಮ್ಮನ್ನು ಮಂತ್ರ ಮುಗ್ಧಗೊಳಿಸುತ್ತದೆ. ಬೆಚ್ಚಿಬೀಳಿಸುವ ಸಂಗತಿ: ಗಾಂಧಾರಿಗೆ ನಿಜವಾಗಿಯೂ 101 ಮಕ್ಕಳು ಇದ್ದರೇ?

ಆದರೆ ಅದು ಹೇಗೆ ಆಕೆ ಅಣ್ಣ-ತಮ್ಮಂದಿರಾದವರನ್ನೇ, ತನ್ನ ಪತಿಯರಾಗಿ ಸ್ವೀಕರಿಸಿದಳು? ಇದು ನಮಗೆ ನಿಗೂಢವಾಗಿದೆ. ಆದರೆ ಆ ರಹಸ್ಯವು ಬಯಲಾಗಿದೆ. ಈಕೆ ಐದು ಜನ ಪತಿಯರನ್ನು ಪಡೆಯಲು ಮುಖ್ಯ ಕಾರಣ ಹಿಂದಿನ ಜನ್ಮದಲ್ಲಿ ಆಕೆ ಪಡೆದಿದ್ದ ವರ. ಈ ವರದ ಕಾರಣವಾಗಿಯೇ ಆಕೆ ಈ ಜನ್ಮದಲ್ಲಿ ಅಂದರೆ ದ್ರೌಪದಿಯಾಗಿ ಜನಿಸಿದಾಗ ಐದು ಜನ ಪತಿಯರನ್ನು ಪಡೆದಳು.

ಈಶ್ವರನ ವರ

ಈಶ್ವರನ ವರ

ಹಿಂದಿನ ಜನ್ಮದಲ್ಲಿ ದ್ರೌಪದಿಯು ಒಬ್ಬ ತಪಸ್ವಿಯ ಮಗಳಾಗಿದ್ದಳು. ಆಕೆಯು ಮದುವೆಯಾಗದೆ ಇದ್ದ ಕಾರಣದಿಂದ, ಅಸಂತೋಷದಿಂದ ಕೂಡಿದ್ದಳು. ಇದರಿಂದ ನಿರಾಶೆಗೊಂಡ ಆಕೆಯು ಈಶ್ವರನನ್ನು ಮೆಚ್ಚಿಸುವ ಸಲುವಾಗಿ ತಪಸ್ಸನ್ನು ಕೈಗೊಂಡಳು. ಸುಮಾರು ವರ್ಷದ ತಪಸ್ಸಿನ ನಂತರ ಆಕೆಯು ಪರಮೇಶ್ವರನನ್ನು ಮೆಚ್ಚಿಸಲು ಯಶಸ್ವಿಯಾದಳು. ಆಕೆಯ ಮುಂದೆ ಪ್ರತ್ಯಕ್ಷನಾದ ಶಿವನು ವರವೇನು ಬೇಕೆಂದು ಕೇಳಿದನು. ಆಗ ಆಕೆಯು ಐದು ಗುಣಗಳಿರುವ ಗಂಡ ತನಗೆ ಬೇಕೆಂದು ಕೇಳಿದಳು.

ಗುಣಗಳು

ಗುಣಗಳು

ದ್ರೌಪದಿಯು ತನ್ನ ಗಂಡನಾಗುವವನಲ್ಲಿ ಐದು ಗುಣಗಳು ಇರಬೇಕೆಂದು ಕೇಳಿದಳು. ಒಂದು ಆತ ಆದರ್ಶ ಪುರುಷನಾಗಿರಬೇಕು, ಎರಡು ಒಬ್ಬ ಶೂರನಾಗಿರಬೇಕು. ಮೂರು ನೋಡಲು ಸುಂದರನಾಗಿರಬೇಕು, ಜ್ಞಾನಿಯಾಗಿರಬೇಕು ಮತ್ತು ಐದು ಅವನು ಪ್ರೀತಿ ಮತ್ತು ವಾತ್ಸಲ್ಯವನ್ನು ಹೊಂದಿರಬೇಕು.

 ಒಬ್ಬನೆ ಒಬ್ಬನಲ್ಲ

ಒಬ್ಬನೆ ಒಬ್ಬನಲ್ಲ

ಇದನ್ನು ಕೇಳಿ ಈಶ್ವರನು ಕೆಲ ಕಾಲ ಆಲೋಚಿಸಿದನು ಮತ್ತು ಈ ಐದು ಗುಣಗಳು ಒಬ್ಬ ಗಂಡಸಲ್ಲಿ ದೊರೆಯುವುದಿಲ್ಲ ಎಂದು ಹೇಳಿದನು. ಆದ್ದರಿಂದ ದ್ರೌಪದಿಗೆ ಮುಂದಿನ ಜನ್ಮದಲ್ಲಿ ಐದು ಜನ ಗಂಡಂದಿರನ್ನು ಪ್ರತ್ಯೇಕವಾಗಿ, ಆಕೆ ಕೇಳಿದ ಐದು ಗುಣಗಳೊಂದಿಗೆ ನೀಡುವುದಾಗಿ ಹೇಳಿದನು. ಹೀಗಾಗಿ ದ್ರುಪದ ಮಹಾರಾಜನ ಮಗಳಾಗಿ ದ್ರೌಪದಿ ಜನಿಸಿದಾಗ, ಆಕೆಯ ಹಿಂದಿನ ಜನ್ಮದ ಕೋರಿಕೆಯಂತೆ ಆಕೆ ಐದು ಜನ ಅಣ್ಣ-ತಮ್ಮಂದಿರನ್ನು ಮದುವೆಯಾದಳು.

ಬಹುಪತಿತ್ವದ ಆಚರಣೆ

ಬಹುಪತಿತ್ವದ ಆಚರಣೆ

ಪುರಾಣದ ಹೊರತಾಗಿ ನಾವು ಹಿಂದಿನ ಕಾಲದಲ್ಲಿ ಆಚರಣೆಯಲ್ಲಿದ್ದ, ಬಹುಪತಿತ್ವ ಮತ್ತು ಬಹುಪತ್ನಿತ್ವದ ಆಚರಣೆಗಳನ್ನು ಮರೆಯುವಂತಿಲ್ಲ. ಬಹುಪತಿತ್ವಕ್ಕೆ ವಾಯುವ್ಯ ಭಾರತದಲ್ಲಿ ಹೆಣ್ಣು ಮಕ್ಕಳ ಕೊರತೆಯೇ ಕಾರಣ ಎಂದು ಸಹ ತಿಳಿದು ಬಂದಿದೆ. ಇಂದಿಗು ರಾಜಸ್ತಾನ, ಉತ್ತರ ಪ್ರದೇಶ, ಹರಿಯಾಣದಲ್ಲಿ ಗಂಡು ಮಕ್ಕಳಿಗೆ ಹೋಲಿಸಿದರೆ ಹೆಣ್ಣು ಮಕ್ಕಳ ಸಂಖ್ಯೆ ತುಂಬಾ ಕಡಿಮೆಯೇ ಇದೆ. ಪ್ರಾಚೀನ ಹಸ್ತಿನಾಪುರವು ಈ ಸ್ಥಳಗಳಿಗೆ ಸಮೀಪದಲ್ಲಿಯೇ ನೆಲೆಗೊಂಡಿತ್ತು. ಹೀಗಾಗಿ ಪಾಂಡವರಿಗೆ ಅನುರೂಪಳಾದ ಹೆಂಡತಿ ದೊರೆಯಲಿಲ್ಲದ ಕಾರಣದಿಂದಾಗಿ ದ್ರೌಪದಿಯು ಐದು ಜನ ಅಣ್ಣ-ತಮ್ಮಂದಿರನ್ನು ಮದುವೆಯಾದಳು ಎಂದು ಹೇಳಬಹುದು.

ತಾಯಿಯ ಕಾರ್ಯ ತಂತ್ರ

ತಾಯಿಯ ಕಾರ್ಯ ತಂತ್ರ

ಸ್ವಯಂವರದಲ್ಲಿ ದ್ರೌಪದಿಯನ್ನು ಜಯಿಸಿ ತಂದ ಮೇಲೆ, ಅರ್ಜುನನು ಉದ್ದೇಶ ಪೂರ್ವಕವಾಗಿ ತನ್ನ ತಾಯಿಯನ್ನು ಕುರಿತು " ಮಾತೆ ನೋಡು, ನಾವು ಏನನ್ನು ತಂದಿದ್ದೇವೆ" ಎಂದು ಹೇಳಿದನು. ಇದನ್ನು ಕೇಳಿದ ಕುಂತಿಯು ಆಲೋಚಿಸದೆ ಮತ್ತು ಅತ್ತ ಸಹ ತಿರುಗಿ ನೋಡದೆ, ಏನನ್ನು ತಂದಿರುವಿರೋ, ಅದನ್ನು ಎಲ್ಲರು ಸಮಾನವಾಗಿ ಐದು ಜನ ಹಂಚಿಕೊಳ್ಳಿ ಎಂದು ಹೇಳಿದಳು. ಹೀಗೆ ತಾಯಿಯ ಮಾತಿನಂತೆ ಅವರೆಲ್ಲರು ದ್ರೌಪದಿಯನ್ನು ಹೆಂಡತಿಯನ್ನಾಗಿ ಸ್ವೀಕರಿಸಿದರು. ಇದನ್ನು ಮತ್ತೊಂದು ಮಗ್ಗುಲಿನಿಂದ ನೋಡಿದರೆ ಕುಂತಿಯು ತನ್ನ ಐದು ಮಕ್ಕಳನ್ನು ಒಗ್ಗಟ್ಟಾಗಿ ಇಡಲು, ಯುದ್ಧದ ಸಂದರ್ಭದಲ್ಲಿ ಅವರು ಬೇರೆಯಾಗದಂತೆ ಕಾಪಾಡಲು ಈ ಕಾರ್ಯವನ್ನು ಮಾಡಿದಳು ಎಂದು ತೋರುತ್ತದೆ. ಏಕೆಂದರೆ ದ್ರೌಪದಿಯ ಅಪರಿಮಿತ ಸೌಂದರ್ಯವು ಮಕ್ಕಳನ್ನು ಬೇರೆ ಮಾಡಬಹುದು ಎಂಬ ಗುಮಾನಿ ಆಕೆಗಿತ್ತು. ಏಕೆಂದರೆ ಎಲ್ಲರೂ ಆಕೆಯ ಸೌಂದರ್ಯಕ್ಕೆ ಮಾರು ಹೋಗಿದ್ದರು. ಹೀಗಾಗಿ ಕುಂತಿಯು ಬುದ್ಧಿಪೂರ್ವಕವಾಗಿ ದ್ರೌಪದಿಯನ್ನು ಐದು ಜನರ ಹೆಂಡತಿಯನ್ನಾಗಿ ಮಾಡಿದಳು. ಹೀಗೆ ಅವರು ದ್ರೌಪದಿಗಾಗಿ ತಮ್ಮ ತಮ್ಮಲ್ಲೆ ಬಡಿದಾಡಿಕೊಳ್ಳದಂತೆ ಸಹ ಮಾಡಿದಳು.

English summary

Shocking Revelations: Why Draupadi Had Five Husbands?

We all know that in Mahabharata, Draupadi had five husbands. But do you know the real reason why she had five husbands? Read on to find out. The plot of Mahabharata revolves around the main characters: Pandavas and Kauravas. This epic describes various events which culminate in the great war of Mahabharata.
Story first published: Friday, December 12, 2014, 11:52 [IST]
X
Desktop Bottom Promotion