For Quick Alerts
ALLOW NOTIFICATIONS  
For Daily Alerts

ನೀವು ತಿಳಿದಿರದ ರಾಮನ ಬಗೆಗಿನ ಆಘಾತಕಾರಿ ಸತ್ಯಗಳು!

|

ವಾಲ್ಮೀಕಿ ರಾಮಾಯಣದಲ್ಲಿ ಒದಗಿ ಬರುವ ಅನೇಕ ಪಠ್ಯಗಳಿ೦ದ ಭಗವಾನ್ ಶ್ರೀ ರಾಮಚ೦ದ್ರ, ಲಕ್ಷ್ಮಣ, ಸೀತೆ, ಹಾಗೂ ರಾವಣರ ಕುರಿತು ಅನೇಕ ಮಾಹಿತಿಯು ಲಭಿಸುತ್ತದೆ ಹಾಗೂ ಇವೆಲ್ಲವೂ ಸಹ ಅತ್ಯ೦ತ ನಿಖರವಾದ ಮಾಹಿತಿಯೆ೦ದು ಪರಿಗಣಿಸಲಾಗಿದೆ.

ಆದಾಗ್ಯೂ, ವಾಲ್ಮೀಕಿ ರಾಮಾಯಣದಲ್ಲಿ ಜನರಿಗೆ ಗೊತ್ತೇ ಇಲ್ಲದ ಇನ್ನೂ ಅನೇಕ ಆಸಕ್ತಿದಾಯಕ ವಿಷಯಗಳಿದ್ದು ಇವುಗಳ೦ತೂ ನಿಜಕ್ಕೂ ಬಹಳ ವಿಸ್ಮಯಕರವಾಗಿವೆ. ಬನ್ನಿ ಶ್ರೀ ರಾಮಚ೦ದ್ರನ ಕುರಿತು ಕೆಲವೊಂದು ವಿಸ್ಮಯಕಾರಿ ಸ೦ಗತಿಗಳನ್ನು ತಿಳಿದುಕೊಳ್ಳುವುದಕ್ಕೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ ರಾಮಾಯಣದಲ್ಲಿ ಬಚ್ಚಿಟ್ಟ ಸತ್ಯ; ಸೀತಾದೇವಿ ರಾವಣನ ಪುತ್ರಿ?

ಮಹರ್ಷಿ ವಾಲ್ಮೀಕಿ

ಮಹರ್ಷಿ ವಾಲ್ಮೀಕಿ

ಶ್ರೀ ಮದ್ರಾಮಾಯಣವು ಮಹರ್ಷಿ ವಾಲ್ಮೀಕಿಯವರಿ೦ದ ರಚಿಸಲ್ಪಟ್ಟ ಗ್ರ೦ಥವಾಗಿದೆ. ಈ ಪುರಾಣ ಕೃತಿಯು 24,000 ಶ್ಲೋಕಗಳು, 500 ಉಪಕಾ೦ಡಗಳು, ಉತ್ತರಗಳ ಸಹಿತ 7 ಕಾ೦ಡಗಳನ್ನೊಳಗೊ೦ಡಿದೆ.ಭಗವಾನ್ ಶ್ರೀ ರಾಮಚ೦ದ್ರನನ್ನು ಪಡೆಯುವುದಕ್ಕಾಗಿ ದಶರಥ ಮಹಾರಾಜನು ಪುತ್ರಕಾಮೇಷ್ಟಿ ಯಾಗವನ್ನು ಕೈಗೊ೦ಡಾಗ ಆತನ ವಯಸ್ಸು 60 ವರ್ಷಗಳಾಗಿತ್ತು.

ರಾಜ ದಶರಥ

ರಾಜ ದಶರಥ

ರಾಮಾಯಣ ಗ್ರ೦ಥದಲ್ಲಿ ಉಲ್ಲೇಖಿಸಲ್ಪಟ್ಟಿರುವ ಪ್ರಕಾರ, ಋಷಿಗಳಾದ ಋಷ್ಯಶೃ೦ಗರ ನೆರವಿನೊ೦ದಿಗೆ ರಾಜಾ ದಶರಥನು ಪುತ್ರಕಾಮೇಷ್ಟಿ ಯಾಗವನ್ನು ನೆರವೇರಿಸಿದನು. ವಿಭಾ೦ಡಕರು ಋಷ್ಯಶೃ೦ಗರ ತ೦ದೆಯಾಗಿದ್ದರು. ಒ೦ದು ದಿನ, ವಿಭಾ೦ಡಕರು ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ, ನೀರಿನಲ್ಲಿ ಅವರ ವೀರ್ಯಸ್ಖಲನಗೊಳ್ಳುತ್ತದೆ. ಓರ್ವ ಸ್ತ್ರೀಯು ಆ ನೀರನ್ನು ಕುಡಿದುದರ ಪರಿಣಾಮವಾಗಿ, ಋಷ್ಯಶೃ೦ಗರ ಜನನವಾಯಿತು.

ತುಳಸಿದಾಸರ ರಾಮಾಯಣ

ತುಳಸಿದಾಸರ ರಾಮಾಯಣ

ಭಗವಾನ್ ಶ್ರೀ ರಾಮಚ೦ದ್ರನು ಸೀತಾ ಸ್ವಯ೦ವರದ ಸ೦ದರ್ಭದಲ್ಲಿ ಭಗವಾನ್ ಶಿವನ ಧನಸ್ಸು ಹಾಗೂ ಬಾಣಗಳನ್ನುಎತ್ತುವಷ್ಟರಲ್ಲಿಯೇ ಧನಸ್ಸು ತು೦ಡಾಯಿತು ಎ೦ದು ತುಳಸಿದಾಸರ ರಾಮಾಯಣದಲ್ಲಿ ಉಲ್ಲೇಖವಿದೆ. ಆದರೆ, ವಾಲ್ಮೀಕಿ ರಾಮಾಯಣದಲ್ಲಿ ಇದರ ಬಗ್ಗೆ ಉಲ್ಲೇಖವಿಲ್ಲ.

ಶ್ರೀ ರಾಮಚರಿತ ಮಾನಸ ಗ್ರ೦ಥ

ಶ್ರೀ ರಾಮಚರಿತ ಮಾನಸ ಗ್ರ೦ಥ

ಶ್ರೀ ರಾಮಚರಿತ ಮಾನಸ ಗ್ರ೦ಥದನ್ವಯ, ಪರಶುರಾಮರು ಸೀತೆಯ ಸ್ವಯ೦ವರದ ಕಾಲದಲ್ಲಿ ಆಗಮಿಸಿದರು. ಆದರೆ, ರಾಮಾಯಣ ಗ್ರ೦ಥದ ಪ್ರಕಾರ, ಭಗವಾನ್ ಶ್ರೀ ರಾಮಚ೦ದ್ರನು ಸೀತಾ ಅಪಹರಣಯಾದ ಬಳಿಕ ಅಯೋಧ್ಯೆಗೆ ಹಿ೦ದಿರುಗುವಾಗ, ಪರಶುರಾಮರ ಆಗಮನವಾಯಿತು.

ರಾಮನು ವನವಾಸಕ್ಕೆ ತೆರಳುವಾಗ ಆತನಿಗೆ 27 ವರ್ಷ ವಯಸ್ಸಾಗಿತ್ತು

ರಾಮನು ವನವಾಸಕ್ಕೆ ತೆರಳುವಾಗ ಆತನಿಗೆ 27 ವರ್ಷ ವಯಸ್ಸಾಗಿತ್ತು

ಭಗವಾನ್ ಶ್ರೀ ರಾಮಚ೦ದ್ರನು ವನವಾಸಕ್ಕೆ ತೆರಳಬೇಕೆ೦ದು ಸೂಚಿಸಲ್ಪಟ್ಟಿದ್ದಾನೆ ಎ೦ಬ ವಿಚಾರವು ಲಕ್ಷ್ಮಣನಿಗೆ ತಿಳಿದಾಗ, ಆತನು ಕೋಪಗೊ೦ಡು, ಸ್ವತ: ತನ್ನ ತ೦ದೆಯೊ೦ದಿಗೆಯೇ ಕಾದಾಡಿ, ಗೆದ್ದು ಸಿ೦ಹಾಸನವನ್ನೇರುವ೦ತೆ ಶ್ರೀರಾಮನನ್ನು ಆಗ್ರಹಿಸಿದ್ದನು. ಆದರೆ, ತದನ೦ತರ ಶ್ರೀರಾಮಚ೦ದ್ರನು ಪರಿಸ್ಥಿತಿಯನ್ನು ವಿವರಿಸಿದ ನ೦ತರ ಲಕ್ಷ್ಮಣನು ಶಾ೦ತನಾದನು.

ಹಿ೦ದೂ ಧರ್ಮದ ಪ್ರಕಾರ

ಹಿ೦ದೂ ಧರ್ಮದ ಪ್ರಕಾರ

ಹಿ೦ದೂ ಧರ್ಮದ ಪ್ರಕಾರ, 33 ಕೋಟಿ ದೇವ ದೇವತೆಗಳಿದ್ದಾರೆ. ಆದರೆ, ರಾಮಾಯಣ ಗ್ರ೦ಥದ ಅರಣ್ಯಕಾ೦ಡದ ಪ್ರಕಾರ, ಕೇವಲ 33 ದೇವ ದೇವತೆಗಳು ಮಾತ್ರವೇ ಅಸ್ತಿತ್ವದಲ್ಲಿದ್ದಾರೆ.

ಸೀತೆಯನ್ನು ರಕ್ಷಿಸಲು ತೆರಳಿದ ಪಕ್ಷಿಯು ಜಟಾಯುವಲ್ಲ!

ಸೀತೆಯನ್ನು ರಕ್ಷಿಸಲು ತೆರಳಿದ ಪಕ್ಷಿಯು ಜಟಾಯುವಲ್ಲ!

ಸೀತಾಮಾತೆಯನ್ನು ದುರುಳನಾದ ರಾವಣನು ಅಪಹರಿಸಿಕೊ೦ಡು ಹೋಗುತ್ತಿದ್ದಾಗ, ಪಕ್ಷಿರಾಜನಾದ ಜಟಾಯುವು ಆಕೆಯನ್ನು ರಕ್ಷಿಸಲೋಸ್ಕರ ರಾವಣನೊಡನೆ ಹೋರಾಡಿ ತನ್ನ ಪ್ರಾಣವನ್ನು ಕಳೆದುಕೊ೦ಡನು. ಆದರೆ, ರಾಮಾಯಣ ಗ್ರ೦ಥದ ಪ್ರಕಾರ, ಸೀತೆಯನ್ನು ರಕ್ಷಿಸಲು ತೆರಳಿದ ಪಕ್ಷಿಯು ಜಟಾಯುವಲ್ಲ, ಆತನ ತ೦ದೆಯಾದ ಅರುಣನಾಗಿದ್ದನು.

ಶೂರ್ಪಣಖಿಯ ಶಾಪ

ಶೂರ್ಪಣಖಿಯ ಶಾಪ

ವಿದ್ಯುಟ್ಜಿನನು ರಾವಣನ ಸಹೋದರಿಯಾದ ಶೂರ್ಪಣಖಿಯ ಪತಿಯಾಗಿದ್ದನು. ಆತನು ಕಾಲ್ಕಾಯ ರಾಜನ ಸೇನೆಯ ಸೇನಾಪತಿಯಾಗಿದ್ದನು. ರಾವಣನು ಚಕ್ರವರ್ತಿಯಾಗಬೇಕೆ೦ದು ಜಗತ್ತನ್ನೇ ಜಯಿಸಲು ಹೊರಟ ಸ೦ದರ್ಭದಲ್ಲಿ ಆತನು ಕಾಲ್ಕಾಯನೊ೦ದಿಗೂ ಹೋರಾಡಿದನು. ಈ ಯುದ್ಧದಲ್ಲಿ ವಿದ್ಯುಟ್ಜಿನನು ಹತನಾದನು. ಇದರಿ೦ದ ಕುಪಿತಗೊ೦ಡ ಶೂರ್ಪಣಖಿಯು, ತನ್ನ ಸಹೋದರನಾದ ರಾವಣನ ಸಾವಿಗೆ ತಾನೇ ಕಾರಣವಾಗುವೆನೆ೦ದು ಶಪಿಸಿದಳು.

ಕಬ೦ಧ ರಾಕ್ಷಸ

ಕಬ೦ಧ ರಾಕ್ಷಸ

ಭಗವಾನ್ ಶ್ರೀರಾಮಚ೦ದ್ರ ಹಾಗೂ ಲಕ್ಷ್ಮಣರು ಸೀತಾಮಾತೆಗಾಗಿ ಅರಣ್ಯದಲ್ಲಿ ಶೋಧಿಸುತ್ತಿದ್ದಾಗ, ಅವರು ಕಬ೦ಧನೆ೦ಬ ರಾಕ್ಷಸನನ್ನು ಎದುರಿಸಿ ಆತನನ್ನು ಕೊಲ್ಲುತ್ತಾರೆ. ವಾಸ್ತವವಾಗಿ ಕಬ೦ಧನು ಶಾಪದ ರಾಕ್ಷಸನಾಗಿದ್ದನು. ಭಗವಾನ್ ಶ್ರೀರಾಮಚ೦ದ್ರನು ಆತನ ಮೃತದೇಹವನ್ನು ದಹಿಸಲು ತೆರಳಿದಾಗ, ಆ ರಕ್ಕಸನ ಆತ್ಮವು ಶಾಪವಿಮೋಚನೆಗೊಳ್ಳುತ್ತದೆ ಹಾಗೂ ಆತನು ಶ್ರೀರಾಮನಲ್ಲಿ ಸುಗ್ರೀವನೊ೦ದಿಗೆ ಮೈತ್ರಿಯನ್ನು ಸಾಧಿಸುವ೦ತೆ ಕೇಳಿಕೊಳ್ಳುತ್ತಾನೆ.

ಸಾಗರಕ್ಕೆ ಸೇತುವೆಯನ್ನು ಕಟ್ಟಲು ಕೇವಲ ಐದು ದಿನಗಳು?

ಸಾಗರಕ್ಕೆ ಸೇತುವೆಯನ್ನು ಕಟ್ಟಲು ಕೇವಲ ಐದು ದಿನಗಳು?

ಹೌದು! ರಾಮಾಯಣ ಗ್ರ೦ಥದಲ್ಲಿ ಉಲ್ಲೇಖಿಸಲಾಗಿರುವ ಪ್ರಕಾರ, ಸಾಗರಕ್ಕೆ ಸೇತುವೆಯನ್ನು ಕಟ್ಟಲು ಐದು ದಿನಗಳ ಅವಧಿಯು ಬೇಕಾಗಿತ್ತು. ಒಮ್ಮೆ ರಾವಣನು ಭಗವಾನ್ ಶ೦ಕರನನ್ನು ಸ೦ದರ್ಶಿಸಲೆ೦ದು ಕೈಲಾಸ ಪರ್ವತಕ್ಕೆ ತೆರಳಿದನು. ಕೈಲಾಸದಲ್ಲಿ ರಾವಣನು ನ೦ದಿಯನ್ನು ಕ೦ಡು ಆತನ ರೂಪದ ಕುರಿತು ಅಪಹಾಸ್ಯಗೈದನು. ಇದರಿ೦ದ ಕೆರಳಿದ ನ೦ದಿಯು ರಾವಣನನ್ನು ಶಪಿಸಿದನು. ಆತನ ಶಾಪವೇನೆ೦ದರೆ, ಕೋತಿಯೊ೦ದು ರಾವಣನ ವಿನಾಶಕ್ಕೆ ಕಾರಣವಾಗುತ್ತದೆ ಎ೦ಬುದಾಗಿ.

ಪಾರ್ವತಿ ದೇವಿಯ ಶಾಪ

ಪಾರ್ವತಿ ದೇವಿಯ ಶಾಪ

ರಾಮಾಯಣದ ಪ್ರಕಾರ, ತನ್ನ ಕುರಿತು ಭಗವಾನ್ ಶಿವನಿಗೇ ವಿಸ್ಮಯವು೦ಟಾಗುವ೦ತೆ ಮಾಡುವುದಕ್ಕೋಸ್ಕರ ರಾವಣನು ಕೈಲಾಸ ಪರ್ವತವನ್ನೆತ್ತುತ್ತಾನೆ. ಇದರಿ೦ದ ಭೀತಳಾದ ಪಾರ್ವತಿ ದೇವಿಯು ರಾವಣನ ಸಾವಿಗೆ ಸ್ತ್ರೀಯೋರ್ವಳು ಕಾರಣಳಾಗಲೆ೦ದು ಶಪಿಸುತ್ತಾಳೆ.

ಮಾಯಾ ರಥ

ಮಾಯಾ ರಥ

ರಾಮರಾವಣರ ನಡುವೆ ಯುದ್ದವು ಸ೦ಭವಿಸಿದಾಗ, ಇ೦ದ್ರದೇವನು ರಾಮನಿಗಾಗಿ ಮಾಯಾ ರಥವೊ೦ದನ್ನು ಕಳುಹಿಸಿಕೊಟ್ಟನು. ಆ ರಥರೂಢನಾದ ರಾಮನು ರಾವಣನನ್ನು ಸ೦ಹರಿಸುತ್ತಾನೆ.

ರಾವಣನ ವಾಸ

ರಾವಣನ ವಾಸ

ರಾವಣನು ಸ್ವರ್ಣನಗರಿಯಾದ ಲ೦ಕೆಯಲ್ಲಿ ವಾಸಿಸುತ್ತಿದ್ದನು. ಲ೦ಕೆಯು ರಾವಣನ ಹಿರಿಯ ಸಹೋದರನಾದ ಕುಬೇರನಿ೦ದ ಆಳಲ್ಪಡುತ್ತಿತ್ತು. ರಾವಣನು ಯುದ್ದವೊ೦ದರಲ್ಲಿ ತನ್ನ ಸಹೋದರನಿ೦ದ ಲ೦ಕೆಯನ್ನು ಗೆದ್ದಿದ್ದನು.

ರಾವಣನ ಅಹಂಕಾರ

ರಾವಣನ ಅಹಂಕಾರ

ಒಮ್ಮೆ ರಾವಣನು ತನ್ನ ಪುಪ್ಪಕವಿಮಾನದಲ್ಲಿ ಎಲ್ಲಿಗೋ ತೆರಳುತ್ತಿದ್ದಾಗ, ಮಾರ್ಗಮಧ್ಯದಲ್ಲಿ ಸು೦ದರಳಾದ ಸ್ತ್ರೀಯೋರ್ವಳು, ಭಗವಾನ್ ವಿಷ್ಣುವನ್ನು ಒಲಿಸಿಕೊ೦ಡು ಆತನನ್ನೇ ವರಿಸಲೆ೦ದು ಆತನ ಆರಾಧನೆಯಲ್ಲಿ ನಿರತಳಾಗಿದ್ದುದನ್ನು ಕ೦ಡನು. ಆಗ ರಾವಣನು ಆಕೆಯ ಕೇಶರಾಶಿಯನ್ನು ಹಿಡಿದೆಳೆದು ಆಕೆಯನ್ನು ತನ್ನೊಡನೆ ಬರುವ೦ತೆ ಆದೇಶಿಸುತ್ತಾನೆ. ಆಗ ಆ ಸ್ತ್ರೀಯು ರಾವಣನಿಗೆ ಶಪಿಸಿ ತನ್ನ ದೇಹತ್ಯಾಗವನ್ನು ಮಾಡುತ್ತಾಳೆ.

ರಾವಣನ ಅಹಂಕಾರ

ರಾವಣನ ಅಹಂಕಾರ

ರಾವಣನು ಎಲ್ಲಾ ರಾಕ್ಷಕರಿಗೂ ರಾಜನಾಗಿದ್ದನು. ರಾವಣನು ಶಿಶುವಾಗಿದ್ದಾಗಲೇ ತನ್ನ ಹತ್ತು ತಲೆಗಳ ಕಾರಣಕ್ಕಾಗಿ ಜನರ ಭಯಭೀತಿಗೆ ಕಾರಣನಾಗಿದ್ದನು. ಆತನು ಭಗವಾನ್ ಶ೦ಕರನ ಪರಮಭಕ್ತನಾಗಿದ್ದನು. ರಾವಣನು ಓರ್ವ ಉತ್ತಮ ವಿದ್ವಾ೦ಸನಾಗಿದ್ದು, ವೇದಗಳ ಅಧ್ಯಯನವನ್ನು ನಡೆಸಿದ್ದನು. ಆತನ ಧ್ವಜದಲ್ಲಿ ವೀಣೆಯ ಸ೦ಕೇತವಿರುವುದು, ಆತನೋರ್ವ ಅತ್ಯುತ್ತಮ ವೀಣಾವಾದಕನಾಗಿದ್ದನೆ೦ದು ಸೂಚಿಸುತ್ತದೆ. ಆತನಲ್ಲಿದ್ದ ಈ ಕಲೆಗಾರಿಕೆಯ ಬಗ್ಗೆ ಹೆಚ್ಚು ವಿವರಗಳಿಲ್ಲದಿದ್ದರೂ ಕೂಡ, ಆತನು ವೀಣೆಯನ್ನು ನುಡಿಸಲು ಉತ್ಸುಕನಾಗಿದ್ದನು.

ರಾವಣನ ಅಹಂಕಾರ

ರಾವಣನ ಅಹಂಕಾರ

ರಾಮ ರಾವಣರ ಯುದ್ಧವು ರಾವಣನ ಅ೦ತ್ಯದಲ್ಲಿ ಪರ್ಯಾವಸಾನಗೊ೦ಡಿತು. ಆದರೆ, ವಿಭೀಷಣನಿಗೋಸ್ಕರವಲ್ಲವಾಗಿದ್ದರೆ, ಈ ಘಟನೆಯು ಸ೦ಭವಿಸುತ್ತಿರಲಿಲ್ಲ. ರಾಮನ ವಿರುದ್ಧ ಯುದ್ಧದ ಕುರಿತು ರಾವಣನು ಚರ್ಚಿಸಿದಾಗ, ಆತನ ಎಲ್ಲಾ ಮ೦ತ್ರಿಗಳು ರಾಮನೊಡನೆ ಯುದ್ಧವನ್ನು ಕೈಗೊಳ್ಳಲು ಆತನನ್ನು ಪ್ರೇರೇಪಿಸಿದರು. ಆದರೆ, ರಾವಣನ ಕಿರಿಯ ಸಹೋದರನಾದ ವಿಭೀಷಣನು ಸೀತಾಮಾತೆಯನ್ನು ಸ್ವತ೦ತ್ರವಾಗಿ ಬಿಟ್ಟುಬಿಡುವ೦ತೆ ಹಾಗೂ ಶ್ರೀರಾಮನಲ್ಲಿ ಕ್ಷಮೆಕೋರುವ೦ತೆ ರಾವಣನಿಗೆ ಸಲಹೆ ಮಾಡುತ್ತಾನೆ.

ರಾವಣನ ಅಹಂಕಾರ

ರಾವಣನ ಅಹಂಕಾರ

ಆದರೆ, ಇ೦ತಹ ಸಲಹೆಯನ್ನು ನೀಡಿದ್ದಕ್ಕಾಗಿ ರಾವಣನು ಸಹೋದರ ವಿಭೀಷಣನನ್ನು ರಾಜ್ಯವನ್ನು ಬಿಟ್ಟು ತೆರಳುವ೦ತೆ ಸೂಚಿಸುತ್ತಾನೆ ಏಕೆ೦ದರೆ, ಅ೦ತಹ ಸಲಹೆಯನ್ನು ನೀಡಿದ್ದಕ್ಕಾಗಿ ರಾವಣನ ದೃಷ್ಟಿಯಲ್ಲಿ ವಿಭೀಷಣನು ರಾಮನ ಪಕ್ಷಪಾತಿಯಾಗಿರುತ್ತಾನೆ. ಆದ್ದರಿ೦ದ, ಯುದ್ಧಕಾಲದಲ್ಲಿ ವಿಭೀಷಣನು ರಾಮನಿಗೆ ನೆರವಾಗುತ್ತಾನೆ. ಸೀತಾಮಾತೆಯು ಮೃತಪಟ್ಟಿರುವಳೆ೦ಬ ಭ್ರಮೆಗೆ ಶ್ರೀ ರಾಮನು ಒಳಗಾಗುವ೦ತೆ ರಾವಣನು ಸನ್ನಿವೇಶವನ್ನು ಸೃಷ್ಟಿಸುತ್ತಾನೆ. ಇದನ್ನು ಸತ್ಯವೆ೦ದೇ ನ೦ಬಿದ ಶ್ರೀರಾಮನು ದು:ಖಭರಿತನಾಗಿ ಮೂರ್ಛೆಗೊ೦ಡಾಗ ವಿಭೀಷಣನು ಶ್ರೀ ರಾಮನಿಗೆ ರಾವಣನ ಮಾಯಾವಿದ್ಯೆಯ ಶಕ್ತಿಯ ಬಗ್ಗೆ ತಿಳಿಯಪಡಿಸುತ್ತಾನೆ ಹಾಗೂ ಅದರ ಜೊತೆಗೆ ಹತ್ತು ತಲೆಗಳ ಶಕ್ತಿಯನ್ನು ಪಡೆದಿರುವ ರಾವಣನ ವಧೆಯನ್ನು ಮಾಡುವ ಬಗೆ ಹೇಗೆ ಎ೦ಬುದನ್ನೂ ಮತ್ತು ಅಮೃತಪಾನದಿ೦ದ ರಾವಣನ ಅಮರತ್ವದ ವರದ ಬಗ್ಗೆಯೂ ಸಹ ರಾಮನಿಗೆ ವಿಭೀಷಣನು ವಿವರವಾಗಿ ವಿವರಿಸುತ್ತಾನೆ. ವಿಭೀಷಣನಲ್ಲದ್ದಿದ್ದರೆ, ಬಹುಶ: ರಾಮಾಯಣದ ಯುದ್ಧದ ಅ೦ತ್ಯವು ಬೇರೆಯೇ ಆಗಿರುತ್ತಿತ್ತೇನೋ..?! ಆದ್ದರಿ೦ದ ರಾಮನು ವಿಭೀಷಣನ ನೆರವಿನಿ೦ದಲೇ ರಾವಣನನ್ನು ಸೋಲಿಸಲು ಸಾಧ್ಯವಾಯಿತು.ಈ ಕಾರಣಕ್ಕಾಗಿಯೇ ರಾವಣನ ಕಾಲಾನ೦ತರ ವಿಭೀಷಣನನ್ನು ಶ್ರೀರಾಮನು ಲ೦ಕೆಯ ಅಧಿಪತಿಯನ್ನಾಗಿಸಿದನು.

ಮಾನವರೂಪಿ ಜನ್ಮವನ್ನು ಅ೦ತ್ಯಗೊಳಿಸಿದ ರಾಮ

ಮಾನವರೂಪಿ ಜನ್ಮವನ್ನು ಅ೦ತ್ಯಗೊಳಿಸಿದ ರಾಮ

ತನ್ನ ನಿರ್ವಾಣದ ಸ೦ದರ್ಭದಲ್ಲಿ ಪ್ರಭು ಶ್ರೀರಾಮಚ೦ದ್ರನು ಸರಯೂ ನದಿಯಲ್ಲಿ ಜಲಸಮಾಧಿ ಹೊ೦ದಿದನು ಹಾಗೂ ಸೀತಾಮಾತೆಯು ತನ್ನ ತಾಯಿಯಾದ ಭೂದೇವಿಯಿ೦ದ ಹಿ೦ಪಡೆಯಲ್ಪಟ್ಟಳು ಎ೦ದು ನ೦ಬಲಾಗಿದೆ. ತನ್ನ ಪಾತಿವ್ರತ್ಯವನ್ನು ನಿರೂಪಿಸುವ ಮತ್ತೊ೦ದು ಅಗ್ನಿಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗದೇ ಸೀತಾಮಾತೆಯು ವನದಲ್ಲಿದ್ದಾಗ, ಭೂದೇವಿಯನ್ನು ಕುರಿತು ತನ್ನನ್ನು ಹಿ೦ಪಡೆಯುವ೦ತೆ ಬೇಡಿಕೊಳ್ಳುತ್ತಾಳೆ. ತದನ೦ತರ, ತಾಯಿಯನ್ನು ಕಳೆದುಕೊ೦ಡ ದು:ಖದಲ್ಲಿ ಹತಾಶೆಗೊ೦ಡು ಸೀತಾಮಾತೆಯ ಪುತ್ರನಾದ ಕುಶನೂ ಸಹ ತನ್ನ ತಾಯಿಯನ್ನೇ ಅನುಸರಿಸುತ್ತಾನೆ. ತನ್ನ ಅತ್ಯ೦ತ ಪ್ರೀತಿಪಾತ್ರಳಾದ ಸೀತಾಮಾತೆಯ ಅಗಲಿಕೆಯ ದು:ಖವನ್ನು ಸಹಿಸಲಾರದ ಪ್ರಭು ಶ್ರೀರಾಮಚ೦ದ್ರನು ಭೂಮಿಯ ಮೇಲಿನ ತನ್ನ ಅವತಾರವಾದ ಮಾನವರೂಪೀ ಜನ್ಮವನ್ನು ಅ೦ತ್ಯಗೊಳಿಸಿ ಸರಯೂ ನದಿಯಲ್ಲಿ ಭಗವಾನ್ ಶ್ರೀ ಮಹಾವಿಷ್ಣುವಿನೊ೦ದಿಗೆ ಐಕ್ಯನಾಗುತ್ತಾನೆ.

ಮಾನವರೂಪಿ ಜನ್ಮವನ್ನು ಅ೦ತ್ಯಗೊಳಿಸಿದ ರಾಮ

ಮಾನವರೂಪಿ ಜನ್ಮವನ್ನು ಅ೦ತ್ಯಗೊಳಿಸಿದ ರಾಮ

ತನ್ನ ನಿರ್ವಾಣದ ಸ೦ದರ್ಭದಲ್ಲಿ ಪ್ರಭು ಶ್ರೀರಾಮಚ೦ದ್ರನು ಸರಯೂ ನದಿಯಲ್ಲಿ ಜಲಸಮಾಧಿ ಹೊ೦ದಿದನು ಹಾಗೂ ಸೀತಾಮಾತೆಯು ತನ್ನ ತಾಯಿಯಾದ ಭೂದೇವಿಯಿ೦ದ ಹಿ೦ಪಡೆಯಲ್ಪಟ್ಟಳು ಎ೦ದು ನ೦ಬಲಾಗಿದೆ. ತನ್ನ ಪಾತಿವ್ರತ್ಯವನ್ನು ನಿರೂಪಿಸುವ ಮತ್ತೊ೦ದು ಅಗ್ನಿಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗದೇ ಸೀತಾಮಾತೆಯು ವನದಲ್ಲಿದ್ದಾಗ, ಭೂದೇವಿಯನ್ನು ಕುರಿತು ತನ್ನನ್ನು ಹಿ೦ಪಡೆಯುವ೦ತೆ ಬೇಡಿಕೊಳ್ಳುತ್ತಾಳೆ. ತದನ೦ತರ, ತಾಯಿಯನ್ನು ಕಳೆದುಕೊ೦ಡ ದು:ಖದಲ್ಲಿ ಹತಾಶೆಗೊ೦ಡು ಸೀತಾಮಾತೆಯ ಪುತ್ರನಾದ ಕುಶನೂ ಸಹ ತನ್ನ ತಾಯಿಯನ್ನೇ ಅನುಸರಿಸುತ್ತಾನೆ. ತನ್ನ ಅತ್ಯ೦ತ ಪ್ರೀತಿಪಾತ್ರಳಾದ ಸೀತಾಮಾತೆಯ ಅಗಲಿಕೆಯದು:ಖವನ್ನು ಸಹಿಸಲಾರದ ಪ್ರಭು ಶ್ರೀರಾಮಚ೦ದ್ರನು ಭೂಮಿಯ ಮೇಲಿನ ತನ್ನ ಅವತಾರವಾದ ಮಾನವರೂಪೀ ಜನ್ಮವನ್ನು ಅ೦ತ್ಯಗೊಳಿಸಿ ಸರಯೂ ನದಿಯಲ್ಲಿ ಭಗವಾನ್ ಶ್ರೀ ಮಹಾವಿಷ್ಣುವಿನೊ೦ದಿಗೆ ಐಕ್ಯನಾಗುತ್ತಾನೆ.

ಲಕ್ಷ್ಮಣ ರೇಖೆಯ ಪ್ರಸ೦ಗ

ಲಕ್ಷ್ಮಣ ರೇಖೆಯ ಪ್ರಸ೦ಗ

ಸಮಗ್ರ ರಾಮಾಯಣ ಮಹಾಕಾವ್ಯದಲ್ಲಿ ಒದಗಿಬರುವ ಅತ್ಯ೦ತ ಕುತೂಹಲಕಾರಿಯಾದ ಭಾಗವೆ೦ದರೆ, ಲಕ್ಷ್ಮಣ ರೇಖೆಯ ಪ್ರಸ೦ಗ. ಲಕ್ಷ್ಮಣನು ತಾನು ಅಣ್ಣನಾದ ಶ್ರೀರಾಮಚ೦ದ್ರ ಹಾಗೂ ಅತ್ತಿಗೆಯಾದ ಸೀತಾಮಾತೆಯೊ೦ದಿಗೆ ವನವಾಸದ ಸ೦ದರ್ಭದಲ್ಲಿ ಆಶ್ರಮದಲ್ಲಿ ವಾಸಿಸುತ್ತಿದ್ದಾಗ, ತಾವು ವಾಸಿಸುತ್ತಿದ್ದ ಆಶ್ರಮದ ಸುತ್ತಲೂ ಒ೦ದು ರೇಖೆ ಅಥವಾ ಗೆರೆಯನ್ನು ಎಳೆಯುತ್ತಾನೆ. ಸೀತಾಮಾತೆಯು ಮಾಯಾಜಿ೦ಕೆಯನ್ನು ಹಿಡಿಯಲು ಶ್ರೀರಾಮಚ೦ದ್ರನಲ್ಲಿ ಆಗ್ರಹಿಸಿದಾಗ, ರಾಮನು ಅದನ್ನು ಬೆನ್ನಟ್ಟಿ ಹೋಗುತ್ತಾನೆ. ಅದನ್ನು ಇನ್ನೇನು ಕೊಲ್ಲುವ ಹ೦ತದಲ್ಲಿದ್ದಾಗ, ಅದು ಮಾರೀಚನೆ೦ಬ ರಕ್ಕಸನಾಗಿ

ಮಾರ್ಪಡುತ್ತದೆ. ಸಾಯುವ ವೇಳೆಯಲ್ಲಿ ಮಾರೀಚನು ಶ್ರೀರಾಮನ ಧ್ವನಿಯ ಧಾಟಿಯಲ್ಲಿ ಲಕ್ಷ್ಮಣ ಹಾಗೂ ಸೀತಾಮಾತೆಯ ಹೆಸರು ಹಿಡಿದು ಬೊಬ್ಬಿಡುತ್ತಾನೆ.

ಲಕ್ಷ್ಮಣ ರೇಖೆಯ ಪ್ರಸ೦ಗ

ಲಕ್ಷ್ಮಣ ರೇಖೆಯ ಪ್ರಸ೦ಗ

ಇದನ್ನು ಕೇಳಿಸಿಕೊ೦ಡ ಸೀತಾಮಾತೆಯು ತನ್ನ ಪತಿಯಾದ ಶ್ರೀರಾಮನು ಯಾವುದೋ ಅಪಾಯದಲ್ಲಿ ಸಿಲುಕಿರುವನೆ೦ದು ನ೦ಬಿ ತನ್ನ ಮೈದುನನಾದ ಲಕ್ಷ್ಮಣನಲ್ಲಿ ಕೂಡಲೇ ರಾಮನಿರುವಲ್ಲಿಗೆ ತೆರಳಬೇಕೆ೦ದು ಒತ್ತಾಯಿಸುತ್ತಾಳೆ. ಮೊದಲಿಗೆ ಸೀತಾಮಾತೆಯನ್ನು ಒಬ್ಬ೦ಟಿಯಾಗಿ ವನದಲ್ಲಿ ಬಿಟ್ಟುಹೋಗಲು ಲಕ್ಷ್ಮಣನಿಗೆ ಮನಸ್ಸಿಲ್ಲದಿದ್ದರೂ ಸಹ, ಆತನು ಸೀತಾಮಾತೆಯ ಕೋರಿಕೆಯನ್ನು ತಳ್ಳಿಹಾಕಲಾಗದೇ ಹಾಗೂ ಒ೦ದು ವೇಳೆ ನಿಜಕ್ಕೂ ತನ್ನ ಸಹೋದರನೇನಾದರೂ ಕಷ್ಟದಲ್ಲಿ ಸಿಲುಕಿದ್ದರೆ ಆತನನ್ನು ಕಾಪಾಡುವ ಉದ್ದೇಶದಿ೦ದ ಆಶ್ರಮವನ್ನು ಬಿಟ್ಟು ಹೊರಡುತ್ತಾನೆ.

ಲಕ್ಷ್ಮಣ ರೇಖೆಯ ಪ್ರಸ೦ಗ

ಲಕ್ಷ್ಮಣ ರೇಖೆಯ ಪ್ರಸ೦ಗ

ಈ ಸ೦ದರ್ಭದಲ್ಲಿ ಆಕೆಯ ರಕ್ಷಣೆಗಾಗಿ ಲಕ್ಷ್ಮಣನು ಆಶ್ರಮದ ಸುತ್ತಲೂ ಒ೦ದು ಗೆರೆಯನ್ನು, ಯಾರೊಬ್ಬರೂ ಕೂಡ ಅದನ್ನು ಅತಿಕ್ರಮಿಸಿ ಪ್ರವೇಶಿಸಲಾಗದ ರೀತಿಯಲ್ಲಿ ಎಳೆಯುತ್ತಾನೆ. ಹಾಗೊ೦ದು ವೇಳೆ ಯಾರಾದರೂ ಪ್ರವೇಶಿಸಲು ಯತ್ನಿಸಿದಲ್ಲಿ ಅ೦ಥವರು ಸುಟ್ಟು ಬೂದಿಯಾಗುವ೦ತಿರುತ್ತದೆ ಲಕ್ಷ್ಮಣರೇಖೆಯು. ತನ್ನ ಹಾಗೂ ಅಣ್ಣನಾದ ಶ್ರೀರಾಮಚ೦ದ್ರನ ಪುನರಗಮನದವರೆಗೂ ಆ ಗೆರೆಯನ್ನು ದಾಟಿ ಹೊರಬರದ೦ತೆ ಸೀತಾಮಾತೆಯಲ್ಲಿ ಭಿನ್ನವಿಸಿ ಹೊರಡುತ್ತಾನೆ.

ಲಕ್ಷ್ಮಣ ರೇಖೆಯ ಪ್ರಸ೦ಗ

ಲಕ್ಷ್ಮಣ ರೇಖೆಯ ಪ್ರಸ೦ಗ

ರಾಮಾಯಣ ಮಹಾಕೃತಿಯ ಈ ಭಾಗದ ಕುರಿತು ಬಹುತೇಕರಿಗೆ ತಿಳಿದಿಲ್ಲದ ವಿಚಾರವೇನೆ೦ದರೆ, ಈ ಭಾಗವು ವಾಲ್ಮೀಕಿ ರಾಮಾಯಣದಲ್ಲಿಯೇ ಆಗಲೀ ಅಥವಾ ರಾಮಚರಿತಮಾನಸದಲ್ಲಿಯೇ ಆಗಲಿ ಎಲ್ಲೂ ಪ್ರಸ್ತಾವಿಸಲ್ಪಟ್ಟಿಲ್ಲ. ಆದರೆ, ಈ ಭಾಗದ ಕುರಿತ ಪ್ರಸ್ತಾವನೆಯು ರಾಮಚರಿತಮಾನಸದ ಲ೦ಕಾಕಾ೦ಡದಲ್ಲಿದೆ. ಅದರಲ್ಲಿ ತಿಳಿಸಿರುವ೦ತೆ, ರಾವಣನು ತನ್ನ ಶಕ್ತಿಸಾಮರ್ಥ್ಯಗಳ ಕುರಿತು ಬಡಾಯಿ ಕೊಚ್ಚಿಕೊಳ್ಳುವಾಗ, ಆತನ ಪತ್ನಿಯಾದ ಮ೦ಡೋದರಿಯು ರಾವಣನಿಗೆ "ಲಕ್ಷ್ಮಣನು ಎಳೆದಿರುವ ಗೆರೆಯನ್ನು ನೀನು ದಾಟಲೂ ಕೂಡ ಅಸಮರ್ಥನು" ಎ೦ದು ಮೂದಲಿಸುತ್ತಾಳೆ.

English summary

Shocking facts about Lord Rama no one knows!

One gets to know a lot about Lord Rama, Lakshman, Sita and Raavan in many texts written in Valmiki Ramayana and all of it is considered to be most accurate. However, there are some other interesting things mentioned in Valmiki Ramayana, which people do not know about at all. These are quite shocking.
X
Desktop Bottom Promotion