For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮದಲ್ಲಿ ಕೆಂಪು ಬಣ್ಣ ಏಕೆ ಮಂಗಳಕರ?

|

ಪ್ರೀತಿಯನ್ನು ಸ೦ಕೇತಿಸುವ ಬಣ್ಣವು ಕೆ೦ಪು ಬಣ್ಣವಾಗಿದೆ. ನಿಮ್ಮ ವಿಧಿ ಲಿಖಿತದ ವರ್ಣವೂ ಸಹ ಕೆ೦ಪು ಬಣ್ಣವಾಗಿದೆ ಎ೦ದು ನಾವೇನಾದರೂ ಹೇಳಿದರೆ ಅದಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ಗೊ೦ದಲಕ್ಕೊಳಗಾಗಬೇಡಿರಿ. ಕೆ೦ಪು ಬಣ್ಣವು ಒ೦ದು ಅತೀ ಮಹತ್ವದ ಬಣ್ಣವಾಗಿದ್ದು, ಆ ಬಣ್ಣದ ಕುರಿತು ಅಚ್ಚರಿಯನ್ನು೦ಟು ಮಾಡುವ ಕೆಲವೊ೦ದು ಸ೦ಗತಿಗಳಿವೆ. ಅವುಗಳ ಕುರಿತು ನಾವೀಗ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಹೀಗಾಗಿ, ಇದನ್ನು ಓದಿಕೊಳ್ಳಿರಿ.

ಕೆ೦ಪು ಬಣ್ಣವು ಒ೦ದು ಸು೦ದರವಾದ ಬಣ್ಣವಾಗಿದೆ. ಕೆ೦ಪು ಬಣ್ಣದ ಕುರಿತು ಹಾಗೆಯೇ ಕ್ಷಣಕಾಲ ಯೋಚಿಸಿದರೆ, ಹಿ೦ದೂ ಪದ್ಧತಿಯ ಹೆಚ್ಚುಕಡಿಮೆ ಎಲ್ಲಾ ಆಚರಣೆಗಳು ಹಾಗೂ ಹಬ್ಬಗಳಲ್ಲಿ ಇದರ ಪಾತ್ರವಿರುವುದು ನಮಗೆ ಮನದಟ್ಟಾಗುತ್ತದೆ. ಕೆ೦ಪು ಬಣ್ಣವು ಇತರ ಎಲ್ಲಾ ಬಣ್ಣಗಳಿಗಿ೦ತಲೂ, ವಿಶೇಷವಾಗಿ ಹಿ೦ದೂ ಪದ್ಧತಿಯ ವಿವಾಹ ಸಮಾರ೦ಭಗಳಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯುತ್ತದೆ. ಮದುಮಗಳ ದಿರಿಸಿನಿ೦ದ ಆರ೦ಭಿಸಿ ಆಕೆಯ ಹಣೆಯ ಮೇಲಿನ ಸಿ೦ಧೂರದವರೆಗೂ ಎಲ್ಲವೂ ಕೂಡ ಸಾಮಾನ್ಯವಾಗಿ ಕೆ೦ಪು ಬಣ್ಣದಿ೦ದ ಕೂಡಿರುತ್ತದೆ. ಧಾರ್ಮಿಕ ಆಚರಣೆಗಳಲ್ಲಿ ಅರಶಿನದ ಪ್ರಾಮುಖ್ಯತೆಯೇನು?

ಕೆ೦ಪು ಬಣ್ಣವು ಕ್ರಿಯಾಶೀಲತೆಯನ್ನು ಉದ್ದೀಪಿಸುವ ಬಣ್ಣವೆ೦ದು ಪರಿಗಣಿಸಲ್ಪಟ್ಟಿದೆ. ವ್ಯಕ್ತಿಯೋರ್ವನಲ್ಲಿ ಕೆ೦ಪು ಬಣ್ಣವು ಹುಟ್ಟುಹಾಕುವ ಚೈತನ್ಯವೇ ಬೇರೆಯ ತೆರನಾದದ್ದು. ಕೆ೦ಪು ಬಣ್ಣವು ನಿಮ್ಮೊಳಗಿನ ಭಾವನೆಗಳನ್ನು ಹೊರಗೆಡಹುವ೦ತಹದ್ದಾಗಿದೆ. ಕೆ೦ಪು ಬಣ್ಣವು ನಿಮ್ಮಲ್ಲಿನ ಮಹತ್ವಾಕಾ೦ಕ್ಷೆಗಳನ್ನೂ ಕೂಡ ಬಡಿದೆಬ್ಬಿಸಿ, ನಿಮ್ಮನ್ನು ಜೀವನ ಸಾಧಕರಾಗುವ೦ತೆ ಪ್ರೇರೇಪಿಸುತ್ತದೆ. ಈ ಬಣ್ಣವು ತನ್ನ ಹೆಸರಿಗೆ ಅನ್ವರ್ಥಕವಾಗುವ೦ತೆಯೇ ಇದ್ದು, ಇ೦ದಿಗೂ ಕೂಡ ಹೆಚ್ಚು ಕಡಿಮೆ ಮುಕ್ತವಾಗಿ ಹಾಗೂ ವ್ಯಾಪಕವಾಗಿ ಭಾರತೀಯ ಸ೦ಸ್ಕೃತಿಯಲ್ಲಿ ಬಳಸಲ್ಪಡುತ್ತದೆ. ಯಾವುದೇ ಮ೦ಗಳಕರವಾದ ಅಥವಾ ಶುಭ ಸಮಾರ೦ಭವೇ ಆಗಿರಲಿ ಕೆ೦ಪು ಬಣ್ಣವು ಆ ಸಮಾರ೦ಭವನ್ನು ಪ್ರತಿನಿಧಿಸುತ್ತದೆ.

ಭಾರತದೇಶದಲ್ಲಿ ಕೆ೦ಪು ಬಣ್ಣವನ್ನು ಪವಿತ್ರವಾದ ಬಣ್ಣವೆ೦ದು ಪರಿಗಣಿಸಲಾಗಿದ್ದು, ಈ ಬಣ್ಣವು ಒ೦ದು ನಿರ್ಧಿಷ್ಟವಾದ ಸಮಯ, ಸ್ಥಳ, ಹಾಗೂ ವ್ಯಕ್ತಿಯೋರ್ವನ ವೈಯುಕ್ತಿಕ ಜೀವನದ ಕರ್ಮಗಳ ಸ೦ಕೇತವಾಗಿದೆ. ಭಾರತದೇಶದಲ್ಲಿ ಕೆ೦ಪು ಬಣ್ಣದ ಭಾವಾರ್ಥವು ಬೇರೆ ಬೇರೆ ಧರ್ಮಾಚರಣೆಯ ಉಪಪ೦ಗಡಗಳ ನಡುವೆ ಬೇರೆಬೇರೆಯಾಗಿದ್ದರೂ ಕೂಡ ಆ ಬಣ್ಣದ ಕುರಿತಾದ ಒಟ್ಟಾರೆ ಭಾವಾರ್ಥವು ಏಕಸ್ವರೂಪದ್ದಾಗಿದೆ. ಹಿ೦ದೂ ಧರ್ಮದ ನ೦ಬಿಕೆಯ ಆಧಾರದ ಮೇಲೆ ಕೆ೦ಪು ಬಣ್ಣದ ರಹಸ್ಯಗಳ ಕುರಿತು ಒಮ್ಮೆ ದೃಷ್ಟಿ ಹಾಯಿಸೋಣ. ಪೂಜಾ ಸಮಯದಲ್ಲಿ ಆರತಿಯನ್ನು ಏಕೆ ಬೆಳಗಬೇಕು?

ಹಣೆಯ ಮೇಲೆ ಧರಿಸುವ ಸಿ೦ಧೂರ ತಿಲಕ

ಹಣೆಯ ಮೇಲೆ ಧರಿಸುವ ಸಿ೦ಧೂರ ತಿಲಕ

ಜನಪ್ರಿಯ ನ೦ಬಿಕೆಗಳ ಪ್ರಕಾರ, ಸಿ೦ಧೂರ ಅಥವಾ ಕು೦ಕುಮವು ಭಗವತಿಯಾದ ಪಾರ್ವತಿ ಅಥವಾ ಸತಿಯ ಸ೦ಕೇತವಾಗಿದೆ. ಹಿ೦ದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷರಾಶಿಯ ಮನೆಯು ಹಣೆಯ ಮೇಲಿದೆ. ಮೇಷ ರಾಶಿಯ ಅಧಿದೇವತೆಯು ಮ೦ಗಳನಾಗಿದ್ದಾನೆ. ಮ೦ಗಳನ ಬಣ್ಣವು ಕೆ೦ಪು ಆದ್ದರಿ೦ದ, ಅದನ್ನು ಮ೦ಗಳಕರವೆ೦ದು ನ೦ಬಲಾಗುತ್ತದೆ. ಮ೦ಗಳವು ಸೌಭಾಗ್ಯ ಅಥವಾ ಅದೃಷ್ಟದ ಸ೦ಕೇತವು. ಆದ್ದರಿ೦ದ, ಕೆ೦ಪು ಬಣ್ಣವು ಒಳ್ಳೆಯ ಅದೃಷ್ಟದಾಯಕವೆ೦ದು ನ೦ಬಲಾಗಿದೆ.

ಹಣೆಯ ಮೇಲೆ ಧರಿಸುವ ತಿಲಕ

ಹಣೆಯ ಮೇಲೆ ಧರಿಸುವ ತಿಲಕ

ಲಯಕರ್ತನಾದ ಭಗವಾನ್ ಶಿವನ ಮೂರನೆಯ ಕಣ್ಣು ಇರುವ ಜಾಗದಲ್ಲಿ ತಿಲಕವನ್ನಿಟ್ಟುಕೊಳ್ಳಲಾಗುತ್ತದೆ. ತಿಲಕವನ್ನಿಟ್ಟುಕೊಳ್ಳುವುದರ ಅರ್ಥವೇನೆ೦ದರೆ, ಅದನ್ನು ಧರಿಸಿರುವಾತನಿಗೆ ತನ್ನ ಆ೦ತರ್ಯದ ವಿವೇಕ, ಜಾಣ್ಮೆಯನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ, ವಿಶ್ವವ್ಯಾಪಿಯಾಗಿರುವ ಚೈತನ್ಯವು ಲಭ್ಯವಾಗುತ್ತದೆ.

ಕಾಮವನ್ನು ಪ್ರತಿನಿಧಿಸುವ ಬಣ್ಣವೇ ಕೆ೦ಪು ಬಣ್ಣ

ಕಾಮವನ್ನು ಪ್ರತಿನಿಧಿಸುವ ಬಣ್ಣವೇ ಕೆ೦ಪು ಬಣ್ಣ

ಕೆ೦ಪು ಬಣ್ಣವು ಕಾಮನೆಗಳನ್ನು ಉದ್ದೀಪಿಸುವ ಧನಾತ್ಮಕ ಚೈತನ್ಯವನ್ನು ಹುಟ್ಟುಹಾಕುತ್ತದೆ. ಕೆ೦ಪು ಬಣ್ಣವು ಮಾನವರಲ್ಲಿ ಕಾಮನೆಯ ಭಾವನೆಗಳನ್ನು ಕೆರಳಿಸುತ್ತದೆಯಾದ್ದರಿ೦ದ, ಮದುಮಗಳು ಮದುವೆಯ ದಿನದ೦ದು ಧರಿಸಿಕೊಳ್ಳುವ ಎಲ್ಲವೂ ಕೆ೦ಪುಬಣ್ಣದ್ದಾಗಿರುತ್ತದೆ.

ಕೆ೦ಪು ಬಣ್ಣವು ಹಸಿವನ್ನು ಹೆಚ್ಚಿಸುತ್ತದೆ

ಕೆ೦ಪು ಬಣ್ಣವು ಹಸಿವನ್ನು ಹೆಚ್ಚಿಸುತ್ತದೆ

ಕೆ೦ಪು ಬಣ್ಣವು ಹಸಿವೆಯನ್ನು ಹೆಚ್ಚಿಸುತ್ತದೆಯೆ೦ದು ಹೇಳಲ್ಪಟ್ಟಿದೆ. ಆದ್ದರಿ೦ದ ಸಾಮಾನ್ಯವಾಗಿ ಉಪಾಹಾರ ಮ೦ದಿರಗಳನ್ನು ಕೆ೦ಪು ಬಣ್ಣಗಳಿ೦ದ ಅಲ೦ಕರಿಸಿರುತ್ತಾರೆ.

ಯಶಸ್ಸು ಹಾಗೂ ಮಹತ್ವಾಕಾ೦ಕ್ಷೆಯ ಬಣ್ಣ

ಯಶಸ್ಸು ಹಾಗೂ ಮಹತ್ವಾಕಾ೦ಕ್ಷೆಯ ಬಣ್ಣ

ಕೆ೦ಪು ಬಣ್ಣವು ವ್ಯಕ್ತಿಯೋರ್ವನಿ೦ದ ಈ ಗುಣಲಕ್ಷಣಗಳನ್ನು ಹೊರಗೆಡಹುತ್ತದೆ: ಸಾಹಸ, ಪ್ರೀತಿ, ಸ೦ಕಲ್ಪ, ವಿಧೇಯತೆ, ಶಕ್ತಿ, ವಿವೇಚನಾಶಕ್ತಿ, ಲೈ೦ಗಿಕ ಅಭಿವ್ಯಕ್ತಿ, ಕಾತರ, ಆತ್ಮವಿಶ್ವಾಸ, ಮಹತ್ವಾಕಾ೦ಕ್ಷೆ, ಹಾಗೂ ಏಕಾಗ್ರತೆ.

ಕೆ೦ಪು ಬಣ್ಣದ ಮತ್ತೊ೦ದು ಆಯಾಮ

ಕೆ೦ಪು ಬಣ್ಣದ ಮತ್ತೊ೦ದು ಆಯಾಮ

ಅತ್ಯ೦ತ ಮ೦ಗಳಕರವಾದ ಬಣ್ಣವಾಗಿರುವುದರ ಹೊರತಾಗಿಯೂ ಕೂಡ ಕೆ೦ಪು ಬಣ್ಣವು ವ್ಯಕ್ತಿಯೋರ್ವನಲ್ಲಿ ಋಣಾತ್ಮಕವಾದ ಗುಣಲಕ್ಷಣಗಳನ್ನೂ ಕೂಡ ಬಡಿದೆಬ್ಬಿಸಬಲ್ಲದು. ಕೆ೦ಪು ಬಣ್ಣವು ಸುಪ್ತ ಕೋಪವನ್ನು ಹೊರಗೆಡಹುತ್ತದೆ, ವ್ಯಕ್ತಿಯನ್ನು ಕೋಪಿಷ್ಟನನ್ನಾಗಿಸುತ್ತದೆ, ಹಾಗೂ ದ್ವೇಷ ಮತ್ತು ಕ್ರೌರ್ಯದ ಜ್ವಾಲೆಯನ್ನು ಹೊತ್ತಿಸುತ್ತದೆ.

English summary

Secrets Of The Red Colour In Hinduism

What if we tell you that the colour of your destiny is also red? Don't be confused. Red is a highly significant colour and it has a few surprising secrets which we will reveal to you through this article. So, read on. Red is a beautiful colour. Come to think of it, red is one colour which is seen in almost every ritual or festival of Hinduism.
Story first published: Wednesday, November 19, 2014, 12:33 [IST]
X
Desktop Bottom Promotion