ಪಟಾಕಿ ಸಹವಾಸ ಮಾಡುವ ಮುನ್ನ ಇರಲಿ ಎಚ್ಚರಿಕೆ....

ಮನೆಯಲ್ಲಿರುವ ದೊಡ್ಡವರು ಮಕ್ಕಳ ಪಟಾಕಿ ಆಟಕ್ಕಾಗಿ ಕೆಲವೊಂದು ನಿಯಮಗಳನ್ನುಪಾಲಿಸಿಕೊಳ್ಳಲೇಬೇಕು. ಇದು ಮಕ್ಕಳಿಗೆ ಮಾತ್ರ ಅಪಾಯಕಾರಿಯಾಗಿರುವುದಲ್ಲದೆ ಸುತ್ತಮುತ್ತಲಿನ ಪರಿಸರಕ್ಕೂ ಹಾನಿಯನ್ನುಂಟು ಮಾಡಲಿದೆ ಎಂಬ ಅಂಶವನ್ನು ಮನನ ಮಾಡಿಕೊಳ್ಳಬೇಕು.

By: Jaya subramanya
Subscribe to Boldsky

ಬೆಳಕುಗಳ ಹಬ್ಬ ದೀಪಾವಳಿಗೆ ಇನ್ನೇನು ಕೆಲವೇ ದಿನಗಳ ಕಾಯುವಿಕೆ ಮಾತ್ರ ಬಾಕಿ ಇದೆ. ದೀಪಗಳನ್ನು ಹಚ್ಚಿ ಪಟಾಕಿ ಸಿಡಿಸಿ, ಹೊಸ ಬಟ್ಟೆ ತೊಟ್ಟು, ತಿಂಡಿಗಳನ್ನು ತಯಾರಿಸಿ ಸವಿದು, ಅತಿಥಿಗಳನ್ನು ಸತ್ಕರಿಸಿ ನಡೆಸಲಾಗುವ ಈ ಅತಿ ದೊಡ್ಡ ಹಬ್ಬದಲ್ಲಿ ಹೆಚ್ಚು ಪ್ರಾಮುಖ್ಯತೆ ದೀಪಗಳು ಮತ್ತು ಪಟಾಕಿಗಳಿಗೆ ಆಗಿದೆ. ಮಕ್ಕಳಂತೂ ದೀಪಾವಳಿ ಬಂತೆಂದರೆ ಹೊಸ ಹೊಸ ಪಟಾಕಿಗಳನ್ನು ಹಚ್ಚಿ ಸಂಭ್ರಮಿಸಬಹುದು ಅಂತೆಯೇ ದೊಡ್ಡವರಂತೆ ನಾವು ಕೂಡ ಹೊಸ ಹೊಸ ಪ್ರಯೋಗಗಳನ್ನು ನಡೆಸಬಹುದು ಎಂಬುದಾಗಿ ಮಂಡಿಗೆ ಮೆಲ್ಲುತ್ತಾರೆ. ದೀಪಾವಳಿ ಹಬ್ಬದ ಆಚರಣೆ- ನೀವು ತಿಳಿದಿರದ ಸತ್ಯಾಸತ್ಯತೆಗಳು

ಆದರೆ ಮನೆಯಲ್ಲಿರುವ ದೊಡ್ಡವರು ಮಕ್ಕಳ ಪಟಾಕಿ ಆಟಕ್ಕಾಗಿ ಕೆಲವೊಂದು ನಿಯಮಗಳನ್ನು ಪಾಲಿಸಿಕೊಳ್ಳಲೇಬೇಕು. ಇದು ಮಕ್ಕಳಿಗೆ ಮಾತ್ರ ಅಪಾಯಕಾರಿಯಾಗಿರುವುದಲ್ಲದೆ ಸುತ್ತಮುತ್ತಲಿನ ಪರಿಸರಕ್ಕೂ ಹಾನಿಯನ್ನುಂಟು ಮಾಡಲಿದೆ ಎಂಬ ಅಂಶವನ್ನು ಮನನ ಮಾಡಿಕೊಳ್ಳಬೇಕು. ಹಾಗಿದ್ದರೆ ಈ ದೀಪಾವಳಿಗೆ ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು ಎಂಬುದನ್ನು ಅರಿತುಕೊಳ್ಳೋಣ. 

Crackers
 

ಉತ್ತಮ ಗುಣಮಟ್ಟದ ಪಟಾಕಿಗಳನ್ನು ಬಳಸಿ
ಸರಕಾರವು ಅಧಿಕೃತವಾಗಿ ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದ್ದು ಉತ್ತಮ ಗುಣಮಟ್ಟದ ಪಟಾಕಿಯನ್ನು ಖರೀದಿಸುವ ಆದೇಶವನ್ನು ನೀಡಿದೆ. ದೀಪಾವಳಿ ಸಮಯದಲ್ಲಿ ಅನಧಿಕೃತವಾಗಿ ಕೆಲವು ಅಂಗಡಿಗಳು ಪಟಾಕಿ ಮಾರುವುದನ್ನು ನೀವು ಕಾಣುತ್ತೀರಿ. ಇಂತಹ ಅಂಗಡಿಗಳಿಂದ ಪಟಾಕಿ ಖರೀದಿಗಳನ್ನು ನಿಷೇಧಿಸಲಾಗಿದೆ.

crackers
 

ಮಕ್ಕಳಿಗೆ ಸೂಚನೆಗಳನ್ನು ನೀಡುವುದು ಮತ್ತು ಅವರ ಮೇಲೆ ನಿಗಾ ಇರಿಸುವುದು
ಪಟಾಕಿ ಹಚ್ಚಿ ಸಂಭ್ರಮಿಸುವುದು ಎಂದರೆ ಎಲ್ಲಾ ಮಕ್ಕಳಿಗೂ ಸಂಭ್ರಮವೇ. ಆದರೆ ಸುರಕ್ಷತೆಯ ವಿಷಯದಲ್ಲಿ ಮಕ್ಕಳ ಮೇಲೆ ನಿಗಾವನ್ನು ಹೆತ್ತವರು ಇರಿಸಿಕೊಳ್ಳಲೇಬೇಕು. ಪಟಾಕಿಗಳನ್ನು ಹೇಗೆ ಬಳಸಬೇಕು ಮತ್ತು ಸುರಕ್ಷತಾ ಕ್ರಮಗಳನ್ನು ಪಟಾಕಿ ಹಚ್ಚುವಾಗ ಹೇಗೆ ಪಾಲಿಸಬೇಕು ಎಂಬುದನ್ನು ಅವರಿಗೆ ತಿಳಿಸಿ ಹೇಳಿ.

crackers
 

ಮುಚ್ಚಿದ ಪ್ರದೇಶಗಳಲ್ಲಿ ಪಟಾಕಿ ಬಳಸದಿರಿ
ಮುಚ್ಚಿದ ಪ್ರದೇಶಗಳಲ್ಲಿ ನೀವು ಪಟಾಕಿಗಳನ್ನು ಬಳಸುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ತಮ್ಮ ಕೋಣೆ ಮತ್ತು ಮನೆಗಳಲ್ಲಿ ಮಕ್ಕಳು, ಹಿರಿಯರು ಮೋಜಿಗಾಗಿ ಪಟಾಕಿಯನ್ನು ಹಚ್ಚುತ್ತಾರೆ. ಇದು ಹೆಚ್ಚು ಅಪಾಯಕಾರಿಯಾಗಿದ್ದು ತೊಂದರೆಗೆ ಕಾರಣವಾಗಲಿದೆ. ಆದಷ್ಟು ಮನೆಯ ಹೊರಗೆ ಪಟಾಕಿಗಳನ್ನು ಹಚ್ಚಿ ಸಂಭ್ರಮಿಸಿ. 

Safety points to be observed while celebrating Diwali
 

ಪಟಾಕಿಗಳನ್ನು ನಂದಿಸುವುದು
ಪಟಾಕಿಗಳನ್ನು ಆರಿಸುವುದು ಹೆಚ್ಚು ಜಾಗರೂಕರಾಗಿ ಮಾಡಬೇಕು. ಪಟಾಕಿಗಳನ್ನು ಸಿಡಿಸುವುದು ಹೆಚ್ಚು ಸುಲಭವಾಗಿದ್ದರೂ ಅದನ್ನು ಆರಿಸುವ, ನಂದಿಸುವ ಕೆಲಸವನ್ನು ಹೆಚ್ಚು ಎಚ್ಚರಿಕೆಯಿಂದ ಮಾಡಬೇಕು. ಬಳಸಿದ ಪಟಾಕಿಗಳನ್ನು ಬಕೆಟ್‌ನಲ್ಲಿಟ್ಟು ಇದಕ್ಕೆ ನೀರು ಅಥವಾ ಮರಳನ್ನು ತುಂಬಿಸಿ ಪಟಾಕಿಯನ್ನು ಹೀಗೆ ನಂದಿಸಿ.    ಅಜ್ಞಾನದ ಕತ್ತಲೆಯನ್ನು ನೀಗಿಸುವ ಜ್ಞಾನ ಜ್ಯೋತಿ ದೀಪಾವಳಿ

ಬೆಂಕಿ ನಂದಿಸುವುದು
ದೀಪಾವಳಿ ಸಂಭ್ರಮದಲ್ಲಿ ಬೆಂಕಿ ನಂದಿಸುವ ಉಪಕರಣಗಳನ್ನು ನಿಮ್ಮ ಬಳಿ ಸದಾಕಾಲ ಇಟ್ಟುಕೊಳ್ಳಿ. ಯಾವುದೇ ಸಮಯದಲ್ಲಿ ಕೂಡ ಬೆಂಕಿ ಅವಘಡಗಳು ಉಂಟಾಗಬಹುದು, ಆದ್ದರಿಂದ ಬಕೇಟ್‌ನಲ್ಲಿ ನೀರು ಅಥವಾ ಮರಳನ್ನು ನಿಮ್ಮ ಜೊತೆಯೇ ಇಟ್ಟುಕೊಳ್ಳಿ.

Safety points to be observed while celebrating Diwali
 

ಬಟ್ಟೆಗಳು
ದೀಪಾವಳಿಯ ಸಮಯದಲ್ಲಿ ನೀವು ಪಟಾಕಿ ಹಚ್ಚುವ ವೇಳೆಯಲ್ಲಿ ಬಟ್ಟೆಗಳ ಮೇಲೂ ನಿಗಾ ಇರಿಸಿಕೊಳ್ಳಿ. ಈ ಸಮಯದಲ್ಲಿ ಹತ್ತಿಯ ಬಟ್ಟೆಯನ್ನು ಧರಿಸಿ ಸಿಂಥಟಿಕ್ ಬಟ್ಟೆಯ ಬಳಕೆಯನ್ನು ಮಾಡದಿರಿ.  

crackers
 

ಪ್ರಥಮ ಚಿಕಿತ್ಸೆ
ಸುರಕ್ಷತೆಯ ಅಂಶವಾಗಿ, ಪಟಾಕಿಗಳನ್ನು ಸಿಡಿಸುವಾಗ ಪ್ರಥಮ ಚಿಕಿತ್ಸೆಯ ಪೆಟ್ಟಿಗೆಯನ್ನು ನಿಮ್ಮ ಬಳಿ ಇರಿಸಿಕೊಳ್ಳಿ. ಯಾವುದೇ ಸಣ್ಣ ಪುಟ್ಟ ತೊಂದರೆಗಳು ಆದಲ್ಲಿ ಪ್ರಥಮ ಚಿಕಿತ್ಸೆಯು ಫಲಕಾರಿಯಾಗಿರುತ್ತದೆ. ಮೇಲೆ ತಿಳಿಸಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ದೀಪಾವಳಿಯನ್ನು ಹೆಚ್ಚು ಸಂಭ್ರಮ ಮತ್ತು ಸಡಗರದಿಂದ ಆಚರಿಸಿ.

English summary

Safety points to be observed while celebrating Diwali

Diwali, the celebration of lights and fireworks, is knocking the festive season. Across the country, people wait for this festival to have fun with lights and sounds. As it a celebration of victory of light over darkness, everyone make it as exciting as possible. But while preparing for the celebrations, it is important to ensure that your children and yourself are safe.
Please Wait while comments are loading...
Subscribe Newsletter