For Quick Alerts
ALLOW NOTIFICATIONS  
For Daily Alerts

ಇಂದಿಗೂ ಹಿಂದೂ ಧರ್ಮದಲ್ಲಿ 'ಈ ವಸ್ತುಗಳಿಗೆ' ಪವಿತ್ರ ಸ್ಥಾನವಿದೆ

By Super Admin
|

ಅತ್ಯಂತ ಪುರಾತನ ಧರ್ಮವೆಂದರೆ ಅದು ಹಿಂದೂ ಧರ್ಮ. ಹಿಂದೂ ಧರ್ಮವನ್ನು ತುಂಬಾ ಪವಿತ್ರ ಧರ್ಮವೆನ್ನಲಾಗುತ್ತದೆ. ಹಿಂದೂ ಧರ್ಮದಲ್ಲಿ ದೇವರ ಮೂರ್ತಿಯನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಸ್ವಲ್ಪ ಆರ್ಯರ ಪ್ರಭಾವವು ಇರುವ ಕಾರಣದಿಂದ ನಾವು ಮರ ಹಾಗೂ ಇತರ ಕೆಲವೊಂದು ವಸ್ತುಗಳನ್ನು ಕೂಡ ಪವಿತ್ರವೆಂದು ನಂಬಿ ಅದನ್ನು ಪೂಜಿಸುತ್ತೇವೆ.

ಅಗ್ನಿ, ಸೂರ್ಯ, ನದಿಗಳು, ತುಳಸಿ ಗಿಡ, ಮಣ್ಣು, ಅಶ್ವತ್ಥ ಮರ ಹೀಗೆ ಹಲವಾರು ವಸ್ತುಗಳ ಹಿಂದೂಗಳಿಗೆ ತುಂಬಾ ಪವಿತ್ರವೆನಿಸಿದೆ. ಇತರ ಧರ್ಮದವರಿಗೆ ಇದನ್ನು ನೋಡಿ ಸ್ವಲ್ಪ ವಿಚಿತ್ರವೆನಿಸಬಹುದು. ಆದರೆ ಇದನ್ನು ಅನಾದಿ ಕಾಲದಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಅದರಲ್ಲೂ ಹಿಂದೂ ಧರ್ಮದಲ್ಲಿ ಗಂಗೆಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಹಿಂದೂ ಧರ್ಮ: ಪೂಜಾ ಗೃಹದಲ್ಲಿ 'ಅಗರಬತ್ತಿಯ' ಮಹತ್ವ

ಯಾಕೆಂದರೆ ಆಕೆ ಶಿವನ ಶಿರದಿಂದ ಬಂದಾಕೆ ಎನ್ನುವ ನಂಬಿಕೆ. ಇದರಿಂದ ಗಂಗೆಯಲ್ಲಿ ಪ್ರತೀ ದಿನ ಬೆಳಿಗ್ಗೆ ಹಾಗೂ ಸಂಧ್ಯಾಕಾಲದಲ್ಲಿ ಆರತಿ ಮಾಡಲಾಗುತ್ತದೆ. ಗಂಗೆಯ ಪೂಜೆಗಾಗಿ ಹೂಗಳು, ದೀಪಗಳನ್ನು ಅರ್ಪಿಸಲಾಗುತ್ತದೆ. ಗಂಗೆಗೆ ಪೂಜೆ ಮಾಡುವುದರಿಂದ ಎಲ್ಲಾ ಪಾಪದಿಂದ ವಿಮೋಚನೆಯಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ವಿಷ್ಣುವಿನ ಭಕ್ತರು ಬಾಳೆಹಣ್ಣಿನ ಮರಕ್ಕೆ ಪೂಜೆ ಮಾಡುತ್ತಾರೆ.

ಅದರಲ್ಲೂ ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಣಿ ಪಕ್ಷಿಗಳನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಗೋವನ್ನು ದೇವರೆಂದೇ ಪೂಜಿಸಲಾಗುತ್ತದೆ. ಚಿನ್ನ, ಬೆಳ್ಳಿ, ಕಂಚು, ಕಬ್ಬಿಣವೂ ಪವಿತ್ರವೆಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿನ ಕೆಲವೊಂದು ಅತ್ಯಂತ ಪವಿತ್ರವಾಗಿರುವ ವಸ್ತುಗಳ ಬಗ್ಗೆ ಈ ಲೇಖನದಲ್ಲಿ ಗಮನಹರಿಸುವ. ಪ್ರಪಂಚದಲ್ಲೇ ಹಿಂದೂ ಧರ್ಮ ಮಹತ್ತರವಾದುದು ಏಕೆ?

ಬಾಳೆ ಗಿಡ

ಬಾಳೆ ಗಿಡ

ಪ್ರತೀ ಗುರುವಾರ ಕೆಲವು ಭಕ್ತರು ಬಾಳೆಹಣ್ಣಿನ ಗಿಡಕ್ಕೆ ಅಂದರೆ ಬಾಳೆಗಿಡಕ್ಕೆ ಅರಿಶಿನ, ಬೆಲ್ಲ ಮತ್ತು ಕಡಲೆಕಾಳನ್ನು ಹಾಕಿ ಪೂಜೆ ಸಲ್ಲಿಸುತ್ತಾರೆ. ಬಾಳೆಗಿಡವು ಭಾರತದ ಹೆಚ್ಚಿನ ಭಾಗಗಳಲ್ಲಿ ಎಲ್ಲಾ ಕಾಲದಲ್ಲೂ ಕಂಡುಬರುತ್ತದೆ.

ರಂಗೋಲಿ

ರಂಗೋಲಿ

ಹಿಂದೂ ಧರ್ಮದವರ ಹೆಚ್ಚಿನ ಮನೆಗಳ ಪ್ರವೇಶ ದ್ವಾರದಲ್ಲಿ ರಂಗೋಲಿಯನ್ನು ಕಾಣಬಹುದಾಗಿದೆ. ರಂಗೋಲಿಯಲ್ಲಿನ ಗಾಢವಾದ ಬಣ್ಣವು ಧನಾತ್ಮಕತೆಯನ್ನು ಉಂಟು ಮಾಡುತ್ತದೆ ಮತ್ತು ಮನೆಯವರ ಬದುಕನ್ನು ಬೆಳಗುತ್ತದೆ ಎನ್ನುವ ನಂಬಿಕೆ.

ಚಿನ್ನ

ಚಿನ್ನ

ಬಂಗಾರ ಪ್ರಿಯರೇ, ತಿಳಿದಿರಲಿ ಚಿನ್ನದಂತಹ ಸಂಗತಿ...

ಬೆಳ್ಳಿ

ಬೆಳ್ಳಿ

ಬೆಳ್ಳಿಯ ನಾಣ್ಯ ಹಾಗೂ ಪಾತ್ರೆಗಳನ್ನು ದಾನ ಮಾಡುವುದು ಭಾರತದಲ್ಲಿನ ಸಂಪ್ರದಾಯವಾಗಿದೆ. ಹೆಚ್ಚಿನ ದೇವಾಲಯಗಳಲ್ಲಿ ಬೆಳ್ಳಿಯ ನಾಣ್ಯಗಳನ್ನು ಅರ್ಪಿಸಿರುವುದನ್ನು ನೋಡಬಹುದಾಗಿದೆ. ದೀಪಾವಳಿಯ ಸಮಯದಲ್ಲಿ ಬರುವಂತಹ ಧನ್ತೆರಸ್ ವೇಳೆ ಬೆಳ್ಳಿ ಹಾಗೂ ಬಂಗಾರ ಖರೀದಿಸುವುದು ತುಂಬಾ ಶುಭವೆನ್ನಲಾಗುತ್ತದೆ.

 ತುಳಸಿ ಗಿಡ

ತುಳಸಿ ಗಿಡ

ತುಳಸಿ ಗಿಡವನ್ನು ತುಂಬಾ ಪವಿತ್ರವೆಂದು ನಂಬಲಾಗಿರುವ ಕಾರಣದಿಂದಾಗಿ ಹಿಂದೂಗಳ ಮನೆಯ ಅಂಗಳದಲ್ಲಿ ತುಳಸಿ ಕಟ್ಟೆಯನ್ನು ಕಾಣಬಹುದು. ವಿವಾಹಿತ ಜೀವನ ಒಳ್ಳೆಯದಾಗಿರಲಿ ಎಂದು ವಿವಾಹಿತ ಮಹಿಳೆಯರು ತುಳಸಿ ಗಿಡವನ್ನು ಪೂಜಿಸುತ್ತಾರೆ.

ಅಡಕೆ

ಅಡಕೆ

ಹಿಂದೂಗಳು ಪೂಜೆ ಹಾಗೂ ಹೋಮಗಳಲ್ಲಿ ಅಡಕೆಯನ್ನು ಬಳಸಲಾಗುತ್ತದೆ. ಇದನ್ನು ತುಂಬಾ ಪವಿತ್ರ ಹಾಗೂ ಪರಿಶುದ್ಧವೆಂದು ನಂಬಲಾಗಿದೆ. ಅಡಕೆಯನ್ನು ಗಣಪತಿಯ ಪೂಜೆಗೂ ಬಳಸಲಾಗುತ್ತದೆ.

ಮಾವಿನ ಎಲೆಗಳು

ಮಾವಿನ ಎಲೆಗಳು

ಹಿಂದೂಗಳು ಮಾವಿನ ಎಲೆಗಳನ್ನು ತುಂಬಾ ಪವಿತ್ರವೆಂದು ನಂಬುತ್ತಾರೆ. ಮನೆಯಲ್ಲಿ ಯಾವುದೇ ಸಮಾರಂಭ ಅಥವಾ ಪೂಜೆಗೆ ಮೊದಲು ಮಾವಿನ ಎಲೆಗಳನ್ನು ಪ್ರವೇಶದ್ವಾರಕ್ಕೆ ಕಟ್ಟಲಾಗುತ್ತದೆ.

ಅರಿಶಿನ

ಅರಿಶಿನ

ಅರಿಶಿನವನ್ನು ವಿಷ್ಣುವಿಗೆ ಅರ್ಪಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಇದು ತುಂಬಾ ಪವಿತ್ರವೆಂದು ಭಾವಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಅಡಗಿರುವ 21 ವೈಜ್ಞಾನಿಕ ಸತ್ಯಗಳು

English summary

Sacred Objects In Hinduism

Hinduism is a sacred religion. In Hinduism, many things are considered holy. Hindus do not just worship idols of Gods and Goddesses, but also consider few objects as sacred. From small basil plant to the vermilion powder, these small sacred objects have a spiritual significance. Fire, wind, sun and soil are considered holy in Hinduism.
X
Desktop Bottom Promotion