For Quick Alerts
ALLOW NOTIFICATIONS  
For Daily Alerts

ಹನುಮಾನ್ ನಮ್ಮ ನಡುವೆ ಇದ್ದಾನೆಯೇ? ಇಲ್ಲಿದೆ ಪುರಾವೆಗಳು!

By Super
|

ಹಿಂದೂ ಧರ್ಮದಲ್ಲಿ ಹನುಮಂತ ದೇವರಿಗೆ ವಿಶಿಷ್ಟ ಸ್ಥಾನವಿದೆ. ಸ್ವಾಮಿನಿಷ್ಠೆಗೆ ಇನ್ನೊಂದು ಹೆಸರು ಆಂಜನೇಯ. ಈತನ ಭಕ್ತರಿಗೇನೂ ಕಡಿಮೆಯಿಲ್ಲ. ಭಾರತದಾದ್ಯಂತ ಕೋಟ್ಯಂತರ ಹಿಂದೂಗಳು ಹನುಮಂತ ದೇವರನ್ನು ಆರಾಧಿಸುತ್ತಾರೆ. ಆತನ ಧೈರ್ಯ, ಶೌರ್ಯ, ಸಾಹಸ, ಶಕ್ತಿ, ಮುಗ್ಧತೆ, ಅನುಕಂಪ, ಸಹಾನುಭೂತಿ ಮತ್ತು ಮುಖ್ಯವಾಗಿ ನಿಃಸ್ವಾರ್ಥ ಪ್ರೇಮವನ್ನು ಶತಮಾನಗಳಿಂದ ಉಲ್ಲೇಖಿಸಲಾಗುತ್ತಿದೆ.

ಆದರೆ ಕೆಲವರು ಮಾತ್ರ ಹನುಮಂತ ಇನ್ನೂ ಜೀವಂತವಾಗಿದ್ದಾನೆ ಎಂದು ನಂಬುತ್ತಾರೆ. ಇದಕ್ಕಾಗಿ ಎಷ್ಟೋ ಕಾರಣಗಳನ್ನು ನೀಡುತ್ತಾರೆ. ಪುರಾಣಗಳಲ್ಲಿಯೂ ಭಗವಂತನ ಅವತಾರಗಳ ಉದ್ದೇಶಗಳು ಪೂರ್ಣವಾದ ಬಳಿಕ ಅವರ ನಿರ್ಗಮನವನ್ನೂ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಭಗವಂತ ರಾಮ ಮತ್ತು ಕೃಷ್ಣರ ನಿರ್ಗಮನದ ಉಲ್ಲೇಖವಿದೆ. ಆದರೆ ಎಲ್ಲಿಯೂ ಹನುಮಂತನ ನಿರ್ಗಮನದ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ದೈಹಿಕ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಹನುಮಾನ್ ಮಂತ್ರ

ಆತ್ಮಕ್ಕೆ ಸಾವಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಆತ್ಮ ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ಆವರಿಸಿಕೊಳ್ಳುತ್ತದೆ ಎಂದು ಧರ್ಮಗ್ರಂಥಗಳಲ್ಲಿ ತಿಳಿಸಲಾಗಿದೆ. ಆದರೆ ಹಿಂದೂ ಪುರಾಣದಲ್ಲಿ ಕೆಲವು ಆತ್ಮಗಳು ಯುಗಯುಗಗಳು ಕಳೆದರೂ ಬೇರೊಂದು ಶರೀರವನ್ನು ಆವರಿಸದೇ ಹಾಗೇ ಇರುತ್ತವೆ. ಭಗವಂತ ಹನುಮಂತನ ಆತ್ಮ ಇಂತಹದ್ದೊಂದು ಎನ್ನಲು ಕೆಲವು ಪುರಾವೆಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ಚಿರಂತನ ಹನುಮಾನ್

ಚಿರಂತನ ಹನುಮಾನ್

ಆತ್ಮ ಶರೀರದಿಂದ ಶರೀರಕ್ಕೆ ಬದಲಾಗುತ್ತಾ ಇರುತ್ತದೆ ಎಂದು ಕೇಳಿದ್ದೇವೆ. ಆದರೆ ಹಿಂದೂ ಪುರಾಣಗಳಲ್ಲಿ ಕೆಲವು ಆತ್ಮಗಳು ಚಿರಂತನ ಎಂದು ಹೇಳಲಾಗಿದೆ. ಹನುಮಂತನ ನಿರ್ಗಮನದ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿರುವ ಕಾರಣ ಈತನ ಆತ್ಮವೂ ಚಿರಂತನ ಎಂದು ಗ್ರಹಿಸಬಹುದು.

ಈಗಲೂ ಹನುಮಂತ ನಮ್ಮ ನಡುವೆ ಇದ್ದಾನೆಯೇ?

ಈಗಲೂ ಹನುಮಂತ ನಮ್ಮ ನಡುವೆ ಇದ್ದಾನೆಯೇ?

ಭಗವಂತ ರಾಮನಿಂದಲೇ ಆಶೀರ್ವದಿಸಲ್ಪಟ್ಟ ಹನುಮಂತ ರಾಮನಾಮ ಈ ಜಗತ್ತಿನಲ್ಲಿರುವಷ್ಟೂ ದಿನ ಜೀವಂತವಿರುತ್ತಾನೆ ಎಂಬ ವರ ಪಡೆದಿದ್ದ. ಆ ಪ್ರಕಾರ ರಾಮನಾಮವನ್ನು ಇಂದಿಗೂ ಪ್ರತಿದಿನ ಲಕ್ಷಾಂತರ ಹಿಂದೂಗಳು ಜಪಿಸುತ್ತಾ ಇರುವ ಕಾರಣ ಈ ಮೂಲಕ ಹನುಮಂತ ಜೀವಂತವಿರುತ್ತಾನೆ.

ಹನುಮಂತನ ಹೆಜ್ಜೆಯ ಗುರುತುಗಳಿವೆಯೇ?

ಹನುಮಂತನ ಹೆಜ್ಜೆಯ ಗುರುತುಗಳಿವೆಯೇ?

ಭಾರತದ ಹಲವು ಸ್ಥಳಗಳಲ್ಲಿ ಹನುಮಂತನ ಪಾದದ ಗುರುತುಗಳು ಸ್ಪಷ್ಟವಾಗಿ ಕಾಣಿಸಿಕೊಂಡಿವೆ. ಇಲ್ಲೆಲ್ಲಾ ಹನುಮಂತ ನಡೆದಾಡಿದ್ದುದನ್ನು ರಾಮಾಯಣದಲ್ಲಿ ವಿವರಿಸಲಾಗಿದೆ.

ಯುಗಯುಗಗಳಲ್ಲಿ ಹನುಮಂತನ ಹೆಸರು

ಯುಗಯುಗಗಳಲ್ಲಿ ಹನುಮಂತನ ಹೆಸರು

ರಾಮಾಯಣ ನಡೆದದ್ದು ತ್ರೇತಾಯುಗದಲ್ಲಿ. ಮಹಾಭಾರತ ನಡೆದಿದ್ದು ದ್ವಾಪರ ಯುಗದಲ್ಲಿ. ಇಂದು ಕಲಿಯುಗ ನಡೆಯುತ್ತಿದೆ. ಈ ಮೂರೂ ಯುಗಗಳಲ್ಲಿ ಹನುಮಂತನ ಹೆಸರು ಉಲ್ಲೇಖಿಸಲ್ಪಟ್ಟಿದ್ದರೆ ಸಾವಿರಾರು ವರ್ಷಗಳ ಅಂತರವಿರುವ ಈ ಯುಗಗಳಲ್ಲಿ ಇದು ಹೇಗೆ ಸಾಧ್ಯ? ಮಹಾಭಾರತದಲ್ಲಿ ಕಪಿಧ್ವಜದ ಉಲ್ಲೇಖ ನೆನಪಿಸಿಕೊಳ್ಳಿ.

ಕಲಿಯುಗದಲ್ಲಿ ಹನುಮಂತನ ಹೆಸರೆಲ್ಲಿ?

ಕಲಿಯುಗದಲ್ಲಿ ಹನುಮಂತನ ಹೆಸರೆಲ್ಲಿ?

ಈ ಯುಗದಲ್ಲಿಯೂ ಹನುಮಂತನನ್ನು ನೋಡಿದ್ದೇವೆ ಎನ್ನುವವರಿದ್ದಾರೆ. ಹದಿಮೂರನೇ ಶತಮಾನದಲ್ಲಿ ಜೀವಂತರಾಗಿದ್ದ ಸಾಧು ಮಾಧವಾಚಾರ್ಯರು ತನಗೆ ಹನುಮಂತ ದರ್ಶನ ಭಾಗ್ಯ ಕರುಣಿಸಿದ್ದ ಎಂದು ತಿಳಿಸಿದ್ದಾರೆ. ಹದಿನೇಳನೇ ಶತಮಾನದ ಆರಂಭದಲ್ಲಿ ತುಳಸೀದಾಸರಿಗೆ ದರ್ಶನ ನೀಡಿದ ಹನುಮಂತ ಹಿಂದಿಯಲ್ಲಿ ರಾಮಾಯಣ ಬರೆಯುವಂತೆ ಪ್ರೇರೇಪಿಸಿದ್ದ. ಅಷ್ಟೇ ಅಲ್ಲ, ರಾಮದಾಸ ಸ್ವಾಮಿ, ರಾಘವೇಂದ್ರ ಸ್ವಾಮಿ, ಶ್ರೀ ಸತ್ಯ ಸಾಯಿ ಬಾಬಾ ಮೊದಲಾದವರು ತಾವು ಹನುಮಂತನ ದರ್ಶನ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.

ಹಾಗಾದರೆ ಹನುಮಂತನ ನಿವಾಸ ಸ್ಥಾನ ಎಲ್ಲಿದೆ?

ಹಾಗಾದರೆ ಹನುಮಂತನ ನಿವಾಸ ಸ್ಥಾನ ಎಲ್ಲಿದೆ?

ಈ ಬಗ್ಗೆ ಸ್ಪಷ್ಟವಾಗಿ ಲಭಿಸಿರುವ ಮಾಹಿತಿಗಳ ಪ್ರಕಾರ ಇಂದಿನ ತಮಿಳುನಾಡಿನ ರಾಮೇಶ್ವರಂ ನಗರದ ಬಳಿ ಇರುವ ಗಂಡ್ಮದನ ಬೆಟ್ಟದಲ್ಲಿ ಹನುಮಂತ ಇಂದಿಗೂ ವಾಸವಾಗಿದ್ದಾನೆ. Image courtesy

ಮಂತ್ರ ಪಠಿಸಿ ಚಿರಂಜೀವಿಯಾಗಿದ್ದಾನೆಯೇ?

ಮಂತ್ರ ಪಠಿಸಿ ಚಿರಂಜೀವಿಯಾಗಿದ್ದಾನೆಯೇ?

ಹನುಮಂತನಿಗೆ ಚಿರಂಜೀವಿಯಾಗಿರುವ ವರ ದೊರಕಿದ್ದು ಇಂದಿಗೂ ಜೀವಂತನಾಗಿದ್ದಾನೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ಈತನಿಗೆ ಮಂತ್ರವನ್ನು ವರವಾಗಿ ನೀಡಾಲಾಗಿದ್ದು ಈ ಮಂತ್ರವನ್ನು ಪಠಿಸುವ ಮೂಲಕ ಸಾವನ್ನು ಮುಂದೂಡಬಹುದು ಎನ್ನಲಾಗಿದೆ. ಇನ್ನೊಂದು ಮಾಹಿತಿಯ ಪ್ರಕಾರ ಹನುಮಂತ ಹಿಮಾಲಯದ ತಪ್ಪಲಿನಲ್ಲಿರುವ ಅರಣ್ಯದಲ್ಲಿ ವಾಸವಾಗಿದ್ದಾನಂತೆ..!

ಜೈ ಬಜರಂಗ ಬಲಿ

ಜೈ ಬಜರಂಗ ಬಲಿ

ತನ್ನ ಭಕ್ತರು ಕಷ್ಟದಲ್ಲಿದ್ದಾಗ ಸದಾ ನೆರವಿಗೆ ಬರುವ ಹನುಮಂತ ನೆರವು ನೀಡಿದರೂ ಯಾರ ಕಣ್ಣಿಗೂ ಕಾಣಿಸಿಕೊಳ್ಳುವುದಿಲ್ಲ.

ಹನುಮಂತನ ದರ್ಶನ ಪಡೆಯಲು ಗುಟ್ಟಿನ ಮಂತ್ರ

ಹನುಮಂತನ ದರ್ಶನ ಪಡೆಯಲು ಗುಟ್ಟಿನ ಮಂತ್ರ

ಹನುಮಂತನ ದರ್ಶನ ಪಡೆಯಬಯಸುವವರಿಗಾಗಿ ಒಂದು ಗುಟ್ಟಾದ ಮಂತ್ರವಿದೆ. ಇಂದು ಈ ಗುಟ್ಟಿನ ಮಂತ್ರವನ್ನು ನಿಮಗಾಗಿ ರಟ್ಟು ಮಾಡಲಾಗಿದೆ. ಈ ಮಂತ್ರ ಹೀಗಿದೆ: ಕಾಲ್ತಂತು ಕಾರೆಚರಂತಿ ಈನಾರ್ ಮಾರಿಷ್ಣು, ನಿರ್ಮುಕ್ತೇರ್ ಕಾಲೇತ್ವಂ ಅಮರಿಷ್ಣು

ಈ ಮಂತ್ರ ಪಠಿಸಲು ಇರುವ ಶರತ್ತುಗಳು

ಈ ಮಂತ್ರ ಪಠಿಸಲು ಇರುವ ಶರತ್ತುಗಳು

ಈ ಮಂತ್ರವನ್ನು ಸುಮ್ಮನೇ ಪಠಿಸಿದರೆ ಸಾಲದು, ಕೆಳಗಿನ ಎರಡು ಶರತ್ತುಗಳನ್ನು ಪೂರ್ಣಗೊಳಿಸಿದರೆ ಮಾತ್ರ ಸಾಧ್ಯ.

ಮೊದಲನೆಯದಾಗಿ: ಮಂತ್ರವನ್ನು ಪಠಿಸುವವನು/ಳು ಹನುಮಂತನನ್ನು ತನ್ನ ಆತ್ಮದಿಂದ ಹನುಮಂತನನ್ನು ಆರಾಧಿಸುವವನಾ/ಳಾಗಿರಬೇಕು.

ಈ ಮಂತ್ರ ಪಠಿಸಲು ಇರುವ ಶರತ್ತುಗಳು

ಈ ಮಂತ್ರ ಪಠಿಸಲು ಇರುವ ಶರತ್ತುಗಳು

ಎರಡನೆಯದಾಗಿ, ಈ ಮಂತ್ರ ಪಠಿಸುವ 980 ಮೀಟರ್ ನಷ್ಟು ತ್ರಿಜ್ಯದ ಸ್ಥಳದಲ್ಲಿ ಪಠಿಸುವವನ ಮತ್ತು ಮೊದಲನೆಯ ಶರತ್ತನ್ನು ಪಾಲಿಸದ ಬೇರೆ ಯಾವುದೇ ವ್ಯಕ್ತಿ ಇರಕೂಡದು.

English summary

Reasons which tells that Lord Hanumana is still alive?

One of the most popular Gods in Hinduism – Lord Hanuman – is worshipped by millions of devotees. Tales of his courage, bravery, strength, innocence, compassion and selflessness have been passed down to generations. And it is believed that Lord Hanuman is still alive.Let’s take a look at some of the indicators which prove Hanuman still exists:
X
Desktop Bottom Promotion