ದೀಪಾವಳಿ ಹಬ್ಬದ ಹಿಂದೆಯೂ, ರೋಚಕ ಕಹಾನಿ ಇದೆ...

ದೀಪಗಳ, ಬೆಳಕಿನ ಹಬ್ಬವಾದ ದೀಪಾವಳಿ ಅಥವಾ ದಿವಾಳಿಯು ಸ೦ತೋಷದ, ಸ೦ಭ್ರಮಾಚರಣೆಯ, ಸಡಗರದ ಸ೦ದರ್ಭವಾಗಿದೆ. ಮಾತ್ರವಲ್ಲ, ಈ ಹಬ್ಬವು ಎಲ್ಲೆ ಮೀರಿದ ಉತ್ಸಾಹ, ಉಲ್ಲಾಸ ಹಾಗೂ ವಿಶ್ವ ಭ್ರಾತೃತ್ವವನ್ನು ಸಾರುವ ಸ೦ದರ್ಭವೂ ಕೂಡ ಹೌದು.

By: Jaya subramanya
Subscribe to Boldsky

ದೀಪಗಳ ಹಬ್ಬ ದೀಪಾವಳಿಯನ್ನು ನಾವೆಲ್ಲರೂ ಬಹು ಸಂಭ್ರಮದಿಂದಲೇ ಆಚರಿಸುತ್ತೇವೆ. ಎಲ್ಲಾ ಹಬ್ಬಗಳು ಹೇಗೆ ಮಹತ್ವತೆಯನ್ನು ಪಡೆದುಕೊಂಡಿದೆಯೋ ಅಂತೆಯೇ ದೀಪಾವಳಿ ಕೂಡ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ.  ಅಜ್ಞಾನದ ಕತ್ತಲೆಯನ್ನು ನೀಗಿಸುವ ಜ್ಞಾನ ಜ್ಯೋತಿ ದೀಪಾವಳಿ

ದೀಪಾವಳಿಯನ್ನು ಏಕೆ ಆಚರಿಸಲಾಗುತ್ತದೆ ಇದರ ಮಹತ್ವವೇನು ಎಂದು ಯಾರನ್ನಾದರೂ ಕೇಳಿದರೆ ಅವರುಗಳೆಲ್ಲಾ ತಮಗೆ ತೋಚಿದ ಉತ್ತರವನ್ನೇ ನೀಡುತ್ತಾರೆ. ಆದರೆ ದೀಪಾವಳಿ ಹಬ್ಬ ಆಚರಣೆಯು ಮುಖ್ಯವಾದ ಅಂಶವನ್ನು ಒಳಗೊಂಡಿದೆ.

ಹಿಂದೂಗಳು ತಮ್ಮ ಧಾರ್ಮಿಕ ನಂಬಿಕೆ ಮತ್ತು ತತ್ವಗಳಿಗೆ ಅನುಸಾರವಾಗಿ ದೀಪಾವಳಿಯನ್ನು ಆಚರಿಸುತ್ತಾರೆ. ಈ ದಿನದಂದು ಪೂಜೆ ಪುನಸ್ಕಾರಗಳನ್ನು ಜನರು ಮಾಡುತ್ತಾರೆ ಮತ್ತು ನಿಯಮಗಳನ್ನು ಪಾಲಿಸುತ್ತಾರೆ.   ದೀಪಾವಳಿ ವಿಶೇಷ: ನರಕ ಚತುರ್ದಶಿ ಹಬ್ಬದ ಹಿನ್ನೆಲೆ

ಇಂದಿನ ಲೇಖನದಲ್ಲಿ ಜನರು ತಮ್ಮ ನಂಬಿಕೆಗಳಿಗೆ ಅನುಸಾರವಾಗಿ ದೀಪಾವಳಿ ಹಬ್ಬದ ಆಚರಣೆಯನ್ನು ಹೇಗೆ ಮಾಡುತ್ತಾರೆ ಮತ್ತು ಅವರು ಯಾವ ಅಂಶಗಳನ್ನು ನಂಬಿಕೊಂಡು ಬಂದಿದ್ದಾರೆ ಎಂಬುದನ್ನು ಕಂಡುಕೊಳ್ಳೋಣ....  

ಅಯೋಧ್ಯೆಗೆ ರಾಮನು ಮರಳಿ ಬಂದಿದ್ದು

ಭಾರತದ ಉತ್ತರಭಾಗಗಳಲ್ಲಿ, ರಾಮನು ವನವಾಸವನ್ನು ಮುಗಿಸಿ ಅಯೋಧ್ಯೆಗೆ ಮರಳಿ ಬಂದಿರುವ ಸೂಚನೆಯಾಗಿ ದೀಪಾವಳಿಯನ್ನು ಆಚರಿಸುತ್ತಾರೆ. ದೀಪಗಳನ್ನು ಹಚ್ಚಿ ರಾಮನನ್ನು ಅಯೋಧ್ಯಾವಾಸಿಗಳು ಬರಮಾಡಿಕೊಂಡರು ಎಂಬುದಾಗಿ ಕಥೆ ಸಾರುತ್ತದೆ. ಭಗವಾನ್ ಶ್ರೀರಾಮನ ಸಾವು ಹೇಗಾಯಿತು?

ಲಕ್ಷ್ಮೀ ಪೂಜೆ

ದೀಪಾವಳಿಯಂದು ಅತಿಮುಖ್ಯವಾಗಿರುವಂತಹದ್ದು ಗಣಪತಿ ಮತ್ತು ಲಕ್ಷ್ಮೀ ಪೂಜೆಯಾಗಿದೆ. ವರ್ಷದ ಗಾಢಾಂಧಕಾರದ ದಿನ ಪೂಜೆಯನ್ನು ನಡೆಸಲಾಗುತ್ತದೆ. ಅಶ್ವಿನ್ ಮಾಸದ ಮೂರ್ಣ ಚಂದ್ರ ದಿನ ಇದಾಗಿದೆ. ಮೇಣದ ಬತ್ತಿಗಳನ್ನು ಹಚ್ಚಿ ಹಣತೆಯನ್ನು ಹಚ್ಚಿ,ರಂಗೋಲಿಯನ್ನು ಮನೆಮನೆಗಳಲ್ಲಿ ಬಿಡಿಸಿ ಶೃಂಗರಿಸುತ್ತಾರೆ. ಲಕ್ಷ್ಮೀ ಪೂಜೆಯನ್ನು ರಾತ್ರಿ ನಡೆಸುತ್ತಾರೆ. ದೀಪಾವಳಿ ವಿಶೇಷ: ಲಕ್ಷ್ಮೀ ದೇವಿಯ ಪೂಜಾ, ವಿಧಿವಿಧಾನ

ಹೊಸ ವರ್ಷ

ಭಾರತೀಯ ವ್ಯವಹಾರಸ್ಥರಿಗೆ ದೀಪಾವಳಿ ಎಂಬುದು ಹೊಸ ವರ್ಷದ ಆಗಮನವಾಗಿದೆ. ಹಳೆಯ ಪುಸ್ತಕಗಳಿಗೆ ವಿದಾಯ ಹೇಳಿ ಹೊಸ ಪುಸ್ತಕದಿಂದ ತಮ್ಮ ಲೆಕ್ಕಾಚಾರವನ್ನು ಮಾಡುತ್ತಾರೆ. ಹಿಂದೂ ಹೊಸ ವರ್ಷದ ಆಗಮನ ಎಂಬುದರ ದ್ಯೋತಕವಾಗಿ ಕೆಲವರು ಮನೆಗೆ ಪೇಂಟಿಂಗ್ ಅನ್ನು ಮಾಡಿಸುತ್ತಾರೆ.

ಕಾಳಿ ಪೂಜೆ

ಒಡಿಶಾ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ದೀಪಾವಳಿಯ ರಾತ್ರಿಯಂದು ಮಹಾಕಾಳಿ ಅಥವಾ ನಿಶಿ ಪೂಜೆಯನ್ನು ನಡೆಸಲಾಗುತ್ತದೆ. ಪಾರ್ವತಿ ದೇವಿಯು ಕಾಳಿ ಅವತಾರವನ್ನು ತಾಳಿ ಅಸುರರ ತಲೆಯನ್ನು ಕತ್ತರಿಸಿ ಚಂಡಾಡಿದ ದಿನ ಎಂಬುದಾಗಿ ಕೂಡ ಕಾಣಲಾಗುತ್ತದೆ. ತಡರಾತ್ರಿಯಲ್ಲಿ ಕಾಳಿ ಪೂಜೆಯನ್ನು ಆರಂಭಿಸುತ್ತಾರೆ ಮತ್ತು ಮುಂಜಾನೆ ಆದಷ್ಟು ಬೇಗನೇ ಪೂಜೆಯನ್ನು ಮುಗಿಸುತ್ತಾರೆ.

ಗುರು ನಾನಕ್

ಹಿಂದೂಗಳು ಮಾತ್ರವಲ್ಲದೆ ಸಿಖ್ಖರು ಕೂಡ ದೀಪಾವಳಿಯನ್ನು ಆಚರಿಸುತ್ತಾರೆ. ಏಕೆಂದರೆ ಗುರು ಹರ್ ಗೋಬಿಂದ್ ಜಿ, ಸಿಖ್ಖರ ಆರನೆಯ ಗುರು ಖಾರಾಗೃಹದಿಂದ 62 ಹಿಂದೂ ರಾಜರುಗಳನ್ನು ಬಿಡಿಸುತ್ತಾರೆ. ಅವರುಗಳನ್ನು ಬಿಡುಗಡೆ ಮಾಡಿ ಅವರು ಗೋಲ್ಡನ್ ಟೆಂಪಲ್‎ಗೆ ಭೇಟಿ ನೀಡುತ್ತಾರೆ. ಅಮೃತಸರದ ಎಲ್ಲಾ ಜನರು ಅವರನ್ನು ಮೇಣದ ಬತ್ತಿ ಮತ್ತು ದೀಪಗಳನ್ನು ಹಚ್ಚಿ ಸ್ವಾಗತಿಸುತ್ತಾರೆ.   ಗುರುನಾನಕ್ ಜಯಂತಿ ಮಹತ್ವ, ಐತಿಹಾಸಿಕ ಹಿನ್ನೆಲೆ

ಭರವಸೆಯ ಬೆಳಕು

ವರ್ಷದ ಗಾಡಾಂಧಕಾರದ ಸಂದರ್ಭದಲ್ಲೇ ದೀಪಗಳ ಹಬ್ಬ ದೀಪಾವಳಿಯ ಆಗಮನವಾಗುತ್ತದೆ ಎಂಬುದಾಗಿ ನಂಬಲಾಗಿದೆ. ಕತ್ತಲೆಯು ನಮ್ಮಲ್ಲಿ ಅಧೈರ್ಯವನ್ನು ತುಂಬುತ್ತದೆ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಆದ್ದರಿಂದ ಜನರು ಭರವಸೆಯ ಬೆಳಕನ್ನು ಹಣತೆಗಳನ್ನು ಹಚ್ಚಿ ಸ್ವಾಗತಿಸುತ್ತಾರೆ. ಕೆಟ್ಟ ಶಕ್ತಿಗಳನ್ನು ದೂರಮಾಡಲು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.

ಭರವಸೆಯ ಬೆಳಕು

ದೀಪಾವಳಿ ಹಬ್ಬದ ಕುರಿತಾದ ಮಹತ್ವದ ಅಂಶಗಳು ಇದಾಗಿದ್ದು ನೀವು ಬೇರೆ ಯಾವುದಾದರೂ ಕಾರಣಕ್ಕೆ ದೀಪಾವಳಿಯನ್ನು ಆಚರಿಸುತ್ತೀರಾ ಎಂಬುದನ್ನು ನಮಗೆ ಬರೆದು ಕಳುಹಿಸಿ.

 

Story first published: Thursday, October 20, 2016, 23:14 [IST]
English summary

Reasons to Celebrate Diwali Festival of Lights

If you ask anyone, why we celebrate Diwali, you will get vague answers. They might tell you that we light lamps or diyas on Diwali or burst fire crackers on Diwali. But there are many reasons for which Diwali is one of the few pan-Indian festivals. Almost all of India celebrates Diwali but their myths and rituals for this festival are different. Here are few reason of why we celebrate Diwali
Please Wait while comments are loading...
Subscribe Newsletter