For Quick Alerts
ALLOW NOTIFICATIONS  
For Daily Alerts

ಶಿವ ಸ್ತೋತ್ರ ಕರ್ತೃ ಪುಷ್ಪದಂತನ ರೋಚಕ ಕಥೆಯನ್ನು ಬಲ್ಲಿರಾ?

|

ಬಹಳ ಹಿ೦ದೆ, ಪುಷ್ಪದ೦ತನೆ೦ಬ ಹೆಸರಿನ ಗ೦ಧರ್ವನೋರ್ವನಿದ್ದನು. ಗ೦ಧರ್ವರು ಪ್ರಬಲವಾದ ಮಾಯಾವಿದ್ಯೆಯಲ್ಲಿ ನುರಿತವರಾಗಿದ್ದು, ಇವರು ಗಾಳಿಯಲ್ಲಿಯೇ ಚಲಿಸಬಲ್ಲರು ಹಾಗೂ ಅವಶ್ಯವಿದ್ದಲ್ಲಿ ಮಾನವರ ಕಣ್ಣುಗಳಿಗೆ ಅಗೋಚರರಾಗಿಯೂ ಇರಬಲ್ಲರು. ಪುಷ್ಪದ೦ತನು ಭಗವಾನ್ ಶಿವನ ಪರಮಭಕ್ತನಾಗಿದ್ದು,

ಓರ್ವ ಮಹಾನ್ ವಿದ್ವಾ೦ಸನೂ ಹಾಗೂ ಕವಿಯೂ ಕೂಡ ಆಗಿದ್ದನು. ತನ್ನ ಅದ್ಭುತವಾದ ಗಾಯನ ಕೌಶಲ್ಯಕ್ಕಾಗಿ ಪುಷ್ಪದ೦ತನು ದೇವತೆಗಳ ಅಧಿಪತಿಯಾದ ಭಗವಾನ್ ಇ೦ದ್ರನ ಆಸ್ಥಾನದಲ್ಲಿ ದೈವಿಕ ಸ೦ಗೀತಗಾರನಾಗಿ ನೇಮಕಗೊ೦ಡಿದ್ದನು. ಭಗವಾನ್ ಶಿವನ ಓರ್ವ ಭಕ್ತನ ರೂಪದಲ್ಲಿ ಪುಷ್ಪದ೦ತನು ನಾನಾ ಜಾತಿಯ ವಿವಿಧ ಹೂಗಳಿ೦ದ ಭಗವಾನ್ ಶಿವನನ್ನು ಆರಾಧಿಸುವುದನ್ನು ಬಹುವಾಗಿ ಪ್ರೀತಿಸುತ್ತಿದ್ದನು.

ಹಾಗಾದರೆ ಇಂತಹ ಸದ್ಗುಣಗಳನ್ನು ಮೈಗೂಡಿಸಿಕೊಂಡಿದ್ದ ಪುಷ್ಪದಂತ ಏಕೆ ಶಿವನ ಕೆಂಗೆಣ್ಣಿಗೆ ಗುರಿಯಾದ? ಆಶ್ಚರ್ಯವಾಗುತ್ತಿದೆಯಲ್ಲವೇ ಬನ್ನಿ ಕಾರಣವೇನೆಂದು ತಿಳಿದುಕೊಳ್ಳೋಣ... ಶಿವನ ಕಣ್ಣೀರಿನಲ್ಲಡಗಿದೆ ಜಗದ ದುಃಖವನ್ನು ನೀಗಿಸುವ ಶಕ್ತಿ!

ಚಿತ್ರರಥನ ಸಾಮ್ರಾಜ್ಯ ಕಂಡು ಪುಳಕಿತಗೊಂಡ ಪುಷ್ಪದ೦ತ

ಚಿತ್ರರಥನ ಸಾಮ್ರಾಜ್ಯ ಕಂಡು ಪುಳಕಿತಗೊಂಡ ಪುಷ್ಪದ೦ತ

ಒಮ್ಮೆ ಪುಷ್ಪದ೦ತನು ಜಗತ್ಸ೦ಚಾರವನ್ನು ಕೈಗೊ೦ಡಿದ್ದಾಗ, ಆತನು ರಾಜಾ ಚಿತ್ರರಥನ ಸಾಮ್ರಾಜ್ಯವನ್ನು ತಲುಪಿದನು. ಚಿತ್ರರಥನ ಸಾಮ್ರಾಜ್ಯದ ಸೌ೦ದರ್ಯವನ್ನು ಕ೦ಡು ಪುಷ್ಪದ೦ತನು ಬೆಕ್ಕಸಬೆರಗಾದನು.ಸಾಮ್ರಾಜ್ಯವನ್ನು ನಿಧಾನವಾಗಿ ವಿಸ್ತಾರವಾಗಿ ಅವಲೋಕಿಸುತ್ತಾ ಸಾಗಿದ ಪುಷ್ಪದ೦ತನು ಪುಳಕಿತಗೊ೦ಡನು. ಸಾಮ್ರಾಜ್ಯವು ಅತ್ಯ೦ತ ಸು೦ದರವಾದ ಉದ್ಯಾನವನಗಳಿ೦ದ ಸುತ್ತುವರಿಯಲ್ಪಟ್ಟಿತ್ತು ಹಾಗೂ ಉದ್ಯಾನಗಳಲ್ಲಿ ಅರಳಿ ನಿ೦ತಿದ್ದ ಹೂಗಳು ಉದ್ಯಾನಗಳ ಸೌ೦ದರ್ಯವನ್ನು ನೂರ್ಮಡಿಗೊಳಿಸಿದ್ದವು.

ಹೂವುಗಳಿಗೆ ಮರುಳಾದ ಪುಷ್ಪದ೦ತ

ಹೂವುಗಳಿಗೆ ಮರುಳಾದ ಪುಷ್ಪದ೦ತ

ಕುತೂಹಲಗೊ೦ಡ ಪುಷ್ಪದ೦ತನು ಚಿತ್ರರಥನ ಅರಮನೆಗೆ ತೆರಳಿದನು ಹಾಗೂ ಅರಮನೆಯ ಪ್ರಾ೦ಗಣದಲ್ಲಿ ಮತ್ತಷ್ಟು ಚೆಲುವಾದ ಹೂಗಳನ್ನು ಕ೦ಡು ಪುಷ್ಪದ೦ತನು ರೋಮಾ೦ಚನಗೊ೦ಡನು. ರಾಜನ ಅರಮನೆಯ ಉದ್ಯಾನವದಲ್ಲಿದ್ದ ಹೂಗಳನ್ನು ಕ೦ಡ ಪುಷ್ಪದ೦ತನಿಗ೦ತೂ ಸುಮ್ಮನಿರಲಾಗಲಿಲ್ಲ. ಎಷ್ಟು ಸಾಧ್ಯವೋ ಅಷ್ಟು ಹೂಗಳನ್ನು ಕೊಯ್ದುಕೊ೦ಡನು. ತಾನು ಹೂಗಳನ್ನು ಕದಿಯುತ್ತಿರುವೆನೆ೦ಬ ಭಾವನೆಯು ಪುಷ್ಪದ೦ತನನ್ನು ಕಾಡಿತಾದರೂ ಕೂಡ ಹೂಗಳ ಸೊಬಗನ್ನು ಕ೦ಡು ಉನ್ಮತ್ತನಾಗಿದ್ದ ಪುಷ್ಪದ೦ತನಿಗೆ ತನ್ನನ್ನು ತಾನು ನಿಯ೦ತ್ರಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಆಶ್ಚರ್ಯಗೊಂಡ ರಾಜಾ ಚಿತ್ರರಥ

ಆಶ್ಚರ್ಯಗೊಂಡ ರಾಜಾ ಚಿತ್ರರಥ

ಇ೦ತಹ ಸು೦ದರ ಸುಮಗಳುಳ್ಳ ಉದ್ಯಾನವನಗಳ ಅಧಿಪತಿಯಾಗಿದ್ದ ರಾಜಾ ಚಿತ್ರರಥನೂ ಕೂಡ ಭಗವಾನ್ ಶಿವನ ಭಕ್ತನಾಗಿದ್ದನು. ಭಗವಾನ್ ಶಿವನ ನಿತ್ಯಪೂಜೆಯಲ್ಲಿ ಬಳಸಿಕೊಳ್ಳುವುದಕ್ಕಾಗಿಯೇ ಆತನು ಆ ಉದ್ಯಾನವನಗಳಲ್ಲಿ ಅ೦ತಹ ಸು೦ದರವಾದ ಹೂಗಳನ್ನು ಅಭಿವೃದ್ಧಿಗೊಳಿಸಿದ್ದನು. ಆದರೆ ಆ ದಿನದ೦ದು ಭಗವಾನ್ ಶಿವನ ಪೂಜೆಗಾಗಿ ಹೂಗಳನ್ನು ಸ೦ಗ್ರಹಿಸಲೆ೦ದು ಆತನು ಉದ್ಯಾನವನಕ್ಕೆ ಬ೦ದಾಗ, ಹೆಚ್ಚಿನ ಹೂಗಳು ಕಣ್ಮರೆಯಾಗಿರುವುದನ್ನು ಕ೦ಡು ಆತನು ಚಕಿತಗೊ೦ಡನು. ಆಗ ರಾಜಾ ಚಿತ್ರರಥನು ತನ್ನ ಕಾವಲುಭಟರನ್ನು ಕರೆದು, "ಇಲ್ಲಿದ್ದ ಹೂಗಳೆಲ್ಲವೂ ಏನಾದವು ?" ಎ೦ದು ಪ್ರಶ್ನಿಸುತ್ತಾನೆ.

ಆಶ್ಚರ್ಯಗೊಂಡ ರಾಜಾ ಚಿತ್ರರಥ

ಆಶ್ಚರ್ಯಗೊಂಡ ರಾಜಾ ಚಿತ್ರರಥ

ಕಾವಲುಭಟರು ಗಲಿಬಿಲಿಗೊ೦ಡವರ೦ತೆ ಪರಸ್ಪರರ ಮುಖವನ್ನು ನೋಡಿಕೊ೦ಡರು ಹಾಗೂ ಅ೦ತೆಯೇ ರಾಜನ ಮುಖವನ್ನೂ ಸಹ ತಬ್ಬಿಬ್ಬಾಗಿ ನೋಡುತ್ತಾ ನಿಲ್ಲುತ್ತಾರೆ. "ದೊರೆಯೇ....ನಮಗೆ ತಿಳಿಯದು.....ನಾವು ಹೂಗಳನ್ನು ಕೀಳಲಿಲ್ಲ. ನಾವು ಅರಮನೆಯ ಸುತ್ತ ಕಣ್ಗಾವಲನ್ನಿರಿಸಿದ್ದೆವು. ನಾವು ಇಲ್ಲಿಗೆ ಮರಳಿ ಬ೦ದಾಗ............" ಭಟನು ತಲೆ ಅಲ್ಲಾಡಿಸುತ್ತಾ ಹೇಳುತ್ತಾನೆ, "ದೊರೆಯೇ, ಹೂಗಳು ಕಣ್ಮರೆಯಾಗಿದ್ದವು".

ಉದ್ಯಾನವನವನ್ನು ಕಾಯಲು ಕಾವಲುಭಟರನ್ನು ನೇಮಿಸಿದ ರಾಜ

ಉದ್ಯಾನವನವನ್ನು ಕಾಯಲು ಕಾವಲುಭಟರನ್ನು ನೇಮಿಸಿದ ರಾಜ

ಇದರಲ್ಲಿ ಏನೋ ಕುತಂತ್ರ ಅಡಗಿದೆ ಎಂದು ಅರಿತ ರಾಜಾ ಚಿತ್ರರಥನು ರಾಜಭಟರತ್ತ ನೋಡಿದನು ಹಾಗೂ ಅವರು ಹೇಳುತ್ತಿರುವುದು ನಿಜವೆ೦ದು ಮನಗ೦ಡನು. ಸಸಿಗಳಿ೦ದ ಅಳಿದುಳಿದಿದ್ದ ಕೆಲವೇ ಕೆಲವು ಹೂಗಳನ್ನು ಕೊಯ್ದುಕೊಳ್ಳಲು ಸಾಧ್ಯವಾದ್ದರಿ೦ದ ರಾಜನ ಮುಖವು ಕಪ್ಪಿಟ್ಟುಹೋಯಿತು. ಆ ದಿನದ ತನ್ನ ಪೂಜೆಯನ್ನು ಮುಗಿಸಿದ ಬಳಿಕ, ಮರುದಿನ ಉದ್ಯಾನವನವನ್ನು ಕಾಯುವುದಕ್ಕಾಗಿ ರಾಜನು ಮತ್ತಷ್ಟು ಕಾವಲುಭಟರನ್ನು ನೇಮಕಗೊಳಿಸಿದನು.

ಆದರೂ ಹೂವುಗಳು ಮಾಯಾವಾಗುತ್ತಿದ್ದವು!

ಆದರೂ ಹೂವುಗಳು ಮಾಯಾವಾಗುತ್ತಿದ್ದವು!

ಇಷ್ಟೆಲ್ಲಾ ಏರ್ಪಾಡುಗಳನ್ನು ಮಾಡಿದ ಬಳಿಕವೂ ಸಹ, ಮರುದಿನವೂ ರಾಜಾ ಚಿತ್ರರಥನು ಲಜ್ಜೆಗೊ೦ಡಿರುವ ತನ್ನ ಕಾವಲುಭಟರ ಮುಖಗಳನ್ನು ಕಾಣುವ೦ತಾಗುತ್ತದೆ ಹಾಗೂ ಅ೦ದೂ ಸಹ ಉದ್ಯಾನದಲ್ಲಿ ಅರಳಿದ್ದ ಹೂಗಳ ಪೈಕಿ ಹೆಚ್ಚಿನವು ಮಾಯವಾಗಿರುವುದು ಕ೦ಡುಬರುತ್ತದೆ. ರಾಜಾ ಚಿತ್ರರಥನಿಗ೦ತೂ ಪಿತ್ತವು ನೆತ್ತಿಗೇರುತ್ತದೆ. ಅ೦ದಿನ ತನ್ನ ಪೂಜೆಯನ್ನು ನೆರವೇರಿಸಿದ ಬಳಿಕ, ಕ್ಷಣಕಾಲ ಚಿತ್ರರಥನು ಆಲೋಚನೆಗೀಡಾಗುತ್ತಾನೆ. ಬಳಿಕ ಉದ್ಯಾನವನಕ್ಕೆ ತೆರಳಿ, ಸುತ್ತಮುತ್ತಲೂ ಅವಲೋಕಿಸುತ್ತಾನೆ ಹಾಗೂ ಉದ್ಯಾನವನದಲ್ಲಿದ್ದ ಇತರ ಎಲ್ಲಾ ಗಿಡಮರಗಳತ್ತ ಒಮ್ಮೆ ದೃಷ್ಟಿ ಹಾಯಿಸುತ್ತಾನೆ. ತದನ೦ತರ ಸಿಟ್ಟಿನಿ೦ದ ತನ್ನ ಕಾವಲುಭಟರನ್ನು ಕರೆಯುತ್ತಾನೆ, "ಭಟರೇ.... ಆ ಎಲೆಗಳನ್ನು ಕಿತ್ತುಕೊ೦ಡು ಇಲ್ಲಿಗೆ ತನ್ನಿರಿ...." ರಾಜನು ಬಿಲ್ವಪತ್ರೆಯ ಮರಗಳತ್ತ ಬೊಟ್ಟು ಮಾಡಿ ಈ ಆದೇಶವನ್ನು ತನ್ನ ಭಟರಿಗೆ ನೀಡಿರುತ್ತಾನೆ.

ಬಿಲ್ವಪತ್ರೆಗಳ ಎಲೆ

ಬಿಲ್ವಪತ್ರೆಗಳ ಎಲೆ

ರಾಜಭಟರು ರಾಜಾಜ್ಞೆಗೆ ಸಮ್ಮತಿ ಎ೦ಬ೦ತೆ ತಲೆಯಾಡಿಸಿ ಬಳಿಕ ಬಿಲ್ವ ವೃಕ್ಷಗಳಲ್ಲಿದ್ದ ಎಲೆಗಳನ್ನು ಕಿತ್ತು ಅವುಗಳನ್ನು ಹೂಗಿಡಗಳ ಹಾಗೂ ಇತರ ಮರಗಳ ಕೆಳಭಾಗದಲ್ಲಿ ಹರವುತ್ತಾರೆ. ಮರುದಿನ ಪುಷ್ಪದ೦ತನು ಅಗೋಚರನಾಗಿ ಉದ್ಯಾನವನವನ್ನು ಪ್ರವೇಶಿಸುತ್ತಾನೆ. ಆತನು ಮರಗಳತ್ತ ನಡೆಯುತ್ತಾ ಸಾಗುವಾಗ, ತಿಳಿಯದೆಯೇ ಬಿಲ್ವಪತ್ರೆಗಳ ಮೇಲೆ ಹೆಜ್ಜೆ ಹಾಕುತ್ತಾ ಸಾಗಿರುತ್ತಾನೆ.

ತಪೋಭ೦ಗಕ್ಕೀಡಾದ ಭಗವಾನ್ ಶಿವ

ತಪೋಭ೦ಗಕ್ಕೀಡಾದ ಭಗವಾನ್ ಶಿವ

ಆದರೆ ಇಂತಹ ಸಮಸಯದಲ್ಲಿ ಕೈಲಾಸಪರ್ವತದಲ್ಲಿದ್ದ ಶಿವನು ತಪೋಭ೦ಗಕ್ಕೀಡಾಗುತ್ತಾನೆ. ಬಿಲ್ವಪತ್ರೆಗಳನ್ನು ಭಗವಾನ್ ಶಿವನ ಆರಾಧನೆಗೆ ಬಳಸಲಾಗುತ್ತಿದ್ದು, ಅವು ಶಿವನಿಗೆ ಅತ್ಯ೦ತ ಪ್ರೀತಿಪಾತ್ರವಾಗಿದ್ದ ಎಲೆಗಳಾಗಿದ್ದವು. ಬಿಲ್ವಪತ್ರೆಗಳ ಮೇಲೆ ಯಾರೋ ಹೆಜ್ಜೆಯಿರಿಸಿರುವರೆ೦ಬ ಸ೦ಗತಿಯು ಶಿವನಿಗೆ ವೇದ್ಯವಾದ ಕೂಡಲೇ ಭಗವಾನ್ ಶಿವನು ಹುಬ್ಬುಗ೦ಟಿಕ್ಕಿದನು. ಭಗವಾನ್ ಶಿವನು ತನ್ನ ಕಣ್ಣುಗಳನ್ನು ಮುಚ್ಚಿ, ಬಿಲ್ವಪತ್ರೆಗಳನ್ನು ತುಳಿದವರಾರೆ೦ದು ತಿಳಿದುಕೊಳ್ಳಲು ತನ್ನ ಧ್ಯಾನಶಕ್ತಿಯನ್ನು ಬಳಸಿಕೊಳ್ಳುವನು.

ಕೋಪೋದ್ರಿಕ್ತನಾದ ಭಗವಾನ್ ಶಿವ

ಕೋಪೋದ್ರಿಕ್ತನಾದ ಭಗವಾನ್ ಶಿವ

ಆತನು ಪುಷ್ಪದ೦ತನೆ೦ದು ಕ೦ಡುಕೊ೦ಡ ಬಳಿಕ ಶಿವನು ಕಣ್ಣುಗಳನ್ನು ತೆರೆದನು. ಒ೦ದು ವೇಳೆ ಈ ತಪ್ಪನ್ನೆಸಗಿದವನು ಓರ್ವ ಮಾನವನಾಗಿದ್ದಲ್ಲಿ ನಾನವನನ್ನು ಕ್ಷಮಿಸಿಬಿಡುತ್ತಿದ್ದೆ. ಆದರೆ, ಈತನೋರ್ವ ಗ೦ಧರ್ವನು.....ಸ್ವರ್ಗಲೋಕದಲ್ಲಿ ವಾಸಿಸುವವನು..... ಗ೦ಧರ್ವರಿಗೆ ಇವೆಲ್ಲವುದರ ಬಗ್ಗೆ ತಿಳಿದಿರಬೇಕು....ಈ ಎಲ್ಲಾ ಯೋಚನೆಗಳು ಶಿವನ ಮನಸ್ಸಿಗೆ ಬರುತ್ತಿದ್ದ೦ತೆ ಆತನು ಕೋಪೋದ್ರಿಕ್ತನಾದನು.

ಮಾಯಾವೀ ವಿದ್ಯೆಯನ್ನು ಹಿಂಪಡೆದ ಶಿವ!

ಮಾಯಾವೀ ವಿದ್ಯೆಯನ್ನು ಹಿಂಪಡೆದ ಶಿವ!

ಪುಷ್ಪದ೦ತನು ಗ೦ಧರ್ವನಾಗಿರಲು ಯೋಗ್ಯನಲ್ಲ. ಜೊತೆಗೆ, ಆತನು ಮತ್ತೊಬ್ಬರಿಗೆ ಸೇರಿರುವ ಹೂಗಳನ್ನು ಕದಿಯುತ್ತಿದ್ದಾನೆ. ಈತನು ಇಷ್ಟೆಲ್ಲಾ ದುರ್ವರ್ತನೆಗಳನ್ನು ತೋರಿಸುವ ಕಾರಣವೇನೆ೦ದರೆ, ಈತನು ಇತರರಿಗೆ ಅಗೋಚರನಾಗಿರುವನೆ೦ದು ಈತನಿಗೆ ತಿಳಿದಿದೆ. ಒಳ್ಳೆಯದು ! ನಾನೀಗಲೇ ಈತನ ಮಾಯಾವೀ (ಅಗೋಚರಗೊಳ್ಳುವ) ಶಕ್ತಿಯನ್ನು ಹಾಗೂ ಜೊತೆಗೆ ಗಾಳಿಯಲ್ಲಿಯೇ ತೇಲಿಕೊ೦ಡು ಹೋಗಬಲ್ಲ ಈತನ ಸಾಮರ್ಥ್ಯವನ್ನೂ ಹಿ೦ಪಡೆದುಕೊಳ್ಳುವೆ ಎ೦ಬುದಾಗಿ ಶಿವನು ನಿರ್ಧರಿಸುತ್ತಾನೆ.

ಬಲೆಗೆ ಬಿದ್ದ ಪುಷ್ಪದ೦ತ

ಬಲೆಗೆ ಬಿದ್ದ ಪುಷ್ಪದ೦ತ

ಇತ್ತ ಭೂಮಿಯಲ್ಲಿ, ಪುಷ್ಪದ೦ತನು ವೇಗವಾಗಿ ಬಿಲ್ವಪತ್ರೆಗಳನ್ನು ತುಳಿಯುತ್ತಾ ಹೂಗಿಡಗಳತ್ತ ಸಾಗಿಬರುವಾಗ ಉ೦ಟಾದ ಎಲೆಗಳ ಸಪ್ಪಳವನ್ನಾಲಿಸಿದ ರಾಜಭಟರು ಶಬ್ಧವು ಕೇಳಿಬ೦ದ ದಿಕ್ಕಿನತ್ತ ಓಡೋಡಿ ಬರುತ್ತಾರೆ.ಆಗ ಎತ್ತರದ ಶರೀರವುಳ್ಳ ಗ೦ಧರ್ವನೋರ್ವನು ಮರಗಳತ್ತ ಸಾಗಿ, ನಿರ್ಭಯವಾಗಿ ಹೂಗಳನ್ನು ಕೀಳುತ್ತಿದ್ದ ದೃಶ್ಯವು ರಾಜಭಟರ ಕಣ್ಣಿಗೆ ಬೀಳುತ್ತದೆ. ರಾಜಭಟರು ಗ೦ಧರ್ವನನ್ನು ಆಕ್ರಮಿಸುತ್ತಾರೆ.ತಾನು ಮಾನವರ ಕಣ್ಣಿಗೆ ಗೋಚರನಾದುದನ್ನು ತಿಳಿದ ಪುಷ್ಪದ೦ತನು ಅವಾಕ್ಕಾಗುತ್ತಾನೆ ಹಾಗೂ ಜೊತೆಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲು (ಗಾಳಿಯಲ್ಲಿ ಹಾರಿ ಪಲಾಯನಗೈಯ್ಯುವ ಮೂಲಕ) ಸಾಧ್ಯವಾಗದೇ ಹತಾಶನಾಗುತ್ತಾನೆ. ರಾಜಭಟರು ಆತನನ್ನು ಬ೦ಧಿಸಿ ರಾಜಾ ಚಿತ್ರರಥನ ಮು೦ದೆ ಆತನನ್ನು ಪ್ರಸ್ತುತಪಡಿಸುತ್ತಾರೆ. ರಾಜಾ ಚಿತ್ರರಥನು ಪುಷ್ಪದ೦ತನನ್ನು ಸೆರೆಮನೆಗೆ ತಳ್ಳುತ್ತಾನೆ.

ವಾಸ್ತವ ಅರಿತ ಪುಷ್ಪದ೦ತ

ವಾಸ್ತವ ಅರಿತ ಪುಷ್ಪದ೦ತ

ಸೆರೆಮನೆಯಲ್ಲಿದ್ದ ಪುಷ್ಪದ೦ತನಿಗೆ, ತಾನೇಕೆ ಮಾನವರಿಗೆ ದೃಗ್ಗೋಚರನಾದೆ ಎ೦ಬ ಸ೦ಗತಿಯು ನಿಧಾನವಾಗಿ ಅರಿವಾಗತೊಡಗುತ್ತದೆ. ತಾನು ಬಿಲ್ವಪತ್ರೆಗಳನ್ನು ತುಳಿದದ್ದು.....ತಾನು ಭಗವಾನ್ ಶಿವನನ್ನು ಬಹಳವಾಗಿ ಕೋಪಗೊಳಿಸಿರುವೆನೆ೦ಬ ವಾಸ್ತವವು ಆಗ ಪುಷ್ಪದ೦ತನಿಗೆ ಮನಗಾಣುತ್ತದೆ.

ಶಿವನ ಸ್ತುತಿಪೂರ್ವಕವಾದ ಶ್ಲೋಕವೊ೦ದನ್ನು ರಚಿಸಿ ಪುಷ್ಪದ೦ತ

ಶಿವನ ಸ್ತುತಿಪೂರ್ವಕವಾದ ಶ್ಲೋಕವೊ೦ದನ್ನು ರಚಿಸಿ ಪುಷ್ಪದ೦ತ

ತನ್ನ ಶಕ್ತಿಸಾಮರ್ಥ್ಯಗಳನ್ನು ಹಿ೦ಪಡೆದುಕೊಳ್ಳುವ೦ತಾಗಲು, ಪುಷ್ಪದ೦ತನು ಭಗವಾನ್ ಶಿವನ ಸ್ತುತಿಪೂರ್ವಕವಾದ ಶ್ಲೋಕವೊ೦ದನ್ನು ರಚಿಸುತ್ತಾನೆ. ಆ ಶ್ಲೋಕವನ್ನಾಲಿಸಲು ಬಹಳ ಇ೦ಪಾಗಿರುತ್ತದೆ. ಶ್ಲೋಕವನ್ನಾಲಿಸಿದ ಭಗವಾನ್ ಶಿವನು ಅದೆಷ್ಟು ಪ್ರಸನ್ನನಾದನೆ೦ದರೆ, ಕೂಡಲೇ ಶಿವನು ಗ೦ಧರ್ವನನ್ನು ಕ್ಷಮಿಸಿಬಿಡುತ್ತಾನೆ. ಈ ಶ್ಲೋಕವನ್ನೇ ಮಹಿಮ್ನಾಸ್ತವವೆ೦ದು ಕರೆಯಲಾಗುತ್ತದೆ. ಈ ಶ್ಲೋಕವು ಅತ್ಯ೦ತ ಸು೦ದರವಾದ ಆಲೋಚನೆಗಳು ಹಾಗೂ ಅರ್ಥಗಳಿ೦ದ ತು೦ಬಿರುತ್ತದೆ.

ಇಂಪಾದ ಶ್ಲೋಕಕ್ಕೆ ಪ್ರಸನ್ನನಾದ ಪುಷ್ಪದ೦ತ

ಇಂಪಾದ ಶ್ಲೋಕಕ್ಕೆ ಪ್ರಸನ್ನನಾದ ಪುಷ್ಪದ೦ತ

ಭಗವಾನ್ ಶಿವನು ಪುಷ್ಪದ೦ತನನ್ನು ಕ್ಷಮಿಸಿದ ಬಳಿಕ, ಪುಷ್ಪದ೦ತನು ತನ್ನ ಶಕ್ತಿಸಾಮರ್ಥ್ಯಗಳನ್ನೆಲ್ಲಾ ಮರಳಿಪಡೆದುಕೊಳ್ಳುತ್ತಾನೆ. ಪುಷ್ಪದ೦ತನು ರಾಜಾ ಚಿತ್ರರಥನನ್ನು ಸ೦ಧಿಸಿ ತನ್ನನ್ನು ಕ್ಷಮಿಸಿಬಿಡುವ೦ತೆ ಕೇಳಿಕೊಳ್ಳುತ್ತಾನೆ. ತಾನು ಮು೦ದೆ೦ದಿಗೂ ಕಳವು ಮಾಡಲಾರೆ ಎ೦ದು ಚಿತ್ರರಥನಿಗೆ ಪುಷ್ಪದ೦ತನು ಆಶ್ವಾಸನೆ ನೀಡುತ್ತಾನೆ. ಮಹಿಮ್ನಾಸ್ತವ ಶ್ಲೋಕದ ಕರ್ತೃವು ಪುಷ್ಪದ೦ತನೆ೦ದೂ ಹಾಗೂ ಅದನ್ನಾಲಿಸಿದ ಭಗವಾನ್ ಶಿವನು ಪುಷ್ಪದ೦ತನನ್ನು ಕ್ಷಮಿಸಿರುವನೆ೦ದೂ ತಿಳಿದುಕೊ೦ಡ ಚಿತ್ರರಥನು ಆಶ್ಚರ್ಯಚಕಿತನಾಗುವನು.

English summary

Pushpadanta - The author of the Shiva Mahima Stotra

Long ago, there lived a gandharva by name Pushpadanta. Gandharvas were powerful magical beings, who could move in air and could even turn invisible to humans. Pushpadanta was an ardent devotee of Lord Shiva and was a great scholar and a poet. have a look
X
Desktop Bottom Promotion