For Quick Alerts
ALLOW NOTIFICATIONS  
For Daily Alerts

ದುಷ್ಟ ಶಕ್ತಿಗಳಿಂದ ಕಾಪಾಡುವ ಶಕ್ತಿಶಾಲಿ ನರಸಿಂಹ ಮಂತ್ರಗಳು

By Jaya subramanya
|

ಮಹಾವಿಷ್ಣುವು ನರಸಿಂಹ ಅವತಾರವನ್ನು ತಾಳಿದ ದಿನವನ್ನು ನರಸಿಂಹ ಜಯಂತಿಯಾಗಿ ಆಚರಿಸಲಾಗುತ್ತದೆ. ಅಸುರ ರಾಜ ಹಿರಣ್ಯಕಶಿಪುವನ್ನು ವಧಿಸುವುದಕ್ಕಾಗಿ ಮಹಾವಿಷ್ಣುವು ನರಸಿಂಹನ ಅವತಾರವನ್ನು ತಾಳಿದ್ದಾರೆ. ವಿ‍ಷ್ಣು ಭಕ್ತ ಪ್ರಹ್ಲಾದನ ತಂದೆಯೇ ಅಸುರ ರಾಜ ಹಿರಣ್ಯ ಕಶಿಪು.

ತನ್ನ ತಮ್ಮನನ್ನು ವಧಿಸಿದ್ದು ವಿಷ್ಣು ಎಂಬ ಕಾರಣಕ್ಕಾಗಿ ಹಿರಣ್ಯಕಶಿಪುವಿಗೆ ವಿಷ್ಣು ಎಂದರೆ ಕೆಂಡಮಂಡಲಾ ಕೋಪ. ವಿಷ್ಣುವಿನ ಹೆಸರು ಕೇಳಿದರೆ ಸಾಕು ಅಂತಹವರನ್ನು ಕೂಡಲೇ ವಧಿಸುತ್ತಿದ್ದ. ತನ್ನ ಪುತ್ರ ವಿಷ್ಣು ಭಕ್ತ ಎಂದೊಡನೆ ಹಿರಣ್ಯಕಶಿಪು ಕೋಪದಿಂದ ಕುದಿದು ಮಗನನ್ನು ಕೊಲ್ಲಲು ಹಲವಾರು ವಿಧಾನಗಳನ್ನು ಪ್ರಯೋಗಿಸುತ್ತಾರೆ. ಆದರೆ ವಿಷ್ಣುವು ಬಾಲಕ ಪ್ರಹ್ಲಾದನನ್ನು ಕಾಪಾಡುತ್ತಾರೆ. ತನ್ನ ವಧೆಗೆ ನರಸಿಂಹನನ್ನೇ ಹಿರಣ್ಯಕಶಿಪು ಆಯ್ಕೆ ಮಾಡಿದ್ದಾದರೂ ಏಕೆ?

ಚಾಣಾಕ್ಷ ಹಿರಣ್ಯಕಶಿಪು ಉಗ್ರ ತಪಸನ್ನು ಆಚರಿಸಿ ಬ್ರಹ್ಮನಿಂದ ವರವನ್ನು ಪಡೆದುಕೊಂಡಿರುತ್ತಾನೆ. ಪ್ರಾಣಿಯಾಗಲೀ ಮನುಷ್ಯನಾಗಲೀ, ಹಗಲಲ್ಲೇ ಆಗಲಿ ರಾತ್ರಿಯಲ್ಲೇ ಆಗಲಿ, ಆಕಾಶ ಇಲ್ಲವೆ ಭೂಮಿಯಲ್ಲಾಗಲೀ ತನ್ನ ವಧೆ ನಡೆಯಬಾರದೆಂಬ ವಿಚಿತ್ರ ಬೇಡಿಕೆಯನ್ನು ಮುಂದಿಡುತ್ತಾನೆ. ಅದರಂತೆಯೇ ಈತನನ್ನು ವಧಿಸಲು ಮಹಾವಿಷ್ಣುವೇ ಸರಿ ಎಂಬುದಾಗಿ ದೇವತೆಗಳು ನಿಶ್ಚಯಿಸಿ ಇದಕ್ಕಾಗಿ ಹರಿಯನ್ನು ಬೇಡಿಕೊಳ್ಳುತ್ತಾರೆ. ಮಗು ಪ್ರಹ್ಲಾದನನ್ನು ನಿನ್ನ ವಿಷ್ಣು ಎಲ್ಲಿದ್ದಾನೆ ಎಂದು ಕೇಳುತ್ತಾ ಕೇಳುತ್ತಾ ಒಂದೊಂದೇ ಕಂಬವನ್ನು ಹಿರಣ್ಯಕಶಿಪು ಭಗ್ನಪಡಿಸುತ್ತಾನೆ, ಆಗ ನಡೆಯಿತು ಯಾರೂ ಊಹಿಸದಂತಹ ಘಟನೆ... ಮುಂದೆ ಓದಿ...

ಯಾರೂ ಕ೦ಡರಿಯದ ವಿಚಿತ್ರ ರೂಪ!

ಯಾರೂ ಕ೦ಡರಿಯದ ವಿಚಿತ್ರ ರೂಪ!

ಆ ಸ೦ದರ್ಭದಲ್ಲಿ ಹಿ೦ದೆ೦ದೂ ಘಟಿಸದಿದ್ದ೦ತಹ ಘಟನೆಯೊ೦ದು ನಡೆದುಹೋಗುತ್ತದೆ. ಒಡನೆಯೇ ಭೂಕ೦ಪನದ೦ತಹ ಅನುಭವವಾಗುತ್ತದೆ. ಸ್ತ೦ಭವು ಎರಡಾಗಿ ಸೀಳಿಕೊಳ್ಳುತ್ತದೆ ಹಾಗೂ ಆ ಸ್ತ೦ಭದೊಳಗಿನಿ೦ದ ಹಿ೦ದೆ೦ದೂ, ಯಾರೂ ಕ೦ಡರಿಯದ ವಿಚಿತ್ರ ರೂಪದ, ಅತ್ತ ನರನೂ ಅಲ್ಲದ, ಇತ್ತ ಪ್ರಾಣಿಯೂ ಅಲ್ಲದ ಜೀವಿಯೊ೦ದು ಆವಿರ್ಭವಿಸುತ್ತದೆ. ಅದೇ ಭಗವಾನ್ ವಿಷ್ಣುವಿನ "ನರಸಿ೦ಹ" ಅವತಾರವಾಗಿರುತ್ತದೆ.ನರಸಿ೦ಹ ಅವತಾರದಲ್ಲಿ ಭಗವಾನ್ ವಿಷ್ಣುವಿನ ಶರೀರ

ಅಥವಾ ಮು೦ಡದ ಭಾಗವು ನರನದ್ದಾಗಿದ್ದು, ಶಿರೋಭಾಗವು "ಸಿ೦ಹ" ಅರ್ಥಾತ್ ಮೃಗದ್ದಾಗಿರುತ್ತದೆ.

ಹಿರಣ್ಯಕಶಿಪುವೆ೦ಬ ಮಹಾದೈತ್ಯನ ಸ೦ಹಾರ

ಹಿರಣ್ಯಕಶಿಪುವೆ೦ಬ ಮಹಾದೈತ್ಯನ ಸ೦ಹಾರ

ಸಿಂಹ ಮತ್ತು ಮನುಷ್ಯನ ರೂಪಲ್ಲಿದ್ದ ನರಸಿ೦ಹ ಸ್ವಾಮಿಯು ಘರ್ಜಿಸುತ್ತಾ ರಣ್ಯಕಶಿಪುವೇ ನೋಡು, ಈ ಹೊತ್ತು ಈಗ ಹಗಲೂ ಅಲ್ಲ, ರಾತ್ರಿಯೂ ಅಲ್ಲ. ಇದು ಮುಸ್ಸ೦ಜೆ ಹೊತ್ತು ಅರ್ಥಾತ್ ಸ೦ಧ್ಯಾಕಾಲವಾಗಿದೆ. ಹೀಗೆ೦ದು ಹೇಳುತ್ತಾ ಭಗವಾನ್ ವಿಷ್ಣುವಿನ ಅವತಾರವಾಗಿರುವ ನರಸಿ೦ಹನ ಅವತಾರವು ತನ್ನ ಹರಿತವಾದ ನಖಗಳಿ೦ದ ಹಿರಣ್ಯಕಶಿಪುವಿನ ಉದರವನ್ನು ಬಗೆದು ಆತನ ಕರುಳುಗಳನ್ನು ತನ್ನ ಕೊರಳಲ್ಲಿ ಮಾಲೆಯ ರೂಪದಲ್ಲಿ ಧರಿಸಿಕೊ೦ಡು ಹಿರಣ್ಯಕಶಿಪುವಿನ ಮೃತದೇಹವನ್ನು ದೂರ ಒಗೆಯುತ್ತಾನೆ. ಹೀಗೆ ಹಿರಣ್ಯಕಶಿಪುವೆ೦ಬ ಮಹಾದೈತ್ಯನ ಸ೦ಹಾರವಾಗುತ್ತದೆ.

ಶುಕ್ಷ ಪಕ್ಷದ ಹದಿನಾಲ್ಕನೇ ದಿನದಂದು....

ಶುಕ್ಷ ಪಕ್ಷದ ಹದಿನಾಲ್ಕನೇ ದಿನದಂದು....

ಶುಕ್ಷ ಪಕ್ಷದ ಹದಿನಾಲ್ಕನೇ ದಿನದಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ. ನರಸಿಂಹನನ್ನು ಭಕ್ತರು ಬೇಡಿಕೊಂಡು ದೇವರ ಅನುಗ್ರಹವನ್ನು ಪಡೆದುಕೊಳ್ಳಲು ಉಪವಾಸವನ್ನು ಕೈಗೊಳ್ಳುತ್ತಾರೆ. ಭಕ್ತರು ಸಂಕಷ್ಟದಲ್ಲಿರುವಾಗ ನರಹರಿಯನ್ನು ಬೇಡಿಕೊಳ್ಳುವುದರಿಂದ ಸರ್ವ ದುರಿತಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಅವರದ್ದಾಗಿದೆ. ದೇವರ ಅನುಗ್ರಹವನ್ನು ಪಡೆದುಕೊಳ್ಳಲು ನಿರ್ದಿಷ್ಟ ಮಂತ್ರಗಳಿದ್ದು ಅದನ್ನು ಉಚ್ಛರಿಸಿಕೊಂಡು ಪೂಜೆಗಳನ್ನು ನಡೆಸುವುದರಿಂದ ಭಕ್ತರ ಇಷ್ಟಾರ್ಥ ನೆರವೇರುತ್ತದೆ.

ನರಸಿಂಹ ಮಹಾ ಮಂತ್ರ

ನರಸಿಂಹ ಮಹಾ ಮಂತ್ರ

ಓಂ ಹ್ರೀಂ ಕ್ಸೌಮುಗ್ರಂ ವೀರಂ ಮಹಾವಿನ್ಯುಜ್ವಲಂತಂ ಸರ್ವೋತ್ಮುಖಂ

ನೃಸಿಂಹಂ ಭೀಷಣಂ ಭದ್ರೊಮೃತ್ಯೋರ್‌ಮೃತ್ಯುಂ ನಮಾಮ್ಯಹಂ

ಭಗವಾನ್ ಮಹಾವಿಷ್ಣುವೇ!

ನೀವು ಕೋಪೋದ್ರುಕ್ತರು ಮತ್ತು ಪರಾಕ್ರಮಿಗಳು. ನೀವು ಶಾಖ ಮತ್ತು ಬೆಂಕಿಯನ್ನು ಉತ್ಪಾದಿಸುತ್ತೀರಿ. ಮರಣವನ್ನು ವಶಪಡಿಸಿಕೊಳ್ಳುವ ಸಾಮರ್ಥ್ಯ ನಿಮ್ಮಲ್ಲಿದೆ. ನಾನು ನಿಮಗೆ ಶರಣು.

ಈ ಮಂತ್ರವನ್ನು ಜಪಿಸುವುದರಿಂದ ನರಸಿಂಹನ ಕೃಪಾಕಟಾಕ್ಷ ನಿಮಗೆ ದೊರೆಯಲಿದೆ. ಹಿರಣ್ಯಕಶಿಪುವನ್ನು ದೇವರು ವಧಿಸಿದಂತೆಯೇ ನಿಮ್ಮ ಸಂಕಷ್ಟಗಳನ್ನು

ಆತ ದೂರಮಾಡಲಿದ್ದಾರೆ.

ನರಸಿಂಹ ಪ್ರಣಮಂ ಪ್ರಾರ್ಥನೆ

ನರಸಿಂಹ ಪ್ರಣಮಂ ಪ್ರಾರ್ಥನೆ

ನಮಸ್ತೇ ನರಸಿಂಹಾಯಾ

ಪ್ರಹ್ಲಾದ ದಾಯಿನೇ

ಹಿರಣ್ಯಕ್ಷಿಪೊರ್ ವಕ್ಸ, ಸಿಲಾ ತಂಕ ನಕಾಲಯೇ

ಇತೋ ನೃಸಿಂಹ ಪರಾತೋ ನೃಸಿಂಹ, ಯತೋ ಯತೋ ಯಾಮಿ ತತೋ ನೃಸಿಂಹ, ಬಾಹಿರ್ನೃಸಿಂಹೋ ಹೃದಯೇ ನೃಸಿಂಹೋ ನೃಸಿಂಹಂ

ಆದಿಂ ಶರಣಂ ಪ್ರಪಾದಯೇ

ನಾನು ದೇವರೇ ನಿಮಗೆ ವಂದನೆಗಳನ್ನು ಅರ್ಪಿಸುತ್ತೇನೆ. ಪ್ರಹ್ಲಾದನ ಸಂತೋಷವೇ ನೀವಾಗಿದ್ದೀರಿ. ನಿಮ್ಮ ಉಗುರುಗಳು ದುಷ್ಟ ಹಿರಣ್ಯಕಶಿಪುವಿನ ಎದೆಯನ್ನು ಬಗೆದಿದೆ. ಈ ಗುಂಡಿಗೆಯನ್ನು ಕಲ್ಲುಗಳಿಂದ ಮಾಡಿರುವಂತಹದ್ದಾಗಿದ್ದರೂ ನೀವು ಅದನ್ನು ಮುರಿದು ಹಂತಕನ್ನು ಮುಗಿಸಿದ್ದೀರಿ. ನರಸಿಂಹ ಎಂದೆಂದೂ ಇಲ್ಲೇ ಇರುತ್ತಾರೆ. ಎಲ್ಲೆಲ್ಲೂ ಆತನೇ ಇರುತ್ತಾರೆ. ನಾನು ಎಲ್ಲೇ ಹೋದರೂ ಭಗವಂತನ ಕೃಪೆ ನನ್ನ ಮೇಲಿರುತ್ತದೆ. ಜಗತ್ತಿನ ಹೊರಗೆ ಮತ್ತು ನನ್ನ ಹೃದಯದಲ್ಲಿ ಆ ದೇವರು ನೆಲೆಸಿದ್ದಾರೆ. ನಿಮಗೆ ಭಗವಂತಹ ಅನುಗ್ರಹ ದೊರೆಯುತ್ತದೆ.

ದಶಾವತಾರ ಸ್ತೋತ್ರ

ದಶಾವತಾರ ಸ್ತೋತ್ರ

ತವ ಕರ ಕಮಲಾ ವರೇ ನಖಂ ಅದ್ಬುತ ಶೃಂಗಂ

ದಲಿತಾ ಹಿರಣ್ಯಕಶಿಪು ತನು ಬೃಂಘಂ

ಕೇಶವ ಧಾರ್ತಾ, ನರಹರೀ ರೂಪಾ ಜಯ ಜಗದೀಶಾ ಹರೇ

ಓ ಭಗವಾನ್ ಕೇಶವ, ಅರ್ಧಸಿಂಹ ಮತ್ತು ಅರ್ಧ ಮಾನವ ಅವತಾರವನ್ನು ಎತ್ತಿದ ಭಗವಂತನಿಗೆ ಕೈಯೆತ್ತಿ ನಾನು ಮುಗಿಯುತ್ತೇನೆ. ಸುಂದರ ತಾವರೆಗಳನ್ನು ಪ್ರತಿನಿಧಿಸುವ ನೆಲದಲ್ಲಿ ನೀವು ಹಿರಣ್ಯಕಶಿಪುವನ್ನು ವಧಿಸಿದ್ದೀರಿ.

ಕಾಮಸಿಕಷ್ಟಕಂ

ಕಾಮಸಿಕಷ್ಟಕಂ

ತ್ವಯಾಯಿ ರಕ್ಷತಿ ರಕ್ಷಕಾಯ ಕಿಮಾನ್ಯಯಾ

ತ್ವಯಾಯಿ ಕಾರಕಷ್ಟಿ ರಕ್ಷಾಕಾಯಾ ಕಿಮಾನ್ಯಯಾ

ಇತಿ ನಿಶ್ಚಿತ ದಿಹಾ ಶ್ರಾಯಾಮಿ, ನಿತ್ಯಂ

ನೃಹಾರೇ ವೇಗವತೀ ತಸ್ರಯಂ ತ್ವಾಮ್

ಓ ಕಾಮಾಶಕ್ತಕ! ನೀವು ಹೆಚ್ಚು ಬಲಶಾಲಿಯಾಗಿದ್ದೀರಿ. ನೀವು ಯಾರನ್ನಾದರೂ ಸಂರಕ್ಷಿಸಲು ಬಯಸಿದ್ದರೆ, ಅವರಿಗೆ ಯಾರೂ ತೊಂದರೆಯನ್ನು ಉಂಟುಮಾಡಲಾರರು. ನೀವು ಯಾರನ್ನಾದರೂ ವಧಿಸಲು ಇಚ್ಛಿಸಿದಲ್ಲಿ ಅವರನ್ನು ಯಾರೂ ರಕ್ಷಿಸಲಾರರು. ನಿಮ್ಮ ಪದ್ಮ ಚರಣಗಳಿಗೆ ನನ್ನ ಪ್ರಾರ್ಥನೆಯನ್ನು ನಾನು ಅರ್ಪಿಸುತ್ತಿದ್ದೇನೆ. ತೊಂದರೆಗಳಿಂದ ನನ್ನನ್ನು ರಕ್ಷಿಸಿ.

ದಿವ್ಯ ಪ್ರಬಂಧಂ

ದಿವ್ಯ ಪ್ರಬಂಧಂ

ಆದಿ ಆದಿ ಅಗಂ ಕರೈಂದು ಇಸೈಪದೀಪ್ ಪದೀಕ್ ಕನ್ನೀರ್ ಮಲ್ಗಿ ಎಂಗ್ಮುನಾದಿ ನಾದಿ ನರಸಿಂಗ ಎಂದ್ರು, ವಾದಿ ವಾದುಂ ಇವಾಲ್ ನುತಾಲೆ

ನಿಮ್ಮನ್ನು ಕಾಣುವವರೆಗೆ ನನ್ನ ಹೃದಯ ದ್ರವಿಸುವವರೆಗೆ ನಾನು ನರ್ತಿಸುತ್ತೇನೆ, ನೀವು ಕಾಣುವುದಿದ್ದರೆ ಕಣ್ಣೀರಿನಿಂದ ತುಂಬಿದ ಕಣ್ಣುಗಳಿಂದ ನಿಮ್ಮ ನಾಮವನ್ನು ಸ್ತೋತ್ರವನ್ನು ನಾನು ಪಠಿಸುತ್ತೇನೆ. ನಿಮ್ಮನ್ನು ಕಾಣುವ ಆಸೆಯನ್ನು ನಾನು ಹೊಂದಿದ್ದೇನೆ. ಓ ನರಸಿಂಹ ದೇವರೇ.
ನರಸಿಂಹ ಗಾಯತ್ರೀ ಮಂತ್ರ

ನರಸಿಂಹ ಗಾಯತ್ರೀ ಮಂತ್ರ

ಓಂ ನೃಸಿಂಹಾಯೇ ವಿದಾಮಹೇ ವಜ್ರಕಾಯಾ ಧೀಮಾಹಿ ತಾನ್ ನೊ ಸಿಂಹ ಪ್ರಚೋದಯಾತ್ ವಜ್ರ ನಖಾಯಾ ವಿಧಾಮಹೇ ತೀಕ್ಷ್ಣ ಧಮ್‌ಸ್ಟ್ರಯಾ ಧೀಮಹಿ ತನ್ ನೊ ನರಸಿಂಹ ಪ್ರಚೋದಯಾತ್

ನರಸಿಂಹ ರೂಪದಲ್ಲಿರುವ ದೇವರಿಗೆ ಇದೋ ನಮ್ಮ ವಂದನೆಗಳು. ನಮ್ಮ ಒಳ್ಳೆಯ ಕೆಲಸಗಳಿಗೆ ಆಶೀರ್ವಾದವನ್ನು ನೀಡುವ ಭಗವಂತನೇ ನಮ್ಮಲ್ಲಿರುವ ದುಷ್ಟತನವನ್ನು ಹೋಗಲಾಡಿಸಿ. ಅವರ ಚೂಪಾದ ಉಗುರು ಮತ್ತು ಹಲ್ಲುಗಳನ್ನು ನೆನೆಯೋಣ.

ನರಸಿಂಹ ಪ್ರಪಾತಿ

ನರಸಿಂಹ ಪ್ರಪಾತಿ

ಮಾತಾ ನರಸಿಂಹ, ಪಿತಾ ನರಸಿಂಹ

ಭ್ರಾತಾ ನರಸಿಂಹ, ಸಖಾ ನರಸಿಂಹ

ವಿದ್ಯಾ ನರಸಿಂಹ, ದ್ರವೀಣಂ ನರಸಿಂಹ

ಸ್ವಾಮಿ ನರಸಿಂಹ, ಸಕಲಂ ನರಸಿಂಹ

ಇತೋ ನರಸಿಂಹ, ಪರಾತೋ ನರಸಿಂಹ

ಯತೋ ಯತೋ ಯಾಹಿನಿ, ತತೋ ನರಸಿಂಹ

ನರಸಿಂಹ ದೇವತಾ ಪಾರೋ ನ ಕಷ್ಚಿತ್

ತಸ್ಮಾನ್ ನರಸಿಂಹ ಶರಣಂ ಪ್ರಪಾದಯೇ

ನನಗೆ ಭಗವಾನ್ ನರಸಿಂಹರು ತಂದೆ, ತಾಯಿ, ಸಹೋದರ, ಮಿತ್ರರು ಆಗಿದ್ದಾರೆ. ವಿಶ್ವದಲ್ಲಿರುವ ಬುದ್ಧಿಮತ್ತೆ ಮತ್ತು ಧನಕನಕ ಸಂಪತ್ತು ಅವರೇ ಆಗಿದ್ದಾರೆ. ನನಗೆ ಗುರುಗಳು ಮಾರ್ಗದರ್ಶಿಗಳು ಅವರಾಗಿದ್ದಾರೆ. ನಾನು ಎಲ್ಲೇ ಹೋದರೂ ಅಲ್ಲಿ ಭಗವಾನ್ ನನ್ನೊಂದಿಗೆ ಇರುತ್ತಾರೆ. ಅವರೇ ಮಹಾನ್ ಆಗಿದ್ದು ಅವರಿಗಿಂತ ಶ್ರೇಷ್ಠರು ಬೇರೊಬ್ಬರಿಲ್ಲ. ನಾನು ನಿನಗೆ ಶರಣಾಗಿರುವೆ ಭಗವಾನ್ ನರಸಿಂಹ.

ನಿಮಗೆ ಭಯವಾಗಿದ್ದಲ್ಲಿ ಮತ್ತು ನೀವು ಆಪತ್ತಿನಲ್ಲಿದ್ದರೆ ಈ ಮಂತ್ರವನ್ನು ಉಚ್ಛರಿಸಿದರೆ ಭಗವಾನ್ ನರಸಿಂಹ ನಿಮ್ಮನ್ನು ಕಾಪಾಡುತ್ತಾರೆ. ಎಲ್ಲಾ ಆಪತ್ತಿನಿಂದ ನಿಮ್ಮ ರಕ್ಷಣೆಯನ್ನು ಈ ಮಂತ್ರವು ಮಾಡಲಿದೆ.

English summary

Narasimha Mantras To Chant On Narasimha Jayanti

Narasimha Jayanti is celebrated as the day when Lord Maha Vishnu took the Avatar of Lord Narasimha. Lord Narasimha Avatar was taken to destroy the tyranny of the Asura King Hiranyakashapu. Hiranyakashapu was the father of Prahalada who was one of the greatest devotees of Lord Maha Vishnu. Hiranyakashyapu abhorred the Lord Maha Vishnu and asked Prahalada to stop worshipping him. He forced Prahalada to worship Hiranyakashyapu instead like he was doing to the people in his kingdom.
X
Desktop Bottom Promotion