For Quick Alerts
ALLOW NOTIFICATIONS  
For Daily Alerts

ಜನ್ಮಾಷ್ಟಮಿ ವಿಶೇಷ: ಭಗವಾನ್ ಶ್ರೀ ಕೃಷ್ಣನ ಲೀಲಾ ವಿನೋದಗಳು

By Jaya subramanya
|

ಲೋಕಕಲ್ಯಾಣಕ್ಕಾಗಿ ಜನ್ಮತಾಳಿದ ಶ್ರೀ ಮನ್ನಾರಾಯಣನ ಅವತಾರಗಳಲ್ಲಿ ಶ್ರೀಕೃಷ್ಣನೂ ಒಬ್ಬರು. ಶ್ರಾವಣ ಮಾಸದ ಎಂಟನೆಯ ದಿನದಂದು ಕೃಷ್ಣನ ಜನನವಾಯಿತು ಎಂಬುದಾಗಿ ಪುರಾಣಗಳು ಹೇಳುತ್ತವೆ. ಶ್ರೀಕೃಷ್ಣನ ಹುಟ್ಟಿದ ದಿನವನ್ನೇ ಜನ್ಮಾಷ್ಟಮಿಯನ್ನಾಗಿ ಹಿಂದೂಗಳು ಸಡಗರದಿಂದ ಆಚರಿಸುತ್ತಾರೆ.

ತನ್ನ ತುಂಟತನದಿಂದಲೇ ಅಸುರರ ಹುಟ್ಟಡಗಿಸುವ ಶ್ರೀಕೃಷ್ಣ ಜನನ ಸೆರೆಮನೆಯಲ್ಲೇ ಸಂಭವಿಸಿದರೂ ದುರಳ ಮಾವ ಕಂಸನ ಸಂಹಾರದಿಂದಲೇ ಪಾಪಿಗಳ ಪಾಪದ ಕೊಡವನ್ನು ಶ್ರೀಕೃಷ್ಣನು ತುಂಬಿಸುತ್ತಾನೆ. ಅಸುರತೆ ಲೋಕದಲ್ಲಿ ತನ್ನ ತಾಂಡವ ನೃತ್ಯವನ್ನು ಆರಂಭಿಸಿದಾಗ ತಾನು ಅಭಯ ನೀಡುವುದಾಗಿಯೇ ಶ್ರೀಕೃಷ್ಣನು ತನ್ನ ಭಕ್ತರಿಗೆ ಆಶ್ವಾಸನೆಯನ್ನು ನೀಡಿರುವಂತದ್ದು. ಜನ್ಮಾಷ್ಟಮಿ ವಿಶೇಷ- ರಾಧಾ-ಕೃಷ್ಣರ ಪ್ರೇಮ ಕಥೆ

ಪ್ರೀತಿ, ಸ್ನೇಹ ಮಧುರ ಬಾಂಧವ್ಯಕ್ಕೆ ಇನ್ನೊಂದು ಹೆಸರೇ ಶ್ರೀಕಷ್ಣ. ಮುರಳಿ ನಾದದಿಂದಲೇ ಎಂತಹವರ ಹೃದಯವನ್ನು ಕರಗಿಸುವ ಸಾಮರ್ಥ್ಯವನ್ನು ಆತ ಪಡೆದುಕೊಂಡಿದ್ದ. ರಾಧೆಯ ಮೇಲಿನ ಅನುರಾಗ, ಗೋವುಗಳ ಮೇಲಿದ್ದ ಪ್ರೀತಿ, ಬೆಣ್ಣೆ ಕಳ್ಳ, ಹದಿನಾರು ಸಾವಿರ ಗೋಪಿಕೆಯರ ಸಖ ಮೊದಲಾದ ಹೆಸರುಗಳನ್ನು ಶ್ರೀಕೃಷ್ಣ ಪಡೆದುಕೊಂಡಿದ್ದಾನೆ. ಶ್ರೀಕೃಷ್ಣನ ಜನನದಿಂದ ಹಿಡಿದು ಮರಣದವರೆಗೂ ಒಂದೊಂದು ಕಥೆ ತನ್ನದೇ ಹಾದಿಯಲ್ಲಿ ಸಾಗಿ ಬಂದಿದೆ. ವಿಷ್ಣುವು ಕೃಷ್ಣನ ಅವತಾರವನ್ನು ಎತ್ತಿದ್ದಾದರೂ ಏಕೆ ಎಂಬುದನ್ನೇ ಈ ಕಥೆಗಳ ಸಾರದಲ್ಲಿ ತಿಳಿದುಕೊಳ್ಳಬಹುದಾಗಿದೆ.

ಜನನದ ಕಥೆ

ಜನನದ ಕಥೆ

ದುರುಳ ಕಂಸನು ಪ್ರಾಣಭಯದಿಂದ ತಂಗಿ ದೇವಕಿಯ ಎಲ್ಲಾ ಮಕ್ಕಳನ್ನು ಸಾಯಿಸುತ್ತಾನೆ. ಎಂಟನೆಯ ಮಗುವಿನಿಂದ ತನ್ನ ಮರಣ ಕಾದಿದಿ ಎಂಬ ಅಶರೀರವಾಣಿಯನ್ನು ಕೇಳಿಸಿಕೊಂಡ ಕಂಸನು ಶ್ರೀಕೃಷ್ಣ ಹುಟ್ಟುತ್ತಿದ್ದಂತೆಯೇ ಮಗುವನ್ನು ಕೊಲ್ಲುವ ಸಂಚನ್ನು ರೂಪಿಸುತ್ತಾನೆ.

ಜನನದ ಕಥೆ

ಜನನದ ಕಥೆ

ಆದರೆ ತನ್ನ ಶಕ್ತಿಯಿಂದ ಸೆರೆಮನೆಯ ಕಾವಲುಗಾರರನ್ನು ಮಲಗಿಸುವ ಕೃಷ್ಣನು ತಂದೆ ವಸುದೇವನು ತನ್ನನ್ನು ನಂದನ ಮನೆಗೆ ಸುರಕ್ಷಿತವಾಗಿ ತಲುಪಿಸುವಂತೆ ಮಾಡಿಕೊಳ್ಳುತ್ತಾನೆ. ನಂದನು ತನ್ನ ಮಗಳನ್ನು ವಸುದೇವನಿಗೆ ಒಪ್ಪಿಸಿ ಕೃಷ್ಣನನ್ನು ಪಡೆದುಕೊಳ್ಳುತ್ತಾನೆ. ವಸುದೇವನು ಪುಟ್ಟ ಕೃಷ್ಣನನ್ನು ಬುಟ್ಟಿಯಲ್ಲಿಟ್ಟು ಕೊಂಡೊಯ್ಯುವಾಗ ಮಳೆಯಿಂದ ಪುಟ್ಟ ಕಂದನನ್ನು ಹಾವುಗಳ ರಾಜ ವಾಸುಕಿಯು ಕಾಪಾಡುತ್ತಾನೆ.

ಬಾಲಕೃಷ್ಣ ಮತ್ತು ಪೂತನಿ

ಬಾಲಕೃಷ್ಣ ಮತ್ತು ಪೂತನಿ

ಕೃಷ್ಣನು ಸುರಕ್ಷಿತವಾಗಿದ್ದಾನೆ ಎಂಬುದನ್ನು ತಿಳಿದುಕೊಂಡ ಕಂಸನು ಆತನನ್ನು ಕೊಲ್ಲಲು ತನ್ನ ದುಷ್ಟಶಕ್ತಿಗಳನ್ನು ಬಳಸಿಕೊಳ್ಳುತ್ತಾನೆ. ಅದರಲ್ಲಿ ಪೂತನಿ ಕೂಡ ಒಬ್ಬಳು. ಸುಂದರವಾದ ಹೆಂಗಸಿನ ರೂಪದಲ್ಲಿ ಬಂದು ಕೃಷ್ಣನಿಗೆ ವಿಷವಿರುವ ಮೊಲೆಹಾಲು ಉಣಿಸಿ ಕೊಲ್ಲುವ ಸಂಚನ್ನು ರೂಪಿಸುತ್ತಾಳೆ. ಈ ತಂತ್ರಗಾರಿಕೆಯನ್ನು ಅರಿತುಕೊಂಡ ಕೃಷ್ಣನು ಆಕೆಯನ್ನು ಸಾಯಿಸುತ್ತಾನೆ. ಜನ್ಮಾಷ್ಟಮಿ ವಿಶೇಷ: ಕಷ್ಟ ಕಾರ್ಪಣ್ಯಕ್ಕೆ ತ್ವರಿತ ಪರಿಹಾರ

ಕೃಷ್ಣನ ಬೆಣ್ಣೆ ಪ್ರೀತಿ

ಕೃಷ್ಣನ ಬೆಣ್ಣೆ ಪ್ರೀತಿ

ಕೃಷ್ಣನ ಬಗೆಗೆ ಎಷ್ಟೇ ಕಥೆಗಳಿದ್ದರೂ ಬೆಣ್ಣೆಯೊಂದಿಗೆ ಕೃಷ್ಣನ ನಂಟು ಬಿಡಿಸಲಾಗದೇ ಇರುವಂತಹದ್ದಾಗಿದೆ. ಗೋಪಿಕೆಯರಿಗೆ ಅರಿಯದಂತೆ ಅವರ ಮಡಿಕೆಗಳಿಂದ ಬೆಣ್ಣೆಯನ್ನು ಕದ್ದು ತಿನ್ನುವುದು ಮುದ್ದು ಕೃಷ್ಣನ ಲೀಲೆಗಳಲ್ಲಿ ಒಂದಾಗಿದೆ. ತನ್ನ ಸ್ನೇಹಿತರನ್ನು ಕೃಷ್ಣನು ಈ ಕಾಯಕಕ್ಕೆ ಬಳಸಿಕೊಳ್ಳುತ್ತಾನೆ. ಜನ್ಮಾಷ್ಟಮಿಯಂದು ಅದಕ್ಕಾಗಿಯೇ ಬೆಣ್ಣೆಯನ್ನು ಕೃಷ್ಣನಿಗೆ ಅರ್ಪಿಸುತ್ತಾರೆ.

ಪುಟ್ಟ ಕೃಷ್ಣ ಮತ್ತು ಕಾಲಿಯ ಸರ್ಪ

ಪುಟ್ಟ ಕೃಷ್ಣ ಮತ್ತು ಕಾಲಿಯ ಸರ್ಪ

ಯಮುನಾ ತಟದಲ್ಲಿ ಕೃಷ್ಣನು ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ನದಿಯ ಮಧ್ಯದಿಂದ ಕಾಲಿಯ ಸರ್ಪವು ಎದ್ದುಬರುತ್ತದೆ. ಸರ್ಪವನ್ನು ಸೋಲಿಸಿದ ಕೃಷ್ಣನು ವೃಂದಾವನವನ್ನು ಅದು ತ್ಯಜಿಸಿ ಹೋಗುವಂತೆ ಮಾಡುತ್ತಾನೆ.

ಕೃಷ್ಣ ಮತ್ತು ಗೋವರ್ಧನ ಗಿರಿ

ಕೃಷ್ಣ ಮತ್ತು ಗೋವರ್ಧನ ಗಿರಿ

ಮಳೆಯ ದೇವತೆ ಇಂದ್ರನನ್ನು ವೃಂದಾವನದಲ್ಲಿ ವಾಸಿಸುವವರು ಪೂಜಿಸುತ್ತಿರುತ್ತಾರೆ. ಆದರೆ ಕೃಷ್ಣನು ಗೋವರ್ಧನ ಬೆಟ್ಟವನ್ನು ಪೂಜಿಸುವಂತೆ ಜನರಿಗೆ ಸಲಹೆ ನೀಡುತ್ತಾನೆ. ಇದರಿಂದ ಕೋಪಗೊಂಡ ಇಂದ್ರನು ವರುಣನನ್ನು ಕಳುಹಿಸಿ ಭೀಕರ ಮಳೆ ಬರಿಸುವಂತೆ ಸಲಹೆ ನೀಡಿ ವೃಂದಾವನವನ್ನು ನಾಶಗೊಳಿಸುವಂತೆ ತಿಳಿಸುತ್ತಾನೆ. ತನ್ನ ಕಿರುಬೆರಳಿನಿಂದ ಗೋವರ್ಧನ ಬೆಟ್ಟವನ್ನು ಎತ್ತಿ ವೃಂದಾವನದ ಪುಟ್ಟ ಕರು, ಪ್ರಾಣಿಗಳು ಮತ್ತು ಜನರನ್ನು ಕೃಷ್ಣನು ಕಾಪಾಡುತ್ತಾನೆ. ಕೃಷ್ಣ ಜನ್ಮಾಷ್ಟಮಿ ವಿಶೇಷ- ಘಮಘಮಿಸುವ ಬೀಟ್‍ರೂಟ್ ಹಲ್ವಾ

ಕೃಷ್ಣ ಮತ್ತು ಯಶೋಧೆ

ಕೃಷ್ಣ ಮತ್ತು ಯಶೋಧೆ

ಪುಟ್ಟ ಹಸುಳೆ ಕೃಷ್ಣನು ಧೂಳು ಮತ್ತು ಮಣ್ಣನ್ನು ತಿನ್ನುತ್ತಾನೆ ಎಂಬುದಾಗಿ ಆತನ ಸ್ನೇಹಿತರು ಯಶೋಧೆಗೆ ದೂರು ನೀಡುತ್ತಾರೆ. ಇದರಿಂದ ಕೋಪಗೊಂಡ ಯಶೋಧೆಯು ಕೃಷ್ಣನಿಗೆ ಬಾಯಿ ತೆರೆಯುವಂತೆ ಹೇಳುತ್ತಾಳೆ.

ಕೃಷ್ಣ ಮತ್ತು ಯಶೋಧೆ

ಕೃಷ್ಣ ಮತ್ತು ಯಶೋಧೆ

ಆದರೆ ತೆರೆದ ಬಾಯಿಯಲ್ಲಿ ಆಕೆ ಮೂರು ಲೋಕವನ್ನೇ ಕಾಣುತ್ತಾಳೆ. ಹೀಗೆ ಕೃಷ್ಣನ ಜನ್ಮರಹಸ್ಯವು ಹೆಚ್ಚು ರೋಚಕವಾಗಿದ್ದು ಅರ್ಥಪೂರ್ಣ ಎಂದೆನಿಸಿದೆ. ನಿಮ್ಮ ಮಕ್ಕಳಿಗೂ ಕೃಷ್ಣನ ಲೀಲಾವಿನೋದಗಳನ್ನು ತಿಳಿಸುತ್ತಾ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಿ.

English summary

Most Interesting Facts About Krishna Janmashtami

Krishna Janmashtami is the birthday of Lord Krishna who was born on the eighth day of the Shravana Masam, according to the Hindu calendar. His birthday is celebrated with sheer devotion and great enthusiasm throughout the country. Lord Krishna is regarded as one of the most important avatar of Lord Vishnu who reincarnated in this earth to destroy the evil forces and bring peace to the world. To enjoy this occasion, know all you should about little Krishna.
X
Desktop Bottom Promotion