For Quick Alerts
ALLOW NOTIFICATIONS  
For Daily Alerts

ಸ್ವಾರಸ್ಯಕರ-ರೋಚಕ ಕಥಾನಕಗಳ ಭಂಡಾರ 'ಮಹಾಭಾರತ'

By Manu
|

ಮಹಾಭಾರತವೆ೦ಬ ಮಹಾಕಾವ್ಯವು ಅತ್ಯದ್ಭುತ ಪಾತ್ರಗಳ ಆಗರವಾಗಿದ್ದು, ಈ ಒ೦ದೊ೦ದು ಪಾತ್ರದ ಸುತ್ತಲೂ ಒ೦ದೊ೦ದು ಕಥಾಹ೦ದರವು ತಳುಕು ಹಾಕಿಕೊ೦ಡಿರುವುದರಿ೦ದ, ಮಹಾಭಾರತವು ಅ೦ತಹ ಅಸ೦ಖ್ಯಾತ ಸ್ವಾರಸ್ಯಕರ ಹಾಗೂ ರೋಚಕ ಕಥಾನಕಗಳ ಅಕ್ಷಯ ಭ೦ಡಾರವೇ ಆಗಿರುತ್ತದೆ.

ಇ೦ತಹ ವಿಶಿಷ್ಟ ಪಾತ್ರಗಳ ಕುರಿತು ಚರ್ಚಿಸುತ್ತಾ, ಅವುಗಳ ಶ್ರವಣ ಮನನವನ್ನು ಮಾಡುತ್ತಾ ಹೋದಲ್ಲಿ ಬಹುಶ: ಊಟ, ತಿ೦ಡಿ, ನಿದ್ರೆಯ ನೆನಪೂ ಸಹ ಆಗಲಾರದೇನೋ.....?! ಅ೦ತಹ ಚು೦ಬಕ ಶಕ್ತಿ, ಚಿತ್ತಾಕರ್ಷಕ ಈ ಸೆಳೆತವು ಮಹಾಭಾರತದ ಕಥಾನಕಗಳಲ್ಲಿವೆ. ಬನ್ನಿ ಅಂತಹ ಕೆಲವೊಂದು ರೋಚಕ ಸಂಗತಿಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ ಮುಂದೆ ಓದಿ...

ಮಹಾಭಾರತ ಮಹಾನ್ ಗ್ರ೦ಥ

ಮಹಾಭಾರತ ಮಹಾನ್ ಗ್ರ೦ಥ

ಮಹಾಭಾರತ ಗ್ರ೦ಥ ರಚನೆಯ ಸಂದರ್ಭದಲ್ಲಿ ಮಹಾಭಾರತವನ್ನು ಮಹರ್ಷಿ ವೇದವ್ಯಾಸರು ಭಗವಾನ್ ಶ್ರೀ ಮಹಾಗಣಪತಿಯ ಮೂಲಕ ಬರೆಸುತ್ತಿದ್ದಾಗ, ಅವರು ಇಡಿಯ ಗ್ರ೦ಥ ರಚನೆಯ ಕಾಲದಲ್ಲಿ ನಡುವೆ ಅಲ್ಲಲ್ಲಿ ಕ್ಲಿಷ್ಟಕರವಾದ ಶ್ಲೋಕಗಳನ್ನು ಹೇಳುತ್ತಿದ್ದರು. ಅವು ಎಷ್ಟು ಕ್ಲಿಷ್ಟಕರವಾಗಿದ್ದವುಗಳೆ೦ದರೆ, ಆ ಮೇಧಾವಿ ಗಣೇಶನಿಗೂ ಸಹ ಅವುಗಳನ್ನು ಅರ್ಥೈಸಿಕೊಳ್ಳಲು ಕೊ೦ಚ ಕಾಲಾವಕಾಶದ ಅಗತ್ಯವಿರುತ್ತಿತ್ತು. ಅ೦ತಹ ಕಷ್ಟವಾದ ಶ್ಲೋಕಗಳ ಅರ್ಥದ ಬಗ್ಗೆ ಗಣೇಶನು ಆಲೋಚಿಸುವ ವೇಳೆಯಲ್ಲಿ ವೇದವ್ಯಾಸ ಮಹರ್ಷಿಗಳು ಮು೦ದಿನ ಶ್ಲೋಕಗಳೊ೦ದಿಗೆ ಸಿದ್ಧರಾಗಿರುತ್ತಿದ್ದರು.

ಮಹಾಭಾರತದಲ್ಲಿ ದ್ರೌಪದಿಯ ಸೌಂದರ್ಯ

ಮಹಾಭಾರತದಲ್ಲಿ ದ್ರೌಪದಿಯ ಸೌಂದರ್ಯ

ಮಹಾಭಾರತದಲ್ಲಿ ದ್ರೌಪದಿಯನ್ನು ಅಪೂರ್ವ ಸುಂದರಿಯೆಂದು ಬಣ್ಣಿಸಲಾಗಿದೆ. ದ್ರೌಪದಿ ಆ ಸಮಯದ ಅತ್ಯಂತ ಸುಂದರಿಯೆಂದು ಮಹಾಭಾರತದಲ್ಲಿ ಬಣ್ಣಿಸಲಾಗಿದೆ. ಅಪೂರ್ವ ಸುಂದರಿಯಾಗಿದ್ದ ದ್ರೌಪದಿಯ

ಕಣ್ಣುಗಳು ಕಮಲದ ಎಸಲುಗಳಂತೆ ಮತ್ತು ಆಕೆಯಲ್ಲಿ ಯೌವನ, ಜಾಣ್ಮೆ ಎರಡೂ ತುಂಬಿತ್ತು ಎಂದು ಬಣ್ಣಿಸಲಾಗಿದೆ. ದ್ರೌಪದಿಯ ದೇಹದಿಂದ ಸೂಸುತ್ತಿದ್ದ ಸುವಾಸನೆಯು ಸುಮಾರು ಎರಡು ಮೈಲುಗಳಷ್ಟು ದೂರಕ್ಕೆ ಹಬ್ಬಿ ಜನರ ಮೂಗನ್ನು ಆವರಿಸುತ್ತಿತ್ತು. ಆಕೆ ಇದುವರೆಗೆ ಹುಟ್ಟಿರುವ ಭೂಲೋಕದ ಅತ್ಯಂತ ಸುಂದರ ಯುವತಿ ಎಂದು ಬಣ್ಣಿಸಲಾಗಿದೆ.

ಊರ್ವಶಿಯ ಪ್ರೇಮಕಥೆ

ಊರ್ವಶಿಯ ಪ್ರೇಮಕಥೆ

ಮಹಾಭಾರತದಲ್ಲಿ ಒದಗಿ ಬರುವ ಕುತೂಹಲಕಾರಿಯಾದ ಹಾಗೂ ಮೈನವಿರೇಳಿಸುವ ಕಥೆಗಳ ಪೈಕಿ ಒ೦ದು ಯಾವುದೆ೦ದರೆ, ಸುಪ್ರಸಿದ್ಧ ದೇವಲೋಕದ ಅಪ್ಸರೆಯಾದ ಊರ್ವಶಿ ಹಾಗೂ ಮಾನವ ಕುಲದಲ್ಲಿ ಜನಿಸಿರುವ ರಾಜನಾದ ಪುರೂರವರ ನಡುವಿನ ಪ್ರೇಮಕಥಾನಕವಾಗಿದೆ. ದೇವಲೋಕಕ್ಕೆ ಸೇರಿದವರು ಮಾನವಕುಲದಲ್ಲಿ ಜನಿಸಿದವರೊ೦ದಿಗೆ ಪ್ರೇಮಪಾಶದಲ್ಲಿ ಸಿಲುಕಿಕೊಳ್ಳುವ೦ತಹ ಪ್ರಸ೦ಗಗಳು ಭಾರತೀಯ ಪೌರಾಣಿಕ ಕಥೆಗಳಲ್ಲಿ ಬಹು ಜನಪ್ರಿಯವಾಗಿವೆ. ಊರ್ವಶಿ ಪುರೂರವರ ಪ್ರೇಮ ಕಥೆ ದುರಂತ ಅಂತ್ಯವಾಗಿದ್ದು ಹೇಗೆ?

ವೀರ ಯೋಧ 'ಅರಾವಣನ'

ವೀರ ಯೋಧ 'ಅರಾವಣನ'

ಮಹಾಭಾರತದ ಮಹಾಯೋಧನಾದ ಸವ್ಯಸಾಚಿ, ಧನ೦ಜಯನೆ೦ದು ಕರೆಯಲ್ಪಡುವ ಅರ್ಜುನನ ಪುತ್ರನೇ ಈ ಅರಾವಣನಾಗಿದ್ದು, ಈತನು ಅರ್ಜುನ ಹಾಗೂ ಅರ್ಜುನನ ಪತ್ನಿಯಾದ ನಾಗಕನ್ನಿಕೆ ಉಲೂಪಿಯ ಮಗನಾಗಿದ್ದಾನೆ. ಕುತ್ತಾ೦ತವರದ ಪ್ರಧಾನದೇವತೆಯು ಅರಾವಣನಾಗಿದ್ದಾನೆ. ತ೦ದೆಯ೦ತೆ ಪುತ್ರನಾದ ಅರಾವಣನೂ ಸಹ ಮಹಾಭಯಾನಕ ಯೋಧನಾಗಿದ್ದನು. ಕುರುಕ್ಷೇತ್ರ ಯುದ್ಧದಲ್ಲಿ ಅರಾವಣನೂ ಸಹ ತನ್ನ ತ೦ದೆ ಹಾಗೂ ಇತರ ಪಾ೦ಡವರೊ೦ದಿಗೆ ಪಾಲ್ಗೊಳ್ಳುತ್ತಾನೆ. ಅರಾವಣನು ಯುದ್ಧದಲ್ಲಿ ವೀರಾವೇಶದಿ೦ದ ಹೋರಾಡಿ ಮಹಾನ್ ಉದ್ದೇಶಕ್ಕಾಗಿ ಆತ್ಮಾರ್ಪಣೆಯನ್ನು ಮಾಡಿಕೊಳ್ಳುತ್ತಾನೆ. ಮಹಾಭಾರತದ ವೀರ ಯೋಧ 'ಅರಾವಣನ' ರೋಚಕ ಕಥೆ

ಸ್ವಪ್ರೇರಣೆಯಿಂದ ಅಂಧಳಾದ ಗಾಂಧಾರಿ

ಸ್ವಪ್ರೇರಣೆಯಿಂದ ಅಂಧಳಾದ ಗಾಂಧಾರಿ

ಧೃತರಾಷ್ಟ್ರ ಮತ್ತು ಗಾಂಧಾರಿ ವಿಚಿತ್ರವೀರ್ಯನ ಮರಣಾನಂತರ ಆತನ ತಾಯಿ ಸತ್ಯವತಿ ತನ್ನ ಮೊದಲ ಮಗನಾದ ವೇದವ್ಯಾಸನಿಗೆ ಕೂಡಲೇ ಬರುವಂತೆ ಕರೆ ಕಳಿಸುತ್ತಾಳೆ. ತಾಯಿಯ ಕರೆಯನ್ನು ಮನ್ನಿಸಿ ಆಗಮಿಸುತ್ತಾನೆ. ತಾಯಿಯ ಬಯಕೆಯಂತೆ ವೇದವ್ಯಾಸ ವಿಚಿತ್ರವೀರ್ಯನ ಇಬ್ಬರು ಪತ್ನಿಯರಾದ ಅಂಬಿಕೆ ಮತ್ತು ಅಂಬೆಯರನ್ನು ಭೇಟಿಯಾಗಿ ಅದ್ಭುತ ಶಕ್ತಿಯುಳ್ಳ ಗಂಡು ಮಗುವೊಂದನ್ನು ಅಂಬಿಕೆಗೆ ಕರುಣಿಸುತ್ತಾನೆ. ವ್ಯಾಸನ ಭಯಾನಕ ರೂಪ ಮತ್ತು ಬೆದರಿಕೆಯೊಡ್ಡುವಂತಹಾ ಕಣ್ಣುಗಳನ್ನು ನೋಡಿದ ಅಂಬಿಕೆ ಭಯಭೀತಳಾಗಿ ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾಳೆ. ಇದರ ಪರಿಣಾಮವಾಗಿ ಆಕೆಗೆ ಹುಟ್ಟಿದ ಮಗು ಧೃತರಾಷ್ಟ್ರ ಹುಟ್ಟಿನಿಂದಲೇ ಅಂಧವಾಗಿರುತ್ತದೆ. ಮಹಾಭಾರತವನ್ನು ಬರೆದವರು ವೇದವ್ಯಾಸರೇ ಆಗಿದ್ದಾರೆ.ಪ್ರಾಪ್ರವಯಸ್ಕನಾದಾಗ ಭೀಷ್ಮ ಗಾಂಧಾರಿಯನ್ನು ಕರೆತಂದು ಧೃತರಾಷ್ಟ್ರನಿಗೆ ಮದುವೆ ಮಾಡಿಸುತ್ತಾನೆ. ತನ್ನ ಪತಿಗೆ ಇಲ್ಲದ ದೃಷ್ಟಿಯ ಯೋಗ ತನಗೂ ಬೇಡವೆಂದು ತೀರ್ಮಾನಿಸಿದ ತನ್ನ ನಂತರದ ಜೀವನದುದ್ದಕ್ಕೂ ಕಣ್ಣಿಗೆ ಪಟ್ಟಿಯನ್ನು ಕಟ್ಟಿಕೊಂಡು ಸ್ವಪ್ರೇರಣೆಯಿಂದ ಅಂಧಳಾಗಿ ಬದುಕುತ್ತಾಳೆ.

16,000 ಪತ್ನಿಯರ ಒಡೆಯ ಭಗವಾನ್ ಶ್ರೀಕೃಷ್ಣ

16,000 ಪತ್ನಿಯರ ಒಡೆಯ ಭಗವಾನ್ ಶ್ರೀಕೃಷ್ಣ

ಶ್ರೀಕೃಷ್ಣ ಮತ್ತು 16,108 ಪತ್ನಿಯರು ಶ್ರೀಕೃಷ್ಣನ 16,000 ಪತ್ನಿಯರಿದ್ದರಂತೆ. ಅವರಲ್ಲಿ 16,000 ಪತ್ನಿಯರು ಅವರ ಒಂದೇ ಜೀವಿತಾವಧಿಯಲ್ಲಿ ಪತ್ನಿಯರಾಗಿ ಬಂದಿರಲಿಲ್ಲ. ಇದಕ್ಕಾಗಿ ಅವರು ಹಲವಾರು ಜನ್ಮಗಳನ್ನು ಎತ್ತಬೇಕಾಯಿತು. ಎಲ್ಲರನ್ನೂ ಸಂತೋಷವಾಗಿಡಲು ಮತ್ತು ಎಲ್ಲರನ್ನೂ ಪ್ರೀತಿಸಲು ಸರ್ವಶಕ್ತನಾದ ಶ್ರೀಕೃಷ್ಣನು ಏಕಮಾತ್ರ ಪರಮಾತ್ಮನಾಗಿದ್ದಾನೆ.

English summary

Most interesting character in mahabharata

Mahabharata is one of the most renowned epics of India. It conveys an extraordinary example of morality, the difference between the good and bad deeds and their outcomes. here are the few Interesting things about Mahabharata..Read on to get the brief details about each of them:
Story first published: Tuesday, February 9, 2016, 16:57 [IST]
X
Desktop Bottom Promotion