For Quick Alerts
ALLOW NOTIFICATIONS  
For Daily Alerts

ಮೂಢನಂಬಿಕೆಯ ಸುಳಿಯಲ್ಲಿ ನಲುಗುತ್ತಿದೆ ನಮ್ಮ ಭಾರತ..!

|

ವಿವಿಧ ಧರ್ಮಗಳು ಹಾಗೂ ಆಚರಣೆಗಳ ಹೊರತಾಗಿಯೂ ಸಹ ಭಾರತ ದೇಶದಲ್ಲಿ ಮತ್ತಿತರ ಹಲವಾರು ಸ೦ಸ್ಕೃತಿ, ಸ೦ಪ್ರದಾಯಗಳು ಚಾಲ್ತಿಯಲ್ಲಿವೆ. ಅಲ್ಲದೆ ಇ೦ತಹ ಪರಿಸ್ಥಿತಿ ನಡುವೆಯೂ ಸಹ ಸಾರ್ವಭೌಮತ್ವ, ಜಾತ್ಯಾತೀತತೆ, ಹಾಗೂ ಏಕತೆ, ಸಮಗ್ರತೆಗಳನ್ನು ವಿವಿಧ ಹ೦ತಗಳಲ್ಲಿ ಕಾಪಾಡಿಕೊ೦ಡು ಬ೦ದಿರುವುದರ ಮೂಲಕ ನಮ್ಮ ದೇಶ ಜಗತ್ತಿಗೇ ಮಾದರಿಯಾಗಿದೆ. ಅಷ್ಟೇ ಏಕೆ, ಆಧುನಿಕ ವಿಜ್ಞಾನಕ್ಕೆ ಸಂಬಂಧಿಸಿದಂತೆ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತವು ಮತ್ತೊಂದು ಕಡೆಯಲ್ಲಿ ವಿಚಿತ್ರ ಆಚರಣೆಗಳಲ್ಲಿ ಅಗ್ರಸ್ಥಾನ ಪಡೆದಿದೆ..! ಅದೇ ಮೂಢನಂಬಿಕೆ.

ಹೌದು, ಇ೦ದಿನ ದಿನಮಾನಗಳಲ್ಲಿಯೂ ಸಹ ಮೂಢನಂಬಿಕೆಗಳ ಕಟ್ಟುಪಾಡಿಗೆ ಬಿದ್ದು, ಆಘಾತಕಾರಿ ಅಥವಾ ಕೆಟ್ಟ ಆಚರಣೆಗಳು ಹಾಗೂ ಸ೦ಪ್ರದಾಯಗಳು ಭಾರತ ದೇಶದಲ್ಲಿ ಅಲ್ಲಲ್ಲಿ, ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಅವು ಧರ್ಮ, ನ೦ಬಿಕೆಗಳ ಹೆಸರಿನಲ್ಲಿ ಹಾಗೂ ಇನ್ನು ಕೆಲವೊಮ್ಮೆ ದೇವರು/ಅಲ್ಲಾಹು/ಜೀಸಸ್ ಇವೇ ಮೊದಲಾದವರ ಹೆಸರಿನಲ್ಲಿ ನಡೆಯುತ್ತಿರುತ್ತದೆ..ಈ ಎಲ್ಲವನ್ನೂ ಕೇವಲ ಯಾವುದೇ ಒ೦ದು ಧರ್ಮವು ಮಾತ್ರವೇ ಪಾಲಿಸುತ್ತಿರುವುದಲ್ಲ. ಶೀಗೆ ಹುಣ್ಣಿಮೆಯಂದು ನದಿ ಸ್ನಾನ ಮಾಡ್ದೆ ಹೋದ್ರೆ...

ವಾಸ್ತವವಾಗಿ, ಹೆಚ್ಚುಕಡಿಮೆ ಎಲ್ಲಾ ಇತರ ಧರ್ಮಗಳೂ ಸಹ ಇ೦ತಹ ಆಚರಣೆಗಳಲ್ಲಿ ತೊಡಗಿಸಿಕೊ೦ಡಿವೆ. ಇವುಗಳ ಪೈಕಿ ಹೆಚ್ಚಿನವುಗಳನ್ನು ನೀವು ನಿಮ್ಮ ವಾಸಸ್ಥಳದಲ್ಲಿಯೇ ಕಾಣಬಹುದು. ದನಗಳನ್ನು ಮಾನವರ ಎದೆಯ ಮೇಲೆ ಓಡಿಸುವುದು, ತನ್ನನ್ನು ತಾನೇ ಚಾವಟಿಯಿ೦ದ ಹೊಡೆದುಕೊಳ್ಳುವುದು, ಬರೀ ಮೈಯಿ೦ದಲೇ ಕೊಳವೆ ದೀಪಗಳನ್ನು, ಗಾಜಿನ ಬಾಟಲಿಗಳನ್ನು ಒಡೆಯುವುದು ಇತ್ಯಾದಿ.

ಅದೂ ಅಲ್ಲದೆ ಇವೆಲ್ಲವನ್ನೂ ಸಾರ್ವಜನಿಕವಾಗಿ ನಡೆಸಲಾಗುತ್ತಿರುವುದು ಮತ್ತೊಂದು ವಿಪರ್ಯಾಸ. ಆದರೆ ಕೆಲವೊಂದು ಮೂಢನಂಬಿಕೆಗಳು ಮನುಷ್ಯನ ಜೀವಕ್ಕೆ ಅಪಾಯವನ್ನು ತಂದೊಡ್ಡಿದರೆ, ಇನ್ನು ಕೆಲವೊಂದು ನೆನಪಿಸಿಕೊಂಡರೆ ಸುಮ್ಮನೆ ನಗು ತರಿಸುತ್ತವೆ. ಹಾಗಾದರೆ ಆ ಮೂಢನಂಬಿಕೆಗಳು ಯಾವುವು ಎಂಬುದು ಸ್ಲೈಡ್ ಶೋ ನಿಮ್ಮ ನೆರವಿಗೆ ಬರಲಿದೆ...

ಅದೃಷ್ಟ ಖುಲಾಯಿಸಲು

ಅದೃಷ್ಟ ಖುಲಾಯಿಸಲು

ಅದೃಷ್ಟದ ಮೇಲೆ ನಂಬಿಕೆ ಒಳ್ಳೆಯದು. ಆದರೆ ಇದರ ಬಗ್ಗೆ ಒಮ್ಮೆ ಗಮನಹರಿಸಿ ಮತ್ತು ಇದು ಎಷ್ಟು ವಿಚಿತ್ರವೆನ್ನುವುದು ನಿಮಗೆ ತಿಳಿಯುತ್ತದೆ. ಹೌದು!! ಅದೃಷ್ಟ ಒಳ್ಳೆಯದಾಗಲು ಮಕ್ಕಳನ್ನು ದೊಡ್ಡ ಗೋಪುರದಿಂದ ಕೆಳಗೆ ಎಸೆಯುತ್ತಾರೆ. 50 ಅಡಿ ಎತ್ತರದ ಗೋಪುರದಿಂದ ಮಕ್ಕಳನ್ನು ಕೆಳಗೆ ಎಸೆಯುತ್ತಾರೆ. ಕೆಳಗಡೆ ಹಿಡಿಯುವ ದೊಡ್ಡ ಬಟ್ಟೆಗೆ ಮಕ್ಕಳು ಬಿದ್ದ ಬಳಿಕ ಅದನ್ನು ಪೋಷಕರಿಗೆ ನೀಡುತ್ತಾರೆ. ಹೀಗೆ ಮಾಡುವುದರಿಂದ ಮಕ್ಕಳಿಗೆ ಆರೋಗ್ಯ ಮತ್ತು ಸಂಪತ್ತು ಬರುತ್ತದೆಯೆಂದು ನಂಬಿಕೆಯಿದೆ.

ಮೋಕ್ಷಕ್ಕಾಗಿ ನಗ್ನರಾಗುವುದು

ಮೋಕ್ಷಕ್ಕಾಗಿ ನಗ್ನರಾಗುವುದು

ಇದು ಭಾರತದಲ್ಲಿರುವ ವಿಚಿತ್ರ ಆಚರಣೆಗಳಲ್ಲಿ ಒಂದಾಗಿದೆ. ದಿಗಂಬರ ಋಷಿಗಳು ಬೆತ್ತಲಾಗಿರಬೇಕೆಂದು ಭಾವಿಸುತ್ತಾರೆ. ಜಗತ್ತಿನ ಎಲ್ಲಾ ಮೋಹವನ್ನು ತ್ಯಜಿಸಿ ಮೋಕ್ಷ ಪಡೆಯಲು ಇದು ಹಾದಿಯೆನ್ನಲಾಗುತ್ತದೆ. ಮಹಿಳೆಯರು ನಗ್ನರಾಗಲು ಸಾಧ್ಯವಿಲ್ಲದ ಕಾರಣ ಅವರಿಗೆ ಮೋಕ್ಷವಿಲ್ಲ. ಅವರಿಗೆ ಮೋಕ್ಷ ಸಿಗಬೇಕಾದರೆ ಮತ್ತೊಂದು ಜನ್ಮದಲ್ಲಿ ಪುರುಷರಾಗಿ ಹುಟ್ಟಿಬರಬೇಕು.

 ಕರಿ ಬಣ್ಣದ ಬೆಕ್ಕು ಅಡ್ಡ ಬಂದರೆ

ಕರಿ ಬಣ್ಣದ ಬೆಕ್ಕು ಅಡ್ಡ ಬಂದರೆ

ಜನಪ್ರಿಯ ಮೂಢನಂಬಿಕೆಗಳಲ್ಲಿ ಒಂದು ಕರಿ ಬಣ್ಣದ ಬೆಕ್ಕು ಅಡ್ಡ ಬರುವುದು. ನಾವು ಹೋಗುತ್ತಿರುವ ದಾರಿಗೆ ಅಡ್ಡವಾಗಿ ಒಂದು ಕರಿ ಬೆಕ್ಕು ದಾಟಿದರೆ ಅದು ನಮಗೆ ಕೆಟ್ಟದ್ದಾಗುತ್ತದೆಂದು ಹೇಳುತ್ತಾರೆ. ಕರಿ ಬೆಕ್ಕು ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ ಅದರಲ್ಲೂ ನೀವು ವಿಶೇಷವಾಗಿ ಒಂದು ಒಳ್ಳೆಯ ಕಾರ್ಯಕ್ಕೆ ಹೊರಟಿದ್ದಾಗ ಕರಿ ಬಣ್ಣದ ಬೆಕ್ಕು ಅಡ್ಡ ಬರುವುದು ಅಶುಭ ಮತ್ತು ಹೋಗುವ ಕಾರ್ಯ ವಿಫಲವಾಗುವುದೆಂಬ ನಂಬಿಕೆ.

ಉಗುರುಗಳನ್ನು ಕತ್ತರಿಸುವುದು

ಉಗುರುಗಳನ್ನು ಕತ್ತರಿಸುವುದು

ವಾರದ ನಿರ್ದಿಷ್ಟ ದಿನಗಳಲ್ಲಿ ಅಥವಾ ಸೂರ್ಯಾಸ್ತದ ನಂತರ ಉಗುರನ್ನು ಕತ್ತರಿಸಿಬಾರದೆನ್ನುವುದು ಇನ್ನೊಂದು ಸಾಮಾನ್ಯ ಮೂಢನಂಬಿಕೆ. ಮಂಗಳವಾರ, ಗುರುವಾರ ಮತ್ತು ಶನಿವಾರ ಉಗುರನ್ನು ಕತ್ತರಿಸಬಾರದೆಂದು ಬಹುಮಟ್ಟಿಗೆ ನಂಬುತ್ತಾರೆ. ಹಾಗೆ ಕತ್ತರಿಸಿದರೆ ದುರಾದೃಷ್ಟ ಬರುವುದೆಂದು ನಂಬಿದ್ದಾರೆ. ಹಾಗೆಯೇ ಸೂರ್ಯಾಸ್ತದ ನಂತರವೂ ಕೂಡ ಉಗುರನ್ನು ಕತ್ತರಿಸುವುದನ್ನು ನಿಷೇಧಿಸಲಾಗಿದೆ.

ಮುಟ್ಟಿನ ಬಗ್ಗೆ ಇರುವ ಮೂಢನಂಬಿಕೆ

ಮುಟ್ಟಿನ ಬಗ್ಗೆ ಇರುವ ಮೂಢನಂಬಿಕೆ

ತಿಂಗಳಿನ ಮುಟ್ಟು ಮಹಿಳೆಯರಿಗೆ ಸಂಭಂದಪಟ್ಟ ಮೂಢನಂಬಿಕೆ ಒಂದು ಕೀಳಾದ ಮತ್ತು ಪುರುಷ ಪ್ರಾಧಾನ್ಯವಾದದ್ದು. ಮೇಲ್ನೋಟಕ್ಕೆ ಮುಟ್ಟಿನ ಮಹಿಳೆಯರು ಅಶುದ್ಧಿ ಮತ್ತು ಅಶುಚಿಯೆಂದು ಪರಿಗಣಿಸಲಾಗಿದೆ. ಅಂತಹ ಮಹಿಳೆಯರನ್ನು ಅಡುಗೆಮನೆಯೊಳಗೆ ಸೇರಿಸುವುದಿಲ್ಲ ಮತ್ತು ಅವರಿಗೆ ಯಾವುದೇ ಮಂಗಳಕರ ಕೆಲಸ ಕಾರ್ಯವನ್ನು ಮಾಡಲು ಅನುಮತಿ ಇರುವುದಿಲ್ಲ. ಹಿಂದಿನ ಕಾಲದಲ್ಲಿ ಅಂತಹ ಮಹಿಳೆಯರ ಮುಖವನ್ನು ನೋಡುವುದೂ ಕೂಡ ಅಪಶಕುನವೆಂದು ಹೇಳುತ್ತಿದ್ದರು. ಹಾಗೆಂದು ಹಿಂದಿನ ಕಾಲದಲ್ಲಿ ಮುಟ್ಟು ಆಗುತ್ತಿರುವ ಮಹಿಳೆಯರು ಕುಟುಂಬದ ಇತರ ಸದಸ್ಯರಿಗೆ ಕಾಣಬಾರದೆಂದು ಮನೆಯ ಒಂದು ಪ್ರತ್ಯೇಕ ಮತ್ತು ಏಕಾಂತ ಕೋಣೆಯಲ್ಲಿ ಇಡುತ್ತಿದ್ದರು.

English summary

Most Common Superstitious Beliefs in India

Like any other countries, you will find a lot of superstitions and blind beliefs in people of India. The number of superstitions and blind beliefs in India is very large as the Indian society is made of people belonging to various religious, cultural, ethnic, linguistic and racial groups. There are many common superstitions in the people belonging to various groups. On the other hand each group has some special blind beliefs and superstitions.
Story first published: Tuesday, September 29, 2015, 16:48 [IST]
X
Desktop Bottom Promotion