For Quick Alerts
ALLOW NOTIFICATIONS  
For Daily Alerts

ಮಹಾಭಾರತದಲ್ಲಿ ವರ್ಣಿಸಲಾದ ಸುರಸುಂದರಿಯರ ಕಥೆ

By Manu
|

ಭಾರತದ ಎರಡು ಬೃಹತ್ ಗ್ರಂಥಗಳೆಂದರೆ ರಾಮಾಯಣ ಮತ್ತು ಮಹಾಭಾರತ. ಅದರಲ್ಲೂ ನೀತಿ, ಸನ್ನಡತೆ, ಉತ್ತಮ ಮತ್ತು ಕೆಟ್ಟ ಗುಣಗಳ ನಡುವೆ ಆಯ್ಕೆ, ಸತ್ಕರ್ಮ ಮತ್ತು ಅದರ ಫಲ ಮೊದಲಾದವುಗಳನ್ನು ಮಹಾಭಾರತದಲ್ಲಿ ಅತ್ಯಂತ ಸಮರ್ಪಕ ರೀತಿಯಲ್ಲಿ ವಿವರಿಸಲಾಗಿದೆ. ಮಹಾಭಾರತದ ಪಾತ್ರಗಳಲ್ಲಿ ಹಲವಾರು ಮಹಿಳೆಯರ ವರ್ಣನೆಯಿದ್ದು ಇದರಲ್ಲಿ ಸಾಹಸ, ಮೈಮಾಟ, ಸೌಂದರ್ಯ, ಚತುರತೆ, ಪಾತಿವ್ರ್ಯತೆ ಮತ್ತು ಮಾತೃವಾತ್ಸಲ್ಯ ಮೊದಲಾದ ಗುಣಗಳನ್ನು ಬಿಂಬಿಸಲಾಗಿದೆ. ಇದರಲ್ಲಿ ಹಲವು ಮಹಿಳೆಯ ಪಾತ್ರ ಅನುಕರಣೀಯವಾಗಿದ್ದು ಇಂದಿಗೂ ಆದರ್ಶಪ್ರಾಯವಾಗಿದೆ. ಸ್ವಾರಸ್ಯಕರ-ರೋಚಕ ಕಥಾನಕಗಳ ಭಂಡಾರ 'ಮಹಾಭಾರತ'

ಅಂದಿನ ದಿನಗಳಲ್ಲಿ ಸಮಾಜ ಪುರುಷಪ್ರಧಾನವಾಗಿದ್ದು ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ಇಲ್ಲದಿದ್ದಾಗಲೂ ಈ ಮಹಿಳೆಯರು ದಿಟ್ಟತನದಿಂದ ಸಮಾನತೆ ಹಾಗೂ ತಮ್ಮ ಹಕ್ಕುಗಳಿಗಾಗಿ ತಮ್ಮ ದನಿಯನ್ನು ಎತ್ತರಿಸಿರುವ ಬಗ್ಗೆಯೂ ಮಹಾಭಾರತದಲ್ಲಿ ವರ್ಣನೆಯಿದೆ. ತಮ್ಮ ದಿಟ್ಟ ನಿರ್ಧಾರ, ಸ್ವಂತಿಕೆ ಮತ್ತು ಧೈರ್ಯದಿಂದ ಸಮಾಜ ಮತ್ತು ಅಂದಿನ ಪರಿಸ್ಥಿತಿಗಳನ್ನು ಎದುರಿಸಿದ ಈ ಮಹಿಳೆಯರ ಬಗ್ಗೆ ಹಲವಾರು ಕಥಗಳನ್ನು ಬರೆಯಲಾಗಿದೆ.

ಭಕ್ತಿ, ವಿಶ್ವಾಸ, ಧೈರ್ಯ, ದಿಟ್ಟತನ ಮೊದಲಾದ ಗುಣಗಳನ್ನು ಈ ಕಥೆಗಳು ವರ್ಣಿಸುತ್ತವೆ. ಅದರಲ್ಲೂ ಈ ಮಹಿಳೆಯರ ಸೌಂದರ್ಯಕ್ಕೆ ಮಾರುಹೋಗಿ ರಾಜ್ಯವನ್ನೇ ಕಳೆದುಕೊಂಡ, ಪರೋಕ್ಷವಾಗಿ ಮದುವೆಯನ್ನೇ ಆಗದ (ಭೀಷ್ಮ) ಕಥೆಗಳೂ ಇವೆ. ಬನ್ನಿ, ಈ ಮಹಿಳೆಯರ ಬಗ್ಗೆ ಮಹಾಭಾರತದಲ್ಲಿ ನೀಡಲಾದ ವರ್ಣನೆಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ..

ದ್ರೌಪದಿ

ದ್ರೌಪದಿ

ಪಾಂಚಾಲಿ ಎಂಬ ಹೆಸರನ್ನೂ ಪಡೆದ ದ್ರೌಪದಿ ಮಹಾಭಾರತದಲ್ಲಿ ವರ್ಣಿಸಲಾದ ಒಂಭತ್ತು ಅತಿ ಸುಂದರಿಯರಲ್ಲಿ ಒಬ್ಬಳು. ಪಾಂಚಾಲ ರಾಜ್ಯದ ರಾಜ ದ್ರುಪದನ ಮಗಳಾದ ದ್ರೌಪದಿಯ ಪಾತ್ರ ಮಹಾಭಾರತದ ಎರಡನೆಯ ಭಾಗದಲ್ಲಿ ಮಹತ್ತರವಾಗಿದೆ. ದ್ರೌಪದಿಯ ಸ್ವಯಂವರದಲ್ಲಿ ಅರ್ಜುನ ದ್ರೌಪದಿಯನ್ನು ವರಿಸಿದ್ದು ತಾಯಿಯ ಆಜ್ಞೆಯಂತೆ ಐವರು ಸಹೋದರರಿಗೂ ಆಕೆ ಪತ್ನಿಯಾಗುತ್ತಾಳೆ. ಕೌರವರು ಆಕೆಯ ವಸ್ತ್ರಾಪಹರಣ ಮಾಡುತ್ತಿದ್ದ ಸಮಯದಲ್ಲಿ ಅವಮಾನದಿಂದ ರಕ್ಷಿಸಿದ ಕೃಷ್ಣನನ್ನು ಆಕೆ ಅತಿಯಾಗಿ ಆರಾಧಿಸುತ್ತಾಳೆ. ಯಜ್ಞಕುಂಡದಿಂದ ಆವಿರ್ಭವಿಸಿದ ದ್ರೌಪದಿಯ ಜನ್ಮ ರಹಸ್ಯ

ಊರ್ವಶಿ

ಊರ್ವಶಿ

ಇಂದ್ರನ ಆಸ್ಥಾನದ ಅಪ್ಸರೆಯಾಗಿದ್ದ ಊರ್ವಶಿ ಮಹಾಭಾರತದಲ್ಲಿ ವಿವರಿಸಲಾದಂತೆ ಅತ್ಯಂತ ಸುಂದರ ಯುವತಿಯಾಗಿದ್ದಳು. ಆಕೆಯೂ ಅರ್ಜುನನನ್ನು ಮೋಹಿಸಿ ತನ್ನ ಸೌಂದರ್ಯದಿಂದ ಆತನ ಹೃದಯ ಗೆಲ್ಲಲು ಯತ್ನಿಸಿದ್ದಳು. ಆದರೆ ಆಕೆಯ ಆಹ್ವಾನವನ್ನು ಅರ್ಜುನ ನಿರಾಕರಿಸಿದ ಕಾರಣ ಆಕೆ ಕುಪಿತಳಾಗಿ ತನ್ನ ಪುರುಷತ್ವ ಕಳೆದುಕೊಳ್ಳಲಿ ಎಂದು ಶಾಪ ನೀಡಿದ್ದಳು. ಊರ್ವಶಿ ಪುರೂರವರ ಪ್ರೇಮ ಕಥೆ ದುರಂತ ಅಂತ್ಯವಾಗಿದ್ದು ಹೇಗೆ?

ಕುಂತಿ

ಕುಂತಿ

ಮಹಾಭಾರತದಲ್ಲಿ ವರ್ಣಿಸಲಾದ ಒಂಭತ್ತು ಸುಂದರಿಯರಲ್ಲಿ ಕುಂತಿ ಸಹಾ ಒಬ್ಬಳು. ತಾರುಣ್ಯದಲ್ಲಿ ಸೂರ್ಯದೇವನನ್ನು ಆಟದ ಹುಮ್ಮಸ್ಸಿನಲ್ಲಿಯೇ ಮಗುವೊಂದು ಬೇಕೆಂದು ಕೇಳಿಕೊಂಡ ಪರಿಣಾಮವಾಗಿ ಕರ್ಣನ ಜನ್ಮವಾಯಿತು. ವಿವಾಹಕ್ಕೂ ಮೊದಲು ಸೂರ್ಯದೇವನ ಮೂಲಕ ಮಗುವೊಂದರ ತಾಯಿಯಾಗಿದ್ದು ಅಂದಿನ ದಿನಗಳಲ್ಲಿ ಇದನ್ನು ಸಮಾಜ ಸ್ವೀಕರಿಸುತ್ತಿರಲಿಲ್ಲ. ಆದ್ದರಿಂದ ಈ ಮಗುವನ್ನು ಬುಟ್ಟಿಯಲ್ಲಿಟ್ಟು ನದಿಯಲ್ಲಿ ತೇಲಿಸಿ ಬಿಟ್ಟಿದ್ದಳು.

ಉಲೂಪಿ

ಉಲೂಪಿ

ನಾಗಲೋಕದ ರಾಜಕುಮಾರಿಯಾದ ಉಲೂಪಿ ಸಹಾ ಅತ್ಯಂತ ಸುಂದರಿಯಾಗಿದ್ದು ಅರ್ಜುನನನ್ನು ಮೋಹಿಸಿ ಆತನನ್ನು ವಿವಾಹವಾಗಲು ಇಚ್ಛಿಸಿದ್ದಳು. ಇದಕ್ಕಾಗಿ ಕೆಲವು ಮತ್ತು ಬರುವ ಪೇಯಗಳನ್ನು ಕುಡಿಸಿ ಆತನನ್ನು ಅಪಹರಿಸಿ ಬಳಿಕ ಆತನನ್ನು ವರಿಸುವ ಬಗ್ಗೆ ಪ್ರಸ್ತಾಪವೆತ್ತಿದ್ದಳು. ಅರ್ಜುನ ಉಲೂಪಿಯರ ಕುತೂಹಲ ಕೆರಳಿಸುವ ಪ್ರೇಮ ಕಥೆ

ಸುಭದ್ರೆ

ಸುಭದ್ರೆ

ಕೃಷ್ಣ ಬಲರಾಮರ ಸಹೋದರಿಯಾಗಿದ್ದ ಸುಭದ್ರೆಯೂ ಮಹಾಭಾರತದ ಓರ್‍ವ ಸೌಂದರ್ಯವತಿಯಾಗಿದ್ದಾಳೆ. ಆಕೆಯ ಸೌಂದರ್ಯಕ್ಕೆ ಮನಸೋತ ಅರ್ಜುನ ಆಕೆಯನ್ನು ವಿವಾಹವಾಗಲು ಬಯಸುತ್ತಾನೆ. ಆದರೆ ಕೃಷ್ಣ ಅರ್ಜುನನಿಗೆ ಸುಭದ್ರೆಯನ್ನು ಅಪಹರಿಸಿ ವರಿಸಲು ಸಲಹೆ ನೀಡುತ್ತಾನೆ. ಏಕೆಂದರೆ ಸುಭದ್ರೆಯನ್ನು ಬಲರಾಮ ತನ್ನ ನೆಚ್ಚಿನ ಶಿಷ್ಯನಾದ ಕೌರವ ದುರ್ಯೋಧನನಿಗೆ ವಿವಾಹಮಾಡಿಕೊಡುವ ಇರಾದೆಯಿತ್ತು ಮತ್ತು ಈ ಇರಾದೆ ಕೃಷ್ಣನಿಗೆ ಇಷ್ಟವಿರಲಿಲ್ಲ.

English summary

Most Beautiful Women Of Mahabharata

Mahabharata is one of the most renowned epics of India. It conveys an extraordinary example of morality, the difference between the good and bad deeds and their outcomes. There are some exemplary women characters in Mahabharata who are the epitome of courage, elegance, beauty and intelligence. Even in today's world, these women characters can be taken as ideal examples as to how a woman must lead her life with courage. Read on to get the brief details about each of them:
X
Desktop Bottom Promotion