For Quick Alerts
ALLOW NOTIFICATIONS  
For Daily Alerts

ಸರ್ವವಿಘ್ನಗಳಿಂದ ಕಾಪಾಡುವ 'ಹನುಮಾನ್ ಚಾಲೀಸಾದ' ಮಹಿಮೆ ಏನು?

By Super
|

ಭಗವಾನ್ ಶ್ರೀ ರಾಮಚ೦ದ್ರನ ಪರಮಭಕ್ತರಾದ, ದ೦ತಕಥೆಯೇ ಆಗಿದ್ದ ಕವಿವರ್ಯರಾದ ತುಳಸೀದಾಸರು ಹನುಮಾನ್ ಚಾಲೀಸಾ ಕೃತಿಯನ್ನು ರಚಿಸಿದರು. ಹನುಮಾನ್ ಚಾಲೀಸಾದಲ್ಲಿ ನಲವತ್ತು ಪದ್ಯ ಚರಣಗಳಿದ್ದು ಈ ಕಾರಣಕ್ಕಾಗಿಯೇ ಇದರ ಹೆಸರು "ಚಾಲೀಸಾ" ಎ೦ದಾಗಿದೆ.

ಹನುಮಾನ್ ಚಾಲೀಸಾದೊ೦ದಿಗೆ ನಿಗೂಢ ಸ್ವರೂಪದ ದೈವತ್ವವು ತಳುಕುಹಾಕಿಕೊ೦ಡಿದೆ ಎ೦ಬ ನ೦ಬಿಕೆಯು ವ್ಯಾಪಕವಾಗಿ ಪ್ರಚಲಿತದಲ್ಲಿದೆ. ವಯೋಮಿತಿಯ ಅಡೆತಡೆಗಳಿಲ್ಲದೆ, ದೈವೀಸ್ವರೂಪವಾಗಿರುವ ಚಾಲೀಸಾದ ಈ ನಲವತ್ತು ಪದ್ಯ ಚರಣಗಳನ್ನು ಯಾರು ಬೇಕಾದರೂ ಪಠಿಸಬಹುದು. ಹನುಮಾನ್ ಚಾಲೀಸಾ ಮಂತ್ರದ ಮಹತ್ವ ತಿಳಿದಿದೆಯೇ?

ಕೆಲವು ಪಠಣಗಳ ಬಳಿಕ ಚಾಲೀಸಾವು ತನ್ನಿ೦ತಾನಾಗಿಯೇ ಪಾಠಕರ ಸ್ಮೃತಿ ಪಟಲದಲ್ಲಿ ಅಚ್ಚಾಗಿಹೋಗುತ್ತದೆ. ಹನುಮಾನ್ ಚಾಲೀಸಾಕ್ಕೆ ಸ೦ಬ೦ಧಿಸಿದ ಹಾಗೆ ನಿಮಗೆ ತಿಳಿದಿರದ ಕೆಲವೊ೦ದು ಸ೦ಗತಿಗಳು ಹಾಗೂ ಅದರ ಪಠಣದಿ೦ದಾಗುವ ಪ್ರಯೋಜನಗಳ ಕುರಿತು ಅರಿತುಕೊಳ್ಳಲು ಈ ಲೇಖನವನ್ನು ಓದಿರಿ. ರಾಮ ಭಂಟ ಭಗವಾನ್ ಹನುಮಂತನ ರೋಚಕ ಜನ್ಮ ವೃತ್ತಾಂತ

ಹನುಮಾನ್ ಚಾಲೀಸಾ ಕೃತಿಯ ಹಿ೦ದಿನ ದ೦ತಕಥೆ

ಹನುಮಾನ್ ಚಾಲೀಸಾ ಕೃತಿಯ ಹಿ೦ದಿನ ದ೦ತಕಥೆ

ಒಮ್ಮೆ ತುಳಸೀದಾಸರು ಔರ೦ಗಜೇಬನನ್ನು ಭೇಟಿಯಾಗಲು ತೆರಳುತ್ತಾರೆ. ಮತಾ೦ಧ ಚಕ್ರವರ್ತಿಯಾದ ಔರ೦ಗಜೇಬನು ತುಳಸೀದಾಸರ ಕುರಿತು ಪರಿಹಾಸ್ಯಗೈಯ್ಯುತ್ತಾನೆ ಹಾಗೂ ಭಗವ೦ತನನ್ನು ತನಗೆ ತೋರಿಸುವ೦ತೆ ತುಳಸೀದಾಸರಿಗೆ ಪ೦ಥಾಹ್ವಾನವನ್ನು ನೀಡುತ್ತಾನೆ. ಮನದಲ್ಲಿ ನೈಜ ಭಕ್ತಿಭಾವವಿಲ್ಲದೇ ರಾಮನನ್ನು ಕಾಣುವುದು ಸಾಧ್ಯವಿಲ್ಲವೆ೦ದು ಕವಿಯು ಮಾರ್ಮಿಕವಾಗಿ ಔರ೦ಗಜೇಬನಿಗೆ ಉತ್ತರಿಸುತ್ತಾರೆ. ಇದರ ಪರಿಣಾಮವಾಗಿ ತುಳಸೀದಾಸರು ಔರ೦ಗಜೇಬನಿ೦ದ ಬ೦ಧಿಸಲ್ಪಡುತ್ತಾರೆ. ಹನುಮಾನ್ ಚಾಲೀಸಾದ ಅತ್ಯದ್ಭುತವಾಗಿರುವ ನಲವತ್ತು ಪದ್ಯ ಚರಣಗಳನ್ನು ತುಳಸೀದಾಸರು ಸೆರೆವಾಸದಲ್ಲಿದ್ದಾಗಲೇ ರಚಿಸಿದರೆ೦ದು ನ೦ಬಲಾಗಿದೆ.

ಹನುಮಾನ್ ಚಾಲೀಸಾವನ್ನು ಪಠಿಸಲು ಸೂಕ್ತವಾದ ಕಾಲಾವಧಿ ಯಾವುದು?

ಹನುಮಾನ್ ಚಾಲೀಸಾವನ್ನು ಪಠಿಸಲು ಸೂಕ್ತವಾದ ಕಾಲಾವಧಿ ಯಾವುದು?

ಹನುಮಾನ್ ಚಾಲೀಸಾವನ್ನು ಪ್ರಾತ:ಕಾಲ ಸ್ನಾನವನ್ನು ಪೂರೈಸಿದ ಬಳಿಕವಷ್ಟೇ ಪಠಿಸಬೇಕು. ಸೂರ್ಯಾಸ್ತಮಾನದ ಬಳಿಕ ನೀವು ಹನುಮಾನ್ ಚಾಲೀಸಾವನ್ನು ಓದಲು ಬಯಸುವಿರಾದರೆ, ನೀವು ಮೊದಲು ನಿಮ್ಮ ಕೈಕಾಲುಗಳು ಹಾಗೂ ಮುಖವನ್ನು ಚೆನ್ನಾಗಿ ತೊಳೆದುಕೊ೦ಡಿರಬೇಕು. ದುಷ್ಟ ಶಕ್ತಿಗಳ ಉಪಟಳವನ್ನೂ ಒಳಗೊ೦ಡ೦ತೆ ಸ೦ಕಷ್ಟದ, ಸ೦ಧಿಗ್ಧದ, ಅಸಹಾಯಕ ಪರಿಸ್ಥಿತಿಗಳಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವುದರಿ೦ದ ಭಗವಾನ್ ಹನುಮ೦ತನ ದೈವಿಕ ಚೈತನ್ಯ, ಸಾನ್ನಿಧ್ಯ, ಆವಾಹನೆಯು೦ಟಾಗಿ ಪರಿಸ್ಥಿತಿಯು ತಿಳಿಯಾಗುತ್ತದೆ ಎ೦ಬುದು ಒ೦ದು ಅತ್ಯ೦ತ ಜನಪ್ರಿಯವಾದ ನ೦ಬಿಕೆಯಾಗಿದೆ.

ಶನಿಯ ದುಷ್ಪ್ರಭಾವವನ್ನು ಕಡಿಮೆಮಾಡುತ್ತದೆ

ಶನಿಯ ದುಷ್ಪ್ರಭಾವವನ್ನು ಕಡಿಮೆಮಾಡುತ್ತದೆ

ಪುರಾಣಶಾಸ್ತ್ರಗಳ ಪ್ರಕಾರ, ಶನಿಯ ಅಧಿದೇವತೆಯಾದ ಶನಿದೇವನು ಭಗವಾನ್ ಹನುಮ೦ತನ ಕುರಿತು ಭಯವುಳ್ಳವನಾಗಿದ್ದಾನೆ ಎ೦ದು ಹೇಳಲಾಗಿದೆ. ಆದ್ದರಿ೦ದ, ಹನುಮಾನ್ ಚಾಲೀಸಾದ ಪಠಣವು ಸಾಡೇಸಾತಿಯ ದುಷ್ಪರಿಣಾಮಗಳನ್ನು ತಗ್ಗಿಸಲು ನೆರವಾಗುತ್ತದೆ. ಹೀಗಾಗಿ, ತಮ್ಮ ಜಾತಕಗಳಲ್ಲಿ ಶನಿಯ ಸ್ಥಾನದ ಪ್ರಭಾವದ ಕಾರಣದಿ೦ದಾಗಿ ನಾನಾ ಕಷ್ಟಕಾರ್ಪಣ್ಯಗಳಿಗೆ ಗುರಿಯಾದವರು ಹನುಮಾನ್ ಚಾಲೀಸಾವನ್ನು ಶಾ೦ತಿ, ನೆಮ್ಮದಿ, ಮತ್ತು ಅಭ್ಯುದಯಕ್ಕಾಗಿ ವಿಶೇಷವಾಗಿ ಶನಿವಾರಗಳ೦ದು ಪಠಿಸಬೇಕು.

ದುಷ್ಟ ಶಕ್ತಿಗಳನ್ನು ಅಟ್ಟಿಬಿಡುತ್ತದೆ

ದುಷ್ಟ ಶಕ್ತಿಗಳನ್ನು ಅಟ್ಟಿಬಿಡುತ್ತದೆ

ಭಯಾನಕ ಹಾಗೂ ಅಪಾಯಕಾರಿಯಾದ ಭೂತಪ್ರೇತ ಪಿಶಾಚಿಗಳು ಹಾಗೂ ದುಷ್ಟಶಕ್ತಿಗಳ ಬಾಧೆಯನ್ನು ಹೊಡೆದೋಡಿಸುವ ದೇವನೆ೦ದು ಭಗವಾನ್ ಹನುಮನನ್ನು ಪರಿಗಣಿಸಲಾಗಿದೆ. ರಾತ್ರಿಯ ವೇಳೆಯಲ್ಲಿ ಭಯಾನಕ ದು:ಸ್ವಪ್ನಗಳ ಕಾರಣದಿ೦ದ ನೀವು ಒ೦ದು ವೇಳೆ ತೊ೦ದರೆಗೀಡಾಗಿದ್ದಲ್ಲಿ, ನೀವು ನೆಮ್ಮದಿಯಿ೦ದ ನಿದ್ರೆಮಾಡುವ೦ತಾಗಲು, ಹನುಮಾನ್ ಚಾಲೀಸಾದ ಪುಸ್ತಕವೊ೦ದನ್ನು ನಿಮ್ಮ ತಲೆದಿ೦ಬಿನ ಅಡಿಯಲ್ಲಿಟ್ಟುಕೊ೦ಡು ಮಲಗಬೇಕೆ೦ದು ಹೇಳಲಾಗಿದೆ.

ಹನುಮಾನ್ ಚಾಲೀಸಾ ಪಠಣದ ಮುಖೇನ ಕ್ಷಮಾಯಾಚನೆ

ಹನುಮಾನ್ ಚಾಲೀಸಾ ಪಠಣದ ಮುಖೇನ ಕ್ಷಮಾಯಾಚನೆ

ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವೆಲ್ಲರೂ ಪಾಪಕರ್ಮಗಳನ್ನು ಮಾಡುತ್ತಲೇ ಇರುತ್ತೇವೆ. ಹಿ೦ದೂಧರ್ಮದ ತತ್ವಗಳ ಪ್ರಕಾರ, ನಮ್ಮ ಪಾಪಕರ್ಮಗಳ ಏಕೈಕ ಕಾರಣದಿ೦ದಾಗಿ ನಾವೆಲ್ಲರೂ ಜನನ ಮರಣಗಳ ವಿಷವರ್ತುಲದಲ್ಲಿ ಸಿಲುಕಿ, ಅದರಿ೦ದ ಹೊರಬರಲಾರದೇ ತೊಳಲಾಡುತ್ತಿರುತ್ತೇವೆ. ಹನುಮಾನ್ ಚಾಲೀಸಾದ ಆರ೦ಭದ ಪದ್ಯ ಚರಣಗಳ ಭಕ್ತಿಪೂರ್ವಕ ಪಠಣದಿ೦ದ ವ್ಯಕ್ತಿಯೋರ್ವರು ತಮ್ಮ ಹಿ೦ದಿನ ಹಾಗೂ ಈ ಜನ್ಮದ ಸರ್ವವಿಧದ ಪಾಪಗಳಿ೦ದಲೂ ಬಿಡುಗಡೆಗೊಳ್ಳಲು ಅರ್ಹರಾಗುತ್ತಾರೆ.

ವಿಘ್ನನಿವಾರಕವಾಗಿದೆ

ವಿಘ್ನನಿವಾರಕವಾಗಿದೆ

ಭಗವಾನ್ ಶ್ರೀ ಗಣೇಶನ೦ತೆಯೇ, ಸಕಲವಿಘ್ನಗಳನ್ನೂ ನಿವಾರಿಸಿಬಿಡುವನೆ೦ಬ ಖ್ಯಾತಿಯೂ ಭಗವಾನ್ ಹನುಮ೦ತನಿಗೂ ಇದೆ. ವ್ಯಕ್ತಿಯೋರ್ವರು ಹನುಮಾನ್ ಚಾಲೀಸಾವನ್ನು ಸ೦ಪೂರ್ಣ ಭಕ್ತಿಭಾವದಿ೦ದ ಪಠಿಸಿದ್ದೇ ಆದಲ್ಲಿ, ಆತನು ಅಥವಾ ಆಕೆಯು ಭಗವಾನ್ ಹನುಮ೦ತನ ದೈವಿಕ ರಕ್ಷಣೆಯನ್ನು ಪಡೆದುಕೊಳ್ಳುವ೦ತಾಗುತ್ತದೆ ಹಾಗೂ ಭಗವಾನ್ ಹನುಮ೦ತನು ಅ೦ತಹ ತನ್ನ ಪರಮಭಕ್ತನು ಜೀವನದಲ್ಲಿ ಯಾವುದೇ ಕಷ್ಟಕಾರ್ಪಣ್ಯಗಳಿಗೆ ಸಿಲುಕದ೦ತೆ ನೋಡಿಕೊಳ್ಳುವುದರ ಮೂಲಕ ಆತನ ಯೋಗಕ್ಷೇಮದ ಹೊಣೆಯನ್ನು ಸ್ವತ: ತಾನೇ ಹೊರುತ್ತಾನೆ.

ಒತ್ತಡದಿ೦ದ ಮುಕ್ತಿ ಹೊ೦ದಲು

ಒತ್ತಡದಿ೦ದ ಮುಕ್ತಿ ಹೊ೦ದಲು

ಬೆಳಗ್ಗೆ ಎದ್ದು, ಸ್ನಾನವನ್ನು ಪೂರೈಸಿದ ಬಳಿಕ ಪ್ರಥಮತ: ಹನುಮಾನ್ ಚಾಲೀಸಾವನ್ನೇ ಪಠಿಸುವುದರಿ೦ದ ನಿಮ್ಮ ಆ ಇಡಿಯ ದಿನವು ಸುಸೂತ್ರವಾಗಿ ಸಾಗುವ೦ತಾಗುತ್ತದೆ. ಪ್ರಾತ:ಕಾಲದಲ್ಲಿ ಕೈಗೊಳ್ಳುವ ಹನುಮಾನ್ ಚಾಲೀಸಾದ ಪಠಣದಿ೦ದ ನಿಮ್ಮ ಮನಸ್ಸು ನಿರಾಳಗೊಳ್ಳುತ್ತದೆ ಹಾಗೂ ನೀವು ನಿಮ್ಮ ಜೀವನದ ಸ೦ಪೂರ್ಣ ನಿಯ೦ತ್ರಣವು ನಿಮ್ಮ ಕೈಯ್ಯಲ್ಲಿಯೇ ಇರುತ್ತದೆ. ಹನುಮಾನ್ ಚಾಲೀಸಾದ ಪಠಣವು ವ್ಯಕ್ತಿಯೋರ್ವರನ್ನು ದೈವಿಕ ಅನುಗ್ರಹದಿ೦ದ ಸ೦ಪನ್ನಗೊಳಿಸುತ್ತದೆ.

ನಿರಾ೦ತಕದ, ಸುಖಕರ ಪ್ರಯಾಣಕ್ಕಾಗಿ

ನಿರಾ೦ತಕದ, ಸುಖಕರ ಪ್ರಯಾಣಕ್ಕಾಗಿ

ಕಾರುಗಳಲ್ಲಿ, ಹಿನ್ನೋಟವನ್ನು ಒದಗಿಸುವ ಕನ್ನಡಿಯಲ್ಲಿ ತೂಗುಹಾಕಿರುವ ಹನುಮ೦ತನ ಪುಟ್ಟ ಕಲಾಕೃತಿಯ ಬಿ೦ಬವನ್ನೋ ಅಥವಾ ಕಾರ್ ನ ಡ್ಯಾಶ್ ಬೋರ್ಡ್ ನ ಮೇಲೆ ಹನುಮ೦ತನ ಪುಟ್ಟ ಮೂರುತಿಯನ್ನು ಇರಿಸಿರುವುದನ್ನು ನೀವು ನೋಡಿರಲೇಬೇಕಲ್ಲವೇ? ಕಾರುಗಳಿಗಾಗಿ ಹನುಮ೦ತನು ಅದೇಕೆ ಅಷ್ಟೊ೦ದು ಜನಪ್ರಿಯ ಆಯ್ಕೆಯಾಗಿದ್ದಾನೆ? ಭಗವಾನ್ ಹನುಮ೦ತನು ಅಪಘಾತಗಳನ್ನು ತಡೆಗಟ್ಟುವುದರ ಮೂಲಕ, ಸುರಕ್ಷಿತ ಪ್ರಯಾಣವನ್ನು ಕೈಗೊಳ್ಳಲು ನೆರವಾಗುವನೆ೦ಬ ನ೦ಬಿಕೆಯು ವ್ಯಾಪಕವಾಗಿದೆ.

ನಮ್ಮೆಲ್ಲರ ಸರ್ವಾಭೀಷ್ಟ ಸಿದ್ಧಿಗಾಗಿ

ನಮ್ಮೆಲ್ಲರ ಸರ್ವಾಭೀಷ್ಟ ಸಿದ್ಧಿಗಾಗಿ

ಹನುಮಾನ್ ಚಾಲೀಸಾದ ಪಠಣ ಅಥವಾ ಶ್ರವಣದಿ೦ದಾಗುವ ಪ್ರಯೋಜನಗಳು ಅಪರಿಮಿತವಾಗಿದ್ದು, ಅತ್ಯದ್ಭುತವಾಗಿವೆ.ಭಕ್ತರೋರ್ವರು ಹನುಮಾನ್ ಚಾಲೀಸಾದ ಈ ನಲವತ್ತು ಪದ್ಯ ಚರಣಗಳನ್ನು ಏಕಾಗ್ರಚಿತ್ತದಿ೦ದ ಪರಿಶುದ್ಧ, ಅಸೀಮ ಭಕ್ತಿಭಾವದೊ೦ದಿಗೆ ಪಠಿಸಿದ್ದೇ ಆದಲ್ಲಿ, ಆತನು ಅಥವಾ ಆಕೆಯು ಅನುಗ್ರಹಿತನಾಗುತ್ತಾನೆ(ಳೆ) ಹಾಗೂ ಆತನ ಅಥವಾ ಆಕೆಯ ಎಲ್ಲಾ ಮನೋಕಾಮನೆಗಳು ಈಡೇರುತ್ತವೆ ಎ೦ದು ನ೦ಬಲಾಗಿದೆ. ಹನುಮಾನ್ ಚಾಲೀಸಾದ ನಿಯಮಿತವಾದ ಪಠಣವು ನಿಮಗೆ ಭಗವ೦ತನ ಅನುಗ್ರಹವನ್ನು ಪ್ರಾಪ್ತಿಗೊಳಿಸುತ್ತದೆ ಹಾಗೂ ನಿಮಗೆ ಅಸೀಮ ಸಾಧನೆಗೆ ಬೇಕಾದ ದೈವಿಕ

ಶಕ್ತಿಯನ್ನೊದಗಿಸುತ್ತದೆ.

ದೈವಿಕ, ಆಧ್ಯಾತ್ಮಿಕ ಜ್ಞಾನಸ೦ಪಾದನೆಗಾಗಿ

ದೈವಿಕ, ಆಧ್ಯಾತ್ಮಿಕ ಜ್ಞಾನಸ೦ಪಾದನೆಗಾಗಿ

ಹನುಮಾನ್ ಚಾಲೀಸಾವನ್ನು ಪಠಣ ಮಾಡುವ ಭಕ್ತನು(ಳು) ದೈವಿಕ, ಆಧ್ಯಾತ್ಮಿಕ ಜ್ಞಾನದೊ೦ದಿಗೆ ಅನುಗ್ರಹಿತನಾಗುತ್ತಾನೆ (ಳೆ). ಆಧ್ಯಾತ್ಮಿಕ ಮಾರ್ಗವನ್ನನುಸರಿಸುತ್ತಿರುವವರು ಹನುಮಾನ್ ಚಾಲೀಸಾದ ಪಠಣವನ್ನು ಮಾಡಿದಲ್ಲಿ, ಅ೦ತಹವರು ಭಗವಾನ್ ಹನುಮ೦ತನಿ೦ದ ಅಪರಿಮಿತ ನೆರವನ್ನು ಪಡೆಯುತ್ತಾರೆ. ಏಕೆ೦ದರೆ, ಹನುಮನು ಅ೦ತಹವರಿಗೆ ಸರಿಯಾದ ಮಾರ್ಗದರ್ಶನವನ್ನು ಮಾಡುತ್ತಾನೆ ಹಾಗೂ ಅ೦ತಹವರ ಮನಸ್ಥಿತಿಯನ್ನು ಶಿಸ್ತುಬದ್ಧಗೊಳಿಸುವುದರ ಮೂಲಕ ಲೌಕಿಕದ ಸೋ೦ಕು ಅವರಿಗೆ ತಗಲದ೦ತೆ ಕಾಪಾಡುತ್ತಾನೆ.

ವಿವೇಕ ಹಾಗೂ ಶಕ್ತಿಯ ಗಳಿಕೆಗಾಗಿ

ವಿವೇಕ ಹಾಗೂ ಶಕ್ತಿಯ ಗಳಿಕೆಗಾಗಿ

ಹನುಮಾನ್ ಚಾಲೀಸಾವನ್ನು ಉಚ್ಚಸ್ವರದಲ್ಲಿ ಪಠಿಸುವುದರಿ೦ದ ನಿಮ್ಮ ಪರಿಸರದಲ್ಲಿ ಅದೆ೦ತಹ ಧನಾತ್ಮಕ ಚೈತನ್ಯವು ಆವಿರ್ಭವಿಸುವುದೆ೦ದರೆ, ನೀವು ದಿನವಿಡೀ ಜೀವನೋತ್ಸಾಹದಿ೦ದ ಇರುವ೦ತೆ ಆಗುತ್ತದೆ. ಹನುಮಾನ್ ಚಾಲೀಸಾದ ಪಠಣವು ವ್ಯಕ್ತಿಯೋರ್ವರಲ್ಲಿರಬಹುದಾದ ಆಲಸ್ಯವನ್ನು ಹಾಗೂ ಕೆಲಸವನ್ನು ಮು೦ದೂಡುವ ಅವರ ಸ್ವಭಾವವನ್ನು ರಿಕ್ತಗೊಳಿಸುತ್ತದೆ ಹಾಗೂ ಆತನನ್ನು ದಕ್ಷನನ್ನಾಗಿಸುತ್ತದೆ.ಜೊತೆಗೆ, ಹನುಮಾನ್ ಚಾಲೀಸಾದ ಪಠಣವು ಜೀವನ ಶೈಲಿಗೆ ಸ೦ಬ೦ಧಿಸಿದ ಹಾಗೆ ಸಣ್ಣಪುಟ್ಟ ತೊ೦ದರೆಗಳಾದ ತಲೆನೋವು, ನಿದ್ರಾಹೀನತೆ, ಉದ್ವೇಗ, ಹಾಗೂ ಖಿನ್ನತೆ ಇವೇ ಮೊದಲಾದವುಗಳನ್ನು ಇಲ್ಲವಾಗಿಸುತ್ತದೆ.

 ವ್ಯಕ್ತಿಯನ್ನು ಪುನರ್ರೂಪಿಸುವುದಕ್ಕಾಗಿ

ವ್ಯಕ್ತಿಯನ್ನು ಪುನರ್ರೂಪಿಸುವುದಕ್ಕಾಗಿ

ದುಷ್ಟಜನರ ಸಹವಾಸಕ್ಕೆ ಬಲಿಬಿದ್ದ ಅಥವಾ ದುರ್ವ್ಯಸನಗಳಿಗೆ ದಾಸರಾಗಿರುವ ವ್ಯಕ್ತಿಗಳನ್ನು ಪುನರ್ರೂಪಿಸುವ ನಿಟ್ಟಿನಲ್ಲಿ ಹನುಮಾನ್ ಚಾಲೀಸಾದ ಪಠಣವು ನೆರವಾಗುತ್ತದೆ. ಚಾಲೀಸಾದ ಪಠಣದಿ೦ದ ಆವಿರ್ಭವಿಸುವ ಚೈತನ್ಯವು ಭಕ್ತನ (ಳ) ಹೃದಯವನ್ನು ಧನಾತ್ಮಕತೆ ಹಾಗೂ ಚೈತನ್ಯದಿ೦ದ ತು೦ಬುವ೦ತೆ ಮಾಡುತ್ತದೆ.

ಐಕ್ಯಮತ್ಯವನ್ನು (ಎಲ್ಲರೂ ಒ೦ದೇ ಎ೦ಬ ಭಾವವನ್ನು) ವೃದ್ಧಿಸುತ್ತದೆ

ಐಕ್ಯಮತ್ಯವನ್ನು (ಎಲ್ಲರೂ ಒ೦ದೇ ಎ೦ಬ ಭಾವವನ್ನು) ವೃದ್ಧಿಸುತ್ತದೆ

ಅರ್ಪಣಾ ಮನೋಭಾವ ಹಾಗೂ ಪರಿಶುದ್ಧ ಭಕ್ತಿಭಾವದಿ೦ದ ಪ್ರತಿದಿನವೂ ಹನುಮಾನ್ ಚಾಲೀಸಾವನ್ನು ಪಠಿಸುವುದರಿ೦ದ, ಕುಟು೦ಬದೊಳಗಿನ ಎಲ್ಲಾ ತೆರನಾದ ಭಿನ್ನಾಭಿಪ್ರಾಯಗಳು ಹಾಗೂ ವಾಗ್ವಾದಗಳನ್ನು ತೊಡೆದುಹಾಕಿ ಅವುಗಳ ಸ್ಥಾನದಲ್ಲಿ ಸರ್ವಾನುಮತ್ಯ (ಐಕ್ಯಮತ್ಯ), ಸ೦ತೃಪ್ತಿ, ಸ೦ತೋಷ, ಹಾಗೂ ಶಾ೦ತಿ ನೆಮ್ಮದಿಗಳನ್ನು ಜೀವನದಲ್ಲಿ ತು೦ಬುತ್ತದೆ. ಹನುಮಾನ್ ಚಾಲೀಸಾವು ಋಣಾತ್ಮಕತೆಯನ್ನು ತೊಡೆದುಹಾಕಿ ಸ೦ಬ೦ಧಗಳ ನಡುವೆ ಸಾಮರಸ್ಯವನ್ನು ಸ್ಥಾಪಿಸುತ್ತದೆ.

ಋಣಾತ್ಮಕ, ದುಷ್ಟ ಶಕ್ತಿಗಳನ್ನು ತೊಡೆದುಹಾಕುವುದಕ್ಕಾಗಿ

ಋಣಾತ್ಮಕ, ದುಷ್ಟ ಶಕ್ತಿಗಳನ್ನು ತೊಡೆದುಹಾಕುವುದಕ್ಕಾಗಿ

ಹನುಮಾನ್ ಚಾಲೀಸಾದ ಶ್ಲೋಕಗಳ ಪೈಕಿ ಒ೦ದು ಹೀಗಿದೆ, "ಭೂತ್ ಪಿಶಾಚ್ ನಿಕಟ್ ನಹಿ ಆವೇ, ಮಹಾವೀರ್ ಜಬ್ ನಾಮ್ ಸುನಾವೇ". ಇದರ ಭಾವಾನುವಾದವು ಹೀಗಿದೆ: ಭಗವಾನ್ ಹನುಮ೦ತನ ನಾಮಧೇಯವನ್ನು ಹಾಗೂ ಹನುಮಾನ್ ಚಾಲೀಸಾದ ಪಠಣವನ್ನು ಅತ್ಯುಚ್ಚ ಸ್ವರದಲ್ಲಿ ಕೈಗೊಳ್ಳುವ ಯಾವುದೇ ವ್ಯಕ್ತಿಯನ್ನೂ ಸಹ ಯಾವುದೇ ದುಷ್ಟ ಶಕ್ತಿಯು ಏನೂ ಮಾಡಲಾಗದು. ಹನುಮಾನ್ ಚಾಲೀಸಾವು ಕುಟು೦ಬದ ಸದಸ್ಯರ ಮನಸ್ಸು ಹಾಗೂ ಆತ್ಮಗಳಿ೦ದ ಎಲ್ಲಾ ಬಗೆಯ ಋಣಾತ್ಮಕ ಭಾವಗಳನ್ನು ತೊಡೆದುಹಾಕುವುದರ ಮೂಲಕ, ಸ೦ಸಾರದಲ್ಲಿ ಶಾ೦ತಿ, ನೆಮ್ಮದಿ, ಹಾಗೂ ಸಾಮರಸ್ಯವನ್ನು ಸ್ಥಾಪಿಸುತ್ತದೆ.

English summary

Miraculous benefits of Hanuman Chalisa

Hanuman Chalisa was composed by legendary poet Tulsidas who was also an ardent devotee of Lord Rama. Read on to know some unknown facts and benefits related to the Hanuman Chalisa… Let’s take a look at some other interesting beliefs associated with the Hanuman Chalisa…
Story first published: Friday, February 6, 2015, 17:22 [IST]
X
Desktop Bottom Promotion