For Quick Alerts
ALLOW NOTIFICATIONS  
For Daily Alerts

ಸಪ್ತಪದಿ ತುಳಿಯುವುದರ ಅರ್ಥ

|

ಭಾರತದ ನಾನಾ ಭಾಷೆಯ ಜನರಿರುವ ವೈವಿಧ್ಯಮಯವಾದ ದೇಶ. ಇಲ್ಲಿ ಪ್ರತಿಯೊಂದು ಸಮುದಾಯದ ಆಚಾರ-ವಿಚಾರಗಳು ಸಂಪೂರ್ಣ ಭಿನ್ನವಾಗಿರುತ್ತದೆ. ಮದುವೆಯನ್ನೂ ತಮ್ಮ ಸಂಪ್ರದಾಯದಂತೆ ಮಾಡುತ್ತಾರೆ. ಆದರೆ ಪ್ರತಿಯೊಂದು ಹಿಂದೂ ಸಮುದಾಯದ ಮದುವೆಯಲ್ಲಿ ಮದುವೆ ಹೆಣ್ಣು-ಗಂಡು ಸಪ್ತಪದಿ ತುಳಿಯಲೇಬೇಕು.

ಮದು ಮಗಳ ಸೀರೆಯನ್ನು ಮದುಮಗನ ಪಂಚೆಗೆ ಕಟ್ಟುತ್ತಾರೆ. ನಂತರ ಮದುಮಗಳ ಕೈ ಹಿಡಿದು ಮದುಮಗ ಅಗ್ನಿಯ ಸುತ್ತ 7 ಸುತ್ತು ಬರಬೇಕು. ಹೀಗೆ ಬರುವ ಒಂದೊಂದು ಸುತ್ತಿಗೂ ಒಂದೊಂದು ಅರ್ಥ ಇದೆ.

ಸಪ್ತಪದಿಗಳ ಅರ್ಥ

Meaning Of The Saptapadi

ಈ ಏಳು ಹೆಜ್ಜೆಗಳ ಸಂಬಂಧ ನಮ್ಮ ಏಳು ಜನ್ಮಗಳ ಅನುಬಂಧ.

ಮೊದಲನೇ ಹೆಜ್ಜೆಯ ಅರ್ಥ
ಈ ಹೆಜ್ಜೆ ಮದು ಮಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತದೆ.ನಿನ್ನೊಡನೆ ನನ್ನ ಜೀವನದ ಮೊದಲ ಹೆಜ್ಜೆ ಇಡುವೆ ಇದಕ್ಕೆ ಹರಿಯೇ ಸಾಕ್ಷಿ.

ಎರಡನೇ ಹೆಜ್ಜೆ
ಸ್ವರ್ಗ ಸಮಾನ ಸುಖವ ನೀಡೆಂದು ಕೈಗಳನು ಮುಗಿವೆ ಎಂದು ದಂಪತಿಗಳು ಇಡುವ ಹೆಜ್ಜೆ ಇದಾಗಿದೆ.

ಮೂರನೇ ಹೆಜ್ಜೆ
ಮೂರು ಕಾಲದಲು ಏಕ ರೀತಿ ನಾ ಸಹಚರನಾಗಿರುವೆ.

ನಾಲ್ಕನೇ ಹೆಜ್ಜೆ
ಮಮತೆ ಮೋಹ ಸುಖ ದುಃಖದಲ್ಲಿ ಜೊತೆಯಲ್ಲೇ ಇರುವೆ.

ಐದನೇ ಹೆಜ್ಜೆ
ಜೊತೆಯಾಗಿ ನಾವು ಅಜ್ಞಾನದಿಂದ ಮುಕ್ತರಾಗೋಣ.

ಆರನೇ ಹೆಜ್ಜೆ
ಆರು ಋತುಗಳಲ್ಲಿ ನಲಿವ ಪ್ರಕೃತಿಯು ಸ್ವಾಗತ ನೀಡಲಿ ಎಂದು ಹಾರೈಸು ನಮ್ಮನ್ನು ದೇವ.

ಏಳನೇ ಹೆಜ್ಜೆ
ಸಪ್ತ ಋಷಿಗಳ ಸ್ಮರಣೆ ಮಾಡುತ ಹರಸಿ ನಮ್ಮನು ಎಂದು ಬೇಡುವೆ.

English summary

Meaning Of The Saptapadi | Religion And Marriage | ಮದುವೆಯಲ್ಲಿ ಸಪ್ತಪದಿ ತುಳಿಯುವುದರ ಅರ್ಥ | ಧರ್ಮ ಮತ್ತು ಮದುವೆ

What Are The Saat Pheras? The bride drapes that the bride and groom are tied to each other. Then, the couple is asked to take seven rounds around the holy Agni or fire of the havan kund. For every round around the fire, there is a special vow that the couple have to make to each other.
X
Desktop Bottom Promotion