For Quick Alerts
ALLOW NOTIFICATIONS  
For Daily Alerts

ಮನಸ್ಸಿಗೆ ನೆಮ್ಮದಿ ನೀಡುವ ದೇವರ ಮಂತ್ರ-ಸ್ತೋತ್ರಗಳು

ಭಗವಂತ ನಿಮ್ಮೆಲ್ಲಾ ಮಾನಸಿಕ ತುಮುಲಗಳಿಗೆ ಔಷಧವನ್ನು ನೀಡುತ್ತಾರೆ ಎಂಬ ನಂಬಿಕೆ ನಿಮ್ಮಲ್ಲಿದ್ದರೆ ಈ ಖಿನ್ನತೆ ನಿಮ್ಮನ್ನು ಬಾಧಿಸುವುದಿಲ್ಲ. ಸಮಸ್ಯೆಯನ್ನು ಎದುರಿಸುವ ಧೈರ್ಯ ನಿಮ್ಮಲ್ಲಿ ಮೂಡುತ್ತದೆ.

By Jaya Subramanya
|

ಖಿನ್ನತೆ ಎಂಬುದು ನಮ್ಮ ಜೀವನದಲ್ಲಿ ನಮ್ಮನ್ನು ಹಿನ್ನಡೆಗೆ ಕೊಂಡೊಯ್ಯುವ ಹಂತವಾಗಿದೆ. ಖಿನ್ನತೆ ಎಂಬುದು ನಮ್ಮ ದೈನಂದಿನ ಜೀವನದಲ್ಲಿ ತೊಡಕನ್ನು ಉಂಟುಮಾಡಲಿದ್ದು ನಿತ್ಯದ ಚಟುವಟಿಕೆಗಳಿಗೆ ಮಾರಕ ಎಂದೆನಿಸಲಿದೆ. ಆದರೆ ಖಿನ್ನತೆಯನ್ನು ನಾವು ಅನುಭವಿಸಿದಲ್ಲಿ ಹಿನ್ನಡೆಯನ್ನು ನಾವು ಕಂಡುಕೊಳ್ಳುತ್ತೇವೆ.

ಬದುಕುವುದೇ ಬೇಡವೆಂಬ ಕ್ಷಣದ ಯೋಚನೆ ನಮ್ಮಲ್ಲಿ ಮೂಡುತ್ತದೆ. ಖಿನ್ನತೆಯನ್ನು ಅನುಭವಿಸುವ ವ್ಯಕ್ತಿಯು ಕೋಪ, ಅಸಹಾಯಕತೆ, ನಾಚಿಕೆ ಮತ್ತು ಖಾಲಿತನವನ್ನು ಅನುಭವಿಸುತ್ತಾರೆ. ಇದರಿಂದ ಹೆಚ್ಚು ಆಹಾರ ಸೇವನೆಯನ್ನು ಅವರು ಮಾಡಿ ಆರೋಗ್ಯದ ಮೇಲೂ ದುಷ್ಪರಿಣಾಮವನ್ನು ಹೊಂದುತ್ತಾರೆ. ಹೆಚ್ಚು ನಿದ್ದೆ ಮಾಡುವುದು, ಆಯಾಸ ಮೊದಲಾದ ಪರಿಣಾಮಗಳಿಗೂ ಇವರು ಒಳಗಾಗುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಾವಿನಲ್ಲಿ ತಮ್ಮ ಜೀವನವನ್ನು ಕೊನೆಗೊಳಿಸುತ್ತಾರೆ. ಜೀವನದ ಎಲ್ಲಾ ಕಷ್ಟ-ನೋವು ನಿವಾರಿಸುವ- ಗಾಯತ್ರಿ ಮಂತ್ರ

ಇಂತಹ ಖಿನ್ನತೆಯನ್ನು ದೂರಮಾಡಲು ವ್ಯಕ್ತಿಗೆ ನೈತಿಕ ಬೆಂಬಲವನ್ನು ನೀಡಬೇಕು. ಖಿನ್ನತೆ ಎಂಬುದು ಮಾನಸಿಕ ಅನಾರೋಗ್ಯವಾಗಿದ್ದು ಮನುಷ್ಯನನ್ನು ಇದು ಹುಚ್ಚನನ್ನಾಗಿಸುತ್ತದೆ. ಆದ್ದರಿಂದ ಅವರಿಗೆ ಹೆಚ್ಚಿನ ಪ್ರೀತಿಯನ್ನು ನೀಡಿ ಈ ವಾತಾವರಣದಿಂದ ಅವರು ಹೊರಬರುವಂತೆ ಮಾಡಬೇಕು. ಮೇಲಿರುವ ಭಗವಂತ ನಿಮ್ಮೆಲ್ಲಾ ಮಾನಸಿಕ ತುಮುಲಗಳಿಗೆ ಔಷಧವನ್ನು ನೀಡುತ್ತಾರೆ ಎಂಬ ನಂಬಿಕೆ ನಿಮ್ಮಲ್ಲಿದ್ದರೆ ಈ ಖಿನ್ನತೆ ನಿಮ್ಮನ್ನು ಬಾಧಿಸುವುದಿಲ್ಲ. ಸಮಸ್ಯೆಯನ್ನು ಎದುರಿಸುವ ಧೈರ್ಯ ನಿಮ್ಮಲ್ಲಿ ಮೂಡುತ್ತದೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ ದೇವರನ್ನು ಸ್ತುತಿಸುವ ಮಂತ್ರವನ್ನು ನಾವು ನೀಡಿದ್ದು ಈ ಮಂತ್ರವನ್ನು ಪಠಿಸುವುದರ ಮೂಲಕ ನಿಮಗೆ ಖಿನ್ನತೆಯಿಂದ ಹೊರಬರಬಹುದಾಗಿದೆ. ಆ ಮಂತ್ರಗಳು ಹೀಗಿವೆ...

ಮಂತ್ರವನ್ನು ಉಚ್ಛರಿಸುವುದು ಹೇಗೆ?

ಮಂತ್ರವನ್ನು ಉಚ್ಛರಿಸುವುದು ಹೇಗೆ?

ಮಂತ್ರಗಳನ್ನು ನೋಡಿ ನಿಮಗೆ ಸರಳವಾಗಿರುವುದನ್ನು ಆರಿಸಿ. ನಿಮ್ಮನ್ನು ಶುಚಿಯಾಗಿಸಿಕೊಂಡು ಶಾಂತವಾದ ಸ್ಥಳಕ್ಕೆ ಹೋಗಿ. ಇದು ಪೂಜಾ ಸ್ಥಳವಾಗಿರಬಹುದು ಇಲ್ಲವೇ ನೀವು ಸುರಕ್ಷಿತರು ಎಂದೆನಿಸುವ ಯಾವುದೇ ಸ್ಥಳವಾಗಿರಬಹುದು. ಏಕಾಗ್ರತೆಯಿಂದ ಈ ಮಂತ್ರಗಳನ್ನು ಪಠಿಸಿ. ಮೊದಲಿಗೆ ಇದು ಕಷ್ಟವೆನಿಸಿದರೂ ನಂತರ ಇದನ್ನು ಪಠಿಸುವ ಶಕ್ತಿ ನಿಮ್ಮಲ್ಲಿ ಮೂಡುತ್ತದೆ. ನಿಮ್ಮಲ್ಲಿ ಬದಲಾವಣೆಗಳನ್ನು ನೀವು ಕಂಡುಕೊಳ್ಳುತ್ತೀರಿ. ನಿಮ್ಮ ಏಕಾಗ್ರತೆ ವೃದ್ಧಿಯಾಗುತ್ತದೆ ಮತ್ತು ನಿಮ್ಮಲ್ಲಿ ಧನಾತ್ಮಕ ಅಂಶಗಳು ಮೂಡುತ್ತವೆ. ನಂತರ ಯೋಗದ ಮೂಲಕ ಮಾನಸಿಕ ಸ್ಥಿರತೆಯನ್ನು ಕಂಡುಕೊಂಡು ನಿಮ್ಮನ್ನು ಖಿನ್ನತೆಯಿಂದ ಹೊರಬರುವಂತೆ ಮಾಡಿಕೊಳ್ಳಬಹುದಾಗಿದೆ.

ಸಂಕಟ ನಾಶಂ ಗಣೇಶ ಸ್ತೋತ್ರಂ

ಸಂಕಟ ನಾಶಂ ಗಣೇಶ ಸ್ತೋತ್ರಂ

ವಿಘ್ನಗಳನ್ನು ನಿವಾರಿಸುವವರು ಏಕದಂತ ಗಣೇಶ ಎಂದೆನಿಸಿದ್ದಾರೆ. ಭಕ್ತರಿಗೆ ಉತ್ತಮ ಆರೋಗ್ಯ ಮತ್ತು ಅದೃಷ್ಟವನ್ನು ದಯಪಾಲಿಸುವ ಮೂಲಕ ಅವರು ಅನುಗ್ರಹಿಸುತ್ತಾರೆ. ಗಣೇಶನನ್ನು 'ಸಂಕಟ ನಾಶಕ' ಅಥವಾ 'ಸಂಕಟ ಮೋಚಕ' ಎಂದಾಗಿ ಕರೆಯುತ್ತಾರೆ. ಸಮಸ್ಯೆಗಳನ್ನು ನಿವಾರಣೆ ಮಾಡಿ ನಮ್ಮನ್ನು ಪೊರೆಯುವವರು ಎಂದರ್ಥವಾಗಿದೆ. ಸಂತಸ ಮತ್ತು ನಿರಾಳ ಮನಸ್ಸನ್ನು ನೀವು ಪಡೆದುಕೊಳ್ಳಬೇಕು ಎಂದಾದಲ್ಲಿ ಸಂಕಟ ನಾಶಕ ಗಣೇಶ ಸ್ತ್ರೋತ್ರವನ್ನು ಪಠಿಸಿ.

ಗಣೇಶ ಸ್ತ್ರೋತ್ರಂ

ಗಣೇಶ ಸ್ತ್ರೋತ್ರಂ

ಪ್ರಣಮ್ಯ ಶಿರಸಾ ದೇವಂ ಗೌರೀ ಪುತ್ರಂ ವಿನಾಯಕಂ ಭಕ್ರವಾಸಂ ಸ್ಮರೇತ್‌ನಿತ್ಯಮ್ ಕಾಮಾರ್ಥ ಸಿದ್ಧಯೇಪ್ರಥಮಂ ವಕ್ರತುಂಡಂ ಚ, ಏಕದಂತಂ ದ್ವಿತೀಯಕಂ ತ್ರಿತೀಯಂ ಕೃಷ್ಣ ಪಿಂಗಾಕ್ಷಶಂ, ಗಜವಜ್ರತ್ರಂ ಚತುರ್ಥಕಂ ಲಂಬೋದರಂ ಪಂಚಮಮಂ ಚ, ಸಾಷ್ಟಂ ವಿಕಾತಮೇವ ಚ ಸಪ್ತಂ ವಿಘ್ನರಾಜಂ ಚ, ಧೂಮ್ರವರ್ಣಂ ತಥಾಸ್ತಂ ನವಮಂ ಬಾಲಚಂದ್ರಂ ಚ, ದಶಮಂ ತು ವಿನಾಯಕಂ ಏಕದಶಂ ಗಣಪತಿಂ, ದ್ವದಶಂ ತು ಗಜಾನನಂದ್ವಾದಶೈತಾನಿ ನಮಾನಿ, ತ್ರಿಸಂಧ್ಯಂ ಯ ಪತೇನರ ನ ಚ ವಿಘ್ನ ಭಯಂ ತಸ್ಯಾ, ಸರ್ವಸಿದ್ಧಿ ಕರಂ ಪರಂವಿದ್ಯಾರ್ಥಿ ಲಭತೆ ವಿದ್ಯಂ, ಧನಾರ್ಥಿ ಲಭತೇ ಧನಂ ಪುತ್ರಾರ್ಥಿ ಲಭತೆ ಪುತ್ರನ್, ಮೋಕ್ಷಾರ್ಥಿ ಲಭತೇ ಗತಿಂಜಪೇತ್ ಗಣಪತಿ ಸ್ತ್ರೋತ್ರಂ, ಶದಾಭಿರಾಮಸೈ ಫಲಂ ಲಭೇತ್ ಸಮವತ್‌ಸರೇನ್ ಸಿದ್ಧಿಂ ಚ, ಲಭತೇ ನತ್ರ ಸನ್ಶಯಾ ಅಷ್ಟಾಭ್ಯೊ ಬ್ರಹ್ಮೊಶಿರ್ ಲಿಕಿತ್ವಾ ಯಹಾ ಸಮರ್ಪಯೇತ್ ತಸ್ಯಾ ವಿದ್ಯಾ ಭವೇತ್‌ಸರ್ವಾ ಗಣೇಶಾಯ ಪ್ರಸಾದತ್

ಮಹಾಕಾಳಿ ಮಂತ್ರ

ಮಹಾಕಾಳಿ ಮಂತ್ರ

ಮಹಾ ಕಾಳಿ ಇಲ್ಲವೇ ಕಾಳಿ ಮಾತೆಯು ಅಜ್ಞಾನ ಮತ್ತು ಕೆಟ್ಟದ್ದನ್ನು ನಾಶ ಮಾಡುವ ಶಕ್ತಿಯಾಗಿದ್ದಾರೆ. ಮಾನವರ ಆಧ್ಯಾತ್ಮಿಕ ಶಕ್ತಿ ಎಂದೆನಿಸಿದ್ದಾರೆ. ತಮ್ಮ "ಉಗ್ರ ರೂಪ" ದಲ್ಲೂ ಆಕೆ ದಯೆ ಮತ್ತು ಪ್ರೀತಿಯಿಂದ ಭಕ್ತರನ್ನು ಪೊರೆಯುತ್ತಾರೆ. ಭಕ್ತರ ದುಃಖವನ್ನು ದೂರಮಾಡಿ ನಿವಾರಿಸಿ ಅವರ ಮನಸ್ಸಿನಲ್ಲಿರುವ ಕೆಟ್ಟದ್ದನ್ನು ದೂರಮಾಡುವ ಶಕ್ತಿ ಎಂದೆನಿಸಿದ್ದಾರೆ. ನಿಮ್ಮ ಮಾನಸಿಕ ದುಃಖವನ್ನು ದೂರಮಾಡಲು ಮಹಾಕಾಳಿ ಮಂತ್ರವನ್ನು ಪಠಿಸಿ.

ಮಹಾಕಾಳಿ ಮಂತ್ರ

ಮಹಾಕಾಳಿ ಮಂತ್ರ

ಓಂ ಹ್ರೀಂ ಶ್ರೀಂ ಕ್ಲಿಂ ಆದ್ಯಾ ಕಾಳಿಕಾ ಪರಂ ಈಶ್ವರೀ ಸ್ವಾಹಾ

ಕ್ರೀಂ ಕ್ರೀಂ ಕ್ರೀಂ ಹಮ್ ಹಮ್ ಹ್ರೀಂ ಹ್ರೀಂ ದಕ್ಷಿಣೆ ಕಾಳಿಕಾ

ಕ್ರೀಂ ಕ್ರೀಂ ಕ್ರೀಂ ಹಮ್ ಹಮ್ ಹ್ರೀಂ ಹ್ರೀಂ ಸ್ವಾಹಾ

ನರಸಿಂಹ ಮಂತ್ರ

ನರಸಿಂಹ ಮಂತ್ರ

ಖಿನ್ನತೆ ಮತ್ತು ಆತಂಕವನ್ನು ದೂರಮಾಡುವಲ್ಲಿ ನರಸಿಂಹ ಮಂತ್ರ ನಿಮಗೆ ನೆರವಾಗಲಿದೆ. ಯಾವುದೇ ಸಮಯದಲ್ಲಿ ಕೂಡ ಈ ಮಂತ್ರವನ್ನು ಪಠಿಸಿ ನಿಮ್ಮ ಕಷ್ಟಕಾರ್ಪಣ್ಯಗಳನ್ನು ದೂರಮಾಡಿಕೊಳ್ಳಬಹುದಾಗಿದೆ. 48 ದಿನಗಳ ಕಾಲ 108 ಬಾರಿ ಈ ಮಂತ್ರವನ್ನು ಪಠಿಸಿದಲ್ಲಿ ನಿಮ್ಮ ಮನಸ್ಸು ನಿರಾಳವಾಗಿ ಆತಂಕ ದೂರಾಗಿ ಮನಸ್ಸು ತಿಳಿಯಾಗುತ್ತದೆ. ತಾಮ್ರದ ಕಲಶದಲ್ಲಿ ನೀರನ್ನು ತುಂಬಿಸಿ ನಿಮ್ಮ ಮುಂದಿಟ್ಟುಕೊಂಡು ಈ ಮಂತ್ರವನ್ನು ಪಠಿಸಿ. 108 ಬಾರಿ ಈ ಮಂತ್ರವನ್ನು ಪಠಿಸಿದ ನಂತರ, ಈ ನೀರನ್ನು ಕುಡಿಯಿರಿ. ನಿಮ್ಮಲ್ಲಿ ಧನಾತ್ಮಕ ಅಂಶಗಳು ರೂಪುಗೊಳ್ಳುತ್ತವೆ.

ನರಸಿಂಹ ಮಂತ್ರ

ನರಸಿಂಹ ಮಂತ್ರ

ಉಗ್ರಂ ವೀರಂ ಮಹಾ ವಿಷ್ಣುಂ ಜ್ವಲಂತಂ ಸರ್ವತೋ ಮುಖಂ

ನೃಸಿಂಹಂ ಭೀಷ್ಮಣಂ ಭದ್ರಂ ಮೃತ್ಯೂರ್ ಮೃತ್ಯುಂ ನಮಾಮಿ ಅಹಂ

English summary

Mantras To Get Rid Of Depression

Depression is a terrible state of mind that drains us of all life. Science describes depression as low mood and distaste in activities of the day-to-day life. But the actual problem is much more serious than that. As humans we all go through ups and downs in our lives and our mood changes accordingly. Most of us have had days where we have felt low and then, when happier times come, we feel better.
X
Desktop Bottom Promotion