For Quick Alerts
ALLOW NOTIFICATIONS  
For Daily Alerts

ಪುಣ್ಯ ಕ್ಷೇತ್ರ 'ಮಲ್ಲಿಕಾರ್ಜುನ ಜ್ಯೋತಿರ್ಲಿಂಗದ' ದಂತಕಥೆ

ಮಲ್ಲಿಕಾರ್ಜುನ ಜ್ಯೋತಿರ್ಲಿಂಗವು ಆಂಧ್ರಪ್ರದೇಶ ಶ್ರಿಶೈಲಂನಲ್ಲಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಇದೂ ಕೂಡ ಒಂದಾಗಿದ್ದು ಶಿವ ಭಕ್ತರು ಪುರಾತನ ಕಾಲದಿಂದಲೂ ಶಿವನನ್ನು ಆರಾಧಿಸುವ ಸ್ಥಳ ಇದಾಗಿದೆ....

By Jaya Subramanya
|

ನಾಡಿನಾದ್ಯಂತ ಸಂಭ್ರಮದಿಂದ ಆಚರಿಸುವ ಹಬ್ಬ ಶಿವರಾತ್ರಿಗೆ ಇನ್ನೇನು ಕೆಲವೇ ವಾರಗಳು ಉಳಿದಿವೆ. ಭಕ್ತ ಮನೋಭಿಲಾಷೆಗಳನ್ನು ಪೂರೈಸುವ ಭಗವಂತ ಎಂದಿಗೂ ಅವರನ್ನು ಬರಿಗೈಯಿಂದ ಕಳುಹಿಸುವುದಿಲ್ಲ ಎಂಬ ಮಾತಿದೆ. ಸರಳ ಭಕ್ತಿಗೆ ವರವನ್ನು ನೀಡುವ ಭಗವಂತ ಶಿವನು ತನ್ನನ್ನು ಕೂಡ ಭವ ಬಂಧನದಿಂದ ಮುಕ್ತಗೊಳಿಸುವುದಕ್ಕಾಗಿ ಸರಳ ಜೀವನ ಕ್ರಮವನ್ನು ಆಯ್ದುಕೊಂಡಿದ್ದಾರೆ.

ಹಣೆಗೆ ವಿಭೂತಿ, ಹುಲಿ ಚರ್ಮದ ಉಡುಪು, ಇಳಿಬಿಟ್ಟ ಜಟೆ, ಕುತ್ತಿಗೆಯಲ್ಲಿನ ಹಾವಿನ ಆಭರಣ ಹೀಗೆ ಸರಳವಾಗಿದ್ದು ಕೊಂಡೇ ಭಕ್ತರನ್ನು ಸನ್ಮಾರ್ಗದಲ್ಲಿ ನಡೆಸುವ ಉದ್ದೇಶವನ್ನು ಭಗವಂತ ಹೊಂದಿದ್ದಾರೆ. ಶಿವರಾತ್ರಿಯ ಈ ವಿಶೇಷ ಸಂದರ್ಭದಲ್ಲಿ ಶಿವನ ಜ್ಯೋತಿರ್ಲಿಂಗಗಳ ಕುರಿತಾದ ಮಹತ್ವವನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ. ಮಲ್ಲಿಕಾರ್ಜುನ ಜ್ಯೋತಿರ್ಲಿಂಗವು ಆಂಧ್ರಪ್ರದೇಶ ಶ್ರಿಶೈಲಂನಲ್ಲಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಇದೂ ಕೂಡ ಒಂದಾಗಿದ್ದು ಶಿವ ಭಕ್ತರು ಪುರಾತನ ಕಾಲದಿಂದಲೂ ಶಿವನನ್ನು ಆರಾಧಿಸುವ ಸ್ಥಳ ಇದಾಗಿದೆ.

shivalinga

ಶಿವ ದೇವರು ಮತ್ತು ಪಾರ್ವತಿಯು ಜ್ಯೋತಿರ್ಲಿಂಗದಲ್ಲಿ ಉಪಸ್ಥಿತರಿರುವುದು ಇಲ್ಲಿನ ವಿಶೇಷವಾಗಿದೆ. ಮಲ್ಲಿಕಾರ್ಜುನ ಎಂಬುದು ಎರಡು ಪದಗಳಿಂದ ಉಂಟಾಗಿರುವ ವಾಕ್ಯವಾಗಿದೆ. ಮಲ್ಲಿಕ ಎಂದರೆ ಪಾರ್ವತಿ ದೇವಿಯಾದರೆ, ಅರ್ಜುನ ಎಂಬುದು ಶಿವನ ಹೆಸರುಗಳಲ್ಲಿ ಒಂದಾಗಿದೆ. 275 ಪಾದಲ್ ಪಾತ್ರ ಸ್ತಲಾಂಸಗಳಲ್ಲಿ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಕೂಡ ಒಂದು. ತ್ರಿಮೂರ್ತಿಗಳ ಒಡೆಯ ಪರಶಿವನ ನಾನಾ ರೂಪಗಳ ಅವತಾರ

ಶಿವನಿಗೆ ಅರ್ಪಿತವಾಗಿರುವ ದೇವಸ್ಥಾನಗಳು ಮತ್ತು ಪೂಜನೀಯ ಸ್ಥಳಗಳನ್ನು ಪಾದಲ್ ಪಾತ್ರ ಸ್ತಲಾಂಸ ಎಂದು ಕರೆಯಲಾಗುತ್ತದೆ. 6 ಮತ್ತು 7 ನೇ ಶತಮಾನಗಳಲ್ಲಿ ಶೈವರು ಪೂಜಿಸುತ್ತಿದ್ದ ಹೆಚ್ಚು ಮಹತ್ವದ ಮತ್ತು ಮುಖ್ಯವಾದ ಸ್ಥಳ ಇದಾಗಿದೆ.

ಮಲ್ಲಿಕಾರ್ಜುನ ಶಕ್ತಿ ಪೀಠ
52 ಶಕ್ತಿ ಪೀಠಗಳಲ್ಲಿ ಮಲ್ಲಿಕಾರ್ಜುನ ಕೂಡ ಒಂದು. ತನ್ನ ಪತ್ನಿ ಸತಿದೇವಿಯು ಅಗ್ನಿಗೆ ಹಾರಿ ಪ್ರಾಣತ್ಯಾಗ ಮಾಡಿದ ಸಂದರ್ಭದಲ್ಲಿ ಶಿವನು ಕೋಪದಲ್ಲಿ ಸತಿಯ ಸುಟ್ಟ ದೇಹವನ್ನು ಹಿಡಿದುಕೊಂಡು ವಿನಾಶದ ನೃತ್ಯವನ್ನು ನರ್ತಿಸುತ್ತಾರೆ. ಈ ಸಂದರ್ಭದಲ್ಲಿ ವಿಷ್ಣುವು ತಮ್ಮ ಸುದರ್ಶನ ಚಕ್ರವನ್ನು ಬಳಸಿಕೊಂಡು ಸತಿಯ ದೇಹವನ್ನು ತುಂಡಾಗಿ ಕತ್ತರಿಸುತ್ತಾರೆ ಮತ್ತು ಈ ದೇಹಗಳು ಭೂಮಿಗೆ ಬಿದ್ದು ಪೂಜನೀಯ ಸ್ಥಳಗಳಾಗಿ ಶಕ್ತಿಯ ಆರಾಧಕರಿಗೆ ಮಾರ್ಪಟ್ಟಿದೆ. ಇದನ್ನು ಶಕ್ತಿಪೀಠಗಳು ಎಂದೂ ಕೂಡ ಕರೆಯಲಾಗುತ್ತದೆ.ಸತಿ ದೇವಿಯ ಮೇಲ್ದುಟಿಯು ಭೂಮಿಯಲ್ಲಿ ಮಲ್ಲಿಕಾರ್ಜುನದ ಮೇಲೆ ಬಿದ್ದಿದೆ ಎಂಬುದಾಗಿ ಹೇಳಲಾಗುತ್ತದೆ. ಆದ್ದರಿಂದಲೇ ಹಿಂದೂಗಳಿಗೆ ಮಲ್ಲಿಕಾರ್ಜುನ ಹೆಚ್ಚು ಪವಿತ್ರ ಸ್ಥಳವಾಗಿದೆ.

ಮಲ್ಲಿಕಾರ್ಜುನ ಜ್ಯೋತಿರ್ಲಿಂಗದ ದಂತಕಥೆ
ಮಲ್ಲಿಕಾರ್ಜುನ ಜ್ಯೋತಿರ್ಲಿಂಗದ ಕುರಿತಾಗಿ ಸಾಕಷ್ಟು ಕಥೆಗಳಿದ್ದು, ಇಲ್ಲಿ ಎರಡು ಪ್ರಮುಖವಾದ ಕಥೆಗಳನ್ನು ಹೇಳಲಿದ್ದೇವೆ. ಶಿವ ಪುರಾಣದ ಕೋಟಿರುದ್ರ ಸಂಹಿತದ 15 ನೇ ಅಧ್ಯಯನದಲ್ಲಿ ಈ ಕಥೆ ಕಂಡುಬಂದಿದೆ. ಒಮ್ಮೆ ಶಿವ ಮತ್ತು ಪಾರ್ವತಿಯರು ತಮ್ಮ ಪುತ್ರರಾದ ಕಾರ್ತಿಕೇಯ ಮತ್ತು ಗಣಪತಿಗೆ ವಿವಾಹ ಮಹೋತ್ಸವವನ್ನು ಏರ್ಪಡಿಸಲು ತೀರ್ಮಾನಿಸುತ್ತಾರೆ. ಕೈಲಾಸನಾಥ ಪರಶಿವನ ಕುರಿತ ರೋಚಕ ಜನ್ಮ ವೃತ್ತಾಂತ

ಆದರೆ ಯಾರು ಮೊದಲು ಮದುವೆಯಾಗಬೇಕು ಎಂಬ ವಿಷಯದಲ್ಲಿ ಪುತ್ರರಿಬ್ಬರಿಗೂ ಚರ್ಚೆಯುಂಟಾದಾಗ ಶಿವನು ಒಂದು ಪರೀಕ್ಷೆಯನ್ನು ಒಡ್ಡುತ್ತಾನೆ. ಈ ಪರೀಕ್ಷೆಯಲ್ಲಿ ಯಾರು ವಿಜಯಿಗಳಾಗುತ್ತಾರೋ ಅವರಿಗೆ ಮೊದಲು ಮದುವೆ ನಡೆಸಲಾಗುವುದು ಎಂದಾಗಿ ತಿಳಿಸುತ್ತಾರೆ. ಆ ಪರೀಕ್ಷೆ ಏನೆಂದರೆ ಪ್ರಪಂಚವನ್ನು ಯಾರು ಬೇಗ ಸುತ್ತಿ ಬರುತ್ತಾರೋ ಅವರೇ ವಿಜಯಿಗಳು ಎಂದಾಗಿರುತ್ತದೆ.

ಕೂಡಲೇ ಕಾರ್ತಿಕೇಯನು ತನ್ನ ನವಿಲಿನ ಮೇಲೆ ಆಸಿನರಾಗಿ ಲೋಕಪ್ರದಕ್ಷಿಣೆಗೆ ಹೊರಟುಬಿಡುತ್ತಾರೆ. ಆದರೆ ಗಣಪನು ತಮ್ಮ ತಂದೆತಾಯಿಗೆ ಏಳು ಸುತ್ತುಗಳನ್ನು ಸುತ್ತುತ್ತಾರೆ. ಇವರುಗಳೇ ತಮ್ಮ ವಿಶ್ವ ಎಂದಾಗಿ ಹೇಳಿಬಿಡುತ್ತಾರೆ. ಹೀಗೆ ಸ್ಪರ್ಧೆಯಲ್ಲಿ ವಿಜಯಿಯಾದ ಗಣೇಶನು ರಿಧಿ ಮತ್ತು ಸಿದ್ಧಿಯರನ್ನು ವಿವಾಹವಾಗುತ್ತಾರೆ. ಕಾರ್ತಿಕೇಯನು ಆಗಮಿಸಿದಾಗ ಆತನಲ್ಲಿ ಕೋಪ ತಾಂಡವವಾಡುತ್ತದೆ.

ಕುಪಿತಗೊಂಡ ಕಾರ್ತಿಕೇಯನು ಕೈಲಾಸದ ಕ್ರೌಂಚದಲ್ಲಿ ವಾಸಿಸಲು ಆರಂಭಿಸುತ್ತಾರೆ. ಕ್ರೌಂಚ ಪರ್ವತದಲ್ಲಿ ಅವರು ಕುಮಾರು ಬ್ರಹ್ಮಚಾರಿ ಎಂಬ ಹೆಸರನ್ನು ಗಳಿಸಿಕೊಳ್ಳುತ್ತಾರೆ.ಮಗನ ಈ ನಿರ್ಧಾರದಿಂದ ಶಿವ ಪಾರ್ವತಿಯರು ಬೇಸರ ಹೊಂದುತ್ತಾರೆ. ಮಗನನ್ನು ಭೇಟಿ ಮಾಡಲು ಕ್ರೌಂಚ ಪರ್ವತಕ್ಕೆ ಹೋಗುತ್ತಾರೆ. ತನ್ನ ತಂದೆ ತಾಯಿ ತಾವಿರುವ ಸ್ಥಳಕ್ಕೆ ಬಂದಿದ್ದಾರೆ ಎಂಬುದನ್ನರಿತ ಕಾರ್ತಿಕೇಯನು ಇನ್ನೊಂದು ಸ್ಥಳಕ್ಕೆ ಹೋಗುತ್ತಾರೆ.

ಶಿವ ಮತ್ತು ಪಾರ್ವತಿಯು ಪುತ್ರ ಕಾರ್ತಿಕೇಯನಿಗಾಗಿ ನಿರೀಕ್ಷಿಸಿದ ಸ್ಥಳವಾಗಿದೆ ಶ್ರಿಶೈಲವಾಗಿದೆ. ಶಿವ ದೇವರು ಕಾರ್ತಿಕೇಯನನ್ನು ಅಮವಾಸ್ಯೆ ದಿನಗಳಲ್ಲಿ ಭೇಟಿ ಮಾಡಿದರೆ ಪಾರ್ವತಿ ದೇವಿಯು ಪುತ್ರನನ್ನು ಪೂರ್ಣಿಮೆಯಂದು ಭೇಟಿಮಾಡುತ್ತಾರೆ. ಇನ್ನೊಂದು ಕಥೆ ಯುವರಾಣಿ ಚಂದ್ರಾವತಿಯದ್ದಾಗಿದೆ. ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಈ ಕಥೆಯು ಶಿಲಾರೂಪದಲ್ಲಿದೆ.

ರಾಜ ಮನೆತನದಲ್ಲಿ ಹುಟ್ಟಿದ್ದರೂ ಚಂದ್ರಾವತಿಯು ಸಿರಿತನವನ್ನು ತ್ಯಾಗ ಮಾಡಿ ಸನ್ಯಾಸತ್ವವವನ್ನು ಪಡೆದುಕೊಳ್ಳಲು ನಿರ್ಧರಿಸುತ್ತಾಳೆ. ಇದಕ್ಕಾಗಿ ಧ್ಯಾನ ಮಾಡಲೆಂದು ಕದಳಿ ಅರಣ್ಯಕ್ಕೆ ಬಂದು ಧ್ಯಾನಾಸಕ್ತಳಾಗಿದ್ದ ಸಂದರ್ಭದಲ್ಲಿ ಕಪಿಲೆಯು ಬಿಲ್ವ ಮರದ ಸಮೀಪ ತನ್ನ ಕೆಚ್ಚಲುಗಳಿಂದ ಹಾಲನ್ನು ಸ್ರವಿಸಿ ಮರಕ್ಕೆ ಅಭಿಷೇಕ ಮಾಡುತ್ತಿರುವುದನ್ನು ನೋಡುತ್ತಾಳೆ.

ಇದು ದಿನನಿತ್ಯವೂ ನಡೆಯುತ್ತದೆ. ಯುವರಾಣಿಯು ಭೂಮಿಯನ್ನು ಅಗೆದಾಗ ಕಪಿಲೆಯು ಹಾಲಿನ ಅಭಿಷೇಕ ಮಾಡುತ್ತಿದ್ದ ಸ್ಥಳದಲ್ಲಿ ಪ್ರಜ್ವಲವಾಗಿರುವ ಶಿವಲಿಂಗವನ್ನು ನೋಡುತ್ತಾಳೆ. ಅದರ ಪ್ರಕಾಶಮಾನ ಹೇಗಿತ್ತೆಂದರೆ ಬೆಂಕಿಯಲ್ಲಿ ಉರಿಯುತ್ತಿದ್ದ ರೀತಿಯಲ್ಲಿತ್ತು. ಚಂದ್ರಾವತಿಯು ಶಿವಲಿಂಗವನ್ನು ಪೂಜಿಸಿ ಅದಕ್ಕಾಗಿ ದೊಡ್ಡ ದೇವಸ್ಥಾನವನ್ನು ಕಟ್ಟಿಸುತ್ತಾಳೆ. ಶಿವ ಭಗವಂತನ ಪರಮಾಪ್ತ ಭಕ್ತೆ ಚಂದ್ರಾವತಿ ಎಂಬ ಮಾತೂ ಇದೆ. ಆಕೆಯ ಮರಣದ ನಂತರ ಆಕೆಯನ್ನು ಗಾಳಿಯ ಮೂಲಕ ಕೈಲಾಸಕ್ಕೆ ಕರೆತರಲಾಯಿತು. ಆಕೆ ಮೋಕ್ಷ ಮತ್ತು ಮುಕ್ತಿಯನ್ನು ಅಲ್ಲಿ ಹೊಂದುತ್ತಾಳೆ. ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು?

ಮಲ್ಲಿಕಾರ್ಜುನ ಜ್ಯೋತಿರ್ಲಿಂಗದಲ್ಲಿ ಶಿವನನ್ನು ಆರಾಧಿಸುವ ಮಹತ್ವವೇನು
ಇಲ್ಲಿ ಶಿವನನ್ನು ಆರಾಧಿಸುವುದಿಂದ ಸುಖ ಸಂಪತ್ತು ನಿಮ್ಮಲ್ಲಿ ವೃದ್ಧಿಸುತ್ತದೆ ಎಂಬ ನಂಬಿಕೆ ಇದೆ. ಶಿವನ ಮೇಲೆ ಶುದ್ಧ ನಿರ್ಮಲ ಭಕ್ತಿಯನ್ನು ತೋರಿಸುವುದು ಎಲ್ಲಾ ರೀತಿಯ ಮನೋಭಿಲಾಷೆಯನ್ನು ಈಡೇರಿಸಿಕೊಳ್ಳಲು ಸಹಕಾರಿಯಾಗಲಿದೆ.

ಮಲ್ಲಿಕಾರ್ಜುನ ಜ್ಯೋತಿರ್ಲಿಂಗದಲ್ಲಿ ಹಬ್ಬಗಳು
ಇಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಹೆಚ್ಚಿನ ವೈಭವಗಳಿಂದ ಇಲ್ಲಿ ಹಬ್ಬವನ್ನು ನಡೆಸಲಾಗುತ್ತದೆ. ಈ ಬಾರಿ ಮಹಾಶಿವರಾತ್ರಿಯು ಫೆಬ್ರವರಿ 23 ರಂದು ಬಂದಿದೆ.

English summary

Mallikarjuna: The Story Of The Second Jyotirlinga

Mallikarjuna jyotirlinga is located in Srisailam, Andhra Pradesh. It is one among the twelve jyotirlingas and is a very ancient place of worship for the followers of Lord Shiva. It is unique due to the fact that both Lord Shiva and Goddess Parvati are present here as the Jyotirlinga. Mallikarjuna is an amalgamation of two words, wherein ‘Mallika’ refers to Goddess Parvati and ‘Arjuna’ is one of the many names of Lord Shiva.
X
Desktop Bottom Promotion