For Quick Alerts
ALLOW NOTIFICATIONS  
For Daily Alerts

ಹಸಿವಾದಾಗ ಊಟ ದಣಿವಾದಾಗ ನಿದ್ದೆ, ಅದೇ ಜ್ಞಾನೋದಯ

By Prasad
|
What is enlightenment?
ಒಮ್ಮೆ ಒಬ್ಬ ಶಿಷ್ಯ ತನ್ನ ಗುರುಗಳಿಗೆ "ಗುರುಗಳೇ, ಜ್ಞಾನೋದಯ ಎಂದರೆ ಏನು?" ಎಂದು ಕೇಳಿದನು.

ಆಗ ಗುರುಗಳು "ಹಸಿವಾದಾಗ ಊಟ ಮಾಡುತ್ತೇವೆ. ದಣಿವಾದಾಗ ನಿದ್ದೆ ಮಾಡುತ್ತೇವೆ. ಇದೇ ಜ್ಞಾನೋದಯ" ಎಂದು ಉತ್ತರಿಸಿದರು.

ಈ ಕಥೆಯ ಇನ್ನೊಂದು ಆವೃತ್ತಿಯಲ್ಲಿ, ಒಬ್ಬ ಶಿಷ್ಯನು ತನ್ನ ಗುರುಗಳ ಬಗ್ಗೆ ಇನ್ನೊಬ್ಬ ಗುರುವಿನ ಶಿಷ್ಯನ ಹತ್ತಿರ ಜಂಭ ಕೊಚ್ಚಿಕೊಳ್ಳುತ್ತಿದ್ದನು. "ನಮ್ಮ ಗುರುಗಳು ಕುಂಚದಿಂದ (ಬ್ರಶ್ ನಿಂದ) ಗಾಳಿಯಲ್ಲಿ ಬರೆಯುತ್ತಾರೆ ಮತ್ತು ಒಂದು ಕಾಗದದ ಚೂರನ್ನು ನೂರಾರು ಅಡಿಗಳ ದೂರದಿಂದಲೂ ಗುರುತಿಸುತ್ತಾರೆ. ಅವರು ಒಂದು ರೀತಿಯ ಮಾಂತ್ರಿಕ ಶಕ್ತಿ ಸಾಮರ್ಥ್ಯಗಳನ್ನು ಹೊಂದಿದ್ದಾರೆ" ಎಂದು ಹೇಳುತ್ತಿದ್ದನು.

"ನಿಮ್ಮ ಗುರುಗಳು ಏನು ಮಾಡ್ತಾರೆ" ಅಂತ ಇನ್ನೊಬ್ಬ ಶಿಷ್ಯನಿಗೆ ಕೆಣಕಿದನು.

ಆಗ ಮತ್ತೊಬ್ಬ ಶಿಷ್ಯನು "ನಮ್ಮ ಗುರುಗಳೂ ಕೂಡಾ ಅತ್ಯದ್ಭುತವಾದ ಸಾಧನೆಗಳನ್ನು ಮಾಡ್ತಾರೆ". ಎಂದು ಉತ್ತರಿಸಿದನು. "ನಮ್ಮ ಗುರುಗಳು ದಣಿವಾದಾಗ ಮಲಗುತ್ತಾರೆ ಮತ್ತು ಅವರಿಗೆ ಹಸಿವಾದಾಗ ಊಟ ಮಾಡುತ್ತಾರೆ". ಅಥವಾ ಸರಳವಾಗಿ "ಅವರು ಯಾವಾಗ ನಿದ್ದೆ ಮಾಡುತ್ತಾರೋ ಆಗ ನಿದ್ದೆ ಮಾಡುತ್ತಾ ಇರುತ್ತಾರೆ.. ಅವರು ಯಾವಾಗ ಊಟ ಮಾಡುತ್ತಾರೋ ಆಗ ಊಟ ಮಾಡುತ್ತಿರುತ್ತಾರೆ.." ಎಂದು ಅವನು ಹೇಳಿದನು. ಆಗ ಜಂಭ ಕೊಚ್ಚಿಕೊಳ್ಳುತ್ತಿದ್ದ ಶಿಷ್ಯನ ಬಳಿ ಯಾವುದೇ ಉತ್ತರವಿರಲಿಲ್ಲ.

English summary

Kannada Zen story | What is enlightenment? | Inspirational short stories | ಝೆನ್ ಕಥೆ : ಹಸಿವಾದಾಗ ಊಟ ದಣಿವಾದಾಗ ನಿದ್ದೆ!

Kannada Zen story : A student once asked his teacher, Master, what is enlightenment? The master replied, When hungry, eat. When tired, sleep.
Story first published: Saturday, June 16, 2012, 18:01 [IST]
X
Desktop Bottom Promotion