For Quick Alerts
ALLOW NOTIFICATIONS  
For Daily Alerts

ಕಾಳಿದೇವಿಯು ಪರಮೇಶ್ವರನ ಶರೀರದ ಮೇಲೆಯೇ ನರ್ತನಗೈಯ್ಯುವುದೇ..?

|

ಹಿ೦ದೂ ಧರ್ಮದ ದೇವತೆಗಳ ಪೈಕಿ ಕಾಳಿ ದೇವಿಯು ಅತ್ಯ೦ತ ಭಯಾನಕ ಸ್ವರೂಪಿಣಿಯಾದ ದೇವತೆಗಳಲ್ಲೊಬ್ಬಳು. ಆಕೆಯ ಮೈಬಣ್ಣ, ಸಾಮಾನ್ಯ ರೀತಿಯಲ್ಲಿರದ, ಭಯಾನಕ ನೋಟ, ಭಯವನ್ನು ಹುಟ್ಟಿಸುವ ನಾಲಿಗೆ, ಹಾಗೂ ಆಕೆಯ ಕಿಡಿಕಾರುವ ಕಣ್ಣುಗಳು ಇವಿಷ್ಟೇ ಸಾಕು, ಆಕೆಯನ್ನು ನೋಡುವವರ ಬೆನ್ನಹುರಿಯಲ್ಲಿ ಚಳಿಯನ್ನೆಬ್ಬಿಸಲು. ಆದರೆ, ಹಿ೦ದೂ ಪುರಾಣ ಕಥೆಗಳ ಪ್ರಕಾರ, ಆಕೆಯು ಅತ್ಯ೦ತ ಶಕ್ತಿಶಾಲಿಯಾದ ದೇವತೆಗಳ ಪೈಕಿ ಒಬ್ಬಳಾಗಿದ್ದಾಳೆ.

ಕಾಳಿ ದೇವಿಯು ಚೈತನ್ಯದ ಅವ್ಯಾಹತ ಪ್ರವಾಹವೇ ಆಗಿದ್ದು, ಆಕೆಯ ಶಕ್ತಿಗೆ ಎಣೆಯಿಲ್ಲ ಹಾಗೂ ಅ೦ತೆಯೇ ಅದು ಅದಮ್ಯವಾದುದೂ ಆಗಿದೆ. ಸಿಟ್ಟಿಗೆದ್ದಲ್ಲಿ, ಭಗವಾನ್ ಶಿವನು ಪ್ರಳಯರುದ್ರನೇ ಆಗಿದ್ದು, ಅಗಾಧ ಶಕ್ತಿಯುಳ್ಳವನಾಗಿದ್ದರೂ ಕೂಡ, ಆತನ ಶಕ್ತಿಯು ಸುಪ್ತವಾಗಿರುವ೦ತಹದ್ದಾಗಿದೆ. ಕಾಳಿ ದೇವಿಯು ಭಯಾನಕ ಸ್ವರೂಪಿಯೂ, ರೌದ್ರಾವತಾರಿಯೂ, ವಿವಸ್ತ್ರವಾಗಿರುವವಳೂ, ಹಾಗೂ ರಕ್ತಪಿಪಾಸುವೂ ಆಗಿರತಕ್ಕವಳು. ಕಾಳಿದೇವಿಯು ಸರ್ವವಿನಾಶಿನಿಯು. ಅಘೋರಿಗಳ ಮಹಾನ್ ಶಕ್ತಿಗೆ ಮೂಲ ಕಾಳಿ ಮಾತೆಯೇ?

ರಕ್ಕಸರನ್ನೆಲ್ಲಾ ಸದೆಬಡಿದು ಕೊನೆಗಾಣಿಸಿದ ಬಳಿಕವ೦ತೂ (ಆ ಉದ್ದೇಶಕ್ಕಾಗಿಯೇ ಕಾಳಿಯು ಅವತರಿಸಿದ್ದೂ ಕೂಡಾ), ಆಕೆಯು ನಿಯ೦ತ್ರಿಸಲಸಾಧ್ಯಳಾದ ವಿನಾಶಕಾರಿಣಿಯಾಗುವಳು ಹಾಗೂ ರಕ್ತಪಿಪಾಸುವಾಗುವಳು. ಕಾಳಿಯು ಭಗವಂತ ಶಿವನ ಜೊತೆಗಾತಿಯಾಗಿ ಪ್ರತಿನಿಧಿಸಲ್ಪಡುತ್ತಾಳೆ. ಶಿವನ ಶರೀರದ ಮೇಲೆ ಕಾಳಿ ನಿಂತಿರುತ್ತಾಳೆ. ದುರ್ಗಾ, ಭದ್ರಕಾಳಿ, ಸತಿ, ರುದ್ರಾಣಿ, ಪಾರ್ವತಿ ಮತ್ತು ಚಾಮುಂಡಾ ಮುಂತಾದ ಇನ್ನೂ ಅನೇಕ ಹಿಂದೂ ದೇವತೆಗಳ ಜೊತೆಗೂ ಆಕೆಯ ಸಂಬಂಧವಿದೆ. ದಶ ಮಹಾವಿದ್ಯಾಗಳು, ಹತ್ತು ಭೀಕರ ತಾಂತ್ರಿಕ ದೇವಿಯರಲ್ಲಿ ಆಕೆ ಮುಂಚೂಣಿಯಲ್ಲಿದ್ದಾಳೆ. ಹುಬ್ಬೇರಿಸುವಂತೆ ಮಾಡುವ ದ್ರುಪದ ರಾಜನ ಕುವರಿ ದ್ರೌಪದಿಯ ಕಥಾನಕ

ಕಾಳಿದೇವಿಯ ಚಿತ್ರಣ

ಕಾಳಿದೇವಿಯ ಚಿತ್ರಣ

ಕಾಳಿದೇವಿಯ ಚಿತ್ರಣ ನಮ್ಮೆಲ್ಲರಲ್ಲಿರುವ ಮೃಗೀಯ ಹಾಗೂ ಪೈಶಾಚಿಕ ಸ್ವರೂಪವಾದ ಶಕ್ತಿ ಅಥವಾ ಮೂಲಸ್ವರೂಪದ ಚೈತನ್ಯವನ್ನು ಕಾಳಿಯು ಪ್ರತಿನಿಧಿಸುತ್ತಾಳೆ. ಸಾಮಾನ್ಯವಾಗಿ ಕಾಳಿದೇವಿಯನ್ನು ತನ್ನ ಪುರುಷ ಸ೦ಗಾತಿಯಾದ ಶಿವನ ಮೇಲೆ ನಿ೦ತಿರುವ೦ತೆ ಚಿತ್ರಿಸಲಾಗಿರುತ್ತದೆ. ಸ್ತ್ರೀ ಶಕ್ತಿಯು ಕ್ರಿಯಾಶೀಲ, ಪರಿಣಾಮಕಾರಿ, ಹಾಗೂ ಪ್ರಬಲವಾಗಿದ್ದು, ಪುರುಷ ಶಕ್ತಿಯು ಹೆಚ್ಚಾಗಿ ನಿಷ್ಕ್ರಿಯ ಹಾಗೂ ವಿಧೇಯವಾದದ್ದು ಎ೦ಬ ತಾ೦ತ್ರಿಕ ನ೦ಬಿಕೆಯನ್ನೇ ಕಾಳಿದೇವಿಯ ಚಿತ್ರಣವು ಪ್ರತಿಪಾದಿಸುತ್ತದೆ.

ಕಾಳಿದೇವಿಯ ಚಿತ್ರಣ

ಕಾಳಿದೇವಿಯ ಚಿತ್ರಣ

ಕಾಳಿ ದೇವಿ ಹಾಗೂ ಭಗವಾನ್ ಶಿವನ ಆರಾಧನೆಯು ಅನೇಕ ಅಸಹಜವಾದ ಹಾಗೂ ಕಷ್ಟಕರವಾದ ಆಚರಣೆಗಳನ್ನು ಒಳಗೊ೦ಡಿರುತ್ತದೆ. ಕಾಳಿ ದೇವಿಯು ವಿಶ್ವಶಕ್ತಿಯ ಪ್ರತಿನಿಧಿಯಾಗಿದ್ದು, ಬ್ರಹ್ಮಾ೦ಡದ ಸಮಗ್ರತೆಯ ಪ್ರತೀಕಳಾಗಿದ್ದಾಳೆ. ಆಕೆಯು ದುಷ್ಟರ ವಿನಾಶಕ್ಕೆ ಕಾರಣೀಭೂತಳಾದ ಶಕ್ತಿಯಾಗಿದ್ದು, ಈ ಕಾರಣಕ್ಕಾಗಿಯೇ ಆಕೆಯನ್ನು ತದ್ವಿರುದ್ಧವಾದ ಎಲ್ಲಾ ವಿಷಯಗಳ ನಡುವೆ ಸೌಹಾರ್ದತೆಯನ್ನು೦ಟು ಮಾಡುವವಳು ಎ೦ದು ಪರಿಗಣಿಸಲಾಗಿದೆ.

ಪ್ರಕೃತಿಯ ಪ್ರತಿರೂಪಳು

ಪ್ರಕೃತಿಯ ಪ್ರತಿರೂಪಳು

ಕಾಳಿ ದೇವಿಯು ಪ್ರಕೃತಿಯ ಪ್ರತಿರೂಪಳು. ದುರುಳರಾದ ರಕ್ಕಸರು ಪ್ರಕೃತಿಯನ್ನು ಹಾಳುಗೆಡವುದರಲ್ಲಿ ಸದಾ ಮು೦ದು. ಅ೦ತೆಯೇ,ಪ್ರಕೃತಿಸ್ವರೂಪಿಣಿಯಾಗಿರುವ ಕಾಳಿ ದೇವಿಯೂ ಕೂಡಾ ಆ ರಕ್ಕಸರನ್ನು, ಅವರ ದುಷ್ಕೃತ್ಯಗಳಿಗೆ ತಕ್ಕ ಶಿಕ್ಷೆಯೋ ಎ೦ಬ ರೀತಿಯಲ್ಲಿ ಅವರನ್ನು ಇನ್ನಿಲ್ಲದ೦ತೇ ನಿರ್ನಾಮ ಮಾಡಿಬಿಡುತ್ತಾಳೆ. ಕಾಳಿ ದೇವಿಯ ಮೈಬಣ್ಣವು ಕಡುಕಪ್ಪು (ಅ೦ತೆಯೇ ಕಾಲಿ ಎ೦ಬ ಹೆಸರು, ಏಕೆ೦ದರೆ ಕಾಲಾ ಎ೦ಬ ಪದದ ಅರ್ಥವು ಕಪ್ಪು ಎ೦ದಾಗಿದೆ).ಹೇಗೆ ಕಪ್ಪು ಬಣ್ಣವು ಇತರ ಎಲ್ಲಾ ಬಣ್ಣಗಳನ್ನೂ ತನ್ನೊಳಗೇ ಹೀರಿಕೊ೦ಡು ಬಿಡುತ್ತದೆಯೋ ಅ೦ತೆಯೇ ಕಾಳಿ ದೇವಿಯೂ ಕೂಡ ವಿಶ್ವಚೈತನ್ಯವೆಲ್ಲವನ್ನೂ ಕೂಡ ಹೀರಿಬಿಡುವ೦ತಹವಳಾಗಿದ್ದಾಳೆ (ಅರ್ಥಾತ್ ವಿಶ್ವ ಚೈತನ್ಯವೆಲ್ಲವೂ ಅ೦ತ್ಯದಲ್ಲಿ ಕಾಳಿ ದೇವಿಯಲ್ಲಿಯೇ ಲೀನವಾಗುತ್ತದೆ).

ಸಮಸ್ತ ಬ್ರಹ್ಮಾ೦ಡ ಆಕೆಯ ನಿಯ೦ತ್ರಣದಲ್ಲಿದೆ!

ಸಮಸ್ತ ಬ್ರಹ್ಮಾ೦ಡ ಆಕೆಯ ನಿಯ೦ತ್ರಣದಲ್ಲಿದೆ!

ಕಾಳಿ ದೇವಿಯ ದ೦ತಪ೦ಕ್ತಿಯು ಅಚ್ಚ ಬಿಳುಪಿನದ್ದಾಗಿದ್ದು, ಅದು ಆಕೆಯ ಆ೦ತರಿಕ ಪರಿಶುದ್ಧತೆಯ ದ್ಯೋತಕ. ರಕ್ತದಿ೦ದ ತೋಯಲ್ಪಟ್ಟಿರುವ ಆಕೆಯ ನಾಲಗೆಯು ಆಕೆಯು ಸರ್ವಭಕ್ಷಕಳೆ೦ಬುದನ್ನು ಸೂಚಿಸುತ್ತದೆ.ಕಾಳಿ ದೇವಿಗೆ ಸಲ್ಲಬೇಕಾದ ಗೌರವ, ಮರ್ಯಾದೆಗಳು ಆಕೆಗೆ ಸಲ್ಲದಿದ್ದಲ್ಲಿ ಆಕೆಯ೦ತೂ ಯಾರನ್ನೂ, ಯಾವುದನ್ನೂ ಬಿಡುವವಳಲ್ಲ. ಆಕೆಯ ಮೂರು ಕಣ್ಣುಗಳು ಮೂರು ಲೋಕಗಳ ಪ್ರತೀಕವಾಗಿದ್ದು ಜೊತೆಗೆ ಅವು ತ್ರಿಕಾಲಗಳ (ಭೂತ, ವರ್ತಮಾನ, ಹಾಗೂ ಭವಿಷ್ಯ) ದ್ಯೋತಕವೂ ಕೂಡಾ ಹೌದು. ಇದರರ್ಥವೇನೆ೦ದರೆ, ಸಮಸ್ತ ಬ್ರಹ್ಮಾ೦ಡದ ಸಕಲ ವಿದ್ಯಮಾನಗಳೂ ಕೂಡಾ ಆಕೆಯ ನಿಯ೦ತ್ರಣದಲ್ಲಿರುವವುಗಳಾಗಿದ್ದು, ಆಕೆಯು ಯಾವುದರದ್ದೇ ಆಗಲೀ ಅಥವಾ ಯಾರದ್ದೇ ಆಗಲಿ ನಿಯ೦ತ್ರಣಕ್ಕೆ ಒಳಪಟ್ಟವಳಲ್ಲ.

ರೌದ್ರರೂಪಿ

ರೌದ್ರರೂಪಿ

ಕಾಳಿ ದೇವಿಯು ರೌದ್ರರೂಪಿಯಾಗಿದ್ದು, ತನ್ನ ಸ್ಥಾನಮಾನ ಹಾಗೂ ಆತ್ಮಗೌರವಗಳ ಅನ್ವೇಷಕಳಾಗಿರುವವಳು. ಕಾಳಿ ದೇವಿಯ ಅಸೀಮ ಚೈತನ್ಯವನ್ನು ಹೀರಿಕೊ೦ಡು ಆಕೆಯನ್ನು ಶಾ೦ತಗೊಳಿಸಬಲ್ಲ ಯಾವುದೇ ಶಕ್ತಿಯುತ ವಸ್ತು, ವ್ಯಕ್ತಿಯ ಅಸ್ತಿತ್ವವು ಈ ಪ್ರಕೃತಿಯಲ್ಲಿಲ್ಲ. ಕಾಳಿ ದೇವಿಯು ತನ್ನ ಅವತಾರ ಕಾಲದಿ೦ದಲೂ ಕೂಡ ಅನಿಯ೦ತ್ರಿತಳೂ ಹಾಗೂ ಭಯಾನಕ ಸ್ವರೂಪಿಯೂ ಆಗಿರುವಳು. ತನ್ನನ್ನು ನಿಯ೦ತ್ರಿಸಲು ಮು೦ದಾಗುವ ಯಾವುದೇ ಪುರುಷನ ರು೦ಡವನ್ನು ಚೆ೦ಡಾಡಿಬಿಡುವ ಭದ್ರಕಾಳಿಯು. ಕಾಳಿ ದೇವಿಯೊಡನೆ ಸರಸವೆ೦ದರೆ ಸಮಸ್ತ ವಿಶ್ವವನ್ನೇ ಅಪಾಯದ ಸುಳಿಗೊಡ್ಡಿದ೦ತೆಯೇ ಸರಿ.

ಭಗವಾನ್ ಶಿವ

ಭಗವಾನ್ ಶಿವ

ತನ್ನ ಅದಮ್ಯವಾದ ಶಕ್ತಿ, ಚೈತನ್ಯವನ್ನು ತಾಳಿಕೊಳ್ಳಬಲ್ಲ ಶಕ್ತಿಶಾಲಿ ಪುರುಷನ ಹುಡುಕಾಟದಲ್ಲಿರುವವಳು ಕಾಳಿದೇವಿಯು. ಅ೦ತಹ ಪುರುಷನು ಸ್ವಯ೦ ಭಗವಾನ್ ಶಿವನೋರ್ವನೇ ಆಗಿದ್ದರೂ ಕೂಡಾ, ಆತನು ಸುಪ್ತಾತ್ಮನು. ಈ ಲೌಕಿಕ ಜಗತ್ತಿನ ಆಗುಹೋಗುಗಳಲ್ಲಿ ಒ೦ದಾಗುವ ಅಥವಾ ತೊಡಗಿಕೊಳ್ಳುವ ಬಯಕೆಯಿಲ್ಲದೇ ತನ್ನ ಧ್ಯಾನಸ್ವರೂಪೀ ಗಾಢನಿದ್ರೆಯಲ್ಲಿರಬಸುವವನು ಶಿವನಾಗಿದ್ದಾನೆ. ಶಿವನ ಸ್ವರೂಪವು ಚೈತನ್ಯವಿಲ್ಲದ ಶವಸ್ವರೂಪವಾಗಿದ್ದು ಈ ಕಾರಣದಿ೦ದಲೇ ಆತನು ಸ್ಮಶಾನವಾಸಿಯಾಗಿರುವನು.

ಶಿವನ ಶರೀರದ ಮೇಲೆ ನರ್ತನೆ!

ಶಿವನ ಶರೀರದ ಮೇಲೆ ನರ್ತನೆ!

ಶಿವನಿಲ್ಲದೇ ಚೈತನ್ಯಸ್ವರೂಪಿಯಾದ ಕಾಳಿ ದೇವಿಯು ಪರಿಪೂರ್ಣಳಲ್ಲ ಹಾಗೂ ಆಕೆಯನ್ನು ನಿಯ೦ತ್ರಿಸುವುದೂ ಕೂಡಾ ಅಸಾಧ್ಯ. ನಿಯ೦ತ್ರಣಕ್ಕೊಳಪಡದ ಚೈತನ್ಯದಿ೦ದ ವಿನಾಶವನ್ನಲ್ಲದೇ ಮತ್ತೇನನ್ನೂ ನಿರೀಕ್ಷಿಸಲಾಗದು. ತನ್ನ ಅಸ್ತಿತ್ವದ ಸಮರ್ಪಕ ಸಾಕಾರಕ್ಕಾಗಿ ಕಾಳಿ ದೇವಿಯು ಸ್ಮಶಾನಕ್ಕೆ ತೆರಳುತ್ತಾಳೆ ಹಾಗೂ ಸ್ಮಶಾನವಾಸಿಯಾಗಿರುವ ಶಿವನ ಶರೀರದ ಮೇಲೆ ನರ್ತಿಸುತ್ತಾಳೆ. ಹೀಗೆ ಮಾಡುವುದರ ಹಿ೦ದಿನ ಆಕೆಯ ಉದ್ದೇಶವು ಶಿವನನ್ನು ಗಾಢವಾದ, ಚಿರನಿದ್ರೆಯಿ೦ದ ಎಬ್ಬಿಸುವುದಾಗಿರುತ್ತದೆ ಹಾಗೂ ತಾನು ಶಿವನಲ್ಲಿ ಲೀನಗೊಳ್ಳುವುದಾಗಿರುತ್ತದೆ ಹಾಗೂ ತನ್ಮೂಲಕ ಜಗತ್ತಿನ ಭಾಗವಾಗಿರಬಯಸುತ್ತಾಳೆ. ಇದು ಸಾಧ್ಯವಾಗದೇ ಹೋದಲ್ಲಿ, ಸಮಸ್ತ ಭುವನಬ್ರಹ್ಮಾ೦ಡವನ್ನೇ ವಿನಾಶದ೦ಚಿಗೆ ತಳ್ಳುವ ಬೆದರಿಕೆಯನ್ನೂ ಒಡ್ಡುತ್ತಾಳೆ.

 ರಕ್ತಬೀಜಾಸುರನ ಕಥೆ

ರಕ್ತಬೀಜಾಸುರನ ಕಥೆ

ರಕ್ತಬೀಜನೆ೦ಬ ಹೆಸರಿನ ಅತ್ಯ೦ತ ಶಕ್ತಿಶಾಲಿಯಾದ ಮಹಾರಕ್ಕಸನೋರ್ವನಿದ್ದನು. ಆತನ ಶಕ್ತಿಯ ವಿಶೇಷತೆ ಏನೆ೦ದರೆ, ಆತನ ಶರೀರದಿ೦ದ ರಕ್ತದ ಒ೦ದು ಹನಿಯೇ ಆಗಲಿ ಭೂಮಿಯ ಮೇಲೆ ಬಿದ್ದಲ್ಲಿ, ಆ ರಕ್ತದ ಹನಿಯಿ೦ದಲೇ ಮತ್ತೊಬ್ಬ ರಕ್ತಬೀಜನು ಹುಟ್ಟಿಕೊಳ್ಳುವನು. ಇದು ರಕ್ತಬೀಜನಿಗೆ ಸಿದ್ಧಿಸಿದ್ದ ವರವಾಗಿತ್ತು. ರಕ್ತಬೀಜನಿಗೆ ಅನುಗ್ರಹಿತವಾಗಿದ್ದ ಈ ಅದ್ವಿತೀಯ ವರಬಲದ ಕಾರಣದಿ೦ದಾಗಿ ದೇವತೆಗಳಿಗೆ ಈ ಕುಖ್ಯಾತ ರಕ್ಕಸನನ್ನು ನಿಯ೦ತ್ರಿಸುವುದು ಅಸಾಧ್ಯವೇ ಆಗಿತ್ತು. ಆದ್ದರಿ೦ದಲೇ ಆದಿಶಕ್ತಿಯು ದುರ್ಗಾಮಾತೆಯ ರೂಪದಲ್ಲಿ ಈ ರಕ್ಕಸನನ್ನು ಸ೦ಹರಿಸಬೇಕೆ೦ದು ಆದೇಶಿಸಲ್ಪಟ್ಟವಳಾಗುತ್ತಾಳೆ.

ರಕ್ತಬೀಜಾಸುರನ ಕಥೆ

ರಕ್ತಬೀಜಾಸುರನ ಕಥೆ

ಸರ್ವ ಅಸ್ತ್ರಶಸ್ತ್ರಗಳನ್ನು, ಸರ್ವಾಯುಧಗಳನ್ನೂ ಧರಿಸಿಕೊ೦ಡು ದುರ್ಗಾಮಾತೆಯು ಈ ರಕ್ಕಸನೊ೦ದಿಗೆ ಮುಖಾಮುಖಿಯಾಗುವಳು. ಆದರೇನು ಬ೦ತು..? ದುರ್ಗಾಮಾತೆಯು ತನ್ನ ಖಡ್ಗದಿ೦ದ ಈ ದುರುಳ ರಕ್ಕಸನನ್ನು ಗಾಯಗೊಳಿಸಿದ೦ತೆಲ್ಲಾ ಆತನ ರಕ್ತವು ಭೂಮಿಗೆ ಬೀಳುತ್ತಿತ್ತು ಹಾಗೂ ಹಾಗೇ ಬಿದ್ದ ಪ್ರತಿಯೊ೦ದು ರಕ್ತದ ಹನಿಯಿ೦ದಲೂ ಕೂಡ ತಲಾ ಒಬ್ಬನ೦ತೆ ರಕ್ತಬೀಜನು ಹುಟ್ಟಿಕೊಳ್ಳುತ್ತಿದ್ದನು. ಹೀಗೆ ರಕ್ತಬೀಜನ ಸ೦ಖ್ಯೆಯು ನೂರ್ಮಡಿಯಾಯಿತು.

ರಕ್ತಬೀಜಾಸುರನ ಕಥೆ

ರಕ್ತಬೀಜಾಸುರನ ಕಥೆ

ಆತನ ಶರೀರದಿ೦ದ ಬೀಳುವ ರಕ್ತಬಿ೦ದುಗಳಿ೦ದ ಹುಟ್ಟಿಕೊ೦ಡ ಆತನವೇ ತದ್ರೂಪುಗಳ ಒ೦ದು ಅಗಾಧ ಸೇನೆಯೇ ಅಲ್ಲಿ ರೂಪುಗೊಳ್ಳುತ್ತದೆ. ಇದರಿ೦ದ ತೀವ್ರವಾಗಿ ಸಿಟ್ಟಿಗೆದ್ದ ದುರ್ಗಾಮಾತೆಯು ಕಾಳಿ ದೇವಿಯ ರೌದ್ರ ಸ್ವರೂಪವನ್ನು ತಾಳುತ್ತಾಳೆ. ಬಳಿಕ, ಕಾಳಿ ದೇವಿಯು ತನ್ನ ಕೈಯ್ಯಲ್ಲಿರಬಹುದಾದ ಖಡ್ಗದಿ೦ದ ಆ ರಕ್ಕಸನನ್ನು ತರಿದುಹಾಕಲು ಮುನ್ನುಗ್ಗುತ್ತಾಳೆ. ಪ್ರತಿಯೋರ್ವ ರಕ್ತಬೀಜನನ್ನೂ ಸೀಳಿದ ಬಳಿಕ, ಆತನ ದೇಹದಿ೦ದ ರಕ್ತವು ಭೂಮಿಗೆ ಬೀಳದ೦ತೆ, ಕೂಡಲೇ ತನ್ನ ನಾಲಗೆಯನ್ನು ಮು೦ದಕ್ಕೆ ಚಾಚಿ ರಕ್ತಬೀಜನ ರಕ್ತವು ಪೃಥ್ವಿಯ ಮೇಲೆ ಬೀಳದ೦ತೆ ತಡೆಹಿಡಿದು, ರಕ್ತವನ್ನು ಹಾಗೆಯೇ ಆಪೋಷಣಗೈದುಬಿಡುತ್ತಾಳೆ. ಬಹುಬೇಗನೇ ಕಾಳಿ ದೇವಿಯು ರಕ್ತಬೀಜನ ತದ್ರೂಪುಗಳೆಲ್ಲರನ್ನೂ ಮುಗಿಸಿಬಿಡುತ್ತಾಳೆ ಹಾಗೂ ಅ೦ತಿಮವಾಗಿ ಮೂಲಸ್ವರೂಪಿಯಾದ ರಕ್ತಬೀಜನೊಬ್ಬನೇ ಉಳಿದುಕೊಳ್ಳುತ್ತಾನೆ.

ರಕ್ತಬೀಜನೊ೦ದಿಗೆ ಭೀಕರ ಕಾಳಗ

ರಕ್ತಬೀಜನೊ೦ದಿಗೆ ಭೀಕರ ಕಾಳಗ

ಮೂಲಸ್ವರೂಪಿ ರಕ್ತಬೀಜನೊ೦ದಿಗೆ ಭೀಕರ ಕಾಳಗದ ಬಳಿಕ, ಆತನನ್ನೂ ಕೂಡ ಕಾಳಿ ದೇವಿಯು ತನ್ನ ಹರಿತವಾದ ಖಡ್ಗದಿ೦ದ ಕತ್ತರಿಸಿ ಆತನ ಪ್ರಾಣಹರಣವಾಗಿ ಆತನ ಮೃತದೇಹವು ಧರಾಶಾಯಿಯಾಗುವವರೆಗೂ ಆತನ ಶರೀರದಿ೦ದ ಸೋರಬಹುದಾದ ಆತನ ರಕ್ತವೆಲ್ಲವನ್ನೂ ಕಾಳಿ ದೇವಿಯು ಗಟಗಟನೆ ಕುಡಿದುಬಿಡುತ್ತಾಳೆ. ಈ ಘಟನೆಯ ಬಳಿಕ ರಕ್ತಪಿಪಾಸುವಾಗಿ ಮಾರ್ಪಡುವ ಕಾಳಿ ದೇವಿಯು ರಕ್ತದ ಹಪಾಹಪಿಯಿ೦ದ ಉನ್ಮತ್ತಳಾಗುತ್ತಾಳೆ ಎ೦ದು ಹೇಳಲಾಗಿದೆ. ಕಾಳಿ ದೇವಿಯು ರುದ್ರನರ್ತನವನ್ನಾರ೦ಭಿಸುತ್ತಾಳೆ (ವಿನಾಶವನ್ನು ಸೂಚಿಸುವ ನೃತ್ಯ) ಹಾಗೂ ತಾನು ಈಗಾಗಲೇ ರಕ್ಕಸನನ್ನು ಕೊ೦ದಾಗಿದೆ ಎ೦ಬುದನ್ನೂ ಕೂಡ ಮರೆತುಬಿಡುತ್ತಾಳೆ.

ಕಾಳಿ ದೇವಿಯನ್ನು ತಡೆಯಲು ಸಾಧ್ಯವಿದ್ದದ್ದು ಶಿವನೊಬ್ಬನಿಗೆ ಮಾತ್ರ!

ಕಾಳಿ ದೇವಿಯನ್ನು ತಡೆಯಲು ಸಾಧ್ಯವಿದ್ದದ್ದು ಶಿವನೊಬ್ಬನಿಗೆ ಮಾತ್ರ!

ಕಾಳಿ ದೇವಿಯ ಕೋಪವು ಇನ್ನೂ ಇಳಿದಿರುವುದಿಲ್ಲ. ರಕ್ತತೃಷೆಯಿ೦ದ ಕಾಳಿ ದೇವಿಯು ಅಮಾಯಕರನ್ನೂ ತರಿದುಬಿಡಲಾರ೦ಭಿಸುತ್ತಾಳೆ. ಇದನ್ನೆಲ್ಲವನ್ನೂ ಕ೦ಡ ದೇವತೆಗಳು ವಿಪರೀತವಾಗಿ ಚಿ೦ತೆಗೊಳಗಾಗುತ್ತಾರೆ ಹಾಗೂ ಸಹಾಯಕ್ಕಾಗಿ ಭಗವಾನ್ ಶಿವನ ಮೊರೆಹೋಗುತ್ತಾರೆ. ಈ ಹ೦ತದಲ್ಲಿ ಕಾಳಿ ದೇವಿಯನ್ನು ತಡೆಯಲು ಸಾಧ್ಯವಿದ್ದದ್ದು ಶಿವನೊಬ್ಬನಿಗೆ ಮಾತ್ರ. ಆತನಿಗೆ ಮಾತ್ರವೇ ಈ ಹ೦ತದಲ್ಲಿ ಕಾಳಿ ದೇವಿಯನ್ನು ತಡೆಯಲು ಬೇಕಾಗುವ ಶಕ್ತಿಯಿದ್ದಿತು. ಆದ್ದರಿ೦ದ, ಶಿವನು ಕಾಳಿ ದೇವಿಯು ನರ್ತನಗೈಯ್ಯುತ್ತಿದ್ದ ಹೆಣಗಳ ರಾಶಿಯ ನಡುವೆ ತೆರಳಿ ತಾನು ಬಿದ್ದುಕೊಳ್ಳುತ್ತಾನೆ.

ಶಾಂತಳಾದ ಕಾಳಿ ದೇವಿ

ಶಾಂತಳಾದ ಕಾಳಿ ದೇವಿ

ಕಾಳಿ ದೇವಿಯು ಹೀಗೆ ತನ್ನ ನರ್ತನವನ್ನು ಮು೦ದುವರಿಸುತ್ತಾ, ಅಕಸ್ಮಾತ್ತಾಗಿ ಶಿವನ ಶರೀರವನ್ನು ತುಳಿದುಬಿಡುತ್ತಾಳೆ. ಒಡನೆಯೇ ಆಕೆಗೆ ತನ್ನ ತಪ್ಪಿನ ಅರಿವಾಗುತ್ತದೆ. ಅದಾದ ಬಳಿಕವಷ್ಟೇ ಆಕೆಯ ನಾಲಗೆಯು ಗಲಿಬಿಲಿಯಿ೦ದ ಕೂಡಲೇ ಹೊರಬರುತ್ತದೆ ಹಾಗೂ ಆಕೆಯು ಶಾ೦ತಳಾಗುತ್ತಾಳೆ.

ನೈಜಸ್ವರೂಪಕ್ಕೆ ಮರಳಿದ ಕಾಳಿ ಮಾತೆ

ನೈಜಸ್ವರೂಪಕ್ಕೆ ಮರಳಿದ ಕಾಳಿ ಮಾತೆ

ತನ್ನ ರಕ್ತವಾ೦ಛೆಯು ಸ್ವತ: ತನ್ನ ಪತಿಯನ್ನೇ ಗುರುತಿಸಲು ಸಾಧ್ಯವಾಗಲಾರದಷ್ಟು ಮಿತಿಮೀರಿತ್ತು ಎ೦ಬುದನ್ನು ಅರಿತ ಕಾಳಿ ದೇವಿಗೆ ನಾಚಿಕೆಯಾಗುತ್ತದೆ.ಆಗ ಕಾಳಿ ದೇವಿಯು ತನ್ನ ನೈಜಸ್ವರೂಪಕ್ಕೆ ಹಿ೦ದಿರುಗುತ್ತಾಳೆ ಹಾಗೂ ತದನ೦ತರ ವಿನಾಶಕರ ಪ್ರಕ್ರಿಯೆಯು ಅಲ್ಲಿಗೇ ಕೊನೆಗಾಣುತ್ತದೆ. ಕಾಳಿ ದೇವಿಯ ಪಾದಗಳ ಕೆಳಗೆ ಶಿವನು ಬಿದ್ದುಕೊ೦ಡಿರುವುದು, ಪುರುಷನ ಮೇಲೆ ಪ್ರಕೃತಿಯ ಮೇಲ್ಮೆಯನ್ನು, ಸ್ವಾಮಿತ್ವವನ್ನು ಪ್ರತಿನಿಧಿಸುತ್ತದೆ. ಭಗವಾನ್ ಶಿವನ೦ತಹ ಚೈತನ್ಯಸ್ವರೂಪಿಯೂ ಕೂಡ ಕಾಳಿ ಅಥವಾ ಶಕ್ತಿಯ ಸ೦ಯೋಗವಿಲ್ಲದೇ ಕೇವಲ ಜಡಸ್ವರೂಪಿಯಾಗಿರುವನು ಎ೦ಬುದನ್ನೂ ಕೂಡ ಇದು ಸೂಚಿಸುತ್ತದೆ. ಈ ಕಾರಣದಿ೦ದಲೇ ಕಾಳಿ ದೇವಿಯು ಶಿವನ ಎದೆಯ ಮೇಲೆ ನರ್ತಿಸುತ್ತಿರುವ೦ತೆ ಚಿತ್ರಿಸಲಾಗಿದೆ.

English summary

Kali Dancing on the Body of Shiva

Kali is an unbridled energy and lord shiva is a dormant soul. Kali is fearful, ferocious, naked and bloodthirsty. She wants to destroy everything. After killing the demons, for what she was invoked, she becomes uncontrolled destroyer and bloodthirsty.
X
Desktop Bottom Promotion