For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಟಮಿ 2021: ಶ್ರೀಕೃಷ್ಣ ರಾಸಲೀಲೆಗೆ ಸಂಬಂಧಪಟ್ಟ ಅಚ್ಚರಿಯ ಕಥೆಗಳು

By Lekhaka
|

ಜನ್ಮಾಷ್ಟಮಿಯನ್ನು ಶ್ರೀ ಕೃಷ್ಣನ ಜನ್ಮ ದಿನದ ಅಂಗವಾಗಿ ಆಚರಿಸಲಾಗುತ್ತದೆ. ಶ್ರೀ ಕೃಷ್ಣನು ಮಥುರಾದಲ್ಲಿ ಜನಿಸಿದನು. ಆನಂತರ ಆತನನ್ನು ಯಮುನಾ ನದಿಯನ್ನು ದಾಟಿ ಗೋಕುಲ ಎಂಬ ಹಳ್ಳಿಯಲ್ಲಿ ಬಿಡಲಾಯಿತು. ಗೋಕುಲ ಮತ್ತು ಅದರ ಸಮೀಪದಲ್ಲಿದ್ದ ವೃಂದಾವನದಂತಹ ಸ್ಥಳಗಳಲ್ಲಿ ಶ್ರೀ ಕೃಷ್ಣನು ತನ್ನ ಲೀಲೆಗಳನ್ನು ನಡೆಸಿದನು.

ವೃಂದಾವನವು ಶ್ರೀಕೃಷ್ಣನ ಅಚ್ಚುಮೆಚ್ಚಿನ ಸ್ಥಳವಾಗಿತ್ತು. ಇಲ್ಲಿಯೇ ಆತನು ರಾಧ ಮತ್ತು ಗೋಕುಲದ ಇತರ ಗೋಪಿಕೆಯರ ಜೊತೆಯಲ್ಲಿ ರಾಸಲೀಲೆಯನ್ನು ಆಡುತ್ತಿದ್ದನು. ವೃಂದಾವನದಲ್ಲಿ ಭಗವಾನ್ ಕೃಷ್ಣನು ಶ್ರೀ ಬಂಕೆ ಬಿಹಾರಿ ಎಂಬ ನಾಮದಿಂದಲೇ ಖ್ಯಾತಿಯಾಗಿದ್ದಾನೆ. 2021ನೇ ಸಾಲಿನಲ್ಲಿ ಆಗಸ್ಟ್‌ 30ರಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಯ ಮಹತ್ವ ತಿಳಿದುಕೊಳ್ಳಿ

ಇಂದಿಗೂ ಇಲ್ಲಿ ಶ್ರೀ ಬಂಕೆ ಬಿಹಾರಿಯು ಬಂದು ಗೋಪಿಕೆಯರ ಜೊತೆಯಲ್ಲಿ ರಾಸಲೀಲೆಯನ್ನು ಆಡುತ್ತಾನೆ ಎಂಬ ನಂಬಿಕೆ ಇಲ್ಲಿ ನೆಲೆಸಿದೆ. ವೃಂದಾವನದಲ್ಲಿ ಒಂದು ಸಣ್ಣ ತೋಟವಿದೆ. ಇದನ್ನು ನಿಧಿವನ ಎಂದು ಕರೆಯುತ್ತಾರೆ. ಶ್ರೀ ಕೃಷ್ಣನು ಪ್ರತಿ ರಾತ್ರಿಯು ಇಲ್ಲಿ ಬಂದು ತನ್ನ ದೈವಿಕವಾದ ಕೊಳಲನ್ನು ನುಡಿಸುತ್ತ ಇರುವಾಗ, ಈ ವನದಲ್ಲಿನ ಮರಗಳೆಲ್ಲವು ಮನುಷ್ಯರಾಗಿ ಪರಿವರ್ತನೆಯಾಗಿ ನರ್ತಿಸಲು ಆರಂಭಿಸುತ್ತವೆ ಎಂಬ ನಂಬಿಕೆ ಇಲ್ಲಿ ಮನೆ ಮಾಡಿದೆ. ನಂತರ ಮುಂಜಾನೆಯಷ್ಟರಲ್ಲಿ ಇವರೆಲ್ಲರು ತಮ್ಮ ಹಿಂದಿನ ಸ್ಥಿತಿಗೆ ತಲುಪುತ್ತಾರೆ ಎಂಬ ನಂಬಿಕೆ ಇಲ್ಲಿನ ಜನರದ್ದು.

ವೃಂದಾವನದಲ್ಲಿ ಶ್ರೀ ಕೃಷ್ಣನ ಉಪಸ್ಥಿತಿಯ ಕುರಿತಾಗಿ ಹಲವಾರು ಕುತೂಹಲಕಾರಿ ವಿಚಾರಗಳು ನಮ್ಮ ಕುತೂಹಲ ಕೆರಳಿಸುತ್ತವೆ. ಜನರ ನಂಬಿಕೆಯ ಪ್ರಕಾರ ನಿಧಿವನಕ್ಕೆ ಬಂದು ತಮ್ಮ ಕೋರಿಕೆಗಳನ್ನು ಕೋರಿದವರಿಗೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಹೇಳಲಾಗುತ್ತದೆ. ಆದರೆ ಭಗವಾನ್ ಕೃಷ್ಣನು ನಿಜಕ್ಕು ಇಲ್ಲಿಗೆ ಪ್ರತಿ ರಾತ್ರಿಯು ಬರುತ್ತಾನೆಯೇ? ಅದಕ್ಕೆ ಸಾಕ್ಷಿ ಏನು? ಹಾಗಾದರೆ ಮುಂದೆ ಓದಿ ನಿಧಿವನದಲ್ಲಿ ಶ್ರೀ ಕೃಷ್ಣನು ಆಡುವ ರಾಸಲೀಲೆಯ ಕುರಿತಾದ ಕೆಲವೊಂದು ಮಾಹಿತಿಗಳು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ.

ಗಾಂಧಾರಿ ಶಾಪ; ಶ್ರೀಕೃಷ್ಣಾವತಾರದ ಪರಿಸಮಾಪ್ತಿ ಹೇಗೆ?

ನಿಧಿವನ್:

ನಿಧಿವನ್:

ಅತ್ಯಂತ ಕೌತುಕಗಳಿಂದ ಕೂಡಿರುವ ಸ್ಥಳವೆಂದರೆ ಅದು ನಿಧಿವನ್. ಇದೊಂದು ಸಣ್ಣ ತೋಪು. ಇದು ಸಂಪೂರ್ಣವಾಗಿ ಹಸಿರು ಮರಗಳಿಂದ ಕೂಡಿದೆ. ಈ ಮರಗಳ ಆಕಾರವು ಸಹ ವಿಭಿನ್ನತೆಯಿಂದ ಕೂಡಿದೆ. ಈ ಮರಗಳ ಕೊಂಬೆಗಳು ಪರಸ್ಪರ ಒಂದನ್ನೊಂದು ತಬ್ಬಿಕೊಂಡು ನಿಂತಿವೆ. ಸ್ವಲ್ಪ ಗಮನವಿಟ್ಟು ನೋಡಿದರೆ ಅವೆಲ್ಲವು ಮನುಷ್ಯರನ್ನು ಹೋಲುವ ಆಕಾರಗಳನ್ನು ಹೊಂದಿವೆ. ಸಂಜೆ 8ರ ನಂತರ ಮನುಷ್ಯರು ಯಾರನ್ನು ಈ ವನದ ಒಳಗಡೆ ಪ್ರವೇಶಿಸಲು ಬಿಡುವುದಿಲ್ಲ. ಅಚ್ಚರಿಯೆಂದರೆ, ಪ್ರಾಣಿಗಳು ಸಹ ಸಂಜೆಯಾದ ಮೇಲೆ ಈ ವನದ ಬಳಿಗೆ ಹೋಗುವುದಿಲ್ಲ. ಒಂದು ವೇಳೆ ಯಾರಾದರು ಸಂಜೆಯ ನಂತರದ ಅವಧಿಯಲ್ಲಿ ಇಲ್ಲಿಗೆ ಪ್ರವೇಶಿಸಿದರೆ, ಅವರು ಕುರುಡರೊ, ಮೂಗರೋ, ಕಿವುಡರೋ ಆಗಿರುವುದು ಕಂಡು ಬಂದಿದೆಯಂತೆ. ಕೆಲವೊಮ್ಮೆ ಸಾವುಗಳು ಸಹ ವರದಿಯಾಗಿವೆ.

ಮರಗಳ ರಹಸ್ಯ

ಮರಗಳ ರಹಸ್ಯ

ನಿಧಿವನದಲ್ಲಿರುವ ಮರಗಳು ಒಂದು ಬಗೆಯ ವಿಲಕ್ಷಣವಾದ ಲಕ್ಷಣವನ್ನು ಹೊಂದಿವೆ. ಇವುಗಳ ಕೊಂಬೆಗಳೆಲ್ಲವು ಒಂದನ್ನೊಂದು ತಬ್ಬಿಕೊಂಡ ಮಾದರಿಯಲ್ಲಿವೆ. ನಂಬಿಕೆಗಳ ಪ್ರಕಾರ ಈ ಮರಗಳೆಲ್ಲವು ಶ್ರೀಕೃಷ್ಣನ ಗೆಳತಿಯರು ಅಥವಾ ಗೋಪಿಕೆಯರಂತೆ. ಸಂಜೆಯಾದ ನಂತರ ಇವರಿಗೆ ಜೀವ ಬರುತ್ತದೆಯಂತೆ. ಇವರೆಲ್ಲರು ಸೇರಿ ಭಗವಾನ್ ಕೃಷ್ಣನ ಜೊತೆಗೆ ರಾತ್ರಿಯೆಲ್ಲ ನೃತ್ಯದಲ್ಲಿ ತೊಡಗಿಸಿಕೊಳ್ಳುತ್ತಾರಂತೆ. ಪುನಃ ಮುಂಜಾನೆ ಇವರೆಲ್ಲ ಮರಗಳಾಗಿ ಮಾರ್ಪಾಡಾಗುತ್ತಾರಂತೆ. ಆದ್ದರಿಂದಲೇ ಈ ಮರಗಳೆಲ್ಲವು ನೃತ್ಯ ಮಾಡುವ ಭಂಗಿಯಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ ಮತ್ತು ಪ್ರತಿ ದಿನ ತಮ್ಮ ಆಕಾರವನ್ನು ಬದಲಾಯಿಸುತ್ತಿರುತ್ತವೆ.

ಕೃಷ್ಣನ ಕೊಳಲು

ಕೃಷ್ಣನ ಕೊಳಲು

ಜನಪ್ರಿಯವಾದ ದಂತಕತೆಯ ಪ್ರಕಾರ ಶ್ರೀಕೃಷ್ಣನು ಪ್ರತಿ ರಾತ್ರಿಯು ವೃಂದಾವನಕ್ಕೆ ಬರುತ್ತಾನಂತೆ ಮತ್ತು ತನ್ನ ಕೊಳಲನ್ನು ನುಡಿಸುತ್ತಾನಂತೆ. ಈ ವನದಿಂದ ಒಂದು ದೈವಿಕವಾದ ಕೊಳಲಗಾನವು ಹೊರಹೊಮ್ಮುವುದನ್ನು ಸುಮಾರು ಜನರು ಕೇಳಿದ್ದಾರೆ ಎಂಬ ನಂಬಿಕೆ ಇಲ್ಲಿದೆ.

ಕೃಷ್ಣನ ಲೀಲೆಗಳು

ಕೃಷ್ಣನ ಲೀಲೆಗಳು

ಪ್ರತಿ ಸಂಜೆಯಲ್ಲಿ ಇಲ್ಲಿನ ಅರ್ಚಕರು ಎರಡು ಹಲ್ಲು ಉಜ್ಜುವ ಬ್ರಷ್‍ಗಳನ್ನು, ಪವಿತ್ರ ನೀರು ಇರುವ ಕುಡಿಕೆ ಮತ್ತು ಸಿಹಿಯನ್ನು ನಿಧಿವನದಲ್ಲಿರುವ ಗುಡಿಸಲಿನಲ್ಲಿ ಇಡುತ್ತಾರೆ. ಇಷ್ಟೇ ಅಲ್ಲದೆ ಸಂಜೆ ಆರತಿಯಾದ ನಂತರ ಒಂದು ಹಾಸಿಗೆಯನ್ನು ಸಹ ಸಿದ್ಧಪಡಿಸಿ ಹೋಗುತ್ತಾರೆ. ಬೆಳಗ್ಗೆ ಬಂದು ನೋಡಿದರೆ, ಹಾಸಿಗೆ ಹಾಗು ಉಜ್ಜುವ ಬ್ರಷ್ ಮುಂತಾದವುಗಳನ್ನು ಯಾರೋ ಬಳಸಿರುವುದನ್ನು ಕಾಣಬಹುದಂತೆ.

ರಾಧಾ ಕೃಷ್ಣರ ವಿಶ್ರಾಂತಿ ಸ್ಥಳ

ರಾಧಾ ಕೃಷ್ಣರ ವಿಶ್ರಾಂತಿ ಸ್ಥಳ

ನಿಧಿವನವು ಭಗವಾನ್ ಕೃಷ್ಣ ಮತ್ತು ರಾಧೆಯರ ವಿಶ್ರಾಂತಿ ಸ್ಥಳವಂತೆ. ಪ್ರತಿ ರಾತ್ರಿ ರಾಸಲೀಲೆಯನ್ನು ಆಡಲು ಬರುವ ಇವರು ಇಲ್ಲಿ ವಿಶ್ರಾಂತಿಯನ್ನು ಪಡೆಯುತ್ತಾರಂತೆ.

English summary

Krishna Janmashtami 2021: Janmashtami Special: Shocking Myths About Krishna's Raas Leela

anmashtami is the celebration of the birth of Lord Krishna. Lord Krishna was born in Mathura and then carried away across the Yamuna river to a small village of Gokul. It was in Gokul and adjacent places like Vrindavan,
X
Desktop Bottom Promotion