For Quick Alerts
ALLOW NOTIFICATIONS  
For Daily Alerts

ಶ್ರೀಕೃಷ್ಣ ಜನ್ಮಾಷ್ಟಮಿ 2019: ಆಚರಣೆಯ ಮಹತ್ವ ತಿಳಿದುಕೊಳ್ಳಿ

|

ಕೃಷ್ಣ ಜನ್ಮಾಷ್ಟಮಿಯು ಹಿಂದೂಗಳಿಗೆ ಪ್ರಾಮುಖ್ಯ ಹಬ್ಬ. 2019ರಲ್ಲಿ ಆಗಸ್ಟ್ 24ರ ಶನಿವಾರ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಈ ಹಬ್ಬವನ್ನು ದೇಶದೆಲ್ಲೆಡೆ ತುಂಬಾ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯಂದು ಹಿಂದೂಗಳು ಕೃಷ್ಣ ಪರಮಾತ್ಮ ಭೂಮಿಯಲ್ಲಿ ಜನಿಸಿದ ಸಂಭ್ರಮವನ್ನು ಆಚರಿಸುತ್ತಾರೆ. ಹಿಂದೂ ಪಂಚಾಂಗದ ಭಾದ್ರಪದ ತಿಂಗಳ ಕೃಷ್ಣ ಪಕ್ಷದಂದು ಜನ್ಮಾಷ್ಟಮಿ ಆಚರಿಸಲಾಗುತ್ತದೆ.

ಕೃಷ್ಣನ ಮಾವ ಕಂಸನು ಕೃಷ್ಣನ ತಂದೆ-ತಾಯಿಯನ್ನು ಜೈಲಿನಲ್ಲಿ ಬಂಧಿಸಿಟ್ಟಿರುತ್ತಾನೆ. ಅಲ್ಲೇ ರಾತ್ರಿ ವೇಳೆ ಕೃಷ್ಣನ ಜನನವಾಗುತ್ತದೆ ಎಂದು ಪುರಾಣಗಳಲ್ಲಿವೆ. ಕೃಷ್ಣನ ಜನನದ ವೇಳೆ ಜೈಲಿನ ಎಲ್ಲಾ ಭದ್ರತಾ ಸಿಬ್ಬಂದಿಗಳಿಗೆ ನಿದ್ರೆ ಮಂಪರು ಆವರಿಸಿ, ಕೃಷ್ಣನ ತಂದೆ-ತಾಯಿ ಕೈಯಲ್ಲಿದ್ದ ಕೈಕೋಳಗಳು ಬಿಡುಗಡೆಯಾಗಿ, ಜೈಲಿನ ಬಾಗಿಲುಗಳು ತನ್ನಿಂದತಾನೇ ತೆರೆದುಕೊಂಡವು.

Janmashtami: Meaning And Significance

ಜನ್ಮಾಷ್ಟಮಿಯ ಅರ್ಥವು ತುಂಬಾ ಆಳವಾಗಿ ಬೇರೂರಿದೆ ಮತ್ತು ಪ್ರತಿಯೊಬ್ಬ ಮಾನವನ ಜೀವನದಲ್ಲಿ ಪಾಪಗಳೆಂಬ ಕತ್ತಲೆಯು ಆವರಿಸಿಕೊಂಡಿರುತ್ತದೆ ಎನ್ನುವ ಗಾಢಾರ್ಥವಿದೆ. ನಾವು ಹಲವಾರು ರೀತಿಯ ಕೋಪ, ದುರಾಸೆ, ಭಾಂದವ್ಯ ಮತ್ತು ನೋವಿನಿಂದ ಆವರಿಸಿಕೊಂಡಿರುತ್ತೇವೆ. ಆದರೆ ದೇವರು ಜನ್ಮ ತಾಳಿದಾಗ ಕತ್ತಲೆಯು ದೂರವಾಗುತ್ತದೆ ಮತ್ತು ಪ್ರಾಪಂಚಿಕ ಸುಖಗಳ ಎಲ್ಲಾ ಸರಪಳಿಗಳಿಂದ ಬಿಡುಗಡೆಯಾಗುತ್ತೇವೆ. ಹಿಂದೂಗಳು ಜನ್ಮಾಷ್ಟಮಿ ದಿನದಂದು ಉಪವಾಸ ಮಾಡಿ ಮಧ್ಯರಾತ್ರಿ ತನಕ ಜಾಗರಣೆಯಿರುತ್ತಾರೆ.

ಬಾಲ ಕೃಷ್ಣರ ಅಂದವ ನೋಡಿರಣ್ಣಾ...

ಮಧ್ಯರಾತ್ರಿ ಶ್ರೀಕೃಷ್ಣ ಜನ್ಮತಾಳಿದ ಕಾರಣ ಮಧ್ಯರಾತ್ರಿಯು ಅತೀ ಪ್ರಾಮುಖ್ಯವಾಗಿರುತ್ತದೆ. ಭಕ್ತಿ ಗೀತೆಗಳನ್ನು ಹಾಡುವ ಮೂಲಕ ಮತ್ತು ಧರ್ಮಗ್ರಂಥಗಳನ್ನು ಓದಿಕೊಂಡು ಮಧ್ಯರಾತ್ರಿ ವೇಳೆ ಜನರು ಭಗವಾನ್ ಕೃಷ್ಣನ ಜನನವನ್ನು ಆಚರಿಸುತ್ತಾರೆ. ಬಾಲ ಗೋಪಾಲ ಅಥವಾ ಬಾಲ ಕೃಷ್ಣನ ಮೂರ್ತಿಯನ್ನು ಈ ವೇಳೆ ಪೂಜಿಸಲಾಗುತ್ತದೆ.

ಭಕ್ತರು ಶ್ಲೋಕಗಳನ್ನು ಪಠಿಸುತ್ತಾ ತೊಟ್ಟಿಲನ್ನು ತೂಗಿ ಸಂಭ್ರಮ ಆಚರಿಸುತ್ತಾರೆ. ಹಿಂದೂ ಹಬ್ಬಗಳಲ್ಲಿ ಜನ್ಮಾಷ್ಟಮಿಗೆ ವಿಶಿಷ್ಠವಾದ ಸ್ಥಾನವಿದೆ. ಕತ್ತಲು ಆವರಿಸಿ, ದುಷ್ಟಶಕ್ತಿಗಳ ಅಟ್ಟಹಾಸ ಹೆಚ್ಚಾದಾಗ ಭಗವಂತನು ಜನ್ಮತಾಳಿ ಎಲ್ಲಾ ದುಷ್ಟಶಕ್ತಿಗಳನ್ನು ನಾಶ ಮಾಡುತ್ತಾನೆಂಬ ಪ್ರತೀತಿಯಿದೆ. ಜನ್ಮಾಷ್ಟಮಿಯು ಒಳ್ಳೆಯದಕ್ಕೆ ಮತ್ತು ದುಷ್ಟಶಕ್ತಿ ನಾಶಕ್ಕಾಗಿ ಆಚರಿಸಲಾಗುತ್ತದೆ. ಈ ಹಬ್ಬವು ಪ್ರತಿಯೊಬ್ಬರನ್ನು ಜತೆಗೂಡಿಸಿ ಸೌಹಾರ್ದತೆ ಮತ್ತು ವಿಶ್ವಾಸದ ಪ್ರತೀಕವಾಗಿದೆ.

English summary

Janmashtami 2019: Meaning And Significance

Janmashtami is an important festival for the Hindus. This festival is celebrated with great fervour and enthusiasm throughout the country. On Janmashtami, Hindus celebrate the birth of Lord Krishna on Earth.
X
Desktop Bottom Promotion