For Quick Alerts
ALLOW NOTIFICATIONS  
For Daily Alerts

ಭಾರತೀಯರು ತಮ್ಮ ಸಂಗಾತಿಗೆ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತಾರೆ?

|

ಭಾರತೀಯರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ವಿಭಿನ್ನತೆಯನ್ನು ತೋರುತ್ತಾರೆ. ಮೊದಲೇ ಇವರು ಪ್ರತಿಯೊಂದು ವಿಚಾರದಲ್ಲಿ ಬಾವುಕತೆಯನ್ನು ಹೊಂದಿರುತ್ತಾರೆ. ಇವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಕೆಲವೊಂದು ವಿಚಾರಗಳನ್ನು ಗಮನಿಸಿದರೆ ಯಾರಲ್ಲಿ ಬೇಕಾದರು ನಗೆ ಉಕ್ಕಬಹುದು. ಪ್ರೇಮಿಗಳ ದಿನಕ್ಕೆ, ಮದುವೆ ವಾರ್ಷಿಕೋತ್ಸವಕ್ಕೆ ಮತ್ತು ಹುಟ್ಟು ಹಬ್ಬಗಳಿಗೆ ಗಂಡಸರು ತಮ್ಮ ಸಂಗಾತಿಗಾಗಿ ಒಡವೆ ಅಥವಾ ಮಲ್ಲಿಗೆ ಹೂವನ್ನು ಸಾಮಾನ್ಯವಾಗಿ ಕೊಂಡು ಕೊಡುತ್ತಾರೆ.

ಭಾರತೀಯರು ಇತರರಂತಲ್ಲ ತಮ್ಮ ಪ್ರೀತಿಯನ್ನು ತುಂಬಾ ಸರಳವಾದ ವಿಚಾರಗಳ ಮೂಲಕ ವ್ಯಕ್ತ ಪಡಿಸುತ್ತಾರೆ. ಉದಾಹರಣೆಗೆ ತಮ್ಮ ಸಂಗಾತಿಯ ಮೊಬೈಲ್‍ಗೆ ರೀಚಾರ್ಜ್ ಮಾಡುವ ಮೂಲಕ ಸಹ ಇವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ಬಹುತೇಕ ಭಾರತೀಯ ಯುವ ಜೋಡಿಗಳು ಸಹ ತಮ್ಮ ಪ್ರೀತಿಯನ್ನು ವಿಭಿನ್ನವಾಗಿ ತೋರ್ಪಡಿಸಿಕೊಳ್ಳುತ್ತಾರೆ. ಅದು ತಿಂಡಿ-ಆಹಾರವನ್ನು ಇತರರಿಗೆ ತಿನ್ನಿಸುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಅದು ಕೇವಲ ಮನೆಯಲ್ಲಿಯಷ್ಟೇ ಅಲ್ಲ, ಹೋಟೆಲ್‍ನಲ್ಲೂ ಸಹ ಇವರು ಬಹಿರಂಗವಾಗಿ ಊಟವನ್ನು ಪರಸ್ಪರ ತಿನ್ನಿಸಿಕೊಂಡು ಸಂತೋಷಪಡುತ್ತಾರೆ. ಇದು ಅವರ ಪ್ರೀತಿಯನ್ನು ವ್ಯಕ್ತಪಡಿಸಲು ಕಂಡುಕೊಂಡಿರುವ ಒಂದು ಮಾರ್ಗ. ಇದೇ ಪ್ರಕಾರವಾಗಿ ಭಾರತೀಯರು ತಮ್ಮ ಪ್ರೀತಿಯನ್ನು ಹಲವು ಬಗೆಯಲ್ಲಿ ವ್ಯಕ್ತಪಡಿಸುತ್ತಾರೆ. ಅದು ಹೇಗೆ ಎಂಬ ಬಗೆಯನ್ನು ಮುಂದೆ ಓದಿ.

ಈ 7 ಸ್ತ್ರೀಯರನ್ನು ಪುರುಷ ಯಾವತ್ತೂ ಮರೆಯಲ್ಲ!

ಮಲ್ಲಿಗೆ ಹೂವನ್ನು ಕೊಡಿಸುವುದು

ಮಲ್ಲಿಗೆ ಹೂವನ್ನು ಕೊಡಿಸುವುದು

ಬಹುತೇಕ ಭಾರತೀಯ ಹೆಂಗಸರು ಮಲ್ಲಿಗೆಯನ್ನು ಮುಡಿಸಿಕೊಳ್ಳುವ ಅಭ್ಯಾಸವನ್ನು ಹೊಂದಿರುವುದು ಗೊತ್ತಿರುವ ವಿಚಾರವೇ. ಬಹುತೇಕ ಗಂಡಸರು ತಮ್ಮ ಸಂಗಾತಿ ಸುವಾಸನೆ ಬೀರುವ ಮಲ್ಲಿಗೆ ಹೂವನ್ನು ಮುಡಿಸಿಕೊಂಡು ಓಡಾಡುತ್ತಿರಬೇಕು ಎಂದು ಬಯಸುತ್ತಾರೆ.

ಫೇಸ್‍ಬುಕ್‍ನಲ್ಲಿ ಸಕ್ರಿಯವಾಗಿ ಮಾತುಕತೆಯಾಡುವುದು

ಫೇಸ್‍ಬುಕ್‍ನಲ್ಲಿ ಸಕ್ರಿಯವಾಗಿ ಮಾತುಕತೆಯಾಡುವುದು

ಫೇಸ್‍ಬುಕ್‍ನಲ್ಲಿ ಸಕ್ರಿಯವಾಗಿ ಮಾತುಕತೆಯಾಡುವುದು ಸಹ ಭಾರತೀಯರ ಪಾಲಿಗೆ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ. ಬಹುತೇಕ ದಂಪತಿಗಳು ಮತ್ತು ಸಂಗಾತಿಗಳು ದಿನವಿಡೀ ಪ್ರತಿ 10 ನಿಮಿಷಕ್ಕೊಮ್ಮೆ ತಮ್ಮ ಫೇಸ್‍ಬುಕ್ ಅಪ್‍ಡೇಟ್ ಮೂಲಕ ಸಂಗಾತಿಯರ ಜೊತೆಯಲ್ಲಿ ಸಂಪರ್ಕದಲ್ಲಿರುತ್ತಾರೆ.

ಕೈ ಕೈ ಹಿಡಿದುಕೊಂಡು ಓಡಾಡುವುದು

ಕೈ ಕೈ ಹಿಡಿದುಕೊಂಡು ಓಡಾಡುವುದು

ಕೈ ಕೈ ಹಿಡಿದುಕೊಂಡು ಓಡಾಡುವುದು ಸಹ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮಾರ್ಗ. ನೀವು ನಿಮ್ಮ ಸಂಗಾತಿಯ ಕೈಯನ್ನು ಹಿಡಿದುಕೊಳ್ಳುವುದರಿಂದ ಪರಸ್ಪರರಲ್ಲಿ ಆಳವಾದ ಅನುಬಂಧವು ಮೂಡುತ್ತದೆ. ಈ ಅನುಬಂಧವನ್ನು ವಿವರಿಸಲು ಯಾವುದೇ ಪದಗಳು ಯಾವ ಭಾಷೆಯಲ್ಲಿ ಇಲ್ಲ.

 ಒಂದೇ ಎಳನೀರನ್ನು ಹಂಚಿಕೊಳ್ಳುವುದು

ಒಂದೇ ಎಳನೀರನ್ನು ಹಂಚಿಕೊಳ್ಳುವುದು

ಭಾರತೀಯ ಜೋಡಿಗಳು ತಮ್ಮ ಮಧುಚಂದ್ರದ ಅವಧಿಯಲ್ಲಿ, ಬೀಚಿನಲ್ಲಿ ಓಡಾಡುವಾಗ ಒಂದೇ ಎಳನೀರಿನಲ್ಲಿ ಎರಡು ಹಂಚಿಕೊಂಡು ಕುಡಿಯುವುದು ಸಾಮಾನ್ಯ. ಇದು ಇವರ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮಾರ್ಗ.

ಪರಸ್ಪರ ತಿನ್ನಿಸುವುದು

ಪರಸ್ಪರ ತಿನ್ನಿಸುವುದು

ಭಾರತೀಯರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹೆಚ್ಚಾಗಿ ಬಳಸುವ ಒಂದು ಮಾರ್ಗವೆಂದರೆ ತಿಂಡಿಯನ್ನು ಪರಸ್ಪರ ತಿನ್ನಿಸುವುದು. ಬಹುಶಃ ಅಕ್ಕಪಕ್ಕದ ಜನರಿಗೆ ಇದರಿಂದ ಮುಜುಗರವಾಗಬಹುದು. ಆದರೆ ಪ್ರೀತಿಯಲ್ಲಿರುವ ಜೋಡಿಗಳಿಗೆ ಇದು ವಿಚಾರವೇ ಅಲ್ಲ.

ಕಾರ್ನರ್ ಸೀಟ್‍ನಲ್ಲಿ ಕುಳಿತುಕೊಳ್ಳುವುದು

ಕಾರ್ನರ್ ಸೀಟ್‍ನಲ್ಲಿ ಕುಳಿತುಕೊಳ್ಳುವುದು

ಇದು ಎಲ್ಲರಿಗು ಗೊತ್ತಿರುವ ವಿಚಾರವೇ, ಚಿತ್ರಮಂದಿರದಲ್ಲಿನ ಎಲ್ಲಾ ಕಾರ್ನರ್ ಸೀಟುಗಳು ಬಹುತೇಕ ಜೋಡಿಗಳಿಂದ ತುಂಬಿ ತುಳುಕುತ್ತಿರುತ್ತವೆ. ಚಿತ್ರಮಂದಿರದ ದೀಪಗಳು ಆರಿದ ನಂತರ ಈ ಜೋಡಿಗಳು ತಮ್ಮ ಪ್ರಪಂಚದಲ್ಲಿ ಮುಳುಗಿ ಹೋಗಲು ಈ ಕಾರ್ನರ್ ಸೀಟುಗಳು ಹೇಳಿ ಮಾಡಿಸಿದ ಸ್ಥಳಗಳಾಗಿವೆ.

ಸಾರ್ವಜನಿಕವಾಗಿ ವಿಪರೀತ ಪ್ರೀತಿ ವ್ಯಕ್ತಪಡಿಸುವುದು

ಸಾರ್ವಜನಿಕವಾಗಿ ವಿಪರೀತ ಪ್ರೀತಿ ವ್ಯಕ್ತಪಡಿಸುವುದು

ಸಾರ್ವಜನಿಕವಾಗಿ ಯಾರು ಏನೇ ಅಂದುಕೊಂಡರು ಭಾರತೀಯ ಜೋಡಿಗಳ ಪ್ರೀತಿಗೆ ಅದು ಅಡ್ಡಿಯೇ ಆಗುವುದಿಲ್ಲ. ಉದ್ಯಾನವನಗಳು, ಮಾಲ್‍ಗಳು, ದೇವಾಲಯಗಳು ಎಲ್ಲೇ ಇರಲಿ ಪ್ರೇಮಿಗಳು ತಮ್ಮ ಭಾವಕ್ಕೆ, ತಮ್ಮ ತಮ್ಮ ಪ್ರೀತಿಗೆ ತಕ್ಕ ಹಾಗೆ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇಲ್ಲಿ ಪ್ರೇಮಿಗಳು ಇದ್ದಲ್ಲಿ, ಆ ವಾತಾವರಣದಲ್ಲಿ ಪ್ರೀತಿಯ ಘಮಲು ನಿಮ್ಮ ಮೂಗಿಗೆ ಬಡಿಯುತ್ತಿರುತ್ತದೆ!

English summary

How Indians Express Their Love To Their Partner

Indians are way too expressive when it comes to love. The ideas they use to show their love in a relationship can make you burst out in laughter. Indians express their love to one another by doing the simplest of things - for example, recharging their partner's mobile phone. 
Story first published: Monday, August 18, 2014, 10:45 [IST]
X
Desktop Bottom Promotion