For Quick Alerts
ALLOW NOTIFICATIONS  
For Daily Alerts

ಭಗವಾನ್ 'ವಿಷ್ಣುವಿನ' ಹೆಸರಿನ ಹಿಂದಿದೆ, ಕುತೂಹಲಕರ ಸಂಗತಿ

By Super Admin
|

ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರು ಎನ್ನುವ ನಂಬಿಕೆಯಿದೆ. ಹಿಂದೂ ಪುರಾಣಗಳಲ್ಲಿಯೂ ಪ್ರತಿಯೊಂದು ದೇವರ ಬಗ್ಗೆ ಉಲ್ಲೇಖವಿದೆ. ಅದರಲ್ಲಿ ವಿಷ್ಣುವಿನ ಬಗ್ಗೆ ನಾವು ತಿಳಿದುಕೊಂಡಿರುವುದು ತುಂಬಾ ಕಡಿಮೆ ಮತ್ತು ಇನ್ನಷ್ಟು ತಿಳಿಯಬೇಕಾಗಿದೆ. ಹಿಂದೂ ಪುರಾಣಗಳಲ್ಲಿ ವಿಷ್ಣುವಿನ ಎರಡು ಮುಖಗಳ ಬಗ್ಗೆ ವಿವರ ನೀಡಲಾಗಿದೆ. ಒಂದರಲ್ಲಿ ಆತ ತುಂಬಾ ಶಾಂತ, ಮನೋಹರ ಹಾಗೂ ಸೌಮ್ಯವಾಗಿರುತ್ತಾನೆ. ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು?

ಆದರೆ ಇನ್ನೊಂದರಲ್ಲಿ ಆತ ತುಂಬಾ ಅಪಾಯಕಾರಿಯಾಗಿ ಕಾಲಸ್ವರೂಪ ಶೇಷನಾಗ(ಹಾವುಗಳ ರಾಜ)ನ ಮೇಲೆ ಯಾವುದೇ ಭೀತಿಯಿಲ್ಲದೆ ವಿಶ್ರಾಂತಿ ಪಡೆಯುತ್ತಿರುತ್ತಾನೆ. ಇದನ್ನು ನೋಡುವ ಪ್ರತಿಯೊಬ್ಬನಿಗೂ ಹಾವುಗಳ ರಾಜನ ಮೇಲೆ ಸ್ವಲ್ಪವೂ ಆತಂಕವಿಲ್ಲದೆ ಕುಳಿತಿರಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಖಂಡಿತವಾಗಿಯೂ ಬರುತ್ತದೆ. ವಿಷ್ಣು ಏಕೆ ಶಾಪಗ್ರಸ್ತನಾದ ಎಂಬ ಒಂದು ಸಾಲಿಗ್ರಾಮದ ಕಥೆ

ಆದರೆ ದೇವರಾಗಿರುವ ಕಾರಣ ಇದು ಸಾಧ್ಯ ಎಂಬ ಉತ್ತರವೂ ನಮ್ಮಲ್ಲೇ ಇರುತ್ತದೆ. ವಿಷ್ಣುವಿನ ಇನ್ನಷ್ಟು ಶಕ್ತಿಗಳು ಮತ್ತು ವಿಷಯಗಳ ಬಗ್ಗೆ ನಿಮಗೆ ತಿಳಿದಿಲ್ಲ. ಇದನ್ನು ತಿಳಿದರೆ ನಿಮಗೊಮ್ಮೆ ಅಚ್ಚರಿಯಾಗಬಹುದು, ಮುಂದೆ ಒದಿ...

ವಿಷ್ಣುವಿನ ಹೆಸರೇಕೇ ನಾರಾಯಣ?

ವಿಷ್ಣುವಿನ ಹೆಸರೇಕೇ ನಾರಾಯಣ?

ಹಿಂದೂ ಪುರಾಣಗಳ ಪ್ರಕಾರ ವಿಷ್ಣುವಿನ ಭಕ್ತನಾಗಿರುವ ನಾರದನು ಯಾವಾಗಲೂ ನಾರಾಯಣ ನಾರಾಯಣ ಎಂದು ಜಪಿಸುತ್ತಾ ಇರುತ್ತಾನೆ. ಇದರಿಂದಾಗಿ ವಿಷ್ಣುವಿನ ಎಲ್ಲಾ ಹೆಸರುಗಳಿಗೆ ನಾರಾಯಣ ಸೇರ್ಪಡೆಯಾಗಿದೆ. ಉದಾಹರಣೆಗೆ: ಸತ್ಯನಾರಾಯಣ, ಅನಂತನಾರಾಯಣ, ಲಕ್ಷ್ಮೀನಾರಾಯಣ ಮತ್ತು ಧ್ರುವನಾರಾಯಣ... ಹೀಗೆ ಹಲವಾರು. ವಿಷ್ಣುವನ್ನು ನಾರಾಯಣ ಎಂದು ಕರೆಯುತ್ತಾರೆ ಎನ್ನುವುದು ಹೆಚ್ಚಿನವರ ನಂಬಿಕೆ. ಆದರೆ ಇದರ ಹಿಂದಿನ ರಹಸ್ಯ ತಿಳಿಯದೇ ಇರುವವರು ತುಂಬಾ ಮಂದಿ ಇದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿಷ್ಣುವಿನ ಹೆಸರೇಕೇ ನಾರಾಯಣ?

ವಿಷ್ಣುವಿನ ಹೆಸರೇಕೇ ನಾರಾಯಣ?

ಪುರಾಣಗಳ ಪ್ರಕಾರ ನೀರು ಯಾನೆ ಗಂಗಾ ನದಿಯು ವಿಷ್ಣುವಿನ ಕಾಲಿನಿಂದ ಹುಟ್ಟಿರುವ ಕಾರಣದಿಂದ ಅದನ್ನು `ವಿಷ್ಣು ಪಾದುಕಿ' ಎನ್ನುತ್ತಾರೆ. ನೀರನ್ನು `ನೀರು' ಅಥವಾ `ನರ' ಎಂದು ಹೇಳಲಾಗುತ್ತದೆ. ವಿಷ್ಣು ಕೂಡ ನೀರಿನಲ್ಲೇ ವಾಸಿಸುವ ಕಾರಣ ನಾರಾಯಣ ಹೆಸರು ನೀರಿನಿಂದಾಗಿ ಬಂದಿದೆ.

ಶೇಷನಾಗನ ಮೇಲೆ ವಿಷ್ಣು ವಿಶ್ರಾಂತಿ ಪಡೆಯುತ್ತಿರುವ ರಹಸ್ಯವೇನು?

ಶೇಷನಾಗನ ಮೇಲೆ ವಿಷ್ಣು ವಿಶ್ರಾಂತಿ ಪಡೆಯುತ್ತಿರುವ ರಹಸ್ಯವೇನು?

ಜೀವನದ ಪ್ರತಿಯೊಂದು ಕ್ಷಣವು ಕರ್ತವ್ಯ ಮತ್ತು ಜವಾಬ್ದಾರಿಗಳಿಗೆ ನಂಟನ್ನು ಹೊಂದಿದೆ. ಕುಟುಂಬ, ಸಮಾಜ ಮತ್ತು ಆರ್ಥಿಕ ಜವಾಬ್ದಾರಿಯು ತುಂಬಾ ಪ್ರಾಮುಖ್ಯವಾದ ಜವಾಬ್ದಾರಿಗಳಾಗಿದೆ. ಈ ಜವಾಬ್ದಾರಿಗಳನ್ನು ನಿಭಾಯಿಸಲು ತುಂಬಾ ಕಠಿಣ ಪರಿಶ್ರಮ ಪಡಬೇಕು ಮತ್ತು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಶೇಷನಾಗನಂತೆ ತುಂಬಾ ಭಯ ಹಾಗೂ ಆತಂಕ ಉಂಟುಮಾಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶೇಷನಾಗನ ಮೇಲೆ ವಿಷ್ಣು ವಿಶ್ರಾಂತಿ ಪಡೆಯುತ್ತಿರುವ ರಹಸ್ಯವೇನು?

ಶೇಷನಾಗನ ಮೇಲೆ ವಿಷ್ಣು ವಿಶ್ರಾಂತಿ ಪಡೆಯುತ್ತಿರುವ ರಹಸ್ಯವೇನು?

ಆದರೆ ವಿಷ್ಣುವಿನ ಇನ್ನೊಂದು ಮುಖವು ನಮ್ಮನ್ನು ಇಂತಹ ಕಠಿಣ ಸಮಯದಲ್ಲೂ ತುಂಬಾ ಶಾಂತ ಹಾಗೂ ತಾಳ್ಮೆಯಿಂದ ಇರುವಂತೆ ಪ್ರೇರೇಪಿಸುತ್ತದೆ. ಈ ಗುಣಗಳಿಂದಾಗಿಯೇ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಬಹುದಾಗಿದೆ.

ಹರಿ ಹೆಸರಿನ ಅರ್ಥವೇನು?

ಹರಿ ಹೆಸರಿನ ಅರ್ಥವೇನು?

ವಿಷ್ಣುವನ್ನು ಹರಿ ಎಂದು ಕರೆಯುತ್ತಾರೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದನ್ನು ಯಾಕಾಗಿ ಕರೆಯುತ್ತಾರೆಂದು ನಿಮಗೆ ಎಷ್ಟು ಮಂದಿಗೆ ತಿಳಿದಿದೆ. ಗ್ರಂಥಗಳ ಪ್ರಕಾರ ಹರಿ ಎಂದರೆ ತೆಗೆದುಹಾಕುವುದು ಅಥವಾ ಕದ್ದಿರುವುದು. `ಹರಿ ಹರತಿ ಪಾಪನಿ' ಎನ್ನುವ ವಾಕ್ಯವಿದೆ. ಹರಿಯು ನಮ್ಮೆಲ್ಲಾ ಪಾಪ ಹಾಗೂ ಸಮಸ್ಯೆಗಳನ್ನು ತೆಗೆದುಹಾಕುತ್ತಾನೆ ಎಂದು ಇದರರ್ಥ.

English summary

interesting secrets of Vishnu’s life people don’t know

According to Hindu mythology, Lord Vishnu is considered to be the God of the world. The mythology talks about two faces of Lord Vishnu. On one hand, he is shown as quiet, pleasant and gentle. But his second face is dangerous where he is shown in a comfortable posture on Kalswarup Sheshnag (king of snakes).
X
Desktop Bottom Promotion