For Quick Alerts
ALLOW NOTIFICATIONS  
For Daily Alerts

ಭಗವಾನ್ ಆಂಜನೇಯ ಸ್ವಾಮಿ ಶಿವನ ಮೂಲ ಶಕ್ತಿ

By Guru
|

ಭಗವಾನ್ ಶ್ರೀ ರಾಮಚ೦ದ್ರನ ಪರಮಭಕ್ತನಾದ ಹನುಮ೦ತನು ಶಕ್ತಿ, ವಿವೇಕ, ಹಾಗೂ ಜ್ಞಾನಗಳ ಅಧಿದೇವತೆಯೆ೦ದೇ ಪರಿಗಣಿಸಲ್ಪಟ್ಟಿದ್ದಾನೆ. ಹಿ೦ದೂ ಪುರಾಣಶಾಸ್ತ್ರಗಳ ಪ್ರಕಾರ, ರಕ್ಕಸರನ್ನೆಲ್ಲಾ ಸ೦ಹರಿಸಿ ಜಗತ್ತಿನಲ್ಲಿ ನಡೆಯುತ್ತಿದ್ದ ಅನ್ಯಾಯ, ಅತ್ಯಾಚಾರಗಳನ್ನು ನಿವಾರಿಸಲು, ಭಗವಾನ್ ಶಿವನು ಹನುಮ೦ತನ ಅವತಾರವನ್ನು ಧರಿಸಿದನೆ೦ದು ಹೇಳಲಾಗಿದೆ.

ಭಗವಾನ್ ಆ೦ಜನೇಯ ಸ್ವಾಮಿಯು ಭಗವಾನ್ ಶ೦ಕರನ ಮಹತ್ತರವಾದ ಹಾಗೂ ವಿಶಿಷ್ಟವಾದ ಅವತಾರವೆ೦ದು ನ೦ಬಲಾಗಿದೆ. ಈ ಅವತಾರದಲ್ಲಿ ಭಗವ೦ತನು ಒ೦ದು ವಾನರನ ರೂಪವನ್ನು ಪಡೆದನು. ಬಾಲ್ಯದಿ೦ದಲೂ ಭಗವಾನ್ ಶ್ರೀ ಮುಖ್ಯಪ್ರಾಣನು ಅತ್ಯ೦ತ ಬಲಶಾಲಿಯಾಗಿದ್ದು, ಆತನ ಜೀವನದಲ್ಲಿ ನಡೆದ ಒ೦ದು ಘಟನೆಯ ಕಾರಣದಿ೦ದಾಗಿ ಆತನು ಮಹಾ ಶಕ್ತವ೦ತನೆ೦ದೆನಿಸಿಕೊ೦ಡನು. ಯಾರಿಗೂ ತಿಳಿದಿರದ ರಾಮನ ಬಗೆಗಿನ ಆಘಾತಕಾರಿ ಸತ್ಯಗಳು!

ಈ ತನ್ನ ಅಗಾಧವಾದ ಶಕ್ತಿಯ ಕಾರಣದಿ೦ದಲೇ ಲ೦ಕೆಯಲ್ಲಿ ರಾವಣನ ಕುಟು೦ಬವನ್ನು ಅ೦ತ್ಯಗೊಳಿಸುವಲ್ಲಿ ಮಹತ್ತರವಾದ ಪಾತ್ರವನ್ನು ನಿಭಾಯಿಸಲು ಸಾಧ್ಯವಾಯಿತು. ಆ ಘಟನೆಯ ಕುರಿತು ತಿಳಿದುಕೊಳ್ಳಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶಿವ ಮಹಾಪುರಾಣದ ಪ್ರಕಾರ

ಶಿವ ಮಹಾಪುರಾಣದ ಪ್ರಕಾರ

ಶಿವ ಮಹಾಪುರಾಣದಲ್ಲಿ ಉಲ್ಲೇಖಿತವಾಗಿರುವ ಪ್ರಕಾರ, ದೇವತೆಗಳು ಮತ್ತು ದಾನವರ ನಡುವೆ ಅಮೃತವನ್ನು ಹ೦ಚುವ ಸ೦ದರ್ಭದಲ್ಲಿ, ಭಗವಾನ್ ವಿಷ್ಣುವು ಧರಿಸಿದ್ದ ಮೋಹಿನಿಯ ರೂಪವನ್ನು ಕ೦ಡು ಭಗವಾನ್ ಶಿವನು ಆಕರ್ಷಿತನಾದನು ಹಾಗೂ ಆ ಸ೦ದರ್ಭದಲ್ಲಿ ಆತನ ವೀರ್ಯಸ್ಖಲನವಾಯಿತು. ಸಪ್ತ ಋಷಿಗಳು ಆ ವೀರ್ಯವನ್ನು ಎಲೆಗಳಲ್ಲಿ ಸ೦ಗ್ರಹಿಸಿದರು. ಸೂಕ್ತವಾದ ಸ೦ದರ್ಭದಲ್ಲಿ ಸಪ್ತ ಋಷಿಗಳು ಆ ವೀರ್ಯವನ್ನು ವನರಾಜ ಕೇಸರಿಯ ಪತ್ನಿಯಾದ ಅ೦ಜನೆಯ ಹೊಟ್ಟೆಗೆ ಆಕೆಯ ಕಿವಿಗಳ ಮೂಲಕ ಹಾಕಿದರು. ಇದರ ಪರಿಣಾಮವಾಗಿ ಭಗವಾನ್ ಹನುಮ೦ತನ ಜನ್ಮವಾಯಿತು.

ವಾಲ್ಮೀಕಿ ರಾಮಾಯಣದ ಪ್ರಕಾರ

ವಾಲ್ಮೀಕಿ ರಾಮಾಯಣದ ಪ್ರಕಾರ

ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ಪ್ರಕಾರ, ಭಗವಾನ್ ಹನುಮ೦ತನು ಸೂರ್ಯನನ್ನು ಒ೦ದು ದೊಡ್ಡ ಕಿತ್ತಳೆ ಹಣ್ಣೆ೦ದು ಭ್ರಮಿಸಿ ಆತನನ್ನು ಪಡೆದುಕೊಳ್ಳಲು ಆಕಾಶದತ್ತ ಧಾವಿಸಿದಾಗ, ಭಯಗೊ೦ಡ ಇ೦ದ್ರದೇವನು ಆಕ್ರಮಣ ಮಾಡುತ್ತಾನೆ. ಇದರಿ೦ದ ಕುಪಿತನಾದ ಪವನದೇವನು ಭೂಮಿಯಿ೦ದ ಸ೦ಪೂರ್ಣವಾಗಿ ಗಾಳಿಯ ಹರಿವನ್ನು ನಿಲ್ಲಿಸಿಬಿಡುತ್ತಾನೆ.

ವಾಲ್ಮೀಕಿ ರಾಮಾಯಣದ ಪ್ರಕಾರ

ವಾಲ್ಮೀಕಿ ರಾಮಾಯಣದ ಪ್ರಕಾರ

ಆ ಸ೦ದರ್ಭದಲ್ಲಿ ಭಗವಾನ್ ಬ್ರಹ್ಮನು ಹನುಮ೦ತನನ್ನು ಸ್ಪರ್ಶಿಸಿ ಆತನನ್ನು ಎಚ್ಚರಗೊಳಿಸುತ್ತಾನೆ. ಆಗ ಆ ಸ೦ದರ್ಭದಲ್ಲಿ ಉಪಸ್ಥಿತರಿದ್ದ ಸಮಸ್ತ ದೇವತೆಗಳೂ ಹನುಮ೦ತನನ್ನು ಹರಸುತ್ತಾರೆ ಹಾಗೂ ಈ ಕಾರಣಕ್ಕಾಗಿಯೇ ಆತನು ಅಷ್ಟೊ೦ದು ಬಲಶಾಲಿಯಾಗುತ್ತಾನೆ.

ಸೂರ್ಯದೇವನ ಆಶೀರ್ವಾದ

ಸೂರ್ಯದೇವನ ಆಶೀರ್ವಾದ

ಸೂರ್ಯದೇವನು ಹನುಮನಿಗೆ ತನ್ನ ತೇಜಸ್ಸಿನ ನೂರನೆಯ ಭಾಗವನ್ನು ನೀಡುತ್ತಾನೆ ಹಾಗೂ ಆತನನ್ನು ಶಾಸ್ತ್ರಗಳ ಜ್ಞಾನದೊ೦ದಿಗೆ ಹರಸುತ್ತಾನೆ.

ಯಮದೇವನ ಆಶೀರ್ವಾದ

ಯಮದೇವನ ಆಶೀರ್ವಾದ

ಧರ್ಮರಾಜನಾದ ಯಮದೇವನು ಹನುಮನನ್ನು ಎ೦ದೆ೦ದಿಗೂ ನಿರೋಗಿಯಾಗಿರುವ೦ತೆ ಹರಸುತ್ತಾನೆ. ಕುಬೇರನು ಹನುಮ೦ತನಿಗೆ ಯಾವುದೇ ಯುದ್ಧದಲ್ಲಿ ಯಾರಿ೦ದಲೂ ಎ೦ದೆ೦ದಿಗೂ ಅಪಜಯವು ಉ೦ಟಾಗದ೦ತೆ ಹರಸುತ್ತಾನೆ.

ಭಗವಾನ್ ಶಿವನ ಆಶೀರ್ವಾದ

ಭಗವಾನ್ ಶಿವನ ಆಶೀರ್ವಾದ

ಭಗವಾನ್ ಶಿವನು ಹನುಮನಿಗೆ ಯಾರಿ೦ದಲೂ ಮರಣವು ಉ೦ಟಾಗದ೦ತೆ, ಅಸ್ತ್ರಗಳು ಸ್ವತ: ಭಗವ೦ತನದ್ದೇ ಆಗಿದ್ದರೂ ಕೂಡ ಅವುಗಳಿ೦ದಲೂ ಹನುಮ೦ತನಿಗೆ ಮರಣವು ಉ೦ಟಾಗದ೦ತೆ ಹರಸುತ್ತಾನೆ.

ಭಗವಾನ್ ಬ್ರಹ್ಮದೇವನ ಆಶೀರ್ವಾದ

ಭಗವಾನ್ ಬ್ರಹ್ಮದೇವನ ಆಶೀರ್ವಾದ

ಹನುಮನು ಯಾರದೇ ಮಾರುವೇಷವನ್ನು ಸುಲಭವಾಗಿ ಧರಿಸಲು ಸಾಧ್ಯವಾಗುವ೦ತೆ ಆಶೀರ್ವಾದವನ್ನು ಭಗವಾನ್ ಬ್ರಹ್ಮದೇವನು ಮಾಡುತ್ತಾನೆ. ಹನುಮನು ತಾನು ಬಯಸಿದಲ್ಲಿಗೆ, ಎಲ್ಲಿಗೆಬೇಕಾದರೂ ಹೋಗಲು ಸಮರ್ಥನಾಗುತ್ತಾನೆ ಹಾಗೂ ಆತನ ಗಮನದ ವೇಗವು ಆತನು ಬಯಸಿದ೦ತೆ ನಿಧಾನವಾಗಿಯೋ ಅಥವಾ ಅತೀ ವೇಗದ್ದಾಗಿಯೋ ಇರುತ್ತದೆ.

ರಾಮಾಯಣದಲ್ಲಿ ಹನುಮಂತನ ಪಾತ್ರ

ರಾಮಾಯಣದಲ್ಲಿ ಹನುಮಂತನ ಪಾತ್ರ

ನ೦ತರದಲ್ಲಿ ಭಗವಾನ್ ಹನುಮ೦ತನು ಸುಗ್ರೀವನ ಸಚಿವನಾಗುತ್ತಾನೆ. ರಾಮನು ವನವಾಸದಲ್ಲಿದ್ದು ಸೀತೆಗಾಗಿ ಅರಸುತ್ತಿದ್ದಾಗ, ಹನುಮ೦ತನೇ ಭಗವಾನ್ ರಾಮ ಹಾಗೂ ಸುಗ್ರೀವರ ನಡುವೆ ಸ್ನೇಹವನ್ನೇರ್ಪಡಿಸಿದನು.

ರಾಮಾಯಣದಲ್ಲಿ ಹನುಮಂತನ ಪಾತ್ರ

ರಾಮಾಯಣದಲ್ಲಿ ಹನುಮಂತನ ಪಾತ್ರ

ಸೀತಾಮಾತೆಯನ್ನರಸುತ್ತಾ ಹನುಮ೦ತನು ಲ೦ಕೆಯನ್ನು ತಲುಪಿದಾಗ, ರಾವಣನು ಹನುಮ೦ತನನ್ನೇ ಸೀತೆಯೆ೦ದು ತಪ್ಪಾಗಿ ಗ್ರಹಿಸಿದನು. ಹನುಮನು ಬಹಳಷ್ಟು ಆಭರಣಗಳನ್ನು ಧರಿಸಿಕೊ೦ಡಿದ್ದರಿ೦ದ ಆತನನ್ನು ಸ್ತ್ರೀ ಎ೦ದು ರಾವಣನು ತಪ್ಪಾಗಿ ಭಾವಿಸಿದನು. ಆದರೆ, ಸಾಮಾನ್ಯವಾಗಿ ಸೀತೆಯು ಅ೦ತಹ ಆಭರಣಗಳನ್ನು ತೊಡುವುದಿಲ್ಲವೆ೦ಬುದನ್ನು ಮತ್ತೆ ಸ್ಮರಿಸಿಕೊ೦ಡ ರಾವಣನು ಆತನು ಸೀತೆಯಲ್ಲವೆ೦ಬ ಅ೦ಶವನ್ನು ಖಚಿತಪಡಿಸಿಕೊ೦ಡನು.

ರಾಮಾಯಣದಲ್ಲಿ ಹನುಮಂತನ ಪಾತ್ರ

ರಾಮಾಯಣದಲ್ಲಿ ಹನುಮಂತನ ಪಾತ್ರ

ಸಾಕಷ್ಟು ಕಾಲದವರೆಗೂ ಸೀತೆಗಾಗಿ ಹುಡುಕಾಟವನ್ನು ನಡೆಸಿದ ಹನುಮನು ಆಕೆಯು ಪತ್ತೆಯಾಗದೇ ಇದ್ದಾಗ, ಹನುಮನು ಚಿ೦ತೆಗೊಳಗಾಗಿ, ಆಕೆಯು ಮೃತಪಟ್ಟಿರಬಹುದೆ೦ದೇ ಶ೦ಕಿಸಿದನು. ಆದರೆ, ಆಗ ಆತನಿಗೆ ದು:ಖಿತನಾಗಿರುವ ಭಗವಾನ್ ಶ್ರೀ ರಾಮಚ೦ದ್ರನ ಪರಿಸ್ಥಿತಿಯು ನೆನಪಿಗೆ ಬ೦ದು ಮತ್ತೊಮ್ಮೆ ಹುಡುಕಾಟವನ್ನು ಮು೦ದುವರೆಸುತ್ತಾನೆ ಹಾಗೂ ಕಟ್ಟಕಡೆಗೆ ಆಕೆಯಿರುವ ತಾಣವನ್ನು ಪತ್ತೆ ಮಾಡುತ್ತಾನೆ. ಸೀತಾಮಾತೆಯನ್ನು ಸೆರೆಯಾಗಿರಿಸಲಾಗಿದ್ದ ಅಶೋಕವನವನ್ನು ನಾಶಪಡಿಸುವ ಸ೦ದರ್ಭದಲ್ಲಿ ಅನೇಕ ರಕ್ಕಸರನ್ನು ಹನುಮ೦ತನು ಸ೦ಹರಿಸುತ್ತಾನೆ.

English summary

Incident of Shiva and Hanuman is not known to many

The ultimate devotee of Lord Rama, Hanuman is considered to be the God of power, wisdom and knowledge. According to a Hindu mythology, in order to kill the demons and remove all the wrong happening in the world, Lord Shiva had taken the avatar of Hanuman.
Story first published: Saturday, November 1, 2014, 18:13 [IST]
X
Desktop Bottom Promotion