For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮದಲ್ಲಿ ಅನ್ನಪ್ರಾಶನ ಸಂಸ್ಕಾರದ ಮಹತ್ವ

By Arshad
|

ಪ್ರತಿ ತಂದೆತಾಯಿಯರು ತಮಗೆ ಹುಟ್ಟಿದ ಮಕ್ಕಳಿಗೆ ತಮ್ಮ ಕುಟುಂಬ, ಧರ್ಮಕ್ಕನುಸಾರವಾದ ಸಂಸ್ಕಾರ ಮತ್ತು ವಿಧಿಗಳನ್ನು ಅನುಸರಿಸುತ್ತಾರೆ. ಅನ್ನಪ್ರಾಶನವೂ ಇಂತಹ ಒಂದು ಮಹತ್ವದ ವಿಧಿವತ್ತಾದ ನಡವಳಿಕೆಯಾಗಿದ್ದು ಮಗು ಹಾಲಿನ ಜೊತೆಗೇ ಇತರ ಘನ ಆಹಾರಗಳನ್ನು ಪ್ರಥಮ ಬಾರಿಗೆ ಸ್ವೀಕರಿಸುವ ಸಂದರ್ಭದಲ್ಲಿ ಆಚರಿಸುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ಇದುವರೆಗೆ ತಾಯಿಹಾಲನ್ನೇ ನೆಚ್ಚಿಕೊಂಡ ಮಗುವನ್ನು ಘನ ಆಹಾರ ಸ್ವೀಕರಿಸುವ ಮೂಲಕ ಸ್ವತಂತ್ರವಾಗಿ ಜೀವಿಸಲು ಅನುವು ಮಾಡಿಕೊಡುವ ಸಾಂಸ್ಕೃತಿಕ ವಿಧಿಯೂ ಆಗಿದೆ. ಮಗುವಿನ 'ಕೇಶ ಮುಂಡನ', ಹಿಂದೂ ಸಂಸ್ಕೃತಿಯ ಬಿಂಬ...

ಈ ಬಗ್ಗೆ ಪುರಾಣಗಳನ್ನು ಕೆದಕಿದರೆ ಈ ವಿಧಿಯನ್ನು ಸೂತ್ರಗಳನ್ನು ಯಾವಾಗ ಬರೆಯಲಾಗಿತ್ತೋ ಅಂದಿನವರೆಗೂ ಅನುಸರಿಸಲಾಗುತ್ತಿತ್ತು ಎಂದು ಕಂಡುಬರುತ್ತದೆ. ಸೂತ್ರಗಳನ್ನು ಬರೆದ ಸಮಯ ಮತ್ತು ಸ್ಥಳದ ಅಂದಾಜಿನ ಪ್ರಕಾರ ಇದು ಇಂದಿನ ಭಾರತ-ಇರಾನ್ ಪ್ರದೇಶದಲ್ಲಿ ಮೊದಲು ಪ್ರಾರಂಭವಾಗಿದ್ದಿದಿರಬಹುದು. ಆದ್ದರಿಂದ ಈ ವಿಧಿ ಪಾರ್ಸಿ ಜನರ ಸಂಸ್ಕೃತಿಯಲ್ಲಿಯೂ ಕಂಡುಬರುತ್ತದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ: ಪವಿತ್ರ ದಾರ-ಜನಿವಾರದ ಮಹಿಮೆ ಹಾಗೂ ಪ್ರಾಮುಖ್ಯತೆ

ಅನ್ನಪ್ರಾಶನವನ್ನು ಯಾವಾಗ ಆಚರಿಸಲಾಗುತ್ತದೆ?

ಅನ್ನಪ್ರಾಶನವನ್ನು ಯಾವಾಗ ಆಚರಿಸಲಾಗುತ್ತದೆ?

ಸಾಮಾನ್ಯವಾಗಿ ಮಗುವಿಗೆ ಆರು ತಿಂಗಳು ತುಂಬುತ್ತಿದ್ದಂತೆ ಪ್ರಾರಂಭಗೊಂಡು ಒಂದು ವರ್ಷ ಕಳೆಯುವ ಮುನ್ನ ಆಚರಿಸಲಾಗುತ್ತದೆ. ಇದಕ್ಕೆ ನಿರ್ದಿಷ್ಟವಾಗಿ ಇದೇ ದಿನ ಆಗಬೇಕೆಂದೇನಿಲ್ಲ, ಒಟ್ಟಾರೆ ತಾಯಿಹಾಲನ್ನು ಬಿಟ್ಟು ಅನ್ನವನ್ನು ತಿನ್ನಲು ಸಮರ್ಥ ಎಂದು ಕಂಡುಕೊಂಡ ಇದರ ನಡುವೆ ಆಗಬಹುದು. ಗಂಡುಮಕ್ಕಳಿಗೆ ಸಮಸಂಖ್ಯೆಯ ತಿಂಗಳುಗಳಲ್ಲಿ, ಅಂದರೆ ಆರು ಮತ್ತು ಎಂಟನೆಯ ತಿಂಗಳಲ್ಲಿ ನೆರವೇರಿಸಿದರೆ ಹೆಣ್ಣು ಮಕ್ಕಳಿಗೆ ಬೆಸ ಸಂಖ್ಯೆಯ ತಿಂಗಳು ಅಂದರೆ ಐದನೆಯ ಅಥವಾ ಏಳನೆಯ ತಿಂಗಳಲ್ಲಿ ನೆರವೇರಿಸಲಾಗುತ್ತದೆ.

ಗೃಹ್ಯಸೂತ್ರದ ಪ್ರಕಾರ

ಗೃಹ್ಯಸೂತ್ರದ ಪ್ರಕಾರ

ಗೃಹ್ಯಸೂತ್ರದ ಪ್ರಕಾರ ಮಗುವಿಗೆ ಆರರಿಂದ ಏಳು ತಿಂಗಳಾಗುತ್ತಲೇ ಅನ್ನಪ್ರಾಶನವನ್ನು ನೆರವೇರಿಸಬೇಕಾಗಿದೆ. ಆದರೆ ಮಗುವಿಗೆ ಕನಿಷ್ಠ ನಾಲ್ಕು ತಿಂಗಳಾಗಲಿಕ್ಕೂ ಮುನ್ನ ಇದಕ್ಕೆ ನಿಷೇಧವಿದೆ. ಅಲ್ಲದೇ ಮಗು ಅತಿ ದುರ್ಬಲವಾಗಿದ್ದರೆ ಅನ್ನವನ್ನು ಜೀರ್ಣಿಸಿಕೊಳ್ಳ ಶಕ್ತಿ ಬರುವವರೆಗೂ ಮುಂದೂಡಬಹುದಾಗಿದೆ. ಆದರೆ ಮಗುವಿಗೆ ಒಂದು ವರ್ಷ ತುಂಬುವ ಮುನ್ನ ನೆರವೇರಿಸಬೇಕಾದುದು ಕಡ್ಡಾಯವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಗೃಹ್ಯಸೂತ್ರದ ಪ್ರಕಾರ

ಗೃಹ್ಯಸೂತ್ರದ ಪ್ರಕಾರ

ಅಂದರೆ ಅನ್ನಪ್ರಾಶನ ತಡವಾಗಿಸಲೆಂದು ಅದುವರೆಗೆ ಮಗುವಿಗೆ ಅರ್ಹವಾಗಿ ತಿನ್ನಿಸಬೇಕಾದ ಘನ ಆಹಾರಗಳನ್ನು ತಿನ್ನಿಸದಿರುವುದೂ ತಪ್ಪಾಗುತ್ತದೆ. ಸಾಮಾನ್ಯವಾಗಿ ಮಗುವಿಗೆ ಮೊದಲ ಹಾಲುಹಲ್ಲು ಒಂದು ಗೆರೆಯಂತೆ ಯಾವಾಗ ಮೂಡುತ್ತದೆಯೋ ಅದನ್ನು ಸೂಕ್ತ ಸಮಯವೆಂದು ಪರಿಗಣಿಸಲಾಗುತ್ತದೆ. ಈಗ ಘನ ಆಹಾರ ಸ್ವೀಕರಿಸಲು ಮಗುವಿನ ಹೊಟ್ಟೆ ಸಿದ್ಧವಾಗಿದೆ ಎಂದು ನೀಡುವ ಸೂಚನೆಯಾಗಿದೆ.

ಅನ್ನಪ್ರಾಶನವನ್ನು ಎಲ್ಲಿ ನೆರವೇರಿಸಬೇಕು?

ಅನ್ನಪ್ರಾಶನವನ್ನು ಎಲ್ಲಿ ನೆರವೇರಿಸಬೇಕು?

ಅನ್ನಪ್ರಾಶನವನ್ನು ಮಗು ಹುಟ್ಟಿದ ಮನೆಯಲ್ಲಿ ಅಥವಾ ದೇವಾಲಯದಲ್ಲಿ, ಎಲ್ಲಿ ಸೂಕ್ತ ಎನಿಸುತ್ತದೆಯೋ ಅಲ್ಲಿ ನೆರವೇರಿಸಬಹುದು. ಈ ಕಾರ್ಯಕ್ರಮವನ್ನು ವಿಧಿವತ್ತಾಗಿ ನೆರವೇರಿಸಲು ಪೂಜಾರಿಯವರ ನೆರವು ಅಗತ್ಯ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅನ್ನಪ್ರಾಶನವನ್ನು ಎಲ್ಲಿ ನೆರವೇರಿಸಬೇಕು?

ಅನ್ನಪ್ರಾಶನವನ್ನು ಎಲ್ಲಿ ನೆರವೇರಿಸಬೇಕು?

ಈ ಸಮಾರಂಭದಲ್ಲಿ ಮಂಗಳವಾದ್ಯ ಮತ್ತು ಮಂತ್ರಘೋಷಗಳ ನಡುವೆ ಮಗುವಿನ ತಂದೆ ಅಥವಾ ಕುಟುಂಬದ ಹಿರಿಯರು ಮೊದಲ ತುತ್ತನ್ನು ಮಗುವಿಗೆ ತಿನ್ನಿಸುವ ಮೂಲಕ ನೆರವೇರಿಸಲಾಗುತ್ತದೆ. ಈ ತುತ್ತಿನಲ್ಲಿ ಅನ್ನ, ತುಪ್ಪ ಮತ್ತು ಕೊಂಚ ಸಕ್ಕರೆ ಅಥವಾ ಬೆಲ್ಲವನ್ನು ಮಿಶ್ರಣ ಮಾಡಿರಲಾಗುತ್ತದೆ. ಕೆಲವು ಸಂಸ್ಕೃತಿಗಳಲ್ಲಿ ಅನ್ನದ ಪಾಯಸ ಅಥವಾ ಖೀರ್ ಅನ್ನೂ ತಿನ್ನಿಸಲಾಗುತ್ತದೆ.

ಅನ್ನಪ್ರಾಶನದ ಮಹತ್ವ

ಅನ್ನಪ್ರಾಶನದ ಮಹತ್ವ

ಈ ಕಾರ್ಯಕ್ರಮದಲ್ಲಿ ಮಗುವಿಗೆ ತಿನ್ನಿಸುವ ಮೊದಲು ದೇವದೇವತೆಗಳಿಗೆ ಅನ್ನ ಸಂತರ್ಪಣೆ ನೀಡಲಾಗುತ್ತದೆ. ದೇವರ ಸ್ತುತಿ ಮತ್ತು ಪೂಜೆಗಳ ಮೂಲಕ ದೇವರ ಅನುಗ್ರಹ ಈ ಮಗುವಿನ ಮೇಲೆ ಸದಾ ಇರಲಿ, ಜೀವನಪರ್ಯಂತ ಈ ಮಗು ಆರೋಗ್ಯಕರವಾಗಿ ಮತ್ತು ಸಂತೋಷದಿಂದ ಬಾಳಲಿ, ಉತ್ತಮ ಅನ್ನಾಹಾರಗಳನ್ನು ಸೇವಿಸುವಂತಾಗಲಿ ಎಂದು ಹಾರೈಸಲಾಗುತ್ತದೆ.

ಅನ್ನಪ್ರಾಶನದ ಸಮಯದಲ್ಲಿ ಉಚ್ಛರಿಸುವ ಮಂತ್ರ ಏನು ಹೇಳುತ್ತದೆ

ಅನ್ನಪ್ರಾಶನದ ಸಮಯದಲ್ಲಿ ಉಚ್ಛರಿಸುವ ಮಂತ್ರ ಏನು ಹೇಳುತ್ತದೆ

ಈ ಸಮಯದಲ್ಲಿ ಹೇಳುವ ಮಂತ್ರಗಳ ಸಾರ ಇಂತಿದೆ: ಜೀವ ಮತ್ತು ಜೀವನಾಧಾರವಾಗಿರುವ ಚೈತನ್ಯದಾಯೀ ಅನ್ನವನ್ನು ಮಗುವಿಗೆ ಮೊದಲು ನೀಡುವ ಮುಹೂರ್ತದಂದು ದೇವದೇತೆಗಳು ಮಗುವಿನ ಜೀರ್ಣಕ್ರಿಯೆ, ಅಗ್ನಿಬಲ, ದೇಹಪುಷ್ಠಿ , ಇಂದ್ರಿಯ ತುಷ್ಟಿ ಮೊದಲಾದವು ಅಂದು ಹಾಗೂ ಮುಂದು ಉತ್ತಮವಾಗಿ, ಮಗು ಉತ್ತಮ ಆರೋಗ್ಯ, ಆಯುಷ್ಯವಂತ, ಆತ್ಮವಂತವಾಗಲಿ ಎಂದು ಪ್ರಾರ್ಥಿಸಿ ಪೂಜಿಸಲಾಗುತ್ತದೆ.

ಅನ್ನಪ್ರಾಶನದ ಬಳಿಕ ಯಾವ ಕಾರ್ಯಕ್ರಮವಿದೆ?

ಅನ್ನಪ್ರಾಶನದ ಬಳಿಕ ಯಾವ ಕಾರ್ಯಕ್ರಮವಿದೆ?

ಸಾಮಾನ್ಯವಾಗಿ ಅನ್ನಪ್ರಾಶನದ ಬಳಿಕ ಮಗುವನ್ನು ಹಲವು ವಸ್ತುಗಳಿರುವ ಕಡೆ ಸ್ವತಂತ್ರವಾಗಿ ಬಿಡಲಾಗುತ್ತದೆ. ಹಲವು ಉದ್ಯೋಗಗಳಿಗೆ ಸಂಬಂಧಿಸಿದ ಆಟಿಕೆಗಳನ್ನು ಇಲ್ಲಿಟ್ಟು ಮಗುವೇ ತನ್ನ ಆಯ್ಕೆಯ ಆಟಿಕೆಯನ್ನು ಪಡೆದುಕೊಳ್ಳುವಂತೆ ಮಾಡಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅನ್ನಪ್ರಾಶನದ ಬಳಿಕ ಯಾವ ಕಾರ್ಯಕ್ರಮವಿದೆ?

ಅನ್ನಪ್ರಾಶನದ ಬಳಿಕ ಯಾವ ಕಾರ್ಯಕ್ರಮವಿದೆ?

ಮಗು ಯಾವ ಆಟಿಕೆಯನ್ನು ಅಥವಾ ವಸ್ತುವನ್ನು ಹೆಚ್ಚು ಇಷ್ಟಪಟ್ಟಿತೋ ಅದನ್ನೇ ತನ್ನ ವೃತ್ತಿಯಾಗಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಹೆಚ್ಚಿನವರು ನಂಬುತ್ತಾರೆ. ಸಾಂಪ್ರಾದಾಯಿಕವಾಗಿ ಪುಸ್ತಕ, ಲೇಖನಿ, ಹಣ್ಣುಗಳು, ಚಿನ್ನ, ಹಣ, ಕತ್ತಿ, ಆಟಿಕೆಗಳು ಮತ್ತು ಹೂವು ಈ ಎಂಟು ವಸ್ತುಗಳನ್ನು ಇರಿಸಲಾಗುತ್ತದೆ.

English summary

Importance Of The Annaprashana Ceremony

Every child has to undergo a few rites of passage according to the religion, beliefs and customs of the family. Of these rites, Annaprashana or the ceremony in which the child eats solid food for the first time, forms the most important rite. In this ceremony, the child is weaned away from the mother and is made to eat solid food as a substitute for the mother's milk.
X
Desktop Bottom Promotion