For Quick Alerts
ALLOW NOTIFICATIONS  
For Daily Alerts

ಬಿಲ್ವಪತ್ರೆ ಎಲೆಗಳೆಂದರೆ ಶಿವನಿಗೇಕೆ ಅಷ್ಟೊಂದು ಅಚ್ಚುಮೆಚ್ಚು?

By Manu
|

ಬಿಲ್ವಪತ್ರೆಯು ಶಿವನಿಗೆ ಅತ್ಯಂತ ಪ್ರಿಯವಾದ ಎಲೆಯೆಂದು ಪರಿಗಣಿಸಲ್ಪಟ್ಟಿದೆ. ಶಿವನಿಗೆ ಒಂದು ಬಿಲ್ವಪತ್ರೆಯನ್ನು ಅರ್ಪಿಸಿ ನಾವು ಏನು ಕೇಳುತ್ತೇವೆಯೋ, ಅದನ್ನು ನೆರವೇರಿಸುತ್ತಾನೆ ಎಂಬ ಮಾತಿದೆ. ಬಿಲ್ವ ಪತ್ರೆಯು ಮೂರು ಎಲೆಗಳನ್ನು ಹೊಂದಿರುವ ಒಂದು ಗೊಂಚಲಿನಂತೆ ಕಾಣಿಸುತ್ತದೆ. ಇದು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಪ್ರತಿನಿಧಿಸುತ್ತದೆ ಎಂಬ ಮಾತಿದೆ. ಜೊತೆಗೆ ಇದು ಶಿವನಿಗೆ ಇರುವ ಮೂರು ಕಣ್ಣುಗಳನ್ನು ಸಹ ತೋರಿಸುತ್ತದೆ. ಶಿವ ಪೂಜೆಯಲ್ಲಿ ಇಂತಹ ತಪ್ಪುಗಳಾಗದಂತೆ ಎಚ್ಚರವಹಿಸಿ

ಬಿಲ್ವಪತ್ರೆಯು ಶಿವನ ಜೊತೆಗೆ ಒಂದು ವಿಶೇಷವಾದ ಸಂಬಂಧವನ್ನು ಹೊಂದಿದೆ. ಶಿವನಿಗೆ ಬಿಲ್ವಪತ್ರೆಯೆಂದರೂ, ಬಿಲ್ಪ ಪತ್ರೆಯ ಮರವೆಂದರೂ ತುಂಬಾ ಪ್ರೀತಿ. ಯಾರು ಬಿಲ್ಪ ಪತ್ರೆಯಿಂದ ಪೂಜಿಸುತ್ತಾರೋ, ಅವರ ಕರೆಗೆ ಶಿವ ಸ್ಪಂದಿಸುತ್ತಾನಂತೆ. ಇದಕ್ಕಾಗಿ ಶಿವಲಿಂಗಕ್ಕೆ ಬಿಲ್ವಾರ್ಚನೆ ಸಹ ಮಾಡಿಸುತ್ತಾರೆ.

ಶಿವನನ್ನು ತೃಪ್ತಿ ಪಡಿಸಲು ಬಿಲ್ವ ಪತ್ರೆ ಎಲೆಯಿಂದ ಪೂಜೆಮಾಡಬೇಕು. ಬಿಲ್ವ ಪತ್ರೆಯಿಲ್ಲದೆ ಶಿವನ ಪೂಜೆಯು ನಡೆಯುವುದಿಲ್ಲ ಎಂಬ ಮಟ್ಟಿಗೆ ಬಿಲ್ವ ಪತ್ರೆಗೆ ಸ್ಥಾನಮಾನವನ್ನು ನೀಡಲಾಗಿದೆ. ಹಾಗಾದರೆ ಯಾವ ಅಂಶಗಳು ಈ ಸಾಮಾನ್ಯ ಎಲೆಗೆ ಅಸಾಮಾನ್ಯ ಸ್ಥಾನಮಾನವನ್ನು ನೀಡಿವೆ? ಶಿವನಿಗೆ ಏಕೆ ಬಿಲ್ಪ ಪತ್ರೆಯ ಮೇಲೆ ಈ ಪರಿಯ ಮೋಹ ತಿಳಿದುಕೊಳ್ಳೋಣ ಬನ್ನಿ....

ಬಿಲ್ವಪತ್ರೆಯ ಕಥೆ

ಬಿಲ್ವಪತ್ರೆಯ ಕಥೆ

ಸ್ಕಂದ ಪುರಾಣದ ಪ್ರಕಾರ ಬಿಲ್ಪ ಪತ್ರೆಯ ಮರವು ಪಾರ್ವತಿಯ ಬೆವರ ಹನಿಗಳಿಂದ ಹುಟ್ಟಿಕೊಂಡಿತಂತೆ. ಒಮ್ಮೆ ಪಾರ್ವತಿಯ ಬೆವರ ಹನಿಗಳು ಮಂದಾರ ಪರ್ವತದ ಮೇಲೆ ಬಿದ್ದಾಗ ಈ ಮರ ಹುಟ್ಟಿಕೊಂಡಿತಂತೆ. ಪಾರ್ವತಿ ದೇವಿಯು ಈ ಮರದಲ್ಲಿ ತನ್ನ ಎಲ್ಲಾ ಅವತಾರಗಳ ರೂಪದಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಆಸ್ತಿಕರಲ್ಲಿ ಮನೆ ಮಾಡಿದೆ... ಮುಂದೆ ಓದಿ

ಬಿಲ್ವಪತ್ರೆಯ ಕಥೆ

ಬಿಲ್ವಪತ್ರೆಯ ಕಥೆ

ಪಾರ್ವತಿ ದೇವಿಯು ಗಿರಿಜೆಯಾಗಿ ಈ ಮರದ ಬೇರುಗಳಲ್ಲಿ ನೆಲೆಸಿರುತ್ತಾಳಂತೆ, ಮಹೇಶ್ವರಿಯಾಗಿ ಕಾಂಡದಲ್ಲಿ, ದಾಕ್ಷಾಯಿಣಿಯಾಗಿ ಕೊಂಬೆಗಳಲ್ಲಿ, ಪಾರ್ವತಿಯಾಗಿ ಎಲೆಗಳಲ್ಲಿ, ಕಾತ್ಯಾಯಿನಿಯಾಗಿ ಹಣ್ಣಿನಲ್ಲಿ ಮತ್ತು ಗೌರಿಯಾಗಿ ಹೂವುಗಳಲ್ಲಿ ನೆಲೆಸಿರುತ್ತಾಳಂತೆ. ಈ ಎಲ್ಲಾ ಶಕ್ತಿ ಸ್ವರೂಪಿಣಿಯರ ಜೊತೆಗೆ ಲಕ್ಷ್ಮೀ ದೇವಿಯು ಸಹ ಈ ಮರದಲ್ಲಿ ನೆಲೆಸಿರುತ್ತಾಳಂತೆ.

ಬಿಲ್ವಪತ್ರೆಯ ಕಥೆ

ಬಿಲ್ವಪತ್ರೆಯ ಕಥೆ

ಈ ಮರವು ಪಾರ್ವತಿ ದೇವಿಯ ಆವಾಸ ಸ್ಥಾನವಾಗಿರುವುದರಿಂದಾಗಿ ಇದು ಶಿವನ ಪ್ರೀತಿ ಪಾತ್ರ ಮರವಾಗಿದೆ. ಅದರಲ್ಲೂ ಸ್ವತಃ ಪಾರ್ವತಿಯೇ ಈ ಮರದ ಎಲೆಗಳಾಗಿರುವುದರಿಂದಾಗಿ ಆ ಎಲೆಗಳೆಂದರೆ ಶಿವನಿಗೆ ಇನ್ನೂ ಅಚ್ಚು ಮೆಚ್ಚು. ಒಂದು ನಂಬಿಕೆಯ ಪ್ರಕಾರ ಯಾರು ಈ ಬಿಲ್ಪಪತ್ರೆ ಅಥವಾ ಮರವನ್ನು ಸ್ಪರ್ಶಿಸುತ್ತಾರೋ, ಅವರ ಎಲ್ಲಾ ಪಾಪ ಕರ್ಮಗಳು ನಿವಾರಣೆಯಾಗುತ್ತದೆಯಂತೆ.

ಬಿಲ್ಪಪತ್ರೆಯ ವೈಜ್ಞಾನಿಕ ಅಂಶಗಳು

ಬಿಲ್ಪಪತ್ರೆಯ ವೈಜ್ಞಾನಿಕ ಅಂಶಗಳು

ಆಯುರ್ವೇದದ ಪ್ರಕಾರ ಬಿಲ್ವ ಪತ್ರೆಯಲ್ಲಿ ಹಲವಾರು ಔಷಧೀಯ ಗುಣಗಳು ಇವೆಯಂತೆ. ಆ ಮೂರು ಎಲೆಗಳ ಗುಚ್ಛವು ಸತ್ವ, ರಜಸ್ ಮತ್ತು ತಮಸ್ಸು ಎಂಬ ಗುಣಗಳನ್ನು ಸೂಚಿಸುತ್ತದೆಯಂತೆ. ಸತ್ವ ಗುಣವೆಂದರೆ ಧನಾತ್ಮಕ ಗುಣಗಳು ಮತ್ತು ತಮಸ್ಸು ಎಂದರೆ ನಕಾರಾತ್ಮಕ ಗುಣಗಳನ್ನು ಸೂಚಿಸುತ್ತದೆ... ಮುಂದೆ ಓದಿ

ಬಿಲ್ಪಪತ್ರೆಯ ವೈಜ್ಞಾನಿಕ ಅಂಶಗಳು

ಬಿಲ್ಪಪತ್ರೆಯ ವೈಜ್ಞಾನಿಕ ಅಂಶಗಳು

ಯಾರು ಈ ಎಲೆಗಳನ್ನು ಸ್ಪರ್ಶಿಸುತ್ತಾರೋ ಅವರಿಗೆ ಈ ಎಲೆಗಳಲ್ಲಿರುವ ಧನಾತ್ಮಕ ಶಕ್ತಿಯು ಸಂಚಯವಾಗುತ್ತದೆಯಂತೆ. ಆದ್ದರಿಂದಲೇ ಇದನ್ನು ಸ್ಪರ್ಶಿಸಿದರೆ ಪಾಪ ಕರ್ಮಗಳಿಂದ ಮುಕ್ತಿಯನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.

ಔಷಧೀಯ ಗುಣಗಳ ಆಗರ

ಔಷಧೀಯ ಗುಣಗಳ ಆಗರ

ಇದರ ಜೊತೆಗೆ ಬಿಲ್ವ ಪತ್ರೆಯ ಬೇರು, ತೊಗಟೆ, ಎಲೆಗಳು, ಹಣ್ಣುಗಳು ಪ್ರತಿಯೊಂದು ಸಹ ವಿವಿಧ ಬಗೆಯ ಔಷಧೀಯ ಗುಣಗಳನ್ನು ಹೊಂದಿದೆಯಂತೆ. ಈ ಪವಿತ್ರ ಮರವು ಹಲ್ಲುಗಳಲ್ಲಿ ರಕ್ತ ಸ್ರಾವವನ್ನು, ಡೈಸೆಂಟ್ರಿ (ಭೇದಿ), ಅಸ್ತಮಾ, ಕಾಮಾಲೆ, ಅನಿಮಿಯಾ ಇತ್ಯಾದಿಗಳನ್ನು ನಿವಾರಿಸುವ ಗುಣಗಳನ್ನು ಹೊಂದಿದೆಯಂತೆ. ಆದ್ದರಿಂದಲೇ ಇದನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮರಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ

English summary

Importance Of Belpatra Or Bilva Leaf

Belpatra means leaves of the Bel tree. Bilva leaves or the Belpatra is an important item which is used in the worship of Lord Shiva. The Bilva leaves is from the wood apple tree. This leaf is trifoliate which signifies the holy Trinity: Brahma, Vishnu and Shiva. It also signifies the three eyes of Lord Shiva.
X
Desktop Bottom Promotion