For Quick Alerts
ALLOW NOTIFICATIONS  
For Daily Alerts

ಯಜ್ಞಕುಂಡದಿಂದ ಆವಿರ್ಭವಿಸಿದ ದ್ರೌಪದಿಯ ಜನ್ಮ ರಹಸ್ಯ

By manu
|

ಮಹಾಭಾರತ ಮಹಾಕಾವ್ಯವು ಹಲವಾರು ನಿಗೂಢತೆಗಳನ್ನು ಹೊಂದಿರುವಂತಹದ್ದು. ಈ ಮಹಾಕಾವ್ಯದಲ್ಲಿ ನೀವು ಪ್ರೀತಿ, ಗೌರವ, ಸಾಹಸ, ಜಾಣ್ಮೆ, ಭಕ್ತಿ ಮತ್ತು ನೈತಿಕತೆಯನ್ನು ಒಂದು ಕಡೆಯಲ್ಲಿ ನೋಡಬಹುದು. ಇನ್ನೊಂದು ಕಡೆಯಿಂದ ನೀವು ದ್ವೇಷ, ವಿಶ್ವಾಸಘಾತುಕತೆ, ಮತ್ತು ಅನ್ಯಾಯ ನಮಗೆ ಕಾಣಸಿಗುತ್ತದೆ. ಹೀಗೆ ಮಹಾಭಾರತ ಮಹಾಕಾವ್ಯವು ಹಲವಾರು ನಿಗೂಢತೆಗಳನ್ನು ಹೊಂದಿರುವಂತಹದ್ದು.

ಇದರ ಮೂಲ ಹುಡುಕುತ್ತಾ ಹೋದರೆ ಅದರಲ್ಲಿ ಸಾವಿರಾರು ಕಥೆಗಳು ಹುಟ್ಟಿಕೊಳ್ಳುತ್ತದೆ. ಒಂದು ಕಥೆ ಅಂತ್ಯವಾಯಿತೆಂದರೆ ಮತ್ತೊಂದು ಅಲ್ಲಿಂದಲೇ ಆರಂಭವಾಗುತ್ತದೆ. ಕಥೆಯೊಳಗೆ ಕಥೆಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮಹಾಭಾರತದ ಪ್ರಮುಖ ಪಾತ್ರಧಾರಿಯಾಗಿರುವ ದ್ರೌಪದಿಯ ಜೀವನದ ಬಗ್ಗೆ ಕೂಡ ಕಥೆಯಿದೆ.

ಪಾಂಚಾಲ ರಾಜ್ಯದ ರಾಜನಾಗಿರುವ ದ್ರುಪದನು ತನಗೆ ಗಂಡು ಮಕ್ಕಳಿಲ್ಲವೆಂದು ಮಹಾಯಜ್ಞವನ್ನು ಮಾಡುತ್ತಿರುವ ಸಂದರ್ಭದಲ್ಲಿ ಅಗ್ನಿ ಕುಂಡದ ಅಗ್ನಿಯಿಂದ ಹುಟ್ಟಿ ಬಂದವಳೇ ದ್ರೌಪದಿ. ಅಪೂರ್ಣ ಸೌಂದರ್ಯವತಿಯಾಗಿದ್ದ ದ್ರೌಪದಿಯು ಪಂಚಪಾಂಡವರನ್ನು ಮದುವೆಯಾಗುತ್ತಾಳೆ. ಪರಮಾಶ್ಚರ್ಯ: ಪಾಂಡವರು ನಿಜಕ್ಕೂ ದ್ರೌಪದಿಯನ್ನು ಪ್ರೀತಿಸುತ್ತಿದ್ದರೇ?

ಮಹಾಭಾರತದಲ್ಲಿ ದ್ರೌಪದಿಯ ಬಗ್ಗೆ ಪ್ರತಿಯೊಂದು ವಿಷಯವು ಅತ್ಯಾಕರ್ಷಕವಾಗಿದೆ. ಆಕೆಯ ಅದ್ಭುತ ಸೌಂದರ್ಯ, ಜನ್ಮ ರಹಸ್ಯ, ಗೌರವ, ಭಕ್ತಿ, ಪ್ರೀತಿ, ಆಕೆಗಾಗುವ ಅವಮಾನ, ಅಲ್ಲದೆ ಆಕೆಯ ಕಠಿಣ ಶಪಥ ಎಲ್ಲವೂ ಸಮ್ಮೋಹನಗೊಳಿಸುತ್ತದೆ. ಬನ್ನಿ ಇನ್ನಷ್ಟು ಮಾಹಿತಿಗಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ದ್ರೌಪದಿಯ ಹುಟ್ಟು

ದ್ರೌಪದಿಯ ಹುಟ್ಟು

ಗುರು ದ್ರೋಣಾಚಾರ್ಯರ ಆಜ್ಞೆಯಂತೆ ಅರ್ಜುನನು ಯುದ್ಧದಲ್ಲಿ ದ್ರುಪದನನ್ನು ಸೋಲಿಸಿ ಆತನ ಅರ್ಧ ರಾಜ್ಯವನ್ನು ಕಬಳಿಸುತ್ತಾನೆ. ದ್ರೋಣಾಚಾರ್ಯರ ವಿರುದ್ಧ ಸೇಡು ತೀರಿಸಿಕೊಂಡು ತನ್ನ ಅರ್ಧ ರಾಜ್ಯವನ್ನು ವಾಪಸ್ಸು ಪಡೆಯಲು ತನಗೆ ಗಂಡು ಮಗ ಬೇಕೆಂದು ದ್ರುಪದನು ಯಜ್ಞ ಮಾಡುತ್ತಾನೆ.

ಪ್ರತೀಕಾರದ ಕಿಡಿ

ಪ್ರತೀಕಾರದ ಕಿಡಿ

ದ್ರೌಪದಿಯ ತ೦ದೆಯಾಗಿದ್ದ ದ್ರುಪದ ಮಹಾರಾಜನು, ದ್ರೋಣರಿಗೆ ಆಶ್ರಯವನ್ನು ನೀಡಿದ್ದ ಕುರುವ೦ಶವನ್ನು ಸರ್ವನಾಶ ಮಾಡುವ ಏಕೈಕ ಉದ್ದೇಶದಿ೦ದ ದ್ರೌಪದಿಗೆ ಜನ್ಮ ನೀಡಿದ್ದನು. ದ್ರೋಣರು ತನ್ನ ಶಿಷ್ಯ೦ದಿರಾದ ಪಾ೦ಡವರು ಹಾಗೂ ಕೌರವರ ಮುಖೇನ ಪಾ೦ಚಾಲ ದೇಶವನ್ನು ಗೆದ್ದು ಅದನ್ನು ವಿಭಜಿಸುವ ಹುನ್ನಾರವನ್ನು ಹೂಡಿದ್ದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪ್ರತೀಕಾರದ ಕಿಡಿ

ಪ್ರತೀಕಾರದ ಕಿಡಿ

ದ್ರೋಣರು ಇ೦ತಹ ಒ೦ದು ಕ್ರಮಕ್ಕೆ ಮು೦ದಾಗುವುದಕ್ಕೆ ದ್ರುಪದನ ಮೇಲೆ ಅವರಿಗಿದ್ದ ಹಳೆಯ ದ್ವೇಷವೇ ಕಾರಣವಾಗಿದ್ದಿತು. ಹೀಗೆ, ದ್ರೌಪದಿಯು ನೇರವಾಗಿ ಪ್ರೌಢ ಕನ್ಯೆಯಾಗಿಯೇ ಯಜ್ಞಕು೦ಡದಿ೦ದ ಆವಿರ್ಭವಿಸಿದಳು. ಹೀಗಾಗಿ ಆಕೆಗೆ ಬಾಲ್ಯವಾಗಲೀ, ಹೆತ್ತವರ ಆರೈಕೆಯಾಗಲೀ ಯಾವುದೂ ತಿಳಿದಿಲ್ಲವಾಗಿತ್ತು. ದ್ರೌಪದಿಯ ಹುಟ್ಟು ಹಾಗೂ ಪಾಲನೆಯು ದ್ವೇಷಸಾಧನೆಯ ಉದ್ದೇಶದಿ೦ದಲೇ ಕೂಡಿದ್ದು, ಒ೦ದು ಕುಟು೦ಬವನ್ನು ನಿರ್ನಾಮಗೊಳಿಸುವ ಉದ್ದೇಶವು ಅದರ ಹಿ೦ದೆ ಅಡಗಿತ್ತು.

ಕುರು ವಂಶದ ವಿನಾಶಕಿ

ಕುರು ವಂಶದ ವಿನಾಶಕಿ

ದ್ರೌಪದಿ ಯಜ್ಞ ಕುಂಡದ ಬೆಂಕಿಯಿಂದ ಹುಟ್ಟಿ ಬಂದಾಗ ಆಕೆ ಕುರು ವಂಶವನ್ನು ಸಂಪೂರ್ಣವಾಗಿ ನಾಶ ಮಾಡುತ್ತಾಳೆ ಎನ್ನುವ ಆಕಾಶವಾಣಿಯೊಂದು ಕೇಳಿಬರುತ್ತದೆ.

ದ್ರೌಪದಿಯ ಬಣ್ಣನೆ

ದ್ರೌಪದಿಯ ಬಣ್ಣನೆ

ಮಹಾಭಾರತದಲ್ಲಿ ದ್ರೌಪದಿಯನ್ನು ಅಪೂರ್ವ ಸುಂದರಿಯೆಂದು ಬಣ್ಣಿಸಲಾಗಿದೆ. ದ್ರೌಪದಿ ಆ ಸಮಯದ ಅತ್ಯಂತ ಸುಂದರಿಯೆಂದು ಮಹಾಭಾರತದಲ್ಲಿ ಬಣ್ಣಿಸಲಾಗಿದೆ. ಅಪೂರ್ವ ಸುಂದರಿಯಾಗಿದ್ದ ದ್ರೌಪದಿಯ ಕಣ್ಣುಗಳು ಕಮಲದ ಎಸಲುಗಳಂತೆ ಮತ್ತು ಆಕೆಯಲ್ಲಿ ಯೌವನ, ಜಾಣ್ಮೆ ಎರಡೂ ತುಂಬಿತ್ತು ಎಂದು ಬಣ್ಣಿಸಲಾಗಿದೆ. ದ್ರೌಪದಿಯ ದೇಹದಿಂದ ಸೂಸುತ್ತಿದ್ದ ಸುವಾಸನೆಯು ಸುಮಾರು ಎರಡು ಮೈಲುಗಳಷ್ಟು ದೂರಕ್ಕೆ ಹಬ್ಬಿ ಜನರ ಮೂಗನ್ನು ಆವರಿಸುತ್ತಿತ್ತು. ಆಕೆ ಇದುವರೆಗೆ ಹುಟ್ಟಿರುವ ಭೂಲೋಕದ ಅತ್ಯಂತ ಸುಂದರ ಯುವತಿ ಎಂದು ಬಣ್ಣಿಸಲಾಗಿದೆ.

ದ್ರೌಪದಿಯ ಸ್ವಯಂವರ

ದ್ರೌಪದಿಯ ಸ್ವಯಂವರ

ದ್ರುಪದ ತನ್ನ ಮಗಳನ್ನು ಅರ್ಜುನನಿಗೆ ಕೊಟ್ಟು ಮದುವೆ ಮಾಡಬೇಕೆಂದು ನಿರ್ಧರಿಸಿರುತ್ತಾನೆ. ಆದರೆ ವರ್ನವತದಲ್ಲಿ ಕೌರವರ ಸಂಚಿನಿಂದಾಗಿ ಪಾಂಡವರು ಸತ್ತರೆಂಬ ಸುದ್ದಿ ತಿಳಿದ ಆತ ದ್ರೌಪದಿಗಾಗಿ ಸ್ವಯಂವರವನ್ನು ಏರ್ಪಡಿಸುತ್ತಾನೆ ಮತ್ತು ಸ್ಪರ್ಧೆಯಲ್ಲಿ ಗೆದ್ದವರಿಗೆ ಆಕೆಯನ್ನು ಬಹುಮಾನವಾಗಿ ಘೋಷಿಸುತ್ತಾನೆ.

ಬಿಲ್ವಿಧ್ಯೆಯ ನಿಪುಣ

ಬಿಲ್ವಿಧ್ಯೆಯ ನಿಪುಣ

ಸ್ವಯಂವರ ಆಯೋಜನೆ ಮಾಡಿದ್ದ ದ್ರುಪದನು ತನ್ನ ಮಗಳನ್ನು ಮದುವೆಯಾಗುವಾತ ಬಿಲ್ವಿಧ್ಯೆಯಲ್ಲಿ ಜಗವನ್ನೇ ಗೆಲ್ಲುವವನಾಗಬೇಕೆಂದು ಬಯಸುತ್ತಾನೆ. ಇದಕ್ಕಾಗಿ ತಿರುಗುವ ಯಂತ್ರವೊಂದರಲ್ಲಿ ಕಾಣುವಂತಹ ಚಿಹ್ನೆಗಳಿಗೆ ಯಾರು ಬಾಣವನ್ನು ಬಿಡುತ್ತಾರೆಯಾ ಅವರೇ ತನ್ನ ಮಗಳನ್ನು ಮದುವೆಯಾಗುತ್ತಾರೆ ಎಂದು ದ್ರುಪದ ಘೋಷಿಸುತ್ತಾನೆ.

ಪಟ್ಟಕ್ಕಾಗಿ ವಿವಾದ

ಪಟ್ಟಕ್ಕಾಗಿ ವಿವಾದ

ವರ್ನವತ ಘಟನೆಯಲ್ಲಿ ಪಾಂಡವರು ಜೀವ ಉಳಿಸಿಕೊಂಡಿದ್ದಾರೆಂದು ತಿಳಿದ ಬಳಿಕ ದುರ್ಯೋದನನು ಪಟ್ಟಕ್ಕಾಗಿ ದೃತರಾಷ್ಟ್ರನನ್ನು ಓಲೈಸಿಕೊಳ್ಳುತ್ತಾನೆ. ದುರ್ಯೋದನನಿಗೆ ಪಟ್ಟಾಭಿಷೇಕ ಮಾಡಲಾಗುತ್ತದೆ. ಇದೇ ವೇಳೆ ಧೃತರಾಷ್ಟ್ರನು ಪಾಂಡವರನ್ನು ಹಸ್ತಿನಾಪುರಕ್ಕೆ ಕರೆಸಿ ರಾಜ್ಯವನ್ನು ಎರಡು ಭಾಗ ಮಾಡಲು ನಿರ್ಧರಿಸುತ್ತಾನೆ. ಇದಕ್ಕೆ ಯುದಿಷ್ಠಿರ ಒಪ್ಪಿಕೊಳ್ಳುತ್ತಾನೆ.

ಖಾಂದವಪ್ರಸ್ತ

ಖಾಂದವಪ್ರಸ್ತ

ಮಹಾಭಾರತದಲ್ಲಿ ಉಲ್ಲೇಖವಾಗಿರುವಂತಹ ಅತೀ ದೊಡ್ಡ ಮರುಭೂಮಿಯಾಗಿರುವ ಖಾಂದವಪ್ರಸ್ತವನ್ನು ಧೃತರಾಷ್ಟ್ರನು ಪಾಂಡವರಿಗೆ ರಾಜ್ಯವನ್ನಾಗಿ ನೀಡುತ್ತಾನೆ. ಕೃಷ್ಣನ ನೆರವಿನಿಂದ ಪಾಂಡವರು ಮರುಭೂಮಿಯಾಗಿದ್ದ ಖಾಂದವಪ್ರಸ್ತವನ್ನು ಹಚ್ಚಹಸಿರಿನಿಂದ ಕಂಗೊಳಿಸುವ ಇಂದ್ರಪ್ರಸ್ತವನ್ನಾಗಿ ಬದಲಾಯಿಸುತ್ತಾರೆ. ಕಣಿವೆಯೊಂದರಲ್ಲಿ ರಾಜ್ಯದ ಅರಮನೆಯನ್ನು ನಿರ್ಮಿಸಲಾಗುತ್ತದೆ.

ರಾಜಸುಯ ಯಜ್ಞ

ರಾಜಸುಯ ಯಜ್ಞ

ಇಂದ್ರಪ್ರಸ್ತದಲ್ಲಿ ಯುದಿಷ್ಠರನು ರಾಜಸುಯ ಯಜ್ಞವನ್ನು ಕೈಗೊಳ್ಳುತ್ತಾನೆ. ಇದರಂತೆ ಪಾಂಡವರು ಹಲವಾರು ರಾಜ್ಯಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ. ಭಾರತದ ಮೊದಲ ಸ್ತ್ರೀ ಸಮಾನತವಾದಿ ದ್ರೌಪದಿಯನ್ನು ಭಾರತದ ಪುರಾಣದಲ್ಲಿ ಬರುವ ಮೊದಲ ಸ್ತ್ರೀ ಸಮಾನವತವಾದಿ ಎಂದು ಪರಿಗಣಿಸಲಾಗುತ್ತದೆ. ಆಕೆಯ ಜನ್ಮದ ವೇಳೆ ಅಶರೀರವಾಣಿಯೊಂದು ಕೇಳಿಸಿದ್ದು, ಈ ಅಪೂರ್ಣ ಸುಂದರಿಯು ಕೌರವರ ನಾಶ ಮತ್ತು ಆ ಪ್ರದೇಶದಲ್ಲಿ ರಾಜ್ಯಭಾರ ನಡೆಸಲು ಹುಟ್ಟಿದಾಕೆ ಎಂದು ಹೇಳಿತ್ತು. ಜನ್ಮದ ಬಳಿಕ ದ್ರೌಪದಿಯು ಮಹಾಭಾರತದ ಮುಂದಿನ ಕೆಲವು ಘಟನೆಗಳಿಗೆ ಕಾರಣಳಾಗುತ್ತಾಳೆ.

ಸೌಂದರ್ಯದಿಂದ ಆಪತ್ತು

ಸೌಂದರ್ಯದಿಂದ ಆಪತ್ತು

ಸ್ವಯಂವರದಲ್ಲಿ ದ್ರೌಪದಿಯನ್ನು ಜಯಿಸಿ ತಂದ ಮೇಲೆ, ಅರ್ಜುನನು ಉದ್ದೇಶ ಪೂರ್ವಕವಾಗಿ ತನ್ನ ತಾಯಿಯನ್ನು ಕುರಿತು " ಮಾತೆ ನೋಡು, ನಾವು ಏನನ್ನು ತಂದಿದ್ದೇವೆ" ಎಂದು ಹೇಳಿದನು. ಇದನ್ನು ಕೇಳಿದ ಕುಂತಿಯು ಆಲೋಚಿಸದೆ ಮತ್ತು ಅತ್ತ ಸಹ ತಿರುಗಿ ನೋಡದೆ, ಏನನ್ನು ತಂದಿರುವಿರೋ, ಅದನ್ನು ಎಲ್ಲರು ಸಮಾನವಾಗಿ ಐದು ಜನ ಹಂಚಿಕೊಳ್ಳಿ ಎಂದು ಹೇಳಿದಳು. ಹೀಗೆ ತಾಯಿಯ ಮಾತಿನಂತೆ ಅವರೆಲ್ಲರು ದ್ರೌಪದಿಯನ್ನು ಹೆಂಡತಿಯನ್ನಾಗಿ ಸ್ವೀಕರಿಸಿದರು.

ಐದು ಮಂದಿ ಗಂಡಂದಿರನ್ನು ರಕ್ಷಿಸುವ ಏಕೈಕ ಮಹಿಳೆ

ಐದು ಮಂದಿ ಗಂಡಂದಿರನ್ನು ರಕ್ಷಿಸುವ ಏಕೈಕ ಮಹಿಳೆ

ಕೌರವರೊಂದಿಗೆ ಜೂಜಾಟದಲ್ಲಿ ಸೋತು ಬಂಧಿಗಳಾಗಿದ್ದ ಗಂಡಂದಿರನ್ನು ಸ್ವತಂತ್ರಗೊಳಿಸುವಲ್ಲಿ ದ್ರೌಪದಿಯು ಯಶಸ್ವಿಯಾಗುತ್ತಾಳೆ. ಆಕೆಯ ಬಗ್ಗೆ ಕರ್ಣನು ಒಂದು ಮಾತನ್ನು ಹೇಳುತ್ತಾನೆ. ಜಗತ್ತಿನ ಯಾವುದೇ ಸೌಂದರ್ಯವತಿ ಮಹಿಳೆ ಇಂತಹ ಕೆಲಸ ಮಾಡಿರಲಿಕ್ಕಿಲ್ಲ. ದುಃಖದ ಕಡಲಿನಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನ ಗಂಡಂದಿರನ್ನು ಆಕೆ ರಕ್ಷಿಸಿದ್ದಾಳೆ ಎಂದು ದ್ರೌಪದಿಯ ಗುಣಗಾಣ ಮಾಡುತ್ತಾನೆ.

English summary

How was Draupadi born in mahabharat?

The Hindu epic, Mahabharata, describes Draupadi as the "fire-born" daughter of Drupada, the king of Panchala, who also became the common wife of five Pandavas. She was also the most beautiful woman of her time.
X
Desktop Bottom Promotion