For Quick Alerts
ALLOW NOTIFICATIONS  
For Daily Alerts

ಆರೋಗ್ಯದ ಮೇಲೆ ಆಧ್ಯಾತ್ಮಿಕತೆಯ ಪ್ರಭಾವವೇನು?

By Deepak M
|

ನಮ್ಮ ಆರೋಗ್ಯದ ಮೇಲೆ ಆಧ್ಯಾತ್ಮಿಕತೆಯು ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಕುರಿತಾಗಿ ಧಾರ್ಮಿಕ, ಆಧ್ಯಾತ್ಮಿಕ, ಮಾನಸಿಕ ಮತ್ತು ಪ್ರಜ್ಞೆಗೆ ಸಂಬಂಧಿಸಿದ ಹಲವಾರು ಚರ್ಚೆಗಳಲ್ಲಿ ಪ್ರಧಾನವಾಗಿ ಚರ್ಚೆಗೊಂಡಿದೆ.

ಈ ಅಂಕಣದಲ್ಲಿ ನಾವು ಆಧ್ಯಾತ್ಮಿಕತೆ ಹಾಗು ಧಾರ್ಮಿಕತೆ ಹೇಗೆ ನಮ್ಮ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತವೆಯೆಂಬುದರ ಕುರಿತಾಗಿ ಪ್ರಸಕ್ತ ಕಾಲದ ಹಿನ್ನಲೆಯಲ್ಲಿ ಚರ್ಚಿಸೋಣ. ಜೀವನಶೈಲಿಗಳು ಬದಲಾದಂತೆಲ್ಲ ನಾವು ಸಹ ಪ್ರಚಂಡವಾದ ಬದಲಾವಣೆಗಳಿಗೆ ಒಳಪಡುತ್ತೇವೆ. ಆಮೇಲೆ ನಾವು ಯಾರು ನಿರೀಕ್ಷಿಸಿರದ ಒಂದು ಘಟ್ಟಕ್ಕೆ ತಲುಪುತ್ತೇವೆ.

ಆಗ ಸಂಭವಿಸುವ ಕೊನೆಯಿಲ್ಲದ ಮಾನಸಿಕ ಒತ್ತಡವು ನಮ್ಮನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತದೆ. ಹುಟ್ಟಿದಾಗಿನಿಂದ ಕಾಯಿಲೆಗಳು, ಹಣಕಾಸಿನ ತೊಂದರೆಗಳು ಮತ್ತು ಮಾನಸಿಕ ತುಮುಲಗಳು ಪ್ರತಿಯೊಬ್ಬರನ್ನು ಸಹ ಕಾಡುತ್ತಿರುತ್ತದೆ.

ಕಾಲ ಕಳೆದೆಂತೆಲ್ಲ ವೈಧ್ಯಕೀಯ ಕ್ಷೇತ್ರದಲ್ಲಿ ಗಣನೀಯವಾಗಿ ಬದಲಾವಣೆಗಳು ಆಗಿ ಅಭಿವೃದ್ಧಿಯು ದಿನೇದಿನೇ ಹೆಚ್ಚುತ್ತಿದೆ. ಆದರೂ ಜನರು ಯೌವನದಲ್ಲಿಯೇ ಸಣ್ಣ ಪುಟ್ಟ ಕಾಯಿಲೆಗಳಿಗೆ ಸಾಯುತ್ತಿದ್ದಾರೆ. ಆದರೆ ವೈಧ್ಯಕೀಯ ಕ್ಷೇತ್ರವು ಇನ್ನೂ ಸುಧಾರಣೆಯಾಗದ ಕಾಲದಲ್ಲಿ ಅದೇಗೆ ಜನರು ತಮ್ಮ ಕಾಯಿಲೆಗಳನ್ನು ಗುಣಪಡಿಸಿಕೊಳ್ಳುತ್ತಿದ್ದರು? ಹಾಗಾದರೆ ಬನ್ನಿ ಆಧ್ಯಾತ್ಮಿಕತೆ ಮತ್ತು ಧಾರ್ಮಿಕತೆಯು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಒಮ್ಮೆ ನೋಡೋಣ.

ವಿಷ್ಣು ಏಕೆ ಶಾಪಗ್ರಸ್ತನಾದ ಎಂಬ ಒಂದು ಸಾಲಿಗ್ರಾಮದ ಕಥೆ

ಮನೋ ನಿಗ್ರಹ

ಮನೋ ನಿಗ್ರಹ

ಯಾವುದೇ ಮಾನಸಿಕ ರೋಗಗಳನ್ನು ನಿಭಾಯಿಸಲು ಮನಸ್ಸು ಅತ್ಯಂತ ನಿರ್ಣಾಯಕ ಅಂಶವಾಗಿರುತ್ತದೆ. ಧರ್ಮ ಮತ್ತು ಆಧ್ಯಾತ್ಮಿಕತೆಯು ನಮಗೆ ಅಗತ್ಯವಾದ ಮಾನವ ಸಾಮರ್ಥ್ಯವನ್ನು ಗಳಿಸಿಕೊಳ್ಳಲು ಅಗತ್ಯವಾದ ಶಕ್ತಿಯನ್ನು ನೀಡುತ್ತದೆ.

ಧನಾತ್ಮಕತೆ

ಧನಾತ್ಮಕತೆ

ಆಧ್ಯಾತ್ಮಿಕ ಭಾವನೆಗಳು ನಮ್ಮ ಜೀವನದಲ್ಲಿ ಅಪಾರ ಪ್ರಮಾಣದ ಧನಾತ್ಮಕತೆಯನ್ನು ತಂದು ಕೊಡುತ್ತದೆ. ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳುವುದರಿಂದ ನಾವು ಮತ್ತಷ್ಟು ಒಳ್ಳೆಯ ವಿಚಾರಗಳನ್ನು ಮಾಡುವ ಒಲವು ನಮ್ಮಲ್ಲಿ ಅಧಿಕವಾಗುತ್ತದೆ.

ಕರ್ಮ

ಕರ್ಮ

ಕರ್ಮವು ಎಂದಿಗು ಅಜೇಯವಾಗಿರುತ್ತದೆ. ಆಧ್ಯಾತ್ಮಿಕವಾಗಿ ನಾವು ಆಲೋಚಿಸುವುದರಿಂದ ಜೀವನದ ಪ್ರತಿ ಹಂತದಲ್ಲಿ ನಾವು ಒಳ್ಳೆಯದನ್ನೆ ಮಾಡುವುದರತ್ತ ಚಿತ್ತ ಹರಿಸಲು ಸಹಾಯಕವಾಗುತ್ತದೆ.

ಧ್ಯಾನ

ಧ್ಯಾನ

ಪ್ರಮುಖ ಅಂಶ: ಧ್ಯಾನವು ಯಾವುದೇ ತರನಾದ ಕಾಯಿಲೆಯನ್ನು ಗುಣಪಡಿಸುವ ಶಕ್ತಿಯನ್ನು ತನ್ನಲ್ಲಿ ಒಳಗೊಂಡಿದೆ. ಆದರೆ ಇಂದು ಧ್ಯಾನವು ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಆದರೆ ನೀವು ನಂಬಿದರೂ ನಂಬದಿದ್ದರು ಗಮನ ಕೇಂದ್ರೀಕರಿಸಿ ಮಾಡುವ ಧ್ಯಾನವು ಬಹುತೇಕ ಕಾಯಿಲೆಗಳನ್ನು ಗುಣಪಡಿಸಬಲ್ಲದು.

ನಂಬಿಕೆ

ನಂಬಿಕೆ

ಧಾರ್ಮಿಕತೆ ಮತ್ತು ನಂಬಿಕೆಯು ಒಂದನ್ನೊಂದು ಅವಲಂಬಿಸಿವೆ. ಇವೆರಡು ಸೇರಿ ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸುತ್ತವೆ. ಈ ಸಕಾರಾತ್ಮಕ ಮನೋಭಾವವು ಉತ್ತಮ ಆರೋಗ್ಯವನ್ನಷ್ಟೇ ಅಲ್ಲದೆ, ವಿಶ್ವದಲ್ಲಿ ಇರುವ ಯಾವ ವಿಚಾರದ ಮೇಲಾದರು ನಾವು ಗೆಲುವು ಸಾಧಿಸುವಂತೆ ಮಾಡುತ್ತದೆ.

English summary

How Spirituality And Religion Affect Our Health

In this article, we look at positive effects of spirituality and religion on our health. Common topics pertaining to spirituality and health and spirituality and the present day scenario are discussed.
X
Desktop Bottom Promotion