For Quick Alerts
ALLOW NOTIFICATIONS  
For Daily Alerts

ಸಂಪತ್ತಿನ ಅಧಿದೇವತೆ 'ಲಕ್ಷ್ಮಿ' ಗೆ ಇವುಗಳೆಂದರೆ ಅಚ್ಚುಮೆಚ್ಚು....

By Manu
|

ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದಾರೆ ಎಂದು ಪುರಾಣಗಳು ಹೇಳುತ್ತವೆ. ಒಂದೊಂದು ದೇವರಿಗೆ ಸೃಷ್ಟಿಯಲ್ಲಿ ಒಂದೊಂದು ವೃತ್ತಿಯಿದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನಿಗೆ ಭೂಲೋಕದಲ್ಲಿ ಜೀವಗಳನ್ನು ಸೃಷ್ಟಿ ಮಾಡಿ ಅದನ್ನು ಲಯ ಮಾಡುವಂತಹದ್ದು. ಹೀಗೆ ದೇವತೆ ಲಕ್ಷ್ಮಿಯನ್ನು ಹಣ ಹಾಗೂ ಸಂಪತ್ತಿನ ದೇವತೆಯೆಂದು ನಂಬಲಾಗಿದೆ. ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವ ಶಕ್ತಿಶಾಲಿ ಮಹಾಮಂತ್ರಗಳು

ಪ್ರತಿಯೊಬ್ಬರು ಲಕ್ಷ್ಮಿಯನ್ನು ಪೂಜಿಸುತ್ತಾರೆ. ಯಾಕೆಂದರೆ ನಮಗೆ ಹಣ ಹಾಗೂ ಸಂಪತ್ತು ಇಲ್ಲದೆ ಇದ್ದರೆ ಜೀವನ ನಿರ್ವಹಣೆ ಸಾಧ್ಯವಿಲ್ಲ. ಆದರೆ ಲಕ್ಷ್ಮಿಯನ್ನು ಚಂಚಲೆ ಮತ್ತು ಆಕೆ ತನ್ನನ್ನು ತುಂಬಾ ಪೂಜಿಸುವ ಮನೆಯನ್ನು ಬೇಗನೆ ಪ್ರವೇಶಿಸುತ್ತಾಳೆ ಎನ್ನುವ ನಂಬಿಕೆಯಿದೆ. ಇದರಿಂದ ಲಕ್ಷ್ಮಿಯನ್ನು ಒಲೈಸಿಕೊಳ್ಳಲು ತುಂಬಾ ಶ್ರಮ ವಹಿಸಬೇಕಾಗುತ್ತದೆ. ಮನೆಯ ವಾಸ್ತು ಹೀಗಿದ್ದರೆ-ಮನೆಯಲ್ಲಿ 'ಲಕ್ಷ್ಮಿ' ಸದಾ ನೆಲೆಸುವಳು....

ಇದಕ್ಕಾಗಿ ಪುರಾಣಗಳಲ್ಲಿ ಹಲವಾರು ವಿಧಾನಗಳನ್ನು ನೀಡಲಾಗಿದೆ. ಲಕ್ಷ್ಮಿಗೆ ಪ್ರಿಯವಾಗಿರುವ ವಸ್ತು ಹಾಗೂ ಆಕೆಯನ್ನು ಹೇಗೆ ಮನೆಯಲ್ಲೇ ಉಳಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳಬಹುದು. ಮನೆಯಲ್ಲೇ ಲಕ್ಷ್ಮಿಯನ್ನು ಉಳಿಸಿಕೊಳ್ಳುವುದು ಹೇಗೆ ಎಂದು ತಿಳಿದು ಮನೆಗೆ ಹಣ ಹಾಗೂ ಸಂಪತ್ತನ್ನು ತರಿಸಿಕೊಳ್ಳಿ.....

ಒಂದು ಕಣ್ಣಿನ ತೆಂಗಿನಕಾಯಿ

ಒಂದು ಕಣ್ಣಿನ ತೆಂಗಿನಕಾಯಿ

ಸಾಮಾನ್ಯವಾಗಿ ಒಂದು ಕಣ್ಣಿನ ತೆಂಗಿನಕಾಯಿಯನ್ನು ಮಾಟಮಂತ್ರಗಳಲ್ಲಿ ಬಳಸುತ್ತಾರೆ. ಆದರೆ ಒಂದು ಕಣ್ಣಿನ ತೆಂಗಿನಕಾಯಿ ಮನೆಯಲ್ಲಿಟ್ಟರೆ ಶುಭ.

ಲಕ್ಷ್ಮಿ ಮತ್ತು ಗಣಪತಿ ವಿಗ್ರಹಗಳು

ಲಕ್ಷ್ಮಿ ಮತ್ತು ಗಣಪತಿ ವಿಗ್ರಹಗಳು

ಲಕ್ಷ್ಮಿ ಹಾಗೂ ಗಣಪತಿಯ ಮೂರ್ತಿಯನ್ನು ಜತೆಯಲ್ಲಿ ಇಟ್ಟು ಯಾವಾಗಲೂ ಪೂಜೆ ಮಾಡುತ್ತಾ ಇದ್ದರೆ ಆಗ ಲಕ್ಷ್ಮಿಯೂ ಬೇಗನೆ ಒಲಿಯುತ್ತಾಳೆ ಎಂದು ನಂಬಲಾಗಿದೆ. ಮೂರ್ತಿಗಳು ಬೆಳ್ಳಿಯದ್ದಾಗಿದ್ದರೆ ಸಂಪತ್ತು ಯಾವತ್ತೂ ಮನೆಯಿಂದ ಹೊರಹೋಗುವುದಿಲ್ಲ ಎನ್ನುವ ನಂಬಿಕೆಯಿದೆ.

ಕೌರಿ ಚಿಪ್ಪುಗಳು

ಕೌರಿ ಚಿಪ್ಪುಗಳು

ಲಕ್ಷ್ಮಿಯು ಸಮುದ್ರದಲ್ಲಿ ಜನಿಸಿದಾಕೆ ಎನ್ನುತ್ತವೆ ಪುರಾಣಗಳು. ಹೀಗಾಗಿ ಸಮುದ್ರದಲ್ಲಿ ಸಿಗುವಂತಹ ಚಿಪ್ಪುಗಳಲ್ಲಿ ಕೌರಿಯೂ ಜಾತಿಯ ಚಿಪ್ಪನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮೀಯು ಒಲಿಯುತ್ತಾಳಂತೆ.

ಪಾದರಸದ ಮೂರ್ತಿ

ಪಾದರಸದ ಮೂರ್ತಿ

ಲಕ್ಷ್ಮಿ ಮತ್ತು ಗಣಪತಿಯ ಪಾದರಸದ ಮೂರ್ತಿಯನ್ನು ಮನೆಯಲ್ಲಿಟ್ಟರೆ ತುಂಬಾ ಶುಭವಂತೆ. ಲಕ್ಷ್ಮೀಗೆ ಪಾದರಸವೆಂದರೆ ತುಂಬಾ ಇಷ್ಟ ಮತ್ತು ಪಾದರಸದ ಮೂರ್ತಿಯನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮೀಯನ್ನು ಆಕರ್ಷಿಸಬಹುದು.

ಲಕ್ಷ್ಮಿಯ ಪಾದುಕೆ

ಲಕ್ಷ್ಮಿಯ ಪಾದುಕೆ

ಲಕ್ಷ್ಮಿ ದೇವತೆಯ ಕಾಲಿನ ಅಚ್ಚು ಅಥವಾ ಬೆಳ್ಳಿ ಪಾದುಕೆಯನ್ನು ಮನೆಯಲ್ಲಿ ಇಟ್ಟರೆ ಲಕ್ಷ್ಮಿ ದೇವರನ್ನು ಮನೆಯಲ್ಲೇ ಉಳಿದುಕೊಳ್ಳುವಂತೆ ಹೇಳಿದಂತೆ. ಹಣವನ್ನು ಎಲ್ಲಿ ಇಡಬೇಕೆಂದು ಬಯಸಿದ್ದೀರೋ ಆ ದಿಕ್ಕಿನಲ್ಲಿ ಪಾದುಕೆಯನ್ನು ಇಟ್ಟುಬಿಡಿ.

ಕಮಲದ ಬೀಜದ ರೋಸರಿ

ಕಮಲದ ಬೀಜದ ರೋಸರಿ

ಲಕ್ಷ್ಮಿ ಕಮಲದಲ್ಲಿ ನೆಲೆಸಿರುವಾಕೆ. ಇದರಿಂದ ಕಮಲದ ಬೀಜಗಳ ರೋಸರಿಯನ್ನು ಮನೆಯಲ್ಲಿ ಇಟ್ಟರೆ ಲಕ್ಷ್ಮಿ ದೇವಿಯನ್ನು ಮನೆಗೆ ಆಹ್ವಾನಿಸಿದಂತೆ ಆಗುತ್ತದೆ.

ರತ್ನ ಶಂಖ

ರತ್ನ ಶಂಖ

ಇದು ತುಂಬಾ ವಿಶೇಷವಾಗಿರುವಂತಹ ಶಂಖವಾಗಿದೆ. ಇದನ್ನು ತುಂಬಾ ಪವಿತ್ರವೆಂದು ನಂಬಲಾಗಿದೆ.

English summary

How to make Goddess Lakshmi Happy?

Lakshmi is very unstable and She has the tendency to leave one house for another where She finds more devotion and comfort. Take a look at these 10 things to attract Goddess Lakshmi.
X
Desktop Bottom Promotion