ಶನಿ ಪೂಜಾ ವಿಧಿ - ಕೇಳಿ ಗೊತ್ತು, ಆಚರಿಸುವುದು ಹೇಗೆ?

ಹಿಂದೂ ಜ್ಯೋತಿಷ್ಯ ಶಾಸ್ತ್ರ, ಅಥವಾ ಜ್ಯೋತಿಸ ದಲ್ಲಿನ 9 ಪ್ರಥಮ ದಿವ್ಯ ನವಗ್ರಹಗಳಲ್ಲಿ 'ಶನಿ' ಯು ಒಬ್ಬನು. ಶನಿಗ್ರಹದಲ್ಲಿ ಶನಿಯು ಸಶರೀರನಾಗಿದ್ದಾನೆ....

By: manu
Subscribe to Boldsky

ಗ್ರಹಚಾರ ಸರಿ ಇಲ್ಲದಿದ್ದರೆ ಮುಟ್ಟಿದ್ದೆಲ್ಲಾ ಮಣ್ಣು ಎಂದು ಹಿರಿಯರು ಹೇಳುತ್ತಾರೆ. ಈ ಸ್ಥಿತಿಗೆ ಶನಿಗ್ರಹದ ಪ್ರಭಾವ ಅಪಾರವಾಗಿದೆ. ಆದ್ದರಿಂದ ನವಗ್ರಹಗಳಲ್ಲೊಂದಾದ ಶನಿದೇವರನ್ನೂ ಪೂಜಿಸುವ ಮೂಲಕ ಜೀವನದಲ್ಲಿ ಎದುರಾಗುವ ಕಂಟಕಗಳನ್ನು ನಿವಾರಿಸಬಹುದು. ಶನಿ ಮಹಾದಶೆಯ ಕಷ್ಟ ಕಾರ್ಪಣ್ಯಗಳಿಂದ ಮುಕ್ತರಾಗುವುದು ಹೇಗೆ?

ಸಾಮಾನ್ಯವಾಗಿ ತೊಂದರೆ ಇದ್ದವರಿಗೆ ಶನಿಕಾಟವಿದೆ, ಶನಿದೇವರ ಪೂಜೆ ನಡೆಸಿ ಎಂದು ಎಲ್ಲರೂ ಪುಕ್ಕಟೆ ಸಲಹೆ ನೀಡುತ್ತಾರೆಯೇ ವಿನಃ ಇದನ್ನು ಆಚರಿಸುವುದು ಹೇಗೆ ಎಂಬ ಪ್ರಶ್ನೆ ಬಂದ ತಕ್ಷಣ ಅವರಿಗೆ ಬೇರೆ ಅರ್ಜೆಂಟ್ ಕೆಲಸದ ನೆನಪಾಗುತ್ತದೆ. ಬನ್ನಿ ಇಂತಹವರ ಬಗ್ಗೆ ತಲೆ ಕೆಡಿಸದೇ ಕೆಳಗೆ ನೀಡಿರುವ ಶನಿದೇವರ ಪೂಜೆಯನ್ನು ನಡೆಸುವ ವಿಧಾನವನ್ನು ನೋಡೋಣ: ಶನಿ ದೇವರಿಗೆ ಪ್ರಿಯವಾದ 'ಸಾಸಿವೆ ಎಣ್ಣೆಯ' ಹಿಂದಿನ ರಹಸ್ಯ    

ಶನಿಪೂಜೆಯನ್ನು ಕಡ್ಡಾಯವಾಗಿ ಶನಿವಾರದಂದೇ ನಡೆಸಬೇಕು

ಈ ದಿನ ಪೂಜೆ ನಡೆಸುವ ವ್ಯಕ್ತಿ ಸೂರ್ಯೋದಯದ ಸಮಯದಿಂದ ಹಿಡಿದು ಸೂರ್ಯಾಸ್ತದ ಸಮಯದವರೆಗೆ ಉಪವಾಸವಿರಬೇಕು. ನಿಮಗೆ ತಿಳಿದಿರದ ಶನಿ ದೇವರ ಜನ್ಮದ ಹಿಂದಿರುವ ರಹಸ್ಯ

ಪ್ರಾತಃ ಕಾಲದ ವಿಧಿವಿಧಾನ

ಈ ದಿನ ಸೂರ್ಯೋದಯಕ್ಕೂ ಕನಿಷ್ಠ ಒಂದು ಗಂಟೆ ಮೊದಲೇ ಎದ್ದು ಪ್ರಾತಃ ವಿಧಿಗಳನ್ನು ಪೂರೈಸಿ ಸ್ನಾನ ಮಾಡಿದ ಬಳಿಕ ಕೇವಲ ಕಪ್ಪು ವಸ್ತ್ರಗಳನ್ನು ಮಾತ್ರ ಧರಿಸಬೇಕು. ಮೈ ಮೇಲೆ ಇತರ ಬಣ್ಣದ ಒಂದು ನೂಲು ಸಹಾ ಇರಬಾರದು.

ಬೆಳಗ್ಗಿನ ಪೂಜೆಯನ್ನು ವಿನಾಯಕನ ಪೂಜೆಯೊಂದಿಗೆ ಪ್ರಾರಂಭಿಸಬೇಕು

ಮನೆಯಲ್ಲಿ ದೇವರ ಪಟದ ಮುಂದೆ ಇರುವ ಹಣತೆಯಲ್ಲಿ ಇಡಿಯ ದಿನ ಎಳ್ಳೆಣ್ಣೆ ಹಾಕಿ ಇಡಿಯ ದಿನ ಆರದಂತೆ ನೋಡಿಕೊಳ್ಳಬೇಕು.

ಶನಿದೇವರ ವಿಗ್ರಹ

ಬಳಿಕ ಕಬ್ಬಿಣದಿಂದ ಮಾಡಿದ ಶನಿದೇವರ ವಿಗ್ರಹವನ್ನು ಪೂಜೆಸಬೇಕು. ಒಂದು ವೇಳೆ ನಿಮ್ಮ ಪ್ರಯತ್ನಕ್ಕೂ ಮೀರಿ ಶನಿದೇವರ ಕಬ್ಬಿಣದ ಮೂರ್ತಿ ಲಭ್ಯವಾಗದೇ ಇದ್ದರೆ ಶನಿದೇವರ ಪಟವನ್ನು ಪೂಜಿಸಬಹುದು.

ಮನಸ್ಸಿನಲ್ಲಿಯೇ ಶನಿದೇವರನ್ನು ಪ್ರಾರ್ಥಿಸಿ....

ಇದೂ ಇಲ್ಲದಿದ್ದರೆ ಮಾತ್ರ ಮನಸ್ಸಿನಲ್ಲಿಯೇ ಶನಿದೇವರನ್ನು ಪ್ರಾರ್ಥಿಸಬೇಕು. ಆದರೆ ಮೂರ್ತಿಯನ್ನು ಪಡೆಯಲು ಪಡೆಯಲು ಪ್ರಯತ್ನ ಖಂಡಿತಾ ಮಾಡಬೇಕು.

ಎಳ್ಳಿನ ಕಾಳುಗಳನ್ನು ಅರ್ಪಿಸಿ....

ಪೂಜೆಯ ಬಳಿಕ ಶನಿದೇವರಿಗೆ ಎಳ್ಳಿನ ಕಾಳುಗಳನ್ನು ಅರ್ಪಿಸಬೇಕು

ಮಂತ್ರ

ಪೂಜೆಯ ಸಮಯದಲ್ಲಿ ಮತ್ತು ಇಡಿಯ ದಿನ ಸಾಧ್ಯವಾದಾಗಲೆಲ್ಲಾ ಕೆಳಗಿನ ಮಂತ್ರವನ್ನು ಜಪಿಸಬೇಕು:
ಮಂತ್ರ
*ಓಂ ಶನೈಶ್ಚಾರ್ಯ ವಿದಮಹೇ
*ಸೂರ್ಯಪುತ್ರಾಯಃ ಧೀಮಹೀ
*ತನ್ನೋ ಮಂದ ಪ್ರಚೋದಯತ್

ದೇವರನ್ನು ಮನಸ್ಸಿನಲ್ಲೇ ಧ್ಯಾನಿಸಿ

ಮಂತ್ರವನ್ನು ಜಪಿಸುವ ವೇಳೆ ಸಾಧ್ಯವಾದಷ್ಟು ಹೊತ್ತು ದೇವರನ್ನು ಧ್ಯಾನಿಸುತ್ತಾ ಕಣ್ಣು ಮುಚ್ಚಿಕೊಳ್ಳಬೇಕು. ಬಳಿಕ ಹನುಮದೇವರಿಗೆ ಬಾಳೆಹಣ್ಣನ್ನು ಅರ್ಪಿಸಬೇಕು. ಸಾಧ್ಯವಾದರೆ ಬಾಳೆಹಣ್ಣಿನೊಂದಿಗೆ ಕೊಂಚ ಕುಂಕುಮವನ್ನೂ ಅರ್ಪಿಸಬಹುದು.

ನವಗ್ರಹ ದೇವಾಲಯ ಅಥವಾ ಶನಿದೇವಾಲಯವನ್ನು ಭೇಟಿ ನೀಡಿ

ಈ ದಿನದಲ್ಲಿ ನಿಮಗೆ ಸೂಕ್ತವಾದ ಯಾವುದೇ ಹೊತ್ತಿನಲ್ಲಿ ನವಗ್ರಹ ದೇವಾಲಯ ಅಥವಾ ಶನಿದೇವಾಲಯವನ್ನು ಭೇಟಿ ನೀಡಿ ಪೂಜೆ ಸಲ್ಲಿಸಬೇಕು.

ಹನುಮಂತ ದೇವಸ್ಥಾನ

ಒಂದು ವೇಳೆ ನಿಮ್ಮ ಊರಿನ ಆಸುಪಾಸಿನಲ್ಲಿ ಈ ದೇವರ ದೇವಾಲಯ ಇಲ್ಲದೇ ಇದ್ದರೆ ಹನುಮಂತ ದೇವಸ್ಥಾನಕ್ಕೂ ಭೇಟಿ ನೀಡಬಹುದು

ಬಡವರಿಗೆ ಅನ್ನದಾನ ಮಾಡಿ...

ಈ ದಿನದಂದು ಹಸಿವಿನಿಂದಿರುವ ಯಾವುದೇ ಬಡವರಿಗೆ ಅನ್ನದಾನ ಮಾಡಬೇಕು. ಮನೆಯಲ್ಲಿ ಅಡುಗೆ ಮಾಡಿದ ಆಹಾರವೇ ಉತ್ತಮ. ಇದು ಸಾಧ್ಯವಾಗದಿದ್ದಲ್ಲಿ ಒಂದು ಹೊತ್ತಿನ ಊಟವನ್ನು ಹೊರಗೆ ಮಾಡಲು ಧನಸಹಾಯವನ್ನೂ ಮಾಡಬಹುದು.

ಉಪವಾಸ

ಸಂಜೆ ಸೂರ್ಯಾಸ್ತದ ಸಮಯದಲ್ಲಿ ಉಪವಾಸವನ್ನು ಸಂಪನ್ನಗೊಳಿಸಬೇಕು. ಈ ಸಮಯದಲ್ಲಿ ಅಕ್ಕಿ ಮತ್ತು ಕಪ್ಪು ಉದ್ದಿನ ಬೇಳೆ ಬಳಸಿದ ಖಾದ್ಯದ ಸೇವನೆ ಉತ್ತಮ. ಇದು ಸಾಧ್ಯವಾಗದಿದ್ದರೆ ಎಳ್ಳಿನಿಂದ ಮಾಡಿದ ಯಾವುದೇ ಪದಾರ್ಥವನ್ನು ಸೇವಿಸಬಹುದು. ಒಂದು ವೇಳೆ ಇವೆರಡೂ ಲಭ್ಯವಿಲ್ಲದಿದ್ದರೆ ಮನೆಯಲ್ಲಿ ಅಂದು ಮಾಡಿದ ಯಾವುದೇ ಸಸ್ಯಾಹಾರವನ್ನು ಸೇವಿಸಬಹುದು.

ಕಪ್ಪು ಬಟ್ಟೆ ಧರಿಸಿ

ಶನಿದೇವನ ಇಷ್ಟದ ಬಣ್ಣವೆಂದರೆ ಕಪ್ಪು. ಆದ್ದರಿಂದ ಶನಿವಾರದಂದು ಕಪ್ಪುಬಟ್ಟೆಯನ್ನು ತೊಡುವ ಮೂಲಕ ಶನಿದೇವನನ್ನು ಒಲಿಸಿಕೊಳ್ಳಲು ಸುಲಭವಾಗುವುದು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಜೊತೆಗೇ, ಶನಿವಾರದಂದು ಚರ್ಮದ ಅಥವಾ ಕಪ್ಪು ಬಣ್ಣದ ಯಾವುದೇ ವಸ್ತುಗಳನ್ನು ಖರೀದಿಸದಿರುವುದು ಉತ್ತಮ.

ಮದ್ಯಪಾನವನ್ನು ಪೂರ್ಣವಾಗಿ ಬಿಟ್ಟುಬಿಡಿ....

ಶನಿದೇವನನ್ನು ಒಲಿಸಿಕೊಳ್ಳಲು ಮದ್ಯಪಾನದ ವರ್ಜನೆ ಅಗತ್ಯ. ಏಕೆಂದರೆ ಶನಿ ಓರ್ವ ನ್ಯಾಯದೇವತೆಯೂ ಆಗಿದ್ದಾನೆ. ಕೆಟ್ಟ ಅಭ್ಯಾಸಗಳಾದ ಧೂಮಪಾನ, ಮದ್ಯಪಾನ, ಮಾಂಸಸೇವನೆ ಮೊದಲಾದವು ಶನಿದೇವನಿಗೆ ಕೋಪ ತರಿಸುತ್ತದೆ. ಆದ್ದರಿಂದ ಈ ಎಲ್ಲಾ ದುರಭ್ಯಾಸಗಳನ್ನು ತ್ಯಜಿಸುವುದರಿಂದ, ಅದರಲ್ಲೂ ವಿಶೇಷವಾಗಿ ಸಾಡೆಸಾತಿಯ ಅವಧಿಯಲ್ಲಿ ಅನುಸರಿಸುವ ಮೂಲಕ ಶೀಘ್ರವಾಗಿ ತೊಂದರೆಯಿಂದ ಪಾರಾಗಬಹುದು.

ಸಾಸಿವೆ ಎಣ್ಣೆ

ಬಟ್ಟಲೊ೦ದರಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊ೦ಡು ಅದರಲ್ಲಿ ನಿಮ್ಮ ಪ್ರತಿಬಿ೦ಬವನ್ನು ನೋಡಿಕೊ೦ಡು ಅದನ್ನು ಶನಿವಾರಗಳ೦ದು ದಾನಮಾಡುವ ಮೂಲಕ ಭಗವಾನ್ ಶನಿದೇವನ ಕೃಪೆಗೆ ಪಾತ್ರರಾಗಿರಿ.

Story first published: Thursday, October 13, 2016, 11:45 [IST]
English summary

How to do Shani Deva Puja at Home?

Whenever you visit an astrologer, the most common lines said by them is, “According to your cards, Shani (Saturn) is a heavy planet right now.” In Hinduism, many people suffer saade saati (means 7 and half) where the planet is heavy on the individual. Here is a simple procedure to perform Shani Puja.... have a look
Please Wait while comments are loading...
Subscribe Newsletter