For Quick Alerts
ALLOW NOTIFICATIONS  
For Daily Alerts

ಭಗವಾನ್ ಶ್ರೀರಾಮನ ಸಾವು ಹೇಗಾಯಿತು?

By Hemanth P
|

ಭಗವಾನ್ ಶ್ರೀರಾಮಚಂದ್ರ ಹಲವಾರು ಅಗ್ನಿಪರೀಕ್ಷೆ ಮತ್ತು ಸಂಕಷ್ಟಗಳನ್ನು ಎದುರಿಸಿ ಅಂತಿಮವಾಗಿ ಧರ್ಮ ಸ್ಥಾಪಿಸುವ ತನ್ನ ಗುರಿಯಲ್ಲಿ ಯಶಸ್ವಿಯಾದ. ಧರ್ಮದ ಮಾರ್ಗದಲ್ಲಿ ಸಾಗಿರುವುದು ಮತ್ತು ಒಳ್ಳೆಯ ಮಾರ್ಗದಲ್ಲೇ ಮುನ್ನಡೆದಿದ್ದರಿಂದ ಆತನನ್ನು ಪರಿಪೂರ್ಣ ವ್ಯಕ್ತಿಯೆಂದು ಕರೆಯಲಾಗುತ್ತದೆ.

ತನ್ನ ಜೀವನದಲ್ಲಿ ರಾಮ ಎದುರಿಸಿದ ಹಲವಾರು ಅಗ್ನಿ ಪರೀಕ್ಷೆಗಳ ಹಾಗೂ ಜೀವನದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಆದರೆ ಭಗವಾನ್ ರಾಮನ ಸಾವಿನ ಬಗ್ಗೆ ಮಾತ್ರ ಪ್ರಶ್ನೆಗಳು ಹಾಗೆ ಉಳಿದುಕೊಂಡಿದೆ. ಹಿಂದೂ ಧರ್ಮದಲ್ಲಿ ಉಲ್ಲೇಖಿಸಿರುವಂತೆ ಭಗವಾನ್ ರಾಮನನ್ನು ವಿಷ್ಣುವಿನ ಅವತಾರವೆನ್ನಲಾಗಿದೆ.

How Did Lord Rama Die?

ಭಗವಾನ್ ವಿಷ್ಣುವಿನ ಅವತಾರಗಳು ಸಾಮಾನ್ಯ ಮತ್ತು ಸಾವನ್ನು ಮೀರಿ ನಿಂತಿರುತ್ತದೆ. ಭಗವಾನ್ ಶ್ರೀರಾಮನು ಸರಯು ನದಿಯನ್ನು ಪ್ರವೇಶಿಸಿ ಅಲ್ಲಿಂದ ವೈಕುಂಠಕ್ಕೆ ತೆರಳಿದನೆಂಬ ಪ್ರತೀತಿಯಿದೆ. ಪದ್ಮ ಪುರಾಣವು ಭಗವಾನ್ ರಾಮನ ಸಾವಿನ ಬಗ್ಗೆ ವಿವರಿಸಲು ಪ್ರಯತ್ನಿಸಿದೆ. ಇದರ ಬಗ್ಗೆ ಇನ್ನಷ್ಟು ತಿಳಿಯಿರಿ...

ಭಗವಾನ್ ರಾಮ ಸುಮಾರು 11,000 ವರ್ಷಗಳ ಕಾಲ ರಾಜ್ಯಭಾರ ಮಾಡಿದನೆಂದು ನಂಬಲಾಗಿದೆ. ಆತನ ಮುಖ್ಯ ಧ್ಯೇಯವೆಂದರೆ ಧರ್ಮ ಸ್ಥಾಪನೆ ಅಥವಾ ಜನರಿಗೆ ಸುಖ ಸಮೃದ್ಧಿಯನ್ನು ನೀಡುವುದಾಗಿತ್ತು. ರಾಮನ ಬಳಿಕ ಆತನ ಮಕ್ಕಳಾದ ಲವ ಮತ್ತು ಕುಶ ತಂದೆಯ ಧ್ಯೇಯದೊಂದಿಗೆ ರಾಜ್ಯಭಾರ ಮಾಡಿದರು. ರಾಮನ ಆಳ್ವಿಕೆ ಬಳಿಕ ರಾಮನ ಪತ್ನಿ ಸೀತಾ ದೇವಿಯನ್ನು ಭೂತಾಯಿ ತನ್ನೊಳಗೆ ಸೆಳೆದುಕೊಂಡಳೆಂದು ನಂಬಲಾಗಿದೆ.

ಈಗ ಕೆಲವೊಂದು ಅಚ್ಚರಿಯ ವಿಷಯಗಳು ಇಲ್ಲಿವೆ. ಒಂದು ದಿನ ರಾಮನಲ್ಲಿ ಅತೀ ಮಹತ್ವದ ವಿಷಯವೊಂದನ್ನು ತುಂಬಾ ಖಾಸಗಿಯಾಗಿ ಮಾತನಾಡಬೇಕಿದೆಯೆಂದು ಋಷಿಯೊಬ್ಬರು ಹೇಳಿದರು. ಋಷಿಯೊಂದಿಗೆ ಕೋಣೆಯೊಂದರೊಳಗೆ ತೆರಳಿದ ರಾಮ, ಕೋಣೆಗೆ ಕಾವಲು ಕಾಯುವಂತೆ ಮತ್ತು ಯಾವುದೇ ಆತ್ಮವೂ ಇದರೊಳಗೆ ಪ್ರವೇಶಿಸದಂತೆ ರಕ್ಷಣೆ ನೀಡಬೇಕೆಂದು ತಮ್ಮನಾದ ಲಕ್ಷ್ಮಣನಿಗೆ ಆದೇಶಿಸಿದ್ದ.

ಋಷಿಯೊಂದಿಗೆ ಭಗವಾನ್ ರಾಮ ನಡೆಸಿದ ಮಾತುಕತೆಯು ಆತನ ಅಂತಿಮ ಮಾತುಕತೆ ಎನ್ನಲಾಗಿದೆ. ಸಮಯವು ಋಷಿಯ ರೂಪದಲ್ಲಿ ಬಂದು ರಾಮನೊಂದಿಗೆ ಮಾತನಾಡಿತ್ತು. ಭೂಮಿ ಮೇಲೆ ನಿನ್ನ ಕಾರ್ಯವು ಮುಗಿದಿದೆ ಮತ್ತು ವೈಕುಂಠಕ್ಕೆ ತೆರಳುವ ಸಮಯ ಬಂದಿದೆ ಎಂದು ಋಷಿ ಹೇಳುತ್ತಾನೆ. ನೀನು(ಭಗವಾನ್ ರಾಮ) ದೈವಿ ಶಕ್ತಿಯೆಂದು ಋಷಿ ರಾಮನಿಗೆ ತಿಳಿಸುತ್ತಾನೆ.

ಈ ಸಮಯದಲ್ಲಿ ತುಂಬಾ ಕೋಪಿಷ್ಠನಾಗಿರುವ ದುರ್ವಾಸ ಮುನಿಯು ರಾಮನನ್ನು ಭೇಟಿಯಾಗಲು ಬಯಸುತ್ತಾನೆ. ಲಕ್ಷ್ಮಣ ಇದಕ್ಕೆ ನಿರಾಕರಿಸಿದಾಗ ಸಂಪೂರ್ಣ ಅಯೋಧ್ಯೆ ನಗರಕ್ಕೆ ಶಾಪ ಹಾಕುತ್ತಾರೆ. ಅಯೋಧ್ಯೆಯ ಜನರನ್ನು ರಕ್ಷಿಸುವ ಸಲುವಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಲಕ್ಷ್ಮಣ ದುರ್ವಾಸ ಮುನಿಯನ್ನು ಎದುರಿಸಲು ನಿರ್ಧರಿಸುತ್ತಾನೆ. ಅಯೋಧ್ಯೆಯ ಜನರ ರಕ್ಷಣೆಗಾಗಿ ಲಕ್ಷ್ಮಣನು ಯಾವುದೇ ರೀತಿಯ ಶಿಕ್ಷೆಯನ್ನು ಎದುರಿಸಲು ಸಜ್ಜಾಗುತ್ತಾನೆ.

ಈ ವೇಳೆ ದುರ್ವಾಸ ಮುನಿಯು ಲಕ್ಷ್ಮಣನಲ್ಲಿ ನೀನು ಸಮಯದ ರೂಪದಲ್ಲಿ ಕೋಣೆಯೊಳಗೆ ಹೋಗು ಎನ್ನುತ್ತಾರೆ. ಇದಕ್ಕೆ ಒಪ್ಪಿದ ಲಕ್ಷ್ಮಣ ಹಾಗೆ ಮಾಡುತ್ತಾನೆ. ತನ್ನ ಸಹೋದರ ಗುರಿಯು ಈಡೇರಿದೆಯೆಂದು ರಾಮನಿಗೆ ತಿಳಿದ ಬಳಿಕ ಆತ ಸರಯು ನದಿಯೊಳಗೆ ಹೋಗಿ ತನ್ನ ಅವತಾರವನ್ನು ಪೂರ್ಣಗೊಳಿಸುತ್ತಾನೆ.

English summary

How Did Lord Rama Die?

Lord Rama's journey of life epitomises the strong and powerful intention to pursue dharma despite numerous obstacles and tests that were strewn on His path.
X
Desktop Bottom Promotion