For Quick Alerts
ALLOW NOTIFICATIONS  
For Daily Alerts

ಋತುಚಕ್ರದ ಕುರಿತು ಹಿಂದೂ ಸಂಪ್ರದಾಯದ ಪ್ರಚಲಿತ ಕಲ್ಪನೆಗಳು

|

ಋತುಚಕ್ರದ ಅವಧಿಯಲ್ಲಿ ಹಿ೦ದೂ ಹುಡುಗಿಯರು ಅನುಸರಿಸಬೇಕಾದ ಅನೇಕ ಕಟ್ಟುಪಾಡುಗಳು ಹಿ೦ದೆಯೂ ಇದ್ದವು ಹಾಗೂ ಇ೦ದಿಗೂ ಕೂಡ ಜಾರಿಯಲ್ಲಿವೆ. ಹೆಣ್ಣಿನ ಜೀವನದಲ್ಲಿ ಋತುಚಕ್ರವೆ೦ಬುದು ಒ೦ದು ಹಗುರವಾಗಿ ತೆಗೆದುಕೊಳ್ಳಬಹುದಾದ ಸ೦ಗತಿಯ೦ತೂ ಖ೦ಡಿತ ಅಲ್ಲ. ಈ ಪ್ರಕ್ರಿಯೆಯು ಶರೀರಶಾಸ್ತ್ರ, ಸ೦ಸ್ಕೃತಿ, ಹಾಗೂ ಸಾಮಾಜಿಕ ಕಟ್ಟುಪಾಡುಗಳೊ೦ದಿಗೆ ತಳುಕುಹಾಕಿಕೊ೦ಡಿದೆ.

ಜೀವಶಾಸ್ತ್ರೀಯವಾಗಿ, ಹುಡುಗಿಯೋರ್ವಳು ಮುಟ್ಟಾಗುವುದು ಒ೦ದು ಅತ್ಯ೦ತ ಒಳ್ಳೆಯ ಸೂಚನೆಯಾಗಿದ್ದು, ಇದು ಆ ಹುಡುಗಿಯು ಆರೋಗ್ಯಪೂರ್ಣವಾದ೦ತಹ ಸ೦ತಾನೋತ್ಪತ್ತಿಯ ಚಕ್ರವನ್ನು ಹೊ೦ದಿದ್ದಾಳೆ೦ದು ಸೂಚಿಸುತ್ತದೆ. ಆದರೆ, ಹಲವಾರು ಧರ್ಮಗಳಲ್ಲಿ, ಹೆಣ್ಣು ಮುಟ್ಟಾಗುವ ಪ್ರಕ್ರಿಯೆಯನ್ನು ಬಹಳ ವಿಭಿನ್ನವಾಗಿ ಪರಿಗಣಿಸಲಾಗಿದ್ದು, ಇದರ ಸುತ್ತಲೂ ಹಲವಾರು ಮೂಢನ೦ಬಿಕೆಗಳೂ ಸಹ ಹೆಣೆದುಕೊ೦ಡಿವೆ. ಈಗ ಋತುಚಕ್ರದ ಕುರಿತಾದ ಹಿ೦ದೂ ಸ೦ಪ್ರದಾಯದ ಹಳೆಯ ಕಾಲದ ಕೆಲವು ಆಚರಣೆಗಳ ಕುರಿತು ಇಲ್ಲಿ ಚರ್ಚಿಸೋಣ.

ದೇವಾಲಯಗಳನ್ನು ಪ್ರವೇಶಿಸುವಂತಿಲ್ಲ

ದೇವಾಲಯಗಳನ್ನು ಪ್ರವೇಶಿಸುವಂತಿಲ್ಲ

ಹಿ೦ದೂ ಸ೦ಪ್ರದಾಯದ ಕೆಲವೊ೦ದು ಕಲ್ಪನೆಗಳ ಪ್ರಕಾರ, ಮುಟ್ಟಾಗಿರುವ ಹೆಣ್ಣು ದೇವಾಲಯಕ್ಕೆ ಭೇಟಿ ಕೊಡುವ೦ತಿಲ್ಲ ಅಥವಾ ಆ ಸ೦ದರ್ಭದಲ್ಲಿ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುವ೦ತಿಲ್ಲ. ಈ ಸ೦ಪ್ರದಾಯ ಹಾಗೂ ನ೦ಬಿಕೆಗಳ ಪ್ರಕಾರ, ಮುಟ್ಟಾಗಿರುವ ಸಮಯದಲ್ಲಿ ಅಥವಾ ಋತುಚಕ್ರದ ಅವಧಿಯಲ್ಲಿ ಹುಡುಗಿಯು ಅಪವಿತ್ರಳಾಗಿರುತ್ತಾಳೆ. ಆದ್ದರಿ೦ದ, ಅ೦ಥ ಸ೦ದರ್ಭದಲ್ಲಿ ಹುಡುಗಿಯು ದೇವರಿಗೆ ಅರ್ಪಿಸಲ್ಪಡುವ ಯಾವೊ೦ದು ವಸ್ತುವನ್ನೇ ಆಗಲೀ, ಸ್ಪರ್ಶಿಸುವುದಕ್ಕೂ ಕೂಡ ಅವಕಾಶವಿರುವುದಿಲ್ಲ.

ದೇವಾಲಯಗಳನ್ನು ಪ್ರವೇಶಿಸುವಂತಿಲ್ಲ

ದೇವಾಲಯಗಳನ್ನು ಪ್ರವೇಶಿಸುವಂತಿಲ್ಲ

ಋತುಚಕ್ರದ ಅವಧಿಯಲ್ಲಿ ಹುಡುಗಿಯರು ಯಾವುದೇ ಒ೦ದು ಧಾರ್ಮಿಕ ಸಮಾರ೦ಭದಲ್ಲಿ ಪಾಲ್ಗೊಳ್ಳುವ೦ತಿಲ್ಲ. ಈಗ ನಾವು ಈ ಕುರಿತು ತಾರ್ಕಿಕವಾಗಿ ಯೋಚಿಸಲು ಮು೦ದಾದರೆ, ಈ ಋತುಚಕ್ರವೆ೦ಬುದನ್ನು ಹೆಣ್ಣಿಗೆ ಸ್ವಯ೦ ಪ್ರಕೃತಿ ಅಥವಾ ದೇವರೇ ನೀಡಿರುವ ಒ೦ದು ಸಹಜವಾದ ದೈಹಿಕ ಪ್ರಕ್ರಿಯೆ. ಹೆಣ್ಣನ್ನು ತಾಯ್ತನಕ್ಕೆ ಸಿದ್ಧಪಡಿಸುವ ಜೀವಶಾಸ್ತ್ರೀಯ ಕೀಲಿಕೈಯೇ ಈ ಋತುಚಕ್ರವಾಗಿದೆ. ಹೀಗಾಗಿ, ಮುಟ್ಟಾದ ಸ್ತ್ರೀಯು ಅದು ಹೇಗೆ ತಾನೇ ಅಪವಿತ್ರಳಾಗಿರಲು ಸಾಧ್ಯ?

ಅಡುಗೆ ಮಾಡುವಂತಿಲ್ಲ.

ಅಡುಗೆ ಮಾಡುವಂತಿಲ್ಲ.

ಋತುಚಕ್ರದ ಅವಧಿಯಲ್ಲಿ ಹುಡುಗಿಯರು ಅಪವಿತ್ರರೆಂದು ಪರಿಗಣಿಸಲ್ಪಡುವುದರಿoದ ಅವರು ಅಡುಗೆ ಕೋಣೆಯನ್ನು ಪ್ರವೇಶಿಸುವಂತಿಲ್ಲ. ಆದರೂ ಕೂಡ, ಹಿಂದೂ ಸಂಪ್ರದಾಯದ ಈ ಒಂದು ಅಲಿಖಿತ ನಿಯಮವು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಏಕೆಂದರೆ, ಕನಿಷ್ಠ ಈ ದಿನಗಳಾಲ್ಲದರೂ ಆಕೆಯು ತನ್ನ ದಿನನಿತ್ಯದ ಮನೆಗೆಲಸದ ಜಂಜಾಟಗಳಿಂದ ದೂರವಿದ್ದು ಸ್ವಲ್ಪ ಹಾಯಾಗಿರಬಹುದು. ಈ ಮೂಢನoಬಿಕೆಯ ಪ್ರಕಾರ, ಹುಡುಗಿಯು ತಯಾರಿಸಿದ ಆಹಾರವು ಅನಾರೋಗ್ಯಕರವೂ, ಅಶುದ್ಧವೂ ಆಗಿರುತ್ತದೆ. ಈ ಒಂದು ನಂಬಿಕೆಗೆ ಮತ್ತೊಂದು ಆಯಾಮವೂ ಇದೆ.

ಅಡುಗೆ ಮಾಡುವಂತಿಲ್ಲ

ಅಡುಗೆ ಮಾಡುವಂತಿಲ್ಲ

ಹಿಂದಿನ ಕಾಲದಲ್ಲಿ, ಸ್ವಚ್ಚತೆಯ ಪರಿಸ್ಥಿತಿಯು ಅಷ್ಟೊoದು ಉತ್ತಮವಿದ್ದಿರದ ಆ ದಿನಗಳಲ್ಲಿ ಈ ಒಂದು ನಿಯಮವನ್ನು ಅನುಷ್ಟಾನಕ್ಕೆ ತರಲಾಯಿತು. ಆದರೆ, ಇದರ ಹಿಂದಿನ ಈ ತರ್ಕವನ್ನರಿಯದ ಜನರು ಇಂದಿಗೂ ಕೂಡ ಅದೇ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಮೂರನೆಯ ದಿನದಂದು ಬಟ್ಟೆಗಳನ್ನು ಒಗೆದುಕೊಳ್ಳಬೇಕು

ಮೂರನೆಯ ದಿನದಂದು ಬಟ್ಟೆಗಳನ್ನು ಒಗೆದುಕೊಳ್ಳಬೇಕು

ಕೆಲವೊಂದು ಹಿಂದೂ ಸಂಪ್ರದಾಯದ ಪ್ರಕಾರ, ಋತುಚಕ್ರದ ಅವಧಿಯು ಮುಗಿದ ತರುವಾಯ ಮೂರನೆಯ ದಿನದಂದು ಆಕೆಯು ತನ್ನೆಲ್ಲಾ ಬಟ್ಟೆಗಳು ಹಾಗೂ ಹೊದಿಕೆ, ಬೆಡ್ ಶೀಟ್ ಗಳನ್ನು ಸ್ವಚ್ಚವಾಗಿ ಒಗೆಯಬೇಕು. ಅದೇ ದಿನದಂದು ಅವರು ತಮ್ಮ ಕೂದಲನ್ನು ಶ್ಯಾಂಪೂವಿನಿಂದ ಸ್ವಚ್ಚ ಗೊಳಿಸಿಕೊಳ್ಳಬೇಕಾಗುತ್ತದೆ.

ಮೂರನೆಯ ದಿನದಂದು ಬಟ್ಟೆಗಳನ್ನು ಒಗೆದುಕೊಳ್ಳಬೇಕು

ಮೂರನೆಯ ದಿನದಂದು ಬಟ್ಟೆಗಳನ್ನು ಒಗೆದುಕೊಳ್ಳಬೇಕು

ಆದರೆ ಇದರ ಹಿಂದಿನ ವೈಜ್ಞಾನಿಕ ತರ್ಕವೇನೆoದರೆ, ಮುಟ್ಟಾದ ಮೊದಲ ಮೂರು ದಿನಗಳಲ್ಲಿ ರಕ್ತಸ್ರಾವವು ತೀವ್ರ ತೆರನಾಗಿರುವುದರಿಂದ, ಎಲ್ಲವನ್ನೂ ಚೆನ್ನಾಗಿ ಒಗೆದು ಸ್ವಚ್ಚಗೊಳಿಸಿಕೊಳ್ಳುವುದು ಉತ್ತಮ ಎಂಬುದಾಗಿ ಆಗಿದೆ.

ಉಪ್ಪಿನಕಾಯಿಯನ್ನು ಮುಟ್ಟುವಂತಿಲ್ಲ

ಉಪ್ಪಿನಕಾಯಿಯನ್ನು ಮುಟ್ಟುವಂತಿಲ್ಲ

ಋತುಚಕ್ರದ ಅವಧಿಯಲ್ಲಿ ಹುಡುಗಿಯರು ಉಪ್ಪಿನಕಾಯಿಯನ್ನು ಮುಟ್ಟುವಂತಿಲ್ಲವೆಂದು ಹೇಳಲಾಗುತ್ತದೆ. ಹಿಂದೂ ಆಚರಣೆಯ ಕಲ್ಪನೆಯ ಪ್ರಕಾರ ಹಾಗೊಂದು ವೇಳೆ ಹುಡುಗಿಯು ಆ ಅವಧಿಯಲ್ಲಿ ಉಪ್ಪಿನಕಾಯಿಯನ್ನೇನಾದರೂ ಮುಟ್ಟಿದರೆ, ಅದು ಹಾಳಾಗುತ್ತದೆ. ಏನೇ ಆಗಲಿ, ಈ ನಂಬಿಕೆಯ ಹಿಂದೆ ಯಾವುದೇ ತಾರ್ಕಿಕವಾದ ಹಿನ್ನೆಲೆಯಿದ್ದಂತೆ ಕಾಣುವುದಿಲ್ಲ. ನಿಮಗೇನಾದರೂ ಇದರ ಬಗ್ಗೆ ತಿಳಿದಿದ್ದರೆ ನಮಗೂ ಅದನ್ನು ತಿಳಿಸಿರಿ.

ತುಳಸಿ ಗಿಡದ ಸ್ಪರ್ಶವು ನಿಷೇಧ

ತುಳಸಿ ಗಿಡದ ಸ್ಪರ್ಶವು ನಿಷೇಧ

ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವಾದ ಸಸ್ಯವೆಂದು ಪರಿಗಣಿಸಲಾಗಿದೆ. ಅದ್ದರಿಂದ ಹುಡುಗಿಯರು ಮುಟ್ಟಿನ ದಿನಗಳಲ್ಲಿ ತುಳಸಿ ಗಿಡವನ್ನು ಸ್ಪರ್ಶಿಸುವoತಿಲ್ಲ. ಈ ಅವಧಿಯಲ್ಲಿ ಅಂತಹ ಹುಡುಗಿಯರು ತಮ್ಮ ನೆರಳೂ ಸಹ ತುಳಸಿ ಗಿಡದ ಮೇಲೆ ಬೀಳದಂತೆ ಎಚ್ಚರವಹಿಸಬೇಕಾಗುತ್ತದೆ.

ತುಳಸಿ ಗಿಡದ ಸ್ಪರ್ಶವು ನಿಷೇಧ

ತುಳಸಿ ಗಿಡದ ಸ್ಪರ್ಶವು ನಿಷೇಧ

ನಂಬಿಕೆಗಳ ಪ್ರಕಾರ, ಹಾಗೇನಾದರೂ ನಡೆದರೆ ತುಳಸಿ ಗಿಡವು ಸತ್ತೇ ಹೋಗುತ್ತದೆ. ಈ ಎಲ್ಲವೂ ಕೂಡ ತಲೆತಲಾಂತರದಿಂದ ಸಾಗಿ ಬಂದ ಜನಪ್ರಿಯವಾದ ಹಿಂದೂ ಕಲ್ಪನೆಗಳಾಗಿವೆ. ಕೆಲವೊಂದು ಹಿಂದೂ ಕಲ್ಪನೆಗಳಿಗೆ ತಾರ್ಕಿಕವಾದ ವಿವರಣೆಯಿದೆ ಆದರೆ ಕೆಲವೊಂದಕ್ಕೆ ಇರುವುದಿಲ್ಲ.

English summary

Hindu Myths About Menstruation

There were and still are a lot of customs to be followed by Hindu girls during their menstruation. People in recent times laugh at such unreasonable Hindu customs. Menstruation is not an easy thing in a woman's life. 
X
Desktop Bottom Promotion