For Quick Alerts
ALLOW NOTIFICATIONS  
For Daily Alerts

ಹನುಮಾನ್ ಜಯಂತಿಯ ಪ್ರಾಮುಖ್ಯತೆ ತಿಳಿಯಿರಿ

|

ಏಪ್ರಿಲ್ 15 ರಂದು ಹನುಮಾನ್ ಜಯಂತಿಯನ್ನು ನಾವು ಆಚರಿಸುತ್ತೇವೆ. ಶ್ರೀ ಹನುಮಂತ ದೇವರ ಜನ್ಮದಿನವನ್ನು ಈ ದಿನ ಆಚರಿಸಲಾಗುತ್ತದೆ. ಕೆಂಪು ಬಣ್ಣದಿಂದಾಗಿ ಹನುಮಂತನು ರುದ್ರ ದೇವರ ಅವತಾರವೆಂದು ಪರಿಗಣಿಸಲಾಗುತ್ತದೆ.

ಹನುಮಾನ್ ದೇವರಿಗೆ ಕೆಂಪು ಬಣ್ಣವು ತುಂಬಾ ಪ್ರಿಯವಾಗಿರುವುದರಿಂದ ಭಕ್ತಾದಿಗಳು ಹನುಮಂತನ ಮೂರ್ತಿಗೆ ಕೆಂಪು ಬಣ್ಣವನ್ನು ಹಚ್ಚುತ್ತಾರೆ. ಹನುಮಾನ್ ಜಯಂತಿಯ ಮಹತ್ವವನ್ನು ಈ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಇಂದಿನ ವಿಶೇಷತೆಯನ್ನು ಅರಿಯೋಣ.

Hanuman Jayanti, the birth of Lord Hanuman

1.ಶಿವ ದೇವರು ಮತ್ತು ವಾಯುವಿನ ಅವತಾರವೆಂದು ಹನುಮಂತ ದೇವರನ್ನು ನಂಬಲಾಗುತ್ತದೆ.

2.ಶ್ರೀರಾಮ ದೇವರ ಪರಮ ಭಕ್ತನೂ ಹನುಮಂತ ದೇವರಾಗಿದ್ದಾರೆ.

3.ಚೈತ್ರ ಮಾಸದ ಶುಕ್ಲ ಪಕ್ಷದ 15 ರಂದು ಹನುಮಾನ್ ಜಯಂತಿಯನ್ನು ಆಚರಿಸಲಾಗುತ್ತದೆ.

4.ಹನುಮಾನ್ ದೇವರು ಯಾರನ್ನೂ ಮದುವೆಯಾಗಿಲ್ಲ ಮತ್ತು ಬ್ರಹ್ಮಚಾರಿಯಾಗಿಯೇ ಶ್ರೀ ರಾಮ ದೇವರ ಭಕ್ತರಾಗಿದ್ದಾರೆ.

5.ಹನುಮಾನ್ ದೇವರನ್ನು ಶನಿ ದೇವರೂ ಎಂದೂ ಪರಿಗಣಿಸಲಾಗುತ್ತದೆ. ಹನುಂತನ ಕಪ್ಪಗಿನ ಆಕಾರವು ಶನಿ ದೇವರನ್ನು ಪ್ರತಿಬಿಂಬಿಸುತ್ತದೆ. ಹನುಮಂತನ ಅನುಗ್ರಹವನ್ನು ಪಡೆದುಕೊಳ್ಳಲು ಭಕ್ತರು ಶನಿ ಮತ್ತು ಶ್ರೀ ರಾಮ ದೇವರನ್ನು ಪೂಜಿಸುತ್ತಾರೆ.

6.ತಮ್ಮ ಜಾತಕದಲ್ಲಿ ಶನಿ ದೋಷವನ್ನು ಹೊಂದಿರುವವರು ಹನುಮಂತನನ್ನು ಪೂಜಿಸಿದರೆ ಆ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.

7.ನಂಬಿಕೆಗಳ ಪ್ರಕಾರ, ಹನುಮಂತ ದೇವರನ್ನು ಪೂಜಿಸಲು ಮಧ್ಯ ರಾತ್ರಿ ಸೂಕ್ತ ಸಮಯವಾಗಿದೆ.

ರಾಮ ನವಮಿಯ ಮಹತ್ವವನ್ನು ತಿಳಿಯೋಣ ಬನ್ನಿ

8.ಹನುಮಾನ್ ಚಾಲೀಸವನ್ನು ಓದುವ ಹೊರತಾಗಿ, ಹನುಮಾನ್ ಜಯಂತಿಯಂದು ಭಕ್ತರು ಹನುಮಾನ್ ಮಂತ್ರವನ್ನು ಪಠಿಸಬಹುದು.

9.ಹನುಮಂತ ದೇವರ ಅನುಗ್ರಹ ಪಡೆಯಲು ನೀವು ಶ್ರೀ ರಾಮ ದೇವರನ್ನು ಪೂಜಿಸಬೇಕು.

10.ಹನುಮಾನ್ ಜಯಂತಿಯನ್ನು ಭಕ್ತರು ಹಣೆಗೆ ತಿಲಕವನ್ನಿಟ್ಟು ಹನುಮಂತನ ದೇವಸ್ಥಾನಗಳಿಗೆ ಹೋಗುತ್ತಾರೆ. ಕೋತಿಗಳಿಗೆ ಬಾಳೆಹಣ್ಣನ್ನು ನೀಡಿ ಪುರುಷರು ಇಡೀ ದಿನ ಉಪವಾಸವನ್ನು ಕೈಗೊಳ್ಳುತ್ತಾರೆ.
ಹನುಮಂತನು ಬಾಲ್ಯದಲ್ಲಿಯೇ ಬ್ರಹ್ಮಚಾರಿಯಾಗಿರುವುರಿಂದ ಹನುಮಂತನ ವಿಗ್ರಹವನ್ನು ಮುಟ್ಟಲು ಪುರುಷರಿಗೆ ಅನುಮತಿ ಇದೆ. ಮಹಿಳೆಯರು ಹನುಮಂತ ದೇವರನ್ನು ಪೂಜಿಸಬಹುದು ಆದರೆ ವಿಗ್ರಹವನ್ನು

ಮುಟ್ಟುವಂತಿಲ್ಲ.

English summary

Hanuman Jayanti, the birth of Lord Hanuman

Hanuman Jayanti 2014 is on April 15th. The day is celebrated to commemorate the birth of Lord Hanuman. It is believed that Hanuman is an incarnation of Lord Rudra because of the red colour.
X
Desktop Bottom Promotion