For Quick Alerts
ALLOW NOTIFICATIONS  
For Daily Alerts

ಅಕಸ್ಮಾತ್ ಆಗಿ ಹಲ್ಲಿ ಮೈಮೇಲೆ ಬಿದ್ದರೆ ಅಪಶಕುನವೇ?

By Super
|

ಎಲ್ಲರ ಮನೆಯಲ್ಲೂ ಅನಪೇಕ್ಷಿತ ಅತಿಥಿಯಾಗಿರುವ ಹಲ್ಲಿ ಎಲ್ಲರ ಅವಗಣನೆಗೆ ಗುರಿಯಾಗಿದೆ. ಇದನ್ನು ಮನೆಯಿಂದ ಓಡಿಸಲು ಏನೇನು ತಂತ್ರ ಹೂಡಿದರೂ ಮರುದಿನ ಇನ್ನೊಂದು ಮೂಲೆಯಲ್ಲಿ ಪ್ರತ್ಯಕ್ಷವಾಗಿರುತ್ತದೆ. ಎಲ್ಲರೂ ಇದನ್ನು ದೂರ ಓಡಿಸುವವರೇ ಹೊರತು ಹೊಡೆಯಲು ಹೋಗುವುದಿಲ್ಲ.

ಏಕೆಂದರೆ ಹೊಡೆಯಲು ಹೋದಾಕ್ಷಣ ಹಲ್ಲಿ ತನ್ನ ಬಾಲವನ್ನು ಕಳಚಿಕೊಂಡು ಆ ಬಾಲ ಒದ್ದಾಡುತ್ತಿರುವಂತೆಯೇ ಅಲ್ಲಿಂದ ಜಾಗ ಖಾಲಿ ಮಾಡುತ್ತದೆ. ವಿಲವಿಲ ಒದ್ದಾಡುವ ಈ ಬಾಲವನ್ನು ನೋಡಲು ಅಸಹ್ಯಕರವಾಗಿದ್ದು ಯಾರೂ ಇದನ್ನು ನೋಡಬಯಸದ ಕಾರಣ ಹೊಡೆಯಲು ಹೋಗುವುದಿಲ್ಲ.

ಅಲ್ಲದೇ ಹಲ್ಲಿ ಮೇಲ್ಛಾವಣಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಡುಗೆಯಲ್ಲಿ ಬಿದ್ದರೆ, ಆ ಅಡುಗೆ ವಿಷವಾಗುತ್ತದೆ ಎಂದೂ ಜನರು ನಂಬುತ್ತಾರೆ. ಮುಂಬೈಯ ಭೆಂಡಿ ಬಜಾರ್ ನಲ್ಲಿ ಹಾಲಿನಲ್ಲಿ ಹಲ್ಲಿ ಇದೆ ಎಂದು ಹೇಳಿ ಹಾಲನ್ನು ಚೆಲ್ಲಿದ್ದ ಫಕೀರರು ತೀರಿದ ಬಳಿಕ ಅಲ್ಲಿ ಸಮಾಧಿ ಕಟ್ಟಿ ಈಗ ದರ್ಗಾ ಮಾಡಲಾಗಿದೆ. ಆಗಾಗ ಲೊಚಗುಟ್ಟುವ ಹಲ್ಲಿ ಏನೋ ಹೇಳುತ್ತಿದೆ ಎಂದು ಹೇಳಲಾಗುತ್ತದೆ.

ಹಿಂದೂ ಪುರಾಣಗಳ ಪ್ರಕಾರ ಹಲ್ಲಿ ಮೈಮೇಲೆ ಬೀಳುವುದು ಶಕುನವಾಗಿದ್ದು ಇದರ ವಿವರಗಳನ್ನು ತಿಳಿಸುವ ಶಾಸ್ತ್ರಕ್ಕೆ ಗೌಳಿಶಾಸ್ತ್ರವೆನ್ನುತ್ತಾರೆ. ಬನ್ನಿ ಇನ್ನಷ್ಟು ಮಾಹಿತಿಗಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ಹಿಂದೂ ಪುರಾಣಗಳಲ್ಲಿ

ಹಿಂದೂ ಪುರಾಣಗಳಲ್ಲಿ

ಹಿಂದೂ ಪುರಾಣಗಳಲ್ಲಿ ವಿವಿಧ ಪ್ರಾಣಿಗಳಿಗೆ ವಿವಿಧ ಪಾತ್ರಗಳನ್ನು ನೀಡಲಾಗಿದೆ. ಆದರೆ ಅತಿ ನಿಕೃಷ್ಟವಾಗಿ ಕಂಡುಬಂದ ಜೀವಿಯೆಂದರೆ ಹಲ್ಲಿ. ಪುರಾಣದ ಪ್ರಕಾರ ಅಮೃತಮಂಥನದ ಸಮಯದಲ್ಲಿ ಅಮೃತವನ್ನು ಕುಡಿದ ಸ್ವರ್ಣಬಾಹು ಎಂಬ ರಾಕ್ಷಸನನ್ನು ಮೋಹಿನಿಯ ಅವತಾರದ ಮಹಾವಿಷ್ಣು ಸಂಹರಿಸಿದ್ದನಂತೆ. ರುಂಡವಿಲ್ಲದ ಮುಂಡಕ್ಕೆ ಕೇತು ಎಂದು ಕರೆಯಲಾಗುತ್ತದೆ ಹಾಗೂ ರುಂಡವನ್ನು ಒಂದು ಹಾವಿನ ದೇಹಕ್ಕೆ ಜೋಡಿಸಿ ರಾಹು ಎಂದು ಕರೆಯಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಿಂದೂ ಪುರಾಣಗಳಲ್ಲಿ

ಹಿಂದೂ ಪುರಾಣಗಳಲ್ಲಿ

ಸೂರ್ಯ ಮತ್ತು ಚಂದ್ರ ಗ್ರಹಣಗಳೆಂದರೆ ರಾಹು ಸೂರ್ಯ ಅಥವಾ ಚಂದ್ರನನ್ನು ನುಂಗುವುದೆಂದೂ ಸೂರ್ಯ ಅಥವಾ ಚಂದ್ರನ ಕೊರಳಿನಿಂದ ಹೊರಬಂದು ಗ್ರಹಣವನ್ನು ಅಂತ್ಯಗೊಳಿಸುವುದೆಂದೂ ಹೇಳಲಾಗಿದೆ. ಹಲ್ಲಿಯ ಬಾಲ ಕಡಿದ ಬಳಿಕ ಜೀವಂತವಾಗಿ ಉಳಿಯುವ ಅದರ ರುಂಡವನ್ನೂ ಕೇತುವಿಗೆ ಹೋಲಿಸಲಾಗಿದೆ.ಎಲ್ಲೆಡೆ ಹಲ್ಲಿಗೆ ತಿರಸ್ಕಾರವಿದ್ದರೂ ದೀಪಾವಳಿಯ ಹೊತ್ತಿನಲ್ಲಿ ಮಾತ್ರ ಎಲ್ಲರೂ ತಮ್ಮ ಮನೆಯ ಗೋಡೆಯಲ್ಲಿ ಕಾಣಿಸಿಕೊಳ್ಳಲಿ ಎಂದೇ ಹಾರೈಸುತ್ತಾರೆ. ಏಕೆಂದರೆ ಹಲ್ಲಿ ಕಂಡರೆ ಮನೆಗೆ ಐಶ್ವರ್ಯ ಮತ್ತು ಸಮೃದ್ಧಿ ಬರುತ್ತದೆ ಎಂದು ಜನರು ನಂಬುತ್ತಾರೆ.

ಹಲ್ಲಿ ಮೈಮೇಲೆ ಬಿದ್ದರೆ ಕಂಡುಬರುವ ಶಕುನಗಳು

ಹಲ್ಲಿ ಮೈಮೇಲೆ ಬಿದ್ದರೆ ಕಂಡುಬರುವ ಶಕುನಗಳು

ಹಲ್ಲಿಗಳ ಪಾದದಲ್ಲಿ ಸ್ಥಾಯಿ ವಿದ್ಯುತ್ ನ ಗುಣ ಇರುವ ಅತಿಸೂಕ್ಷ್ಮ ಕೂದಲ ಕಾರಣ ಗೋಡೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ.(ಹಿಂದೆ ಇದರ ಕಾಲಿನಲ್ಲಿ ರಬ್ಬರ್ ಹೀರು ಬಟ್ಟಲಿನಂತಿದ್ದು ಗೋಡೆಯನ್ನು ಹಿಡಿದುಕೊಳ್ಳುತ್ತದೆ ಎಂದು ನಂಬಲಾಗಿತ್ತು, ಆದರೆ ಇತ್ತೀಚಿನ ಸಂಶೋಧನೆಗಳು ನಿಜಸ್ಥಿತಿಯನ್ನು ವಿವರಿಸಿವೆ).ಆದರೆ ಗೋಡೆಗಳ ಮೇಲೆ ಸಂಗ್ರಹವಾಗಿರುವ ಅತಿಸೂಕ್ಷ್ಮ ಧೂಳಿನ ಕಾರಣ ಕೆಲವೊಮ್ಮೆ ಹಿಡಿತ ಸಿಗದೇ ಕೆಳಗೆ ಬೀಳುತ್ತದೆ.ವೈರಿಯಿಂದ ದೂರ ಓಡಲೂ ಗೋಡೆಯಿಂದ ನೆಗೆದರೂ ಯಾರದಾದರೂ ಮೈ ಮೇಲೆ ಬೇಕೆಂದೇ ಹಲ್ಲಿ ಎಂದಿಗೂ ಬೀಳುವುದಿಲ್ಲ. ಹಲ್ಲಿ ಬೀಳುವುದೇನಿದ್ದರೂ ಅತ್ಯಂತ ಅನಿರೀಕ್ಷಿತ ಹಾಗೂ ಕಾಕತಾಳೀಯವೇ ಹೊರತು ಯಾವತ್ತೂ ಪ್ರಜ್ಞಾಪೂರ್ವಕವಾಗಿ ಹಲ್ಲಿ ಮೈಮೇಲೆ ಬೀಳುವುದಿಲ್ಲ.

ಅಕಸ್ಮಾತ್ ಆಗಿ ಹಲ್ಲಿ ಮೈಮೇಲೆ ಬಿದ್ದರೆ

ಅಕಸ್ಮಾತ್ ಆಗಿ ಹಲ್ಲಿ ಮೈಮೇಲೆ ಬಿದ್ದರೆ

ಒಂದು ವೇಳೆ ಯಾರದಾದರೂ ಮೈಮೇಲೆ ಅಕಾಸ್ಮಾತ್ ಆಗಿ ಹಲ್ಲಿ ಬಿದ್ದರೆ, ಆಗ ಗೌಳಿಶಾಸ್ತ್ರದ ಆಗಮನವಾಗುತ್ತದೆ. ಈ ಶಾಸ್ತ್ರದ ಪ್ರಕಾರ ಹಲ್ಲಿ ದೇಹದ ಯಾವ ಭಾಗದ ಮೇಲೆ ಮೊದಲು ಬಿತ್ತು ಎಂಬ ಅಂಶವನ್ನು ಪರಿಗಣಿಸಿ ಒಳ್ಳೆಯ ಅಥವಾ ಕೆಟ್ಟ ಶಕುನವೆಂದು ಭಾವಿಸಲಾಗುತ್ತದೆ. ಕ್ಷೋಭೆಗೊಳ್ಳುವ ಮನಸ್ಸು, ಕೆಡುವ ಆರೋಗ್ಯ, ಮನೆಯವರಲ್ಲಿ ಯಾರಿಗಾದರೂ ಆರೋಗ್ಯದಲ್ಲಿ ಏರುಪೇರು ಅಥವಾ ಸಾವು ಮೊದಲಾದ ಅಪಶಕುನಗಳಿದ್ದರೆ ಐಶ್ವರ್ಯದ ಆಗಮನ, ಉತ್ತಮ ಆರೋಗ್ಯ, ಕಳೆದುಹೋದವರು ಹಿಂದಿರುಗಿ ಬರುವುದು ಮೊದಲಾದ ಶುಭಶಕುನಗಳೂ ಇವೆ. ಈ ಶಕುನಗಳನ್ನು ಕೊಂಚ ವಿವರವಾಗಿ ನೋಡೋಣ: ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಕಸ್ಮಾತ್ ಆಗಿ ಹಲ್ಲಿ ಮೈಮೇಲೆ ಬಿದ್ದರೆ

ಅಕಸ್ಮಾತ್ ಆಗಿ ಹಲ್ಲಿ ಮೈಮೇಲೆ ಬಿದ್ದರೆ

*ತಲೆಯ ಮೇಲೆ ನೇರವಾಗಿ ಬಿದ್ದರೆ ಕೆಡುಕು ಸಂಭವಿತುತ್ತದೆ

*ಜಡೆಯಮೇಲೆ ಬಿದ್ದರೆ ಒಳ್ಳೆಯದಾಗುತ್ತದೆ

*ಮುಖದ ಮೇಲೆ ಬಿದ್ದರೆ ಹತ್ತಿರದವರಲ್ಲಿ ಯಾರಿಗಾದರೂ ಪ್ರಾಣಾಪಾಯವಾಗುವ ಸಂಭವವಿದೆ

*ಹುಬ್ಬುಗಳ ಮೇಲೆ ಬಿದ್ದರೆ ಧನಾಗಮನವಾಗುತ್ತದೆ.

*ಗಲ್ಲದ ಮೇಲೆ ಬಿದ್ದರೆ ಹಿಂದಿನ ತಪ್ಪಿಗೆ ಶಿಕ್ಷೆಯಾಗುವ ಸಂಭವವಿದೆ

*ಮೇಲ್ತುಟಿಯ ಮೇಲೆ ಬಿದ್ದರೆ ನಿಮ್ಮ ಐಶ್ವರ್ಯವೆಲ್ಲಾ ಕರಗಿ ಬೀದಿಪಾಲಾಗುವ ಸಂಭವಿಸಲಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಕಸ್ಮಾತ್ ಆಗಿ ಹಲ್ಲಿ ಮೈಮೇಲೆ ಬಿದ್ದರೆ

ಅಕಸ್ಮಾತ್ ಆಗಿ ಹಲ್ಲಿ ಮೈಮೇಲೆ ಬಿದ್ದರೆ

*ಕೆಳತುಟಿಯ ಮೇಲೆ ಬಿದ್ದರೆ ನಿಮಗೆ ಭಾರೀ ಐಶ್ವರ್ಯ ದೊರಕಲಿದೆ.

*ಮೂಗಿನ ಮೇಲೆ ಬಿದ್ದರೆ ನಿಮ್ಮ ಆರೋಗ್ಯ ಕೆಡಲಿದೆ

*ಬಲಗಿವಿಯ ಮೇಲೆ ಬಿದ್ದರೆ ನಿಮ್ಮ ಆರೋಗ್ಯ ಮತ್ತು ಆಯಸ್ಸು ವೃದ್ಧಿಸಲಿದೆ

*ತೆರೆದ ಬಾಯಿಯಲ್ಲಿ ಬಿದ್ದರೆ ನಿಮಗೇನೋ ಗ್ರಹಚಾರ ಕಾದಿದೆ.

*ಕುತ್ತಿಗೆಯ ಮೇಲೆ ಬಿದ್ದರೆ ನಿಮ್ಮ ವೈರಿಗಳು ತನ್ನಿಂತಾನೇ ನಾಶವಾಗುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಕಸ್ಮಾತ್ ಆಗಿ ಹಲ್ಲಿ ಮೈಮೇಲೆ ಬಿದ್ದರೆ

ಅಕಸ್ಮಾತ್ ಆಗಿ ಹಲ್ಲಿ ಮೈಮೇಲೆ ಬಿದ್ದರೆ

*ಎಡಗೈಯ ಮೇಲೆ ಬಿದ್ದರೆ ನಿಮ್ಮ ಲೈಂಗಿಕ ಜೀವನ ಸುಗಮವಾಗುತ್ತದೆ.

*ಬಲಗೈ ಮೇಲೆ ಬಿದ್ದರೆ ನಿಮ್ಮ ಆರೋಗ್ಯ ಬಹಳ ಕೆಡಲಿದೆ.

*ಬಲಮಣಿಕಟ್ಟಿನ ಮೇಲೆ ಬಿದ್ದರೆ ನಿಮಗೆ ಯಾವುದೋ ತೊಂದರೆ ಎದುರಾಗಲಿದೆ.

*ಹೊಕ್ಕುಳ ಮೇಲೆ ಬಿದ್ದರೆ ನಿಮಗೆ ಅಮೂಲ್ಯ ಮಣಿಗಳು ಮತ್ತು ರತ್ನಗಳು ಲಭಿಸಲಿವೆ.

*ತೊಡೆಗಳ ಮೇಲೆ ಬಿದ್ದರೆ ನಿಮ್ಮ ತಂದೆತಾಯಿಯರಿಗೆ ಬೇಸರ, ಅಸಂತೋಷ ಎದುರಾಗಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಕಸ್ಮಾತ್ ಆಗಿ ಹಲ್ಲಿ ಮೈಮೇಲೆ ಬಿದ್ದರೆ

ಅಕಸ್ಮಾತ್ ಆಗಿ ಹಲ್ಲಿ ಮೈಮೇಲೆ ಬಿದ್ದರೆ

*ಮೊಣಕಾಲಿನ ಗಂಟಿನ ಮೇಲೆ ಬಿದ್ದರೆ ನಿಮಗೆ ಶುಭವಾಗುವುದು.

*ಹಿಮ್ಮಡಿಯ ಗಂಟಿನ ಮೇಲೆ ಬಿದ್ದರೆ ನಿಮಗೆ ಶುಭವಾಗುವುದು.

*ಪ್ರಷ್ಠಗಳ ಮೇಲೆ ಬಿದ್ದರೆ ನಿಮಗೆ ಶುಭವಾಗುವುದು.

*ಪಾದಗಳ ಮೇಲೆ ಬಿದ್ದರೆ ನಿಮಗೆ ಶೀಘ್ರದಲ್ಲಿಯೇ ದೂರಪ್ರಯಾಣದ ಸೌಭಾಗ್ಯವಿದೆ.

*ವೃಷಣಗಳ ಅಥವಾ ಜನನಾಂಗಗಳ ಮೇಲೆ ಬಿದ್ದರೆ ಕಷ್ಟಕರ ಜೀವನ ಮತ್ತು ಬಡತನ ಎದುರಾಗಲಿದೆ.ಮೇಲೆ ವಿವರಿಸಿರುವ ಶಕುನಗಳು ಗೌಳಿಶಾಸ್ತ್ರದ ಪರಿಚಯ ಮಾತ್ರವಾಗಿದೆ. ಏಕೆಂದರೆ ಗೌಳಿಶಾಸ್ತ್ರದಲ್ಲಿ ದೇಹದ 65 ವಿವಿಧ ಭಾಗಗಳಿಗೆ ಹಲ್ಲಿ ಬಿದ್ದರೆ ವಿವಿಧ ಶಕುನವನ್ನು ಹೇಳಲಾಗಿದೆ. ಅದರಲ್ಲೂ ಪುರುಷರ ಮೇಲೆ ಮತ್ತು ಮಹಿಳೆಯರ ಮೇಲೆ ಹಲ್ಲಿ ಬೀಳುವ ಶಕುನಗಳನ್ನು ಪ್ರತ್ಯೇಕವಾಗಿ ವಿವರಿಸಲಾಗಿದೆ.

ಹಲ್ಲಿ ಲೊಚಗುಟ್ಟುವ ಶಕುನ

ಹಲ್ಲಿ ಲೊಚಗುಟ್ಟುವ ಶಕುನ

ಹಲ್ಲಿ ಲೊಚಗುಟ್ಟುವುದನ್ನು ಕೇಳಿದರೆ ಅದು ಯಾವ ದಿಕ್ಕಿನಿಂದ ಬಂದಿತು, ಎಷ್ಟು ಹೊತ್ತು ಲೊಚಗುಟ್ಟಿತು? ದಿನದ ಯಾವ ಹೊತ್ತಿನಲ್ಲಿ ಕೇಳಿದಿರಿ? ಅಂದು ಯಾವ ದಿನವಾಗಿತ್ತು? ದಿನಾಂಕ ಏನು ಮೊದಲಾದ ವಿವರಗಳ ಮೇಲೆ ಶಕುನವನ್ನು ವಿವರಿಸಲಾಗುತ್ತದೆ.

ಗೌಳಿಶಾಸ್ತ್ರದ ಪ್ರಕಾರ ನಿಮಗೆ ಕೆಟ್ಟದಾಗುವಂತಿದ್ದರೆ ಏನು ಮಾಡಬೇಕು?

ಗೌಳಿಶಾಸ್ತ್ರದ ಪ್ರಕಾರ ನಿಮಗೆ ಕೆಟ್ಟದಾಗುವಂತಿದ್ದರೆ ಏನು ಮಾಡಬೇಕು?

ಗೌಳಿಶಾಸ್ತ್ರದ ಪ್ರಕಾರ ಹಲ್ಲಿ ಮೈಮೇಲೆ ಬಿದ್ದ ಬಳಿಕ ಕ್ಷಣಮಾತ್ರವೂ ತಡಮಾಡದೇ ಸ್ನಾನ ಮಾಡಿಬಿಡಬೇಕು, ಬಳಿಕ ತಕ್ಷಣ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಬೇಕು. ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಜ್ಯೋತಿ ಬೆಳಗಿಸಿ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿ ಪಂಚಗವ್ಯವನ್ನು ಸೇವಿಸಬೇಕು.

ಗೌಳಿಶಾಸ್ತ್ರದ ಪ್ರಕಾರ ನಿಮಗೆ ಕೆಟ್ಟದಾಗುವಂತಿದ್ದರೆ ಏನು ಮಾಡಬೇಕು?

ಗೌಳಿಶಾಸ್ತ್ರದ ಪ್ರಕಾರ ನಿಮಗೆ ಕೆಟ್ಟದಾಗುವಂತಿದ್ದರೆ ಏನು ಮಾಡಬೇಕು?

ಮಣ್ಣಿನ ಅಥವಾ ಚಿನ್ನದ ದೀಪ ಅಥವಾ ಎಳ್ಳೆಣ್ಣೆಯನ್ನು ದಾನ ಮಾಡಬೇಕು. ಗೌಳಿ ಶಾಸ್ತ್ರದ ಪ್ರಕಾರ ಹಲ್ಲಿಯನ್ನು ಮುಟ್ಟಿದರೆ ಹಿಂದಿನ ಕೆಡಕು ಮತ್ತು ದೋಷಗಳು ಪರಿಹಾರವಾಗುವುವು. ತಮಿಳುನಾಡಿನ ಕಾಂಚಿಪುರಂನಲ್ಲಿರುವ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಚಿನ್ನದ ಮತ್ತು ಬೆಳ್ಳಿಯ ಹಲ್ಲಿಗಳಿದ್ದು ಇವು ಸೂರ್ಯ ಮತ್ತು ಚಂದ್ರನನ್ನು ಪ್ರತಿನಿಧಿಸುತ್ತವೆ.

English summary

Gauli Shastra And How It Affects Our Life

In Indian mythology, animals have always held a position of great regard. But the most unlikely of them is the humble house lizard. The house lizard is one of the most hated among the creepy-crawlies. Your first reaction when you spot one is probably that of disgust and you would naturally try to drive it out. But did you know that ancient Indian mythology has a whole stream of study dedicated to it called the Gauli Shastra?
X
Desktop Bottom Promotion