For Quick Alerts
ALLOW NOTIFICATIONS  
For Daily Alerts

ಯಾವ ಹೂವು ಯಾವ ದೇವರ ಪೂಜೆಗೆ ಶ್ರೇಷ್ಠ?

By Manu
|

ಹಿಂದೂ ಧರ್ಮದಲ್ಲಿ ದೇವರ ವಿಗ್ರಹಕ್ಕೆ ಮಾಡುವ ಪೂಜೆಗೆ ಹೆಚ್ಚಿನ ಮಹತ್ವವಿದೆ. ಈ ಪೂಜೆಯಲ್ಲಿ ಹಲವು ಸಾಮಾಗ್ರಿಗಳ ಅಗತ್ಯವಿದ್ದು ತಾಜಾ ಹೂವುಗಳು ಅವಿಭಾಜ್ಯ ಅಂಗವಾಗಿದೆ. ಮನೆಯಲ್ಲಿಯೇ ಆಗಲಿ, ದೇವಸ್ಥಾನಗಳಲ್ಲಿಯೇ ಆಗಲಿ, ಪೂಜೆಯಲ್ಲಿ ಹಲವು ವಿಧದ ಹೂವುಗಳನ್ನು ಇರಿಸಲಾಗಿರಿಸುತ್ತದೆ.

ಪೂಜೆಯ ಬಳಿಕ ಪ್ರಸಾದದ ರೂಪದಲ್ಲಿ ಹೂವುಗಳ ಪಕಳೆಗಳನ್ನೂ ನೀಡಲಾಗುತ್ತದೆ. ಹೂವುಗಳು ಭಕ್ತ ಮತ್ತು ದೇವರ ನಡುವಿನ ಸಂವಹನ ಮಾಧ್ಯಮ ಎಂದೂ ಭಾವಿಸಲಾಗುತ್ತದೆ. ಲಕ್ಷ್ಮಿ ಸರಸ್ವತಿ ಮೊದಲಾದ ದೇವತೆಯರನ್ನು ಕಮಲದ ಹೂವಿನಲ್ಲಿ ಕುಳಿತಿರುವಂತೆಯೇ ಕವಿಗಳು ಮತ್ತು ಚಿತ್ರಕಾರರು ವರ್ಣಿಸಿದ್ದಾರೆ.

ದೇವಾಲಯದ ಪವಿತ್ರ ವಾತಾವರಣದಲ್ಲಿ ಹೂವುಗಳ ಸುವಾಸನೆ ಭಕ್ತರ ಪರವಶತೆಯನ್ನು ಹೆಚ್ಚಿಸುತ್ತದೆ. ಹೂವುಗಳನ್ನು ದೇವರಿಗೆ ಕಾಣಿಕೆಯ ರೂಪದಲ್ಲಿ ಅರ್ಪಿಸಿದಾಗ ಹೊರಹೊಮ್ಮುವ ಧನಾತ್ಮಕ ಶಕ್ತಿ ನೆರದವರಲ್ಲಿ ಹಾಗೂ ಸುತ್ತಲ ವಾತಾವರಣದಲ್ಲಿ ದೈವಿಕ ಶಕ್ತಿಯನ್ನು ಮೂಡಿಸುತ್ತದೆ.

ಸದಾ ಆಗಸವನ್ನು ನೋಡುವ ಹೂವುಗಳು ಆಗಸದಿಂದ ಧನಾತ್ಮಕ ಶಕ್ತಿಯನ್ನು ಸೆಳೆದು ಕೆಳಮುಖವಾಗಿರುವ ಪಕಳೆಗಳ ಮೂಲಕ ನೆಲದಲ್ಲಿ ಅಡ್ಡಲಾಗಿ ಪ್ರವಹಿಸುವಂತೆ ಮಾಡುತ್ತವೆ. ಹಿಂದೂ ಧರ್ಮದಲ್ಲಿ ವಿವಿಧ ದೇವರುಗಳಿಗೆ ವಿವಿಧ ಹೂವುಗಳಿಂದ ಪೂಜೆ ಸಲ್ಲಿಸುವುದು ಶ್ರೇಯಸ್ಕರ ಎಂಬ ಭಾವನೆ ಮತ್ತು ನಂಬಿಕೆಯಿದೆ. ಬನ್ನಿ, ಈ ನಂಬಿಕೆಯಂತೆ ಯಾವ ದೇವರಿಗೆ ಯಾವ ಹೂವಿನ ಮೂಲಕ ಪೂಜೆ ಸಲ್ಲಿಸಿದರೆ ಹೆಚ್ಚು ಫಲಕಾರಿ ಎಂಬುದನ್ನು ನೋಡೊಣ... ದೇವಾಲಯ ಪ್ರವೇಶಿಸುವ ಮುನ್ನ ಈ ನಿಯಮಗಳೆಲ್ಲಾ ನೆನಪಿರಲಿ...

ಈಶ್ವರ

ಈಶ್ವರ

ಶಿವ ಅಥವಾ ಈಶ್ವರನಿಗೆ ಬಿಲ್ವಾಪತ್ರೆ ಅತ್ಯಂತ ಇಷ್ಟವಾದ ಎಲೆಗಳು ಎಂದು ಶಿವನ ಭಕ್ತರು ನಂಬುತ್ತಾರೆ. ಇದರ ಹೊರತಾಗಿ ತುಂಬೆ ಹೂವು (Leucas aspera), ನೇರಳೆ ಆರ್ಕಿಡ್ ಅಥವಾ ಮಂದಾರ ಪುಷ್ಪವೂ ಶಿವನಿಗೆ ಇಷ್ಟವಾಗಿದ್ದು ಈ ಹೂವುಗಳನ್ನು ಶಿವಪೂಜೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಶಿವ ಪೂಜೆಯಲ್ಲಿ ಇಂತಹ ತಪ್ಪುಗಳಾಗದಂತೆ ಎಚ್ಚರವಹಿಸಿ

ಈಶ್ವರ

ಈಶ್ವರ

ಇದರ ಜೊತೆಗೇ ಸಂಪಿಗೆ ಮತ್ತು ಕಿರೀಟ ಹೂ (Calotropis gigantea) ಸಹಾ ಶಿವನ ಅನುಗ್ರಹ ಪಡೆಯಲು ನೆರವಾಗುವ ಹೂವುಗಳಾಗಿವೆ.

ಪಾರ್ವತಿ ದೇವಿ

ಪಾರ್ವತಿ ದೇವಿ

ಈಶ್ವರದ ಪತ್ನಿ ಪಾರ್ವತೀದೇವಿಗೆ ಸಲ್ಲಿಸುವ ವಿಶೇಷ ಪಾರ್ಥನೆಯಾದ ಲಲಿತಾ ಸಹಸ್ರನಾಮದಲ್ಲಿ ಹಲವು ಹೂವುಗಳನ್ನು ಉಲ್ಲೇಖಿಸಲಾಗಿದೆ. ಕದಂಬ ವನ ಪಾರ್ವತಿ ಹೆಚ್ಚು ಇಷ್ಟವೆಂದು ಹಲವೆಡೆ ತಿಳಿಸಲಾಗಿದ್ದು ಇದೇ ಕಾರಣಕ್ಕೆ ಆಕೆಗೆ ಕದಂಬವನವಾಸಿನಿ ಎಂಬ ಹೆಸರೂ ಇದೆ.

ಪಾರ್ವತಿ ದೇವಿ

ಪಾರ್ವತಿ ದೇವಿ

ಈ ವನದಲ್ಲಿ ಸಿಗುತ್ತದೆ ಎಂಬ ಕಾರಣದಿಂದ ಕದಂಬ ಹೂ (Neolamarckia cadamba), ಸಂಪಿಗೆ, ದಾಸವಾಳ, ಕೆಂಡಸಂಪಿಗೆ, ಮಲ್ಲಿಗೆ ಮೊದಲಾದ ಹೂವುಗಳನ್ನು ಪಾರ್ವತಿ ದೇವಿಯ ಪೂಜೆಯಲ್ಲಿ ಬಳಸಲಾಗುತ್ತದೆ.

ದುರ್ಗೆ

ದುರ್ಗೆ

ಕಾಳಿಯ ಅವತಾರವಾದ ದುರ್ಗಾಮಾತೆಯ ಪೂಜೆಯಲ್ಲಿ ಸಾಮಾನ್ಯವಾಗಿ ಕೆಂಪು ಬಣ್ಣದ ಹೂವುಗಳನ್ನೇ ಬಳಸಲಾಗುತ್ತದೆ. ದಾಸವಾಳ, ಗುಡ್ಡೆ ಹೂ (Ixora coccinea), ಕಣಗಿಲ (Nerium indicum) ಮೊದಲಾದ ಕೆಂಪು ಹೂವುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

ಲಕ್ಷ್ಮಿ

ಲಕ್ಷ್ಮಿ

ಲಕ್ಷ್ಮಿ ದೇವತೆಗೆ ಕಮಲದ ಹೂವು ಅತಿ ಹೆಚ್ಚು ಇಷ್ಟವಾದ ಹೂವಾಗಿದ್ದು ಲಕ್ಷ್ಮೀಪೂಜೆಯಲ್ಲಿ ಕಮಲವನ್ನೇ ಹೆಚ್ಚು ಉಪಯೋಗಿಸಲಾಗುತ್ತದೆ. ಇನ್ನುಳಿದಂತೆ ಕೇದಿಗೆ, ಸಂಪಿಗೆ, ಸೇವಂತಿಗೆ, ಗೊಂಡೆ ಹೂವುಗಳು ಸಹಾ ಪೂಜೆಗೆ ಅರ್ಹವಾಗಿವೆ.

ಸುಬ್ರಹ್ಮಣ್ಯ

ಸುಬ್ರಹ್ಮಣ್ಯ

ಕಮಲ ಮತ್ತು ಕಣಗಿಲೆ (Nerium indicum or Nerium oleander) ಹೂವುಗಳು ಸುಬ್ರಹ್ಮಣ್ಯನ ಪೂಜೆಗೆ ಅತಿ ಅರ್ಹವಾದ ಹೂವುಗಳಾಗಿವೆ.

ಸರಸ್ವತಿ

ಸರಸ್ವತಿ

ಸರಸ್ವತಿ ದೇವಿಯನ್ನು ವಿದ್ಯಾದೇವತೆ ಎಂದು ನಂಬಲಾಗಿದ್ದು ಬಿಳಿಯ ಕಮಲದ ಹೂವು ಅತಿ ಹೆಚ್ಚು ಪ್ರಿಯ ಎಂದು ಭಕ್ತರು ನಂಬುತ್ತಾರೆ. ಅಂತೆಯೇ ಬಿಳಿಕಮಲ ಹಾಗೂ ಪಾರಿಜಾತ ಹೂವುಗಳನ್ನು ಸರಸ್ವತಿ ಪೂಜೆಯಲ್ಲಿ ಹೆಚ್ಚು ಬಳಸಲಾಗುತ್ತದೆ.

ಹನುಮದೇವರು

ಹನುಮದೇವರು

ಹನುಮಂತನಿಗೆ ಸಲ್ಲಿಸುವ ಪೂಜೆಯಲ್ಲಿ ತುಳಸಿ ಎಲೆಗಳು ಮತ್ತು ಅಡಿಕೆಯ ಹಿಂಗಾರದ ಹೂವಿನ ಹಾರವನ್ನು ಅರ್ಪಿಸಲಾಗುತ್ತದೆ. ಈ ಹೂವುಗಳನ್ನು ಪೂಜೆಯಲ್ಲಿ ಅರ್ಪಿಸುವ ಮೂಲಕ ವಿವಿಧ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು. ಹನುಮಾನ್ ನಮ್ಮ ನಡುವೆ ಇದ್ದಾನೆಯೇ? ಇಲ್ಲಿದೆ ಪುರಾವೆಗಳು!

English summary

Flowers For Worship Of Different Deities

Flowers form an important and integral part of a Hindu worship. Flowers are used in all Hindu poojas irrespective of whether they are carried out at home or at temples. Flowers serve as mediums to communicate to God.
X
Desktop Bottom Promotion