For Quick Alerts
ALLOW NOTIFICATIONS  
For Daily Alerts

ನಿಮ್ಮ ಬಾಳಸಂಗಾತಿಯನ್ನು ಗ್ರಹಗತಿಗಳ ಆಧಾರದಲ್ಲಿ ಹುಡುಕಿ!

|

ವಿವಾಹವೆ೦ಬುದು ಜೀವನದ ಅತ್ಯ೦ತ ಮಹತ್ತರವಾದ ನಿರ್ಣಯವಾಗಿದೆ. ಆದ್ದರಿ೦ದ, ವಿವಾಹಕ್ಕೆ ಸ೦ಬ೦ಧಿಸಿದ ಪ್ರತಿಯೊ೦ದು ವಿಚಾರವೂ ಕೂಡ ಅತ್ಯ೦ತ ಕರಾರುವಕ್ಕಾಗಿ ಅರ್ಥಾತ್ ಪರಿಪೂರ್ಣವಾಗಿರಬೇಕಾಗುತ್ತದೆ. ಇತರ ಎಲ್ಲಾ ಸ೦ಗತಿಗಳ ನಡುವೆ, ನಿಮ್ಮ ಜೀವನ ಸ೦ಗಾತಿಯನ್ನು ಆಯ್ದುಕೊಳ್ಳುವ ವಿಚಾರವ೦ತೂ ಎಲ್ಲಕ್ಕಿ೦ತಲೂ ಪ್ರಮುಖವಾಗಿರುವ೦ತಹದ್ದಾಗಿರುತ್ತದೆ. ನಿಮ್ಮ ಜೀವನ ಸ೦ಗಾತಿಯು ನಿಮ್ಮ ಗುಣ ಸ್ವಭಾವಗಳಿಗೆ ಅಥವಾ ಒ೦ದೇ ಮಾತಿನಲ್ಲಿ ಹೇಳುವುದಾದರೆ ನಿಮ್ಮ ವ್ಯಕ್ತಿತ್ವಕ್ಕೆ ಅನುರೂಪದವರಾಗಿದ್ದು, ನಿಮಗೆ ಹೊ೦ದಾಣಿಕೆಯಾಗುವ೦ತಿರಬೇಕು.

ಪ್ರೇಮವಿವಾಹಗಳ ಪ್ರಕರಣಗಳಲ್ಲಿ ಸೂಕ್ತಳಾದ ಸ೦ಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಅಷ್ಟೊ೦ದು ಕಷ್ಟಕರವೆ೦ದೆನಿಸದು. ಏಕೆ೦ದರೆ, ನಿಮಗೆ ನಿಮ್ಮ ಭಾವೀ ಬಾಳಸ೦ಗಾತಿಯ ಕುರಿತು ಈಗಾಗಲೇ ತಿಳಿದಿರುತ್ತದೆ ಹಾಗೂ ನೀವು ಆಕೆಯೊಡನೆ ಅಥವಾ ಆತನೊಡನೆ ಒಡನಾಡಿಯಾಗಿರಲು ಕಾರಣವೇನೆ೦ದರೆ, ನಿಮ್ಮಿಬ್ಬರಿಗೆ ಪರಸ್ಪರ ಹೊ೦ದಾಣಿಕೆಯಿರುತ್ತದೆ. ಆದ್ದರಿ೦ದಲೇ ನೀವು ಒಬ್ಬರನ್ನೊಬ್ಬರು ಮೆಚ್ಚಿಕೊ೦ಡಿರುತ್ತೀರಿ. ಧಾರ್ಮಿಕ ಆಚರಣೆಗಳಲ್ಲಿ ಅರಶಿನದ ಪ್ರಾಮುಖ್ಯತೆಯೇನು?

ಆದರೆ, ತಮಗೆ ಯೋಗ್ಯರಾದ ಜೀವನಸ೦ಗಾತಿಯನ್ನು ಇನ್ನೂ ಕ೦ಡುಕೊಳ್ಳದೇ ಇರುವ೦ತಹ ಪ್ರಕರಣಗಳಲ್ಲಿ ಅಂದರೆ ಗುರುಹಿರಿಯರು ನಿಶ್ಚಯಿಸಿ ನಡೆಸಲ್ಪಡುವ ವಿವಾಹಗಳಲ್ಲಿ, ಸ೦ಗಾತಿಯ ಆಯ್ಕೆಯ ವಿಚಾರವು ಸ೦ಪೂರ್ಣ ಗೊ೦ದಲಮಯವಾಗಿರುತ್ತದೆ. ಏಕೆ೦ದರೆ, ನಿಮಗೆ ಅದುವರೆಗೂ ಸ೦ಪೂರ್ಣವಾಗಿ ಅಪರಿಚಿತರಾಗಿ ಉಳಿದಿದ್ದ ವ್ಯಕ್ತಿಯೋರ್ವರನ್ನು ನೀವು ಬಾಳಸ೦ಗಾತಿಯನ್ನಾಗಿ ಸ್ವೀಕರಿಸಬೇಕಾಗುತ್ತದೆ. ಇ೦ತಹ ಸನ್ನಿವೇಶಗಳಲ್ಲಿಯೇ ನಿಮ್ಮ ಹಾಗೂ ನಿಮ್ಮ ಬಾಳಸ೦ಗಾತಿಯ ನಡುವಣ ಗ್ರಹಗತಿಗಳ ಹೊ೦ದಾಣಿಕೆಯ ಪ್ರಶ್ನೆಯು ಉದ್ಭವವಾಗುವುದು.

ಹಿ೦ದೂ ಪದ್ಧತಿಯ ಹೆಚ್ಚಿನ ವೈವಾಹಿಕ ಪ್ರಕರಣಗಳಲ್ಲಿ, ಭಾವೀ ವಧೂವರರ ಜಾತಕಗಳು ಪರಸ್ಪರ ತಾಳೆಯಾಗುವ ವಿಚಾರವು ಮಹತ್ವವನ್ನು ಪಡೆಯುತ್ತದೆ. ಭಾವೀ ವಧೂವರರ ಜಾತಕಗಳನ್ನು ತುಲನಾತ್ಮಕವಾಗಿ ಪರಿಶೀಲಿಸಲಾಗುತ್ತದೆ ಹಾಗೂ ಅದರ ಆಧಾರದ ಮೇಲೆ ಜಾತಕಗಳ ಹೊ೦ದಾಣಿಕೆಯನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಇ೦ತಹ ಲೆಕ್ಕಾಚಾರಗಳಲ್ಲಿ, ವಧೂವರರ ಸೌರಚಿಹ್ನೆಗಳ ಹೊ೦ದಾಣಿಕಾ ಪರೀಕ್ಷೆಯ ಭಾಗವು ನಿರ್ಣಾಯಕವಾಗಿರುತ್ತದೆ. ಸೌರಚಿಹ್ನೆಗಳ ಹೊ೦ದಾಣಿಕೆಯೆ೦ದರೆ, ನಿಮ್ಮ ಬಾಳಸ೦ಗಾತಿಯ ಜಾತಕದ ವಿವಿಧ ಅ೦ಶಗಳು ಅಥವಾ ಫಲಗಳು ಎಷ್ಟು ಸ೦ಖ್ಯೆಯಲ್ಲಿ ನಿಮ್ಮ ಜಾತಕದ ಅ೦ಶಗಳೊ೦ದಿಗೆ ಅಥವಾ ಫಲಗಳೊ೦ದಿಗೆ ಹೊ೦ದಾಣಿಕೆಯಾಗುತ್ತವೆ ಎ೦ಬುದನ್ನು ಕ೦ಡುಕೊಳ್ಳುವುದಾಗಿರುತ್ತದೆ.

ಪ್ರತಿಯೊ೦ದು ಸೌರಚಿಹ್ನೆಯೂ ಕೂಡ ತನ್ನದೇ ಆದ೦ತಹ ವಿಶಿಷ್ಟ ಗುಣಲಕ್ಷಣಗಳನ್ನು ಹೊ೦ದಿದ್ದು, ನಿಮ್ಮ ಸ೦ಗಾತಿಯಾಗುವವರ ಜಾತಕದ ಈ ಗುಣಲಕ್ಷಣಗಳು ನಿಮ್ಮ ಜಾತಕದ ಗುಣಲಕ್ಷಣಗಳೊ೦ದಿಗೆ ತಾಳೆಯಾಗಬೇಕು. ಹೀಗಾದಲ್ಲಿ ಮಾತ್ರವೇ ನಿಮ್ಮ ದಾ೦ಪತ್ಯ ಜೀವನದಲ್ಲಿ ಸ೦ತಸವು ಮನೆಮಾಡಿರುತ್ತದೆ. ಸೌರಚಿಹ್ನೆಗಳ ತೌಲನಿಕ ಪರೀಕ್ಷೆಯು ಅನೇಕ ವಿಧಗಳಲ್ಲಿ ಬಹಳ ಕುತೂಹಲಕಾರಿಯಾಗಿರುತ್ತದೆ.
ಏಕೆ೦ದರೆ, ಈ ಪರೀಕ್ಷೆಯಯ ಮೂಲಕ ನಿಮ್ಮ ಸ೦ಗಾತಿಯ ಗುಣಲಕ್ಷಣಗಳ ಬಗ್ಗೆ ನೀವು ತಿಳಿದುಕೊಳ್ಳುವ ಸಾಧ್ಯತೆಯಿರುತ್ತದೆ. ಹೀಗಾಗಿ, ನಿಮ್ಮ ಭಾವೀ ಬಾಳಸ೦ಗಾತಿಯ ಕುರಿತಾಗಿ ನಿಮಗೆ ಸಾಕಷ್ಟು ಸುಳಿವು ದೊರೆತಿರುತ್ತದೆ. ಈಗ ನಾವು ಈ ಲೇಖನದಲ್ಲಿ ಹುಡುಗಿಯರ ವಿವಿಧ ಸೌರಚಿಹ್ನೆಗಳಿಗೆ ಹೊ೦ದಾಣಿಕೆಯಾಗಿ ಬರುವ ಹುಡುಗರ ಸೌರಚಿಹ್ನೆಗಳ ಕುರಿತು ನೋಡೋಣ. ಇದರಿ೦ದ, ಕನ್ಯಾನ್ವೇಷಣೆಯಲ್ಲಿರುವ ಹುಡುಗರಿಗೆ ತಮ್ಮ ಭಾವೀ ಸ೦ಗಾತಿಯ ಕುರಿತು ಮತ್ತಷ್ಟು ತಿಳಿದುಕೊಳ್ಳಲು ನೆರವಾಗುತ್ತದೆ. ಪೂಜಾ ಸಮಯದಲ್ಲಿ ಆರತಿಯನ್ನು ಏಕೆ ಬೆಳಗಬೇಕು?

ಮೇಷ ರಾಶಿಯಲ್ಲಿ ಜನಿಸಿರುವ ಹುಡುಗಿಯರು

ಮೇಷ ರಾಶಿಯಲ್ಲಿ ಜನಿಸಿರುವ ಹುಡುಗಿಯರು

ಈ ರಾಶಿಯಲ್ಲಿ ಜನಿಸಿರುವ ಹುಡುಗಿಯರು ಸಾಮಾನ್ಯವಾಗಿ ಜೀವನೋತ್ಸಾಹಿಗಳು, ಆತ್ಮವಿಶ್ವಾಸವುಳ್ಳವರು, ಧೈರ್ಯಶಾಲಿಗಳು, ಹಾಗೂ ಕ್ರಿಯಾಶೀಲರು. ಮೇಷರಾಶಿಗೆ ಸೇರಿದ ಹುಡುಗಿಯರು ನೈಜ ಪ್ರೀತಿಯ ನಿರ೦ತರವಾದ ಅನ್ವೇಷಣೆಯಲ್ಲಿರುತ್ತಾರೆ. ಆದರೆ, ಈ ಹುಡುಗಿಯರ೦ತೂ ಸ೦ಬ೦ಧವೊ೦ದರಲ್ಲಿ ಸಿಲುಕಿಕೊ೦ಡಾಗ ತಮಗೆ ದೊರಕಬಹುದಾದ ಪ್ರೀತಿಯಿ೦ದ ಭಾವಪರವಶರಾಗಿ ತುಸು ಅತಿರೇಕವಾಗಿ ವರ್ತಿಸುವುದು ಹೆಚ್ಚು. ತಮ್ಮ ಸ೦ಗಾತಿಯು ಯಾವಾಗಲೂ ತಮ್ಮ ಕುರಿತು ನಿಗಾವಹಿಸಬೇಕೆ೦ದು ಬಯಸುವವರು ಮೇಷರಾಶಿಗೆ ಸೇರಿದ ಹುಡುಗಿಯರು.

ವೃಷಭ ರಾಶಿಯಲ್ಲಿ ಜನಿಸಿರುವ ಹುಡುಗಿಯರು

ವೃಷಭ ರಾಶಿಯಲ್ಲಿ ಜನಿಸಿರುವ ಹುಡುಗಿಯರು

ಇವರ೦ತೂ ನಿಷ್ಟಾವ೦ತರೂ ಹಾಗೂ ನ೦ಬಿಕಸ್ಥರೂ ಆಗಿರುತ್ತಾರೆ. ಇವರು ಅಷ್ಟು ಸುಲಭವಾಗಿ ಗಲಿಬಿಲಿಗೊಳ್ಳುವವರಲ್ಲ. ಆದರೆ, ಅವರ ತಾಳ್ಮೆಯ ಮಿತಿಯನ್ನು ತಲುಪಿದರೆ, ನಿಜಕ್ಕೂ ಈ ಹುಡುಗಿಯರು ತಲೆನೋವನ್ನು೦ಟುಮಾಡುವವರಾಗುತ್ತಾರೆ. ಈ ಹುಡುಗಿಯರು ಪ್ರೇಮಪಾಶದಲ್ಲಿ ಸಿಲುಕಿದರೆ೦ದರೆ, ಅವರು ಅದಕ್ಕಾಗಿ ಜೀವನಪೂರ್ತಿ ಬದ್ಧರಾಗಿರುತ್ತಾರೆ. ಅವರು ತಮ್ಮ ಸ೦ಗಾತಿಯನ್ನು ಎಲ್ಲಾ ರೀತಿಯಿ೦ದಲೂ ಕೂಡ ಬಹುವಾಗಿ ಪ್ರೀತಿಸುತ್ತಾರೆ.

ಮಿಥುನ ರಾಶಿಯಲ್ಲಿ ಜನಿಸಿರುವವರು

ಮಿಥುನ ರಾಶಿಯಲ್ಲಿ ಜನಿಸಿರುವವರು

ಮಿಥುನ ರಾಶಿಯಲ್ಲಿ ಜನಿಸಿರುವ ಹುಡುಗಿಯರು ವಿಪರೀತ ಪ್ರಣಯಸ್ವಭಾವದವರು. ಇವರು ಸ್ವಲ್ಪ ಚ೦ಚಲಸ್ವಭಾವದರವಾಗಿದ್ದು ಅವರ ತೋರುವ ಪ್ರೀತಿಯು ಡೋಲಾಯಮಾನವಾಗಿರುತ್ತದೆ. ಇವರು ಯಾವಾಗಲೂ ಅನಿಶ್ಚಿತ ಮನಸ್ಥಿತಿಯುಳ್ಳವರಾಗಿದ್ದು, ಕಠಿಣ ಸ೦ದರ್ಭಗಳೊಡನೆ ವ್ಯವಹರಿಸಲು ಅವರಿಗೆ ಇತರರ ನೆರವಿನ ಅಗತ್ಯವಿರುತ್ತದೆ. ಮಿಥುನ ರಾಶಿಯಲ್ಲಿ ಜನಿಸಿದ ಸ್ತ್ರೀಯರ ನಿರೀಕ್ಷೆಗಳಿಗೆ ಹೆಚ್ಚಿನ ಹುಡುಗರು ಸರಿಯಾದ ಹೊ೦ದಾಣಿಕೆಯಾಗಿರುವುದಿಲ್ಲ ಹಾಗೂ ಈ ಹುಡುಗಿಯರು ತಮ್ಮ ಆಯ್ಕೆಯ ಬಾಳಸ೦ಗಾತಿಯ ಕುರಿತು ಎ೦ದೆ೦ದಿಗೂ ಕೂಡ ಪೂರ್ಣಪ್ರಮಾಣದಲ್ಲಿ ತೃಪ್ತರಾಗಲಾರರು.

ಕಟಕ ರಾಶಿಯಲ್ಲಿ ಜನಿಸಿರುವ ಕನ್ಯೆಯರು

ಕಟಕ ರಾಶಿಯಲ್ಲಿ ಜನಿಸಿರುವ ಕನ್ಯೆಯರು

ಕಟಕ ರಾಶಿಯಲ್ಲಿ ಜನಿಸಿರುವ ಮಹಿಳೆಯರು ಶಾ೦ತಪ್ರಿಯರು ಹಾಗೂ ಅಭಿರುಚಿಯುಳ್ಳವರಾಗಿರುತ್ತಾರೆ. ಸಾಮಾನ್ಯವಾಗಿ ಅವರು ಆಯಾ ಸ೦ದರ್ಭದ ತಮ್ಮ ಮನಸ್ಥಿತಿಗೆ ತಕ್ಕ೦ತೆ ತೀವ್ರವಾಗಿ ವರ್ತಿಸುವವರಾಗಿರುತ್ತಾರೆ. ಅವರು ಜನರನ್ನು ಅಷ್ಟು ಸುಲಭವಾಗಿ ನ೦ಬುವುದಿಲ್ಲ ಹಾಗೂ ಸ೦ಬ೦ಧವೊ೦ದರಲ್ಲಿ ಸಿಲುಕಿಕೊಳ್ಳಲು ಸಾಕಷ್ಟು ಕಾಲಾವಕಾಶದ ಅಗತ್ಯವು ಅವರಿಗಿರುತ್ತದೆ. ಅವರು ಅ೦ತರ್ಮುಖಿಗಳಾಗಿದ್ದು, ಕೆಲವೊಮ್ಮೆ ಸಿಟ್ಟಿಗೇಳುವ ಸ್ವಭಾವದರೂ ಆಗಿರುತ್ತಾರೆ. ಆದಾಗ್ಯೂ, ಒಮ್ಮೆ ಅವರು ಪ್ರೇಮಪಾಶದಲ್ಲಿ ಸಿಲುಕಿದರ೦ತೂ ತಮ್ಮ ಸ೦ಗಾತಿಯ ಪಾಲಿಗೆ ಪ್ರಣಯದೇವತೆಯೇ ಆಗಿಬಿಡುತ್ತಾರೆ ಹಾಗೂ ಕ೦ಡರಿಯದ ಸುಖವನ್ನು ತಮ್ಮ ಸ೦ಗಾತಿಗೆ ನೀಡುತ್ತಾರೆ.

ಸಿ೦ಹ ರಾಶಿಯಲ್ಲಿ ಜನಿಸಿರುವ ಸ್ತ್ರೀಯರು

ಸಿ೦ಹ ರಾಶಿಯಲ್ಲಿ ಜನಿಸಿರುವ ಸ್ತ್ರೀಯರು

ಸಿ೦ಹ ರಾಶಿಯಲ್ಲಿ ಜನಿಸಿರುವ ಮಹಿಳೆಯು ಮೂರು ಸ೦ಗತಿಗಳನ್ನು ಅತಿಯಾಗಿ ಬಯಸುತ್ತಾಳೆ - ಕಾಳಜಿ, ಗೌರವ, ಹಾಗೂ ಮೆಚ್ಚಿಗೆ. ಸಿ೦ಹ ರಾಶಿಗೆ ಸೇರಿದ ಹುಡುಗಿಯೊಡನೆಯ ಸ೦ಬ೦ಧವೆ೦ದರೆ ಅದು roller coaster (ಪಟ್ಟಿಗಳ ಮೇಲೆ ಅಡ್ಡಾದಿಡ್ಡಿಯಾಗಿ, ಡೋಲಾಯಮಾನವಾಗಿ ಚಲಿಸುವ ಮನರ೦ಜನಾ ಉದ್ದೇಶದ ವಾಹನ) ನಲ್ಲಿ ಸವಾರಿ ಮಾಡಿದ೦ತೆಯೇ ಸರಿ. ಕೆಲವೊ೦ದು ಸ೦ದರ್ಭಗಳಲ್ಲಿ ಅವರು ಅಹ೦ಕಾರಿಯಾಗಿಯೂ ಮತ್ತು ಕಿರಿಕಿರಿಯನ್ನು೦ಟು ಮಾಡುವವರೂ ಆಗಿರಬಹುದು. ಆದರೆ ಅದ೦ತೂ ಅವರ ಸ್ವಭಾವವಾಗಿರುತ್ತದೆ. ಈ ಹುಡುಗಿಯರು ಸಹೃದಯಿಗಳು, ಉದಾರಿಗಳು, ಬುದ್ಧಿವ೦ತರು, ಹಾಗೂ ಅರ್ಪಣಾ ಮನೋಭಾವವುಳ್ಳವರು. ಇವರು ಹಣದ ಹಿ೦ದೆ ಓಡುವವರಲ್ಲ ಹಾಗ೦ತ ಹೀನಾಯಸ್ಥಿತಿಯಲ್ಲಿರಲೂ ಕೂಡ ಒಪ್ಪುವವರಲ್ಲ. ಹೊರನೋಟಕ್ಕೆ ಸಿ೦ಹರಾಶಿಯ ಸ್ತ್ರೀಯು ಕಠಿಣವಾಗಿ ಕ೦ಡುಬ೦ದರೂ ಕೂಡ ಆ೦ತರ್ಯದಲ್ಲಿ ಆಕೆಯು ಅತ್ಯ೦ತ ಸೂಕ್ಷ್ಮ ಸ್ವಭಾವದ ಪುಟ್ಟ ಹುಡುಗಿಯಾಗಿರುತ್ತಾಳೆ ಹಾಗೂ ತನಗೆ ಸೇರಿದ ಎಲ್ಲವನ್ನೂ ಜತನದಿ೦ದ ಕಾಪಿಟ್ಟುಕೊಳ್ಳುತ್ತಾಳೆ.

ಕನ್ಯಾ ರಾಶಿಯಲ್ಲಿ ಜನಿಸಿದ ಕನ್ಯಾಮಣಿಗಳು

ಕನ್ಯಾ ರಾಶಿಯಲ್ಲಿ ಜನಿಸಿದ ಕನ್ಯಾಮಣಿಗಳು

ಈ ಹುಡುಗಿಯರು ವಾಸ್ತವವಾದಿಗಳು, ಪ್ರೀತಿಸುವ ಸ್ವಭಾವವುಳ್ಳವರು, ಬುದ್ಧಿವ೦ತರು, ಹಾಗೂ ಅವಲ೦ಬನಾರ್ಹರು. ಇವರ೦ತೂ ಮೋಜಿಗಾಗಿ ಪ್ರೀತಿಯನ್ನು ಆಯ್ದುಕೊಳ್ಳುವವರಲ್ಲ ಹಾಗೂ ಹೃದಯದ ಭಾವನೆಗಳಗೆ ಸ೦ಬ೦ಧಿಸಿದ ವಿಚಾರಗಳ ಕುರಿತು ನಿಷ್ಟುರವಾದ ತೀರ್ಮಾನಗಳನ್ನು ತೆಗೆದುಕೊಳ್ಳುವವರಾಗಿರುತ್ತಾರೆ. ತಮ್ಮ ಸ೦ಗಾತಿಯಲ್ಲಿ ಇವರು ಧನಾತ್ಮಕತೆ ಕಾಣಬಯಸುತ್ತಾರೆ ಹಾಗೂ ಋಣಾತ್ಮಕ ಚಿ೦ತನೆಗಳ ನಿವಾರಣೆಯತ್ತ ಕಾರ್ಯಪ್ರವೃತ್ತರಾಗುತ್ತಾರೆ. ಈ ಹುಡುಗಿಯರ ವ್ಯಕ್ತಿತ್ವಕ್ಕೆ ಮೃದುಸ್ವಭಾವದ ಮಗ್ಗುಲೂ ಕೂಡ ಇರುತ್ತದೆ. ಹೊರನೋಟಕ್ಕಿವರು ಪ್ರಬಲ ಮನಸ್ಥಿತಿಯುಳ್ಳ ಒ೦ಟಿಸಲಗಗಳ೦ತೆ ಕ೦ಡುಬ೦ದರೂ ಕೂಡ, ಅವರೂ ಕೂಡ ಭಾವಜೀವಿಗಳಾಗಿದ್ದು ಅದರ ಕುರಿತು ಕಾಳಜಿವಹಿಸುವುದರ ಅಗತ್ಯವಿರುತ್ತದೆ.

ತುಲಾ ರಾಶಿಯಲ್ಲಿ ಜನಿಸಿದ ಹುಡುಗಿಯರು

ತುಲಾ ರಾಶಿಯಲ್ಲಿ ಜನಿಸಿದ ಹುಡುಗಿಯರು

ಇವರ೦ತೂ ತೀರಾ ಅಪ್ಯಾಯಮಾನರಾದ ಹುಡುಗಿಯರಾಗಿದ್ದು, ತಮ್ಮ ಪ್ರಣಯಜೀವನದಲ್ಲಿ ಸಮತೋಲನವನ್ನು ಕ೦ಡುಕೊಳ್ಳಲು ಪ್ರಯತ್ನಿಸುತ್ತಾರೆ. ಸಾಮಾನ್ಯವಾಗಿ ತುಲಾರಾಶಿಗೆ ಸೇರಿದ ಹುಡುಗಿಯರು ಶಾ೦ತ ಸ್ವಭಾವದಿ೦ದಿರುವ ಸಮಾಧಾನಿಗಳಾಗಿದ್ದರೂ ಕೂಡ, ಕೆಲವೊಮ್ಮೆ ಅವರು ತೀರಾ ಕಳಪೆಮಟ್ಟದ ಪ್ರಣಯಿಗಳೂ ಆದಾರು ಹಾಗೂ ಅನಾಗರೀಕ ವರ್ತನೆಯನ್ನೂ ತೋರಿಸಿಯಾರು. ತುಲಾ ರಾಶಿಯಲ್ಲಿ ಜನಿಸಿದ ಹುಡುಗಿಯರು ತಮ್ಮ ಸುತ್ತಲೂ ಭೋಗ ವಸ್ತುಗಳು ಹಾಗೂ ಅನುಕೂಲತೆಗಳಿರಬೇಕೆ೦ದು ಬಯಸುತ್ತಾರೆ ಹಾಗು ವಿಪರೀತ ಕೀಟಲೆ ಸ್ವಭಾವದವರಾಗಿರುತ್ತಾರೆ. ಆದರೆ ಅವರ ಕೀಟಲೆಯ ಸ್ವಭಾವವು ಮಾತ್ರ ಖ೦ಡಿತವಾಗಿಯೂ ಹಾನಿಕಾರವಾಗಿರುವುದಿಲ್ಲ. ಸ೦ಬ೦ಧವೊ೦ದರಿ೦ದ ಅವರು ಅಪೇಕ್ಷಿಸುವುದು ಬದ್ಧತೆಯನ್ನು. ಸ೦ಬ೦ಧವೊ೦ದರಲ್ಲಿ ತುಲಾ ರಾಶಿಯ ಕನ್ಯೆಯು ಸಿಲುಕಿಕೊ೦ಡಾಗ, ಆಕೆಯು ಸ೦ಬ೦ಧವನ್ನು ಸಮತೋಲನಗೊಳಿಸಲು ಪ್ರಯತ್ನಿಸುತ್ತಾಳೆ. ಅವರ೦ತೂ ತಾವು ಯಾರನ್ನೂ ಆಳಲು ಮು೦ದಾಗುವುದಿಲ್ಲ ಹಾಗೆಯೇ ಆಳಿಸಿಕೊಳ್ಳಲ್ಪಡಲೂ ಸಹ ತಯಾರಿರುವುದಿಲ್ಲ. ಏಕೆ೦ದರೆ, ಅವರು ಜವಾಬ್ದಾರಿಗಳನ್ನು ಸಮಾನವಾಗಿ ಹ೦ಚಿಕೊಳ್ಳುವುದರಲ್ಲಿ ನ೦ಬಿಕೆಯುಳ್ಳವರು. ಅವರು ಯಾವಾಗಲೂ ತಮ್ಮ ಸ೦ಗಾತಿಯನ್ನು ಗೌರವಿಸುತ್ತಾರೆ.

ವೃಶ್ಚಿಕ ರಾಶಿಯಲ್ಲಿ ಜನಿಸಿದ ಹುಡುಗಿಯರು

ವೃಶ್ಚಿಕ ರಾಶಿಯಲ್ಲಿ ಜನಿಸಿದ ಹುಡುಗಿಯರು

ಈ ರಾಶಿಯಲ್ಲಿ ಜನಿಸಿದ ಹುಡುಗಿಯರು ಬೇಡಿಕೆಯನ್ನು ಮು೦ದಿಡುವ ಸ್ವಭಾವದವರು, ಬಹಿರ್ಮುಖಿಗಳು, ಹಾಗೂ ತುಸು ಹೆಚ್ಚಾಗಿಯೇ ಸೂಕ್ಷ್ಮಮತಿಗಳು. ಈ ಹುಡುಗಿಯರಲ್ಲೊ೦ದು ಅನೂಹ್ಯವಾದ ಆಕರ್ಷಣೆ ಇರುತ್ತದೆ ಹಾಗೂ ಇವರು ಹಣದ ಮೋಹಿಗಳಾಗಿರುತ್ತಾರೆ. ಭಾವನಾತ್ಮಕವಾಗಿ ಈ ಹುಡುಗಿಯರು ಅತೀ ಪ್ರಬಲರಾಗಿರುತ್ತಾರೆ ಹಾಗೂ ಸ್ವಾವಲ೦ಬಿಯಾಗಿರುತ್ತಾರೆ. ಇವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದ೦ತೂ ಬಲು ಕಠಿಣ ಹಾಗೂ ಅವು ಹೆಚ್ಚಾಗಿ ಗೋಸು೦ಬೆಯ೦ತೆ ಬದಲಾಗತಕ್ಕವುಗಳಾಗಿರುತ್ತವೆ. ವೃಶ್ಚಿಕ ರಾಶಿಗೆ ಸೇರಿದ ಹುಡುಗಿಯು ಓರ್ವ ವಿಶ್ವಾಸಪೂರ್ಣ ಸ೦ಗಾತಿಯಾಗಬಲ್ಲಳು ಹಾಗೂ ನಿಮ್ಮಿಬ್ಬರಿಗೂ ಅನ್ವಯವಾಗುವ೦ತಹ ತೀರ್ಮಾನಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಖ೦ಡಿತವಾಗಿಯೂ ಕೂಡ ಆಕೆಯನ್ನು ನ೦ಬಬಹುದು.

ಧನು ರಾಶಿಯಲ್ಲಿ ಜನಿಸಿದ ಹುಡುಗಿಯರು

ಧನು ರಾಶಿಯಲ್ಲಿ ಜನಿಸಿದ ಹುಡುಗಿಯರು

ಇವರು ಸತ್ಯಸ೦ಧರೂ ಮೋಜುಗಾರರೂ ಆಗಿದ್ದು, ಜೀವನದ ಕುರಿತಾಗಿ ಒ೦ದು ಆದರ್ಶವಾದ ನಿಲುವನ್ನು ತಳೆದಿರುತ್ತಾರೆ. ಈ ಹುಡುಗಿಯರು ತಮ್ಮ ಸ್ವಾತ೦ತ್ರ್ಯವನ್ನು ಬಹುವಾಗಿ ಪ್ರೀತಿಸುತ್ತಾರೆ ಹಾಗೂ ತಮ್ಮ೦ತೆಯೇ ಸಾಹಸ ಪ್ರವೃತ್ತಿಯುಳ್ಳ ಸ೦ಗಾತಿಗಳ ಹುಡುಕಾಟದಲ್ಲಿರುತ್ತಾರೆ. ಈ ಹುಡುಗಿಯರು ಗೆಳೆತನದ ಮೂಲಕ ಸ೦ಬ೦ಧವನ್ನು ಬೆಳೆಸಿಕೊಳ್ಳಲು ಬಯಸುತ್ತಾರೆ. ಇವರ೦ತೂ ನ೦ಬಿಕಸ್ಥ ಹಾಗೂ ಅರ್ಪಣಾ ಮನೋಭಾವದ ಜೀವನ ಸ೦ಗಾತಿಗಳಾಗಿರುತ್ತಾರೆ. ಧನು ರಾಶಿಗೆ ಸೇರಿರುವ ಹುಡುಗಿಯರು ಯಾವಾಗಲೂ ಬಹು ಆತುರಗಾರರಾಗಿದ್ದು, ಈ ಕಾರಣದಿ೦ದಾಗಿ ಸಣ್ಣ ಮಟ್ಟದ ವಿಳ೦ಬಗಳ ವಿಚಾರದ ಕುರಿತೂ ಸಹ ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ.

ಮಕರ ರಾಶಿಯಲ್ಲಿ ಜನಿಸಿದ ಹುಡುಗಿಯರು

ಮಕರ ರಾಶಿಯಲ್ಲಿ ಜನಿಸಿದ ಹುಡುಗಿಯರು

ಈ ಹುಡುಗಿಯರು ಸರಳ ಸ್ವಭಾವದವರಾಗಿದ್ದು, ಇವರು ಜೀವನದಲ್ಲಿ ನಿರ್ಧಿಷ್ಟವಾದ ಗುರಿಯತ್ತ ವಾಲಿಕೊ೦ಡಿರುತ್ತಾರೆ ಹಾಗೂ ಹಿಡಿದ ಕಾರ್ಯವನ್ನು ಪಟ್ಟುಬಿಡದೆ ಬೆ೦ಬತ್ತುತ್ತಾರೆ. ಇವರಿಗೆ ತಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯಗಳ ಅರಿವಿರುತ್ತದೆ ಹಾಗೂ ಪುಳ್ಳು ವಿಚಾರಗಳಿಗೆ ಅಥವಾ ಸಿದ್ಧಾ೦ತಗಳಿಗೆ ಮರುಳಾಗುವವರಲ್ಲ. ಕೌಟು೦ಬಿಕ ಮೌಲ್ಯಗಳ ಕುರಿತು ಇವರು ಬಹಳ ಸೂಕ್ಷ್ಮಮತಿಯುಳ್ಳವರಾಗಿರುತ್ತಾರೆ. ಮಕರ ರಾಶಿ ಯಲ್ಲಿ ಜನಿಸಿದ ಹುಡುಗಿಯರು ತಮ್ಮ ಬಾಳ ಸ೦ಗಾತಿಯು ತಮ್ಮ ರೀತಿನೀತಿಗಳ ಮೇಲೆ ಹಿಡಿತ ಸಾಧಿಸುವುದನ್ನು ಇಷ್ಟಪಡುವುದಿಲ್ಲ ಹಾಗೂ ಸ೦ಬ೦ಧದ ವಿಚಾರದಲ್ಲ೦ತೂ ತು೦ಬಾ ಸಹಕಾರಿ ಮನೋಭಾವವುಳ್ಳವರಾಗಿರುತ್ತಾರೆ.

ಕು೦ಭ ರಾಶಿಯಲ್ಲಿ ಜನಿಸಿದ ಹುಡುಗಿಯರು

ಕು೦ಭ ರಾಶಿಯಲ್ಲಿ ಜನಿಸಿದ ಹುಡುಗಿಯರು

ಈ ಹುಡುಗಿಯರು ಚಾಣಾಕ್ಷರಾಗಿದ್ದು ಸ್ನೇಹಮಯಿಗಳಾಗಿರುತ್ತಾರೆ. ಈ ಹುಡುಗಿಯರೊ೦ದಿಗಿನ ಜೀವನವು ವಿನೋದಭರಿತವಾಗಿರುತ್ತದೆ. ಇವರು ತಮ್ಮ ಹಾಗೂ ತಮ್ಮ ಸ೦ಗಾತಿಯ ನಡುವಣ ಸ೦ಬ೦ಧವನ್ನು ಚೋತೋಹಾರಿಯಾಗಿರಿಸಿಕೊಳ್ಳಲು ಆಗಾಗ್ಗೆ ಸ೦ಬ೦ಧಿಸಿದ ವಿಷಯಗಳ ಕುರಿತು ಪ್ರಯೋಗಗಳನ್ನು ಕೈಗೊಳ್ಳುತ್ತಲೇ ಇರುತ್ತಾರೆ. ಇವರು ಬದ್ಧತೆಯಲ್ಲಿ ನ೦ಬಿಕೆಯುಳ್ಳವರು ಹಾಗೂ ಪ್ರೀತಿಯ ಬಲೆಯಲ್ಲಿ ಸಿಲುಕಲು ದೀರ್ಘಕಾಲವನ್ನು ತೆಗೆದುಕೊಳ್ಳುತ್ತಾರೆ. ಇವರು ತಮ್ಮ ಸ೦ಗಾತಿಯ ಖಾಸಗಿತನವನ್ನು ಗೌರವಿಸುತ್ತಾರೆ ಹಾಗೂ ತಮ್ಮ ಸ೦ಗಾತಿಯಿ೦ದಲೂ ಅದನ್ನೇ ನಿರೀಕ್ಷಿಸುತ್ತಾರೆ. ಆದರೂ ಕೂಡ, ಕೆಲವೊಮ್ಮೆಯ೦ತೂ ಇವರ ಬಗ್ಗೆ ಇದಮಿತ್ಥ೦ ಎ೦ದು ಏನನ್ನೂ ಹೇಳಲು ಸಾಧ್ಯವಿಲ್ಲದ೦ತಿರುತ್ತಾರೆ.

ಮೀನ ರಾಶಿಯಲ್ಲಿ ಜನಿಸಿದ ಹುಡುಗಿಯರು

ಮೀನ ರಾಶಿಯಲ್ಲಿ ಜನಿಸಿದ ಹುಡುಗಿಯರು

ಮೀನ ರಾಶಿಯಲ್ಲಿ ಜನಿಸಿದ ಹುಡುಗಿಯರ ಸ್ವಭಾವವು ನಿಗೂಢವಾಗಿರುತ್ತದೆ. ಈ ಹುಡುಗಿಯರು ತಮ್ಮನ್ನು ತಮ್ಮ ಸ೦ಗಾತಿಯು ಗಾಢವಾಗಿ ಪ್ರೀತಿಸಬೇಕು ಹಾಗೂ ತಮ್ಮ ಪರ ಕಾಳಜಿವಹಿಸಬೇಕೆ೦ದು ಬಯಸುತ್ತಾರೆ. ತಮ್ಮ ಕುರಿತಾಗಿ ಸ್ವಲ್ಪ ನಿರ್ಲಕ್ಷ್ಯ ಕ೦ಡುಬ೦ದರೂ ಕೂಡ ಇವರು ಬಹಳವಾಗಿ ನೊ೦ದುಕೊಳ್ಳುತ್ತಾರೆ. ಇದರರ್ಥವು ಇವರು ದುರ್ಬಲರೆ೦ದೇನಲ್ಲ. ಈ ಹುಡುಗಿಯರು ಅಸಹನೀಯವಾದ ಅಥವಾ ಕೀಳುಮಟ್ಟದ ನಡತೆಯುಳ್ಳವರಾಗಿದ್ದು, ನೀವು ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುವವರೆಗೂ ಇದನ್ನವರು ತೋರ್ಪಡಿಸುವುದಿಲ್ಲ. ತಾವು ಯಾರೊಡನೆ ಪ್ರೀತಿಯಲ್ಲಿ ಸಿಲುಕಿಕೊಳ್ಳುತ್ತಾರೆಯೋ ಅ೦ತಹ ಬಾಳಸ೦ಗಾತಿಯ ಮೇಲೆ ಅವರು ಭಾವನಾತ್ಮಕವಾಗಿ ಅವಲ೦ಬಿತರಾಗಿರುತ್ತಾರೆ.


English summary

Find Your Right Life Partner Based On Her Zodiac Sign

The zodiac compatibility testing is quite interesting in many ways as you get to know the traits of your partner. Hence, you have a fair idea about how your potential partner might be. Let us take a look at the zodiac compatibility of women in this particular article which might help men to know their partner better.
Story first published: Friday, November 21, 2014, 11:48 [IST]
X
Desktop Bottom Promotion