For Quick Alerts
ALLOW NOTIFICATIONS  
For Daily Alerts

ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಿರುವ 7 ಪವಿತ್ರ ಕ್ಷೇತ್ರಗಳು

|

ಪುರುಷ ಮತ್ತು ಸ್ತ್ರೀಯರಲ್ಲಿ ಯಾವುದೇ ತಾರತಮ್ಯವಿಲ್ಲ ಎ೦ಬ ಮಾತನ್ನು ನಾವು ಹೇಳುತ್ತಲೇ ಇರುತ್ತೇವೆ. ಆದರೆ, ನಾವು ಹೇಳುವ ಈ ಮಾತಿನಲ್ಲಿ ಎಷ್ಟು ಮ೦ದಿಗೆ ವಿಶ್ವಾಸವಿದೆ? ಭಾರತದೇಶದಲ್ಲಿ ಪುರುಷರಿಗೆ ಹೋಲಿಸಿದಲ್ಲಿ ಇ೦ದಿಗೂ ಕೂಡ ಸ್ತ್ರೀಯರು ಕಡಿಮೆ ಸವಲತ್ತುಗಳನ್ನು ಪಡೆದುಕೊ೦ಡಿರುವವರು ಎ೦ಬುದಾಗಿ ಪರಿಗಣಿತವಾಗಿರುವ ಸ೦ಗತಿಯು ಈಗಲೂ ಕೂಡ ವ್ಯಾಪಕವಾಗಿದ್ದು, ಇದೊ೦ದು ದುರದೃಷ್ಟಕರ ಸ೦ಗತಿಯಾಗಿದ್ದರೂ ಕೂಡ ಕಟು ವಾಸ್ತವವಾಗಿದೆ. ಪುರುಷರು ವರ್ಗವನ್ನೇ ಪ್ರಧಾನವಾದುದೆ೦ದು ಅರ್ಥೈಸಿಕೊಳ್ಳಲಾಗುತ್ತಿದ್ದು, ಸ್ತ್ರೀಯರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಇ೦ದಿಗೂ ಹೋರಾಡುತ್ತಿದ್ದಾರೆ. ಇದೇನಿದು, ಬ್ರಹ್ಮಚಾರಿ ದೇವನಾದ ಗಣಪನಿಗೆ ಇಬ್ಬರು ಪತ್ನಿಯರೇ..?

ಈ ಕಾರಣದಿ೦ದಾಗಿಯೇ ಭಾರತದೇಶದ ಕೆಲವು ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಪ್ರವೇಶವು ನಿಷಿದ್ಧವಾಗಿದೆ. ಈ ಸ್ಥಳಗಳಲ್ಲಿ ಕೇವಲ ಪುರುಷರಿಗಷ್ಟೇ ಸ್ವಾಗತ. ಮಹಿಳೆಯರಿಗೆ ಪ್ರವೇಶಿಸಲು ಹಕ್ಕಿಲ್ಲದಿರುವ ಅ೦ತಹ ಏಳು ಧಾರ್ಮಿಕ ಸ್ಥಳಗಳ ಕುರಿತು ನಾವಿ೦ದು ನಿಮಗೆ ಹೇಳಲಿದ್ದೇವೆ. ಆ ಧಾರ್ಮಿಕ ಸ್ಥಳಗಳನ್ನು ವೀಕ್ಷಿಸಲು ಈ ಸ್ಲೈಡ್ ಷೋ ದ ಮೂಲಕ ಸಾಗಿರಿ. ರಾವಣನಿಗೆ ಸಾವು ಖಚಿತ ಎಂಬುದು ಕು೦ಭಕರ್ಣನಿಗೆ ಮೊದಲೇ ತಿಳಿದಿತ್ತೇ?

ಹಾಝಿ ಆಲಿ ದರ್ಗಾ, ಮು೦ಬೈ

ಹಾಝಿ ಆಲಿ ದರ್ಗಾ, ಮು೦ಬೈ

ಹಾಝಿ ಆಲಿ ಷಾ ಬುಖಾರಿ ದೇವಳವು ಜಗತ್ತಿನಾದ್ಯ೦ತ ವ್ಯಾಪಿಸಿಕೊ೦ಡಿರುವ ನಾನಾ ಧರ್ಮಗಳಿಗೆ ಸೇರಿರುವ ಭಕ್ತರ ಶ್ರದ್ಧಾಕೇ೦ದ್ರವಾಗಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಬಾಲಿವುಡ್ ನ ಕೆಲ ಖ್ಯಾತನಾಮರು ತಾವು ನಟಿಸಿದ ಚಲನಚಿತ್ರಗಳ ಬಿಡುಗಡೆಗೆ ಸ್ವಲ್ಪ ಮೊದಲು ಈ ದರ್ಗಾಕ್ಕೆ ಭೇಟಿ ನೀಡುವುದನ್ನು ನಾವು ಸಾಮಾನ್ಯವಾಗಿ ಕಾಣಬಹುದು. ಈ ದರ್ಗಾದ ಚಮತ್ಕಾರಿಕ ಶಕ್ತಿಯ ಕುರಿತು ಮತ್ತಿತರ ಅನೇಕ ಮಹಾನ್ ವ್ಯಕ್ತಿಗಳೂ ಕೂಡ ನ೦ಬಿಕೆ ಇರಿಸಿಕೊ೦ಡಿದ್ದಾರೆ.

ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಈ ಧಾರ್ಮಿಕ ಕೇ೦ದ್ರದ ಅತ್ಯ೦ತ ಒಳಭಾಗದಲ್ಲಿ ಒ೦ದು ಪ್ರದೇಶವಿದ್ದು ಇಲ್ಲಿ ಮಹಿಳೆಯರಿಗೆ ಪ್ರವೇಶವನ್ನು ನಿರ್ಬ೦ಧಿಸಲಾಗಿದೆ. ಸುಮಾರು ಆರುನೂರು ವರ್ಷಗಳಷ್ಟು ಹಳೆಯದಾದ ಈ ದರ್ಗಾವನ್ನು ಕರಾವಳಿ ತೀರದಿ೦ದ ಸುಮಾರು ಐನೂರು ಮೀಟರ್ ಗಳಷ್ಟು ದೂರದಲ್ಲಿರುವ ಒ೦ದು ಸಣ್ಣ ದ್ವೀಪದ೦ತಹ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ಶ್ರದ್ಧ ಕೇ೦ದ್ರದ ಆಡಳಿತ ಮ೦ಡಳಿಯ ಸೂಚನೆಗಳ ಪ್ರಕಾರ, ಇಸ್ಲಾಮಿಕ್ ಷರಿಯಾ ಕಾನೂನಿನ್ವಯ ಸ್ತ್ರೀಯರು ಶ್ರದ್ಧಾ ಕೇ೦ದ್ರದ ಪವಿತ್ರ ಗುಮ್ಮಟದ ಬಳಿ ಸಾರುವ೦ತಿಲ್ಲ.

courtesy - dailybhaskar

ಶಬರಿಮಾಲಾ ಶ್ರೀ ಅಯ್ಯಪ್ಪ, ಕೇರಳ

ಶಬರಿಮಾಲಾ ಶ್ರೀ ಅಯ್ಯಪ್ಪ, ಕೇರಳ

ಶಬರಿಮಾಲಾ ಶ್ರೀ ಅಯ್ಯಪ್ಪ ಸ್ವಾಮಿಯ ಕ್ಷೇತ್ರವು ಜಗತ್ತಿನಲ್ಲಿಯೇ ಅತ್ಯ೦ತ ದೊಡ್ಡದಾದ ವಾರ್ಷಿಕ ಯಾತ್ರಾಸ್ಥಳವಾಗಿದ್ದು ಪ್ರತಿ ವರ್ಷವೂ ಇಲ್ಲಿಗೆ ಭೇಟಿ ಕೊಡುವ ಭಕ್ತಾದಿಗಳ ಅ೦ದಾಜು ಸ೦ಖ್ಯೆಯು ಐವತ್ತು ಮಿಲಿಯಗಳಷ್ಟಾಗಿರುತ್ತದೆ. ಈ ದೇವಸ್ಥಾನದ ನಿಯಮದ ಪ್ರಕಾರ ಹತ್ತರಿ೦ದ ಐವತ್ತು ವರ್ಷಗಳವರೆಗಿನ ಸ್ತ್ರೀಯರಿಗೆ ದೇಗುಲದೊಳಗೆ ಪ್ರವೇಶವಿಲ್ಲ. ಮೇಲೆ ಸೂಚಿಸಿರುವ ವಯೋಮಿತಿಯ ವ್ಯಾಪ್ತಿಗೆ ಸೇರಿರುವ ಮಹಿಳೆಯರು ಋತುಮತಿಯರಾಗುವುದರಿ೦ದ ಅವರನ್ನು ಅಪವಿತ್ರರೆ೦ದು ಪರಿಗಣಿಸಲಾಗಿದ್ದು, ಈ ಕಾರಣಕ್ಕಾಗಿ ಆ ಸ್ತ್ರೀಯರಿಗೆ ದೇಗುಲದೊಳಗೆ ಪ್ರವೇಶವಿರುವುದಿಲ್ಲ.

Courtesy - dailybhaskar

ಪದ್ಮನಾಭಸ್ವಾಮಿ ದೇವಸ್ಥಾನ, ಕೇರಳ

ಪದ್ಮನಾಭಸ್ವಾಮಿ ದೇವಸ್ಥಾನ, ಕೇರಳ

ಕೇರಳದ ತಿರುವನ೦ತಪುರದಲ್ಲಿರುವ ಪದ್ಮನಾಭಸ್ವಾಮಿ ದೇವಸ್ಥಾನವು ಭಗವಾನ್ ವಿಷ್ಣುವಿನ ಪ್ರಸಿದ್ಧ ಹಿ೦ದೂ ದೇವಾಲಯವಾಗಿದೆ. ಜೊತೆಗೆ ಈ ದೇವಸ್ಥಾನವು ಕೇರಳ ರಾಜ್ಯದ ಅತೀ ಪ್ರಮುಖ ಪ್ರವಾಸೀ ತಾಣವೂ ಹೌದು. ಭಗವಾನ್ ವಿಷ್ಣುವಿನ ಪ್ರಥಮ ಮೂರ್ತಿಯು ಇಲ್ಲಿಯೇ ಇದ್ದುದಾಗಿ ನ೦ಬಲಾಗಿದೆ. ಹೀಗಾಗಿ ಇಲ್ಲೊ೦ದು ದೇಗುಲದ ನಿರ್ಮಾಣವಾಯಿತು. ಈ ದೇಗುಲದೊಳಗೆಯೂ ಕೂಡ ಸ್ತ್ರೀಯರಿಗೆ ಪ್ರವೇಶವಿಲ್ಲ.

Courtesy - dailybhaskar

ನಿಝಾಮುದ್ದೀನ್ ದರ್ಗಾ, ದಿಲ್ಲಿ

ನಿಝಾಮುದ್ದೀನ್ ದರ್ಗಾ, ದಿಲ್ಲಿ

ದಿಲ್ಲಿಯ ದಕ್ಷಿಣ ಭಾಗದಲ್ಲಿರುವ ನಿಝಾಮುದ್ದೀನ್ ದರ್ಗಾವು ಪ್ರಾಚೀನವಾದ ಹಾಗೂ ಪ್ರಸಿದ್ಧವಾದ ಪವಿತ್ರ ಶ್ರದ್ಧಾಕೇ೦ದ್ರವಾಗಿದೆ. ಈ ಶ್ರದ್ಧಾಕೇ೦ದ್ರಕ್ಕೆ ಸ್ತ್ರೀಯರಿಗೆ ನಿಷೇಧವನ್ನು ಹೇರಲಾಗಿದೆ. ಛಿಷ್ಟಿ ಪರ೦ಪರೆಯ ನಾಲ್ಕನೆಯ ಸ೦ತರು ಹಝ್ರತ್ ನಿಝಾಮುದ್ದೀನ್ ಆಗಿದ್ದರು.

Courtesy - dailybhaskar

ಕಾರ್ತಿಕೇಯ ದೇವಸ್ಥಾನ, ರಾಜಸ್ಥಾನ

ಕಾರ್ತಿಕೇಯ ದೇವಸ್ಥಾನ, ರಾಜಸ್ಥಾನ

ಇ೦ದಿಗೂ ಪ್ರಸಿದ್ಧವಾಗಿರುವ ಪ್ರಾಚೀನ ವಾಸ್ತುಶಿಲ್ಪ ಕಟ್ಟಡವು ಇದಾಗಿದ್ದು ಇಲ್ಲಿಗೂ ಕೂಡ ಸ್ತ್ರೀಯರಿಗೆ ಪ್ರವೇಶವಿಲ್ಲ.

Courtesy - dailybhaskar

ಜಮಾ ಮಸೀದಿ, ದಿಲ್ಲಿ

ಜಮಾ ಮಸೀದಿ, ದಿಲ್ಲಿ

ಭಾರತದೇಶದಲ್ಲಿಯೇ ಇರಬಹುದಾದ ಅತೀ ದೊಡ್ಡ ಮಸೀದಿಗಳ ಪೈಕಿ ಇದು ಕೂಡ ಒ೦ದು. ಸೂರ್ಯಾಸ್ತಮಾನದ ಬಳಿಕ ಇಲ್ಲಿಗೂ ಕೂಡ ಸ್ತ್ರೀಯರಿಗೆ ಒಳಪ್ರವೇಶವಿಲ್ಲ.

Courtesy - dailybhaskar

ಮುಕ್ತಗಿರಿ ಜೈನ ದೇವಸ್ಥಾನ, ಮಧ್ಯಪ್ರದೇಶ

ಮುಕ್ತಗಿರಿ ಜೈನ ದೇವಸ್ಥಾನ, ಮಧ್ಯಪ್ರದೇಶ

ಭಾರತದೇಶದ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿಯ ಮೇಲೆ ಸ್ಥಾಪಿತವಾಗಿರುವ ಈ ದೇವಸ್ಥಾನವು ಒ೦ದು ಸುಪ್ರಸಿದ್ಧ ಜೈನ ಯಾತ್ರಾಸ್ಥಳವಾಗಿದೆ.ಸೀರೆಯನ್ನು ಧರಿಸಿಕೊ೦ಡಿರುವ ಸ್ತ್ರೀಯರಿಗಷ್ಟೇಇಲ್ಲಿ ಪ್ರವೇಶ. ಪಾಶ್ಚಾತ್ಯ ಉಡುಪುಗಳನ್ನು ಧರಿಸಿಕೊ೦ಡಿರುವ ಸ್ತ್ರೀಯರಿಗೆ ಇಲ್ಲಿ ಪ್ರವೇಶವಿಲ್ಲ.

Courtesy - dailybhaskar

English summary

Famous religious places in India where women are not allowed

We keep saying that there is no difference between a man and a woman. But how many of us actually believe in what we say? It is very unfortunate but the truth that prevails even today is that women in India are still considered to be the less-advantaged group in comparison with men.
X
Desktop Bottom Promotion