For Quick Alerts
ALLOW NOTIFICATIONS  
For Daily Alerts

ಅಸಹ್ಯ ಹುಟ್ಟಿಸುವ 'ಅಘೋರಿ ಸಾಧುಗಳ' ಕೌತುಕಮಯ ರಹಸ್ಯ

By Super
|

ಭಾರತದಲ್ಲಿ ನಾವು ಇಲ್ಲಿ ಹಲವಾರು ಬಗೆಯ ಸಾಧುಗಳನ್ನು ಕಾಣಬಹುದು. ಅವರಲ್ಲಿ ಕೆಲವರು ಖಾವಿ ಬಟ್ಟೆಯನ್ನು ಧರಿಸಿದರೆ, ಇನ್ನೂ ಕೆಲವರು ಕಪ್ಪು ಬಣ್ಣದ ವಸ್ತ್ರಗಳನ್ನು ಧರಿಸಿರುತ್ತಾರೆ. ಇನ್ನು ಕೆಲವು ಸಾಧುಗಳು ಬಟ್ಟೆಯನ್ನೇ ಧರಿಸದೆಯೇ ತಿರುಗಾಡುತ್ತಾರೆ.

ಸಾಧುಗಳು ಎಂದರೆ ನಮ್ಮ ಮನಸ್ಸಿನಲ್ಲಿ ತಮ್ಮ ಜೀವನವನ್ನು ದೇವರಿಗಾಗಿ ಸಮರ್ಪಿಸಿದ, ಐಹಿಕ ಸುಖ ಭೋಗಗಳನ್ನು ತ್ಯಾಗ ಮಾಡಿ, ತಮ್ಮ ಆತ್ಮ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಜೀವಿಸುತ್ತಿರುವ ವ್ಯಕ್ತಿಗಳ ಚಿತ್ರಣ ನಮ್ಮ ಮುಂದೆ ಬರುತ್ತದೆ.

ಆದರೆ ತಮ್ಮದೇ ಆದ ಅಸಂಪ್ರದಾಯಿಕವಾದ ವಿಧಾನಗಳ ಮೂಲಕ ದೇವರನ್ನು ಒಲಿಸಿಕೊಳ್ಳಲು ಶ್ರಮಿಸುವ ಕೆಲವು ಸಾಧುಗಳು ಇರುವರೆಂದು ನಿಮಗೆ ಗೊತ್ತೇ? ಈ ಸಾಧುಗಳು ಇತರರು ಭಯಾನಕವೆಂದು ಪರಿಗಣಿಸುವ ಸ್ಥಳಗಳಲ್ಲಿ ವಾಸಿಸುತ್ತಾರೆ. ಭಯಾನಕ ರಹಸ್ಯ..! ನಾಗಾ ಸಾಧುಗಳು ವಸ್ತ್ರಗಳನ್ನೇಕೆ ಧರಿಸುವುದಿಲ್ಲ?

ಭಾರತದೇಶವು ಸಾಧುಸ೦ತರುಗಳ ನೆಲೆವೀಡಾಗಿದ್ದು, ಇವರ ಪೈಕಿ ಅತ್ಯ೦ತ ಭಯವನ್ನು ಹುಟ್ಟಿಸುವ ಆದರೆ ಅಷ್ಟೇ ಗೌರವಾದರಗಳಿಗೂ ಪಾತ್ರರಾಗಿರುವ ಒ೦ದು ಸಾಧುವರ್ಗವೆ೦ದರೆ ಅದು ಅಘೋರಿ ಸಾಧುಗಳ ಪ೦ಗಡವಾಗಿದೆ...

ತಮ್ಮ ಧಾರ್ಮಿಕ ಜೀವನದ ಒ೦ದು ಭಾಗವಾಗಿ ಈ ಅಘೋರಿ ಸಾಧುಗಳು ಕೈಗೊಳ್ಳುವ ವಿಕ್ಷಿಪ್ತ ಹಾಗೂ ಭಯಾನಕ ವಿಧಿವಿಧಾನಗಳು ಕುಖ್ಯಾತವಾಗಿದ್ದು, ಇವು ಜನಸಾಮಾನ್ಯರಲ್ಲಿ ಕುತೂಹಲವನ್ನೂ ಹಾಗೂ ಪರಮಾಶ್ಚರ್ಯವನ್ನೂ ಉ೦ಟುಮಾಡುವ೦ತಹವುಗಳಾಗಿವೆ. ಇವರ ಆಚಾರವಿಚಾರಗಳ ಕುರಿತು ಮತ್ತಷ್ಟು ಆಳವಾಗಿ ತಿಳಿದುಕೊಳ್ಳುವುದಕ್ಕೆ ಮೊದಲು ಈ ಅಘೋರಿ ಸಾಧುಗಳ ಪರಿಚಯದತ್ತ ಅವಲೋಕಿಸೋಣ..

ಅಘೋರಿಗಳು ಎಂದರೆ ಯಾರು?

ಅಘೋರಿಗಳು ಎಂದರೆ ಯಾರು?

ಅಘೋರಿಗಳು ಶಿವನೇತ್ರರಂತೆ ಶಿವನ ಭಕ್ತರಾಗಿದ್ದರು, ಅವರಂತಲ್ಲದೆ ಅತಿಯಾದ ಆಚರಣೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಶಿವನೇತ್ರರು ಸಹ ಶಿವನನ್ನು ಆರಾಧಿಸುತ್ತಾರೆ. ಆದರೆ ಅವರು ಅದಕ್ಕೆ ಅನುಸರಿಸುವುದು ಸಾತ್ವಿಕ ಮಾರ್ಗವನ್ನು. "ಅಘೋರಿ" ಎಂಬ ಪದವು ಸಂಸ್ಕೃತ ಮೂಲದಿಂದ ಬಂದಿದ್ದಾಗಿದೆ. ಇದರರ್ಥ ಅಂಧಕಾರ ರಹಿತ ಎಂದು. ಅಘೋರ್ ಎಂಬುದು ನಿರ್ಭಯದಿಂದ ಕೂಡಿದ ಅಥವಾ ಅಸಹ್ಯ ರಹಿತವಾದ ಸ್ವಾಭಾವಿಕ ಪ್ರಜ್ಞೆಯನ್ನು ಸೂಚಿಸುತ್ತದೆ. ಆದ್ದರಿಂದಲೆ ಅಘೋರಿಗಳು ಭಯವಿಲ್ಲದೆ ಬದುಕುವವರು ಮತ್ತು ಯಾವುದೇ ತಾರತಾಮ್ಯವನ್ನು ಹೊಂದಿಲ್ಲದೆ ಬದುಕುವವರಾಗಿರುತ್ತಾರೆ. ಹಾಗಾದರೆ ಬನ್ನಿ ನಾವು ಈ ಅಘೋರಿಗಳ ಬಗ್ಗೆ, ಅವರ ಜೀವನ ಹಾಗು ಆಚರಣೆಗಳ ಕುರಿತಾಗಿ ಮತ್ತು ನಂಬಿಕೆಗಳ ಬಗ್ಗೆ ಸ್ವಲ್ಪ ಆಳವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಅಘೋರಿಗಳ ಅಸಹ್ಯಕರವಾದ ಹಸಿವು

ಅಘೋರಿಗಳ ಅಸಹ್ಯಕರವಾದ ಹಸಿವು

ಭಾರತದಾದ್ಯ೦ತ ಹಾಗೂ ಮತ್ತಿತರ ಕೆಲವು ಪಾಶ್ಚಾತ್ಯರ ನಡುವೆಯೂ ಕೂಡ, ಅಘೋರಿಗಳು ತಮ್ಮ ಅತ್ಯ೦ತ ಹೇಸಿಗೆ ಹುಟ್ಟಿಸುವ ತೆರನಾದ ದಾಹ ಅಥವಾ ಹಸಿವಿಗೆ ಚಿರಪರಿಚಿತರಾಗಿದ್ದಾರೆ. ಹಸಿವನ್ನು ತಣಿಸಿಕೊಳ್ಳುವುದಕ್ಕಾಗಿ ಈ ಅಘೋರಿ ಸಾಧುಗಳು ಸೇವಿಸುವ ವಸ್ತುಗಳ೦ತೂ ನಾಗರಿಕ ಮಾನವನು ಯಾವುದೇ ಕಾರಣಕ್ಕೂ ಸೇವಿಸಲು ಹಿ೦ಜರಿಯುವ೦ತಹ ವಸ್ತುಗಳಾಗಿರುತ್ತವೆ ಹಾಗೂ ಇವು ಕೊಳೆತ ಆಹಾರಪದಾರ್ಥಗಳು, ಕಸ, ತ್ಯಾಜ್ಯವನ್ನು ರಾಶಿ ಹಾಕುವ ತಿಪ್ಪೆಗಳಲ್ಲಿ ದೊರೆಯಬಹುದಾದ ಹಳಸಿದ ಆಹಾರಪದಾರ್ಥಗಳು, ಪ್ರಾಣಿಗಳ ಮಲ, ಪ್ರಾಣಿಗಳ ಮೂತ್ರ, ಹಾಗೂ ಕೊಳೆಯುತ್ತಿರುವ ಮಾನವ ಶರೀರಗಳನ್ನು ಸರ್ವೇಸಾಮಾನ್ಯವಾಗಿ ಮಾನವನ ತಲೆಬುರುಡೆಯೊ೦ದರಲ್ಲಿ ಹಾಕಿಕೊ೦ಡು ತಿನ್ನುತ್ತಾರೆ.

Image credit: ©Thomas L. Kelly

ತೈಲಾ೦ಗ ಸ್ವಾಮಿ

ತೈಲಾ೦ಗ ಸ್ವಾಮಿ

ಕಲ್ಪಿಸಿಕೊಳ್ಳಲೂ ಕಷ್ಟಕರವೆನಿಸುವ೦ತಹ ಕೃತ್ಯಗೈದ ಮತ್ತೋರ್ವ ಬಾಬಾರ ಪರಿಚಯವು ಇಲ್ಲಿದೆ. ಈ ಬಾಬಾನನ್ನು ಕಣ್ಣಾರೆ ಕ೦ಡಿರುವ ಸ್ಥಳೀಯರು ಈತನೋರ್ವ ಅತ್ಯ೦ತ ಶಕ್ತಿಶಾಲಿಯಾದ ಬಾಬಾನೆ೦ದು ಪರಿಗಣಿಸಿದ್ದಾರೆ. ದಾಖಲೆಗಳಲ್ಲಿ ಉಲ್ಲೇಖಿತಗೊ೦ಡಿರುವ ಪ್ರಕಾರ, ಈತನು ಕಾಶಿ ವಿಶ್ವನಾಥ ಮ೦ದಿರದ ಅರ್ಚಕರೋರ್ವರಿ೦ದ ಕಪಾಳಮೋಕ್ಷಗೈಯ್ಯಲ್ಪಟ್ಟು ಮ೦ದಿರದಿ೦ದ ಹೊರದಬ್ಬಲ್ಪಟ್ಟಿದ್ದನು. ಈತನ ವಿಷಯದಲ್ಲಿ ಆ ಅರ್ಚಕರು ಹಾಗೆ ನಡೆದುಕೊಳ್ಳಲು ಕಾರಣವೇನೆ೦ದರೆ, ಈತನು ಭಗವಾನ್ ಶಿವನ ಪ್ರತಿಮೆಯನ್ನು ತನ್ನದೇ ಮಲಮೂತ್ರದಿ೦ದ ಪೂಜಿಸುತ್ತಿದ್ದುದನ್ನು ಆ ಅರ್ಚಕರು ಕಣ್ಣಾರೆ ಕ೦ಡಿದ್ದರು.

ಅಶ್ಲೀಲ ತೆರನಾದ ಉಡುಗೆತೊಡುಗೆ

ಅಶ್ಲೀಲ ತೆರನಾದ ಉಡುಗೆತೊಡುಗೆ

ಅಘೋರಿಗಳು ತಮ್ಮ ವಿಲಕ್ಷಣ ರೀತಿಯ ವೇಷಭೂಷಣಗಳಿಗೆ ಹೆಸರುವಾಸಿಯಾಗಿದ್ದಾರೆ. ತಮ್ಮ ಶರೀರದ ಮೇಲೆ ಒ೦ದು ತು೦ಡು ಸೆಣಬಿನ ಬಟ್ಟೆಯನ್ನು ಧರಿಸಿಕೊ೦ಡು ಇಲ್ಲವೇ ಕೆಲವು ಬಾರಿ ಬೆತ್ತಲೆಯಾಗಿ ನಗರದಾದ್ಯ೦ತ ಸ೦ಚರಿಸುತ್ತಾರೆ. ಅಘೋರಿಗಳ ದೃಷ್ಟಿಯಲ್ಲಿ ಬೆತ್ತಲಾಗಿರುವುದರ ಅರ್ಥವು ಪ್ರಾಪ೦ಚಿಕ ವೈಭೋಗಗಳ ಹಾಗೂ ಅವುಗಳ ಕುರಿತಾದ ಆಸಕ್ತಿ, ಲೋಲುಪತೆಯ ಸ೦ಪೂರ್ಣ ಪರಿತ್ಯಾಗವಾಗಿರುತ್ತದೆ. ಅನೇಕ ಬಾರಿ ಅಘೋರಿಗಳು ತಮ್ಮ ನಗ್ನ ಶರೀರವನ್ನು ಮುಚ್ಚಿಕೊಳ್ಳುವುದಕ್ಕಾಗಿ ಮೃತ ಮಾನವ ಶರೀರದ ಅವಶೇಷಗಳ ಬೂದಿಯನ್ನು ತಮ್ಮ ಮೈಮೇಲೆಲ್ಲಾ ಸಿಕ್ಕಾಪಟ್ಟೆ ಬಳಿದುಕೊ೦ಡಿರುತ್ತಾರೆ. ಅವರು ತೊಟ್ಟುಕೊಳ್ಳುವ ಇತರ ಹೆಚ್ಚುವರಿ ಸಾಮಗ್ರಿಗಳ ಬಗ್ಗೆ ಹೇಳಬೇಕೆ೦ದರೆ, ತಮ್ಮ ಕೊರಳಿನ ಸುತ್ತಲೂ ಮಾನವ ತಲೆಬುರುಡೆಗಳನ್ನು ಹಾರದ೦ತೆ ಧರಿಸಿಕೊ೦ಡಿರುತ್ತಾರೆ.

ಅಶ್ಲೀಲ ತೆರನಾದ ಉಡುಗೆತೊಡುಗೆ

ಅಶ್ಲೀಲ ತೆರನಾದ ಉಡುಗೆತೊಡುಗೆ

ಕೆಲವು ಅಘೋರರು (ಅಥವಾ ಅಘೋರಿಗಳು), ತಾವು ಅಘೋರಿವರ್ಗದರೆ೦ದು ತೋರಿಸಿಕೊಳ್ಳುವುದಕ್ಕಾಗಿ, ಅ೦ತ್ಯಕ್ರಿಯೆಗೊಳಗಾದ ಮಾನವ ಶರೀರದ ತೊಡೆಮೂಳೆಗಳನ್ನು ಹಿಡಿದುಕೊ೦ಡು ಓಡಾಡಿಕೊ೦ಡಿರುವುದರ ಬಗ್ಗೆಯೂ ವರದಿಯಾಗಿದೆ (ಬಹುಶ: ಊರುಗೋಲಿನ ರೂಪದಲ್ಲಿ). ಅವರೆ೦ದಿಗೂ ತಮ್ಮ ಕೂದಲನ್ನು ಕತ್ತರಿಸಿಕೊಳ್ಳಲಾರರು. ಉದ್ದವಾದ ತಮ್ಮ ಕೇಶರಾಶಿಯನ್ನು ತಮ್ಮ ಮೊಣಕಾಲುಗಳವರೆಗೂ ಜೋತುಬೀಳಿಸಿಕೊ೦ಡಿರುತ್ತಾರೆ. ಇ೦ತಹ ತಮ್ಮ ವಿಲಕ್ಷಣವಾದ ವೇಷಭೂಷಣಗಳ ಕಾರಣದಿ೦ದಾಗಿ ಎ೦ತಹ ಜನಜ೦ಗುಳಿಯ ನಡುವೆಯೂ ಅಘೋರಿಗಳನ್ನು ಪತ್ತೆಮಾಡುವುದು ಬಲು ಸುಲಭವಾಗಿರುತ್ತದೆ.

ಮ೦ತ್ರಗಳು, ತ೦ತ್ರಗಳು, ಹಾಗೂ ಅಫೀಮು

ಮ೦ತ್ರಗಳು, ತ೦ತ್ರಗಳು, ಹಾಗೂ ಅಫೀಮು

ಅಫೀಮಿನ (ಒ೦ದು ಬಗೆಯ ನಶೆ ಏರಿಸುವ ಮಾದಕ ವಸ್ತು) ಸೇವನೆಯಿ೦ದ ಯಾವೊಬ್ಬ ಅಘೋರಿಯೂ ದೂರವಾಗಲಾರನು. ಏಕೆ೦ದರೆ, ತಮ್ಮ ನಿತ್ಯಜೀವನದಲ್ಲಿ ಅಘೋರಿಗಳು ಕೈಗೊಳ್ಳುವ ಧಾರ್ಮಿಕ ಮ೦ತ್ರಗಳತ್ತ ಅವರಿಗೆ ಏಕಾಗ್ರತೆಯನ್ನು ಕಾಯ್ದುಕೊಳ್ಳುವ೦ತಾಗಲು ಹಾಗೂ ಅತ್ಯುಗ್ರವಾದ ಯೌಗಿಕ ಆಚರಣೆಗಳಲ್ಲಿ ಅಘೋರಿಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುವ೦ತಾಗಲು ಅಫೀಮಿನ ಸೇವನೆಯು ಸಹಕಾರಿ ಎ೦ಬ ನ೦ಬಿಕೆ ಅಘೋರಿಗಳದ್ದಾಗಿದೆ.ಎಲ್ಲಾ ಕಾಲಾವಧಿಗಳಲ್ಲಿಯೂ ಅಫೀಮಿನ ಪ್ರಭಾವಕ್ಕೊಳಪಟ್ಟಿದ್ದರೂ ಸಹ ಅಘೋರಿಗಳು ಬಹಳ ಗಾ೦ಭೀರ್ಯವುಳ್ಳವರ೦ತೆ ಹಾಗೂ ಶಾ೦ತಚಿತ್ತದಿ೦ದಿರುವ೦ತೆ ಕ೦ಡುಬರುತ್ತಾರೆ.

ಮ೦ತ್ರಗಳು, ತ೦ತ್ರಗಳು, ಹಾಗೂ ಅಫೀಮು

ಮ೦ತ್ರಗಳು, ತ೦ತ್ರಗಳು, ಹಾಗೂ ಅಫೀಮು

ಮಾದಕ ಪದಾರ್ಥಗಳನ್ನು ನೀವು ತೆಗೆದುಕೊಳ್ಳುವುದು ಮೋಜಿಗಾಗಿಯೇ ಎ೦ದು ಕೆಲವು ಆಸಕ್ತ ಪ್ರವಾಸಿಗರು ಅಘೋರಿಗಳನ್ನು ಪ್ರಶ್ನಿಸಿದಾಗ, ಅವರು ಖ೦ಡತು೦ಡವಾಗಿ ಅದನ್ನು ಅಲ್ಲಗಳೆಯುತ್ತಾರೆ. ಈ ಮಾದಕ ವಸ್ತುಗಳು ಒದಗಿಸಬಹುದಾದ ಭ್ರಮೆಗಳು ಹಾಗೂ ಉನ್ಮಾದಗಳನ್ನು ಧಾರ್ಮಿಕ ಪರಾಕಾಷ್ಟತೆ ಹಾಗೂ ಉನ್ನತ ಮಟ್ಟದ ಆಧ್ಯಾತ್ಮಿಕ ಅನುಭವಗಳು ಅಥವಾ ಅನುಭಾವಗಳೆ೦ದು ಅಘೋರಿಗಳು ಪರಿಗಣಿಸುತ್ತಾರೆ.

ಅಘೋರಿಗಳ ನಂಬಿಕೆಗಳು

ಅಘೋರಿಗಳ ನಂಬಿಕೆಗಳು

ಅಘೋರಿಗಳು ಪ್ರತಿಯೊಂದು ಆಚರಣೆಗಳು ಅವರನ್ನು ಮನುಷ್ಯ ಜೀವನದ ಅಷ್ಟ ಮಹಾಪಾಶಗಳಿಂದ ಬಂಧ ಮುಕ್ತಗೊಳಿಸಿ ಶಿವನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ನೆರವಾಗುತ್ತವೆ. ಸ್ಮಶಾನದಲ್ಲಿ ಇವರು ಮಾಡುವ ಸಾಧನೆಯು ಇವರನ್ನು ಸಾವಿನ ಕುರಿತಾಗಿ ಇರುವ ಭಯದಿಂದ ಮುಕ್ತಿಗೊಳಿಸುತ್ತದೆ. ಕೆಲವೊಮ್ಮೆ ಇವರು ಶವಗಳ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ಸಹ ತೊಡಗಿಕೊಳ್ಳುತ್ತಾರೆ. ಇದರಿಂದ ಅವರಿಗೆ ಲೈಂಗಿಕ ಬಯಕೆಗಳು ಬಿಡುಗಡೆ ಹೊಂದುತ್ತವೆ ಹಾಗು ಅವರ ಇಂದ್ರಿಯ ಆಸೆಗಳು ಅವರಿಂದ ದೂರ ಸರಿಯುತ್ತವೆ. ನಗ್ನವಾಗಿ ಸಂಚರಿಸುವ ಇವರಿಗೆ ಜೀವನದಲ್ಲಿ ಅಗತ್ಯ ಅಂಶಗಳ ಹೊರತಾಗಿ ಯಾವುದೇ ದುರಾಸೆಯಿರುವುದಿಲ್ಲ. ಅಘೋರಿಗಳು ಯಾವುದೇ ಆತ್ಮವು ಈ ಎಂಟು ಬಂಧನಗಳಿಂದ ಬಿಡುಗಡೆ ಹೊಂದಿದ ಮೇಲೆ ಆಕೆ/ಆತನು ಸದಾಶಿವನ ಸಾನಿಧ್ಯದಲ್ಲಿ ಮೋಕ್ಷವನ್ನು ಸಂಪಾದಿಸುತ್ತಾರಂತೆ.

ವಾಮಾಚಾರ

ವಾಮಾಚಾರ

ಅಘೋರಿಗಳ ವಿಲಕ್ಷಣವಾದ ನಡವಳಿಕೆಯನ್ನು ಗಮನಿಸಿ ಜನ ಅವರನ್ನು ಮಂತ್ರವಾದಿಗಳು, ವಾಮಾಚಾರ ಮಾಡುವವರು ಎಂದು ತಪ್ಪಾಗಿ ಗ್ರಹಿಸುತ್ತಾರೆ. ಆದರೆ ಇದು ಸತ್ಯವಲ್ಲ. ನಿರಂತರವಾದ ಯೋಗ ಸಾಧನೆಯಿಂದ ಅವರಿಗೆ ಕೆಲವೊಂದು ಅಲೌಕಿಕ ಶಕ್ತಿಗಳು ಲಭಿಸಿರುವುದು ನಿಜವಾದರು, ಅವರು ಯಾವುದೇ ವಾಮಾಚಾರದಲ್ಲಿ ಪಾಲ್ಗೊಳ್ಳುವುದಿಲ್ಲ. ಅವರ ಆಚರಣೆಗಳು ಮತ್ತು ವಿಧಿ ವಿಧಾನಗಳು ಕೇವಲ ಶಿವನ ನಿಜ ಸ್ವರೂಪವನ್ನು ತಿಳಿದುಕೊಳ್ಳಲು ಮತ್ತು ಮೋಕ್ಷವನ್ನು ಪಡೆಯುವ ಸಲುವಾಗಿ ಸಮರ್ಪಣೆಯಾಗುತ್ತವೆ.

ಅಘೋರಿಗಳು ಶಿವ ಮತ್ತು ಕಾಳಿಯನ್ನು ಪೂಜಿಸುತ್ತಾರೆ

ಅಘೋರಿಗಳು ಶಿವ ಮತ್ತು ಕಾಳಿಯನ್ನು ಪೂಜಿಸುತ್ತಾರೆ

ಅಘೋರಿಗಳಿಗೆ ಅಲೌಕಿಕ ಶಕ್ತಿಗಳಂತಹ ದಶ ಮಹಾವಿದ್ಯೆಗಳನ್ನು ದಯಪಾಲಿಸುವವಳು ಕಾಳಿ ಅಥವಾ ತಾರಾ. ಹಾಗಾಗಿ ಈಕೆಯನ್ನು ಇವರು ಪೂಜಿಸುತ್ತಾರೆ. ಇವರು ಕಾಳಿಯನ್ನು ಧೂಮವತಿ ಎಂಬ ಹೆಸರಿನಿಂದ ಆರಾಧಿಸುತ್ತಾರೆ. ಭಾಗಲಮುಖಿ ಮತ್ತು ಬೈರವಿ ಎಂಬ ಹೆಸರಿನಿಂದಲೂ ಇವರು ಈ ದೇವಿಯನ್ನು ಪೂಜಿಸುತ್ತಾರೆ. ಇದಲ್ಲದೆ ಇವರು ಶಿವನನ್ನು ಆತನ ರುದ್ರ ಸ್ವರೂಪವಾದ ಮಹಾಕಾಳ, ಬೈರವ ಮತ್ತು ವೀರಭದ್ರ ಎಂಬ ಅವತಾರ ರೂಪಗಳಲ್ಲಿ ಆರಾಧಿಸುತ್ತಾರೆ. ಹಿಂಗ್ಲಾಜ್ ಮಾತಾ ಅಘೋರಿಗಳ ಕುಲ ದೇವತೆಯಾಗಿ ಪೂಜಿಸಲ್ಪಡುತ್ತಾಳೆ.

ಸರಳ ತತ್ವಜ್ಞಾನ

ಸರಳ ತತ್ವಜ್ಞಾನ

ಅಘೋರಿಗಳ ಪ್ರಕಾರ ಇಡೀ ಬ್ರಹ್ಮಾಂಡವೇ ಅವರಲ್ಲಿ ಅಡಕಗೊಂಡಿರುತ್ತದೆ. ತಾವು ನಗ್ನವಾಗಿರುವುದರಿಂದ ಅವರು ಮನುಷ್ಯನ ನಿಜ ಸ್ವರೂಪವನ್ನು ಪ್ರತಿನಿಧಿಸುತ್ತಾರೆ. ಹುಟ್ಟುವಾಗ ಯಾವ ರೂಪದಲ್ಲಿ ಬಂದರೋ, ಹೋಗುವಾಗ ಅದೇ ರೂಪದಲ್ಲಿ ಹೋಗುತ್ತಾರೆ. ಹಾಗಾಗಿ ಅವರು ನಗ್ನವಾಗಿರುವುದರ ಕುರಿತು ಮುಜುಗರವನ್ನು ವ್ಯಕ್ತಪಡಿಸುವುದಿಲ್ಲ. ಅವರು ಪ್ರೀತಿ, ದ್ವೇಷ,ಅಸೂಯೆ ಮತ್ತು ಅಹಂನಂತಹ ಭಾವನೆಗಳಿಂದ ದೂರವಿರುತ್ತಾರೆ. ಅವರ ಪ್ರಕಾರ ಅತಿ ಕೊಳಕು ಮತ್ತು ಅಪವಿತ್ರ ವಸ್ತುಗಳಲ್ಲಿಯೂ ಸಹ ದೇವರು ನೆಲೆಸಿರುತ್ತಾನೆ.

ಅಪಾರ್ಥಕ್ಕೆ ಒಳಗಾದ ಪಂಥ

ಅಪಾರ್ಥಕ್ಕೆ ಒಳಗಾದ ಪಂಥ

ಅಘೋರಿಗಳನ್ನು ತುಂಬಾ ಜನ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಇವರು ಶವಗಳನ್ನು ಭಕ್ಷಿಸುವ ಕಾರಣದಿಂದ ಜನರು ಇವರನ್ನು ವಾಮಾಚಾರದ ಜೊತೆಗೆ ಗುರುತಿಸುತ್ತಾರೆ. ಆದರೆ ಇವರು ಸರಳ ಜೀವಿಗಳು, ದೇವರನ್ನು ಹುಡುಕಲು ಅತಿರೇಕದ ಮಾರ್ಗಗಳನ್ನು ಅನುಸರಿಸುತ್ತಾರೆ ಅಷ್ಟೇ. ಆದರೆ ಇವರಲ್ಲಿ ಗುಣಪಡಿಸುವ ಶಕ್ತಿ ಇದೆ. ಇವರು ಒಬ್ಬ ರೋಗಿಯ ದೇಹದಲ್ಲಿನ ಕಲ್ಮಶಗಳನ್ನು ಹೊರಗೆ ವರ್ಗಾವಣೆ ಮಾಡಿ, ಅವರಿಗೆ ಮತ್ತೆ ಆರೋಗ್ಯವನ್ನು ತಂದು ಕೊಡುವ ಶಕ್ತಿಯನ್ನು ಹೊಂದಿರುತ್ತಾರೆ. ಈ ಶಕ್ತಿ ವಾಮಾಚಾರದ ಮೂಲಕ ಸಿಗುವುದಿಲ್ಲ. ಇದು ಅಘೋರಿಗಳ ಮನಸ್ಸು ಮತ್ತು ದೇಹದ ಅತ್ಯುನ್ನತವಾದ ಹಂತವಾಗಿರುತ್ತದೆ. ಹಾಗಾಗಿಯೇ ಅವರು ತುಂಬಾ ಶಕ್ತಿಶಾಲಿಯಾಗಿರುತ್ತಾರೆ.

ಇವರನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ವಿದೇಶೀಯರು

ಇವರನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ವಿದೇಶೀಯರು

ಕುಂಭಮೇಳಕ್ಕೆ ಭೇಟಿ ನೀಡುವ ವಿದೇಶೀಯರಿಗೆ ಇವರು ಅತಿ ಆಕರ್ಷಕವಾಗಿ ಕಂಡುಬರುವ ಕಾರಣ ಇವರ ಚಿತ್ರಗಳನ್ನು ಮತ್ತು ಇವರ ಆಚಾರ ವಿಚಾರಗಳನ್ನು ಅತಿಹೆಚ್ಚಾಗಿ ಚಿತ್ರೀಕರಿಸಿ ತಮ್ಮ ದೇಶಗಳಲ್ಲಿ ಪ್ರಚಾರ ನಡೆಸುವುದರಿಂದ ವಿದೇಶಗಳಲ್ಲಿ ನಾಗಾ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇವರನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ವಿದೇಶೀಯರು

ಇವರನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ವಿದೇಶೀಯರು

ಆದರೆ ಈ ಬಗ್ಗೆ ನಾಗಾ ಸಾಧುಗಳಿಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರೇ ಏನೇ ಅಂದರೂ ಅದರ ಬಗ್ಗೆ ಚಿಂತಿಸದೇ ಸದಾ ಶಿವನ ಅನುಗ್ರಹ ಪಡೆಯುವತ್ತಲೇ ತಮ್ಮ ಜೀವಮಾನವನ್ನು ಸವೆಸುತ್ತಾರೆ.

English summary

Facts about the Grisly and Mystic Aghori Sadhus Of India

The most feared and the most respected clan of sadhus or ascetics of India , the Aghori sadhus are notorious for their uncommon and grisly rituals they perform as a part and parcel of their religious routine, enough to arouse curiosity and awe among the public. Before going to facts lets know who the are.
X
Desktop Bottom Promotion