For Quick Alerts
ALLOW NOTIFICATIONS  
For Daily Alerts

ಘಂಟಾನಾದ: ಇದು ಶಾಂತಿ ಮತ್ತು ಒಗ್ಗಟ್ಟಿನ ಸಂಕೇತ.....

ಹೆಚ್ಚಿನವರು ಘಂಟೆ ಬಾರಿಸುವುದು ಧಾರ್ಮಿಕ ವಿಧಾನದ ಒಂದು ಭಾಗವೇ ಎಂದು ತಿಳಿದುಕೊಂಡಿದ್ದಾರೆ. ಆದರೆ ಇದರ ಮಹತ್ವವನ್ನು ಕಂಡುಕೊಂಡ ಬಳಿಕವೇ ಘಂಟೆ ಬಾರಿಸುವುದನ್ನು ಧಾರ್ಮಿಕ ವಿಧಿಯಾಗಿ ಅಳವಡಿಸಿಕೊಳ್ಳಲಾಗಿದೆ.

By Manu
|

ಬಾಲ್ಯದಲ್ಲಿ ನಮಗೆಲ್ಲಾ ಅಪ್ಯಾಯಮಾನವಾಗಿದ್ದ ಘಂಟೆಯ ಸದ್ದು ಎಂದರೆ ಶಾಲೆ ಬಿಟ್ಟಿತು ಎಂದು ಸಾರುವ ಘಂಟೆ. ಈ ಘಂಟೆ ಕೇಳುತ್ತಿದ್ದಂತೆಯೇ ಮಕ್ಕಳೆಲ್ಲಾ ಶಾಲೆಯಿಂದ ಓಡೋಡಿ ಹೊರಹೋಗುವುದು ವಿಶ್ವದಲ್ಲಿಯೇ ಸಾಮಾನ್ಯ ದೃಶ್ಯವಾಗಿದೆ. ಹಲವು ಶುಭಸಂದರ್ಭ, ಶುಭಘಳಿಗೆಯಲ್ಲಿಯೂ ನಾವು ಘಂಟೆ ಬಾರಿಸುತ್ತೇವೆ. ಆದರೆ ಇದಕ್ಕೂ ಒಂದು ಕಾರಣವಿದೆ. ದೇವಸ್ಥಾನದ ಗಂಟೆಯ ನಿನಾದದ ಮಹತ್ವ ಅರಿಯಿರಿ

ಹೆಚ್ಚಿನವರು ಘಂಟೆ ಬಾರಿಸುವುದು ಧಾರ್ಮಿಕ ವಿಧಾನದ ಒಂದು ಭಾಗವೇ ಎಂದು ತಿಳಿದುಕೊಂಡಿದ್ದಾರೆ. ಆದರೆ ಇದರ ಮಹತ್ವವನ್ನು ಕಂಡುಕೊಂಡ ಬಳಿಕವೇ ಘಂಟೆ ಬಾರಿಸುವುದನ್ನು ಧಾರ್ಮಿಕ ವಿಧಿಯಾಗಿ ಅಳವಡಿಸಿಕೊಳ್ಳಲಾಗಿದೆ. ಇದರ ಮಹತ್ವವನ್ನು ಅರಿಯದೇ ಹೆಚ್ಚಿನವರು ಅಂಧಶ್ರದ್ದೆಯಂತೆ ಅನುಸರಿಸಿಕೊಂಡು ಬಂದಿದ್ದಾರೆ. ಇಂದು ಘಂಟಾನಾದದ ಮಹತ್ವವೇನು ಎಂಬುದನ್ನು ಅರಿಯೋಣ....

ಘಂಟಾನಾದ ಶಾಂತಿ ಮತ್ತು ಒಗ್ಗಟ್ಟಿನ ಪ್ರತೀಕವಾಗಿದೆ

ಘಂಟಾನಾದ ಶಾಂತಿ ಮತ್ತು ಒಗ್ಗಟ್ಟಿನ ಪ್ರತೀಕವಾಗಿದೆ

ಘಂಟಾನಾದಕ್ಕೆ ಹಲವಾರು ಅರ್ಥಗಳಿವೆ. ಇದರಲ್ಲಿ ಪ್ರಮುಖವಾದ ಅರ್ಥವೆಂದರೆ ಸುತ್ತಮುತ್ತಲಿನವರೊಂದಿಗೆ ಶಾಂತಿ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ. ಉದಾಹರಣೆಗೆ ಘಂಟೆ ಬಾರಿಸಿದ ಬಳಿಕ ಊರಿನ ಜನರು ಒಂದೆಡೆ ಸೇರುವುದು, ಹಿರಿಯರು ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ಶಾಂತಿ ಕಾಪಾಡಿಕೊಳ್ಳುವುದೂ ಆಗಿದೆ. ಶಾಂತಿಯ ಸಂಕೇತವಾಗಿ ಪಾರಿವಾಳ ಹಾರಿಸಿದಂತೆಯೇ ಘಂಟೆಯ ಸದ್ದು ಶಾಂತಿಯ ಸಂಕೇತವೂ ಆಗಿದೆ.

ಧನಾತ್ಮಕ ಶಕ್ತಿ ಪಸರಿಸಲು....

ಧನಾತ್ಮಕ ಶಕ್ತಿ ಪಸರಿಸಲು....

ಒಂದು ಸ್ಥಳದ ಬಗ್ಗೆ ಸದಭಿಪ್ರಾಯವಿದ್ದರೆ ಆ ಸ್ಥಳಕ್ಕೆ ಹೆಚ್ಚಿನ ಜನರು ಭೇಟಿ ನೀಡಲು ಬರುತ್ತಾರೆ. ಈ ಪರಿಸದರಲ್ಲಿ ಘಂಟಾನಾದವಿದ್ದರೆ ಹೆಚ್ಚಿನ ಧನಾತ್ಮಕ ಶಕ್ತಿ ಪಸರಿಸುವ ಕಾರಣ ಈ ಪರಿಸರದಲ್ಲಿರುವವರು ತಮ್ಮ ಅಕ್ಕಪಕ್ಕದವರಲ್ಲಿ ಧನಾತ್ಮಕ ಅಂಶಗಳನ್ನೇ ನೋಡುತ್ತಾರೆ.

ಧನಾತ್ಮಕ ಶಕ್ತಿ ಪಸರಿಸಲು....

ಧನಾತ್ಮಕ ಶಕ್ತಿ ಪಸರಿಸಲು....

ಪರಿಣಾಮವಾಗಿ ಋಣಾತ್ಮಕ ಶಕ್ತಿ ಕಡಿಮೆಯಾಗುತ್ತಾ ಶಕ್ತಿಗುಂದುತ್ತಾ ಹೋಗುತ್ತದೆ. ಈ ಧನಾತ್ಮಕ ಶಕ್ತಿಯೇ ನೆಮ್ಮದಿಗೆ ಕಾರಣವಾಗಿದೆ. ದೇವಾಲಯಗಳ ಪರಿಸರದಲ್ಲಿ ಜನರು ನೆಮ್ಮದಿ ಪಡೆಯಲು ಘಂಟಾನಾದ ಪ್ರಮುಖ ಪಾತ್ರ ವಹಿಸುತ್ತದೆ.

ಋಣಾತ್ಮಕ ಯೋಚನೆಗಳನ್ನು ಬದಲಿಸಲು ಸಾಧ್ಯವಾಗುತ್ತದೆ

ಋಣಾತ್ಮಕ ಯೋಚನೆಗಳನ್ನು ಬದಲಿಸಲು ಸಾಧ್ಯವಾಗುತ್ತದೆ

ಸಾಮಾನ್ಯವಾಗಿ ಘಂಟೆಗಳನ್ನು ಹೆಚ್ಚು ಹೊತ್ತು ಕಂಪಿಸುವ ಶಕ್ತಿ ಇರುವ ಲೋಹಗಳಾದ ಕ್ಯಾಡ್ಮಿಯಂ, ಸತು, ತಾಮ್ರ, ಸೀಸ, ನಿಕ್ಕೆಲ್, ಮ್ಯಾಂಗನೀಸ್ ಮತ್ತು ಕ್ರೋಮಿಯಂ ಅಥವಾ ಇವುಗಳ ಮಿಶ್ರಲೋಹದಿಂದ ತಯಾರಿಸಲಾಗುತ್ತದೆ. ಅತಿ ಹೆಚ್ಚಿನ ಕಂಪನ ಪಡೆಯಲು ಒಂದು ನಿಖರವಾದ ಅಳತೆಯಲ್ಲಿ ಹಲವು ಲೋಹಗಳನ್ನು ಮಿಶ್ರಣ ಮಾಡಲಾಗುತ್ತದೆ. ಪರಿಣಾಮವಾಗಿ ಘಂಟಾನಾದ ಹೆಚ್ಚು ಹೊತ್ತಿನವರೆಗೆ ಹಾಗೂ ಹೆಚ್ಚು ದೂರದವರೆಗೆ ಕೇಳಿಸಲು ಸಾಧ್ಯವಾಗುತ್ತದೆ.

ಋಣಾತ್ಮಕ ಯೋಚನೆಗಳನ್ನು ಬದಲಿಸಲು ಸಾಧ್ಯವಾಗುತ್ತದೆ

ಋಣಾತ್ಮಕ ಯೋಚನೆಗಳನ್ನು ಬದಲಿಸಲು ಸಾಧ್ಯವಾಗುತ್ತದೆ

ಈ ನಾದ ಮೆದುಳಿನಲ್ಲಿ ಉತ್ಪತ್ತಿ ಮಾಡುವ ತರಂಗಗಳು ಮನಸ್ಸಿನ ಯೋಚನೆಗಳನ್ನು ಧನಾತ್ಮಕ ನಿಟ್ಟಿನಲ್ಲಿ ಮುಂದುವರೆಸಲು ನೆರವಾಗುತ್ತವೆ. ಇದೇ ಶಕ್ತಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲೂ ಮನಸ್ಸಿನ ದುಗುಡ-ಒತ್ತಡ-ಖಿನ್ನತೆಗಳನ್ನು ನಿವಾರಿಸಲೂ ನೆರವಾಗುತ್ತದೆ.

ಘಂಟಾನಾದ ನವಜೀವನದ ಪ್ರತೀಕವಾಗಿದೆ

ಘಂಟಾನಾದ ನವಜೀವನದ ಪ್ರತೀಕವಾಗಿದೆ

ಪ್ರತಿಬಾರಿ ಮಾನಸಿಕವಾಗಿ ಪರಿವರ್ತನೆ ಹೊಂದಿದಾಗಲೂ ನವಜೀವನ ಪಡೆದಂತೆ. ಕೆಟ್ಟ ಗುಣಗಳನ್ನು ವರ್ಜಿಸಿ ಉತ್ತಮ ನಡವಳಿಕೆ ಹೊಂದಿದ ವ್ಯಕ್ತಿಯ ಹಿಂದೆ ಘಂಟಾನಾದ ಪ್ರಮುಖವಾಗಿ ಕೆಲಸ ಮಾಡಿರುವುದನ್ನು ಕಂಡುಕೊಳ್ಳಲಾಗಿದೆ. ಅಂತೆಯೇ ಜೀವನದ ಪ್ರಮುಖ ಘಟ್ಟಗಳನ್ನು ದಾಟುತ್ತಾ ಮುಂದೆ ನಡೆಯುವಾಗಲೂ ಘಂಟೆಯನ್ನು ಬಾರಿಸಿ ಪರಿಸರವನ್ನು ಪವಿತ್ರವಾಗಿಸುತ್ತದೆ. ಇದೇ ಕಾರಣಕ್ಕೆ ವಿವಾಹ ಮೊದಲಾದ ಸಂದರ್ಭಗಳಲ್ಲಿ ಘಂಟಾನಾದ ಪ್ರಮುಖವಾದ ವಿಧಿಯಾಗಿದೆ.

ಘಂಟಾನಾದ ಭಾವನೆಗಳ ಸಂಕೇತವೂ ಹೌದು

ಘಂಟಾನಾದ ಭಾವನೆಗಳ ಸಂಕೇತವೂ ಹೌದು

ಹಿಂದಿನ ಕಾಲದಲ್ಲಿ ವಿವಿಧ ಘಂಟೆಗಳನ್ನು ಬಾರಿಸುವ ಮೂಲಕ ಸಂತೋಷ, ದುಃಖ ಮೊದಲಾದ ಭಾವಗಳನ್ನು ಮಾತ್ರವಲ್ಲದೇ ಎಚ್ಚರಿಕೆಯ ಸಂಕೇತಗಳನ್ನೂ ನೀಡಲಾಗುತ್ತಿತ್ತು. ಕಾಲಕ್ರಮೇಣ ಸಂತೋಷದ ಹೊರತಾಗಿ ಇತರ ಭಾವನೆಗಳನ್ನು ಘಂಟಾನಾದದ ಮೂಲಕ ಪ್ರಕಟಿಸುವುದು ನಿಂತೇ ಹೋಗಿದ್ದು ಈಗ ಘಂಟಾನಾದ ಕೇವಲ ಸಂತೋಷವನ್ನು ಮಾತ್ರ ಬಿಂಬಿಸುತ್ತದೆ.

ಆರಾಧನೆಯ ಸಮಯವಾಯಿತೆಂದು ಎಚ್ಚರಿಸುವ ಘಂಟೆ

ಆರಾಧನೆಯ ಸಮಯವಾಯಿತೆಂದು ಎಚ್ಚರಿಸುವ ಘಂಟೆ

ಸಾಮಾನ್ಯವಾಗಿ ಪ್ರತಿ ಧರ್ಮದಲ್ಲಿಯೂ ಪ್ರಾರ್ಥನೆ-ಆರಾಧನೆಗಳಿಗಾಗಿ ಸಮಯವನ್ನು ನಿಗದಿಪಡಿಸಲಾಗಿರುತ್ತದೆ. ಈ ಸಮಯಕ್ಕೆ ಎಲ್ಲರೂ ಒಂದೆಡೆ ಸೇರಬೇಕೆಂದು ಘಂಟೆಯನ್ನು ಬಾರಿಸುವ ಮೂಲಕ ಸೂಚನೆ ನೀಡಲಾಗುತ್ತದೆ. ಸರಿಸುಮಾರಾಗಿ ಇದೇ ಪರಿಯನ್ನು ಶಾಲೆಯ ತರಗತಿಗಳ ವೇಳೆಯನ್ನು ಸೂಚಿಸಲೂ ಬಳಸಲಾಗುತ್ತದೆ. ಘಂಟೆಯ ಸದ್ದು ಎಲ್ಲವೂ ಸರಿಯಾಗಿ ನಡೆಯುತ್ತಿವೆ, ಜೀವನದಲ್ಲಿ ಎಲ್ಲವೂ ಒಳ್ಳೆಯದೇ ಆಗುತ್ತಿವೆ ಎಂದು ಸೂಚಿಸುತ್ತಾ ಇರುವ ಮಾಧ್ಯಮವೂ ಆಗಿದೆ.

English summary

Ever Wondered Why We Ring Bells On Special Occasions?

Check out the reasons on why people tend to ring bells during special occasions. Does it have any significance at all? Or is it just a blind faith?
X
Desktop Bottom Promotion