ಝೆನ್ ಕಥೆ: ಖಾಲಿತನ ಎಂಬುದು ಪವಿತ್ರತೆಯಲ್ಲ

By:
Subscribe to Boldsky

 Kannada Zen story
ಚೀನಾದಲ್ಲಿ ವೂ ಎಂಬ ಶ್ರದ್ಧಾವಂತ ಬೌದ್ಧ ಚಕ್ರವರ್ತಿ ಇದ್ದನು. ಆತನೊಬ್ಬ ಬೌದ್ಧ ಧರ್ಮದ ಅನುಯಾಯಿ. ಇವನು ಮಂದಿರಗಳನ್ನು ನಿರ್ಮಿಸುವುದು, ದೇವಾಲಯಗಳನ್ನು ಕಟ್ಟುವಂತಹ ಶ್ರೇಷ್ಠ ಕಾರ್ಯಗಳಲ್ಲಿ ಸ್ವತಃ ತೊಡಗಿಕೊಂಡಿದ್ದನು. ಜೊತೆಗೆ ಸನ್ಯಾಸಿಗಳಿಗೆ ಶ್ರೇಷ್ಠ ಶಿಕ್ಷಣವನ್ನು ನೀಡಿ ಅವರನ್ನು ಪರೋಪಕಾರಿ ಕಾರ್ಯಗಳಲ್ಲಿ ತೊಡಗುವಂತೆ ಮಾಡುತ್ತಿದ್ದನು.

ಆ ಚಕ್ರವರ್ತಿಯು ಒಮ್ಮೆ ಬೋಧಿ ಧರ್ಮದ ಶ್ರೇಷ್ಠ ಧರ್ಮಗುರುವನ್ನು ಕುರಿತು "ಗುರುಗಳೇ ನನ್ನ ಒಳ್ಳೆಯ ಕೆಲಸಗಳಲ್ಲಿ ಶ್ರೇಷ್ಠವಾದದ್ದು ಯಾವುದು? ಎಂದು ಕೇಳಿದರು. ಆದರೆ ಗುರುಗಳು "ಯಾವುದೂ ಇಲ್ಲ" ಅಂತ ಹೇಳಿದರು. ಗುರುಗಳು ಕೊಟ್ಟಂಥ ಉತ್ತರವನ್ನು ಕೇಳಿ ಚಕ್ರವರ್ತಿಗೆ ಅಚ್ಚರಿಯಾಯಿತು. ಚಕ್ರವರ್ತಿ ಮುಂದುವರಿದು ಕೇಳಿದ "ಹಾಗಾದ್ರೆ ಪವಿತ್ರತೆಯ ಮೂಲ ಅರ್ಥ ಏನು? ಎಂದು ಕೇಳಲು ಗುರುಗಳು "ಖಾಲಿತನ ಎಂಬುದು ಪವಿತ್ರತೆಯಲ್ಲ" ಎಂದು ಸರಿಪಡಿಸಿ ಹೇಳಿದರು.

ಆಗ ಚಕ್ರವರ್ತಿ "ಹಾಗಾದರೆ ನನ್ನನ್ನು ಎದುರಿಸುವವರು ಯಾರು? ನನಗಿಂತ ಶ್ರೇಷ್ಠರು ಯಾರು?" ಎಂದು ಮತ್ತೆ ಕೇಳಿದ. ಗುರುಗಳು ಶಾಂತ ರೀತಿಯಲ್ಲಿ "ಅದು ನನಗೆ ಗೊತ್ತಿಲ್ಲ" ಎಂದು ಉತ್ತರಿಸಿದರು. ಆದರೆ ಚಕ್ರವರ್ತಿಯು ಮೂಲ ಶಿಕ್ಷಣವನ್ನು ಮಾತ್ರ ಪಡೆದಿದ್ದನು. ಆದರೆ ಬೌದ್ಧ ಧರ್ಮದ ಹಿರಿಮೆಯನ್ನು ಅರ್ಥ ಮಾಡಿಕೊಂಡಿರಲಿಲ್ಲ. "ಬೋಧಿ ಧರ್ಮ" ಎಂಬ ಪದದ ಅರ್ಥವನ್ನು ಗ್ರಹಿಸಿರಲಿಲ್ಲ. ಹೀಗಾಗಿ ಆ ಗುರುವು ರಾಜ್ಯವನ್ನು ಬಿಟ್ಟು ಹೋದರು.

ನಂತರ ವೂ ಚಕ್ರವರ್ತಿಯು ರಾಜ ಶಿಕೋನೊಂದಿಗೆ ಮಾತುಕತೆಯನ್ನು ನಡೆಸುತ್ತಾನೆ. ಆಗ ಅವನು ಬೌದ್ಧ ಧರ್ಮದ ಹಿರಿಮೆಯನ್ನು ವಿವರಿಸಿ ಹೇಳುತ್ತಾನೆ. ಅದರ ಸರ್ವೋತ್ತಮವಾದ ಸತ್ಯವನ್ನು ತಿಳಿಸಿ ಹೇಳುತ್ತಾನೆ. ಇದನ್ನು ಕೇಳಿದ ಚಕ್ರವರ್ತಿಗೆ ಪಶ್ಚಾತ್ತಾಪವಾಗುತ್ತದೆ. ಆ ಕೂಡಲೇ ಬೌದ್ಧ ಧರ್ಮವನ್ನು ಮತ್ತೆ ತನ್ನ ಸಾಮ್ರಾಜ್ಯಕ್ಕೆ ತರುವಂತೆ ಸಂದೇಶವನ್ನು ಕಳುಹಿಸಿದನು. ಆದರೆ ಶಿಕೋ ರಾಜನು ಚಕ್ರವರ್ತಿಯನ್ನು ಕುರಿತು ಹೇಳಿದ "ಸಮಯ ಮೀರಿದೆ ರಾಜ.. ಈಗಾಗಲೇ ಎಲ್ಲಾ ಜನರೂ ಈ ಪ್ರದೇಶವನ್ನು ಬಿಟ್ಟು ಹೋಗಿದ್ದಾರೆ. ಈಗ ಕರೆದರೆ ಯಾರೂ ಮರಳಿ ಬರುವುದಿಲ್ಲ" ಎಂದನು.

ರಾಜನಿಗೆ ನಿಧಾನವಾಗಿ ಜ್ಞಾನೋದಯವಾಯಿತು. ಆದರೆ ಅಷ್ಟರಲ್ಲಿ ಕಾಲ ಮೀರಿ ಹೋಗಿತ್ತು.

Story first published: Friday, July 13, 2012, 10:17 [IST]
English summary

Kannada Zen story | Inspirational short stories | ಝೆನ್ ಕಥೆ : ಖಾಲಿತನ ಎಂಬುದು ಪವಿತ್ರತೆಯಲ್ಲ

Kannada Zen story :The emperor one day asked Bodhidharma, the great Buddhist teacher : "What merit is there in my good works? "To his surprise the Master replied "None whatsoever" . The emperor continued "What is the primal meaning of Holy Reality? "The master corrected "Emptiness, not holiness".
Please Wait while comments are loading...
Subscribe Newsletter