For Quick Alerts
ALLOW NOTIFICATIONS  
For Daily Alerts

ದ್ರೌಪದಿಯ ಶಪಥ: ಆಕೆ ಕೇಶವನ್ನು ಯಾಕೆ ಕಟ್ಟಿಕೊಳ್ಳಲಿಲ್ಲ?

By Super
|

ಮಹಾಭಾರತ ಮಹಾಕಾವ್ಯವು ಹಲವಾರು ನಿಗೂಢತೆಗಳನ್ನು ಹೊಂದಿರುವಂತಹದ್ದು. ಈ ಮಹಾಕಾವ್ಯದಲ್ಲಿ ನೀವು ಪ್ರೀತಿ, ಗೌರವ, ಸಾಹಸ, ಜಾಣ್ಮೆ, ಭಕ್ತಿ ಮತ್ತು ನೈತಿಕತೆಯನ್ನು ಒಂದು ಕಡೆಯಲ್ಲಿ ನೋಡಬಹುದು. ಇನ್ನೊಂದು ಕಡೆಯಿಂದ ನೀವು ದ್ವೇಷ, ವಿಶ್ವಾಸಘಾತುಕತೆ, ಅನೈತಿಕತೆ, ವ್ಯಭಿಚಾರ ಮತ್ತು ಅನ್ಯಾಯ ನಿಮಗೆ ಕಾಣಸಿಗುತ್ತದೆ. ಮಹಾಭಾರತವು ಎರಡು ಪ್ರಮುಖ ಪಾತ್ರಗಳಾದ ಪಾಂಡವರು ಮತ್ತು ಕೌರವರ ಸುತ್ತ ಸುತ್ತುತ್ತಿರುತ್ತದೆ. ಮಹಾಕಾವ್ಯವು ಹಲವಾರು ಕಥೆಗಳನ್ನು ವಿವರಿಸುತ್ತದೆ. ಇದು ಮಹಾಭಾರತದ ಅತಿದೊಡ್ಡ ಯುದ್ಧದಲ್ಲಿ ಪರಾಕಷ್ಠೆಯನ್ನು ತಲುಪುತ್ತದೆ.

ಮಹಾಯುದ್ಧದಲ್ಲಿ ಬದುಕಿದ ಅಥವಾ ಮೃತಪಟ್ಟ ಪುರುಷ ಪಾತ್ರಗಳ ಸುತ್ತ ಇದರಲ್ಲಿನ ಹಲವಾರು ಕಥೆಗಳು ಸುತ್ತುತ್ತಿರುತ್ತದೆ. ಆದರೆ ಈ ಮಹಾಕಾವ್ಯದಲ್ಲಿ ಬರುವ ಅತ್ಯಂತ ಪ್ರಮುಖ ಪಾತ್ರಧಾರಿಯಾಗಿರುವ ಮಹಿಳೆಯೊಬ್ಬಳು ಮಹಾಯುದ್ಧಕ್ಕೆ ಪ್ರಮುಖ ಕಾರಣವಾಗಿದ್ದಾಳೆ. ಹೌದು, ನಾವು ದ್ರೌಪದಿ ಬಗ್ಗೆ ಮಾತನಾಡುತ್ತಿದ್ದೇವೆ.

ರಾಮಾಯಣದಲ್ಲಿ ಬಚ್ಚಿಟ್ಟ ಸತ್ಯ; ಸೀತಾದೇವಿ ರಾವಣನ ಪುತ್ರಿ?

ದ್ರೌಪದಿ ಮಹಾಭಾರತದ ಪ್ರಮುಖ ಪಾತ್ರ. ಆಕೆ ಪಾಂಚಾಳ ರಾಜ್ಯದ ರಾಜಕುಮಾರಿ, ಪಾಂಡವರ ಪತ್ನಿ ಮತ್ತು ತನ್ನ ಪತಿಯರ ಕಡೆಗೆ ಭಕ್ತಿಯಿಂದ ಕೂಡಿರುವ ಮಹಾನ್ ಜ್ಞಾನಿ ಮತ್ತು ನಿಗೂಢ ಮಹಿಳೆ. ಮಹಾಭಾರತ ಯುದ್ಧಕ್ಕೆ ಆಕೆಯೇ ಕಾರಣವೆಂಬ ಬಗ್ಗೆ ತಪ್ಪುತಿಳುವಳಿಕೆ ಮತ್ತು ನಂಬಿಕೆಯಿದೆ. ಆದರೆ ಇದು ನಿಜವಲ್ಲ, ಕೌರವರ ಸೋಲಿಸುವಲ್ಲಿ ಆಕೆ ಅತೀ ಮಹತ್ವದ ಪಾತ್ರ ನಿರ್ವಹಿಸಿದ್ದಾಳೆ.

ದ್ರೌಪದಿಯ ಬಗ್ಗೆ ಪ್ರತಿಯೊಂದು ವಿಷಯವು ಅತ್ಯಾಕರ್ಷಕವಾಗಿದೆ. ಆಕೆಯ ಅದ್ಭುತ ಸೌಂದರ್ಯ, ಗೌರವ, ಭಕ್ತಿ, ಪ್ರೀತಿ, ಆಕೆಗಾಗುವ ಅವಮಾನ ಮತ್ತು ಆಕೆಯ ಕಠಿಣ ಶಪಥ ಎಲ್ಲವೂ ಸಮ್ಮೋಹನಗೊಳಿಸುತ್ತದೆ. ಕೌರವ ಸಾಮ್ರಾಜ್ಯವನ್ನು ನಾಶ ಮಾಡಿದ ದ್ರೌಪದಿಯ ಶಪಥದ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳುವ.

ಪಗಡೆಯಾಟ

ಪಗಡೆಯಾಟ

ಪಗಡೆಯಾಟದ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಈ ಜೂಜಿನ ಆಟವು ಕೌರವರು ಮತ್ತು ಪಾಂಡವರ ಮಧ್ಯೆ ನಡೆಯಿತು. ಪಗಡೆಯಾಟವಾಡಲು ಪಾಂಡವರನ್ನು ಕೌರವರು ಹಸ್ತಿನಾಪುರಕ್ಕೆ ಆಹ್ವಾನಿಸುತ್ತಾರೆ. ಪಗಡೆಯಾಟದಲ್ಲಿ ಯುಧಿಷ್ಠಿರ ತುಂಬಾ ಪ್ರವೀಣನಾಗಿದ್ದ ಕಾರಣ ಈ ಆಹ್ವಾನವನ್ನು ಸ್ವೀಕರಿಸುತ್ತಾನೆ. ಆದರೆ ಕೌರವರು ಇದರಲ್ಲಿ ಮೋಸ ಮಾಡಿದ್ದರಿಂದ ಯುಧಿಷ್ಠಿರ ಪ್ರತಿಯೊಂದನ್ನು ಕಳಕೊಳ್ಳುತ್ತಾನೆ. ಆತ ತನ್ನ ಎಲ್ಲಾ ಸೋದರರನ್ನು ಪಣಕ್ಕಿಟ್ಟು ಅವರನ್ನು ಕಳಕೊಳ್ಳುತ್ತಾನೆ. ಆತ ಅಂತಿಮವಾಗಿ ತನ್ನನ್ನು ಪಣಕ್ಕಿಟ್ಟು ಕೌರವರ ದಾಸನಾಗುತ್ತಾನೆ. ಕಳೆದುಕೊಂಡಿದ್ದ ಪ್ರತಿಯೊಂದನ್ನು ಮರಳಿ ಪಡೆಯುವ ಉದ್ದೇಶ ಮತ್ತು ಕೌರವರ ಕುಮ್ಮಕ್ಕಿನಿಂದ ಆತ ಅಂತಿಮವಾಗಿ ತನ್ನ ಪತ್ನಿ ದ್ರೌಪದಿಯನ್ನು ಪಣಕ್ಕಿಡುತ್ತಾನೆ. ಆಕೆಯನ್ನೂ ಆತ ಕಳಕೊಳ್ಳುತ್ತಾನೆ.

ದ್ರೌಪದಿಯ ವಸ್ತ್ರಾಪರಣ

ದ್ರೌಪದಿಯ ವಸ್ತ್ರಾಪರಣ

ಯುಧಿಷ್ಠಿರ ದ್ರೌಪದಿಯನ್ನು ಪಗಡೆಯಾಟದಲ್ಲಿ ಕಳಕೊಂಡ ಬಳಿಕ ನಡೆದದ್ದು ಸಂಪೂರ್ಣ ಮಾನವ ಕುಲವೇ ನಾಚಿಗೆಪಡುವಂತಹ ವಿಷಯ. ರಾಣಿಯರ ವಿಶ್ರಾಂತಿ ಕೊಠಡಿಯಿಂದ ದ್ರೌಪದಿಯನ್ನು ಎಳೆದು ತರುವಂತೆ ಮತ್ತು ಆಸ್ಥಾನದಲ್ಲಿರುವವರ ಎಲ್ಲರ ಮುಂದೆ ಆಕೆಯ ವಸ್ತ್ರಾಪರಣ ನಡೆಸುವಂತೆ ದುಶ್ಯಾಸನನಿಗೆ ದುರ್ಯೋಧನ ಆದೇಶ ನೀಡುತ್ತಾನೆ. ಆದೇಶವನ್ನು ಪಾಲಿಸಿದ ದುಶ್ಯಾಸನ ವಿಶ್ರಾಂತಿ ಕೊಠಡಿಯಿಂದ ದ್ರೌಪದಿಯನ್ನು ತಲೆಕೂದಲಿನಲ್ಲಿ ಹಿಡಿದುಕೊಂಡು ಎಳೆದುತರುತ್ತಾನೆ. ಆಕೆಯನ್ನು ಹೀಯಾಳಿಸುತ್ತಾ ಕೂದಲಿನಲ್ಲಿ ಎಳೆದುಕೊಂಡು ಆಸ್ಥಾನಕ್ಕೆ ಬರುತ್ತಾನೆ.

ದ್ರೌಪದಿಯ ವಸ್ತ್ರಾಪರಣ

ದ್ರೌಪದಿಯ ವಸ್ತ್ರಾಪರಣ

ದ್ರೌಪದಿ ಅಲ್ಲಿದ್ದ ಹಿರಿಯರಿಂದ ನೆರವು ಕೇಳುತ್ತಾಳೆ. ಆದರೆ ಯಾರೂ ಆಕೆಯ ನೆರವಿಗೆ ಬರುವುದಿಲ್ಲ. ಆಕೆಯ ಪತಿಯಂದಿರು ಅವಮಾನದಿಂದ ತಲೆತಗ್ಗಿಸಿ ಕುಳಿತಿರುತ್ತಾರೆ. ದುಶ್ಯಾಸನ ಆಕೆಯನ್ನು ಎಳೆದು ತಂದ ಬಳಿಕ ಎಲ್ಲಾ ಎಲ್ಲೆಗಳನ್ನು ಮೀರಿ ಆಕೆಯ ವಸ್ತ್ರಾಪರಣ ಮಾಡಲು ತಯಾರಾಗುತ್ತಾನೆ. ಆದರೆ ಈ ಕೃತ್ಯದಲ್ಲಿ ಆತ ಸೋಲುತ್ತಾನೆ, ದ್ರೌಪದಿಯನ್ನು ಶ್ರೀಕೃಷ್ಣ ರಕ್ಷಿಸುತ್ತಾನೆ.

ದ್ರೌಪದಿಯ ಕಠಿಣ ಶಪಥ

ದ್ರೌಪದಿಯ ಕಠಿಣ ಶಪಥ

ತನ್ನ ವಸ್ತ್ರಾಪರಣದ ಘಟನೆಯ ಬಳಿಕ ದ್ರೌಪದಿ ಅಳುತ್ತಾ ಕೂತಿರುತ್ತಾಳೆ ಮತ್ತು ತನ್ನ ನೆರವಿಗೆ ಯಾರು ಬರಲಿಲ್ಲವೆಂಬ ಅಸಹಾಯಕ ಭಾವನೆಯಿಂದ ಆಕೆ ಬಳಲುತ್ತಿರುತ್ತಾಳೆ. ಆಕೆ ಅಲ್ಲಿದ್ದ ಪ್ರತಿಯೊಬ್ಬ ಹಿರಿಯರಿಂದ ನೆರವನ್ನು ಕೇಳುತ್ತಾಳೆ. ಆದರೆ ಅವರೆಲ್ಲವೂ ಅವಮಾನದಿಂದ ತಲೆತಗ್ಗಿಸುತ್ತಾರೆ. ಕೌರವರು ಆಕೆಯನ್ನು ಹೀಯಾಳಿಸುತ್ತಲೇ ಇರುತ್ತಾರೆ. ಅವಮಾನದಿಂದ ಕ್ರೋಧಿತಳಾದ ದ್ರೌಪದಿ, ದುಶ್ಯಾಸನನ ರಕ್ತದಿಂದ ತನ್ನ ಕೂದಲನ್ನು ತೊಳೆಯುವ ತನಕ ನಾನು ಕೂದಲು ಬಾಚಿ ಕಟ್ಟಿಕೊಳ್ಳುವುದಿಲ್ಲ ಮತ್ತು ಎಣ್ಣೆ ಹಾಕುವುದಿಲ್ಲ ಎಂದು ಶಪಥ ಮಾಡುತ್ತಾಳೆ.

ದ್ರೌಪದಿಯ ಕಠಿಣ ಶಪಥ

ದ್ರೌಪದಿಯ ಕಠಿಣ ಶಪಥ

ಆಕೆಯ ಶಪಥವು ಅಲ್ಲಿ ನೆರೆದಿದ್ದವರಿಗೆ ಆಘಾತ ನೀಡುತ್ತದೆ. ಇದರ ಬಳಿಕಧೃತರಾಷ್ಟ್ರ ನು ದ್ರೌಪದಿಗೆ ಸಮಾಧಾನವಾಗುವಂತೆ ಹೇಳಿ ಪಾಂಡವರನ್ನು ಬಂಧನದಿಂದ ಮುಕ್ತಗೊಳಿಸುತ್ತಾನೆ. ಆದರೂ ದ್ರೌಪದಿ ಈ ಅವಮಾನಕಾರಿ ಘಟನೆ ಬಳಿಕ ತನ್ನ ಕೂದಲನ್ನು ಕಟ್ಟಿಕೊಳ್ಳಲಿಲ್ಲ ಮತ್ತು ಇದು ಯಾವಾಗಲೂ ಪಾಂಡವರಿಗೆ ಆಕೆಯ ಶಪಥವನ್ನು ನೆನಪಿಸುತ್ತಿತ್ತು. ಮಹಾಸಂಗ್ರಾಮದಲ್ಲಿ ಭೀಮನು ದುಶ್ಯಾಸನನ್ನು ಕೊಂದು ಬಳಿಕ ಆತನ ರಕ್ತವನ್ನು ದ್ರೌಪದಿಗೆ ನೀಡುತ್ತಾನೆ. ಆಕೆ ದುಶ್ಯಾಸನನ ರಕ್ತದಲ್ಲಿ ತನ್ನ ಕೂದಲನ್ನು ತೊಳೆದ ಬಳಿಕ ಮತ್ತೆ ಕೂದಲನ್ನು ಬಾಚಿ ಕಟ್ಟಿಕೊಳ್ಳುತ್ತಾಳೆ.

English summary

Draupadi's Vow: Why She Never Tied Her Hair?

Mahabharata is an epic which is full of mysteries. In this epic you will find the tales of love, respect, bravery, intelligence, devotion and morality on one hand. So, let us find out about that great vow of Draupadi which destroyed the mighty Kaurava empire.
X
Desktop Bottom Promotion