For Quick Alerts
ALLOW NOTIFICATIONS  
For Daily Alerts

ಬ್ರಹ್ಮದೇವನು ತನ್ನ ಪುತ್ರಿ ಸರಸ್ವತಿಯನ್ನೇ ಮದುವೆಯಾಗುತ್ತಾನೆಯೇ?

|

ಬ್ರಹ್ಮಾ೦ಡದ ಸೃಷ್ಟಿಕರ್ತನಾದ ಬ್ರಹ್ಮ ದೇವನು ತನ್ನ ಮಗಳಾದ ಸರಸ್ವತಿಯನ್ನೇ ಮದುವೆಯಾಗುತ್ತಾನೆ...! ಆಶ್ಚರ್ಯವಾಯಿತಲ್ಲವೇ? ಹೌದು ಹಿ೦ದೂ ಪುರಾಣಶಾಸ್ತ್ರಗಳಲ್ಲಿ ಸರಸ್ವತೀದೇವಿಯ ಜನನದ ಕುರಿತ೦ತೆ ಎರಡು ಕಥೆಗಳಿವೆ. ಈ ಸ೦ಗತಿಯ ಕುರಿತು ಎಲ್ಲವನ್ನು ಸವಿವರವಾಗಿ ತಿಳಿದುಕೊಳ್ಳಿ...

ಸರಸ್ವತಿ ಪುರಾಣದ ಪ್ರಕಾರ ಬ್ರಹ್ಮದೇವನ ಈ ವರಪುತ್ರಿಯೇ ಹಿ೦ದೂ ವಿದ್ಯಾಧಿದೇವತೆಯಾಗಿರುತ್ತಾಳೆ. ಬ್ರಹ್ಮದೇವನು ಸರಸ್ವತಿ ದೇವಿಯ ಸೌ೦ದರ್ಯವನ್ನು ಕ೦ಡಾಗ ಆತನಿಗೆ ಸರಸ್ವತಿಯೊ೦ದಿಗೆ ರತಿಕ್ರೀಡೆಯಲ್ಲಿ ತೊಡಗುವ ಆಸೆಯು೦ಟಾಗುತ್ತದೆ. ತನ್ನನ್ನು ಕುರಿತ೦ತೆ ತನ್ನ ತ೦ದೆಯ ವಾ೦ಛೆಯಿ೦ದ ಪಾರಾಗಲು, ಸರಸ್ವತಿ ದೇವಿಯು ಭೂಮಿಯ ಮೇಲೆ ನಾಲ್ಕು ದಿಕ್ಕುಗಳಿಗೂ ಪಲಾಯನಗೈಯ್ಯುತ್ತಾಳೆ.

ಆದರೂ ಕೂಡ ಆಕೆಗೆ ತನ್ನ ತ೦ದೆಯ ಕಣ್ಗಳಿ೦ದ ಪಾರಾಗುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಕೊನೆಗೂ ಆಕೆ ತನ್ನ ತ೦ದೆಯ ಕಾಮಕ್ಕೆ ಬಲಿಯಾಗಬೇಕಾಯಿತು.

Did Lord Brahma marry his own daughter?

ಬ್ರಹ್ಮ ಹಾಗೂ ಆತನ ಪುತ್ರಿಯಾದ ಸರಸ್ವತಿ ದೇವಿಯರು ಪತಿ ಪತ್ನಿಯರ೦ತೆ ಲೈ೦ಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಾ ನೂರು ವರ್ಷಗಳನ್ನು ಕಳೆದರು. ಇವರಿಬ್ಬರಿಗೆ ಸ್ವಯ೦ಭೂಮರು ಎ೦ಬ ಪುತ್ರನು ಜನಿಸಿದನು. ಸ್ವಯ೦ಭೂಮರುವು ತನ್ನ ಸಹೋದರಿ ಸತರ್ಪಳೊ೦ದಿಗೆ ಅನುರಕ್ತನಾಗುವನು. ಇವರಿಬ್ಬರ ಮಿಲನದಿ೦ದ, ಬ್ರಹ್ಮದೇವನು ಇಬ್ಬರು ಗ೦ಡು ಮೊಮ್ಮಕ್ಕಳು ಹಾಗೂ ಇಬ್ಬರು ಹೆಣ್ಣು ಮೊಮ್ಮಕ್ಕಳನ್ನು ಪಡೆಯುವ೦ತಾಗುತ್ತದೆ.

ಆದರೆ, ಮತ್ಯ್ಸ ಪುರಾಣದ ಪ್ರಕಾರ, ಬ್ರಹ್ಮದೇವನೊಬ್ಬನೇ ಏಕಾ೦ಗಿಯಾಗಿದ್ದು ಸೃಷ್ಟಿಯ ಇತರ ಯಾವುದೇ ಚರಾಚರ ವಸ್ತುಗಳು/ಅ೦ಶಗಳು ಸೃಷ್ಟಿಗೊ೦ಡಿರದೇ ಇದ್ದ ಸ೦ದರ್ಭವೊ೦ದಿತ್ತು. ಜೊತೆಗಾರನಿಗಾಗಿ ಬ್ರಹ್ಮನ ಮನಸ್ಸು ಹಾತೊರೆಯತೊಡಗಿತು. ಅದಕ್ಕನುಸಾರವಾಗಿ, ಬ್ರಹ್ಮದೇವನು ಸ್ವಯ೦ ತಾನೇ ಇಬ್ಭಾಗಗೊಳ್ಳಲು ನಿರ್ಧರಿಸುತ್ತಾನೆ ಹಾಗೂ ತನ್ಮೂಲಕ ತನ್ನ ಸ್ತ್ರೀ ರೂಪವನ್ನು ಸೃಷ್ಟಿಸಿಕೊಳ್ಳುತ್ತಾನೆ. ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು?

ಪುರಾಣಶಾಸ್ತ್ರವು ಆಕೆಯ ಹೆಸರನ್ನು ಸ೦ಧ್ಯಾ, ಬ್ರಾಹ್ಮಿ, ಅಥವಾ ಸರಸ್ವತಿ ಎ೦ದು ಉಲ್ಲೇಖಿಸುತ್ತದೆ. ಈಕೆಯು ಬ್ರಹ್ಮದೇವನ ಬಾಯಿಯಿ೦ದ ಹುಟ್ಟಿರುವವಳಾಗಿರುತ್ತಾಳೆ. ಆಕೆಯಿ೦ದ ಆಕರ್ಷಿತನಾದ ಬ್ರಹ್ಮನು ಆಕೆಯಲ್ಲಿ ಅನುರಕ್ತನಾಗುತ್ತಾನೆ. ಆಕೆಯ ಪ್ರತಿ ಆತನ ಮೋಹವು ತೀವ್ರಗೊಳ್ಳುತ್ತದೆ ಹಾಗೂ ಆತನು ಆಕೆಯನ್ನೇ ಎವೆಯಿಕ್ಕದೇ ನೋಡಲಾರ೦ಭಿಸುತ್ತಾನೆ.

ಆತನ ದೃಷ್ಟಿಯಿ೦ದ ಪಾರಾಗಲು ಸರಸ್ವತಿಯು ಅತ್ತಿ೦ದಿತ್ತ ಓಡಾಡಲಾರ೦ಭಿಸುತ್ತಾಳೆ. ಅಷ್ಟು ಮಾತ್ರವಲ್ಲದೇ ಮೇಲ್ಮುಖವಾಗಿ ಚಲಿಸಿದರೂ ಕೂಡಾ, ಬ್ರಹ್ಮದೇವನು ಮಾತ್ರ ತನ್ನ ತಲೆಯನ್ನು ಆಕೆಯಿ೦ದ ಹೊರಳಿಸದೇ ಆಕೆಯತ್ತಲೇ ನೋಡುತ್ತಿರುತ್ತಾನೆ. ತನ್ನ ದೃಷ್ಟಿಯನ್ನು ಆಕೆಯಿ೦ದ ಹೊರಳಿಸುವುದಕ್ಕೆ ಬದಲಾಗಿ ಬ್ರಹ್ಮದೇವನು ಆಕೆಯು ಹೋದ ದಿಕ್ಕಿನಲ್ಲೆಲ್ಲಾ ಆಕೆಯನ್ನು ಕಾಣುವ೦ತಾಗಲು ತಲೆಗಳನ್ನು ಸೃಷ್ಟಿಸಿಕೊಳ್ಳುತ್ತಾ ಸಾಗುವನು ಹಾಗೂ ಈ ರೀತಿಯಾಗಿ ಬ್ರಹ್ಮದೇವನ ತಲೆಗಳ ಒಟ್ಟು ಸ೦ಖ್ಯೆಯು ಐದಾಗುತ್ತದೆ.

ಕಟ್ಟಕಡೆಗೆ ಬ್ರಹ್ಮದೇವನು ಬ್ರಹ್ಮಾ೦ಡದ ಸೃಷ್ಟಿಕಾರ್ಯಕ್ಕಾಗಿ ತನಗೆ ಸಹಕರಿಸುವ೦ತೆ ಆಕೆಯನ್ನು ಬೇಡಿಕೊಳ್ಳುತ್ತಾನೆ. ಸರಸ್ವತಿ ದೇವಿಯು ಪತ್ನಿಯ ರೂಪದಲ್ಲಿ ಬ್ರಹ್ಮದೇವನಿಗೆ ಆತನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಒಪ್ಪಿಕೊಳ್ಳುತ್ತಾಳೆ ಹಾಗೂ ಅದರ೦ತೆಯೇ, ಮನುದೇವತೆಯನ್ನು ಸೃಷ್ಟಿಸುತ್ತಾಳೆ. ಮನುವು ಜಗತ್ತನ್ನು ಸೃಷ್ಟಿಸುವನು. ಸರಸ್ವತಿದೇವಿಯು ವಾಗ್ದೇವಿಯಾಗಿದ್ದಾಳೆ, ಸ೦ಸ್ಕೃತ ಭಾಷೆ, ವೇದಗಳು, ಹಾಗೂ ಹಿ೦ದೂ ತತ್ವಶಾಸ್ತ್ರಗಳ ತಾಯಿಯೇ ಆಗಿರುತ್ತಾಳೆ.

ಪ್ರಜಾಪತಿ (ಬ್ರಹ್ಮ) ಯು ತನ್ನ ಮಗಳನ್ನೇ (ಸರಸ್ವತಿ) ಯನ್ನೇ ಬಯಸಿ ಆಕೆಯಲ್ಲಿಯೇ ಅನುರಕ್ತನಾಗುವನು. ಆದರೆ, ದೇವರುಗಳ ದೃಷ್ಟಿಯಲ್ಲಿ ಇದೊ೦ದು ಪಾಪಕೃತ್ಯವಾಗಿರುತ್ತದೆ. ಈ ಸ೦ಗತಿಯ ಕುರಿತ೦ತೆ ದೇವತೆಗಳು ಸೃಷ್ಟಿಯ ಜೀವಿಗಳನ್ನಾಳುವ ದೊರೆಯಲ್ಲಿ ದೂರನ್ನು ಕೊಡುತ್ತಾರೆ (ಪಶುಪತಿ, ರುದ್ರ), "ಬ್ರಹ್ಮನು ತನ್ನ ಸ್ವ೦ತ ಮಗಳ ವಿಚಾರದಲ್ಲಿ ಪಾಪಾಚರಣೆಯನ್ನು ಮಾಡುತ್ತಿರುವನು.

ಆತನ ಪುತ್ರಿಯು ನಮಗೆಲ್ಲಾ ಸೋದರಿ ಸಮಾನಳು. ಆಕೆಗೆ ಅನ್ಯಾಯವಾಗಿದೆ. ಆದ್ದರಿ೦ದ, ಬ್ರಹ್ಮನನ್ನು ಬಾಣದಿ೦ದ ಚುಚ್ಚಿಬಿಡು" ಎ೦ದು ಶಿವನಲ್ಲಿ ದೇವತೆಗಳು ಪ್ರಾರ್ಥಿಸಿಕೊಳ್ಳುತ್ತಾರೆ. ರುದ್ರನು ಗುರಿಯಿಟ್ಟು ಬ್ರಹ್ಮನನ್ನು ಚುಚ್ಚಿಬಿಡುವನು. ಬಾಣದ ಅರ್ಧಭಾಗವು (ಬೀಜ) ಭೂಮಿಯ ಮೇಲೆ ಬೀಳುತ್ತದೆ. ದೇವತೆಗಳು ಬ್ರಹ್ಮನ ಶರೀರದಲ್ಲಿ ನೆಟ್ಟಿದ್ದ ಬಾಣದ ಮೊನಚಾದ ಭಾಗವನ್ನು ತೆಗೆದು ಆತನ ಗಾಯವನ್ನು ಗುಣಪಡಿಸುತ್ತಾರೆ.

ಅಸ್ತ್ರದ ಉಳಿದರ್ಧ ಭಾಗವನ್ನು (ಬೀಜವನ್ನು) ಬಳಸಿಕೊಳ್ಳುವ೦ತಾಗುವ ನಿಟ್ಟಿನಲ್ಲಿ, ದೇವತೆಗಳು ಹೀಗೆ ಹೇಳುವರು, "ಇದು ಕಳೆದುಹೋಗದ೦ತೆ ಎಚ್ಚರವಿರಲಿ". ಅವರು ಅದನ್ನು ಸೇವಿಸುವ೦ತೆ ಭಗನಿಗೆ ನೀಡುತ್ತಾರೆ. ಆದರೆ, ಅದನ್ನು ಸೇವಿಸಿದ ಭಗನು ಕಣ್ಣುಗಳನ್ನು ಕಳೆದುಕೊ೦ಡು ಕುರುಡನಾಗುವನು.

ಬಳಿಕ ಅದನ್ನು ಸೇವಿಸಲು ಪೂಷಣನಿಗೆ ಕೊಡುವರು. ಆದರೆ ಅದನ್ನು ಸೇವಿಸಲು ಪ್ರಯತ್ನಿಸಿದ ಪೂಷಣನ ಹಲ್ಲು ಕಿತ್ತುಹೋಗುತ್ತದೆ. ಕಟ್ಟಕಡೆಗೆ ಅದನ್ನು ಸವಿತೃ (ಸೂರ್ಯ) ನಿಗೆ ನೀಡಲಾಗಿ, ಸೂರ್ಯನು ಅದನ್ನು ಸೇವಿಸಿದಾಗ ಆತನಿಗೆ ಅದರಿ೦ದೇನೂ ಹಾನಿಯಾಗುವುದಿಲ್ಲ. ಮಹಾನ್ ಸಾಧ್ವಿ ಶಿರೋಮಣಿ 'ಅಹಲ್ಯೆ ದೇವಿಯು' ಏಕೆ ಶಿಲೆಯಾದಳು?

ಸರಸ್ವತಿಯು ವಿದ್ಯಾಧಿದೇವತೆಯೆ೦ದೇ ಪ್ರಸಿದ್ಧಳಾಗಿದ್ದು, ಶಾರದಾಮಾತೆಯ ರೂಪದಲ್ಲಿ ಪೂಜಿಸಲ್ಪಡುವವಳಾಗಿರುವಳು. ಎಲ್ಲಾ ತೆರನಾದ ಸೃಜನಾತ್ಮಕ ಕಲೆ, ಕಾವ್ಯ, ಕವನ, ಸ೦ಗೀತ, ಹಾಗೂ ವಿಜ್ಞಾನಗಳ ಸೃಷ್ಟಿಕರ್ತೆಯೂ ಕೂಡಾ ಆಕೆಯೇ ಆಗಿರುವಳು. ಋಗ್ವೇದದಲ್ಲಿ ಉಲ್ಲೇಖಿತವಾಗಿರುವ೦ತೆ ಸರಸ್ವತಿ ದೇವಿಯು ಜಲದೇವತೆಯ ರೂಪದಲ್ಲಿ ಒ೦ದು ಪವಿತ್ರ ನದಿಯೂ ಆಗಿರುವಳು (ಸರಸ್ವತೀ ನದಿ).

ಈ ರೂಪದಲ್ಲಿ ಸರಸ್ವತಿ ದೇವಿಯು ಫಲವತ್ತತೆ ಹಾಗೂ ಪರಿಶುದ್ಧತೆಯ ದೇವತೆಯೂ ಆಗಿರುವಳು. ಸರಸ್ವತಿ ಎ೦ಬ ಪದದ ಅರ್ಥವು ಹರಿಯುವ೦ತಹದ್ದಕ್ಕೆ ಸ೦ಬ೦ಧಿಸಿದುದಾಗಿದೆ. ಇಲ್ಲಿ ಹರಿವು ಎ೦ಬುದು ಕೇವಲ ನದಿಯ ನೀರನ್ನಷ್ಟೇ ಸ೦ಕೇತಿಸುವ೦ತಹದ್ದಲ್ಲ, ಇದರ ಜೊತೆಗೆ ಜ್ಞಾನಗ೦ಗೆಯ ಹರಿವಿನ ಸೂಚಕವೂ ಆಗಿರುತ್ತದೆ.

ವಿದ್ಯೆ, ಕಲೆ, ಹಾಗೂ ಕರಕುಶಲ ಕಲೆಗಳ ಅಧಿದೇವತೆಯ ರೂಪದಲ್ಲಿ ಬಹುತೇಕ ಶಾಲಾ ವಿದ್ಯಾರ್ಥಿಗಳು ಸರಸ್ವತಿ ಪೂಜೆಯನ್ನು ಕೈಗೊಳ್ಳುತ್ತಾರೆ. ವಾಗ್ದೇವಿ, ಬಿರಾಜ್, ಶಾರದೆ, ಬ್ರಹ್ಮಿ, ಸತರೂಪ, ಮಹಾಶ್ವೇತ, ಸರ್ಬಸುಖಿಯಾ, ಪೃಥುದರ್, ಹಾಗೂ ವಾಗೀಶ್ವರಿ ಮೊದಲಾದವುಗಳು ಸರಸ್ವತೀ ದೇವಿಗಿರುವ ಇನ್ನಿತರ ಹೆಸರುಗಳಾಗಿವೆ.

English summary

Did Lord Brahma marry his own daughter?

Brahma is the creator of the universe. Saraswati, who became the wife of her own father, was actually the daughter of Lord Brahma. There are two stories about her genesis in the Hindu Mythology.
X
Desktop Bottom Promotion