For Quick Alerts
ALLOW NOTIFICATIONS  
For Daily Alerts

ಪಾಂಡು ಪುತ್ರರ ಮರಣದೊಂದಿಗೆ ಮಹಾಭಾರತದ ಅಂತ್ಯ

|

ಮಹಾಭಾರತದಲ್ಲಿ ಕೃಷ್ಣನ ನಿಧನದ ನಂತರ ಪಾಂಡವರಿಗೆ ಜೀವನದ ಮೇಲೆ ಆಸಕ್ತಿ ಕಡಿಮೆಯಾಯಿತು. ಯುದಿಷ್ಟಿರ ಮತ್ತು ಪಾಂಡವರು ಎಲ್ಲರೂ ಸ್ವರ್ಗಕ್ಕೆ ಹೋಗಲು ನಿರ್ಧರಿಸಿದರು. ದ್ರೌಪದಿ ಸೇರಿದಂತೆ ಅವರೆಲ್ಲರು ಮತ್ತೆ ಜಿಂಕೆ ಚರ್ಮವನ್ನು ಹಾಗೂ ನಾರು ಮಡಿಯನ್ನು ಪುನಃ ಧರಿಸಿದರು. ಪರೀಕ್ಷಿತನನ್ನು ರಾಜನಾಗಿ ನೇಮಿಸಿದರು. ಕೃಪ ಆತನ ಗುರುವಾಗಿ, ಯುಯುತ್ಸುವು ಆತನ ರಾಜ ಪ್ರತಿನಿಧಿಯಾಗಿ ನೇಮಕಗೊಂಡರು. ನಂತರ ಹಸ್ತಿನಾಪುರದ ಜನರಿಂದ ಬೀಳ್ಕೊಡುಗೆಯನ್ನು ಪಡೆದ ಪಾಂಡವರು ಮತ್ತು ದ್ರೌಪದಿ ತಮ್ಮ ಪ್ರಯಾಣವನ್ನು ಆರಂಭಿಸಿದರು.

ಮೊದಲು ಅವರು ದ್ವಾರಕೆಗೆ ಹೊರಟರು. ಅಲ್ಲಿ ಅವರು ಸಮುದ್ರದಲ್ಲಿ ಮುಳುಗಿದ ದ್ವಾರಕೆಯನ್ನು ನೋಡಿದರು. ಅಲ್ಲಿ ಅಗ್ನಿಯು ಪ್ರತ್ಯಕ್ಷನಾಗಿ ಅರ್ಜುನನಿಗೆ ಹೀಗೆ ಹೇಳಿದನು " ನಿನ್ನ ಗಾಂಢೀವ ತಮ್ಮ ಉದ್ದೇಶವನ್ನು ಪೂರೈಸಿವೆ, ಇವುಗಳನ್ನು ನಾನು ವರುಣ ದೇವನಿಂದ ಪಡೆದಿದ್ದೆ, ಈಗ ಅವುಗಳನ್ನು ಹಿಂದಿರುಗಿಸುವ ಸಮಯ ಬಂದಿದೆ" ಎಂದನು. ನಂತರ ಅರ್ಜುನನು ತನ್ನ ಗಾಂಢೀವಗಳಿಗೆ ಪೂಜೆಯನ್ನು ಸಲ್ಲಿಸಿ, ಅಗ್ನಿಗೆ ಅದನ್ನು ಹಿಂದಿರುಗಿಸಿದನು.

Death of Draupadi and the Pandavas after Mahabharat!

ಹೀಗೆ ಮುಂದೆ ಸಾಗಿದ ಪಾಂಡವರು ಹಿಮವನವನ್ನು ತಲುಪಿದರು. ಮುಂದೆ ಸಾಗುವಾಗ ಕ್ರಮವಾಗಿ ದ್ರೌಪದಿ, ಸಹದೇವ, ನಕುಲ, ಅರ್ಜುನ ಮತ್ತು ಭೀಮ ಕುಸಿದು ಬಿದ್ದು ಸತ್ತರು. ಆದರೆ ಕೇವಲ ಒಂದು ನಾಯಿ ಮಾತ್ರ ಯುಧಿಷ್ಟಿರನ ಜೊತೆಯಲ್ಲಿ ತುತ್ತ ತುದಿಯವರೆಗೆ ತಲುಪಿತು. ಆಗ ಸ್ವತಃ ದೇವೇಂದ್ರನೇ ಯುಧಿಷ್ಟಿರನನ್ನು ಸ್ವರ್ಗಕ್ಕೆ ಕರೆದೊಯ್ಯಲು ಆಗಮಿಸಿದನು. ಯುಧಿಷ್ಟಿರನು ಮಾನವ ಶರೀರದ ಸಮೇತ ಸ್ವರ್ಗಕ್ಕೆ ಹೋಗುವ ವರವನ್ನು ಪಡೆದಿದ್ದನು. ಅವನು ಈ ಮಹಾನ್ ಸಾಧನೆಗೆ ಅರ್ಹನು ಸಹ ಆಗಿದ್ದನು.

ಆಗ ಆ ನಾಯಿಯು ಯುಧಿಷ್ಟಿರನ ತಂದೆಯಾದ ಯಮ ಧರ್ಮನಾಗಿ ರೂಪುಗೊಂಡಿತು. ಸ್ವರ್ಗದ ಆ ಸಭಾ ಭವನದಲ್ಲಿ ಕೃಷ್ಣನು ದೇವಾನು ದೇವತೆಗಳಿಂದ ಸುತ್ತುವರೆದಿರುವುದನ್ನು, ಕರ್ಣನು ದ್ವಾದಶಾದಿತ್ಯರಲ್ಲಿ ಒಬ್ಬನಾಗಿ ಕುಳಿತಿರುವುದನ್ನು, ಭೀಷ್ಮನು ಅಷ್ಟವಸುಗಳಲ್ಲಿ ಒಬ್ಬನಾಗಿರುವುದನ್ನು ಮತ್ತು ತನ್ನ ಪೂರ್ವಜರು ಹಾಗು ಯುದ್ಧದಲ್ಲಿ ಮಡಿದ ಅತಿರಥ- ಮಹಾರಥರು ಅಲ್ಲಿ ನೆಲೆಗೊಂಡಿರುವುದನ್ನು ಯುಧಿಷ್ಟಿರನು ನೋಡಿದನು. ಅವನಿಗೆ ಅಚ್ಚರಿ ಎನ್ನುವಂತೆ ದುರ್ಯೋಧನನು ಸಹ ಅಲ್ಲಿ ಇದ್ದನು. ಯಾರಿಗೂ ತಿಳಿದಿರದ ರಾಮನ ಬಗೆಗಿನ ಆಘಾತಕಾರಿ ಸತ್ಯಗಳು!

ಆಗ ನಾರದನು ಯುಧಿಷ್ಟಿರನಿಗೆ ಕಾರಣವನ್ನು ವಿವರಿಸಿದನು. ದುರ್ಯೋಧನನು ಎಂದಿಗು ಹೇಡಿಯಂತೆ ವರ್ತಿಸಲಿಲ್ಲ. ಅವನು ಒಬ್ಬ ಒಳ್ಳೆಯ ರಾಜನಾಗಿದ್ದನು. ಅವನು ರಣ ರಂಗದಲ್ಲಿ ಹೋರಾಡಿ ವೀರ ಮರಣವನ್ನು ಪಡೆದನು. ಅದರಲ್ಲೂ ಅವನು ನಿಧನ ಹೊಂದಿದ್ದು, ಶಮಂತಪಂಚಕವೆಂಬ ಪವಿತ್ರ ಸ್ಥಳದಲ್ಲಿ. ಈ ಎಲ್ಲಾ ಕಾರಣಗಳಿಂದಾಗಿ ಅವನು ಸ್ವರ್ಗಕ್ಕೆ ಬರುವ ಅರ್ಹತೆಯನ್ನು ಸಂಪಾದಿಸಿದನು.
ಆದರೆ ಯುಧಿಷ್ಟಿರನು ತನ್ನ ಜೀವನದಲ್ಲಿ ಒಂದೇ ಒಂದು ಸುಳ್ಳನ್ನು ಹೇಳಿದ್ದನು. ಇದರ ಹೊರತಾಗಿ ಅವನ ಜೀವನ ಪಾಪ ಮುಕ್ತವಾಗಿತ್ತು. ಈ ತಪ್ಪಿಗಾಗಿ ಅವನನ್ನು ಸ್ವರ್ಗಕ್ಕೆ ಕರೆ ತರುವಾಗ ನರಕದ ದಾರಿಯಲ್ಲಿ ಕರೆ ತರಲಾಯಿತು. ಯುಧಿಷ್ಟಿರನ ತಮ್ಮಂದಿರು ಮತ್ತು ಇತರರು ತಮ್ಮ ಪಾಪಗಳಿಗಾಗಿ ಕೆಲವು ಗಂಟೆಗಳ ಕಾಲ ನರಕದಲ್ಲಿ ಕಳೆದು ನಂತರ ಸ್ವರ್ಗಕ್ಕೆ ಬಂದರು.

English summary

Death of Draupadi and the Pandavas after Mahabharat!

After hearing about Krishna’s death, The Pandavas lost interest in the world. Yudhisthira and the Pandavas decided to go to heaven. They along with Draupadi, once again they donned deer skin and tree bark. Parikshita was appointed the king. Kripa was his guru and Yuyutsu the regent.
X
Desktop Bottom Promotion