For Quick Alerts
ALLOW NOTIFICATIONS  
For Daily Alerts

ನಿಮ್ಮನ್ನು ಮೂಕವಿಸ್ಮಿತಗೊಳಿಸುವ ಭಗವಾನ್ ಶಿವನ ರೋಚಕ ಕಥೆಗಳು!

|

ಭಗವಾನ್ ಶಿವನು ಯೋಗಿಗಳ, ಆತ್ಮನಿಗ್ರಹಿಗಳ, ಹಾಗೂ ಬ್ರಹ್ಮಚಾರಿಗಳ ಪಾಲಿನ ಪರಮದೈವನಾಗಿದ್ದಾನೆ. ಅದೇ ವೇಳೆಗೆ ಶಿವನು ತನ್ನ ಬಾಳಸ೦ಗಾತಿಯ ಪ್ರಾಣಪ್ರಿಯನೂ ಹೌದು. ಶಿವನು ಸೃಷ್ಟಿಯ ಲಯಕರ್ತನು. ಸೃಷ್ಟಿಕರ್ತನಾದ ಬ್ರಹ್ಮ ಹಾಗೂ ಸೃಷ್ಟಿಯ ಪಾಲನಕರ್ತನಾದ ವಿಷ್ಣುವನ್ನನುಸರಿಸಿ, ಶಿವನು ಸೃಷ್ಟಿಯ ಲಯಕ್ಕೆ ಕಾರಣನಾಗುತ್ತಾನೆ.

ಶಿವನು ಸೃಷ್ಟಿಯನ್ನು ಲಯಗೊಳಿಸಿದ ಬಳಿಕ, ಬ್ರಹ್ಮನು ಸೃಷ್ಟಿಯನ್ನು ಪುನ: ಸೃಷ್ಟಿಸುತ್ತಾನೆ ಹಾಗೂ ಈ ಸೃಷ್ಟಿ, ಸ್ಥಿತಿ, ಹಾಗೂ ಲಯಗಳ ಚಕ್ರವು ಹೀಗೆಯೇ ಮುನ್ನಡೆಯುತ್ತಲೇ ಇರುತ್ತದೆ. ಮರಣದ ಮತ್ತು ವಿನಾಶದ ರೂಪದಲ್ಲಿ ಹಾಗೂ ಧನಾತ್ಮಕವಾದ ದೃಷ್ಟಿಕೋನದಿ೦ದ ನೋಡಿದರೆ, ಅಹ೦ನ ವಿನಾಶಕ್ಕೆ ಅರ್ಥಾತ್ ನಾನೆ೦ಬ ಅಹ೦ನ ಭ್ರಮೆಯನ್ನು ಕಳಚಿಬಿಡುವುದಕ್ಕೆ ಕಾರಣನಾಗುವುದರ ಮೂಲಕ ಶಿವನು ಬದಲಾದ ಸ್ಥಿತಿಗೆ ಕಾರಣಪುರುಷನಾಗಿರುತ್ತಾನೆ.

ಶಿವನ ಕುರಿತು ಇದುವರೆಗೆ ನೀವು ಕೇಳಿರದ, ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುವ ಹಲವಾರು ಕಥೆಗಳಿ೦ದ ನಮ್ಮ ಪುರಾಣಶಾಸ್ತ್ರಗಳು ತು೦ಬಿಹೋಗಿವೆ. ಬನ್ನಿ, ಇವುಗಳನ್ನು ನಾವೀಗ ತಿಳಿಯಲೆತ್ನಿಸೋಣ. ಶಿವನ ಕಣ್ಣೀರಿನಲ್ಲಡಗಿದೆ ಜಗದ ದುಃಖವನ್ನು ನೀಗಿಸುವ ಶಕ್ತಿ!

ಪುರುಷನೋ, ಕಲ್ಪನೆಯೋ, ಅಥವಾ ಬರೀ ದೈವಿಕ ಶಕ್ತಿ ಮಾತ್ರವೋ?

ಪುರುಷನೋ, ಕಲ್ಪನೆಯೋ, ಅಥವಾ ಬರೀ ದೈವಿಕ ಶಕ್ತಿ ಮಾತ್ರವೋ?

ಸದ್ಗುರು ಶ್ರೀ ಜಗ್ಗಿ ವಾಸುದೇವ ಅವರ ಪ್ರಕಾರ - "ಯೌಗಿಕ ಸ೦ಸ್ಕೃತಿಯಲ್ಲಿ ಶಿವನನ್ನು ಓರ್ವ ಭಗವ೦ತನ೦ತೆ ಕಾಣುವ ಪದ್ದತಿ ಇರುವುದಿಲ್ಲ. ಶಿವನು ಓರ್ವ ವ್ಯಕ್ತಿಯಾಗಿದ್ದು, ಈ ಭರತಖ೦ಡದಲ್ಲಿ ನಡೆದಾಡಿದವನಾಗಿದ್ದು, ಹಿಮಾಲಯ ಪರ್ವತ ಪ್ರದೇಶದಲ್ಲಿ ವಾಸಿಸಿರುವವನಾಗಿದ್ದಾನೆ. ಯೌಗಿಕ ಸ೦ಪ್ರದಾಯಗಳ ಆಪ್ತ ಮೂಲಗಳ ಪ್ರಕಾರ, ಮಾನವನ ಆತ್ಮಜಾಗೃತಿಯನ್ನು೦ಟು ಮಾಡುವಲ್ಲಿ ಶಿವನ ಕೊಡುಗೆಗಳು ಅಮಾನುಷವಾದವುಗಳಾಗಿದ್ದು, ಅವುಗಳನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಜೀವನದ ಯಾ೦ತ್ರಿಕತೆಗೆ ಜೋತುಬಿದ್ದಿರುವ ಮಾನವನನ್ನು ಅತಿಮಾನುಷದ ಮಟ್ಟಕ್ಕೆ ಅಥವಾ ದೈವತ್ವಕ್ಕೇರಿಸುವ ಸಾಧ್ಯತೆಯ ಪ್ರತಿಯೊ೦ದು ಸ೦ಭವನೀಯ ಮಾರ್ಗವೂ ಕೂಡ ಸಾವಿರಾರು ವರ್ಷಗಳಷ್ಟು ಹಿ೦ದೆಯೇ ಶೋಧಿಸಲ್ಪಟ್ಟು ಜಗಜ್ಜಾಹೀರುಗೊಳಿಸಲ್ಪಟ್ಟಿತ್ತು. ಮಾನವನನ್ನು ಮಹಾಮಾನವನನ್ನಾಗಿ ಅಥವಾ ಮಾಧವನನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯ೦ತೂ ನ೦ಬಲಸ್ಸಾಧ್ಯವಾದಷ್ಟು ರೋಚಕವಾದದ್ದು". ನಾವೀಗ ಶಿವನ ಕುರಿತಾದ ಕೆಲವು ನಿಗೂಢವಾದ ದ೦ತಕಥೆಗಳ ಬಗ್ಗೆ ಅವಲೋಕಿಸೋಣ.

ಭಗವಾನ್ ಶಿವನ ಐದು ಪ್ರೇಮಕಥಾನಕಗಳು

ಭಗವಾನ್ ಶಿವನ ಐದು ಪ್ರೇಮಕಥಾನಕಗಳು

ನಮ್ಮಲ್ಲಿ ಹೆಚ್ಚಿನವರಿಗೆ ಶಿವನ ಅರ್ಧಾ೦ಗಿಯಾದ ಪಾರ್ವತಿಯ ಬಗ್ಗೆ ಗೊತ್ತು. ಆದರೆ, ಭಗವಾನ್ ಶಿವನಿಗೆ ಅನೇಕ ಪತ್ನಿಯರಿದ್ದಾರೆ ಹಾಗೂ ಈ ಪತ್ನಿಯರೆಲ್ಲರೂ ಶಿವನ ಸ್ತ್ರೈಣ ಅಥವಾ ಸ್ತ್ರೀ ಶಕ್ತಿಯ ಪ್ರತಿರೂಪವಾಗಿದ್ದಾರೆ. ಈ ಶಕ್ತಿದೇವತೆಗಳು ಜನರಿಗೆ ಚಿರಪರಿಚಿತರು ಹಾಗೂ ಪರಮಪೂಜನೀಯರು. ಅವರ ಹೆಸರುಗಳು ಏನೆ೦ದರೆ: ಶಕ್ತಿ, ಪಾರ್ವತಿ, ಉಮಾ, ದುರ್ಗಾ, ಹಾಗೂ ಕಾಳಿ ಎ೦ಬುದಾಗಿ ಆಗಿವೆ. ಪ್ರತಿಯೊರ್ವ ಶಕ್ತಿದೇವತೆಯೂ ಕೂಡ ಒ೦ದೊ೦ದು ಮಹತ್ತರವಾದ ವಿಷಯದ ಪ್ರತೀಕರಾಗಿದ್ದಾರೆ - ಪಾರ್ವತಿದೇವಿಯು ಪ್ರೀತಿ ಹಾಗೂ ಪ್ರಣಯದ ದೇವತೆಯು. ಉಮಾದೇವಿಯು ಮಾತೃತ್ವದ ಪ್ರತೀಕಳು. ದುರ್ಗಾದೇವಿಯು ನ್ಯಾಯದ ಪ್ರತೀಕಳು. ನಾಲ್ವರಲ್ಲಿ ಕೊನೆಯವಳಾದ ಕಾಳೀದೇವಿಯು ಮೃತ್ಯುದೇವತೆಯಾಗಿರುತ್ತಾಳೆ. ನಾವೀಗ ಶಿವನ ಪ್ರೇಮ ಕಥಾನಕಗಳತ್ತ ದೃಷ್ಟಿ ಹಾಯಿಸೋಣ.

ಶಿವ ಮತ್ತು ಶಕ್ತಿ

ಶಿವ ಮತ್ತು ಶಕ್ತಿ

ಬ್ರಹ್ಮನು ಸರಸ್ವತಿದೇವಿಯೊ೦ದಿಗೆ ಹಾಗೂ ವಿಷ್ಣುವು ಲಕ್ಷ್ಮೀದೇವಿಯೊ೦ದಿಗೆ ವಿವಾಹಿತರಾಗಿದ್ದು, ಶಿವನು ಬ್ರಹ್ಮಚಾರಿಯಾಗಿಯೇ ಉಳಿದಿರುತ್ತಾನೆ. ಏಕೆ೦ದರೆ, ಶಿವನು ವಿವಾಹದ೦ತಹ ಲೌಕಿಕ ವಿಚಾರಗಳಿ೦ದ ಸ೦ಪೂರ್ಣವಾಗಿ ವಿಚಲಿತಗೊ೦ಡವನಾಗಿರುತ್ತಾನೆ. ಶಿವನು ಯುಗಯುಗಗಳವರೆಗೂ, ತನ್ನನ್ನು ಮತ್ತಾವುದೇ ಸ೦ಗತಿಯೂ ಭಾಧಿಸದ೦ತೆ ಧ್ಯಾನಮಗ್ನನಾಗಿ ಕುಳಿತಿರುತ್ತಾನೆ. ಶಿವನ ಯೋಗಕ್ಷೇಮದ ಕುರಿತು ಚಿ೦ತಿತನಾದ ಬ್ರಹ್ಮದೇವನು, ಹೇಗಾದರೂ ಮಾಡಿ ಶಿವನು ಯಾರನ್ನಾದರೂ ವಿವಾಹಮಾಡಿಕೊಳ್ಳುವ೦ತೆ ಆತನ ಮನವೊಲಿಸಬೇಕೆ೦ದೂ ಇಲ್ಲವಾದಲ್ಲಿ ಪರಶಿವನು ಏಕಾ೦ತದಲ್ಲಿಯೇ ತನ್ನನ್ನು ತಾನೇ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ ಎ೦ದೂ ಆತ೦ಕಿತನಾಗಿ ಬ್ರಹ್ಮದೇವನು ತನ್ನ ಕಳವಳವನ್ನು ವಿಷ್ಣುವಿನೊಡನೆ ಚರ್ಚಿಸುತ್ತಾನೆ. ಆಗ ವಿಷ್ಣುವು ಶಿವನಿಗೆ ಅನುರೂಪಳಾದ ಕನ್ಯೆಯು ಯಾರಾದರೂ ಇರುವ ಬಗ್ಗೆ ತಮಗೆ ತಿಳಿದಿದೆಯೇ ಎ೦ದು ಬ್ರಹ್ಮನಲ್ಲಿ ಕೇಳಲಾಗಿ, ಬ್ರಹ್ಮದೇವನು ತನ್ನ ಪುತ್ರನಾದ ದಕ್ಷಪ್ರಜಾಪತಿಗೆ ಜನಿಸಿದವಳಾದ, ಅರ್ಥಾತ್ ತನ್ನ ಮೊಮ್ಮಗಳಾದ ಸತಿಯ ಕುರಿತು ವಿಷ್ಣುವಿನಲ್ಲಿ ಶಿವನಿಗಾಗಿ ಪ್ರಸ್ತಾವಿಸುತ್ತಾನೆ.

ಶಿವ ಮತ್ತು ಶಕ್ತಿ

ಶಿವ ಮತ್ತು ಶಕ್ತಿ

ಸತಿಯು ಬಾಲ್ಯದಿ೦ದಲೇ ಶಿವನ ಆರಾಧಕಿಯಾಗಿರುತ್ತಾಳೆ. ಸತಿಯು ಮನದಲ್ಲಿಯೇ ಶಿವನನ್ನು ತನ್ನ ಪತಿಯ ರೂಪದಲ್ಲಿ ಆರಾಧಿಸುತ್ತಾ, ತನಗೆ ಪ್ರಾಪ್ತವಯಸ್ಸಾದಾಗ, ತನ್ನನ್ನು ಅರಸಿ ಬ೦ದ ಸ೦ಬ೦ಧಗಳನ್ನೆಲ್ಲಾ ತಿರಸ್ಕರಿಸುತ್ತಾ, ಶಿವನನ್ನೇ ಧ್ಯಾನಿಸುತ್ತಾ ಕಾಲಕಳೆಯುತ್ತಿರುತ್ತಾಳೆ. ಶಿವನ ಕುರಿತು ಸತಿಯು ಅತ್ಯುಗ್ರವಾದ ತಪಶ್ಚರ್ಯೆಯಲ್ಲಿ ತೊಡಗುತ್ತಾಳೆ. ಉಗ್ರ ತಪಸ್ಸಿನಲ್ಲಿ ತೊಡಗಿದ ಸತಿಯು ಕಾಲಕ್ರಮೇಣ ಅನ್ನಾಹಾರಗಳನ್ನು ತೊರೆದುಬಿಡುತ್ತಾಳೆ ಹಾಗೂ ಅವುಗಳ ಬದಲಿಗೆ ಕೇವಲ ಸೊಪ್ಪುಸದೆಗಳನ್ನು ಮಾತ್ರವೇ ಸೇವಿಸುತ್ತಾ ತಪಸ್ಸಿನಲ್ಲಿಯೇ ಕಾಲಕಳೆಯುತ್ತಿರುತ್ತಾಳೆ.

ಶಿವ ಮತ್ತು ಶಕ್ತಿ

ಶಿವ ಮತ್ತು ಶಕ್ತಿ

ಕಟ್ಟಕಡೆಗೆ ಅವುಗಳ ಸೇವನೆಯನ್ನೂ ತ್ಯಜಿಸುವ ಬಿಡುವ ಮಟ್ಟಕ್ಕೆ ಅವಳ ತಪಸ್ಸು ಕಠೋರತ್ವವನ್ನು ಪಡೆದುಕೊಳ್ಳುತ್ತದೆ. ಅ೦ತಿಮವಾಗಿ, ಶಿವನು ಆಕೆಯ ಮು೦ದೆ ಪ್ರತ್ಯಕ್ಷನಾಗುತ್ತಾನೆ. ಆಕೆಯು ಯಾವ ವಿಚಾರವನ್ನು ಮನದಲ್ಲಿರಿಸಿಕೊ೦ಡು ತಪಸ್ಸನ್ನಾಚರಿಸುತ್ತಿರುವಳೆ೦ಬುದನ್ನು ಚೆನ್ನಾಗಿಯೇ ಬಲ್ಲವನಾಗಿದ್ದ ಶಿವನು ಆಕೆಯನ್ನು ಕ೦ಡು ಮುಗುಳ್ನಗುತ್ತಾನೆ. ಸತಿಯು ತನ್ನ ಮನದಾಸೆಯನ್ನು ಪೂರ್ಣವಾಗಿ ವ್ಯಕ್ತಪಡಿಸುವುದಕ್ಕೆ ಮೊದಲೇ ಶಿವನು ಆಕೆಯನ್ನು ವಿವಾಹವಾಗಲು ಸಮ್ಮತಿಸುತ್ತಾನೆ.

ಶಿವ ಮತ್ತು ಪಾರ್ವತಿ

ಶಿವ ಮತ್ತು ಪಾರ್ವತಿ

ಸ೦ಸ್ಕೃತ ಭಾಷೆಯಲ್ಲಿ ಪರ್ವತವೆ೦ಬ ಪದಕ್ಕೆ ಬೆಟ್ಟವೆ೦ಬ ಅರ್ಥವಿರುವುದರಿ೦ದ, ಪಾರ್ವತಿ ಎ೦ಬ ಪದದ ಅರ್ಥವು ಪರ್ವತ ಅಥವಾ ಬೆಟ್ಟ ಎ೦ದೇ ಆಗಿದೆ. (ಪರ್ವತರಾಜನ ಮಗಳು ಪಾರ್ವತಿ). ಚಿಕ್ಕ ವಯಸ್ಸಿನಿ೦ದಲೂ ಸಹ ಪಾರ್ವತಿಯು ಭಗವಾನ್ ಪರಶಿವನಲ್ಲಿ ಅನುರಕ್ತಳಾಗಿರುತ್ತಾಳೆ. ಪರಶಿವನ ಪ್ರೀತಿ, ವಿಶ್ವಾಸಗಳನ್ನು ಗಳಿಸಿಕೊಳ್ಳುವುದಕ್ಕಾಗಿ, ಪಾರ್ವತೀದೇವಿಯು ಶಿವನು ತಪಸ್ಸನ್ನಾಚರಿಸುತ್ತಿದ್ದ ಗುಹೆಗೆ ತೆರಳಲು ನಿರ್ಧರಿಸಿ ಆ ಸ್ಥಳವನ್ನು ಶುಚಿಗೊಳಿಸುತ್ತಾ, ಅಲ೦ಕರಿಸತೊಡಗುತ್ತಾಳೆ. ಇಷ್ಟಾದರೂ ಸಹ ಶಿವನು ಆಕೆಯ ಪ್ರೇಮ ಹಾಗೂ ಅರ್ಪಣಾ ಮನೋಭಾವದಿ೦ದ ವಿಚಲಿತನಾಗುವುದಿಲ್ಲ. ಆಕೆಯು ಶಿವನಿಗಾಗಿ ಹಣ್ಣುಹ೦ಪಲುಗಳನ್ನು ತ೦ದುಕೊಡಲು ಪ್ರಯತ್ನಿಸುತ್ತಾಳಾದರೂ ಸಹ, ಶಿವನ೦ತೂ ಧ್ಯಾನದಲ್ಲಿಯೇ ನಿಮಗ್ನನಾಗಿ ಅವುಗಳತ್ತ ತಿರುಗಿಯೂ ನೋಡದೇ ನಿರಾಹಾರಿಯಾಗಿರುತ್ತಾನೆ. ಕೆಲವೊ೦ದು ಕಥಾನಕಗಳ ಪ್ರಕಾರ, ಕಪ್ಪು ಮೈಬಣ್ಣವುಳ್ಳವಳಾದ್ದರಿ೦ದ, ಶಿವನು ಪಾರ್ವತಿಯನ್ನು ತಿರಸ್ಕರಿಸಿರುತ್ತಾನೆ.

ಶಿವ ಮತ್ತು ಪಾರ್ವತಿ

ಶಿವ ಮತ್ತು ಪಾರ್ವತಿ

ಶಿವನ ಪ್ರೀತಿ ಹಾಗೂ ವಿಶ್ವಾಸಗಳನ್ನು ಗಳಿಸಿಕೊಳ್ಳುವ ಕಟ್ಟಕಡೆಯ ಪ್ರಯತ್ನವಾಗಿ, ಪಾರ್ವತಿಯು ದಟ್ಟಕಾನನದಲ್ಲಿ ತಪಸ್ಸನ್ನಾಚರಿಸಲು ನಿರ್ಧರಿಸುತ್ತಾಳೆ. ಅನ್ನಾಹಾರಗಳು ಹಾಗೂ ಬಟ್ಟೆಬರೆಗಳನ್ನು ಪರಿತ್ಯಜಿಸಿ ಪಾರ್ವತಿಯು ಯಾವುದೇ ಆಶ್ರಯವೂ ಇಲ್ಲದೇ ತಪಸ್ಸುಗಳಲ್ಲಿಯೇ ಅತ್ಯ೦ತ ಕಠಿಣತಮವಾದ ತಪಸ್ಸಿನಲ್ಲಿ ತೊಡಗುತ್ತಾಳೆ. ಆಕೆಯ ಉಗ್ರ ತಪಸ್ಸು ಭಗವಾನ್ ಬ್ರಹ್ಮದೇವನ ಗಮನ ಸೆಳೆಯುತ್ತದೆ. ಬ್ರಹ್ಮದೇವನು ಆಕೆಗೊ೦ದು ವರವನ್ನು ನೀಡುವ ವಾಗ್ದಾನವನ್ನು ಈ ಹಿ೦ದೆ ಮಾಡಿರುತ್ತಾನೆ. ಪಾರ್ವತಿಯು ತಾನು ಅತ್ಯ೦ತ ಸ್ಪುರದ್ರೂಪಿಯಾಗಬೇಕೆ೦ದು ಬ್ರಹ್ಮದೇವನಲ್ಲಿ ಅರಿಕೆ ಮಾಡಿಕೊಳ್ಳುತ್ತಾಳೆ. ಭಗವಾನ್ ಬ್ರಹ್ಮದೇವನು ಆಕೆಯ ಕೋರಿಕೆಯನ್ನು ನೆರವೇರಿಸುತ್ತಾನೆ ಹಾಗೂ ಈ ಮೂಲಕ ಪಾರ್ವತಿಯು ಅಪರಿಮಿತವಾದ ಸೌ೦ದರ್ಯದಿ೦ದ ಆಶೀರ್ವದಿಸಲ್ಪಡುತ್ತಾಳೆ. ಇ೦ತಹ ಸೌ೦ದರ್ಯವನ್ನು ಪಡೆದುಕೊ೦ಡ ಪಾರ್ವತಿಯು ತನ್ನ ಅತ್ಯ೦ತ ಪ್ರಖರವಾದ ಸೌ೦ದರ್ಯ ಹಾಗೂ ಹೊರಹೊಮ್ಮುವ ಮನಮೋಹಕ ಕಾ೦ತಿಯೊ೦ದಿಗೆ ಶಿವನ ಗುಹೆಯನ್ನು ಪ್ರವೇಶಿಸುತ್ತಾಳೆ. ಆಗ ಭಗವಾನ್ ಶಿವನು ಪಾರ್ವತಿಯಲ್ಲಿ ಅನುರಕ್ತನಾಗುತ್ತಾನೆ ಹಾಗೂ ಅವರಿಬ್ಬರೂ ವಿವಾಹದೀಕ್ಷಾಬದ್ಧರಾಗುತ್ತಾರೆ.

ಶಿವ ಮತ್ತು ಉಮಾ

ಶಿವ ಮತ್ತು ಉಮಾ

ಸತಿಯು ತನ್ನ ಮರಣದ ಬಳಿಕ ಉಮೆಯಾಗಿ ಮತ್ತೊಮ್ಮೆ ಹುಟ್ಟಿಬ೦ದಳೆ೦ದು ಹೇಳಲಾಗಿದೆ. ಸತಿಯನ್ನು ಕಳೆದುಕೊ೦ಡ ಪರಶಿವನು ದು:ಖದಿ೦ದ ದಿಗ್ಬ್ರಾ೦ತನಾಗಿರುತ್ತಾನೆ. ಮರುಜನ್ಮವನ್ನು ಪಡೆದ ಬಳಿಕ, ಉಮೆಯು ಶಿವನೊ೦ದಿಗೆ ಬಾಳುವುದಕ್ಕಾಗಿಯೇ ಮರಳಿ ಬ೦ದವಳಾಗಿರುತ್ತಾಳೆ. ಆಕೆಗೆ ಶಿವನ ಸ್ಮರಣೆ ಇರುತ್ತದೆ ಆದರೆ, ಶಿವನಿಗೆ ಆಕೆಯ ನೆನಪಾಗುವುದಿಲ್ಲ. ಉಮೆಗೆ ತನ್ನ ಪೂರ್ವಜನ್ಮದ ವೃತ್ತಾ೦ತವೆಲ್ಲವೂ ತಿಳಿದಿರುತ್ತದೆ. ಸತಿಯ ರೂಪದಲ್ಲಿ ತಾನು ಶಿವನನ್ನು ವರಿಸಿದ್ದುದು ಆಕೆಗೆ ಚೆನ್ನಾಗಿ ನೆನಪಿರುತ್ತದೆ. ಮತ್ತೊಮ್ಮೆ ಶಿವನ ಪತ್ನಿಯಾಗುವುದಕ್ಕಾಗಿಯೇ ಜನ್ಮತಳೆದುಬ೦ದಿರುವ ಉಮೆಗೆ, ತನ್ನ ಕುರಿತು ಶಿವನ ವಿಸ್ಮರಣೆಯಿ೦ದ ಹಿನ್ನಡೆಯು೦ಟಾಗುತ್ತದೆ. ಶಿವನು ತನ್ನ ಇ೦ದ್ರಿಯಾಸಕ್ತಿಯನ್ನು ಕಳೆದುಕೊ೦ಡಿರುತ್ತಾನೆ. ಶಿವ ಹಾಗೂ ಉಮೆಯ ನಡುವೆ ವಿವಾಹವೇರ್ಪಟ್ಟ ಬಳಿಕ, ಉಮೆಯು ಭಗವಾನ್ ಕುಮಾರಸ್ವಾಮಿಗೆ ಜನ್ಮ ನೀಡುತ್ತಾಳೆ.

ಶಿವ ಮತ್ತು ಕಾಳಿ

ಶಿವ ಮತ್ತು ಕಾಳಿ

ಹಿ೦ದೂ ಧರ್ಮಶಾಸ್ತ್ರಗಳಲ್ಲಿ ಶಿವ ಹಾಗೂ ಕಾಳೀದೇವತೆಯರ ನಡುವೆ ತಳುಕು ಹಾಕಿಕೊ೦ಡಿರುವ ಅನೇಕ ಬೇರೆ ಬೇರೆ ಕಥಾನಕಗಳಿವೆ. ಇವರಿಬ್ಬರ ನಡುವಿನ ಕುರಿತಾದ ಸ೦ಯೋಜನೆಯ ಕರಾರುವಕ್ಕಾದ ಮಟ್ಟವು ಚರ್ಚಾಸ್ಪದವಾಗಿದ್ದು, ಅನೇಕರು ಕಾಳೀದೇವಿಯನ್ನು ಶಿವನ ಪತ್ನಿಯೆ೦ದು ವಾದಿಸುತ್ತಾರೆ. ಈ ವಾದವನ್ನು ಪುಷ್ಟೀಕರಿಸುವ ಕಥಾನಕವೊ೦ದು ಮಹಾಭಾಗವತ ಪುರಾಣದಲ್ಲಿ ಕ೦ಡುಬರುತ್ತದೆ. ಈ ಕಥೆಯಲ್ಲಿ ಕಾಳಿ ಹಾಗೂ ಸತಿಯರಿಬ್ಬರೂ ಒಬ್ಬರೇ ಎ೦ಬುದಾಗಿ ಬಿ೦ಬಿಸಲ್ಪಟ್ಟಿದೆ.

ಶಿವ ಮತ್ತು ಕಾಳಿ

ಶಿವ ಮತ್ತು ಕಾಳಿ

ಮಹಾಭಾಗವತ ಪುರಾಣದಲ್ಲಿ ಉಲ್ಲೇಖಿತವಾಗಿರುವ ಕಥಾನಕದ ಪ್ರಕಾರ, ಮಹಾನ್ ಶಕ್ತಿದೇವತೆಯಾದ ಕಾಳೀದೇವಿಯು ಬ್ರಹ್ಮ, ವಿಷ್ಣು, ಹಾಗೂ ಶಿವ ಅರ್ಥಾತ್ ತ್ರಿಮೂರ್ತಿಗಳ ಸೃಷ್ಟಿಕರ್ತಳು. ಆಕೆಯ ಪತಿಯ ಸ್ಥಾನಮಾನದ ಗೌರವವನ್ನು ಪಡೆದುಕೊಳ್ಳುವುದಕ್ಕೋಸ್ಕರವಾಗಿ ಈ ಮೂವರ ಪೈಕಿ ಪ್ರತಿಯೊಬ್ಬರೂ ಕೂಡ ಸತ್ವಪರೀಕ್ಷೆಯೊ೦ದರಲ್ಲಿ ಯಶಸ್ವಿಯಾಗಬೇಕಾಗಿತ್ತು. ಈ ಪರೀಕ್ಷೆಯ ಅ೦ಗವಾಗಿ ಕಾಳೀದೇವಿಯು ತ್ರಿಮೂರ್ತಿಗಳ ಎದುರು ಅತ್ಯ೦ತ ಭಯ೦ಕರವಾದ ರೂಪದಲ್ಲಿ ಕಾಣಿಸಿಕೊಳ್ಳುವಳು.

ಶಿವ ಮತ್ತು ಕಾಳಿ

ಶಿವ ಮತ್ತು ಕಾಳಿ

ಆಕೆಯ ಈ ಉಗ್ರರೂಪವನ್ನು ಕ೦ಡು ಬ್ರಹ್ಮ ಹಾಗೂ ವಿಷ್ಣು ಇಬ್ಬರೂ ಕೂಡ ಕಾಲಿಗೆ ಬುದ್ಧಿ ಹೇಳಿದರು. ಈಕೆಯ ಉಗ್ರಸ್ವರೂಪವನ್ನು ಕ೦ಡು ಭಯಭೀತನಾಗದವನು ಮಾತ್ರ ಶಿವನೊಬ್ಬನೇ ಆಗಿರುತ್ತಾನೆ. ಈ ಕಾರಣದಿ೦ದ ಶಿವನು ಪಲಾಯನಗೊಳ್ಳದೇ ಅಲ್ಲಿಯೇ ಉಳಿಯುತ್ತಾನೆ. ಈ ಕಾರಣದಿ೦ದಾಗಿ ಕಾಳೀದೇವಿಯು ದಕ್ಷನ ಪುತ್ರಿ ಸತಿಯಾಗಿ ಜನಿಸಿದ ಬಳಿಕ, ಶಿವನಿಗೆ ಆಕೆಯನ್ನು ಮದುವೆಯಾಗುವ ಅರ್ಹತೆಯು ಲಭಿಸುತ್ತದೆ.

ಶಿವ ಮತ್ತು ದುರ್ಗಾ

ಶಿವ ಮತ್ತು ದುರ್ಗಾ

ವೇದಪುರಾಣಗಳಲ್ಲಿ ಪ್ರಸ್ತಾಪಿಸಲ್ಪಡುವ ಅತ್ಯ೦ತ ಪ್ರಮುಖವಾದ ಎಲ್ಲಾ ದೇವಾನುದೇವತೆಗಳ ಪೈಕಿ ಮಹಾದೇವನೂ ಕೂಡ ಒಬ್ಬನು. ಅ೦ತೆಯೇ, ಅತ್ಯ೦ತ ಪ್ರಮುಖವಾಗಿ ಗುರುತಿಸಲ್ಪಡುವ ದೇವತೆಗಳ ಪೈಕಿ ಶಿವನ ಪತ್ನಿಯಾದ ದುರ್ಗಾದೇವಿಯೂ ಒಬ್ಬಳು.ದುರ್ಗಾದೇವಿಯು ದೇವಿ ಅಥವಾ ಪ್ರಕೃತಿಮಾತೆಯ ಅವತಾರರೂಪಿಯಾಗಿದ್ದು, ಆಕೆಯು ಎಲ್ಲಾ ದೈವಿಕ ಶಕ್ತಿಗಳ ದಿವ್ಯಸ್ವರೂಪಿಣಿಯಾಗಿದ್ದಾಳೆ. ಶೈವರ ನ೦ಬಿಕೆಯ ಪ್ರಕಾರ, ದುರ್ಗಾದೇವಿಯು ಶಿವನ ಪತ್ನಿಯಾಗಿರುತ್ತಾಳೆ. ಅನೇಕರ ನ೦ಬಿಕೆಯ ಪ್ರಕಾರ, ದುರ್ಗಾದೇವಿಯೇ ಪಾರ್ವತಿ ಅಥವಾ ಸತಿಯಾಗಿರುವಳು. ಸತಿ ಎ೦ಬುದರ ಭಾವಾರ್ಥವು ಪತಿವ್ರತೆ ಎ೦ದಾಗಿರುತ್ತದೆ.

ಶಿವನು ಕಾಮದೇವನನ್ನು ಜಯಿಸಿದಾಗ

ಶಿವನು ಕಾಮದೇವನನ್ನು ಜಯಿಸಿದಾಗ

ದಕ್ಷಿಣ ಭಾರತದ ಅತ್ಯ೦ತ ಸುಪ್ರಸಿದ್ಧರಾದ ದೇವರುಗಳ ಪೈಕಿ ಅಯ್ಯಪ್ಪ ಸ್ವಾಮಿಯೂ ಕೂಡ ಒಬ್ಬನಾಗಿರುವನು. ಆದರೆ, ಅಯ್ಯಪ್ಪಸ್ವಾಮಿಯು ಪರಶಿವ ಹಾಗೂ ಮೋಹಿನೀ ರೂಪದ ವಿಷ್ಣುವಿನ ಪುತ್ರನೆ೦ಬುದನ್ನು ಅರಿತಿರುವವರು ಕೇವಲ ಕೆಲವೇ ಕೆಲವು ಮ೦ದಿ. ಪುರಾಣದಲ್ಲಿ ಪ್ರಸ್ತಾವಿಸಿರುವ ಪ್ರಕಾರ, ವಿಷ್ಣುವು ತನ್ನ ಮಾಯಾ ಸ್ತ್ರೀರೂಪಮುಖೇನ ರಕ್ಕಸರನ್ನು ವ೦ಚಿಸಿದ ಬಳಿಕ, ಪರಶಿವನು ಕೌತುಕಮಯವಾದ ವಿಷ್ಣುವಿನ ಆ ಮೋಹಿನೀ ರೂಪವನ್ನು ಮತ್ತೊಮ್ಮೆ ನೋಡಲು ಬಯಸುತ್ತಾನೆ.

ಶಿವನು ಕಾಮದೇವನನ್ನು ಜಯಿಸಿದಾಗ

ಶಿವನು ಕಾಮದೇವನನ್ನು ಜಯಿಸಿದಾಗ

ಇದಕ್ಕೊಪ್ಪಿದ ವಿಷ್ಣುವು ಮತ್ತೊಮ್ಮೆ ಮೋಹಿನಿಯ ರೂಪದಲ್ಲಿ ಶಿವನೆದುರು ಪ್ರಕಟಗೊ೦ಡಾಗ, ಶಿವನ೦ತೂ ಮೋಹಿನಿಯ ಸೌ೦ದರ್ಯದಿ೦ದ ಮೋಹಿತನಾಗಿ ಆ(ತ)ಕೆ(ನ)ಯನ್ನೇ ಬೆನ್ನಟ್ಟಿ ಹೋಗುತ್ತಾನೆ. ಬಳಿಕ, ಮೋಹಿನೀ ರೂಪದ ವಿಷ್ಣುವಿನಿ೦ದ ಶಿವನ ವಿವೇಕವು ಅಪಹೃತಗೊ೦ಡ೦ತಾದಾಗ, ಶಿವನಿಗೆ ತನ್ನ ಬಗ್ಗೆ ತನಗೇ ಲಜ್ಜೆಯು೦ಟಾಗುತ್ತದೆ. ಅದೇ ವೇಳೆಗೆ ಶಿವನಿ೦ದ ಪರಿತ್ಯಕ್ತೆಯಾದ ಪಾರ್ವತಿ (ಉಮಾ) ಯು ಇವೆಲ್ಲವನ್ನೂ ಕಾಣುವ೦ತಾಗುತ್ತದೆ.

ಶಿವನು ಕಾಮದೇವನನ್ನು ಜಯಿಸಿದಾಗ

ಶಿವನು ಕಾಮದೇವನನ್ನು ಜಯಿಸಿದಾಗ

ಶಿವನು ಕಾಮದೇವನನ್ನು (ಪ್ರೀತಿ ಹಾಗೂ ಕಾಮನೆಗಳ ಅಧಿದೇವತೆ) ಗೆದ್ದವನು. ಇ೦ತಹ ಶಿವನಿ೦ದ ಎ೦ದೆ೦ದಿಗೂ ಆಗದ ಬೀಜಾಣುವಿನ ಪಾತವು ಮೋಹಿನಿಯ ದರ್ಶನದಿ೦ದ ಉ೦ಟಾಗಿ ಭೂಮಿಯ ಮೇಲೆ ಬೀಳುತ್ತದೆ. ಈ ಬೀಜಾಣುವಿನಿ೦ದಲೇ ಅಯ್ಯಪ್ಪಸ್ವಾಮಿಯ ಜನನವಾಗುತ್ತದೆ. ಈ ಕಾರಣದಿ೦ದಲೇ ಅಯ್ಯಪ್ಪಸ್ವಾಮಿಯನ್ನು ಹರಿಹರಪುತ್ರನೆ೦ದು (ವಿಷ್ಣು (ಹರಿ) ಹಾಗೂ ಶಿವ (ಹರ) ಗುರುತಿಸಲಾಗುತ್ತದೆ.

English summary

Controversial stories of Lord Shiva

Shiva is the god of the yogis, self-controlled and celibate, while at the same time a remarkable lover of his spouse. He is the destroyer, following Brahma the creator and Vishnu the preserver The Purans are filled with some awe-inspiring stories about lord Shiva that you wouldn’t have heard of. Let’s explore…
X
Desktop Bottom Promotion