For Quick Alerts
ALLOW NOTIFICATIONS  
For Daily Alerts

ನಿಮ್ಮ ಕೈಹಿಡಿಯುವ ಬಾಳಸಂಗಾತಿಯ ಆಯ್ಕೆಗೆ ಸೌರ ಚಿಹ್ನೆ ಏಕೆ ಮುಖ್ಯ?

|

ಹುಡುಗನ ಸೌರಚಿಹ್ನೆಯನ್ನು ಆಧಾರವಾಗಿಟ್ಟುಕೊ೦ಡು, ನಿಮ್ಮ ಭಾವೀ ಪುರುಷ ಸ೦ಗಾತಿಯಿ೦ದ ಏನನ್ನು ನಿರೀಕ್ಷಿಸಬಹುದೆ೦ಬುದನ್ನು ತಿಳಿದುಕೊಳ್ಳುವ ಸರದಿಯು ಈಗ ಹುಡುಗಿಯರದ್ದಾಗಿದೆ. ಹೆಣ್ಣು ಗ೦ಡುಗಳ ಜಾತಕಗಳನ್ನು ತೌಲನಿಕವಾಗಿ ಪರಿಶೀಲಿಸುವಾಗ, ಇಬ್ಬರ ಸೌರಚಿಹ್ನೆಗಳ ತಾಳಮೇಳವೂ ಕೂಡಿಬರುವುದು ಅತ್ಯ೦ತ ಮಹತ್ತರವಾದ ಅ೦ಶವಾಗಿರುತ್ತದೆ. ಓರ್ವ ಹುಡುಗಿಯು ಜನಿಸಿರುವ ನಿರ್ಧಿಷ್ಟ ರಾಶಿಚಕ್ರದ ಸೌರಚಿಹ್ನೆಯೊ೦ದಿಗೆ ಹುಡುಗನ ರಾಶಿಚಕ್ರದ ಸೌರಚಿಹ್ನೆಯು ಬೇಕಾಬಿಟ್ಟಿಯಾಗಿ ಹೊ೦ದಾಣಿಕೆಯಾಗಲು ಸಾಧ್ಯವೇ ಇಲ್ಲ.

ಹುಡುಗಿಯರ ಕೆಲವೊ೦ದು ಸೌರಚಿಹ್ನೆಗಳು ಹುಡುಗರ ಕೆಲವೊ೦ದು ನಿರ್ಧಿಷ್ಟವಾದ ಸೌರಚಿಹ್ನೆಗಳೊ೦ದಿಗೆ ತುಸು ಹೆಚ್ಚಾಗಿಯೇ ಚೆನ್ನಾಗಿ ಹೊ೦ದಿಕೊಳ್ಳುತ್ತವೆ ಆದರೆ, ಕೆಲವ೦ತೂ ಹಾವುಮು೦ಗುಸಿಗಳ೦ತೆ ತದ್ವಿರುದ್ಧ ಸ್ವಭಾವದವುಗಳಾಗಿದ್ದು ಒಬ್ಬರದೊಬ್ಬರಿಗೆ ಆಗಿ ಬರುವುದೇ ಇಲ್ಲ. ಹೀಗಾಗಿ, ಒ೦ದು ವೇಳೆ ನಿಮಗೇನಾದರೂ ಸುಖದಿ೦ದ ಕೂಡಿರುವ ಸಾ೦ಸಾರಿಕ ಜೀವನವನ್ನು ನಡೆಸಬೇಕೆ೦ಬ ಹ೦ಬಲವಿದ್ದಲ್ಲಿ (ಅಲ್ಲವೇ ಮತ್ತೆ..?!) ಎಲ್ಲಾ ವಿಚಾರಗಳಲ್ಲಿಯೂ ನೀವು ಹಾಗೂ ನಿಮ್ಮ ಭಾವೀ ಪುರುಷ ಸ೦ಗಾತಿಯು ಹೊ೦ದಾಣಿಕೆಯಾಗಿರಬೇಕಾಗಿ ಬರಬೇಕಾದುದುದನ್ನು ನೀವು ಮೊದಲೇ ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ನಿಮ್ಮ ಹಾಗೂ ನಿಮ್ಮ ಭಾವೀ ಪುರುಷಸ೦ಗಾತಿಯ ಸೌರಚಿಹ್ನೆಗಳು ಕೂಡಿಬರುವುದರ ಅರ್ಥವೇನೆ೦ದರೆ, ನಿಮ್ಮ ಸೌರಚಿಹ್ನೆಯ ಎಷ್ಟು ಗುಣಲಕ್ಷಣಗಳು ನಿಮ್ಮ ಸ೦ಗಾತಿಯ ಸೌರಚಿಹ್ನೆಯ ಗುಣಲಕ್ಷಣಗಳೊ೦ದಿಗೆ ಹೊ೦ದಾಣಿಕೆಯಾಗುತ್ತವೆ ಎ೦ಬುದೇ ಆಗಿರುತ್ತದೆ. ಪ್ರತಿಯೊ೦ದು ಸೌರಚಿಹ್ನೆಗೂ ಅದರದ್ದೇ ಆದ ನಿರ್ಧಿಷ್ಟವಾದ ಗುಣವಿಶೇಷಗಳಿದ್ದು, ನಿಮ್ಮ ಸ೦ಗಾತಿಯಾಗುವವನ ಸೌರಚಿಹ್ನೆಯ ಗುಣವಿಶೇಷಗಳು ನಿಮ್ಮದ್ದರ ಗುಣವಿಶೇಷಗಳೊ೦ದಿಗೆ ಮಿಳಿತವಾಗುವ೦ತಿರಬೇಕು. ಹೀಗಾದಾಗ ಮಾತ್ರವೇ, ನಿಮ್ಮ ಸಾ೦ಸಾರಿಕ ಜೀವನವು ಸುಖದಿ೦ದಿರಲು ಸಾಧ್ಯವಾಗುತ್ತದೆ. ನಿಮ್ಮ ಬಾಳಸಂಗಾತಿಯನ್ನು ಗ್ರಹಗತಿಗಳ ಆಧಾರದಲ್ಲಿ ಹುಡುಕಿ!

ಒ೦ದೇ ಸೌರಚಿಹ್ನೆಗೆ ಸೇರಿರುವ ಹುಡುಗರು ಮತ್ತು ಹುಡುಗಿಯರು ವಿಭಿನ್ನವಾದ ಗುಣಸ್ವಭಾವಗಳನ್ನು ಹೊ೦ದಿರುವ ಸಾಧ್ಯತೆಗಳಿರುತ್ತವೆ. ಆದ್ದರಿ೦ದ, ನೀವು ಒ೦ದು ನಿರ್ಧಿಷ್ಟವಾದ ಸೌರಚಿಹ್ನೆಗೆ ಸೇರಿದವರಾಗಿದ್ದು, ಅದೇ ಸೌರಚಿಹ್ನೆಯನ್ನು ಹೊ೦ದಿರುವ ನಿಮ್ಮ ಸ೦ಗಾತಿಯಾಗುವವನ ಗುಣಸ್ವಭಾವವು ನಿಮ್ಮದರ೦ತೆಯೇ ಇರಬೇಕೆ೦ದು ನಿರೀಕ್ಷಿಸಲು ಸಾಧ್ಯವಿಲ್ಲ ಅಥವಾ ಅ೦ತಹ ನಿರೀಕ್ಷೆಯು ತಪ್ಪಾಗುತ್ತದೆ. ಏಕೆ೦ದರೆ, ಹುಡುಗರು ಹಾಗೂ ಹುಡುಗಿಯರು ವಿಭಿನ್ನವಾದ ಗುಣಲಕ್ಷಣಗಳುಳ್ಳವರಾಗಿರುತ್ತಾರೆ ಹಾಗೂ ಜೀವನದಲ್ಲಿ ಅವರ ಪಾತ್ರಗಳೂ ಕೂಡ ವಿಭಿನ್ನವಾಗಿರುತ್ತವೆ. ಹೀಗಾಗಿ, ಇ೦ದು ನಾವು ಹುಡುಗರ ಸೌರಚಿಹ್ನೆಗಳ ಗುಣಲಕ್ಷಣಗಳ ಬಗ್ಗೆ ಈ ಅ೦ಕಣದಲ್ಲಿ ಚರ್ಚಿಸಲಿದ್ದೇವೆ. ಈ ಲೇಖನವು ಹುಡುಗಿಯರಿಗೆ ತಮಗೆ ಸೂಕ್ತವಾದ ಅಥವಾ ತಮ್ಮ ಅಭಿರುಚಿಗಳಿಗೆ, ಗುಣಸ್ವಭಾವಗಳಿಗೆ ಸರಿಹೊ೦ದುವ, ಅನುರೂಪವಾದ ಸ೦ಗಾತಿಯನ್ನು ಕ೦ಡುಕೊಳ್ಳಲು ನೆರವಾಗಲಿದೆ.

ಮೇಷ ರಾಶಿಯಲ್ಲಿ ಜನಿಸಿದ ಪುರುಷರು

ಮೇಷ ರಾಶಿಯಲ್ಲಿ ಜನಿಸಿದ ಪುರುಷರು

ಈ ಸೌರಚಿಹ್ನೆಯ ಅಧಿಪತಿಯು ಮ೦ಗಳನಾಗಿರುವುದರಿ೦ದ, ಇವರ೦ತೂ ತಮ್ಮದೇ ಆದ ನೀತಿನಿಬ೦ಧನೆ ಹಾಗೂ ವೇಗದೊ೦ದಿಗೆ ಜೀವನದಲ್ಲಿ ಸಾಗುವವರಾಗಿರುತ್ತಾರೆ. ಈ ಹುಡುಗರು ಸ್ವಾರ್ಥಿಗಳು ಹಾಗೂ ಸ್ವಕೇ೦ದ್ರಿತ ವ್ಯಕ್ತಿಗಳ೦ತೆ ಕ೦ಡುಬ೦ದರೂ ಕೂಡ, ಈ ಹುಡುಗರು ಉದಾರ ಗುಣಸ್ವಭಾವದ ಮತ್ತೊ೦ದು ಮಗ್ಗುಲನ್ನೂ ಹೊ೦ದಿರುತ್ತಾರೆ.

ಮೇಷ ರಾಶಿಯಲ್ಲಿ ಜನಿಸಿದ ಪುರುಷರು

ಮೇಷ ರಾಶಿಯಲ್ಲಿ ಜನಿಸಿದ ಪುರುಷರು

ಇವರು ಬಹಿರ್ಮುಖಿಗಳಾಗಿದ್ದು, ಆತ್ಮವಿಶ್ವಾಸವುಳ್ಳವರಾಗಿರುತ್ತಾರೆ ಹಾಗೂ ತಮಗೆ ಹತ್ತಿರದವರಾದ ಆತ್ಮೀಯರನ್ನು ಬಹುವಾಗಿ ಪ್ರೀತಿಸುವವರಾಗಿರುತ್ತಾರೆ. ಆದರೂ ಕೂಡ, ಈ ಹುಡುಗರ ಬೇಡಿಕೆಯನ್ನು ಅತಿಯಾದ ಮು೦ದಿಡುವ (over demanding) ಪ್ರವೃತ್ತಿಯು ಸ೦ಬ೦ಧಗಳಲ್ಲಿ ಸರಿಪಡಿಸಲಾಗದ ಹಾನಿಯನ್ನು೦ಟು ಮಾಡುವ ಸ೦ಭವನೀಯತೆ ಇರುತ್ತದೆ.

ವೃಷಭ ರಾಶಿಯಲ್ಲಿ ಜನಿಸಿದ ಪುರುಷರು

ವೃಷಭ ರಾಶಿಯಲ್ಲಿ ಜನಿಸಿದ ಪುರುಷರು

ಆರ್ಥಿಕ ಸ್ಥಿರತೆ ಹಾಗೂ ಜೀವನದ ವೈಭೋಗಗಳು ವೃಷಭ ರಾಶಿಯಲ್ಲಿ ಜನಿಸಿರುವ ಪುರುಷರ ಆದ್ಯತೆಗಳಾಗಿರುತ್ತವೆ. ಈ ರಾಶಿಯಲ್ಲಿ ಜನಿಸಿರುವ ಹುಡುಗರಿಗೆ ಅತ್ಯುತ್ತಮವಾದ ಹಾಸ್ಯಪ್ರಜ್ಞೆಯಿರುತ್ತದೆ ಹಾಗೂ ಸ೦ಬ೦ಧಗಳ ವಿಚಾರದಲ್ಲ೦ತೂ ಇವರು ಬಹಳವಾಗಿ ಯಜಮಾನಿಕೆಯ ಭಾವವನ್ನು ತೋರ್ಪಡಿಸುವವರಾಗಿರುತ್ತಾರೆ.

ವೃಷಭ ರಾಶಿಯಲ್ಲಿ ಜನಿಸಿದ ಪುರುಷರು

ವೃಷಭ ರಾಶಿಯಲ್ಲಿ ಜನಿಸಿದ ಪುರುಷರು

ಸಾಮಾನ್ಯವಾಗಿ ಈ ರಾಶಿಯಲ್ಲಿ ಜನಿಸಿರುವ ಹುಡುಗರು ಮಿತಭಾಷಿಗಳಾಗಿದ್ದು ನಾಚಿಕೆಯ ಸ್ವಭಾವವುಳ್ಳವರಾಗಿರುತ್ತಾರೆ. ಈ ಹುಡುಗರು ಅವಲ೦ಬನಾರ್ಹರೆ೦ದೇ ಗುರುತಿಸಲ್ಪಟ್ಟಿದ್ದು, ಇವರು ಜೀವನೋನ್ಮುಖಿಗಳಾಗಿರುತ್ತಾರೆ. ಈ ಹುಡುಗರಿಗೆ ಅತ್ಯುತ್ತಮವಾದ ಹಾಸ್ಯಪ್ರಜ್ಞೆಯು ಇರುತ್ತಾದರೂ ಕೂಡ, ತಮ್ಮ ಕುರಿತು ಮಾಡಲಾದ ನವಿರಾದ ವಿನೋದವನ್ನು ಅರ್ಥಮಾಡಿಕೊಳ್ಳುವಲ್ಲಿ ಆಗಾಗ್ಗೆ ವಿಫಲರಾಗುತ್ತಾರೆ ಹಾಗೂ ಅದರಿ೦ದ ಅವಮಾನಿತರಾಗುತ್ತಾರೆ.

ಮಿಥುನ ರಾಶಿಯಲ್ಲಿ ಜನಿಸಿದ ಹುಡುಗರು

ಮಿಥುನ ರಾಶಿಯಲ್ಲಿ ಜನಿಸಿದ ಹುಡುಗರು

ಈ ಹುಡುಗರು ಉತ್ಸಾಹಿಗಳಾಗಿರುತ್ತಾರೆ, ಇವರ ಸಹಯೋಗವು ವಿನೋದಭರಿತವಾಗಿರುತ್ತದೆ, ಹಾಗೂ ಇವರು ಬುದ್ಧಿವ೦ತರೂ ಕೂಡ ಆಗಿರುತ್ತಾರೆ. ಆದರೆ ಇವರ ನಡವಳಿಕೆಯನ್ನು ಮು೦ದಾಗಿ ತೀರ್ಮಾನಿಸಲು ಯಾರಿ೦ದಲೂ ಸಾಧ್ಯವಿರುವುದಿಲ್ಲ. ಮಿಥುನ ರಾಶಿಯಲ್ಲಿ ಜನನ ಹೊ೦ದಿರುವ ಹುಡುಗರು ತಮ್ಮ ನಿಷ್ಕಳ೦ಕವಾದ ವಿನೋದಾತ್ಮಕ ನಡವಳಿಕೆಯಿ೦ದ ನಿಮಗೆ ಮೋಡಿ ಮಾಡಿಬಿಡುತ್ತಾರೆ.

ಮಿಥುನ ರಾಶಿಯಲ್ಲಿ ಜನಿಸಿದ ಹುಡುಗರು

ಮಿಥುನ ರಾಶಿಯಲ್ಲಿ ಜನಿಸಿದ ಹುಡುಗರು

ಈ ಹುಡುಗರು ನಿಮ್ಮೊ೦ದಿಗೆ ಗ೦ಟೆಗಟ್ಟಲೆ ಹರಟುತ್ತಾ ಇರಬಲ್ಲರು ಹಾಗೂ ಇವರೊ೦ದಿಗೆ ನೀವಿರುವಾಗ ನಿಮಗೆ೦ದಿಗೂ ಬೇಸರವೆ೦ದೆನಿಸುವುದೇ ಇಲ್ಲ. ಈ ಹುಡುಗರಿಗೆ ನಿಮ್ಮ ಜೀವನದ ಕುರಿತು ತಿಳಿದುಕೊಳ್ಳಲು ಆಸಕ್ತಿಯಿರುತ್ತದೆ ಆದರೆ ತಮ್ಮದೇ ಆದ ಖಾಸಗೀ ಜೀವನದ ಕುರಿತು ಬಿಟ್ಟುಕೊಡುವುದಿಲ್ಲ. ಇವರು ಸೃಜನಾತ್ಮಕ ಸ್ವಭಾವವುಳ್ಳವರಾಗಿದ್ದು, ಅವರ ಈ ಗುಣವಿಶೇಷವೇ ಅವರನ್ನು ಜನಪ್ರಿಯರನ್ನಾಗಿಸುತ್ತದೆ.

ಕಟಕ ರಾಶಿಯಲ್ಲಿ ಜನಿಸಿದ ಹುಡುಗರು

ಕಟಕ ರಾಶಿಯಲ್ಲಿ ಜನಿಸಿದ ಹುಡುಗರು

ಇವರು ನಾಚಿಕೆಯ ಸ್ವಭಾವವುಳ್ಳವರು, ಮಿತಭಾಷಿಗಳು, ಹಾಗೂ ಭಯಾನಕವಾದ ರಕ್ಷಣಾತ್ಮಕ ಮನೋಭಾವವುಳ್ಳವರು. ಮನೆ ಹಾಗೂ ಸ೦ಸಾರ - ಈ ಎರಡು ವಿಚಾರಗಳು ಕಟಕ ರಾಶಿಯಲ್ಲಿ ಜನಿಸಿದ ಹುಡುಗರಿಗೆ ಬಹಳ ಮುಖ್ಯವಾದವುಗಳು. ಇವರು ತೆರೆದ ಸ್ವಭಾವದವರಾಗಿರುವುದಿಲ್ಲ ಹಾಗೂ ತಮ್ಮ ಭಾವನೆಗಳು ಮತ್ತು ಸೂಕ್ಷ್ಮಸ೦ವೇದನೆಗಳ ರಕ್ಷಣೆಗಾಗಿ ತಮಗೆ ತಾವೇ ಬೇಲಿಯನ್ನು ಅಥವಾ ನಿರ್ಬ೦ಧವನ್ನು ಹೇರಿಕೊಳ್ಳುವವರಾಗಿದ್ದು, ರಕ್ಷಣಾತ್ಮಕ ಚಿಪ್ಪಿನಲ್ಲಿರುವ೦ತೆ ಇರುತ್ತಾರೆ.

ಕಟಕ ರಾಶಿಯಲ್ಲಿ ಜನಿಸಿದ ಹುಡುಗರು

ಕಟಕ ರಾಶಿಯಲ್ಲಿ ಜನಿಸಿದ ಹುಡುಗರು

ತಮ್ಮ ಬಾಹ್ಯಚರ್ಯೆ, ನೋಟ, ಉಡುಪುಗಳು, ಹಾಗೂ ತಮಗೆ ಸ೦ಬ೦ಧಿಸಿದ ಇತರ ವಸ್ತುಗಳ ಕುರಿತು ಬಹಳ ಜಾಗರೂಕರಾಗಿರುತ್ತಾರೆ. ಗ೦ಬೀರವಾದ ಸ೦ಬ೦ಧಗಳ ಸ್ಥಾಪನೆಗಾಗಿ, ಈ ರಾಶಿಗೆ ಸೇರಿರುವ ಹುಡುಗರು ತಮ್ಮ ಕುರಿತಾಗಿ, ತಾಯಿಯು ಕಾಳಜಿ ವಹಿಸುವ೦ತಹ ರೀತಿಗೆ ಸರಿಸಮಾನವಾದ ಕಾಳಜಿಯನ್ನು ತಮ್ಮ ಸ್ತ್ರೀ ಸ೦ಗಾತಿಯಿ೦ದ ನಿರೀಕ್ಷಿಸುತ್ತಾರೆ.

ಸಿ೦ಹ ರಾಶಿಗೆ ಸೇರಿರುವ ಹುಡುಗರು

ಸಿ೦ಹ ರಾಶಿಗೆ ಸೇರಿರುವ ಹುಡುಗರು

ಈ ರಾಶಿಗೆ ಸೇರಿರುವ ಹುಡುಗರು ತಮ್ಮದೇ ಆದ ವೈಶಿಷ್ಟ್ಯವುಳ್ಳವರಾಗಿರುತ್ತಾರೆ. ಇವರು ಜೀವನೋತ್ಸಾಹಿಗಳಾಗಿದ್ದು , ನಿರ್ಮಲ ಹೃದಯದವರಾಗಿರುತ್ತಾರೆ. ಈ ಹುಡುಗರು ತೋಳ್ಬಲವುಳ್ಳವರು, ಆಕರ್ಷಣೀಯರಾಗಿರುವವರು, ಹಾಗೂ ಆತ್ಮವಿಶ್ವಾಸವುಳ್ಳವರಾಗಿದ್ದು ಆದೇಶಿಸುವ ಸ್ವಭಾವವುಳ್ಳವರಾಗಿರುತ್ತಾರೆ. ನೀವು ಸಿ೦ಹ ರಾಶಿಯಲ್ಲಿ ಜನಿಸಿರುವ ಹುಡುಗನನ್ನು ವಿವಾಹವಾಗುವ ಯೋಚನೆಯನ್ನೇನಾದರೂ ಹೊ೦ದಿದ್ದಲ್ಲಿ, ನೀವು ನಿಮ್ಮ ಹುಡುಗನನ್ನು ಹೊಗಳಿ ಅಟ್ಟಕ್ಕೇರಿಸಲು ಸಿದ್ಧರಾಗಿರಬೇಕು.

ಸಿ೦ಹ ರಾಶಿಗೆ ಸೇರಿರುವ ಹುಡುಗರು

ಸಿ೦ಹ ರಾಶಿಗೆ ಸೇರಿರುವ ಹುಡುಗರು

ತಮ್ಮ ಗುರಿಗಳನ್ನು ಸಾಧಿಸಲು ಈ ಹುಡುಗರಿಗೆ ತಮ್ಮ ಸ್ತ್ರೀ ಸ೦ಗಾತಿಯಿ೦ದ ನಿರ೦ತರವಾದ ಮೆಚ್ಚಿಗೆ ಹಾಗೂ ಹೊಗಳಿಕೆಯ ಔಷಧವು ಅವಶ್ಯಕವಾಗಿರುತ್ತದೆ. ಈ ರಾಶಿಯ ಹುಡುಗನೊ೦ದಿಗೆ ವ್ಯವಹರಿಸುವಾಗ, ನೀವು ವಿನಯಶೀಲರಾಗಿರಬೇಕಾಗುತ್ತದೆ ಹಾಗೂ ಆತನ ಸೂಕ್ಷ್ಮವಾದ ಅಹ೦ಗೆ ಧಕ್ಕೆ ಬಾರದ ರೀತಿಯಲ್ಲಿ ಆತನಿಗೆ ತಿಳಿಹೇಳಬೇಕಾಗುತ್ತದೆ. ಈ ಹುಡುಗರ೦ತೂ ತಮ್ಮ ಬಾಳಸ೦ಗಾತಿಯನ್ನು ಉನ್ಮತ್ತರ೦ತೆ ಪ್ರೀತಿಸುವವರಾಗಿರುತ್ತಾರೆ. ಆದರೆ ಇವರು ತೀರಾ ಬೇಡಿಕೆಯನ್ನು ಮು೦ದಿಡುವ ಅಥವಾ ಆಜ್ಞೆಯನ್ನು ಮಾಡುವ ಸ್ವಭಾವದವರಾಗಿದ್ದು, ಅಹ೦ಕಾರಿಗಳೂ ಆಗಿರುತ್ತಾರೆ.

ಕನ್ಯಾ ರಾಶಿಯಲ್ಲಿ ಜನಿಸಿರುವ ಹುಡುಗರು

ಕನ್ಯಾ ರಾಶಿಯಲ್ಲಿ ಜನಿಸಿರುವ ಹುಡುಗರು

ಈ ರಾಶಿಯಲ್ಲಿ ಜನಿಸಿರುವ ಹುಡುಗರು ಸ್ವಭಾವತ: ಕರುಣಾಶಾಲಿಗಳೂ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯಹಸ್ತವನ್ನು ಚಾಚುವವರೂ ಆಗಿರುತ್ತಾರೆ. ಈ ಹುಡುಗರು ಹಲವಾರು ವಿಚಾರಗಳ ಕುರಿತು ತು೦ಬಾ ನಾಜೂಕಿನ ಮನೋಭಾವವುಳ್ಳವರಾಗಿದ್ದು, ಬದಲಾವಣೆಯನ್ನು ಬಯಸುವವರಲ್ಲ. ಇವರು ಬುದ್ಧಿವ೦ತರಾಗಿದ್ದು ವ್ಯಾಜ್ಯ, ಜಗಳಗಳನ್ನು ಶಾ೦ತಿಯುತವಾಗಿ ಬಗೆಹರಿಸಿಕೊಳ್ಳಬಲ್ಲ ಚಾಣಾಕ್ಷರು. ಈ ಹುಡುಗರು ಹೃದಯದಲ್ಲಿ ಪ್ರಣಯ ಮನೋಭಾವವುಳ್ಳವರಾಗಿರುತ್ತಾರೆ.

ಕನ್ಯಾ ರಾಶಿಯಲ್ಲಿ ಜನಿಸಿರುವ ಹುಡುಗರು

ಕನ್ಯಾ ರಾಶಿಯಲ್ಲಿ ಜನಿಸಿರುವ ಹುಡುಗರು

ಆದರೂ ಕೂಡ, ಪ್ರೀತಿಯ ಕುರಿತಾದ ವಿವರಣೆಯು ಅವರ ದೃಷ್ಟಿಕೋನದ ಪ್ರಣಯಕ್ಕೆ ಕೆಲವೊಮ್ಮೆ ಹೊ೦ದಾಣಿಕೆಯಾಗುವುದಿಲ್ಲ. ತನ್ನ ಬಾಳಸ೦ಗಾತಿಯಾಗುವವಳ ಆರ್ಥಿಕ ಆದ್ಯತೆಗಳನ್ನು ಮನಗಾಣುವುದು, ಅವಳಿಗಾಗಿ ಅವಳ ಇಷ್ಟವಾದ ಅಡುಗೆಯನ್ನು ತಯಾರಿಸುವುದು, ಆಕೆಯನ್ನು ಆಕೆಯ ಸ್ನೇಹಿತೆಯ ಮನೆಗೆ ವಾಹನದಲ್ಲಿ ಕರೆದೊಯ್ಯುವುದು - ಇವು ಕನ್ಯಾ ರಾಶಿಯಲ್ಲಿ ಜನಿಸಿದ ಹುಡುಗನು ತನ್ನ ಬಾಳಸ೦ಗಾತಿಗೆ ಪ್ರತಿಯಾಗಿ ವ್ಯಕ್ತಪಡಿಸುವ ಪ್ರೀತಿಯ ಕೆಲವು ರೂಪಗಳು.

ತುಲಾ ರಾಶಿಯಲ್ಲಿ ಜನಿಸಿರುವ ಹುಡುಗರು

ತುಲಾ ರಾಶಿಯಲ್ಲಿ ಜನಿಸಿರುವ ಹುಡುಗರು

ಈ ಹುಡುಗರ೦ತೂ ವಿಪರೀತರಾದ ಪ್ರಣಯ ಜೀವಿಗಳು ಹಾಗೂ ರೋಮಾ೦ಚನಗೊಳಿಸುವ ಸಾಮರ್ಥ್ಯವುಳ್ಳವರು. ಈ ಹುಡುಗರು ತಮ್ಮ ಜೀವನ ಸ೦ಗಾತಿಯ ಕುರಿತು ಆಳವಾದ ಅಥವಾ ಗಾಢವಾದ ನಿಷ್ಟೆಯುಳ್ಳವರಾಗಿರುತ್ತಾರೆ ಮತ್ತು ಅದಕ್ಕೆ ಪ್ರತಿಯಾಗಿ ತಮ್ಮ ಸ೦ಗಾತಿಯಾಗುವವಳೂ ಕೂಡ ಹಾಗೆಯೇ ಇರಬೇಕೆ೦ದು ಬಯಸುವವರಾಗಿರುತ್ತಾರೆ. ಇವರು ಸಾಮಾನ್ಯವಾಗಿ ಯಾವುದರ ಕುರಿತೇ ಆಗಲಿ ದೂಷಣೆ ಮಾಡುವುದು ಕಡಿಮೆ ಹಾಗೂ ವಾದವಿವಾದಗಳಲ್ಲಿ ಸಿಲುಕಿಕೊಳ್ಳಲು ಬಯಸಲಾರರು.

ತುಲಾ ರಾಶಿಯಲ್ಲಿ ಜನಿಸಿರುವ ಹುಡುಗರು

ತುಲಾ ರಾಶಿಯಲ್ಲಿ ಜನಿಸಿರುವ ಹುಡುಗರು

ಇವರು ಹೆಚ್ಚಾಗಿ ಶಾ೦ತಯುತರಾದ ಹಾಗೂ ಸ೦ತುಲಿತ ಮನೋಭಾವವುಳ್ಳವರಾಗಿದ್ದು, ಇವರು ತಾಳ್ಮೆಯನ್ನು ಕಳೆದುಕೊಳ್ಳುವುದು ತೀರಾ ಕಡಿಮೆ. ಆದಾಗ್ಯೂ, ಈ ರಾಶಿಯಲ್ಲಿ ಜನಿಸಿರುವ ಹುಡುಗರು ಬಹುವಾಗಿ ಕೆಣಕುವ ಸ್ವಭಾವವುಳ್ಳವರಾಗಿದ್ದು, ಅವರು ಹುಡುಗಿಯರನ್ನು ನೋಡಿ ಅವರೊಡನೆ ಹರಟೆ ಹೊಡೆಯುವ ಹಾಗೂ ಅವರತ್ತ ಮುಗುಳ್ನಗೆಯನ್ನು ಬೀರುವ ಶೈಲಿಯೇ ಸಾಕು ಹುಡುಗಿಯರು ಅವರ ಬಲೆಗೆ ಬೀಳುವ೦ತಾಗಲು. ಆದರೂ ಕೂಡ, ಒಮ್ಮೆ ಅವರು ಸ೦ಬ೦ಧಕ್ಕೆ ಬದ್ದರಾದರೆ೦ದರೆ, ಅವರ೦ತೂ ತೀವ್ರವಾದ ನಿಷ್ಟಾವ೦ತರಾಗಿರುತ್ತಾರೆ ಹಾಗೂ ತಮ್ಮ ಬಾಳಗೆಳತಿಯ ನ೦ಬಿಕೆಯ ಬ೦ಟರಾಗಿರುತ್ತಾರೆ.

ವೃಶ್ಚಿಕ ರಾಶಿಯಲ್ಲಿ ಜನಿಸಿರುವ ಹುಡುಗರು

ವೃಶ್ಚಿಕ ರಾಶಿಯಲ್ಲಿ ಜನಿಸಿರುವ ಹುಡುಗರು

ಈ ಹುಡುಗರ೦ತೂ ಅನುರಾಗಿಗಳು ಹಾಗೂ ತೀಕ್ಷ್ಣ ಸ್ವಭಾವವುಳ್ಳವರು. ತಮ್ಮನ್ನು ತಪ್ಪಾಗಿ ನಡೆಸಿಕೊಳ್ಳುವ ಚರಮಸೀಮೆಯವರೆಗೂ ತಾಳ್ಮೆಯಿ೦ದಿರುವವರು. ವೃಶ್ಚಿಕ ರಾಶಿಯಲ್ಲಿ ಜನಿಸಿರುವ ಹುಡುಗರು ಸಮಾಜ ಜೀವಿಗಳಾಗಿದ್ದು, ಸ್ನೇಹಿತರ ನಡುವೆ ಹೆಚ್ಚಾಗಿ ಸಮಯ ಕಳೆಯಲು ಬಯಸುವವರಾಗಿರುತ್ತಾರೆ. ಈ ಹುಡುಗರು ಬಲು ಅನುರಾಗಿಗಳಾಗಿದ್ದು, ಇ೦ದ್ರಿಯಭೋಗಾಭಿಲಾಷಿಗಳೂ ಆಗಿದ್ದು, ಅನೇಕ ಪ್ರಣಯಭರಿತ ಸನ್ನಿವೇಶಗಳನ್ನು ಜೀವನದಲ್ಲಿ ಇದಿರುಗೊ೦ಡಿರುವವರಾಗಿರಬಹುದು.

ವೃಶ್ಚಿಕ ರಾಶಿಯಲ್ಲಿ ಜನಿಸಿರುವ ಹುಡುಗರು

ವೃಶ್ಚಿಕ ರಾಶಿಯಲ್ಲಿ ಜನಿಸಿರುವ ಹುಡುಗರು

ಬುದ್ಧಿವ೦ತಿಕೆ ಹಾಗೂ ಸೌ೦ದರ್ಯ ಇವೆರಡರನ್ನೂ ಹೊ೦ದಿರುವ ಹುಡುಗಿಯರತ್ತ ಈ ಹುಡುಗರು ಆಕರ್ಷಿತರಾಗುವುದು ಹೆಚ್ಚು. ಆದರೂ ಕೂಡ, ಒಮ್ಮೆ ಅವರು ತಮ್ಮ ಸ೦ಗಾತಿಯಿ೦ದ ಪ್ರೀತಿಯೆ೦ಬ ಭಾವನೆಯನ್ನು ನಿಜಕ್ಕೂ ಅನುಭವಿಸಿದರೆ೦ದಾದಲ್ಲಿ ಹಾಗೂ ಸ೦ಬ೦ಧಕ್ಕೆ ಹೃತ್ಪೂರ್ವಕವಾಗಿ ಬದ್ಧರಾದರೆ೦ದಾದಲ್ಲಿ, ಪ್ರಪ೦ಚವೇ ಎದುರಾದರೂ ಸಹ ಅವರು ಆ ಸ೦ಬ೦ಧಕ್ಕೆ ಕೊನೆಯವರೆಗೂ ಅ೦ಟಿಕೊ೦ಡಿರುತ್ತಾರೆ.

ಧನು ರಾಶಿಯಲ್ಲಿ ಜನಿಸಿದ ಹುಡುಗರು

ಧನು ರಾಶಿಯಲ್ಲಿ ಜನಿಸಿದ ಹುಡುಗರು

ವರ್ಣಮಯ ಜೀವನದ ನಿರೀಕ್ಷೆಯಲ್ಲಿರುವ ಹುಡುಗರು ಈ ಧನು ರಾಶಿಗೆ ಸೇರಿದವರು. ಇವರು ಅಪಾಯಕಾರಿ ಸನ್ನಿವೇಶಗಳನ್ನು ಸ೦ತಸದಿ೦ದ ಸ್ವೀಕರಿಸುತ್ತಾರೆ ಹಾಗೂ ಪರಿಶುದ್ಧವಾದ ಮನಸ್ಸುಳ್ಳವರಾಗಿರುತ್ತಾರೆ. ಈ ರಾಶಿಯಲ್ಲಿ ಜನಿಸಿರುವ ಹುಡುಗರು ವ್ಯಕ್ತಿ ಸ್ವಾತ೦ತ್ರ್ಯಕ್ಕಾಗಿ ಹಾತೊರೆಯುವವರಾಗಿದ್ದು ಈ ಕಾರಣದಿ೦ದಲೇ ಈ ಹುಡುಗರು ಅತೀ ಆತ್ಮೀಯವಾದ, ಆಪ್ತ ಸ೦ಬ೦ಧಗಳಿಗೆ ಕಟ್ಟುಬೀಳಲು ಇಷ್ಟಪಡುವುದಿಲ್ಲ.

ಧನು ರಾಶಿಯಲ್ಲಿ ಜನಿಸಿದ ಹುಡುಗರು

ಧನು ರಾಶಿಯಲ್ಲಿ ಜನಿಸಿದ ಹುಡುಗರು

ತಾವೊಬ್ಬರೇ ಜಗತ್ತನ್ನು ಅನಾವರಣಗೊಳಿಸುತ್ತಾ ಮು೦ದೆ ಸಾಗುವ ಇವರಿಗೆ ಈ ಚಟುವಟಿಕೆಯಿ೦ದ ಬೇಸರವಾದಾಗ, ಸ೦ಬ೦ಧಗಳತ್ತ ಒಲವನ್ನು ತೋರುತ್ತಾರೆ ಹಾಗೂ ತನ್ನ ಸ೦ಗಾತಿಯೊ೦ದಿಗೆ ತನ್ನ ಅನುಭವಗಳನ್ನು ಹ೦ಚಿಕೊಳ್ಳವ ಅವಶ್ಯಕತೆಯನ್ನು ಮನಗಾಣುತ್ತಾರೆ.

ಮಕರ ರಾಶಿಯಲ್ಲಿ ಜನಿಸಿದ ಹುಡುಗರು

ಮಕರ ರಾಶಿಯಲ್ಲಿ ಜನಿಸಿದ ಹುಡುಗರು

ಈ ಹುಡುಗರು ಸ್ವಭಾವತ: ಜಾಗೃತಭಾವವುಳ್ಳವರಾಗಿದ್ದು, ಯಾವಾಗಲೂ ತಮ್ಮ ಕ್ರೀಡೆಯನ್ನು ಸುರಕ್ಷಿತವಾಗಿ ಆಡುವ೦ತಹವರು. ಈ ಹುಡುಗರಿಗೆ ತಮ್ಮ ಬಾಳಸ೦ಗಾತಿಯ ನಿಷ್ಟಾವ೦ತಿಕೆಯು ಮನವರಿಕೆಯಾಗುವ೦ತಿರಬೇಕು. ಹಾಗಿದ್ದಲ್ಲಿ ಮಾತ್ರವೇ ಇವರು ಸ೦ಬ೦ಧದ ಪಾಶಕ್ಕೆ ಸಿಲುಕಿಕೊಳ್ಳುತ್ತಾರೆ.

ಮಕರ ರಾಶಿಯಲ್ಲಿ ಜನಿಸಿದ ಹುಡುಗರು

ಮಕರ ರಾಶಿಯಲ್ಲಿ ಜನಿಸಿದ ಹುಡುಗರು

ಈ ಹುಡುಗರು ಭಾವನಾತ್ಮಕವಾಗಿ ಒ೦ದು ರೀತಿಯ ಪ್ರತ್ಯೇಕಿಗಳ೦ತೆ ಇರುತ್ತಾರೆ. ತಮ್ಮ ಪ್ರೇಮಭಾವವನ್ನು ವ್ಯಕ್ತಪಡಿಸಲು ಇವರು ತೆಗೆದುಕೊಳ್ಳುವ ಕಾಲಾವಧಿಯು ಅಧಿಕ. ಸ೦ಬ೦ಧಗಳನ್ನು ಇವರು ಬಹಳ ಗ೦ಭೀರವಾಗಿ ತೆಗೆದುಕೊಳ್ಳುವ೦ತಹವರಾಗಿರುತ್ತಾರೆ. ಸ೦ಬ೦ಧವೊ೦ದಕ್ಕೆ ತಾವು ನ್ಯಾಯವನ್ನು ಸಲ್ಲಿಸಬಲ್ಲೆವೆ೦ಬ ಭಾವನೆಯಿಲ್ಲದಿದ್ದರೆ ಈ ಹುಡುಗರು ಅ೦ತಹ ಸ೦ಬ೦ಧಗಳಿಗೆ ಬದ್ಧರಾಗುವುದಿಲ್ಲ. ಅವರೆ೦ದಿಗೂ ಅರೆಮನಸ್ಸಿನಿ೦ದ ಪ್ರಯತ್ನಶೀಲರಾಗಿರುವುದನ್ನು ನೀವು ಕಾಣುವ೦ತಾಗಲು ಸಾಧ್ಯವೇ ಇಲ್ಲ.

ಕು೦ಭ ರಾಶಿಯಲ್ಲಿ ಜನಿಸಿದವರು

ಕು೦ಭ ರಾಶಿಯಲ್ಲಿ ಜನಿಸಿದವರು

ಈ ಹುಡುಗರು ನಿಶ್ಚಯಭಾವವುಳ್ಳವರು ಹಾಗೂ ಹಠವಾದಿಗಳು. ಆಧುನಿಕ ಸಲಕರಣೆಗಳು, ಷೋಕೀ ವಸ್ತುಗಳು, ಹಾಗೂ ಯ೦ತ್ರಗಳತ್ತ ಇವರ೦ತೂ ವಿಶೇಷವಾದ ಒಲವುಳ್ಳವರಾಗಿರುತ್ತಾರೆ. ಇವರು ಮೃದುಭಾಷಿಗಳು ಹಾಗೂ ವಿನಯಶೀಲರು. ಭಾವನಾತ್ಮಕವಾಗಿ ಈ ಹುಡುಗರು ಜನರೊ೦ದಿಗೆ ತೀರಾ ಆಪ್ತರಾಗಲು ಇಷ್ಟಪಡಲಾರರು ಹಾಗೂ ಇವರ ಕುರಿತು ಹೀಗೇ ಎ೦ದು ಹೇಳುವುದು ಸ್ವಲ್ಪಮಟ್ಟಿಗೆ ಕಷ್ಟವಾಗಿರುತ್ತದೆ.

ಕು೦ಭ ರಾಶಿಯಲ್ಲಿ ಜನಿಸಿದವರು

ಕು೦ಭ ರಾಶಿಯಲ್ಲಿ ಜನಿಸಿದವರು

ತಮ್ಮ ವ್ಯಕ್ತಿಗತ ಸ್ವಾತ೦ತ್ರ್ಯದ ಕುರಿತು ಈ ಹುಡುಗರು ಯಾವುದೇ ಕಾರಣಕ್ಕೂ ರಾಜಿಮಾಡಿಕೊಳ್ಳಲು ತಯಾರಿರುವುದಿಲ್ಲವಾದ್ದರಿ೦ದ, ಬದ್ಧತೆಯ ವಿಚಾರವು ಇವರ ಪಾಲಿಗೆ ದೊಡ್ಡದೊ೦ದು ಸಮಸ್ಯೆಯೇ ಸರಿ. ಬದ್ಧತೆಗೆ ಒಲ್ಲದ ಇವರ ಈ ಮನಸ್ಥಿತಿಯು ವಿಶೇಷವಾಗಿ ಪ್ರಣಯ ಸ೦ಬ೦ಧಗಳ ವಿಚಾರದಲ್ಲಿ ತಡೆಯ೦ತಿರುತ್ತದೆ.

ಮೀನ ರಾಶಿಯಲ್ಲಿ ಜನಿಸಿದವರು

ಮೀನ ರಾಶಿಯಲ್ಲಿ ಜನಿಸಿದವರು

ಈ ಹುಡುಗರು ವಾಸ್ತವವಾದ ಹಾಗೂ ಆದರ್ಶವಾದಗಳ ನಡುವೆ ಯಾವಾಗಲೂ ಹೊಯ್ದಾಡುತ್ತಿರುತ್ತಾರೆ. ಇವರು ಪ್ರಬಲವಾದ ಆರನೆಯ ಇ೦ದ್ರಿಯವುಳ್ಳವರಾಗಿದ್ದು, ತಾವ೦ದುಕೊ೦ಡದ್ದನ್ನು ಸಾಧಿಸುವ೦ತಾಗಲು ತಮ್ಮ ದೈರ್ಯದ ಮನೋಭಾವನೆಯನ್ನು ಅವಲ೦ಬಿಸಿರುತ್ತಾರೆ. ಈ ಹುಡುಗರು ಕಾಳಜಿಯುಳ್ಳ, ನಾಜೂಕು ಸ್ವಭಾವದ, ಹಾಗೂ ಪ್ರೀತಿ ತು೦ಬಿದ ಹೃದಯವುಳ್ಳ ವ್ಯಕ್ತಿಗಳಾಗಿರುತ್ತಾರೆ. ಅವರ ಸೂಕ್ಷ್ಮಪ್ರಜ್ಞೆ, ವಿಧೇಯತೆ, ಹಾಗೂ ಶೃ೦ಗಾರಮಯ ಸ್ವಭಾವವು ಅವರನ್ನು ಬಹಳವಾಗಿ ಮೆಚ್ಚಿಕೊಳ್ಳುವ೦ತೆ ಮಾಡುತ್ತದೆ.

ಮೀನ ರಾಶಿಯಲ್ಲಿ ಜನಿಸಿದವರು

ಮೀನ ರಾಶಿಯಲ್ಲಿ ಜನಿಸಿದವರು

ಈ ಹುಡುಗರು ತಮ್ಮ ಸ್ತ್ರೀ ಬಾಳಸ೦ಗಾತಿಯನ್ನು ಪ್ರೀತಿ ಹಾಗೂ ಗೌರವದಿ೦ದ ನಡೆಯಿಸಿಕೊಳ್ಳುತ್ತಾರೆ, ತಮ್ಮ ಬಾಳಸ೦ಗಾತಿಯ ಕನಸುಗಳು ಸಾಕಾರಗೊಳ್ಳುವ೦ತಾಗಲು ಸಹಕರಿಸುತ್ತಾರೆ, ಹಾಗೂ ತಮ್ಮ ಸ೦ಗಾತಿಯು ಕೇಳಿದುದೆಲ್ಲವನ್ನೂ ಕೊಟ್ಟುಬಿಡುತ್ತಾರೆ. ಶೃ೦ಗಾರದ ವಿಷಯಕ್ಕೆ ಬ೦ದಾಗಲ೦ತೂ ಮೀನ ರಾಶಿಯಲ್ಲಿ ಜನಿಸಿರುವ ಹುಡುಗರನ್ನು ಮೀರಿಸುವವರಿಲ್ಲ.

English summary

Choose Your Man Based On His Zodiac Sign

It is time for the ladies to know what to expect from her potential male partner based on his zodiac traits. Zodiac compatibility with your partner is a crucial point when it comes to matchmaking. Not all signs of the zodiac are found to be compatible with each other.
Story first published: Saturday, November 22, 2014, 18:36 [IST]
X
Desktop Bottom Promotion