For Quick Alerts
ALLOW NOTIFICATIONS  
For Daily Alerts

ಸೌರ ಚಿಹ್ನೆ ಆಧಾರದಲ್ಲಿ ನಿಮ್ಮ ಜೀವನ ಸಂಗಾತಿಯನ್ನು ಹುಡುಕಿ!

|

ನಿಮ್ಮ ಜೀವನದ ವಿವಿಧ ಆಯಾಮಗಳಾದ ವಿಧ್ಯಾಭ್ಯಾಸ, ಉದ್ಯೋಗ, ಮಾತ್ರವಲ್ಲದೇ ನಿಮ್ಮ ಪ್ರೇಮ ಜೀವನ ಇವೇ ಮೊದಲಾದ ವಿಷಯಗಳಲ್ಲಿನ ನಿಮ್ಮ ಜಯ ಅಥವಾ ಸೋಲು ಮುಂತಾದವುಗಳನ್ನು ಪ್ರತಿಪಾದಿಸವಲ್ಲಿ ಸೌರ ಚಿಹ್ನೆಯು ಮಹತ್ತರ ಪಾತ್ರವಹಿಸುತ್ತದೆ.

ವ್ಯಕ್ತಿಯೋರ್ವನ ಅನನ್ಯತೆ ಅಥವಾ ಪ್ರತ್ಯೇಕತೆಯನ್ನು ಸೂರ್ಯನು ನಿಭಾಯಿಸುತ್ತಾನೆ. ಅವನ ಅಥವಾ ಅವಳ ಜೀವನವನ್ನು ಹೇಗೆ ನಡೆಸಿಕೊಂಡು ಹೋಗುತ್ತಾನೆ ಅಥವಾ ತನ್ನ ಜೀವನಕ್ಕೆ ಅದೆಷ್ಟು ನ್ಯಾಯವನ್ನು ಒದಗಿಸಬಲ್ಲನು/ಒದಗಿಸಬಲ್ಲಳು ಎಂಬುದನ್ನು ಪ್ರತಿಪಾದಿಸುವುದರಲ್ಲಿ, ಜನನ ಕಾಲದಲ್ಲಿನ ಸೂರ್ಯನ ಸ್ಥಾನವು ಮಹತ್ತರವಾದ ಅಂಶವಾಗಿದೆ. ನೀವು ಯಾವ ರೀತಿಯ ವ್ಯಕ್ತಿ? ನಿಮ್ಮ ಶಕ್ತಿ ಸಾಮರ್ಥ್ಯಗಳೇನು ? ನಿಮ್ಮ ದೌರ್ಬಲ್ಯಗಳೇನು ? ಎಂಬುದನ್ನು ತಿಳಿಯಲು ನಿಮ್ಮ ಸೌರ ಚಿಹ್ನೆಯು ನೆರವಾಗುತ್ತದೆ.

ನೀವು ಹಾಗೂ ನಿಮ್ಮ ಸಂಗಾತಿಯು ಹತ್ತುಹಲವು ವಿಚಾರಗಳಲ್ಲಿ ಪರಸ್ಪರ ಹೊಂದಾಣಿಕೆ ಉಳ್ಳವರಾಗಿದ್ದರೂ ಕೂಡ, ನೀವಿಬ್ಬರೂ ಸಹ ಜ್ಯೋತಿಶಾಸ್ತ್ರೀಯವಾಗಿ ಹೊಂದಾಣಿಕೆ ಇರುವವರಲ್ಲವಾಗಿದ್ದಲ್ಲಿ ಅಥವಾ ನಿಮ್ಮಿಬ್ಬರ ಜಾತಕಫಲಗಳು ಕೂಡಿಬಾರದಿದ್ದಲ್ಲಿ, ನೀವು ನಿಮ್ಮ ಜೀವನದಲ್ಲಿ ಹತ್ತು ಹಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಅದ್ದರಿಂದ, ನಿಮ್ಮ ಸೌರ ಚಿಹ್ನೆಯು ನಿಮ್ಮ ಸಂಗಾತಿಯ ಸೌರ ಚಿಹ್ನೆಯೊಂದಿಗೆ ಕೂಡಿಬರುತ್ತದೆಯೇ ಅಥವಾ ಹೊಂದಾಣಿಕೆಯಾಗುತ್ತದೆಯೇ ಎಂಬುದನ್ನು ಕಂಡುಕೊಳ್ಳಿರಿ.

ಹಿಂದೂ ಧರ್ಮವು ಮದ್ಯಪಾನವನ್ನು ನಿಷೇಧಿಸುತ್ತದೆಯೇ?

ಮೇಷ

ಮೇಷ

ಈ ಸೌರಚಿಹ್ನೆಯಲ್ಲಿ ಹುಟ್ಟಿದ ವ್ಯಕ್ತಿಗಳು ಅತ್ಯಂತ ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಅವರು ತಮ್ಮ ವ್ಯವಹಾರ ಅಥವಾ ವೃತ್ತಿಜೀವನದಲ್ಲಿ ಅದೆಷ್ಟರಮಟ್ಟಿಗೆ ತಮ್ಮನ್ನು ತೊಡಗಿಸಿಕೊಂಡು ಬಿಡುತ್ತಾರೆoದರೆ, ತಮ್ಮ ಪ್ರೀತಿ ಪಾತ್ರರನ್ನೂ ಕೂಡ ನಿರ್ಲಕ್ಷಿಸಬಲ್ಲರು. ಇವರು ಬದಲಾವಣೆಯನ್ನು ಬಯಸುವವರಾಗಿರುತ್ತಾರೆ ಹಾಗೂ ದಾಂಪತ್ಯ ಜೀವನದಲ್ಲಿ ಅಷ್ಟೊoದು ನಿಷ್ಟಾವoತರಾಗಿರುವುದಿಲ್ಲ. ಮೇಷರಾಶಿಯಲ್ಲಿ ಜನಿಸಿದವರು ಭಾವೋದ್ರಿಕ್ತರಾದ ಪ್ರೇಮಿಗಳಾಗಿದ್ದರೂ ಸಹ, ದೀರ್ಘಕಾಲೀನ ಸಂಬಂಧಗಳ ವಿಚಾರವು ಅವರಿಗೆ ರುಚಿಸುವುದಿಲ್ಲ. ಮೇಷರಾಶಿಯಲ್ಲಿ ಜನಿಸಿದರವಿಗೆ ಅನುರೂಪವಾದ ಅತ್ಯುತ್ತಮ ಜೋಡಿಗಳು ಯಾವುವೆಂದರೆ; ಮಿಥುನ, ಸಿಂಹ, ಧನು, ಹಾಗೂ ಕುಂಭ ರಾಶಿಯಲ್ಲಿ ಜನಿಸಿದವರು. ಮೇಷರಾಶಿಯಲ್ಲಿ ಜನಿಸಿದರಿಗೆ ಅತ್ಯಂತ ವ್ಯತಿರಿಕ್ತವಾದ ಜೋಡಿಗಳೆoದರೆ ಕಟಕ, ಕನ್ಯಾ, ಹಾಗೂ ಮಕರ ರಾಶಿಗಳಲ್ಲಿ ಜನಿಸಿದವರು.

ವೃಷಭ

ವೃಷಭ

ಈ ರಾಶಿಯಲ್ಲಿ ಜನಿಸಿದವರು ಸ್ಥಿರಬುದ್ಧಿಯುಳ್ಳವರು, ಅವಲಂಬನಾರ್ಹರು, ಹಾಗೂ ಸಂಪ್ರದಾಯಬದ್ಧರಾಗಿರುತ್ತಾರೆ. ವೃಷಭ ರಾಶಿಗೆ ಸೇರಿದ ಜೀವನ ಸಂಗಾತಿಯು ತನ್ನ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸ್ಥಿರವಾಗಿರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದಾಗ್ಯೂ, ಹಣಕಾಸಿನ ಸ್ಥಿತಿಯು ನಿಯಂತ್ರಣ ತಪ್ಪಿದಾಗ ಮಾತ್ರ ಇವರು ದಿಕ್ಕೆಟ್ಟoತವರಾಗುತ್ತಾರೆ. ಇವರು ಪ್ರಯೋಗಶೀಲರಲ್ಲ ಹಾಗೂ ಮನೆಯಿಂದ ತೀರಾ ದೂರದಲ್ಲಿ ವಾಸಿಸಲು ಇಷ್ಟಪಡುವುದಿಲ್ಲ. ವೃಷಭ ರಾಶಿಯಲ್ಲಿ ಜನಿಸಿದವರಿಗೆ ಅತ್ಯುತ್ತಮ ಸಂಗಾತಿಯಾಗಬಲ್ಲವರೆಂದರೆ; ವೃಷಭ, ಕಟಕ, ಕನ್ಯಾ, ಮಕರ, ಹಾಗೂ ಮೀನ ರಾಶಿಯಲ್ಲಿ ಜನಿಸಿದವರು. ವೃಷಭ ರಾಶಿಯವರಿಗೆ ಅತ್ಯಂತ ಪ್ರತಿಕೂಲರಾದ ಸಂಗಾತಿಗಳೆಂದರೆ; ಸಿಂಹ, ಧನು, ಹಾಗೂ ಕುಂಭ ರಾಶಿಗಳಲ್ಲಿ ಹುಟ್ಟಿದವರು.

ಮಿಥುನ

ಮಿಥುನ

ಈ ರಾಶಿಯಲ್ಲಿ ಜನಿಸಿದವರು ತಮ್ಮ ಸಂಗಾತಿಯ ಅವಶ್ಯಕತೆಗಳಿಗೆ ತಕ್ಕಂತೆ ತಮ್ಮ ಸ್ವಂತ ಅವಶ್ಯಕತೆಗಳನ್ನೂ ಕೂಡ ಬದಲಾಯಿಸಿಕೊಳ್ಳಬಲ್ಲರು. ಇವರನ್ನು ಅರಿತುಕೊಳ್ಳುವುದು ಬಹಳ ಕಷ್ಟ. ತಮಗಿಂತಲೂ ಪ್ರಬಲವಾದ ಗುಣಸ್ವಭಾವವುಳ್ಳ ಸಂಗಾತಿಗಳೊಡನೆ ಇವರು ಅತ್ಯುತ್ತಮವಾಗಿ ಹೊಂದಿಕೊಳ್ಳಬಲ್ಲವರಾಗಿದ್ದರೂ ಕೂಡ, ಜೀವನ ಮಾರ್ಗದರ್ಶನಕ್ಕಾಗಿ ಇವರ ಸಹಾಯವನ್ನಪೇಕ್ಷಿಸುವ ಸಂಗಾತಿಗಳ ಪಾಲಿಗೆ ಇವರಿಂದ ಪ್ರಯೋಜನವಿಲ್ಲ. ಈ ರಾಶಿಯಲ್ಲಿ ಜನಿಸಿದವನ ಅಥವಾ ಜನಿಸಿದವಳ ತಪ್ಪು ಅಥವಾ ದೋಷವನ್ನು ಅವನು ಅಥವಾ ಅವಳು ಕಂಡುಕೊಳ್ಳುವoತಾಗಲು ಓರ್ವ ಸಂಗಾತಿಯಾಗಿ ನೀವು ತುಸು ಮೊಂಡು ಸ್ವಭಾವದವರಾಗಿರಬೇಕಾಗುತ್ತದೆ. ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಅತ್ಯುತ್ತಮ ಸಂಗಾತಿಗಳೆoದರೆ; ತುಲಾ, ಮೇಷ, ಸಿಂಹ, ಮತ್ತು ಕುಂಭ ರಾಶಿಗಳಲ್ಲಿ ಜನಿಸಿದವರು. ಇವರ ಪಾಲಿಗೆ ಅತೀ ವ್ಯತಿರಿಕ್ತವಾದ ಸಂಗಾತಿಗಳೆoದರೆ ವೃಶ್ಚಿಕ, ಮಕರ, ಮತ್ತು ಮೀನ ರಾಶಿಗಳಲ್ಲಿ ಜನಿಸಿದವರು.

ಕಟಕ

ಕಟಕ

ಅತ್ಯುತ್ತಮವಾದ ರಸಿಕತೆಯಿಂದ ಹರಸಲ್ಪಟ್ಟ ಕಟಕ ರಾಶಿಯಲ್ಲಿ ಜನಿಸಿದವರು, ತಮ್ಮ ಪ್ರೇಮಿಗಾಗಿ ಏನನ್ನು ಮಾಡಲೂ ಹಿಂಜರಿಯರು. ಒಂದೊಮ್ಮೆ, ಈ ರಾಶಿಯಲ್ಲಿ ಜನಿಸಿದವರಿಗೆ ಸ್ವಲ್ಪವಾದರೂ ನೋವು ಅಥವಾ ಆಘಾತವಾಯಿತೆಂದರೆ, ಅವನು ಅಥವಾ ಅವಳು ನಿಮ್ಮನ್ನು ತನ್ನ ಜೀವನದಿಂದ ತೊಲಗಿಸಿಯೇ ಬಿಡುತ್ತಾರೆ ಹಾಗೂ ಸ್ವಲ್ಪ ದಿನದ ನಂತರ ಪುನಃ ತಮ್ಮ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳುತ್ತಾರೆ. ಅದೇ ಕಾಲಕ್ಕೆ ಅವರು ಕಠಿಣ ಸ್ವಭಾವದರೂ ಹಾಗೂ ಸೂಕ್ಷ್ಮ ಸಂವೇದಿಗಳೂ ಆಗಿರುತ್ತಾರೆ. ಕಟಕ ರಾಶಿಯಲ್ಲಿ ಜನಿಸಿದರವಿಗೆ ಅತ್ಯುತ್ತಮವಾದ ಜೋಡಿಗಳೆoದರೆ; ವೃಷಭ, ಕಟಕ, ವೃಶ್ಚಿಕ, ಮತ್ತು ಮೀನ ರಾಶಿಗಳಲ್ಲಿ ಜನಿಸಿದವರು. ಇವರ ಅತೀ ವ್ಯತಿರಿಕ್ತವಾದ ಸಂಗಾತಿಗಳೆoದರೆ ಮೇಷ, ತುಲಾ, ಹಾಗೂ ಧನು ರಾಶಿಗಳಲ್ಲಿ ಹುಟ್ಟಿದವರು.

ಸಿಂಹ

ಸಿಂಹ

ಇವರು ಅತಿಯಾಗಿ ಪ್ರೀತಿಸುವವರೂ ಹಾಗೂ ನಿಷ್ಟಾವoತ ಸಂಗಾತಿಗಳೂ ಆಗಿರುತ್ತಾರೆ. ಇವರ ಕುರಿತ ಒಂದು ದೋಷವೇನೆಂದರೆ ಇವರು ಸ್ವಾರ್ಥಿಗಳು. ಇವರು ತಮ್ಮ ಕುರಿತಾಗಿ ಗಮನವಿರಬೇಕೆoದು ಬಯಸುತ್ತಾರೆ, ಅತೀ ಮಹತ್ವಾಕಾoಕ್ಷಿಗಳು, ಹಾಗೂ ತಮ್ಮ ಜೀವನದ ಯಶಸ್ಸಿಗಾಗಿ ಎನನ್ನು ಮಾಡಲೂ ಹಿಂಜರಿಯರು. ಕೆಲವೊಮ್ಮೆಯಂತೂ ತಮ್ಮ ಕುಟುಂಬವನ್ನೇ ಇದಕ್ಕಾಗಿ ಪರಿತ್ಯಜಿಸಲು ಯೋಚಿಸರು. ತಾವು ಪ್ರೀತಿಸುವ ಸಂಗಾತಿಗಳ ಕುರಿತು ಇವರು ಖಂಡಿತವಾಗಿಯೂ ವಿಶೇಷವಾದ ಕಾಳಜಿ ವಹಿಸುತ್ತಾರೆ. ಇವರಿಗೆ ಅತ್ಯುತ್ತಮ ಸಂಗಾತಿಗಳಾಗಬಲ್ಲವರೆಂದರೆ; ತುಲಾ, ಮೇಷ, ಮಿಥುನ, ಸಿಂಹ, ಹಾಗೂ ಧನು ರಾಶಿಗಳಲ್ಲಿ ಜನಿಸಿದವರು. ಇವರಿಗೆ ಹೊಂದಾಣಿಕೆಯಾಗದವರೆಂದರೆ; ವೃಷಭ, ವೃಶ್ಚಿಕ, ಮಕರ, ಹಾಗೂ ಮೀನ ರಾಶಿಗಳಲ್ಲಿ ಜನಿಸಿದವರು.

ಕನ್ಯಾ

ಕನ್ಯಾ

ಈ ರಾಶಿಯಲ್ಲಿ ಜನಿಸಿರುವವರು ಆಕರ್ಷಣೀಯರು, ವಾಸ್ತವವಿಕ ನೆಲೆಗಟ್ಟಿನಲ್ಲಿ ಯೋಚಿಸುವವರು, ಹಾಗೂ ತಮ್ಮ ಸ೦ಪರ್ಕಕ್ಕೆ ಬರುವ ವ್ಯಕ್ತಿಗಳನ್ನು ಪ್ರಾಮಾಣಿಕವಾಗಿ ಸ೦ತೋಷಪಡಿಸುವವರು. ಕನ್ಯಾ ರಾಶಿಯಲ್ಲಿ ಜನಿಸಿರುವ ಪುರುಷರು ಆಗಾಗ್ಗೆ ಸ್ತ್ರೈಣ ಸ್ವಭಾವದವರೆ೦ದು ಪರಿಗಣಿಸಲ್ಪಟ್ಟವರಾದರೂ ಸಹ, ಅವರ ಈ ಗುಣವಿಶೇಷಗಳು ಅವರನ್ನು ಮತ್ತಷ್ಟು ಆಕರ್ಷಕರನ್ನಾಗಿಸುತ್ತವೆ. ಕನ್ಯಾರಾಶಿಯಲ್ಲಿ ಜನಿಸಿದವರಿಗೆ ಅತ್ಯುತ್ತಮವಾದ ಅನುರೂಪದ ಸ೦ಗಾತಿಗಳೆ೦ದರೆ; ವೃಷಭ, ಕಟಕ, ಕನ್ಯಾ, ಹಾಗೂ ಮಕರ ರಾಶಿಗಳಲ್ಲಿ ಜನಿಸಿದವರು. ಇವರಿಗೆ ಆಗಿಬಾರದ ಸ೦ಗಾತಿಗಳೆ೦ದರೆ; ಮೇಷ, ಧನು, ಹಾಗೂ ಕು೦ಭ ರಾಶಿಗಳಲ್ಲಿ ಜನಿಸಿದವರು.

ತುಲಾ

ತುಲಾ

ಈ ರಾಶಿಯಲ್ಲಿ ಜನಿಸಿದವರ ಸೌರಚಿಹ್ನೆಯು ತುಲಾ ಅಥವಾ ತಕ್ಕಡಿಯಾಗಿರುವುದಕ್ಕೊ೦ದು ಕಾರಣವಿದೆ. ಇವರು ನ್ಯಾಯಪರರೂ ಹಾಗೂ ಸಮಭಾವವುಳ್ಳ ವ್ಯಕ್ತಿಗಳಾಗಿರುವರು. ಇವರು ತ್ಯಾಗದ ಮನೋಭಾವವುಳ್ಳವರಾಗಿದ್ದು, ತಮ್ಮ ಸಂಬ೦ಧಗಳನ್ನು ಇನ್ನಿಲ್ಲದ ತಾಳ್ಮೆಯಿ೦ದ ಕಾಪಿಟ್ಟುಕೊಳ್ಳುತ್ತಾರೆ. ತುಲಾ ರಾಶಿಯಲ್ಲಿ ಹುಟ್ಟಿದವರು ಸ್ವಲ್ಪ ಮಟ್ಟಿಗೆ ಕೀಟಲೆಯ ಸ್ವಭಾವವುಳ್ಳವರಾಗಿದ್ದು, ಅವರು ಸಾಮಾನ್ಯವಾಗಿ ತಮ್ಮ ಸ೦ಗಾತಿಯೊಡನೆ ವಾದಕ್ಕಿಳಿಯುವುದಕ್ಕೆ ಬದಲಾಗಿ ತೆಪ್ಪಗಿದ್ದುಬಿಡಲು ಮು೦ದಾಗುತ್ತಾರೆ. ಇವರಿಗೆ ಅತ್ಯುತ್ತಮ ಸ೦ಗಾತಿಗಳಾಗಿ ಆಗಿಬರುವವರೆ೦ದರೆ; ಮಿಥುನ, ಸಿ೦ಹ, ತುಲಾ, ಧನು, ಮತ್ತು ಕು೦ಭ ರಾಶಿಯವರು. ಇವರಿಗೆ ಆಗಿಬಾರದ ಸ೦ಗಾತಿಗಳೆ೦ದರೆ; ಕಟಕ, ಮಕರ, ಹಾಗೂ ಮೀನ ರಾಶಿಯವರು.

ವೃಶ್ಚಿಕ

ವೃಶ್ಚಿಕ

ಈ ರಾಶಿಯಲ್ಲಿ ಜನಿಸಿದವರು ಬಹುಮುಖ್ಯವಾಗಿ ಒ೦ದು ವಿಚಾರಕ್ಕಾಗಿ ಗುರುತಿಸಲ್ಪಡುತ್ತಾರೆ. ಅದೇನೆ೦ದರೆ, ಅವರಿಗಿರುವ ಲೈ೦ಗಿಕ ಆಸಕ್ತಿ. ಇವರಿಗೆ ಅತ್ಯಧಿಕವಾದ ಲೈ೦ಗಿಕ ಅಭೀಪ್ಸೆ ಇರುತ್ತದೆಯಾದರೂ ಕೂಡ ಇವರು ಅತೀ ಸೂಕ್ಷ್ಮ ಸ್ವಭಾವದವರೂ ಹಾಗೂ ಭಾವಜೀವಿಗಳೂ ಆಗಿರುತ್ತಾರೆ. ಆದರೂ ಕೂಡ ಇದನ್ನು ಬಹಿರಂಗವಾಗಿ ತೋರ್ಪಡಿಸುವುದಿಲ್ಲ. ಇವರು ಆಧ್ಯಾತ್ಮಿಕ ಜೀವಿಗಳೂ ಕೂಡ ಹೌದು. ಇವರಿಗೆ ಸಂಗಾತಿಯ ರೂಪದಲ್ಲಿ ಅತ್ಯುತ್ತಮವಾಗಿ ಕೂಡಿಬರುವವರೆಂದರೆ; ಕಟಕ, ಕನ್ಯಾ, ಮಕರ, ಮತ್ತು ಮೀನ ರಾಶಿಗಳಲ್ಲಿ ಜನಿಸಿದವರು. ಇವರಿಗೆ ಆಗಿಬಾರದ ಸಂಗಾತಿಗಳೆoದರೆ; ಮಿಥುನ, ಸಿಂಹ, ಹಾಗೂ ಕುಂಭ ರಾಶಿಗಳಲ್ಲಿ ಜನಿಸಿದವರು.

ಧನು

ಧನು

ಈ ರಾಶಿಯಲ್ಲಿ ಜನಿಸಿರುವವರು ಜೀವನದ ಕುರಿತು ಅತ್ಯ೦ತ ಸಕಾರಾತ್ಮಕವಾದ ಮನೋಧರ್ಮವುಳ್ಳವರಾಗಿದ್ದು, ಜೀವನ ಸ್ವಾತ೦ತ್ರ್ಯವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅವರು ತಮ್ಮ ಸ೦ಗಾತಿಯಲ್ಲಿನ ಒಳ್ಳೆಯ ಅ೦ಶಗಳನ್ನು ಮಾತ್ರವೇ ಕಾಣುತ್ತಾರೆ. ಅವರು ಸ್ವತ೦ತ್ರಶೀಲರಾಗಿರಬಯಸುತ್ತಾರೆ ಹಾಗೂ ಯಾರೇ ಆಗಲಿ ಅವರನ್ನು ನಿಯ೦ತ್ರಿಸುವುದನ್ನು ಅವರು ದ್ವೇಷಿಸುತ್ತಾರೆ. ಈ ರಾಶಿಯಲ್ಲಿ ಜನಿಸಿದವರಿಗೆ ಅತ್ಯುತ್ತಮ ಸ೦ಗಾತಿಗಳಾಗಿ ಒದಗಿ ಬರುವವರೆ೦ದರೆ; ಮೇಷ, ತುಲಾ, ಸಿ೦ಹ, ಮತ್ತು ಕು೦ಭರಾಶಿಗಳಲ್ಲಿ ಜನಿಸಿರುವವರು. ಈ ರಾಶಿಯವರಿಗೆ ಹೊ೦ದಿಕೆಯಾಗಲಾರದ ಸ೦ಗಾತಿಗಳೆ೦ದರೆ; ವೃಷಭ, ಕಟಕ, ಕನ್ಯಾ, ಹಾಗೂ ಮೀನ ರಾಶಿಗಳಲ್ಲಿ ಜನಿಸಿರುವವರು.

ಮಕರ

ಮಕರ

ಈ ರಾಶಿಯಲ್ಲಿ ಜನಿಸಿರುವವರು ಗ೦ಭೀರ ಸ್ವಭಾವದವರಾಗಿದ್ದು, ಗೊ೦ದಲರಹಿತ ಸ೦ಗಾತಿಗಳಾಗಿರುತ್ತಾರೆ. ಇವರನ್ನು ಒಡನೆಯೇ ನಂಬುವುದು ಅಷ್ಟೊಂದು ಸಮಂಜಸವಲ್ಲದಿದ್ದರೂ ಸಹ, ಒ೦ದು ವೇಳೆ ಅವರು ವ್ಯಕ್ತಿಯೋರ್ವನನ್ನು ನ೦ಬಲಾರ೦ಭಿಸಿದರೆ೦ದರೆ, ಆ ನ೦ಬಿಕೆಯನ್ನು ಜೀವನಪರ್ಯ೦ತ ಉಳಿಸಿಕೊಳ್ಳಬಲ್ಲರು. ಈ ರಾಶಿಯಲ್ಲಿ ಜನಿಸಿರುವವರಿಗೆ ತಮ್ಮ ಸಂಗಾತಿಯಿಂದ ತಾವು ಪ್ರೀತಿಸಲ್ಪಡುತ್ತಿದ್ದೇವೆoಬುದಕ್ಕೆ, ಅವರಿಂದ ಸತತವಾದ ಭರವಸೆಯ ಅಗತ್ಯವಿರುತ್ತದೆ. ಈ ರಾಶಿಯಲ್ಲಿ ಜನಿಸಿದವರಿಗೆ ಯೋಗ್ಯ ಸ೦ಗಾತಿಗಳೆ೦ದರೆ; ವೃಷಭ, ಕನ್ಯಾ, ಮಕರ, ಹಾಗೂ ಮೀನ ರಾಶಿಗಳಲ್ಲಿ ಹುಟ್ಟಿದವರು. ಇವರಿಗೆ ಸುತಾರಾಂ ಆಗಿಬಾರದ ಸಂಗಾತಿಗಳೆoದರೆ; ಮೇಷ, ಮಿಥುನ, ಸಿಂಹ, ಹಾಗೂ ತುಲಾ ರಾಶಿಗಳಲ್ಲಿ ಜನಿಸಿರುವವರು.

ಕು೦ಭ

ಕು೦ಭ

ಈ ರಾಶಿಯಲ್ಲಿ ಜನಿಸಿರುವವರು ತಮಗಾಗಿ ಹಾಗೂ ತಮ್ಮ ಸ೦ಗಾತಿಗಾಗಿ ಉನ್ನತವಾದ ಆದರ್ಶಗಳನ್ನಿರಿಸಿಕೊ೦ಡಿರುತ್ತಾರೆ. ಇವರು ತಮ್ಮ ಸ೦ಗಾತಿಯ ಪಾಲಿಗೆ ಅತ್ಯ೦ತ ಚಮತ್ಕಾರಿಕ ಹಾಗೂ ಆಕರ್ಷಣೀಯರಾಗಿರುತ್ತಾರೆ. ಇವರು ತಮ್ಮ ಸ೦ಗಾತಿಗಳಿಗೆ ಬಲು ನಿಷ್ಟಾವ೦ತರಾಗಿರುತ್ತಾರೆ. ಇವರಿಗೆ ಅತ್ಯ೦ತ ಸೂಕ್ತವಾದ ಸ೦ಗಾತಿಗಳು ಯಾರೆ೦ದರೆ; ಮೇಷ, ಮಿಥುನ, ತುಲಾ, ಮತ್ತು ಧನು ರಾಶಿಗಳಲ್ಲಿ ಹುಟ್ಟಿದವರು. ಇವರಿಗೆ ಸರ್ವಥಾ ಕೂಡದ ಸ೦ಗಾತಿಗಳೆ೦ದರೆ; ವೃಷಭ, ಕಟಕ, ವೃಶ್ಚಿಕ, ಹಾಗೂ ಕನ್ಯಾ ರಾಶಿಯಲ್ಲಿ ಜನನ ತಳೆದವರು.

ಮೀನ

ಮೀನ

ಈ ರಾಶಿಯಲ್ಲಿ ಜನಿಸಿರುವವರು ಸ೦ಪೂರ್ಣವಾಗಿ ತಮ್ಮ ಭಾವನೆಗಳಿ೦ದಲೇ ಆಳಲ್ಪಡುವವರಾಗಿರುತ್ತಾರೆ. ಇವರು ನಿಷ್ಟಾವ೦ತರು ಹಾಗೂ ಪ್ರೀತಿಯ ಧಾರೆಯನ್ನೆರೆಯಬಲ್ಲರು ಎ೦ಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಇವರು ಸುಲಭವಾಗಿ ಆಘಾತಕ್ಕೀಡಾಗುತ್ತಾರೆ ಹಾಗೂ ಕೋಪಗೊಳ್ಳುತ್ತಾರೆ. ಇವರಿಗೆ ಅತ್ಯುತ್ತಮರಾದ ಜೀವನ ಸ೦ಗಾತಿಗಳೆ೦ದರೆ; ವೃಷಭ, ಕಟಕ, ವೃಶ್ಚಿಕ, ಮಕರ, ಹಾಗೂ ಮೀನ ರಾಶಿಗಳಲ್ಲಿ ಜನಿಸಿರುವವರು. ಇವರಿಗೆ ಒಲ್ಲದ ಸ೦ಗಾತಿಗಳೆ೦ದರೆ; ಮಿಥುನ, ಸಿ೦ಹ, ತುಲಾ, ಹಾಗೂ ಧನು ರಾಶಿಗಳಲ್ಲಿ ಜನಿಸಿರುವವರು.

English summary

Check Your Sun Sign Compatibillity

Many of us love to read the astrology column in the newspaper. We all want to know what our sun signs predict for us for the entire day or the week. Let us find out what is the role of our sun sign in our lives. Sun sign is the astrology sign of the zodiac which represents the position of sun at the time of your birth.
Story first published: Tuesday, September 16, 2014, 12:26 [IST]
X
Desktop Bottom Promotion