ಮದುವೆಯಾಗದ ಸ್ತ್ರೀಯರು ಹನುಮಂತನನ್ನು ಪೂಜಿಸಬಹುದೇ?

ಹನುಮಂತನನ್ನು ವಿಶ್ವದೆಲ್ಲೆಡೆಯಲ್ಲಿ ಪೂಜಿಸಲಾಗುತ್ತದೆ. ಆದರೆ ಮಹಿಳೆಯರು ಅದರಲ್ಲೂ ಮದುವೆಯಾಗದೆ ಇರುವ ಮಹಿಳೆಯರು ಹನುಮಂತನನ್ನು ಪೂಜಿಸುವುದು ಮತ್ತು ಹನುಮಾನ್ ಚಾಲೀಸ್ ಪಠಣ ಮಾಡುವುದು ನಿಷಿದ್ಧವಿದೆ, ಆದರೆ ಪಾಲಿಸುವವರು ತುಂಬಾ ಕಡಿಮೆ....

Subscribe to Boldsky

ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದಾರೆ ಎನ್ನುತ್ತವೆ ಪುರಾಣಗಳು. ಅದೇ ರೀತಿ ಅವರವರ ಇಷ್ಟಕ್ಕೆ ಅನುಸಾರವಾಗಿ ದೇವರನ್ನು ಪೂಜಿಸುತ್ತಾರೆ. ಇನ್ನು ಕೆಲವು ದೇವರು ಆಯಾಯ ಜಾತಿಗೆ ಅನುಗುಣವಾಗಿ ಪೂಜಿಸಲ್ಪಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಶಿವ ಹಾಗೂ ದೇವಿಯ ಭಕ್ತರಿದ್ದರೆ ಉತ್ತರ ಭಾರತದಲ್ಲಿ ವಿಷ್ಣುವಿನ ಭಕ್ತರಿದ್ದಾರೆ. ಇನ್ನು ಕೆಲವು ದೇವರನ್ನು ಬ್ರಹ್ಮಚಾರಿಗಳು ಮತ್ತು ಗಂಡಸರು ಮಾತ್ರ ಪೂಜಿಸಬಹುದು ಎನ್ನುವ ನಿಯಮಿದೆ. ಹನುಮಾನ್ ನಮ್ಮ ನಡುವೆ ಇದ್ದಾನೆಯೇ? ಇಲ್ಲಿದೆ ಪುರಾವೆಗಳು! 

Lord hanuman

ಅಂತಹ ದೇವರಲ್ಲಿ ವಾಯುಪುತ್ರ ಆಜಂನೇಯ. ಹನುಮಂತನನ್ನು ವಿಶ್ವದೆಲ್ಲೆಡೆಯಲ್ಲಿ ಪೂಜಿಸಲಾಗುತ್ತದೆ. ಆದರೆ ಮಹಿಳೆಯರು ಅದರಲ್ಲೂ ಮದುವೆಯಾಗದೆ ಇರುವ ಮಹಿಳೆಯರು ಹನುಮಂತನನ್ನು ಪೂಜಿಸುವುದು ಮತ್ತು ಹನುಮಾನ್ ಚಾಲೀಸ್ ಪಠಣ ಮಾಡುವುದು ನಿಷಿದ್ಧ. ನಿಯಮಗಳು ಏನೇ ಇದ್ದರೂ ಇಂದಿನ ಆಧುನಿಕ ಯುಗದಲ್ಲಿ ಅದನ್ನು ಪಾಲಿಸುವವರು ತುಂಬಾ ಕಡಿಮೆ.
Lord hanuman

ಇದೇ ಕಾರಣದಿಂದಾಗಿ ಮದುವೆಯಾಗದೆ ಇರುವ ಹುಡುಗಿಯರು ಇಂದಿನ ದಿನಗಳಲ್ಲಿ ಆಂಜನೇಯ ದೇವಾಲಯಗಳಿಗೆ ಹೋಗಿ ಅಲ್ಲಿ ಪಾರ್ಥಿಸುವುದನ್ನು ಕಾಣಬಹುದು. ತುಂಬಾ ಶಕ್ತಿಶಾಲಿ ಹಾಗೂ ಪ್ರಭಾವಶಾಲಿಯೆಂದು ಪರಿಗಣಿಸಲಾಗಿರುವ ಹನುಮಾನ್ ಚಾಲೀಸವನ್ನು ಪಠಣ ಮಾಡಲು ಮಹಿಳೆಯರಿಗೆ ಅವಕಾಶ ನೀಡಬೇಕೇ ಎನ್ನುವ ಚರ್ಚೆ ನಡೆಯುತ್ತಲೇ ಇರುತ್ತದೆ. ಹನುಮಂತನನ್ನು ಪೂಜಿಸುವ ಕೆಲವೊಂದು ಸತ್ಯಗಳ ಬಗ್ಗೆ ನಾವಿಲ್ಲಿ ತಿಳಿಸಿಕೊಡಲಿದ್ದೇವೆ.   ಶಕ್ತಿ ದೇವತೆ ಹನುಮಂತನನ್ನು ಪೂಜಿಸುವ ವಿಧಿ-ವಿಧಾನ

Lord hanuman
 

ಹನುಮಂತನ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನಿಷಿದ್ಧ ಯಾಕೆ?
ಪುರಾಣಗಳ ಪ್ರಕಾರ ಹನುಮಂತ ದೇವರು ಬ್ರಹ್ಮಚಾರಿ. ಮದುವೆಯಾಗದೆ ಇರುವವರು ಮತ್ತು ಜೀವನಪೂರ್ತಿ ಬ್ರಹ್ಮಚಾರಿಗಳಾಗಿ ಉಳಿಯಲು ಬಯಸುವವರು ಹನುಮಂತ ದೇವರನ್ನು ಪೂಜಿಸುತ್ತಾರೆ. ಮಲಗುವ ಮುನ್ನ 'ಹನುಮಾನ್ ಚಾಲೀಸಾ' ಪಠಿಸಲು ಮರೆಯದಿರಿ

ಮಹಿಳೆಯರು ಹನುಮಂತ ದೇವರನ್ನು ಪೂಜಿಸಬಹುದೇ?
ಇದರ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಮದುವೆಯಾಗದೆ ಇರುವ ಮಹಿಳೆಯರು ಹನುಮಂತ ದೇವಾಲಯಕ್ಕೆ ಭೇಟಿ ನೀಡಬಹುದು.

Lord hanuman
 

ಆದರೆ ಈ ಹುಡುಗಿಯರು ದೇವಾಲಯದಲ್ಲಿ ಸ್ಥಾಪಿತವಾಗಿರುವ ಮೂರ್ತಿಯನ್ನು ಮುಟ್ಟಬಾರದು. ಹನುಮಂತ ಬಾಲಬ್ರಹ್ಮಚಾರಿಯಾಗಿರುವ ಕಾರಣದಿಂದಾಗಿ ಹುಡುಗಿಯರು ಆತನನ್ನು ಪೂಜಿಸಬಾರದು ಎಂದು ಹೆಚ್ಚಿನವರು ಹೇಳುತ್ತಾರೆ. ಅದೇನೇ ಇದ್ದರೂ ಮಹಿಳೆಯರು ಕೂಡ ಹನುಮಂತನನ್ನು ಪೂಜಿಸುತ್ತಾರೆ ಮತ್ತು ಹನುಮಾನ್ ಚಾಲೀಸನ್ನು ಪಠಿಸುತ್ತಾರೆ. ದೈಹಿಕ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಹನುಮಾನ್ ಮಂತ್ರ   

Lord hanuman
 

ಹನುಮಾನ್ ಚಾಲೀಸವನ್ನು ಪಠಿಸುವ ಪ್ರಾಮುಖ್ಯತೆ
ಹನುಮಾನ್ ಚಾಲೀಸವನ್ನು ಲಿಂಗಭೇದವಿಲ್ಲದೆ ಯಾರು ಬೇಕಿದ್ದರೂ ಪಠಿಸಬಹುದು. ರಾಶಿಯಲ್ಲಿ ಸಾಡೇಸಾತಿ ಇರುವ ವ್ಯಕ್ತಿಗಳು ಮಂಗಳವಾರ ಮತ್ತು ಶನಿವಾರ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಅದರಿಂದ ಮುಕ್ತಿಯನ್ನು ಪಡೆಯಬಹುದು.

Lord hanuman

ಹನುಮಂತನನ್ನು ಮಹಿಳೆಯರು ಪೂಜಿಸಬಹುದೇ ಎನ್ನುವ ನಿಮ್ಮ ಗೊಂದಲಕ್ಕೆ ಪರಿಹಾರ ಸಿಕ್ಕಿದೆ ಎಂದು ನಾವು ಅಂದುಕೊಂಡಿದ್ದೇವೆ. ಲಿಂಗಭೇದ ಮರೆತು ಹನುಮಂತನನ್ನು ಪ್ರತಿಯೊಬ್ಬರೂ ಪೂಜಿಸಬಹುದು. ರಾಮಾಯಣದ ಬಳಿಕ ವಾನರ ಸೇನೆಯ ಕಥೆ ಏನಾಯಿತು?

Story first published: Wednesday, November 9, 2016, 15:00 [IST]
English summary

Can Unmarried Women Worship Lord Hanuman?

Hindu Gods in India are worshiped by both men and women. At the same time we worship Hindu Gods in many forms as well. Lord Hanuman, also known as 'Vayu Putra' or the Monkey God, is worshiped all over the world. However, according to some customs, worshiping Lord Hanuman and chanting Hanuman Chalisa is prohibited by women, especially those who are unmarried.
Please Wait while comments are loading...
Subscribe Newsletter