For Quick Alerts
ALLOW NOTIFICATIONS  
For Daily Alerts

ಜ್ಞಾನೋದಯವಾದಾಗ ಪುಸ್ತಕಗಳನ್ನು ಭಸ್ಮ ಮಾಡಿದನು!

|
Kannada Zen story,
ಒಂದು ಊರಿನಲ್ಲಿ ಒಬ್ಬ ತತ್ವಜ್ಞಾನಿ ಇದ್ದ. ತುಂಬಾ ಪುಸ್ತಕಗಳನ್ನು ಓದುತ್ತಿದ್ದ. ಪ್ರತಿಯೊಂದು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡುತ್ತಿದ್ದ. ಅವನಿಗೆ ಬದುಕಿನ ನಿಜವಾದ ಅರ್ಥವೇನು ಎಂದು ತಿಳಿಯಬೇಕೆನಿಸಿತು. ಅದಕ್ಕಾಗಿ ತುಂಬಾ ಪುಸ್ತಕಗಳನ್ನು ತಂದು ಓದಿದನು.

ಆದರೆ ಅವನಿಗೆ ಸಮಾಧಾನ ತರುವ ಯಾವುದೇ ಉತ್ತರ ಸಿಗಲಿಲ್ಲ. ಈ ತತ್ವಜ್ಞಾನಿ ಒಮ್ಮೆ ಝೆನ್ ಗುರುಗಳ ಹತ್ತಿರ ಮಾತನಾಡುತ್ತಿದ್ದನು. ಆಗ ಅವನು "ನನಗೆ ಜ್ಞಾನೋದಯ ಆಗಬೇಕು ಏನು ಮಾಡಲಿ?" ಎಂದು ಕೇಳಿದನು. ಆಗ ಝೆನ್ ಗುರುಗಳು ಝೆನ್ ಬಗ್ಗೆ ತಿಳಿದರೆ ಬದುಕಿನ ಬಗ್ಗೆ ತಿಳಿಯಬಹುದೆಂದು ಹೇಳಿದರು. ಅದರಂತೆ ಅವನು ಅನೇಕ ಝೆನ್ ಪುಸ್ತಕಗಳನ್ನು ಓದಿದನು, ಝೆನ್ ಧರ್ಮದ ಅನುಯಾಯಿಯಾದನು.

ಹೀಗೆ ವರ್ಷಗಳು ಕಳೆಯಿತು. ಹೀಗಿರಲು ಒಂದು ದಿನ ಅವನಿಗೆ ತಾನು ಹುಡುಕುತ್ತಿದ್ದ ಪ್ರಶ್ನೆಗೆ ಉತ್ತರ ದೊರೆಯಿತು. ಬದುಕಿನ ಬಗ್ಗೆ ಸ್ಪಷ್ಟ ತಿಳುವಳಿಕೆ ಬಂತು.

ಅವನು ಮನೆಗೆ ಹಿಂತಿರುಗಿ ಬಂದು ಮೊದಲು ಮಾಡಿದ ಕೆಲಸವೆಂದರೆ ತಾನು ಈವರೆಗೆ ಓದಿದ ಎಲ್ಲಾ ಪುಸ್ತಕಗಳನ್ನು ತಂದು ಅಂಗಳದಲ್ಲಿ ಗುಡ್ಡೆ ಹಾಕಿ, ಆ ಪುಸ್ತಕಗಳಿಗೆ ಬೆಂಕಿ ಕೊಟ್ಟನು.

English summary

Kannada Zen story | Inspirational short stories | ಝೆನ್ ಕಥೆ : ಜ್ಞಾನ ಪಡೆದಾಗ ಪುಸ್ತಕಗಳನ್ನು ಭಸ್ಮ ಮಾಡಿದನು

Once there was a philosopher who was well known and who threw himself in the study of Zen earnestly for many years.
X
Desktop Bottom Promotion