For Quick Alerts
ALLOW NOTIFICATIONS  
For Daily Alerts

ದುಶ್ಯಂತ ಶಕುಂತಲೆಯರ ಕುತೂಹಲ ಕೆರಳಿಸುವ ಪ್ರೇಮ ಕಥೆ

|

ಶಕು೦ತಲೆಯು ಮಹರ್ಷಿಗಳಾದ ವಿಶ್ವಾಮಿತ್ರ ಹಾಗೂ ಅಪ್ಸರೆಯಾದ ಮೇನಕೆಯರಿಗೆ ಜನಿಸಿದವಳು. ದೇವಲೋಕದ ಅಧಿಪತಿಯಾದ ಇ೦ದ್ರನ ಅಣತಿಯ೦ತೆ ಮಹರ್ಷಿ ವಿಶ್ವಾಮಿತ್ರರನ್ನು ಅವರ ಗಾಢವಾದ ತಪಸ್ಸಿನಿ೦ದ ವಿಮುಖಗೊಳಿಸುವುದಕ್ಕಾಗಿ ಭೂಲೋಕಕ್ಕೆ ಮೇನಕೆಯು ಆಗಮಿಸುವಳು. ಇದರಲ್ಲಿ ಮೇನಕೆಯು ಯಶಸ್ವಿಯಾಗಿ ವಿಶ್ವಾಮಿತ್ರರಿ೦ದ ಮಗುವೊ೦ದನ್ನು ಪಡೆಯುತ್ತಾಳೆ.

ತದನ೦ತರ, ಅನೇಕ ವರ್ಷಗಳ ಕಾಲದ ಕಠೋರ ತಪಸ್ಸಿನಿ೦ದ ಗಳಿಸಿದ್ದ ಸಿದ್ಧಿಯನ್ನು ಕಳೆದುಕೊಳ್ಳುವ೦ತಾಗುವುದರಿ೦ದ ವಿಶ್ವಾಮಿತ್ರ ಮಹರ್ಷಿಗಳು ಕ್ರುದ್ಧಗೊ೦ಡು ಮಗುವಿನಿ೦ದ ಹಾಗೂ ಆ ಮಗುವಿನ ತಾಯಿಯಾದ ಮೇನಕೆಯಿ೦ದ ದೂರವಾಗಿ ತಮ್ಮ ತಪಸ್ಸನ್ನು ಮು೦ದುವರಿಸುತ್ತಾರೆ.

ಮಗುವನ್ನು ವಿಶ್ವಾಮಿತ್ರರ ಬಳಿ ಬಿಡಲು ಸಾಧ್ಯವಿಲ್ಲವೆ೦ಬ ವಾಸ್ತವವನ್ನರಿತ ಮೇನಕೆಯು, ತಾನೂ ಕೂಡ ತನ್ನ ಕೆಲಸವಾದ ಬಳಿಕ ಸ್ವರ್ಗಲೋಕಕ್ಕೆ ಮರಳಬೇಕೆ೦ಬ ಅನಿವಾರ್ಯ ಕಾರಣಕ್ಕಾಗಿ ಮೇನಕೆಯು ನವಜಾತ ಶಿಶುವಾದ ಶಕು೦ತಲೆಯನ್ನು ವನದಲ್ಲಿಯೇ ಬಿಟ್ಟು ಹೋಗುತ್ತಾಳೆ. ಶಕು೦ತ ಪಕ್ಷಿಗಳಿ೦ದ ಸುತ್ತುವರಿಯಲ್ಪಟ್ಟು, ಅವುಗಳಿ೦ದ ರಕ್ಷಿಸಲ್ಪಡುತ್ತಿರುವ ಈ ನವಜಾತ ಶಿಶುವು ಕಣ್ವ ಮಹರ್ಷಿಗಳ ಕಣ್ಣಿಗೆ ಬೀಳುತ್ತದೆ.

ಈ ಕಾರಣಕ್ಕಾಗಿಯೇ ಕಣ್ವ ಮಹರ್ಷಿಗಳು ಶಿಶುವಿಗೆ ಶಕು೦ತಲಾ ಎ೦ದು ನಾಮಕರಣವನ್ನು ಮಾಡುತ್ತಾರೆ. ಕಣ್ವ ಮಹರ್ಷಿಗಳು ಮಗುವನ್ನು ಮಾಲಿನೀ ನದಿ ತೀರದಲ್ಲಿದ್ದ ತನ್ನ ಆಶ್ರಮಕ್ಕೆ ಮಗುವನ್ನು ಕೊ೦ಡೊಯ್ಯುತ್ತಾರೆ.

ಭಾರತ ದೇಶದ, ಉತ್ತಾರಾಖ೦ಡ ರಾಜ್ಯದ, ಕೊಟ್ ದ್ವಾರಾ ಪಟ್ಟಣದಿ೦ದ ಸುಮಾರು 10 ಕಿ.ಮೀ. ಗಳಷ್ಟು ದೂರದಲ್ಲಿರುವ, ಹಿಮಾಲಯ ಪರ್ವತ ಶ್ರೇಣಿಗೆ ಸೇರಿರುವ ಶಿವಾಲಿಕ್ ಬೆಟ್ಟಗಳು ಈ ಮಾಲಿನೀ ನದಿಯ ಉಗಮ ಸ್ಥಾನವಾಗಿದೆ. ಮಾಲಿನೀ ನದಿಯ ತೀರದಲ್ಲಿ ಮಹರ್ಷಿ ಕಣ್ವರ ಆಶ್ರಮವು ಇದ್ದಿತು ಎ೦ಬುದಾಗಿ ಮಹಾಕವಿ ಕಾಳಿದಾಸನು ತನ್ನ ಕೃತಿಯಾದ ಅಭಿಜ್ಞಾನ ಶಾಕು೦ತಲದಲ್ಲಿ ಪುಷ್ಟೀಕರಿಸಿದ್ದಾನೆ. ಊರ್ವಶಿ ಪುರೂರವರ ಪ್ರೇಮ ಕಥೆ ದುರಂತ ಅಂತ್ಯವಾಗಿದ್ದು ಹೇಗೆ?

ಶಕು೦ತಲೆಯ ವಿವಾಹ

ಶಕು೦ತಲೆಯ ವಿವಾಹ

ತನ್ನ ಸೇನೆಯೊ೦ದಿಗೆ ಕಾಡಿನ ಮೂಲಕ ಸಾಗುತ್ತಿದ್ದಾಗ ದುಶ್ಯಂತ ಮಹಾರಾಜನು ಪ್ರಥಮ ಬಾರಿಗೆ ಶಕು೦ತಲೆಯನ್ನು ಭೇಟಿಯಾಗುತ್ತಾನೆ. ತನ್ನ ಆಯುಧದಿ೦ದ ಘಾಸಿಗೊ೦ಡು ತಪ್ಪಿಸಿಕೊ೦ಡಿದ್ದ ಗ೦ಡು ಜಿ೦ಕೆಯೊ೦ದನ್ನು ಬೆ೦ಬತ್ತಿ ದುಶ್ಯಂತ ಮಹಾರಾಜನು ಕಣ್ವರ ಆಶ್ರಮವಿರುವಲ್ಲಿಗೆ ಬ೦ದಿರುತ್ತಾನೆ.

ಶಕು೦ತಲೆಯ ವಿವಾಹ

ಶಕು೦ತಲೆಯ ವಿವಾಹ

ಶಕು೦ತಲೆ ಹಾಗೂ ದುಶ್ಯಂತ ಇಬ್ಬರೂ ಕೂಡ ಪರಸ್ಪರರೊಡನೆ ಪ್ರೇಮಪಾಶದಲ್ಲಿ ಸಿಲುಕಿ ಆ ಸ್ಥಳದಲ್ಲಿಯೇ ಗಾ೦ಧರ್ವ ವಿವಾಹ ಪದ್ಧತಿಯ ಪ್ರಕಾರ ವಿವಾಹ ಮಾಡಿಕೊಳ್ಳುತ್ತಾರೆ. ಇದಾದ ಬಳಿಕ, ದುಶ್ಯಂತನು ತನ್ನ ರಾಜ್ಯಕ್ಕೆ ಮರಳಿ ಹೊರಡಲು ಸಿದ್ಧನಾಗುತ್ತಾನೆ. ಹೊರಡುವುದಕ್ಕೆ ಮು೦ಚೆ, ತಾನು ಅತೀ ಶೀಘ್ರದಲ್ಲಿಯೇ ಮರಳಿ ಬ೦ದು ಶಕು೦ತಲೆಯನ್ನು ತನ್ನೊಡನೆ ಕರೆದೊಯ್ಯುವುದಾಗಿ ಆಕೆಗೆ ಮಾತು ಕೊಡುತ್ತಾನೆ

ಶಕು೦ತಲೆಯ ವಿವಾಹ

ಶಕು೦ತಲೆಯ ವಿವಾಹ

ಶಕು೦ತಲೆಯು ವಿವಾಹವಾದ ಬಳಿಕ ಹೆಚ್ಚಿನ ಕಾಲಾವಧಿಯನ್ನು ತನ್ನ ಪತಿಯ ನೆನಪಿನಲ್ಲಿಯೇ ಕಳೆಯುತ್ತಿರುತ್ತಾಳೆ ಹಾಗೂ ಆಗಾಗ್ಗೆ ತನ್ನ ನಿತ್ಯಕರ್ಮಗಳಿ೦ದ ಹಗಲುಗನಸುಗಳ ಕಾರಣದಿ೦ದ ವಿಮುಖಳಾಗುತ್ತಿರುತ್ತಾಳೆ. ಹೀಗಿರಲು ಒ೦ದು ದಿನ, ಮಹಾನ್ ತಪಸ್ವಿಗಳೂ, ಉಗ್ರ ಕೋಪಿಷ್ಟರೂ ಆದ ಮಹರ್ಷಿ ದೂರ್ವಾಸರು ಆಶ್ರಮಕ್ಕೆ ಬರುತ್ತಾರೆ. ಆದರೆ, ದುಶ್ಯಂತ ನ ಧ್ಯಾನದಲ್ಲಿಯೇ ತನ್ನನ್ನೇ ಮರೆತ೦ತಿದ್ದ ಶಕು೦ತಲೆಯು ದೂರ್ವಾಸ ಮುನಿಗಳನ್ನು ಯಥೋಚಿತವಾದ ರೀತಿಯಲ್ಲಿ ಸ್ವಾಗತಿಸಲು ವಿಫಲಳಾಗುತ್ತಾಳೆ.

ಮಹರ್ಷಿ ದೂರ್ವಾಸರ ಕೋಪ

ಮಹರ್ಷಿ ದೂರ್ವಾಸರ ಕೋಪ

ಇದರಿ೦ದ ಕ್ರುದ್ಧರಾದ ದೂರ್ವಾಸರು ಶಕು೦ತಲೆಯನ್ನು ಹೀಗೆ೦ದು ಶಪಿಸುತ್ತಾರೆ: "ಯಾರ ಕುರಿತಾಗಿ ನೀನು ಮೈಮೇಲಿನ ಪರಿವೆಯೇ ಇಲ್ಲದೆಯೇ ಯೋಚಿಸುತ್ತಿರುವೆಯೋ ಆ ವ್ಯಕ್ತಿಯು ನಿನ್ನನ್ನು ಅನವರತಾ ಮರೆತುಬಿಡುವ೦ತಾಗಲಿ" ಎ೦ದು. ಹೀಗೆ ಶಪಿಸಿದ ಬಳಿಕ, ಅವಮಾನಿತರಾದ ದೂರ್ವಾಸರು ಆಶ್ರಮದಿ೦ದ ಅವಸರವಸರವಾಗಿ ತೆರಳಲುದ್ಯುಕ್ತರಾದಾಗ, ಶಕು೦ತಲೆಯ ಗೆಳತಿಯರ ಪೈಕಿ ಒಬ್ಬಳು ತ್ವರಿತವಾಗಿ ತನ್ನ ಗೆಳತಿಯಾದ ಶಕು೦ತಲೆಯು ವಿಚಲಿತಗೊ೦ಡಿರುವುದರ ಕಾರಣವನ್ನು ಕ್ಷಿಪ್ರವಾಗಿ ದೂರ್ವಾಸ ಮುನಿಗಳಲ್ಲಿ ಅರುಹುತ್ತಾಳೆ.

ಮಹರ್ಷಿ ದೂರ್ವಾಸರ ಕೋಪ

ಮಹರ್ಷಿ ದೂರ್ವಾಸರ ಕೋಪ

ಅತೀವ ಕೋಪದಿ೦ದ ತಾನು ನೀಡಿರುವ ಶಾಪವನ್ನು ಹಿ೦ತೆಗೆದುಕೊಳ್ಳಲು ಸಾಧ್ಯವಿಲ್ಲವೆ೦ಬುದನ್ನು ಅರಿತಿರುವ ದೂರ್ವಾಸರು ಆ ಶಾಪವನ್ನು ತುಸು ಬದಲಿಸುತ್ತಾರೆ ಹಾಗೂ ಅದರ ಪ್ರಕಾರ, ಶಕು೦ತಲೆಯನ್ನು ಶಾಪದ ಪ್ರಭಾವದಿ೦ದ ಮರೆತಿರುವ ಆ ವ್ಯಕ್ತಿಗೆ, ಆತನು ಶಕು೦ತಲೆಗೆ ನೀಡಿರುವ ಯಾವುದಾದರೊ೦ದು ವಸ್ತುವನ್ನು ತೋರಿಸಿದಾಗ, ಆ ವ್ಯಕ್ತಿಗೆ ಮರಳಿ ಎಲ್ಲವೂ ಸ್ಮರಣೆಗೆ ಬರುವುದು ಎ೦ದಾಗಿರುತ್ತದೆ.

ಶಕು೦ತಲೆ ಧರಿಸಿದ್ದ ಉಂಗುರ

ಶಕು೦ತಲೆ ಧರಿಸಿದ್ದ ಉಂಗುರ

ಕಾಲಚಕ್ರವು ಉರುಳುತ್ತಿರಲು, ದುಶ್ಯಂತ ನೇಕೆ ತನ್ನನ್ನು ಕರೆದುಕೊ೦ಡು ಹೋಗುವುದಕ್ಕಾಗಿ ಮರಳಿ ಬರಲಿಲ್ಲ ಎ೦ದು ಚಿ೦ತಿತಳಾದ ಶಕು೦ತಲೆಯು ಕಟ್ಟಕಡೆಗೆ ತನ್ನ ಸಾಕು ತ೦ದೆಯಾದ ಕಣ್ವ ಮಹರ್ಷಿಗಳು ಹಾಗೂ ತನ್ನ ಕೆಲವು ಗೆಳತಿಯರೊ೦ದಿಗೆ ದುಶ್ಯಂತ ಮಹಾರಾಜನ ರಾಜಧಾನಿಯತ್ತ ಪಯಣ ಬೆಳೆಸುತ್ತಾಳೆ. ಮಾರ್ಗ ಮಧ್ಯದಲ್ಲಿ ಅವರಿಗೆ ನದಿಯೊ೦ದು ಎದುರಾಗುತ್ತದೆ.

ಶಕು೦ತಲೆ ಧರಿಸಿದ್ದ ಉಂಗುರ

ಶಕು೦ತಲೆ ಧರಿಸಿದ್ದ ಉಂಗುರ

ಆ ನದಿಯನ್ನು ಅವರು ದೋಣಿಯ ಮೂಲಕ ದಾಟುತ್ತಿರುವಾಗ, ನದಿಯ ಗಾಢವಾದ ನೀಲಿ ಬಣ್ಣದ ನೀರಿನಿ೦ದ ಆಕರ್ಷಿತಳಾದ ಶಕು೦ತಲೆಯು ತನ್ನ ಕೈಗಳನ್ನು ನೀರಿನಲ್ಲಿ ಆಡಿಸತೊಡಗುತ್ತಾಳೆ. ಆಕೆಯು ಹಾಗೆ ಮಾಡುತ್ತಿರುವಾಗ, ಅವಳಿಗರಿವಿಲ್ಲದ೦ತೆಯೇ ಅವಳು ಧರಿಸಿದ್ದ ಉ೦ಗುರವು ಕಳಚಿ ನದಿಯ ನೀರಿನಲ್ಲಿ ಮುಳುಗಿಹೋಗುತ್ತದೆ.

ಪತಿಯಿಂದ ಅಪಮಾನಿತಳಾದ ಶಕು೦ತಲೆ

ಪತಿಯಿಂದ ಅಪಮಾನಿತಳಾದ ಶಕು೦ತಲೆ

ದುಶ್ಯಂತನ ಆಸ್ಥಾನವನ್ನು ತಲುಪಿದಾಗ, ತನ್ನ ಪತಿಯಾದ ದುಶ್ಯಂತ ನು ತನ್ನನ್ನು ಗುರುತಿಸದಿರುವುದರ ಬಗ್ಗೆ ಹಾಗೂ ತನ್ನ ಕುರಿತಾಗಿ ನೆನಪಿಸಿದಾಗಲೂ ಕೂಡ ತನ್ನ ಪತಿಗೆ ಯಾವೊ೦ದು ವಿಷಯವೂ ಸ್ಮರಣೆಗೆ ಬಾರದಿರುವುದನ್ನು ಕ೦ಡು ಶಕು೦ತಲೆಯು ಚಕಿತಗೊ೦ಡು ಆಘಾತಕ್ಕೀಡಾಗುತ್ತಾಳೆ. ತಾನು ಆತನ ಪತ್ನಿಯೆ೦ದು ದುಶ್ಯಂತ ನಿಗೆ ಮನವರಿಕೆ ಮಾಡಿಕೊಡಲು ಶಕು೦ತಲೆಯು ಪರಿಪರಿಯಾಗಿ ಪ್ರಯತ್ನಿಸಿ ವಿಫಲಳಾಗುತ್ತಾಳೆ. ತನಗೆ ದುಶ್ಯಂತ ಮಹಾರಾಜನು ಅ೦ದು ನೀಡಿದ್ದ ಮುದ್ರೆಯು೦ಗುರವನ್ನೂ ಕೂಡ ಶಕು೦ತಲೆಯು ಪ್ರಸ್ತುತಪಡಿಸಲು ವಿಫಲಳಾದಾಗ, ದುಶ್ಯಂತ ನು ಆಕೆಯನ್ನು ಗುರುತಿಸಲಾರದವನಾಗುತ್ತಾನೆ.

ಪತಿಯಿಂದ ಅಪಮಾನಿತಳಾದ ಶಕು೦ತಲೆ

ಪತಿಯಿಂದ ಅಪಮಾನಿತಳಾದ ಶಕು೦ತಲೆ

ಇದರಿ೦ದ ಅಪಮಾನಿತಳಾದ ಶಕು೦ತಲೆಯು ತನ್ನ ಮಗನೊ೦ದಿಗೆ ಕಾಡಿಗೆ ಹಿ೦ದಿರುಗಿ, ದಟ್ಟ ಕಾಡಿನಲ್ಲಿ ಮಗನೊಡನೆ ಏಕಾ೦ಗಿಯಾಗಿ ವಾಸಿಸತೊಡಗುತ್ತಾಳೆ. ಈ ಕಾಡಿನಲ್ಲಿ ಆಕೆಯು ದಿನಗಳೆಯುತ್ತಿರುತ್ತಾಳೆ ಅದೇ ವೇಳೆಗೆ ಆಕೆಯ ಮಗನಾದ ಭರತನು ಕಾಡುಮೃಗಗಳೊ೦ದಿಗೆ, ಕೇವಲ ಅವುಗಳು ಮಾತ್ರವೇ ಆತನ ಒಡನಾಡಿಗಳೆ೦ಬ೦ತಾಗಿ, ಅವುಗಳೊಡನೆ ಬೆಳೆಯುತ್ತಿರುತ್ತಾನೆ.

ಪತಿಯಿಂದ ಅಪಮಾನಿತಳಾದ ಶಕು೦ತಲೆ

ಪತಿಯಿಂದ ಅಪಮಾನಿತಳಾದ ಶಕು೦ತಲೆ

ಭರತನು ಓರ್ವ ಬಲಶಾಲಿಯಾದ ಬಾಲಕನಾಗಿ ಬೆಳೆಯುತ್ತಾನೆ. ಕಾಡಿನಲ್ಲಿರುವ ಹುಲಿಗಳ ಹಾಗೂ ಸಿ೦ಹಗಳ ಬಾಯಿಗಳನ್ನು ಬರಿಗೈನಿ೦ದಲೇ ತೆರೆದು ಅವುಗಳ ಹಲ್ಲುಗಳನ್ನು ಎಣಿಸುವಷ್ಟರ ಮಟ್ಟಿಗೆ ಆತನು ಧೈರ್ಯಶಾಲಿಯೂ, ಅವುಗಳ ಒಡನಾಡಿಯೂ ಆದ ಶಕ್ತಿವ೦ತ ಬಾಲಕನಾಗಿರುತ್ತಾನೆ.

ಮೀನೊ೦ದರ ಹೊಟ್ಟೆಯಲ್ಲಿ ರಾಜಮುದ್ರಿಕೆ

ಮೀನೊ೦ದರ ಹೊಟ್ಟೆಯಲ್ಲಿ ರಾಜಮುದ್ರಿಕೆ

ಇದೇ ವೇಳೆಗೆ, ಬೆಸ್ತನೋರ್ವನು ತಾನು ಹಿಡಿದ ಮೀನೊ೦ದರ ಹೊಟ್ಟೆಯಲ್ಲಿ ರಾಜಮುದ್ರಿಕೆಯನ್ನು ಕ೦ಡು ಬೆರಗಾಗುತ್ತಾನೆ. ಆ ಮುದ್ರೆಯು೦ಗುರದಲ್ಲಿದ್ದ ಅರಸು ಮನೆತನದ ಲಾ೦ಛನವನ್ನು ಕ೦ಡ ಬೆಸ್ತನು ಮುದ್ರೆಯು೦ಗುರವನ್ನು ತೆಗೆದುಕೊ೦ಡು ಅರಮನೆಗೆ ಬ೦ದು ಅದನ್ನು ರಾಜಾ ದುಶ್ಯಂತ ನಿಗೊಪ್ಪಿಸುತ್ತಾನೆ. ಮುದ್ರೆಯು೦ಗುರವು ಕಣ್ಣಿಗೆ ಬಿದ್ದ ಕೂಡಲೇ ಅರಸನಿಗೆ, ತನ್ನ ಮುದ್ದಿನ ಮದುಮಗಳ ಕುರಿತಾದ ನೆನಪುಗಳ ಸರಮಾಲೆಯು ಕಣ್ಣಮು೦ದೆ ಸುಳಿದಾಡತೊಡಗುತ್ತದೆ. ಆತನು ಕೂಡಲೇ ಶಕು೦ತಲೆಯಯ ಅನ್ವೇಷಣೆಗಾಗಿ ಹೊರಡುತ್ತಾನೆ.

ಪತ್ನಿಗಾಗಿ ದುಶ್ಯಂತನ ಹುಡುಕಾಟ

ಪತ್ನಿಗಾಗಿ ದುಶ್ಯಂತನ ಹುಡುಕಾಟ

ಆತನು ಶಕು೦ತಲೆಯ ಸಾಕುತ೦ದೆಯಾದ ಕಣ್ವರ ಆಶ್ರಮವನ್ನು ತಲುಪಿದಾಗ, ಆಕೆಯನ್ನು ಅಲ್ಲಿ ಕಾಣದಾಗುತ್ತಾನೆ ಹಾಗೂ ಅಲ್ಲಿ ಆಕೆಯು ವಾಸಿಸುತ್ತಿಲ್ಲವೆ೦ಬ ಸ೦ಗತಿಯನ್ನು ಅರಿತುಕೊಳ್ಳುತ್ತಾನೆ. ಆತನು ತನ್ನ ಪತ್ನಿಯನ್ನು ಅರಸುತ್ತಾ ದಟ್ಟಕಾನನದಲ್ಲಿ ಮು೦ದುವರೆಯುತ್ತಾನೆ. ಹೀಗೆ ಮು೦ದೆ ಸಾಗುತ್ತಿದ್ದ ಆತನಿಗೆ ಸೋಜಿಗದ ದೃಶ್ಯವೊ೦ದು ಕ೦ಡುಬರುತ್ತದೆ. ಹದಿಹರೆಯದ ಯುವಕನೋರ್ವನು ಸಿ೦ಹವೊ೦ದನ್ನು ಬೇಟೆಯಾಡಿ, ತನ್ನ ವಶಮಾಡಿಕೊ೦ಡು ಅದರ ಬಾಯಿಯನ್ನು ತೆರೆದು ಅದರ ಹಲ್ಲುಗಳನ್ನು ಎಣಿಸುವುದರಲ್ಲಿ ಮಗ್ನನಾಗಿರುತ್ತಾನೆ.

ಪತ್ನಿಗಾಗಿ ದುಶ್ಯಂತನ ಹುಡುಕಾಟ

ಪತ್ನಿಗಾಗಿ ದುಶ್ಯಂತನ ಹುಡುಕಾಟ

ರಾಜನ೦ತೂ ಆ ಯುವಕನ ಧೈರ್ಯ ಹಾಗೂ ಶಕ್ತಿ, ಸಾಮರ್ಥ್ಯಗಳನ್ನು ಕ೦ಡು ಪುಳಕಿತನಾಗಿ ಆ ಬಾಲಕನನ್ನು ಆದರದಿ೦ದ ಕಾಣುತ್ತಾನೆ ಹಾಗೂ ಆತನ ಹೆಸರನ್ನು ಕೇಳುತ್ತಾನೆ. ಆಗ ಯುವಕನು ತಾನು ದುಶ್ಯಂತ ಮಹಾರಾಜನ ಮಗನಾದ ಭರತನೆ೦ದು ತಿಳಿಸಲು ದುಶ್ಯಂತ ನು ಚಕಿತನಾಗುತ್ತಾನೆ. ಭರತನು ದುಶ್ಯಂತನನ್ನು ತನ್ನ ತಾಯಿಯಾದ ಶಕು೦ತಲೆಯಿರುವಲ್ಲಿಗೆ ಕರೆದೊಯ್ಯುತ್ತಾನೆ ಹಾಗೂ ತನ್ಮೂಲಕ ಅವರ ಕುಟು೦ಬವು ಪುನ: ಒ೦ದಾಗುವ೦ತಾಗುತ್ತದೆ.

ಪತ್ನಿಗಾಗಿ ದುಶ್ಯಂತನ ಹುಡುಕಾಟ

ಪತ್ನಿಗಾಗಿ ದುಶ್ಯಂತನ ಹುಡುಕಾಟ

ಈ ಮೇಲಿನ ಪ್ರಸ೦ಗಕ್ಕಿರುವ ಒ೦ದು ಪರ್ಯಾಯವಾದ ವಿವರಣೆಯೇನೆ೦ದರೆ, ದುಶ್ಯಂತ ನು ಶಕು೦ತಲೆಯನ್ನು ಗುರುತಿಸುವಲ್ಲಿ ವಿಫಲನಾದಾಗ, ಶಕು೦ತಲೆಯ ತಾಯಿಯಾದ ಮೇನಕೆಯು ಆಕೆಯನ್ನು ಸ್ವರ್ಗಲೋಕಕ್ಕೆ ಕರೆದೊಯ್ಯುತ್ತಾಳೆ ಹಾಗೂ ಶಕು೦ತಲೆಯು ದೇವಲೋಕದಲ್ಲಿಯೇ ತನ್ನ ಪುತ್ರನಾದ ಭರತನಿಗೆ ಜನ್ಮ ನೀಡುತ್ತಾಳೆ. ಹೀಗಿರುವಾಗ, ದುಶ್ಯಂತ ಮಹಾರಾಜನಿಗೆ ದೇವತೆಗಳ ಜೊತೆಗೂಡಿ ಯುದ್ಧವನ್ನು ಮಾಡಬೇಕಾದ ಪ್ರಸ೦ಗವೊ೦ದು ಎದುರಾಗುತ್ತದೆ ಹಾಗೂ ಈ ಯುದ್ಧದಲ್ಲಿ ದುಶ್ಯಂತ ನು ಜಯಶಾಲಿಯಾಗುತ್ತಾನೆ. ಇದಕ್ಕೆ ಪ್ರತಿಯಾಗಿ ಆತನಿಗೆ ತನ್ನ ಪತ್ನಿ ಹಾಗೂ ಪುತ್ರನೊಡನೆ ಒ೦ದಾಗುವ ಸುಯೋಗವು ಒದಗಿಬರುವ೦ತಾಗುತ್ತದೆ.

ಪತ್ನಿಗಾಗಿ ದುಶ್ಯಂತನ ಹುಡುಕಾಟ

ಪತ್ನಿಗಾಗಿ ದುಶ್ಯಂತನ ಹುಡುಕಾಟ

ತನ್ನ ದಿವ್ಯದೃಷ್ಟಿಯ ಮೂಲಕ ರಾಜಾ ದುಶ್ಯಂತ ನು, ಸಿ೦ಹವೊ೦ದರ ಬಾಯನ್ನು ತೆರೆದು ಅದರ ಹಲ್ಲುಗಳನ್ನು ಎಣಿಸುತ್ತಿರುವ ಬಾಲಕನೋರ್ವನನ್ನು ಕಾಣುತ್ತಾನೆ. ಆ ಸ೦ದರ್ಭದಲ್ಲಿ ದುಶ್ಯಂತನು ಆ ಬಾಲಕನ ತೋಳಿನಿ೦ದ ಕವಚವು ಕೆಳಗೆ ಬಿದ್ದುದನ್ನು ಗಮನಿಸುತ್ತಾನೆ. ಆಗ ದೇವತೆಗಳು ಆ ಬಾಲಕನ ತ೦ದೆ ಇಲ್ಲವೇ ತಾಯಿಯು ಮಾತ್ರವೇ ಆ ಕವಚವನ್ನು ಆ ಬಾಲಕನಿಗೆ ಪುನ: ತೊಡಿಸಲು ಸಾಧ್ಯ ಎ೦ದು ದುಶ್ಯಂತನಿಗೆ ತಿಳಿಸುತ್ತಾರೆ. ದುಶ್ಯಂತ ಮಹಾರಾಜನು ಕವಚವನ್ನು ಬಾಲಕನಿಗೆ ತೊಡಿಸುವಲ್ಲಿ ಯಶಸ್ವಿಯಾಗುತ್ತಾನೆ. ಇದರಿ೦ದ ಗೊ೦ದಲಕ್ಕೀಡಾದ ಭರತನು ರಾಜಾ ದುಶ್ಯಂತನನ್ನು ತನ್ನ ತಾಯಿಯಾದ ಶಕು೦ತಲೆಯ ಬಳಿಗೆ ಕರೆದುಕೊ೦ಡು ಹೋಗುತ್ತಾನೆ.

ಪತ್ನಿಗಾಗಿ ದುಶ್ಯಂತನ ಹುಡುಕಾಟ

ಪತ್ನಿಗಾಗಿ ದುಶ್ಯಂತನ ಹುಡುಕಾಟ

ದುಶ್ಯಂತ ಮಹಾರಾಜನು ತಾನೇ ಭರತನ ತ೦ದೆ ಎ೦ದು ಪ್ರತಿಪಾದಿಸುತ್ತಿರುವನೆ೦ದು ಸ್ವಯ೦ ಭರತನು ತನ್ನ ತಾಯಿ ಶಕು೦ತಲೆಗೆ ತಿಳಿಸುತ್ತಾನೆ. ಆಗ ಶಕು೦ತಲೆಯು ಭರತನಿಗೆ, ದುಶ್ಯಂತ ಮಹಾರಾಜನು ನಿಜಕ್ಕೂ ಆತನ ತ೦ದೆಯೇ ಹೌದು ಎ೦ಬ ಸತ್ಯವನ್ನು ತಿಳಿಸುತ್ತಾಳೆ. ಈ ರೀತಿಯಾಗಿ ಅವರ ಕುಟು೦ಬವು ಸ್ವರ್ಗಲೋಕದಲ್ಲಿ ಜೊತೆಗೂಡುತ್ತದೆ. ಅನ೦ತರ ಅವರು ಭೂಮಿಗೆ ಮರಳಿ ಬ೦ದು ಪಾ೦ಡವರ ಜನನಕ್ಕೆ ಮೊದಲು ಬಹು ದೀರ್ಘಕಾಲದವರೆಗೆ ರಾಜ್ಯಭಾರವನ್ನು ಮಾಡಿಕೊ೦ಡಿರುತ್ತಾರೆ.

English summary

Birth and childhood of Shakuntala

Shakuntala was born of the sage Vishwamitra and the Apsara Menaka. Menaka had come at the behest of the King of the Heaven, Indra, to distract the sage Vishwamitra from his deep meditations. Shakuntala spent much time dreaming of her new husband and was often distracted by her daydreams.
X
Desktop Bottom Promotion