For Quick Alerts
ALLOW NOTIFICATIONS  
For Daily Alerts

ಲಿಂಬೆಹಣ್ಣು: ಅದೇನು ಮಾಯೆ, ಅದೇನು ಜಾದೂ!

By Super
|

ಬೀಜವಿಲ್ಲದಿದ್ದರೆ ಲಿಂಬೆಹಣ್ಣಿಗಿಂತ ಸಂಜೀವಿನಿಯಿಲ್ಲ, ತೊಟ್ಟಿಲ್ಲದಿದ್ದರೆ ಬದನೆಗಿಂತ ದೊಡ್ಡ ನಂಜಿಲ್ಲ ಎಂದು ಹಿರಿಯರು ಹೇಳುತ್ತಾರೆ. ಆರೋಗ್ಯದ ವಿಷಯ ಬಂದಾಗ ದೇಹಕ್ಕೆ ಅಗತ್ಯವಾದ ಹಲವು ಉತ್ತಮ ಗುಣಗಳು ಈ ಪುಟ್ಟ ಲಿಂಬೆಯಲ್ಲಿದೆ.

ನೂರಾರು ವರ್ಷಗಳಿಂದ ಹಲವಾರು ಕಾಯಿಲೆಗಳಿಗೆ ನಮ್ಮ ಹಿರಿಯರು ಈ ಪುಟ್ಟ ಲಿಂಬೆಯನ್ನು ಬಳಸುತ್ತಾ ಬಂದಿದ್ದಾರೆ. ಆದರೆ ಲಿಂಬೆಹಣ್ಣಿನಲ್ಲಿ ಇನ್ನೂ ಹಲವಾರು ಜಾದೂ ಗುಣಗಳಿವೆ ಎಂದು ನಿಮಗೆ ಗೊತ್ತಿತ್ತೇ? ಬನ್ನಿ ಲಿಂಬೆಹಣ್ಣಿನಲ್ಲಿರುವ ಮಾಂತ್ರಿಕ ಶಕ್ತಿ ಯಾವುದು ಎಂಬುದನ್ನು ತಿಳಿಯೋಣ...

ಕೆಟ್ಟ ದೃಷ್ಟಿಯಿಂದ ದೂರವಿರಲು

ಕೆಟ್ಟ ದೃಷ್ಟಿಯಿಂದ ದೂರವಿರಲು

ಕೆಟ್ಟ ದೃಷ್ಟಿಯಿಂದ ದೂರವಿರಲು ಲಿಂಬೆ ಮತ್ತು ಹಸಿಮೆಣಸಿನ ಚಿಕ್ಕ ಹಾರವನ್ನು ಪೋಣಿಸಿ ಹಲವರು ತಮ್ಮ ಅಂಗಡಿ, ವಾಹನ, ಮನೆಯ ಚೌಕಟ್ಟು, ವ್ಯವಸಾಯದ ಸ್ಥಳ ಮೊದಲಾದೆಡೆ ನೇತು ಹಾಕಿರುವುದನ್ನು ಕಾಣಬಹುದು. ಈ ಹಾರಕ್ಕೆ ಋಣಾತ್ಮಕ ಶಕ್ತಿಗಳು ಅವರ ಏಳಿಗೆಗೆ ಅಡ್ಡಿಯಾಗುವುದನ್ನು ತಪ್ಪಿಸುತ್ತವೆ ಎಂದು ಅವರು ನಂಬುತ್ತಾರೆ.

ದುಷ್ಟಶಕ್ತಿಗಳನ್ನು ಹೊಡೆದೋಡಿಸುವಲ್ಲಿ

ದುಷ್ಟಶಕ್ತಿಗಳನ್ನು ಹೊಡೆದೋಡಿಸುವಲ್ಲಿ

ಹಲವಾರು ತಾಂತ್ರಿಕರು ತಮ್ಮ ಕಾರ್ಯವಿಧಾನದಲ್ಲಿ ಲಿಂಬೆಹಣ್ಣನ್ನು ಬಹಳವಾಗಿ ಬಳಸುತ್ತಾರೆ. ಕುಂಬಳಕಾಯಿ, ಕಲ್ಲಂಗಡಿ ಹಣ್ಣು, ಹಸಿಮೆಣಸು ಮತ್ತು ಲಿಂಬೆಹಣ್ಣು ಇವರ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಲ್ಲಿಯೂ ದುಷ್ಟಶಕ್ತಿಗಳನ್ನು ಹೊಡೆದೋಡಿಸುವಲ್ಲಿ ಲಿಂಬೆಹಣ್ಣಿನ ಶಕ್ತಿ ಬಳಕೆಯಾಗುತ್ತದೆ ಎಂದು ಅವರು ಸಮರ್ಥಿಸುತ್ತಾರೆ.

ಕೆಲಸದಲ್ಲಿ ಯಶಸ್ಸು ಪಡೆಯಲು

ಕೆಲಸದಲ್ಲಿ ಯಶಸ್ಸು ಪಡೆಯಲು

ಯಾವುದಾದರೂ ಕೆಲಸದಲ್ಲಿ ಸತತ ಪ್ರಯತ್ನದ ಬಳಿಕವೂ ಯಶಸ್ಸು ಕಾಣದೇ ಇದ್ದರೆ ಹನುಮಂತನ ಗುಡಿಗೆ ಭೇಟಿ ನೀಡಲು ಹಿರಿಯರು ಸಲಹೆ ನೀಡುತ್ತಾರೆ. ಜೊತೆಗೆ ಒಂದು ಲಿಂಬೆಹಣ್ಣು ಮತ್ತು ನಾಲ್ಕು ಲವಂಗದ ಕೋಡುಗಳನ್ನು ಕೊಂಡೊಯ್ಯಬೇಕಾಗುತ್ತದೆ. ಈ ನಾಲ್ಕು ಕೋಡುಗಳನ್ನು ಲಿಂಬೆಹಣ್ಣಿನಲ್ಲಿ ನಾಲ್ಕೂ ಪಾರ್ಶ್ವಗಳಲ್ಲಿ ಚುಚ್ಚಿ ಹನುಮಾನ್ ಚಾಲೀಸವನ್ನು ಪಠಿಸಿ ದೇವರಿಗೆ ಅರ್ಪಿಸುವ ಮೂಲಕ ನಿಮ್ಮ ಕೆಲಸದಲ್ಲಿ ಯಶಸ್ಸು ಖಂಡಿತಾ ಸಿಗುತ್ತದೆ.

ಉದ್ಯಮದಲ್ಲಿ ಯಶಸನ್ನು ಪಡೆಯಲು

ಉದ್ಯಮದಲ್ಲಿ ಯಶಸನ್ನು ಪಡೆಯಲು

ಒಂದು ವೇಳೆ ನಿಮ್ಮ ಉದ್ಯಮ ಸರಿಯಾಗಿ ನಡೆಯದೇ ಇದ್ದಲ್ಲಿ ಒಂದು ಶನಿವಾರ ಈ ಲಿಂಬೆಹಣ್ಣಿನ ಮೇಲೆ ಕೊಂಚ ಭಾರ ನೀಡಿರಿ. ಶನಿವಾರದಂದು ಒಂದು ಲಿಂಬೆಹಣ್ಣನ್ನು ನಿಮ್ಮ ಉದ್ಯಮವಿರುವ ಸ್ಥಳದ ನಾಲ್ಕೂ ಮೂಲೆಗಳನ್ನು ಸ್ಪರ್ಶಿಸಿದ ಬಳಿಕ ನಾಲ್ಕು ತುಂಡುಗಳನ್ನಾಗಿ ಕತ್ತರಿಸಿ. ಈ ನಾಲ್ಕೂ ತುಂಡುಗಳನ್ನು ಸ್ಥಳದ ನಾಲ್ಕೂ ಮೂಲೆಗಳಲ್ಲಿ ಒಂದೊಂದಾಗಿ ಎಸೆಯಿಸಿ. ಇದು ನಿಮ್ಮ ಉದ್ಯಮವನ್ನು ಕಾಡುತ್ತಿರುವ ದುಷ್ಟಶಕ್ತಿಗಳನ್ನು ತನ್ನೊಂದಿಗೆ ಕೊಂಡೊಯ್ದು ನಿಮ್ಮ ಉದ್ಯಮದಲ್ಲಿ ಪ್ರಗತಿಯನ್ನು ನೀಡುತ್ತದೆ.

ಹಿತ್ತಲಿನಲ್ಲಿ ಲಿಂಬೆಹಣ್ಣಿನ ಮರ ಬೆಳೆಸಿ

ಹಿತ್ತಲಿನಲ್ಲಿ ಲಿಂಬೆಹಣ್ಣಿನ ಮರ ಬೆಳೆಸಿ

ಒಂದು ಮನೆಯ ಅಂಗಳ ಅಥವಾ ಹಿತ್ತಲಿನಲ್ಲಿ ಲಿಂಬೆಹಣ್ಣಿನ ಮರವಿದ್ದರೆ ಆ ಮನೆಯನ್ನು ದುಷ್ಟಶಕ್ತಿಗಳು ಎಂದೂ ಕಾಡದು. ಒಂದು ವೇಳೆ ಮನೆ ಕಟ್ಟುವಾಗ ಯಾವುದಾದರೂ ವಾಸ್ತುದೋಷವಿದ್ದರೂ ಈ ಲಿಂಬೆಮರ ಆ ದೋಷಗಳನ್ನು ನಿವಾರಿಸುವುದು.

ದುಷ್ಟಶಕ್ತಿಗಳ ನಿವಾರಣೆಗೆ

ದುಷ್ಟಶಕ್ತಿಗಳ ನಿವಾರಣೆಗೆ

ಸಾಮಾನ್ಯವಾಗಿ ದುಷ್ಟಶಕ್ತಿಗಳು ಮನೆಯಲ್ಲಿರುವ ದುರ್ಬಲರನ್ನು ಮೊದಲು ಕಾಡುತ್ತವೆ. ಮಕ್ಕಳು ಮತ್ತು ವೃದ್ದರು ಇದಕ್ಕೆ ಸುಲಭವಾಗಿ ಸಿಕ್ಕಿಕೊಳ್ಳುತ್ತಾರೆ. ಒಂದು ಲಿಂಬೆಹಣ್ಣನ್ನು ತಲೆಯಿಂದ ಮೊದಲುಗೊಂಡು ಕಾಲ ಕಿರುಬೆರಳಿನವರೆಗೆ ದೇಹವನ್ನು ಸ್ಪರ್ಶಿಸಿ ನಿವಾಳಿಸುವ ಮೂಲಕ ದುಷ್ಟಶಕ್ತಿಗಳನ್ನು ದೂರವಿಡಬಹುದು. ಬಳಿಕ ಈ ಲಿಂಬೆಹಣ್ಣನ್ನು ನಾಲ್ಕು ತುಂಡುಗಳನ್ನಾಗಿ ಕತ್ತರಿಸಿ ದೂರ, ನಿರ್ಜನ ಸ್ಥಳದಲ್ಲಿ ಎಸೆಯಬೇಕು. ಎಸೆದ ಬಳಿಕ ಎಸೆದ ಸ್ಥಳದತ್ತ ನೋಡಬಾರದು ಹಾಗೂ ನೇರವಾಗಿ ಮನೆ ಸೇರಿಕೊಳ್ಳಬೇಕು.

ಲಿಂಬೆ ಹಾಗೂ ಹಸಿಮೆಣಸಿನ ಕಾಯಿ

ಲಿಂಬೆ ಹಾಗೂ ಹಸಿಮೆಣಸಿನ ಕಾಯಿ

ಕೆಲವೊಮ್ಮೆ ರಸ್ತೆಯಲ್ಲಿ ಕೆಲವು ಲಿಂಬೆ ಹಾಗೂ ಹಸಿಮೆಣಸಿನ ಕಾಯಿಗಳು ಬಿದ್ದಿರುವುದು ಕಂಡುಬರುತ್ತದೆ. ಅಪ್ಪಿತಪ್ಪಿಯೂ ಇದನ್ನು ದಾಟುವುದಾಗಲೀ ತುಳಿಯುವುದಾಗಲೀ ಮಾಡಬಾರದು. ಏಕೆಂದರೆ ಬೇರೆ ಯಾರೋ ತಮ್ಮ ಮನೆಯ ದುಷ್ಟಶಕ್ತಿಗಳನ್ನು ನಿವಾಳಿಸಿ ಇಲ್ಲಿ ಎಸೆದಿರುತ್ತಾರೆ. ಇದನ್ನು ದಾಟುವುದರಿಂದ ಆ ದುಷ್ಟಶಕ್ತಿಗಳು ನಿಮ್ಮನ್ನು ಆವರಿಸುವ ಸಂಭವವಿರುವುದರಿಂದ ಇದರಿಂದ ದೂರವಿದ್ದಷ್ಟೂ ಒಳ್ಳೆಯದು.

 ಉದ್ಯಮದಲ್ಲಿ ನಷ್ಟ ಅನುಭವಿಸುತ್ತಿದ್ದರೆ

ಉದ್ಯಮದಲ್ಲಿ ನಷ್ಟ ಅನುಭವಿಸುತ್ತಿದ್ದರೆ

ಒಂದು ವೇಳೆ ನಿಮ್ಮ ಉದ್ಯೋಗ ಸರಿಯಾಗಿ ನಡೆಯದಿದ್ದರೆ, ಉದ್ಯಮದಲ್ಲಿ ನಷ್ಟ ಅನುಭವಿಸುತ್ತಿದ್ದರೆ, ಯಾವ ಕೆಲಸವೂ ಸರಾಗವಾಗಿ ಆಗದಿದ್ದರೆ, ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತಿದ್ದರೆ, ಗಳಿಸಿದ ಹಣ ಉಳಿಸಿಕೊಳ್ಳಲು ಆಗದೇ ಇದ್ದರೆ ದುಷ್ಟಶಕ್ತಿಗಳು ನಿಮ್ಮನ್ನು ಬಾಧಿಸುತ್ತಿವೆ ಎಂದು ತಿಳಿದುಕೊಳ್ಳಬೇಕು. ಇದರಿಂದ ರಕ್ಷಿಸಿಕೊಳ್ಳಲು ಲಿಂಬೆಹಣ್ಣು ಮತ್ತು ಹಸಿಮೆಣಸಿನ ಸರವೊಂದನ್ನು ಪೋಣಿಸಿ ನಿಮ್ಮ ಮನೆಯ, ಕಛೇರಿಯ ಮತ್ತು ಉದ್ಯಮಸ್ಥಳದ ಹೊರಗೆ ನೇತುಹಾಕುವುದರಿಂದ ಈ ದುಷ್ಟಶಕ್ತಿಗಳನ್ನು ದೂರವಿಡಬಹುದು.

English summary

Believe it or not: Lemons have magical powers

Everybody knows that lemons are very good for health, but do you know lemons have other uses also. Believe it or not lemon has secret powers. Lemons are being used from ages for various reasons, which are no less than real wonders. Click on this slide show to find out the miraculous powers of lemons…
X
Desktop Bottom Promotion